Tag: ನಟ್

  • ಎಲೆಕ್ಟ್ರಿಷಿಯನ್ ಶ್ವಾಸಕೋಶದಿಂದ ನಟ್ ಹೊರತೆಗೆದ ವೈದ್ಯರು

    ಎಲೆಕ್ಟ್ರಿಷಿಯನ್ ಶ್ವಾಸಕೋಶದಿಂದ ನಟ್ ಹೊರತೆಗೆದ ವೈದ್ಯರು

    ಚೆನ್ನೈ: ಎಲೆಕ್ಟ್ರಿಷಿಯನ್ (Electrician) ಕೆಲಸ ಮಾಡುತ್ತಿದ್ದ ವೇಳೆ ನಟ್ ನುಂಗಿದ್ದ 55 ವರ್ಷದ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ನೆಟ್ ಅನ್ನು ಆತನ ದೇಹದಿಂದ ವೈದ್ಯರು ಹೊರ ತೆಗೆದಿದ್ದಾರೆ.

    ಶಸ್ತ್ರ ಚಿಕಿತ್ಸೆಗೊಳಗಾದ ವ್ಯಕ್ತಿಯನ್ನು ಕೊಯಮತ್ತೂರಿನ (Coimbatore) ನಿವಾಸಿ ಸಂಸುದ್ದೀನ್ ಎಂದು ಗುರುತಿಸಲಾಗಿದ್ದು, ಇವರು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಅಕ್ಟೋಬರ್ 18ರಂದು ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನಟ್ ಅನ್ನು ನುಂಗಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ- JDS ಎಂಎಲ್‌ಸಿ ಅಚ್ಚರಿ ಹೇಳಿಕೆ

    ಈ ವೇಳೆ ತಕ್ಷಣ ಕೆಮ್ಮಲು ಪ್ರಯತ್ನಿಸಿದ್ದಾರೆ. ಆದರೆ ನಟ್‍ನಿಂದ ಅವರಿಗೆ ಉಸಿರುಗಟ್ಟಲು ಪ್ರಾರಂಭಿಸಿತು. ಹೀಗಾಗಿ ಅವರನ್ನು ಕೂಡಲೇ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕಿವಿ, ಮೂಗು ಮತ್ತು ಗಂಟಲು ವಿಭಾಗಕ್ಕೆ ವ್ಯಕ್ತಿಯನ್ನು ಕರೆದೊಯ್ದು ಎಕ್ಸ್-ರೇ ನಡೆಸಲಾಯಿತು. ಈ ವೇಳೆ ನಟ್ ಶ್ವಾಸನಾಳದಲ್ಲಿ ಸೇರಿಕೊಂಡು ಎಡ ಶ್ವಾಸಕೋಶದ ಕಡೆಗೆ ಹೋಗುತ್ತಿರುವುದು ವೈದ್ಯರಿಗೆ ತಿಳಿದುಬಂದಿದೆ.

    ಬಳಿಕ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಶರವಣನ್, ಅಲಿಸುಲ್ತಾನ್, ಮಣಿಮೋಳಿ, ಸೆಲ್ವನ್ ಮತ್ತು ಮದನಗೋಪಾಲನ್ ಅವರನ್ನೊಳಗೊಂಡ ವೈದ್ಯರ ತಂಡ ಎಂಡೋಟ್ರಾಶಿಯಲ್ ಉಪಕರಣವನ್ನು ಬಳಸಿ ಸಂಸುದ್ದೀನ್‌ಗೆ ಶಸ್ತ್ರಚಿಕಿತ್ಸೆ ನಡೆಸಿ ನಟ್ ಅನ್ನು ಹೊರತೆಗೆದು ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಇದನ್ನೂ ಓದಿ: ಉಡುಗೊರೆ ಮಾರಾಟ – ಪಾಕ್ ಚುನಾವಣಾ ಆಯೋಗದಿಂದ ಇಮ್ರಾನ್ ಖಾನ್ ಅನರ್ಹ

    Live Tv
    [brid partner=56869869 player=32851 video=960834 autoplay=true]

  • ಸಿಗ್ನೇಚರ್ ಸೇತುವೆಯ ನಟ್, ಬೋಲ್ಟ್ ಕದ್ದ ಕಳ್ಳರು!

