Tag: ನಟೋರಿಯಸ್ ರೌಡಿ

  • ನೋಡ ನೋಡುತ್ತಿದ್ದಂತೆ ಶಿವಮೊಗ್ಗ ಬೀದಿಯಲ್ಲೇ ಬರ್ಬರ ಕೊಲೆ

    ನೋಡ ನೋಡುತ್ತಿದ್ದಂತೆ ಶಿವಮೊಗ್ಗ ಬೀದಿಯಲ್ಲೇ ಬರ್ಬರ ಕೊಲೆ

    ಶಿವಮೊಗ್ಗ: ಮಲೆನಾಡಿನ ತವರೂರು ಶಿವಮೊಗ್ಗದಲ್ಲಿ ಮತ್ತೊಂದು ಕೊಲೆ ನಡೆದಿದ್ದು, ನಟೋರಿಯಸ್ ರೌಡಿಯನ್ನು ಹಂತಕರು ಹಾಡ ಹಗಲಲ್ಲೇ ಹತ್ಯೆ ಮಾಡಿದ್ದಾರೆ.

    ಹಂದಿ ಅಣ್ಣಿ(40) ಕೊಲೆಯಾದ ರೌಡಿ. ಶಿವಮೊಗ್ಗದ ಪೊಲೀಸ್ ಚೌಕಿ ವೃತ್ತದಲ್ಲಿ ಕೊಲೆ ನಡೆದಿದ್ದು, ಈತನ ಮೇಲೆ ಹಲವು ಕೊಲೆ, ದರೋಡೆ ಪ್ರಕರಣಗಳು ದಾಖಲಾಗಿದ್ದವು. ಕೊಲೆ ಮಾಡಿದ ಪಾತಕಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದ ಉಕ್ರೇನ್ 

    ನಡೆದಿದ್ದೇನು?
    ಪಾತಕಿಗಳು ಇನ್ನೋವಾ ಕಾರಿನಲ್ಲಿ ಬಂದು ಹಂದಿ ಅಣ್ಣಿನ ಮೇಲೆ ದಾಳಿ ಮಾಡಿದ್ದಾರೆ. ಮಚ್ಚು, ಲಾಂಗುಗಳಿಂದ ಪಾತಕಿಗಳು ಅಣ್ಣಿ ಮೇಳೆ ಭೀಕರ ಹಲ್ಲೆ ಮಾಡಿದ್ದು, ತಲೆ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ. ಸುಮಾರು 6 ಕಡೆ ಕೊಚ್ಚಿ ಪರಾರಿಯಾಗಿದ್ದಾರೆ.

    ರೌಡಿ ಶೀಟರ್ ಹಂದಿ ಅಣ್ಣಿ ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ವಿನೋಬನಗರ ಪೊಲೀಸ್ ಠಾಣೆಯಿಂದ 50 ಮೀ ದೂರದಲ್ಲೇ ಕೊಲೆಯಾಗಿದ್ದಾನೆ. ಇದನ್ನೂ ಓದಿ: 14 ವರ್ಷದ ಬಾಲಕಿ ಮೇಲೆ 2 ತಿಂಗಳ ಕಾಲ ಪದೇ-ಪದೇ ಅತ್ಯಾಚಾರ ಮಾಡಿದ್ದ ಪಾಪಿ

    ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಆಮ್ಟೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]