Tag: ನಟಿ ಹರ್ಷಿಕಾ ಪೂಣಚ್ಚ

  • ರವಿವರ್ಮ ಪೇಂಟಿಂಗ್ ಥೀಮ್‌ನಲ್ಲಿ ಮೂಡಿ ಬಂದ ಹರ್ಷಿಕಾ ಪ್ರೆಗ್ನೆನ್ಸಿ ಫೋಟೋಶೂಟ್

    ರವಿವರ್ಮ ಪೇಂಟಿಂಗ್ ಥೀಮ್‌ನಲ್ಲಿ ಮೂಡಿ ಬಂದ ಹರ್ಷಿಕಾ ಪ್ರೆಗ್ನೆನ್ಸಿ ಫೋಟೋಶೂಟ್

    ಟಿ ಹರ್ಷಿಕಾ ಪೂಣಚ್ಚ (Harshika Poonacha) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 7 ತಿಂಗಳ ತುಂಬು ಗರ್ಭಿಣಿಯಾಗಿರುವ ನಟಿ ಇದೀಗ ರವಿವರ್ಮ ಪೇಂಟಿಂಗ್ ಥೀಮ್‌ನಲ್ಲಿ ಸುಂದರವಾಗಿ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ:‘ಜಂಬೂ ಸರ್ಕಸ್’ : ರಿಲೀಸ್ ಆಯ್ತು ಮನಸೋತೆ ಮನಸಾರೆ ಸಾಂಗ್

    ಮೈ ತುಂಬಾ ಆಭರಣ ಧರಿಸಿ ಪಿಂಕ್ ಬಣ್ಣದ ಸೀರೆಯುಟ್ಟು ಮುದ್ದಾಗಿ ನಟಿ ಕಾಣಿಸಿಕೊಂಡಿದ್ದಾರೆ. ವಿವಿಧ ಭಂಗಿಗಳಲ್ಲಿ ನಟಿ ಪೋಸ್ ನೀಡಿದ್ದಾರೆ. ವಿಭಿನ್ನ ರೀತಿಯಲ್ಲಿ ನಟಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಲುಕ್‌ ನೋಡಿ ಫ್ಯಾನ್ಸ್‌ ವಾವ್‌ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹರ್ಷಿಕಾ ಮತ್ತು ಭುವನ್ ದಂಪತಿ ಮೊದಲ ಮಗುವಿನ ಆಗಮನಕ್ಕಾಗಿ ಎದುರು ನೋಡ್ತಿದ್ದಾರೆ. ಚೊಚ್ಚಲ ಮಗು ಆಗಮನಕ್ಕೆ ದಿನಗಣನೆ ಶುರುವಾಗಿದ್ದು, ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದಾರೆ. ಇದನ್ನೂ ಓದಿ:ರಾಖಿ ಹಬ್ಬ ಆಚರಿಸಿದ ಸ್ಯಾಂಡಲ್‌ವುಡ್‌ ಸ್ಟಾರ್ಸ್

    ಜು.2ರಂದು ಕೊಡಗು ಶೈಲಿಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ತಾಯಿಯಾಗುತ್ತಿರುವ ಗುಡ್ ನ್ಯೂಸ್ ಅನ್ನು ನಟಿ ಹಂಚಿಕೊಂಡಿದ್ದರು. ಇಡೀ ಕುಟುಂಬ ಈ ಫೋಟೋಶೂಟ್‌ನಲ್ಲಿ ಭಾಗಿಯಾಗಿತ್ತು. ಇದನ್ನೂ ಓದಿ:ಲವ್ ಯೂ ಗೊಂಬೆ ಎಂದು ತಂಗಿಗೆ ಲವ್ಲಿ ನೋಟ್ ಬರೆದ ರಶ್ಮಿಕಾ ಮಂದಣ್ಣ

    ಅಂದಹಾಗೆ, ಹಲವು ವರ್ಷಗಳು ಪ್ರೀತಿಸಿ, ಆ.24ರಂದು ಹರ್ಷಿಕಾ ಮತ್ತು ಭುವನ್ ಜೋಡಿ ಹಸೆಮಣೆ ಏರಿದರು. ಹುಟ್ಟೂರು ಕೊಡಗಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮದುವೆಗೆ ಪೂಜಾ ಗಾಂಧಿ, ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದರು.

    ಇನ್ನೂ ಸಿನಿಮಾ ವಿಚಾರಕ್ಕೆ ಬರೋದಾದ್ರೆ, ಪತಿ ಭುವನ್‌ (Actor Bhuvan) ನಟಿಸಲಿರುವ ಮುಂಬರುವ ಚಿತ್ರಕ್ಕೆ ಹರ್ಷಿಕಾ ಅವರೇ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸದ್ಯ ಶೂಟಿಂಗ್‌ ಕೂಡ ಭರದಿಂದ ನಡೆಯುತ್ತಿದೆ.

  • ಕೊಳಕು ಕೃತ್ಯಗಳನ್ನು ಸೃಷ್ಟಿಸಿದವರಿಗೆ ಕಾನೂನಿನಡಿ ಶಿಕ್ಷೆಯಾಗಬೇಕು- ಹರ್ಷಿಕಾ ಆಗ್ರಹ

    ಕೊಳಕು ಕೃತ್ಯಗಳನ್ನು ಸೃಷ್ಟಿಸಿದವರಿಗೆ ಕಾನೂನಿನಡಿ ಶಿಕ್ಷೆಯಾಗಬೇಕು- ಹರ್ಷಿಕಾ ಆಗ್ರಹ

    ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಪ್ರಕರಣದ ಕುರಿತು ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ (Harshika Poonacha) ಧ್ವನಿಯೆತ್ತಿದ್ದಾರೆ. ಸೆಕ್ಸ್ ಸ್ಕ್ಯಾಂಡಲ್ ಬಗ್ಗೆ ನಟಿ ಮಾತನಾಡಿದ್ದಾರೆ. ತಪ್ಪು ಮಾಡಿದ್ರೆ ಕಾನೂನು ಅಡಿಯಲ್ಲಿ ತಕ್ಕ ಶಿಕ್ಷೆಯಾಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಹರ್ಷಿಕಾ ಬರೆದುಕೊಂಡಿದ್ದಾರೆ.