    ಸಿಗ್ನೇಚರ್ ಸೇತುವೆಯ ನಟ್, ಬೋಲ್ಟ್ ಕದ್ದ ಕಳ್ಳರು!

    ನವದೆಹಲಿ: ಒಂದು ತಿಂಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಸಿಗ್ನೇಚರ್ ಸೇತುವೆಯ ಕೇಬಲ್ ಜೋಡಣೆಗೆ ಬಳಸಿದ್ದ ನಟ್ ಮತ್ತು ಬೋಲ್ಟ್ ಗಳನ್ನು ಕಳ್ಳತನ ಮಾಡಲಾಗಿದೆ.

    ನವೆಂಬರ್ 5ಕ್ಕೆ ಲೋಕಾರ್ಪಣೆಯಾದ ಬಳಿಕ ಸ್ಟಂಟ್, ಸೆಲ್ಫಿ ವಿಚಾರದಲ್ಲಿ ಸುದ್ದಿಯಾಗಿದ್ದ ಸಿಗ್ನೇಚರ್ ಸೇತುವೆಯ ನಟ್ ಮತ್ತು ಬೋಲ್ಟ್ ಗಳನ್ನೇ ಕಳ್ಳರು ಕದ್ದಿದ್ದು ಈಗ ಭದ್ರತೆಯ ವಿಚಾರದಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

    ನಟ್, ಬೋಲ್ಟ್ ಗಳನ್ನು ಬಳಸಿ ಮೇಲ್ಮೈಯಿಂದ ಕಂಬಗಳನ್ನು ಸಂಪರ್ಕಿಸುವಂತೆ ಕೇಬಲ್‍ಗಳನ್ನು ಹಾಕಲಾಗಿದೆ. ಪ್ರತಿಯೊಂದು ಕೇಬಲ್ ತಲಾ 12 ನಟ್, ಬೋಲ್ಟ್‍ಗಳ ಮೇಲೆ ನಿಂತಿದ್ದು ಕಳ್ಳರು ಕದ್ದಿರುವ ವಿಚಾರ ಸೋಮವಾರ ಬೆಳಕಿಗೆ ಬಂದೆ. ಇದನ್ನೂ ಓದಿ: ಸಿಗ್ನೇಚರ್ ಬ್ರಿಡ್ಜ್ ಮೇಲೆ ಬಟ್ಟೆ ಬಿಚ್ಚಿ ಮಂಗಳಮುಖಿಯರ ಡ್ಯಾನ್ಸ್

    ದೆಹಲಿ ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ನಿಗಮ (ಡಿಟಿಟಿಡಿಸಿ) ಎಂಜಿನಿಯರುಗಳು ನಡೆಸಿದ ಪರಿಶೀಲನೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಕಳ್ಳತನವಾಗದೇ ಇರಲು ವೆಲ್ಡಿಂಗ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿಸಿಟಿವಿ ಅಳವಡಿಸದ್ದು ಮತ್ತು ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ಕಳ್ಳತನ ನಡೆದಿದ್ದು ಮುಂದೆ ಸಿಸಿಟಿವಿ ಅಳವಡಿಸಲಾಗುವುದು. ಸೇತುವೆ ಸಂಬಂಧಿಸಿದ ಕೆಲಸ ಇನ್ನೂ ಪೂರ್ಣಗೊಳ್ಳದ ಕಾರಣ ಡಿಟಿಡಿಸಿ ಇನ್ನೂ ದೆಹಲಿಯ ಲೋಕೋಪಯೋಗಿ ಇಲಾಖೆ ಸುಪರ್ದಿಗೆ ಸೇತುವೆಯನ್ನು ನೀಡಿಲ್ಲ. ಇದನ್ನೂ ಓದಿ:ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!

    1997ರಲ್ಲಿ ವಜೀರಾಬಾದ್ ಸೇತುವೆಯಿಂದ ಶಾಲಾ ಬಸ್ ಉರುಳಿ, 22 ಮಕ್ಕಳು ಯಮುನಾ ನದಿಯಲ್ಲಿ ಕೊನೆಯುಸಿರೆಳೆದಿದ್ದರು. ಈ ದುರಂತ ನಡೆದ ಬಳಿಕ ಸರ್ಕಾರ ಬೃಹತ್ ತೂಗು ಸೇತುವೆ ಕಾಮಗಾರಿಯನ್ನು ಪ್ರಾರಂಭಿಸಿತ್ತು. 2010ರಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಹಣಕಾಸು ತೊಂದರೆಯಿಂದ ನಿಂತು ಹೋಗಿತ್ತು. ಸುಮಾರು 1594 ಕೋಟಿ ರೂ. ವೆಚ್ಚದಲ್ಲಿ 154 ಮೀಟರ್ ಉದ್ದದ ನಿರ್ಮಾಣಗೊಂಡಿರುವ ಈ ಸೇತುವೆಯನ್ನು ನವೆಂಬರ್ ನಲ್ಲಿ ಉದ್ಘಾಟಿಸಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಜಿ ಮಗನನ್ನ ಕಾಡಿಸಿಲ್ಲ, ಅವರೇ ಕಿಟ್ಟಿ ಎಲ್ಲಿದ್ದಾನೆ ಅಂತಾ ಹಲ್ಲೆ ಮಾಡಿದ್ರು: ಮಾರುತಿ ಗೌಡ

    ವಿಜಿ ಮಗನನ್ನ ಕಾಡಿಸಿಲ್ಲ, ಅವರೇ ಕಿಟ್ಟಿ ಎಲ್ಲಿದ್ದಾನೆ ಅಂತಾ ಹಲ್ಲೆ ಮಾಡಿದ್ರು: ಮಾರುತಿ ಗೌಡ

    ಬೆಂಗಳೂರು: ದುನಿಯಾ ವಿಜಯ್ ಹಲ್ಲೆ ಪ್ರಕರಣದ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ. ಆದರೆ ಹಲ್ಲೆಗಳೊಗಾದ ಮಾರುತಿ ಗೌಡ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಹಲ್ಲೆಯ ಕುರಿತು ಮಾರುತಿಗೌಡ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ದುನಿಯಾ ವಿಜಯ್ ಅವರ ಮಗನಿಗೆ ನಾನು ಕಿಚಾಯಿಸಿಲ್ಲ. ಆದರೆ ಅವರೇ ಕಿಟ್ಟಿ ಎಲ್ಲಿದ್ದಾನೆ ಅಂತಾ ರೇಗಿಸಿ ಹೊಡೆದರು ಎಂದು ಹಲ್ಲೆಗೊಳಗಾದ ಮಾರುತಿ ಗೌಡ ಆರೋಪಿಸಿದ್ದಾರೆ.

    ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಚಾಲನೆ ಮಾಡುತ್ತಲೇ ಸುಮಾರು 11 ಜನರು ಜಾಕ್‍ರಾಡ್‍ನಿಂದ ಹಲ್ಲೆ ಮಾಡಿದ್ದಾರೆ. ಬಳಿಕ ನನಗೆ ದುನಿಯಾ ವಿಜಯ್ ಫ್ಯಾನ್ಸ್ ಹೊಡೆದ್ರು ಅಂತ ಹೇಳಬೇಕೆಂದು ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೆ ಅಭಿಮಾನಿಗಳು ಹೊಡೆಯುವ ರೀತಿ ವಿಡಿಯೋ ಮಾಡಿಸಿದರು ಎಂದರು.

    ನನ್ನ ಭೇಟಿಗೆ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರು ಬಂದಿದ್ದರು, ಆರೋಗ್ಯ ವಿಚಾರಿಸಿದ್ದಾರೆ. ಆದರೆ ಯಾವುದೇ ರಾಜಿ ಸಂಧಾನ ಮಾಡಿಕೊಂಡಿಲ್ಲ. ಕಾನೂನು ಹೋರಾಟ ಕೈಬಿಡುವುದಿಲ್ಲ ಎಂದು ಮಾರುತಿ ಗೌಡ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv