Tag: ನಟ ಅಮಿತಾಬ್ ಬಚ್ಚನ್

  • ಮೋದಿ ಬದಲಿಗೆ ಬಚ್ಚನ್‍ರನ್ನು ಆಯ್ಕೆ ಮಾಡಿ: ಮತದಾರರಿಗೆ ಪ್ರಿಯಾಂಕ ಮನವಿ

    ಮೋದಿ ಬದಲಿಗೆ ಬಚ್ಚನ್‍ರನ್ನು ಆಯ್ಕೆ ಮಾಡಿ: ಮತದಾರರಿಗೆ ಪ್ರಿಯಾಂಕ ಮನವಿ

    ಲಕ್ನೋ: ನರೇಂದ್ರ ಮೋದಿ ಬದಲಿಗೆ ಅಮಿತಾಬ್ ಬಚ್ಚನ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿ ಎಂದು ಉತ್ತರ ಪ್ರದೇಶ ಪೂರ್ವದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮತದಾರರಿಗೆ ಪ್ರಿಯಾಂಕ ಮನವಿ ಮಾಡಿಕೊಂಡಿದ್ದಾರೆ.

    ಉತ್ತರ ಪ್ರದೇಶದ ಮಿರ್ಜಾಪುರ್ ನಲ್ಲಿ ನಡೆದ ಪ್ರಚಾರದ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಜಗತ್ತಿನಲ್ಲಿಯೇ ಅತ್ಯುತ್ತಮ ನಟರು. ಈ ಹಿಂದೆ ನೀವು ಜಗತ್ತಿನ ಅತ್ಯುತ್ತಮ ನಟರನ್ನು ಆಯ್ಕೆ ಮಾಡಿದ್ದೀರಿ. ಹೀಗಾಗಿ ಈ ಬಾರಿ ಅಮಿತಾಬ್ ಬಚ್ಚನ್ ಅವರನ್ನು ಪ್ರಧಾನಿ ಮಾಡಬೇಕು. ಬಿಜೆಪಿಯವರು ಅಧಿಕಾರಕ್ಕೆ ಬಂದರೆ ನಿಮಗೆ ಯಾವುದೇ ಕೆಲಸ ಮಾಡಿಕೊಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಕೊನೆಯ ಹಂತದ ಮತದಾನ ಮೇ 19ರಂದು ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರ ಬೀಳಲಿದೆ. ಈ ನಿಟ್ಟಿನಲ್ಲಿ ಪ್ರಿಯಾಂಕ ಗಾಂಧಿ ಅವರು ಇಂದು ಮಿರ್ಜಾಪುರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಲಿತೇಶ್ ತ್ರಿಪಾಠಿ ಅವರ ಪರ ಪ್ರಚಾರದ ಮಾಡಿದರು.

    ಲಲಿತೇಶ್ ತ್ರಿಪಾಠಿ ಅವರು ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಅನುಪ್ರಿಯಾ ಪಟೇಲ್ ಅವರು 4.36 ಲಕ್ಷ ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಲಲಿತೇಶ್ ತ್ರಿಪಾಠಿ ಅವರು ಪರಾಭವಗೊಂಡಿದ್ದರು. ಮಿರ್ಜಾಪುರ್ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಈ ಬಾರಿ ಭರ್ಜರಿ ಮತ ಬೇಟೆ ನಡೆಸಿದೆ.