    ದುರದೃಷ್ಟವಶಾತ್ ವೈರಲ್ ಆಗಿರುವ 2976 ವೀಡಿಯೊಗಳಲ್ಲಿ ಒಂದನ್ನು ನಾನು ನೋಡಿದೆ. ಅದನ್ನು ನೋಡುವುದು ನಿಜಕ್ಕೂ ನೋವಿನ ಸಂಗತಿ. ವೀಡಿಯೋಗಳು ಕಾನೂನುಬದ್ಧ ಮತ್ತು ನೈಜವಾಗಿದ್ದರೆ, ಅಂತಹ ಕೊಳಕು ಕೃತ್ಯಗಳನ್ನು ಸೃಷ್ಟಿಸಿದವರು ಖಂಡಿತವಾಗಿಯೂ ದೇಶದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗಬೇಕು ಎಂದು ನಟಿ ಬರೆದುಕೊಂಡಿದ್ದಾರೆ.

    ಈ ವೀಡಿಯೊಗಳಲ್ಲಿ ಕಾಣಿಸಿಕೊಂಡಿರುವ ಅಸಂಖ್ಯಾತ ಮಹಿಳೆಯರ ಕುರಿತಾಗಿ ನನ್ನ ನೋವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರೆಲ್ಲರೂ ಸಭ್ಯ ಮತ್ತು ಸರಳ ಕುಟುಂಬದ ಸಾಮಾನ್ಯ ಮಹಿಳೆಯರಂತೆ ಕಾಣುತ್ತಾರೆ. ಈ ಸಂತ್ರಸ್ತರ ಮುಖಗಳನ್ನು ವಿವಿಧ ಗುಂಪುಗಳು ರಾಜಕೀಯ ಚರ್ಚೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಅವರು ರಾಜಕಾರಣಿಗಳ ವಿರುದ್ಧ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಬದುಕೇ ಬೇಡ ಎಂದು ಕುಗ್ಗಿದ ದಿನಗಳ ಬಗ್ಗೆ ‘ಕೆಜಿಎಫ್’ ನಟಿ ಓಪನ್ ಟಾಕ್

    ಅಲ್ಲಿರುವ ಮಹಿಳೆಯರ ಮುಖವನ್ನು ಬ್ಲರ್ ಮಾಡಬಹುದಿತ್ತು. ಭವಿಷ್ಯದಲ್ಲಿ ಅವರು ಸಮಾಜವನ್ನು ಹೇಗೆ ಎದುರಿಸುತ್ತಾರೆ. ಇನ್ನು ಮುಂದೆ ನಮ್ಮ ಜನ ಅವರನ್ನು ಯಾವ ದೃಷ್ಟಿಕೋನದಲ್ಲಿ ನೋಡಬಹುದು ಎಂದು ವಿವರಿಸಿ ಹೇಳಬೇಕಾಗಿಲ್ಲ. ಅವರ ಕುಟುಂಬ ಮತ್ತು ಮಕ್ಕಳ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀರಾ? ಎಂದು ನಟಿ ಕೇಳಿದ್ದಾರೆ. ಅವರು ಈಗ ಅನುಭವಿಸುತ್ತಿರುವ ಮಾನಸಿಕ ಆಘಾತವನ್ನು ಒಮ್ಮೆ ಯೋಚಿಸಿ ನೋಡಿ ಎಂದು ಹರ್ಷಿಕಾ ಬರೆದುಕೊಂಡಿದ್ದಾರೆ.

    ಈ ವೀಡಿಯೋಗಳನ್ನು ಸಾರ್ವಜನಿಕರಿಗೆ ಹರಡಲು ಕಾರಣರಾದ ವ್ಯಕ್ತಿಗಳಿಗೂ ಸಮಾನವಾಗಿ ಶಿಕ್ಷೆಯಾಗಬೇಕು. ನಾನು ಯಾವಾಗಲೂ ಗೌರವ, ಸುರಕ್ಷತೆ ಮತ್ತು ಮಹಿಳೆಯರಿಗೆ ಸಮಾನತೆಗಾಗಿ ನಿಂತಿದ್ದೇನೆ ಮತ್ತು ನಾನು ಯಾವಾಗಲೂ ಇದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಸಮಸ್ಯೆಗೆ ಒಳಗಾದ ಎಲ್ಲಾ ಅಮಾಯಕ ಕುಟುಂಬಗಳಿಗೆ ಶಕ್ತಿ ಮತ್ತು ಧೈರ್ಯವನ್ನು ನೀಡಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ನಟಿ ಬರೆದುಕೊಂಡಿದ್ದಾರೆ.

  • ಮದುವೆ ಬಳಿಕ ಹೊಸ ಸಿನಿಮಾ ಒಪ್ಪಿಕೊಂಡ ಹರ್ಷಿಕಾ ಪೂಣಚ್ಚ

    ಮದುವೆ ಬಳಿಕ ಹೊಸ ಸಿನಿಮಾ ಒಪ್ಪಿಕೊಂಡ ಹರ್ಷಿಕಾ ಪೂಣಚ್ಚ

    ಸ್ಯಾಂಡಲ್‌ವುಡ್ ತಾರೆ ಹರ್ಷಿಕಾ ಪೂಣಚ್ಚ- ಭುವನ್ (Bhuvan) ಆಗಸ್ಟ್ 24ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಮೇಲೆ ಕೆಲ ದಿನಗಳ ಕಾಲ ಅಮೆರಿಕಾದಲ್ಲಿ ವೆಕೇಷನ್‌ನಲ್ಲಿದ್ರು. ಮದುವೆ ಬಳಿಕ ಮತ್ತೆ ಕ್ಯಾಮೆರಾ ಮುಂದೆ ಬರಲು ಹರ್ಷಿಕಾ (Harshika Poonacha) ತಯಾರಿ ಮಾಡಿಕೊಂಡಿದ್ದಾರೆ. ಹೊಸ ಚಿತ್ರಕ್ಕೆ ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    8 ಭಾಷೆಗಳಲ್ಲಿ ನಾಯಕಿಯಾಗಿ ಹರ್ಷಿಕಾ ಗುರುತಿಸಿಕೊಂಡಿದ್ದಾರೆ. ಮದುವೆಯಾದ್ಮೇಲೆಯೂ ಕೂಡ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ತೋರುತ್ತಿದ್ದಾರೆ. ಮದುವೆ ಮುಂಚೆ ನಟಿಸಿದ್ದ ‘ಮಾರಕಾಸ್ತ್ರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿತ್ತು. ಈಗ ಮದುವೆ ಬಳಿಕ ವಿಭಿನ್ನ ಕಂಟೆಂಟ್ ಇರುವ ಭೋಜಪುರಿ ಚಿತ್ರಕ್ಕೆ ನಟಿ ಅಭಿನಯಿಸಲು ಓಕೆ ಎಂದಿದ್ದಾರೆ.

    ಭೋಜಪುರಿ ನಟ ರಿತೇಶ್ ಪಾಂಡೆ ನಟನೆಯ ಸಿನಿಮಾದಲ್ಲಿ ಹರ್ಷಿಕಾ ಹೀರೋಯಿನ್ ಆಗಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇದನ್ನೂ ಓದಿ:ದರ್ಶನ್ ವಿರುದ್ಧ ದೂರು ದಾಖಲಿಸಿದ್ದ ಮಹಿಳೆಗೆ ಪೊಲೀಸರಿಂದ ನೋಟಿಸ್

    ಪತಿ ಭುವನ್ ನಟನೆಯ ಹೊಸ ಸಿನಿಮಾಗೆ ಹರ್ಷಿಕಾ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಹರ್ಷಿಕಾ ಬರುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ಹರ್ಷಿಕಾ- ಭುವನ್ ಜೋಡಿ

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಹರ್ಷಿಕಾ- ಭುವನ್ ಜೋಡಿ

    ಸ್ಯಾಂಡಲ್‌ವುಡ್ ಚಿಟ್ಟೆ ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ (Bhuvan Ponnanna) ಇಂದು (ಆಗಸ್ಟ್ 24) ಕೊಡಗಿನಲ್ಲಿ (Kodava) ಅದ್ದೂರಿಯಾಗಿ ಮದುವೆಯಾಗಿದ್ದಾರೆ. 12 ವರ್ಷಗಳ ಪ್ರೀತಿಗೆ ಇದೀಗ ಮದುವೆಯ ಮುದ್ರೆ ಒತ್ತಿದ್ದಾರೆ.

    ಇಂದು ಗುರುಹಿರಿಯರ ಸಮ್ಮುಖದಲ್ಲಿ ನಟಿ ಹರ್ಷಿಕಾ(Harshika Poonacha)- ಭುವನ್ ಕೊಡವ ಪದ್ಧತಿಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ವಿರಾಟ್‌ಪೇಟೆಯಲ್ಲಿ ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ಜರುಗಿದೆ. ಕೊಡವ ಲುಕ್‌ನಲ್ಲಿ ನವಜೋಡಿ ಮಿಂಚಿದ್ದಾರೆ. ಇದನ್ನೂ ಓದಿ:ಮುಕ್ತಾಯ ಹಂತದಲ್ಲಿ ‘ಕರಟಕ ದಮನಕ’: ಶಿವಣ್ಣ-ಪ್ರಭುದೇವ ನಟನೆಯ ಚಿತ್ರ

    ಮದುವೆಯೂ ಮುನ್ನವೇ ಜೋಡಿಯಾಗಿ ಹರ್ಷಿಕಾ-ಭುವನ್ ಗೃಹಪ್ರವೇಶ ನೆರವೇರಿತ್ತು. ಆಗಸ್ಟ್ 23ರಂದು ಊರ್ಕುಡುವ ಶಾಸ್ತ್ರ ನಡೆದಿತ್ತು. ಇದೀಗ ಮದುವೆಯಾಗಿರೋ ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರಿದ್ದಾರೆ. ಹರ್ಷಿಕಾ ದಂಪತಿಯ ಮದುವೆಗೆ ಮಾಜಿ ಸಿಎಂ ಬಿಎಸ್‌ವೈ, ನಟ ತಬಲಾ ನಾಣಿ ಕೂಡ ಹಾಜರಿ ಹಾಕಿದ್ದಾರೆ.

    ಫ್ಯಾಶನ್ ಶೋವೊಂದರಲ್ಲಿ ಭುವನ್- ಹರ್ಷಿಕಾ ಭೇಟಿಯಾಗಿದ್ದು, ಆ ಪರಿಚಯವೇ ಪ್ರೀತಿಗೆ ತಿರುಗಿತ್ತು. ಭುವನ್, ಹರ್ಷಿಕಾಗೆ ಮೊದಲು ಪ್ರಪೋಸ್ ಮಾಡಿ ಒಂದೇ ದಿನದಲ್ಲಿ ಉತ್ತರ ಹೇಳಬೇಕು ಅಂತಾ ಟೈಂ ಫಿಕ್ಸ್ ಮಾಡಿದ್ರಂತೆ. ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.

    ಯಾಕೆ ವರ್ಷಗಳು ಎಲ್ಲೂ ನಮ್ಮ ಪ್ರೀತಿ ಬಗ್ಗೆ ಬಾಯ್ಬಿಟ್ಟಿರಲಿಲ್ಲ ಎಂದು ಭುವನ್ ಕ್ಲ್ಯಾರಿಟಿ ನೀಡಿದ್ದಾರೆ. ಇಷ್ಟು ದಿನ ನಮ್ಮ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳದೇ ಇರಲಿ ಅಂತಾ ಮದುವೆ ವಿಚಾರ ಹೇಳಿರಲಿಲ್ಲ. ವೃತ್ತಿರಂಗದಲ್ಲಿ ಸೆಟಲ್ ಆಗಬೇಕಾದ ಕಾರಣ, ಇಬ್ಬರು ಸೈಲೆಂಟ್ ಆಗಿ ಇದ್ವಿ. ನಮ್ಮ ಲವ್ ಸ್ಟೋರಿ ಬಗ್ಗೆ ಆತ್ಮೀಯರಿಗೆ ತಿಳಿದಿತ್ತು. ಆದರೆ ಇತ್ತೀಚಿಗೆ ಎಲ್ಲರಿಗೂ ಗೊತ್ತಾಯ್ತು. ಪ್ರೀತಿ ಮತ್ತು ಗೆಳೆತನ ಅನ್ನೋದಕ್ಕಿಂತ ಹೆಣ್ಣು ಮತ್ತು ಗಂಡಿನ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಅನ್ನೋದು ಮುಖ್ಯವಾಗುತ್ತೆ ಎಂದು ಭುವನ್ ಮಾತನಾಡಿದ್ದರು.

    ನಾನು ಈಗ ಮದುವೆಯಾಗುವ ಐಡಿಯಾದಲ್ಲಿ ಇರಲಿಲ್ಲ. ಪ್ಲ್ಯಾನ್ ಲೇಟ್ ಇತ್ತು. ಆದರೆ ಕುಟುಂಬದವರ ಒತ್ತಾಯದ ಮೇರೆಗೆ ಈಗ ಎರಡು ತಿಂಗಳ ಹಿಂದೆ ಮದುವೆ ಬಗ್ಗೆ ಪ್ಲ್ಯಾನ್ ಮಾಡಿದ್ವಿ ಎಂದು ಇತ್ತೀಚಿಹೆ ಈ ನವಜೋಡಿ ಲವ್, ಮದುವೆ ಬಗ್ಗೆ ಬಾಯ್ಬಿಟ್ಟಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇದೇ ಆಗಸ್ಟ್ 24ಕ್ಕೆ ಕೊಡವ ಪದ್ಧತಿಯಂತೆ ಹರ್ಷಿಕಾ- ಭುವನ್ ಮದುವೆ

    ಇದೇ ಆಗಸ್ಟ್ 24ಕ್ಕೆ ಕೊಡವ ಪದ್ಧತಿಯಂತೆ ಹರ್ಷಿಕಾ- ಭುವನ್ ಮದುವೆ

    ಸ್ಯಾಂಡಲ್‌ವುಡ್ (Sandalwood) ಚಿಟ್ಟೆ ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ (Bhuvan Ponnanna) ಅವರು ಇದೇ ಆಗಸ್ಟ್ 24ರಂದು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಕೊಡಗಿನ ಜೋಡಿ ಗುಡ್ ನ್ಯೂಸ್ ಕೊಡ್ತಿದ್ದಾರೆ.

    harshika-poonacha-101391458

    ಚಿತ್ರರಂಗದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಒಬ್ಬರ ಹಿಂದೆ ಮತ್ತೊಂದು ಜೋಡಿ ಹಸೆಮಣೆ ಏರುತ್ತಿದ್ದಾರೆ. ಹರಿಪ್ರಿಯಾ-ವಸಿಷ್ಠ, ಅಭಿಷೇಕ್ ಅಂಬರೀಶ್- ಅವಿವಾ ಜೋಡಿ ನಂತರ ಹರ್ಷಿಕಾ-ಭುವನ್ ದಾಂಪತ್ಯ ಬದುಕಿಗೆ ಅಣಿಯಾಗುತ್ತಿದ್ದಾರೆ.

    ‘ಪಿಯುಸಿ’ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪರಿಚಿತರಾದ ನಟಿ ಹರ್ಷಿಕಾ ಪೂಣಚ್ಚ (Harshika Poonachcha) ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದರು. ತಮಸ್ಸು, ಜಾಕಿ ಚಿತ್ರದಲ್ಲಿ ಹರ್ಷಿಕಾ ಅದ್ಭುತವಾಗಿ ನಟಿಸಿದ್ದರು. ಕೊಡಗಿನ ಕುವರಿ ಹರ್ಷಿಕಾ ಅವರು ಸಾಲು ಸಾಲು ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಳ್ಳುವ ಸಂದರ್ಭದಲ್ಲಿ 2010ರಲ್ಲಿ ಭುವನ್ ಪೊನ್ನಣ್ಣ ಅವರು `ಜಸ್ಟ್ ಮಾತ್ ಮಾತಲ್ಲಿ’ ಚಿತ್ರದ ಮೂಲಕ ಎಂಟ್ರಿ ಕೊಟ್ಟರು. ಗಣೇಶ್ ನಟನೆಯ ಕೂಲ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಭುವನ್ ನಟಿಸಿದ್ರು. ಆದರೆ ಗುರುತಿಸುವಂತಹ ಪಾತ್ರ ಅವರಿಗೆ ಸಿಗಲೇ ಇಲ್ಲಾ. ಅದ್ಯಾವಾಗ ಸುದೀಪ್ ನಿರೂಪಣೆಯ ಬಿಗ್ ಬಾಸ್ ಶೋ ಮೂಲಕ ದೊಡ್ಮನೆಗೆ ಕಾಲಿಟ್ರೋ ಅಂದಿನಿಂದ ಕನ್ನಡಿಗರ ಕಣ್ಣಿಗೆ ಭುವನ್ ಗಮನ ಸೆಳೆದರು. ಇದನ್ನೂ ಓದಿ:ಮಗಳೊಂದಿಗಿನ ಕ್ಯೂಟ್ ಸೆಲ್ಫಿ ಹಂಚಿಕೊಂಡ ರಾಧಿಕಾ ಪಂಡಿತ್

    ಹರ್ಷಿಕಾ- ಭುವನ್ ಒಂದೇ ಜಿಲ್ಲೆ ಕೊಡಗಿನವರಾಗಿದ್ದಾರೆ. ಆ ಆಪ್ತತೆಯೇ ಇಬ್ಬರನ್ನು ಲವ್ ರಿಂಗ್‌ಗೆ ಬೀಳುವಂತೆ ಮಾಡಿತ್ತು. ಹಲವು ವರ್ಷಗಳ ಗೆಳೆತನವೇ ಇಂದು ಮದುವೆಯೆಂಬ ಹೊಸ ಹೆಜ್ಜೆ ಇಡಲು ಸಾಕ್ಷಿಯಾಗಿದೆ. ಈ ಜೋಡಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರೂ ಜೊತೆಯಾಗಿ ಸಮಾಜಮುಖಿ ಕಾರ್ಯಗಳನ್ನೂ ಮಾಡಿದ್ದಾರೆ. ಕೊವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅನೇಕರಿಗೆ ಅವರು ನೆರವು ನೀಡಿದ್ದರು. ಇಬ್ಬರ ನಡುವೆ ಪ್ರೀತಿ ಇದೆ ಎಂದು ಅನೇಕ ಬಾರಿ ಗಾಸಿಪ್ ಹಬ್ಬಿತ್ತು. ಆದರೆ ಆ ಕುರಿತು ಅವರು ಬಹಿರಂಗವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಈಗ ಅವರಿಬ್ಬರು ವೈವಾಹಿಕ ಜೀವನ ಆರಂಭಿಸುವ ಸಿದ್ಧತೆಯಲಿದ್ದಾರೆ. ಎರಡೂ ಕುಟುಂಬಗಳು ಮದುವೆಗೆ ತಯಾರಿ ಮಾಡಿಕೊಳ್ಳುತ್ತಿವೆ. ಇದನ್ನೂ ಓದಿ:ಮಗಳೊಂದಿಗಿನ ಕ್ಯೂಟ್ ಸೆಲ್ಫಿ ಹಂಚಿಕೊಂಡ ರಾಧಿಕಾ ಪಂಡಿತ್

    ಜುಲೈ 15ಕ್ಕೆ ಕೊಡಗಿನಲ್ಲಿ ಭುವನ್ ಮನೆಯ ಗೃಹಪ್ರವೇಶ ಸಮಾರಂಭ ನಡೆದಿದೆ. ಇದಾದ ಬಳಿಕ ಕೊಡವ (Kodava) ಸಂಪ್ರದಾಯದಂತೆ ಹರ್ಷಿಕಾ-ಭುವನ್ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ. ಆಗಸ್ಟ್ 23- 24ರಂದು ವಿರಾಜ್‌ಪೇಟೆಯಲ್ಲಿ ಹರ್ಷಿಕಾ-ಭುವನ್ ಅದ್ದೂರಿ ಮದುವೆ (Wedding) ನಡೆಯಲಿದೆ. ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ನಡೆಯಲಿದೆ. ರಾಜಕೀಯ- ಚಿತ್ರರಂಗದ ಗಣ್ಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಸದ್ಯ ಈ ಜೋಡಿ, ಆಪ್ತರಿಗೆ ಮದುವೆ ಆಮಂತ್ರಣ ಪತ್ರಿಕೆ ಕೊಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಜಯ್-ಹರ್ಷಿಕಾ ನಟನೆಯ `ಕಾಸಿನ ಸರ’ ಚಿತ್ರಕ್ಕೆ ಮುಹೂರ್ತ

    ವಿಜಯ್-ಹರ್ಷಿಕಾ ನಟನೆಯ `ಕಾಸಿನ ಸರ’ ಚಿತ್ರಕ್ಕೆ ಮುಹೂರ್ತ

    ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಇದೀಗ `ಕಾಸಿನ ಸರ’ ಚಿತ್ರದ ಮೂಲಕ ಸೌಂಡ್ ಮಾಡ್ತಿದ್ದಾರೆ. ಹರ್ಷಿಕಾಗೆ ವಿಜಯ್ ರಾಘವೇಂದ್ರ ಸಾಥ್ ನೀಡ್ತಿದ್ದಾರೆ.

    ಈಗಾಗಲೇ ಸಾಕಷ್ಟು ಚಿತ್ರಗಳ ಮೂಲಕ ಮೋಡಿ ಮಾಡಿರುವ ನಟಿ ಹರ್ಷಿಕಾ ಈಗ `ಕಾಸಿನ ಸರ’ ಚಿತ್ರದಲ್ಲಿ ಸಂಪಿಗೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹರ್ಷಿಕಾ ಕೃಷಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಟ ವಿಜಯ್ ರಾಘವೇಂದ್ರ ಕೂಡ ನಟಿಸಲಿದ್ದಾರೆ. ಈ ಚಿತ್ರದ ಮುಹೂರ್ತ ನೆರವೇರಿದ್ದು,  ಚಿತ್ರಕ್ಕೆಸಚಿವ ಎಸ್.ಟಿ ಸೋಮಶೇಖರ್‌ ಚಾಲನೆ ನೀಡಿದ್ದಾರೆ.

    ಎಂದೂ ಮಾಡಿರದ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಯುವತಿಯ ಪಾತ್ರದಲ್ಲಿ ಹರ್ಷಿಕಾ ನಟಿಸಲಿದ್ದಾರೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಿರ್ದೇಶಕ ನಂಜುಂಡೇಗೌಡ ನಿರ್ದೇಶನದ ಚಿತ್ರದಲ್ಲಿ ನಟ ವಿಜಯ್ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೊಡ್ಡ ನಾಗಯ್ಯ `ಕಾಸಿನ ಸರ’ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಗ್ರಾಮೀಣ ಭಾಗದ ಕಥೆಯಾದ್ದರಿಂದ ಚೆನ್ನಪಟ್ಟಣ್ಣ, ಮಳವಳ್ಳಿ ಮುಂತಾದ ಕಡೆ 40 ದಿನಗಳ ಚಿತ್ರೀಕರಣ ನಡೆಯಲಿದೆ. ಇದನ್ನೂ ಓದಿ:ಅಫೇರ್ ಆರೋಪ ಬೆನ್ನಲ್ಲೇ ಧಿಡೀರ್ ಸಂಭಾವನೆ ಹೆಚ್ಚಿಸಿಕೊಂಡ ಪವಿತ್ರಾ ಲೋಕೇಶ್

    ಈ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ಛಾಯಗ್ರಾಹಕ ವೇಣುಗೋಪಾಲ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್, ಹಿರಿಯ ನಿರ್ಮಾಪಕರಾದ ಚಿನ್ನೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು

    Live Tv
    [brid partner=56869869 player=32851 video=960834 autoplay=true]

  • ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಹರ್ಷಿಕಾ ಪೂಣಚ್ಚ

    ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಹರ್ಷಿಕಾ ಪೂಣಚ್ಚ

    ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ತಾವು ತೆರೆಯ ಮೇಲೆ ಮಾತ್ರ ನಾಯಕಿಯಲ್ಲ. ತೆರೆಯ ಹಿಂದೆಯೂ ನಾಯಕಿ ಅಂತಾ ಕೊರೊನಾ ವೇಳೆಯಲ್ಲಿ ತಮ್ಮ ಸಾಮಾಜಿಕ ಕಾರ್ಯದ ಮೂಲಕ ತೋರಿಸಿ ಕೊಟ್ಟವರು. ಭುವನಂ ಸಂಸ್ಥೆಯ ಮೂಲಕ ನಟ ಭುವನ್‌ಗೆ ಹರ್ಷಿಕಾ ಸಾಥ್ ನೀಡಿದ್ದರು. ಈಗ ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಅನ್ನು ಹರ್ಷಿಕಾ ಪೂಣಚ್ಚ ಸ್ವೀಕರಿಸಿದ್ದಾರೆ.

    ಬೆಳ್ಳಿಪರದೆಯಲ್ಲಿ ಸ್ಟಾರ್ ಆಗಿ ಮಿಂಚುವ ಅದೆಷ್ಟು ಕಲಾವಿದರು ನಿಜ ಜೀವನದಲ್ಲೂ ಸ್ಟಾರ್ ಆಗಿ ಇನ್ನೊಬ್ಬರ ಕಷ್ಟಕ್ಕೆ ಸಾಥ್ ನೀಡುವುದು ತುಂಬಾ ಕಮ್ಮಿ. ಆದರೆ ರಿಯಲ್ ಲೈಫ್‌ನಲ್ಲೂ ತಾವು ಹೀರೋನೇ ಅಂತಾ ನಟ ಭುವನ್ ಮತ್ತು ಹರ್ಷಿಕಾ ಪೂಣಚ್ಚ ತೋರಿಸಿ ಕೊಟ್ಟಿದ್ದರು. ಭುವನಂ ಸಂಸ್ಥೆಯ ಮೂಲಕ ಅದೆಷ್ಟೋ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಭುವನ್ ಜೊತೆ ಹರ್ಷಿಕಾ ಸಾಥ್ ನೀಡಿದ್ದರು. ಇದನ್ನೂ ಓದಿ:ಕಿರುತೆರೆಗೆ ಮರಳಿದ ಎವರ್‌ಗ್ರೀನ್ ನಟಿ ಸುಧಾರಾಣಿ

    ಇದೀಗ ಇವರ ಸಮಾಜಮುಖಿ ಕಾರ್ಯ ಗುರುತಿಸಿ ಭುವನಂ ಸಂಸ್ಥೆಯ ಪರವಾಗಿ ನಟಿ ಹರ್ಷಿಕಾ, ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಅನ್ನು ಸ್ವೀಕರಿಸಿದ್ದಾರೆ. ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ನಟಿ ಹರ್ಷಿಕಾ ಅವರಿಗೆ ಮದರ್‌ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದ್ದರು. ಈ ಪ್ರಶಸ್ತಿಯಿಂದ ಭುವನಂ ಸಂಸ್ಥೆಯ ಮೂಲಕ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ನಟಿಗೆ ಪ್ರೇರಣೆ ಸಿಕ್ಕಂತಾಗಿದೆ. ಪ್ರಶಸ್ತಿಯ ಕುರಿತು ಹರ್ಷಿಕಾ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ನಟಿಗೆ ಶುಭಹಾರೈಸಿದ್ದಾರೆ.

    Live Tv

  • ಕಷ್ಟದಲ್ಲಿದ್ದವರ ಕಣ್ಣೀರು ಒರೆಸಲು ಮುಂದಾದ ನಟಿ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ

    ಕಷ್ಟದಲ್ಲಿದ್ದವರ ಕಣ್ಣೀರು ಒರೆಸಲು ಮುಂದಾದ ನಟಿ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ

    ಮಡಿಕೇರಿ: ಕೊರೊನಾ ಎರಡನೇ ಅಲೆಯಿಂದ ಹಲವಾರು ಮಂದಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಮಧ್ಯೆ ಸ್ಯಾಂಡಲ್‍ವುಡ್ ಕಲಾವಿದರಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೊಡಗಿನ ಜನರಿಗೆ ಸಹಾಯ ಮಾಡಿದ್ದಾರೆ.

    ಕೊರೊನಾ ಕಾಲದಲ್ಲಿ ಕೆಲವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಮತ್ತೊಂದೆಡೆ ಆಕ್ಸಿಜನ್, ಬೆಡ್ ಇಲ್ಲದೆ ಅನೇಕರು ನಿಧನರಾಗಿದ್ದಾರೆ. ಇಂತಹವರಿಗೆ ಕೊರೊನಾ ವಿರುದ್ಧ ಹೋರಾಡಲು ಸ್ಯಾಂಡಲ್‍ವುಡ್‍ನ ಕೆಲ ಸೆಲಿಬ್ರೆಟಿಗಳು ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಕಳೆದ ವರ್ಷ ಚಂದನವನದ ಹಲವರು ಉದ್ಯೋಗವಿಲ್ಲದವರಿಗೆ ದಿನಸಿ ಕಿಟ್ ನೀಡುವುದು ಹಾಗೂ ಇತರೆ ನೆರವು ನೀಡುವಲ್ಲಿ ಮುಂಚೂಣಿಯಲ್ಲಿದ್ದರು.

    ಹಾಗೆಯೇ ಈ ಬಾರಿ ಕೊಡಗಿನ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೊರೊನಾ ವಾರಿಯರ್‌ಗಳಂತೆ ಕೆಲಸ ಮಾಡುತ್ತಿದ್ದಾರೆ. ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ‘ಭುವನಂ ಕೋವಿಡ್ ಹೆಲ್ಪ್ 24/7’ ಎಂಬ ಟ್ರಸ್ಟ್ ಆರಂಭಿಸಿ ಸೋಂಕಿತರಿಗೆ ಸಹಾಯ ಮಾಡುವ ಮೂಲಕ ಇಬ್ಬರು ಕೊಡಗಿನ ಸೇವೆಗೆ ಮುಂದಾಗಿದ್ದಾರೆ.

    ಲಾಕ್ ಡೌನ್ ಸಂದರ್ಭದಲ್ಲಿ ಭಾಂದವ ಫೌಂಡೇಷನ್ ಹೆಸರಿನ ಮೂಲಕ ಕೊಡಗಿನ ಜನರ ನೆರವಿಗೆ ನಿಂತಿದ್ದು, ಬಡವರು, ನಿರ್ಗತಿಕರಿಗೆ ಹದಿನೈದು ದಿನಗಳಿಗೆ ಆಗುವಷ್ಟು ಆಹಾರ ಪದಾರ್ಥಗಳ ಕಿಟ್‍ನನ್ನು ವಿತರಣೆ ಮಾಡುತ್ತಿದ್ದಾರೆ. ಎರಡು ವಾರಗಳ ಕಾಲ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲಿರುವ ‘ಭುವನಂ ಫೌಂಡೇಷನ್’ಗೆ ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ನಲ್ಲಿ ಚಾಲನೆ ನೀಡಲಾಯಿತು. ಸ್ಥಳೀಯರಿಗೆ ಮತ್ತು ಹೋಂ ಗಾರ್ಡ್‍ಗಳಿಗೆ ಆಹಾರ ಪದಾರ್ಥಗಳ ಕಿಟ್ ಮತ್ತು ಮಾಸ್ಕ್ ಅನ್ನು ನಟ ಭುವನ್ ಮತ್ತು ಹರ್ಷಿಕಾ ಪೂಣಚ್ಚ ವಿತರಣೆ ಮಾಡಿದ್ದಾರೆ.

    ಈ ಸಂದರ್ಭ ನಗರ ಸಭೆ ಆಯುಕ್ತ ರಾಮದಾಸ್ ಜೊತೆಗಿದ್ದು, ನಗರದಲ್ಲಿ ಆಹಾರ ಪದಾರ್ಥಗಳ ಕಿಟ್ ಬೇಕಾಗಿರುವ ಏರಿಯಾಗಳಿಗೆ ಕರೆದೊಯ್ದು ಕುದ್ದು ನಿಂತು ಆಹಾರ ಪದಾರ್ಥಗಳನ್ನು ವಿತರಣೆ ಮಾಡಿಸಿದರು. ಈ ಸಂದರ್ಭ ಮಾತನಾಡಿದ ಭುವನ್ ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಔಷಧಿ ಕೊಳ್ಳಲು 15, 20 ಕಿಲೋಮೀಟರ್ ಹೋಗಬೇಕಾಗಿದೆ. ಇನ್ನು ಕೋವಿಡ್ ಎಂದ ಕೂಡಲೇ ಯಾರೂ ಆಟೋದವರು ಬರುವುದಿಲ್ಲ. ಹೀಗಾಗಿಯೇ ನಮ್ಮದೇ ತಂಡ ಇಂತಹವರ ನೆರವಿಗೆ ಧಾವಿಸಲಿದೆ. ಅಲ್ಲದೆ ಆಹಾರ ಪದಾರ್ಥಗಳು ಬೇಕಾದಲ್ಲಿ ಒದಗಿಸಲಿದೆ ಎಂದರು.

    ನಟಿ ಹರ್ಷಿಕಾ ಪೂಣಚ್ಚ, ಕೊಡಗಿನಲ್ಲಿ ನೆರೆ ಆಗುತ್ತಿದ್ದಂತೆ ಫೀಡ್ ಕರ್ನಾಟಕ ಆರಂಭಿಸಿದ್ದೇವೆ. ಕೊಡಗಿನ ಜನರಿಗೆ ಔಷಧಿ ಅಗತ್ಯ ಇರುವುದರಿಂದ ಸೇವೆಯನ್ನು ಒದಗಿಸಲಿದ್ದೇವೆ ಎಂದು ಹೇಳಿದ್ದಾರೆ.

  • ಚಿತ್ರರಂಗವನ್ನೇ ಬಿಟ್ಟು ಹೋಗಲಿ – ನಟಿ ಹರ್ಷಿಕಾ ಪೂಣಚ್ಚ ಖಡಕ್ ಮಾತು

    ಚಿತ್ರರಂಗವನ್ನೇ ಬಿಟ್ಟು ಹೋಗಲಿ – ನಟಿ ಹರ್ಷಿಕಾ ಪೂಣಚ್ಚ ಖಡಕ್ ಮಾತು

    ಬೆಂಗಳೂರು: ಚಿತ್ರರಂಗದಲ್ಲಿ ಹೆಸರು ಮಾಡಲು 15 ವರ್ಷ ಕಷ್ಟಪಡಬೇಕು. ಆದರೆ ಒಂದು ಕ್ಷಣದಲ್ಲಿ ಅವರ ಕಷ್ಟವನ್ನು ಹಾಳು ಮಾಡಬಾರದು. ಪ್ರಚಾರಕ್ಕಾಗಿ ಒಬ್ಬರ ಹೆಸರನ್ನ ಹಾಳು ಮಾಡಬಾರದು. ಒಂದೊಮ್ಮೆ ಅಂತಹ ಪರಿಸ್ಥಿತಿ ಎದುರಾದರೆ ಆ ಅವಕಾಶವನ್ನು ಬಿಟ್ಟು ಹೋಗುವುದೇ ಉತ್ತಮ ಎಂದು ತಿಳಿಸಿದ್ದಾರೆ.

    ಕಷ್ಟದಲ್ಲಿ ಇರುವ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಅಭಿಯಾನ ಮೀಟೂ. ಆದರೆ ಅದನ್ನು ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ನಿಜವಾಗಿ ತೊಂದರೆ ಅನುಭವಿಸಿದ ಹೆಣ್ಣು ಮಕ್ಕಳು ಅಭಿಯಾನದಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ನಾವು ಬೇಡ ಅಂದರೆ ಚಿತ್ರರಂಗದಲ್ಲಿ ಯಾರೂ ಬಲವಂತ ಮಾಡಲ್ಲ. ನಿಮಗೆ ತೊಂದರೆ ಆದರೆ ಚಿತ್ರರಂಗ ಬಿಟ್ಟು ಹೋಗಿ ಎಂದು ಹರ್ಷಿಕಾ ಪೂಣಚ್ಚ ಖಡಕ್ ಆಗಿ ಹೇಳಿಕೆ ನೀಡಿದರು.

    ಇದೇ ವೇಳೆ ತಮ್ಮ ಮೀಟೂ ಅನುಭವದ ಕುರಿತು ಮಾಹಿತಿ ನೀಡಿದ ಪೂಣಚ್ಚ, ನನಗೂ ಬಾಲಿವುಡ್ ರಂಗದಿಂದ ಆಫರ್ ಬಂದಿತ್ತು. ಇದರಲ್ಲಿ ಲೈಂಗಿಕ ಕಿರುಕುಳ ನೀಡುವ ವಿಷಯ ಕಂಡು ಬಂತು. ಅದ್ದರಿಂದ ನಾನು ಆ ಸಿನಿಮಾವನ್ನು ಬಿಟ್ಟು ಬಂದೆ. ನಮಗೆ ಚಿತ್ರರಂಗದಲ್ಲಿ ಒಂದೇ ಸಿನಿಮಾ ಎಂದು ಏನು ಇಲ್ಲ. ಜೀವನದಲ್ಲಿ ನಮಗೇ ಸಾಕಷ್ಟು ಅವಕಾಶಗಳಿದೆ. ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಆಗುತ್ತೆ. ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ನಾನು 2 ವರ್ಷ, 10 ವರ್ಷದ ಹಿಂದಿನ ಮಾತು ಹೇಳುತ್ತಿಲ್ಲ. ಅದ್ದರಿಂದ ಇದು ತಪ್ಪು ಎಂದು ಅನಿಸುತ್ತಿದೆ ಎಂದರು.

    ಚಿತ್ರರಂಗದ ಪರ ನಿಲ್ಲುತ್ತೇನೆ: ಸಿನಿಮಾ ರಂಗ ಎಂಬುವುದು ನಮಗೇ ಊಟ ನೀಡುವ ಕ್ಷೇತ್ರ. ನಮ್ಮ ಕನಸು ನನಸಾಗುವುದು ಇಲ್ಲಿ, ಹರ್ಷಿಕಾ ಪೂಣಚ್ಚ ಎಂಬ ಹೆಸರು ಜನರಿಗೆ ತಿಳಿದಿರುವುದು ಸಿನಿಮಾದಿಂದಲೇ. ಅದ್ದರಿಂದ ನಾನು ಅಷ್ಟು ಬೇಗ ಇದನ್ನು ಬಿಟ್ಟುಕೊಡುವುದಿಲ್ಲ. ನಾನು ಸಿನಿಮಾ ಕ್ಷೇತ್ರದ ಪರವೇ ನಿಲುತ್ತೇನೆ. ಅಡ್ವಾಂಟೇಜ್ ಕೊಟ್ಟರೆ ಮಾತ್ರ ತೆಗೆದುಕೊಳುತ್ತಾರೆ. ನೀವು ಕೊಡಲ್ಲ ಎಂದು ತಿಳಿದ ಮರು ಕ್ಷಣ ಅವರು ಸುಮ್ಮನಾಗುತ್ತಾರೆ ಎಂದರು.

    ಕೆಲ ನಟಿಯರು ವಿದೇಶಕ್ಕೆ ಹೋಗಿ ಗಣವ್ಯಕ್ತಿಗಳಿಂದ ಉಪಯೋಗ ಪಡೆದುಕೊಳುತ್ತಾರೆ. ಸಿನಿಮಾ ಬೇಕು, ಪ್ರಚಾರ ಬೇಕು ಎಂದು ಹೇಳುತ್ತೀರಾ? ಸಿನಿಮಾ ಕೊಡುವವರ ಬಗ್ಗೆಯೇ ಯಾಕೆ ಮಾತಾಡ್ತೀರಾ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಚಿತ್ರರಂಗದಲ್ಲಿ ಅವಕಾಶಗಳ ಕೊರತೆ ಇರುವುದರಿಂದ ಅವಕಾಶಕ್ಕಾಗಿ ಈ ರೀತಿ ಆಗುತ್ತದೆ. ಅದ್ದರಿಂದ ಸಿನಿಮಾ ಕೊಟ್ಟು ಲೈಫ್ ಕೊಟ್ಟವರಿಗೆ ಏಕೆ ಹೀಗೆ ಮಾಡುತ್ತಿದ್ದಾರೆ. ಈ ಹೇಳಿಕೆ ನೀಡಿದ ಬಳಿಕ ನನಗೆ ಬೆದರಿಕೆ ಕರೆಗಳು ಕೂಡ ಬಂದಿದೆ. ಆದರೆ ನಾನು ಏನು ನಡೆದರೂ ಸಿನಿಮಾ ರಂಗದ ಪರವೇ ನಿಲ್ಲುತ್ತೇನೆ ಎಂದು ಸ್ಪಷ್ಟಪಡಿಸಿದರು.

    ಈ ಫೇಮಸ್ ನಟಿಯ ಅರ್ಧ ಬೆತ್ತಲೆ ದೃಶ್ಯ ಚಿತ್ರೀಕರಿಸುತ್ತಿದ್ದರು. ಇದು ಇರಬೇಕಾದ್ದು ಹೀಗಲ್ಲ. ಅಲ್ವಾ? ನಾನು ಒಬ್ಬ ನಟಿಯಾಗಿ ನನಗೂ ಈ ಥರ ಹಲವರು ಕೇಳಿದ್ದಾರೆ. ಅದನ್ನ ನಾನು ಅಷ್ಟೇ ವಿನಮ್ರತೆಯಿಂದ ಆಗಲೇ ನನ್ನ ಆದ್ಯತೆಗಳು, ನನ್ನ ಮೌಲ್ಯಗಳು ಏನು ಅನ್ನೋದನ್ನ ಸ್ಪಷ್ಟಪಡಿಸಿದ್ದೇನೆ. ಈಗ 10 ವರ್ಷಗಳ ಬಳಿಕ ಯಾವುದೇ ಚಿತ್ರರಂಗದ ಯಾವೊಬ್ಬ ವ್ಯಕ್ತಿಯೂ ನನ್ನತ್ತ ಬೆರಳು ಮಾಡಿ ತೋರಿಸುವುದಿಲ್ಲ. ಏಕೆಂದರೆ ನಾನು ಪ್ಯೂರ್ ಮತ್ತು ಕ್ಲೀನ್ ಆಗಿದ್ದೆ. ನಾನು ಮಾಡಿದ ಕೆಲಸಗಳು ಕ್ಲೀನ್ ಆಗಿದ್ದವು. ಇದರಿಂದ ನನಗೆ ದೊಡ್ಡ ದೊಡ್ಡ ಸೂಪರ್ ಸ್ಟಾರ್ ಗಳ ಜೊತೆ ದೊಡ್ಡ ಪ್ರಾಜೆಕ್ಟ್‍ಗಳು ಕೈತಪ್ಪಿರಬಹುದು. ಆದರೆ ನಾನು ಸಂತೋಷವಾಗಿದ್ದೇನೆ. ಜನರ ಜೊತೆಗೆ ಉತ್ತಮ ಸಂಬಂಧಗಳನ್ನು ಹೊಂದಿದ್ದೇನೆ ಎಂದು ಟ್ವೀಟ್ ಮಾಡಿ ತಮ್ಮ ಹೇಳಿಕೆ ಸಮರ್ಥನೆ ನೀಡಿದ್ದಾರೆ.

    ಗಂಡಸರೂ ಮೀಟೂ ಅಭಿಯಾನವನ್ನು ಶುರು ಮಾಡಲು ಸರಿಯಾದ ಸಮಯ ಬಂದಿದೆ. ಏಕೆಂದರೆ ನಟಿಯರು ನಟರ ಹೆಸರು ಬಳಸಿ ಪ್ರಚಾರ ಪಡೆದು ಬಳಿಕ ಕೈಕೊಟ್ಟ ಹಲವರನ್ನು ನಾನು ನೋಡಿದ್ದೇನೆ. ಇಷ್ಟು ದಿನ ಸಹ ನಟಿಯರ ಬಗ್ಗೆ ಮಾತನಾಡಬಾರದು ಎಂದು ಸುಮ್ಮನಿದ್ದೆ. ಆದರೆ ಇಂದು ಕೆಲ ನಟಿಯರು ನಮಗೇ ಅನ್ನ ಕೊಟ್ಟ ಚಿತ್ರರಂಗವನ್ನು ನಗೆಪಾಟಲು ಮಾಡಲು ಮುಂದಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://twitter.com/actressharshika/status/1055764883029942272

    https://twitter.com/actressharshika/status/1055764774506516481

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=iCz49tD85ZI