ಫ್ಯಾಶನ್ ಐಕಾನ್ ಪ್ರಸಾದ್ ಬಿದ್ದಪ್ಪ ಪುತ್ರ ಆಡಂ ಬಿದ್ದಪ್ಪ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ ನಟಿ ಸಂಜನಾ. ಮಾಧ್ಯಮಗಳ ಜತೆ ಮಾತನಾಡಿದ ಅವರು, “ಆಡಂ ನನಗೆ ನೇರವಾಗಿ ಪರಿಚಯವೇ ಇಲ್ಲ. ಅವರ ತಂದೆಯೊಂದಿಗೆ ನಾನು ಕೆಲಸ ಮಾಡಿದ್ದೇನೆ. ಅವರು ತುಂಬಾ ಒಳ್ಳೆಯವರು. ಆದರೆ, ಈ ಹುಡುಗನಿಗೆ ಏನಾಗಿದೆ ಅಂತ ನನಗೆ ಗೊತ್ತಿಲ್ಲ. ರಾತ್ರಿಯೆಲ್ಲ ಅಶ್ಲೀಲ ಮಸೇಜ್ ಕಳಿಸ್ತಾನೆ. ತನ್ನೊಂದಿಗೆ ಚಾಟ್ ಮಾಡುವಂತೆ ಒತ್ತಾಯಿಸುತ್ತಾನೆ. ಖಾರವಾಗಿ ನಾನು ರಿಯಾಕ್ಟ್ ಮಾಡಿದಾಗ, ನನ್ನ ಮುಗಿಸ್ಬಿಡ್ತೀನಿ ಅಂತ ಹೆದರಿಸುತ್ತಾನೆ’ ಎಂದು ನಟ ಸಂಜನಾ ಆರೋಪಿಸುತ್ತಾರೆ. ಇದನ್ನೂ ನೋಡಿ : ನಟ ಚೇತನ್‌ಗೆ ನೀಡಿದ್ದ ಗನ್ ಮ್ಯಾನ್ ಹಿಂಪಡೆದ ಸರ್ಕಾರ
ಇಂತಹ ಕಿರಿಕಿರಿಯಿಂದಲೇ ಅವರು ಅನೇಕ ಬಾರಿ ಮೊಬೈಲ್ ನಂಬರ್ ಬದಲಾಯಿಸಿದ್ದಾರಂತೆ. ಮತ್ತೆ ಮತ್ತೆ ನಂಬರ್ ಬದಲಾಯಿಸಿದರೆ, ವೃತ್ತಿಗೆ ತೊಂದರೆ ಆಗುವುದರಿಂದ ಇನ್ಮುಂದೆ ಇಂತಹ ಘಟನೆಗಳನ್ನು ಅವರು ಗಂಭೀರವಾಗಿಯೇ ತಗೆದುಕೊಳ್ಳುತ್ತಾರಂತೆ. ಇದನ್ನೂ ಓದಿ : ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!
ಪ್ರಸಾದ್ ಬಿದ್ದಪ್ಪ ಪುತ್ರ ಆಡಂನನ್ನು ಈಗಾಗಲೇ ಇಂದಿರಾ ನಗರ ಪೊಲೀಸ್ ರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಆಗಲೇ ಅವನು ಸಂಜನಾ ಜತೆ ಮಾಡಿದ್ದ ಚಾಟ್ ಗಳನ್ನು ಡಿಲಿಟ್ ಮಾಡಿದ್ದಾನೆ ಎನ್ನಲಾಗುತ್ತಿದೆ. ಡಿಲಿಟ್ ಆದ ಚಾಟ್ ಅನ್ನು ಮತ್ತೆ ಪಡೆಯುವ ಪ್ರಯತ್ನ ಮಾಡುತ್ತಿದ್ದಾರಂತೆ ಪೊಲೀಸ್ ಅಧಿಕಾರಿಗಳು.
ಬೆಂಗಳೂರು: ನಟಿ ರಾಗಿಣಿ ಮತ್ತು ಸಂಜನಾ ಸಲ್ಲಿಸಿರುವ ಬೇಲ್ ಅರ್ಜಿಯ ವಿಚಾರಣೆ ಇಂದು ಬೆಂಗಳೂರಿನ ಎನ್‍ಡಿಪಿಎಸ್ ಕೋರ್ಟಿನಲ್ಲಿ ನಡೆಯಲಿದೆ.
ಸದ್ಯ ಇಬ್ಬರೂ ನಟಿಯರು ನ್ಯಾಯಾಂಗ ಬಂಧನದಡಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಸೋಮವಾರ ರಾಗಿಣಿ ಮತ್ತು ಸಂಜನಾ ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ಆದರೆ ನ್ಯಾಯಾಲಯ ಇಬ್ಬರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.24ಕ್ಕೆ ಮುಂದೂಡಿತ್ತು. ಪರಿಣಾಮ ನಟಿಯರು ಜೈಲಿನಲ್ಲೇ ಸಮಯ ಕಳೆದಿದ್ದರು.
ಈಗಾಗಲೇ ರಾಗಿಣಿ, ಸಂಜನಾ ಅವರ ಜಾಮೀನು ನಿರಾಕರಿಸಲಿ ಸಿಸಿಬಿ ಪೊಲೀಸರು ಪುಟಗಟ್ಟಲೇ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಸಿಸಿಬಿಯ ಪರ ವಕೀಲರು ಇಂದು ವಾದ ಮಂಡನೆ ಮಾಡಲಿದ್ದು, ನಟಿ ರಾಗಿಣಿಗೆ ಸಿಸಿಬಿ ಪರ ವಕೀಲ ವಾದ ಮುಳುವಾಗಲಿದ್ಯಾ ಎಂಬ ಪ್ರಶ್ನೆ ಮೂಡಿದೆ.
ಸಿಸಿಬಿ ಆಕ್ಷೇಪಣೆ ಏನು?
ಈಗಾಗಲೇ ಸಾಕ್ಷ್ಯ ನಾಶದ ಆರೋಪ ಇದೆ. ಹೀಗಾಗಿ ಮತ್ತೆ ಸಾಕ್ಷ್ಯ ನಾಶ ಮಾಡ್ತಾರೆ. ಇವರಿಂದ ಮತ್ತಷ್ಟು ಆರೋಪಿಗಳು ಬಚವಾಗೋ ಸಾಧ್ಯತೆ ಇದೆ. ಕಳೆದ 5 ವರ್ಷಗಳಿಂದ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ತನ್ನ ಇತರ ಮೆಂಬರ್ಸ್ ಜೊತೆ ಸೇರಿ ಪಾರ್ಟಿಗಳ ಆಯೋಜನೆ ಮಾಡಿದ್ದಾರೆ. ಪಾರ್ಟಿಗೆ ಬಂದವರಿಗೆ ಡ್ರಗ್ ಸಪ್ಲೆ ಮಾಡಿದ್ದಾರೆ. ಆಂಧ್ರ, ಗೋವಾ, ಪಂಜಾಬ್ ಮತ್ತು ಬಾಂಬೆ ಸೇರಿದಂತೆ ಕೆಲ ವಿದೇಶಿಗರಿಂದಲೂ ಡ್ರಗ್ಸ್ ತರಿಸಿಕೊಂಡಿದ್ದಾರೆ.
ಜಾಮೀನು ನೀಡಿದರೇ ಸಾಕ್ಷಿ ನಾಶ ಮಾಡುವ ಸಾಧ್ಯತೆಗಳಿವೆ. ಪ್ರಕರಣದಲ್ಲಿ ರಾಗಿಣಿ ನೇರ ಪಾತ್ರವಿದ್ದು, ಪ್ರಭಾವಿಗಳಾಗಿರುವ ಕಾರಣ ಸಾಕ್ಷಿಗಳ ಮೇಲೆ ಒತ್ತಡ ಹಾಕುವ ಸಾಧ್ಯತೆ ಇದೆ. ಹಲವು ಡ್ರಗ್ ಪೆಡ್ಲರ್ ಗಳು ನಾಪತ್ತೆಯಾಗಿದ್ದಾರೆ. ಇವರು ಕ್ರಿಮಿನಲ್ ಆರೋಪದಲ್ಲಿ ಬಂಧಿತರಾಗಿದ್ದು, ಬೇಲ್ ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಲಿದೆ. ಆಕೆ ತಾನು ಡ್ರಗ್ ವಿರುದ್ಧ ಕ್ಯಾಂಪೇನ್ ಮಾಡುವ ಮೂಲಕ ಆಕೆಯ ಮತ್ತೊಂದು ಮುಖ ಬಚ್ಚಿಟ್ಟಿದ್ದಾರೆ. ಆರೋಪಿಯ ವಿರುದ್ಧ ಅನೇಕ ಡಿಜಿಟಲ್ ಸಾಕ್ಷಿಗಳು ಲಭ್ಯವಾಗಿದ್ದು, ಮೊಬೈಲ್ ಪಾಸ್ ವರ್ಡ್ ನೀಡದೇ ಕಿರಿಕಿರಿ ಮಾಡಿದ್ರು. ವಿಚಾರಣೆ ವೇಳೆ ತನಿಖೆ ಸಹಕರಿಸಿಲ್ಲ. ಬೇರೆ ಎಲ್ಲಾ ಆರೋಪಿಗಳು ಇವರ ಪಾತ್ರದ ಬಗ್ಗೆ ಹೇಳಿದ್ದಾರೆ ಎಂಬುದು ಆಕ್ಷೇಪಣೆಯ ಪ್ರಮುಖ ಅಂಶಗಳಾಗಿವೆ.
ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಬಂಧನದಲ್ಲಿರುವ ನಟಿಯರಾದ ರಾಗಿಣಿ, ಸಂಜನಾ ಅವರ ಸಿಸಿಬಿ ಕಸ್ಟಡಿಯನ್ನು ನ್ಯಾಯಾಲಯ ಸೆ.14ರ ವರೆಗೂ ಮುಂದುವರಿಸಿ ಆದೇಶ ನೀಡಿದೆ. ಕೋರ್ಟ್ ಆದೇಶ ಹೊರಬರುತ್ತಿದ್ದಂತೆ ಇಬ್ಬರೂ ಕಣ್ಣೀರಿಟ್ಟಿದ್ದಾರೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ.
ಇಂದು ಸುಮಾರು 45 ನಿಮಿಷಗಳ ಕಾಲ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಬಳಿಕ ತನ್ನ ಆದೇಶವನ್ನು ನೀಡಿತ್ತು. ಆದರೆ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಸಿಸಿಬಿ ಪೊಲೀಸರು ರಾಗಿಣಿ, ಸಂಜನಾರನ್ನು ಹಾಜರು ಪಡಿಸಿದ್ದರು. ವಾದ-ಪ್ರತಿವಾದ ಮುಗಿದ ನಂತರ ತೀವ್ರ ಆತಂಕಗೊಂಡಿದ್ದ ಇಬ್ಬರು ನಟಿಯರು, ಕೊಠಡಿಯಲ್ಲಿ ಕುಳಿತ್ತಿದ್ದರು. ತೀರ್ಪಿಗೂ ಮುನ್ನ ವಿಡಿಯೋ ಕಾನ್ಫರೆನ್ಸ್ ಕಟ್ ಆಗಿದ್ದ ಕಾರಣ, ಇನ್ಸ್ ಪೆಕ್ಟರ್ ಅಂಜುಮಾಲ ಅವರಿಂದ ಆದೇಶದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಇದನ್ನೂ ಓದಿ: ಸಿಕ್ಕಾಕೊಂಡ್ರರೆ ನಾವು ಮತ್ತೆ ಜೈಲಿಗೆ ಹೋಗ್ಬೇಕಾಗುತ್ತೆ- ಆಸ್ಪತ್ರೆಯಲ್ಲಿ ನಟಿ ರಾಗಿಣಿ ಕಿರಿಕ್
ಆದೇಶದಂತೆ ಮತ್ತೆ ಮೂರು ದಿನಗಳ ಕಾಲ ಕಸ್ಟಡಿ ಎಂದ ಕೂಡಲೇ ರಾಗಿಣಿ ಮತ್ತು ಸಂಜನಾ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಯಾರೊಂದಿಗೂ ಮಾತಾಡದೇ ಇಬ್ಬರು ಮೌನವಾಗಿ ಕೊಠಡಿಯಲ್ಲಿ ಉಳಿದುಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ನಟಿ ಸಂಜನಾ ಸೇರಿ ಉಳಿದ ಆರೋಪಿಗಳೂ 3 ದಿನ ಸಿಸಿಬಿ ಕಸ್ಟಡಿಗೆ
ಲಭ್ಯ ಮಾಹಿತಿಯ ಅನ್ವಯ, ನ್ಯಾಯಾಂಗ ಬಂಧನ ನೀಡಿದಿದ್ದರೆ ಜಾಮೀನು ಪಡೆಯುವುದು ಸುಲಭವಾಗುತ್ತಿತ್ತು. ಅಲ್ಲದೇ ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಬೇಕು ಎಂಬ ಚಿಂತನೆಯನ್ನು ನಟಿಯರಿಬ್ಬರು ಮಾಡಿದ್ದರು ಎನ್ನಲಾಗಿದೆ. ಸದ್ಯ ಸಿಸಿಬಿ ಪೊಲೀಸರು ನಟಿಯರ ವಿಚಾರಣೆಯನ್ನು ಮುಂದೂವರಿಸಲಿದೆ. ಇದರ ನಡುವೆಯೇ ಸಂದೀಪ್ ಪಾಟೀಲ್ ಅವರು ಇಂದು ನಡೆಸಿದ ವಿಚಾರಣೆಯಲ್ಲಿ ಸಂಜನಾ, ರಾಗಿಣಿ ಅವರು ಇಬ್ಬರು ಪ್ರಭಾವಿ ನಾಯಕರ ಹೆಸರನ್ನು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ನಾವು ಹೇಳುವ ಪ್ರಭಾವಿಗಳ ವಿಚಾರಣೆ ನಡೆಸಲು ಸಾಧ್ಯವೇ ಎಂದು ನಟಿಯರಿಬ್ಬರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮತ್ತೆ 3 ದಿನ ಸಿಸಿಬಿ ಕಸ್ಟಡಿಗೆ ನಟಿ ರಾಗಿಣಿ
ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಅವರನ್ನು ನ್ಯಾಯಾಲಯ ಮತ್ತೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ರಾಗಿಣಿಯನ್ನು ಮತ್ತೆ ಕಸ್ಟಡಿಗೆ ನೀಡಲು ವೈದ್ಯಕೀಯ ಪರೀಕ್ಷೆ ನಡೆಸುವ ವೇಳೆ ಅವರು ಮಾಡಿದ ಕಿರಿಕ್ ಕಾರಣ ಎನ್ನಲಾಗಿದೆ.
ವಿಚಾರಣೆ ಸಂದರ್ಭದಲ್ಲಿ ಪದೇ ಪದೇ ಅನಾರೋಗ್ಯ ನೆಪವೊಡ್ಡುತ್ತಿದ್ದ ಅವರ ಆರೋಗ್ಯ ತಪಾಸಣೆ ನಡೆಸಲು ನಗರದ ಕೆಸಿ ಜನರಲ್ ಆಸ್ಪತ್ರೆಗೆ ಕರೆತರಲಾಗಿತ್ತು. ಆ ಬಳಿಕ ಅವರನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ನ್ಯಾಯಾಲಯದ ಅನುಮತಿ ಪಡೆದು ರಾಗಿಣಿ ಅವರಿಗೆ ಡೋಪಿಂಗ್ ಪರೀಕ್ಷೆ ನಡೆಸಲು ಮುಂದಾಗಿದ್ದರು. ಆದರೆ ಈ ವೇಳೆ ಅಧಿಕಾರಿಗಳ ವಿರುದ್ಧವೇ ಗರಂ ಆದ ನಟಿ ವೈದ್ಯಕೀಯ ಪರೀಕ್ಷೆ ನಡೆಸಿಕೊಳ್ಳಲು ನಿರಾಕರಿಸಿದ್ದರು. ಈ ಕುರಿತ ವಿಡಿಯೋ ಸದ್ಯ ವೈರಲ್ ಆಗಿದೆ. ಇದನ್ನೂ ಓದಿ: ಸಾಂತ್ವನ ಕೇಂದ್ರದಲ್ಲಿ ಗಲಾಟೆ, ಪೊಲೀಸ್ ವಾಹನದಲ್ಲಿ ಮಾತುಕತೆ – ಇದು ರಾಗಿಣಿ, ಸಂಜನಾ ಫ್ರೆಂಡ್‍ಶಿಪ್
ವಿಡಿಯೋದಲ್ಲಿ ಅಧಿಕಾರಿಗಳ ಗಲಾಟೆ ಮಾಡಿದ್ದು, ನಮ್ಮ ಲೈಫ್ ಈಗಾಗಲೇ ಹಾಳಾಗಿ ಹೋಗಿದೆ. ನೀವು ಬಂದನ ಮಾಡಿದ ಕಾರಣ ನಮ್ಮ ಮರ್ಯಾದೆ ಹೋಗಿದೆ. ಮೊದಲೇ ನಮ್ಮ ಲೈಪ್ ಬರ್ನ್ ಆಗಿದೆ. ಇದರಲ್ಲಿ ಸಿಕ್ಕಿಹಾಕ್ಕೋಂಡ್ರೆ ಜೈಲಿಗೆ ಹೋಗಬೇಕಾಗುತ್ತೆ ಎಂದು ಪರೀಕ್ಷೆ ಮಾಡಿಸಿಕೊಳ್ಳುವ ವಿಚಾರದಲ್ಲಿ ಹಠ ಮಾಡಿದ್ದರು. ಯಾವುದೇ ಟೆಸ್ಟ್ ಮಾಡೋದಿದ್ದರೂ ನಮ್ಮ ವಕೀಲರು ಬರಲಿ ಎಂದು ಹೇಳಿದ್ದರು. ಸದ್ಯ ಈ ವಿಡಿಯೊ ವೈರಲ್ ಆಗಿದೆ. ಇದನ್ನೂ ಓದಿ: ನಟಿ ಸಂಜನಾ ಸೇರಿ ಉಳಿದ ಆರೋಪಿಗಳೂ 3 ದಿನ ಸಿಸಿಬಿ ಕಸ್ಟಡಿಗೆ
ಇಂದು ನಟಿ ರಾಗಿಣಿ ಮತ್ತು ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಮುಂದೆ ಹಾಜರ್ ಪಡಿಸಿದ್ದರು. ಈ ವೇಳೆ ವಿಚಾರಣೆಯನ್ನು ಮುಂದುವರಿಸಲು ಮತ್ತೆ 6 ದಿನ ಪೊಲೀಸ್ ಕಸ್ಟಡಿಗೆ ನೀಡಲು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನೂ ಓದಿ: ಮತ್ತೆ 3 ದಿನ ಸಿಸಿಬಿ ಕಸ್ಟಡಿಗೆ ನಟಿ ರಾಗಿಣಿ
ಆದರೆ ರಾಗಿಣಿ ಪರ ವಕೀಲರು ತಮ್ಮ ವಾದ ಮಂಡಿಸಿ, ಈಗಾಗಲೇ 8 ದಿನ ಪೊಲೀಸ್ಟ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದಲ್ಲಿ ರಕ್ತ ಮಾದರಿಯ ಪರೀಕ್ಷೆ ಬಿಟ್ಟು ಬೇರೆ ಯಾವುದೇ ಪ್ರಗತಿ ಮಾಡಿಲ್ಲ. ನನ್ನ ಕಕ್ಷಿದಾರರು ಈಗಾಗಲೇ ತಮಗೇ ತಿಳಿದಿರುವ ಮಾಹಿತಿಯನ್ನು ತಿಳಿಸಿದ್ದಾರೆ. ಆದ್ದರಿಂದ ಅವರನ್ನು ನ್ಯಾಯಾಂಗ ಬಂಧನ ನೀಡಿ ಎಂದು ಮನವಿ ಮಾಡಿದ್ದರು. ಆದರೆ ನಟಿಯರು ತಮ್ಮ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಸಿಸಿಬಿ ಪೊಲೀಸರು ವೈದ್ಯಕೀಯ ತಪಾಸಣೆ ವೇಳೆ ಮಾಡಿದ್ದ ಕಿರಿಕ್ ವಿಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಯೇ ಮತ್ತೆ ಮೂರು ದಿನಗಳ ಕಾಲ ಎಲ್ಲಾ ಆರೋಪಿಗಳನ್ನು ಸಿಸಿಬಿ ಕಸ್ಟಡಿಗೆ ಕೋರ್ಟ್ ನೀಡಿದೆ ಎಂಬ ಮಾಹಿತಿ ಲಭಿಸಿದೆ.
ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾಗಿರುವ ನಟಿ ಸಂಜನಾ, ರಾಗಿಣಿ, ರವಿಶಂಕರ್, ಲೂಮ್ ಪೆಪ್ಪರ್, ಪ್ರಶಾಂತ್ ರಂಕಾ, ರಾಹುಲ್ ಅವರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನ್ಯಾಯಾಲಯ ನೀಡಿದೆ. ಸೋಮವಾರದವರೆಗೂ ನಟಿ ರಾಗಿಣಿ, ಸಂಜನಾ ಸೇರಿದಂತೆ 6 ಮಂದಿ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲೇ ಉಳಿಯಲ್ಲಿದ್ದಾರೆ.
ಇಂದು ನಟಿ ರಾಗಿಣಿ ಮತ್ತು ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಮುಂದೆ ಹಾಜರ್ ಪಡಿಸಿದ್ದರು. ಈ ವೇಳೆ ವಿಚಾರಣೆಯನ್ನು ಮುಂದುವರಿಸಲು ಮತ್ತೆ 6 ದಿನ ಪೊಲೀಸ್ ಕಸ್ಟಡಿಗೆ ನೀಡಲು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಲ್ಲದೇ ಪ್ರಕರಣದಲ್ಲಿ ಇದುವರೆಗೂ ಆಗಿರುವ ತನಿಖೆಯ ಮಾಹಿತಿಯನ್ನು ಕೋರ್ಟಿಗೆ ಸಲ್ಲಿಸಿದ್ದರು. ಇದನ್ನೂ ಓದಿ: ಮತ್ತೆ 3 ದಿನ ಸಿಸಿಬಿ ಕಸ್ಟಡಿಗೆ ನಟಿ ರಾಗಿಣಿ
ಆರೋಪಿ ರವಿ ಶಂಕರ್ ನೀಡಿರುವ ಮಾಹಿತಿ ಮೇರೆಗೆ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಆರೋಪಿ ನೀಡಿರುವ ಹೇಳಿಕೆಗಳಿಗೆ ನಟಿ ರಾಗಿಣಿ, ಸಂಜನಾ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ವಿಚಾರಣೆಗೂ ಸಹಕಾರ ನೀಡುತ್ತಿಲ್ಲ. ಉದ್ದೇಶ ಪೂರ್ವಕವಾಗಿ ತನಿಖೆ ವಿಳಂಬ ಮಾಡುತ್ತಿದ್ದಾರೆ. ಅಲ್ಲದೇ ನ್ಯಾಯಾಂಗ ಬಂಧನಕ್ಕೆ ನೀಡಿದರೇ ಈಗಾಗಲೇ ನಡೆದಿರುವ ತನಿಖಾ ಅಂಶಗಳು ಲೀಕ್ ಹಾಗುವ ಸಾಧ್ಯತೆ ಇದೆ. ಈಗಾಗಲೇ ರಕ್ತ ಮಾದರಿ ಪರೀಕ್ಷೆಗೆ ನೀಡಲಾಗಿದ್ದು, ಆದರೆ ಆ ವರದಿ ಇನ್ನೂ ಬಂದಿಲ್ಲ ಎಂದು ಸಿಸಿಬಿ ಪೊಲೀಸರು ತಮ್ಮ ಮಾಹಿತಿಯನ್ನು ನೀಡಿದರು. ವಾದ ಪ್ರತಿವಾದ ಆಲಿಸಿ 45 ನಿಮಿಷ ಕಾಲ ತೆಗೆದುಕೊಂಡಿದ್ದ ಕೋರ್ಟ್ ಪೊಲೀಸರ ಮನವಿಯನ್ನು ಪುರಸ್ಕರಿಸಿ ಅಂತಿಮವಾಗಿ ಎಲ್ಲಾ 6 ಮಂದಿ ಆರೋಪಿಗಳನ್ನು 3 ದಿನಗಳವರೆಗೆ ಕಸ್ಟಡಿಗೆ ನೀಡಿದೆ. ಇದನ್ನೂ ಓದಿ: ನಾನು ರಾಗಿಣಿ ಒಟ್ಟಿಗೆ ಡ್ರಗ್ಸ್ ಸೇವನೆ ಮಾಡಿದ್ವಿ- ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರವಿಶಂಕರ್
ನಟಿ ಸಂಜನಾ ಅವರನ್ನು 5 ದಿನ ಕಸ್ಟಡಿಗೆ ನೀಡಿದ್ದರೂ ನಾಳೆ 2ನೇ ಶನಿವಾರ ಮತ್ತು ಭಾನುವಾರ ಕೋರ್ಟಿಗೆ ರಜೆ ಇರುವುದರಿಂದ ಒಂದು ದಿನದ ಮುನ್ನವೇ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿತ್ತು. ನಟಿ ಸಂಜನಾ ಮೊಬೈಲ್ ಇನ್ನೂ ಸರಿಯಾಗಿ ರಿಟ್ರೀವ್ ಆಗಿಲ್ಲ. ಸಂಜನಾ ಆಸ್ಪತ್ರೆಯಲ್ಲಿ ಹೈಡ್ರಾಮಾ ಮಾಡಿದ್ರು. ರಕ್ತ ಮಾದರಿ ಪರೀಕ್ಷೆಗೆ ಜಗಳ ಮಾಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಅಸಹಕಾರ ತೋರಿ ಹೇಳಿದ್ದನೇ ಹೇಳುತ್ತಾರೆ. ನನಗೆ ಗೊತ್ತಿರೋದು ಹೇಳುತ್ತೀನಿ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಈ ರೀತಿಯಲ್ಲಿ ಸಹಕಾರ ನೀಡಿಲ್ಲ ಎಂದರೇ ಯಾವುದೇ ತನಿಖೆ ಸಾಧ್ಯ ಇಲ್ಲ ಎಂದು ಹೇಳಿದ್ದೀರಿ. ಆದರೆ ನ್ಯಾಯಾಲಯದ ಆದೇಶಕ್ಕೂ ಗೌರವ ಕೊಡುತ್ತಿಲ್ಲ. ಮುಂಬೈನಲ್ಲಿ ಒಬ್ಬ ಆರೋಪಿಯ ಬಂಧನವಾಗಿದ್ದು, ಇತ್ತ ಡ್ರಗ್ಸ್ ಪ್ರಕರಣದಲ್ಲಿ ಇಡಿ ಈಗಷ್ಟೇ ಪ್ರಕರಣ ದಾಖಲಿಸಿಕೊಂಡಿದೆ. ತನಿಖೆ ಇನ್ನಷ್ಟು ಸಾಗಬೇಕಿದೆ. ಪ್ರಕರಣದ ತನಿಖೆ ಪಗ್ರತಿ ಹಂತದಲ್ಲಿರುವ ಕಾರಣದಿಂದ 5 ದಿನಗಳು ಕಸ್ಟಡಿಗೆ ನೀಡುವಂತೆ ಮನವಿ ಮಾಡಿತ್ತು. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?
ಇತ್ತ ರಾಗಿಣಿ ಪರ ವಕೀಲರು ತಮ್ಮ ವಾದ ಮಂಡಿಸಿ, ಈಗಾಗಲೇ 8 ದಿನ ಪೊಲೀಸ್ಟ್ ಕಸ್ಟಡಿಗೆ ನೀಡಲಾಗಿದೆ. ತನಿಖೆಗೆ ರಾಗಿಣಿ ಸಹಕರಿಸುತ್ತಿದ್ದಾರೆ. ಪ್ರಕರಣದಲ್ಲಿ ರಕ್ತ ಮಾದರಿಯ ಪರೀಕ್ಷೆ ಬಿಟ್ಟು ಬೇರೆ ಯಾವುದೇ ಪ್ರಗತಿ ಮಾಡಿಲ್ಲ. ನನ್ನ ಕಕ್ಷಿದಾರರು ಈಗಾಗಲೇ ತಮಗೇ ತಿಳಿದಿರುವ ಮಾಹಿತಿಯನ್ನು ತಿಳಿಸಿದ್ದಾರೆ. ನಿನ್ನೆ ವೈದ್ಯಕೀಯ ಪರೀಕ್ಷೆಗೂ ಸಹಕರಿಸಿದ್ದಾರೆ. ಆದ್ದರಿಂದ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಿದ್ದರು. ರಾಗಿಣಿ ಅವರ ಆರೋಗ್ಯದ ಬಗ್ಗೆಯೂ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು.
ರಾಗಿಣಿ ಪರ ವಕೀಲರು ನ್ಯಾಯಾಂಗ ಬಂಧನಕ್ಕೆ ಕೋರಲು ಪ್ರಮುಖ ಕಾರಣವಿದ್ದು, ಈಗಾಗಲೇ ರಾಗಿಣಿ ಅವರು ಸಲ್ಲಿಕೆ ಮಾಡಿರುವ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೆ.14ಕ್ಕೆ ಮುಂದೂಡಿ, ಸಿಸಿಬಿಗೆ ನೋಟಿಸ್ ಜಾರಿ ಮಾಡಿದೆ. ಪೊಲೀಸರು ಸೋಮವಾರ ನ್ಯಾಯಾಲಯದಕ್ಕೆ ತನ್ನ ತನಿಖೆಯ ಮಾಹಿತಿಯನ್ನು ನೀಡಿ ಉತ್ತರಿಸಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿ ಮುಂದುವರಿದರೇ ಜಾಮೀನು ಪಡೆಯಲು ಸಂಕಷ್ಟ ಎದುರಾಗಲಿದೆ ಎಂಬ ಉದ್ದೇಶದಿಂದ ನ್ಯಾಯಾಂಗ ಬಂಧನಕ್ಕೆ ನೀಡಲು ವಕೀಲರು ಮನವಿ ಮಾಡಿದ್ದರು ಎನ್ನಲಾಗಿದೆ.
ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ ನಟಿ ಸಂಜನಾ ಅವರೊಂದಿಗೆ ನಾನು ಕೊಲಂಬೋಗೆ ಹೋಗಿದ್ದು ಸಾಬೀತಾದರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಸವಾಲು ಎಸೆದಿದ್ದಾರೆ.
ನಟಿ ಸಂಜನಾ ಅವರ ವಿಚಾರದಲ್ಲಿ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳ ಕುರಿತು ಕೊನೆಗೂ ಮೌನ ಮುರಿದ ಜಮೀರ್ ಅವರು, ಸಂಜನಾ ಹಾಗೂ ನಾನು ಕೊಲಂಬೋಗೆ ಹೋಗಿರುವ ಬಗ್ಗೆ ಖುದ್ದು ಸಿಎಂ ತನಿಖೆ ಮಾಡಲಿ ಎಂದು ಮನವಿ ಮಾಡುತ್ತೇನೆ. ನಾನು ತನಿಖೆ ಎದುರಿಸಲು ತಯಾರಿದ್ದೇನೆ. ಈಗ ಸಂಜನಾ ಪೊಲೀಸ್ ಕಸ್ಟಡಿಯಲ್ಲೇ ಇದು, ಅಲ್ಲಿಯೇ ತನಿಖೆ ಮಾಡಲು ಎಂದರು. ಇದನ್ನೂ ಓದಿ: ಸಂಜನಾ, ಜಮೀರ್ ಸಹಾಯ ಕೇಳಿದ್ದೇಕೆ?- ಡ್ರಗ್ಸ್ ಪ್ರಕರಣದಲ್ಲಿ ರಾಹುಲ್‍ಗೆ ಬಿಜೆಪಿ ಟಾಂಗ್
ನಾನು ಆಕೆ ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರೆ ಅಲ್ಲಿ ಪಾಸ್‍ಪೋರ್ಟ್ ಕೊಡಬೇಕಾಗುತ್ತೆ. ಅದನ್ನು ಪರಿಶೀಲಿಸಲಿ. ನಾನು ಸಂಜನಾ ಕೊಲಂಬೋಗೆ ಹೋದರೆ ಒಂದೇ ವಿಮಾನದಲ್ಲಿ ತಾನೇ ಹೋಗಬೇಕು. ಆ ಕುರಿತಾದ ಫ್ಲೈಟ್ ಮಾಹಿತಿಗಳನ್ನು ಪರಿಶೀಲನೆ ನಡೆಸಲಿ. ವಿದೇಶಗಳ ಹೋಟೆಲ್‍ಗಳಲ್ಲಿ ಹೋಟೆಲ್ ಸಿಸಿ ಕ್ಯಾಮರಾ ದೃಶ್ಯಗಳನ್ನು 10 ವರ್ಷ ಇಡಬೇಕು. ಅದನ್ನೂ ಚೆಕ್ ಮಾಡಲಿ ಎಂದು ತಿಳಿಸಿದರು. ಇದನ್ನೂ ಓದಿ: ಜಮೀರ್‌ನನ್ನು ಯಾಕೆ ಬಂಧಿಸಿಲ್ಲ- ಸರ್ಕಾರಕ್ಕೆ ಪ್ರತಾಪ್ ಸಿಂಹ ಪ್ರಶ್ನೆ
ಅಲ್ಲಿರುವ ಸಿಸಿಟಿವಿ ಪರಿಶೀಲನೆ ಮಾಡಿದರೆ ನಾನು ಸಂಜನಾ ಅವರೊಂದಿಗೆ ಉಳಿದುಕೊಂಡಿದ್ದರೇ ಖಂಡಿತ ಗೊತ್ತಾಗುತ್ತೆ. ಈ ನಮ್ಮ ಸರ್ಕಾರ ಇಲ್ಲ. ಬಿಜೆಪಿ ಸರ್ಕಾರನೇ ಇರುವುದರಿಂದ ಅವರೇ ಎಲ್ಲವನ್ನೂ ಪರಿಶೀಲನೆ ಮಾಡಲಿ. ಒಂದೊಮ್ಮೆ ನನ್ನ ಮೇಲಿನ ಆರೋಪ ಸಾಬೀತು ಆದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ. ಆದರೆ ಆರೋಪ ಸುಳ್ಳಾದರೇ ಪ್ರಶಾಂತ್ ಸಂಬರಗಿ ಏನು ಮಾಡುತ್ತೀರಾ ನೀವೇ ಹೇಳಿ ಎಂದು ಸರ್ಕಾರಕ್ಕೆ ಸವಾಲು ಹೆಸರು. ಇದನ್ನೂ ಓದಿ: ನನ್ನ ಬಗ್ಗೆ ಮಾತಾಡಿದ್ರೆ ಸುಮ್ನೆ ಇರಲ್ಲ: ಪ್ರಶಾಂತ್ ಸಂಬರಗಿಗೆ ಸಂಜನಾ ಎಚ್ಚರಿಕೆ
ಸಂಬರಗಿ ಆರೋಪಕ್ಕೆ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ನಿನ್ನೆಯೇ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲು ವಕೀಲರೊಂದಿಗೆ ಮಾತನಾಡಿದ್ದೇನೆ. ನನಗೆ ಆತನ ಪರಿಚಯವೂ ಇಲ್ಲ.
2019ರ ಜುಲೈ 8 ರಂದು ಶ್ರೀಲಂಕಾದ ಕೊಲಂಬೋದಲ್ಲಿ ಸಂಜನಾ ಮತ್ತು ಜಮೀರ್ ಇದ್ದರು. ನಾನು ಸುಳ್ಳು ಹೇಳುತ್ತಿಲ್ಲ. ನೀವು ಜೂಜು ಮತ್ತು ಡ್ರಗ್ಸ್ ನಲ್ಲಿ ಭಾಗಿಯಾಗದೇ ಇದ್ದರೆ ನಿಮಗೆ ಹೆದರಿಕೆ ಯಾಕೆ ಎಂದು ಪ್ರಶಾಂತ್ ಸಂಬರಗಿ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಸಂಬರಗಿ ಆರೋಪಕ್ಕೆ ತಿರುಗೇಟು ನೀಡಿದ್ದ ನಟಿ ಸಂಜನಾ, ಶಾಸಕ ಜಮೀರ್ ಅವರೇ ಪ್ರಶಾಂತ್ ಸಂಬರಗಿ ಅವರನ್ನು ಸುಮ್ಮನೇ ಬಿಡಬೇಡಿ ಎಂದು ಕಣ್ಣೀರು ಹಾಕಿಕೊಂಡು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಜಮೀರ್ ತಾನು ಏನೆಂದು ಅವರೇ ಯೋಚಿಸಬೇಕು: ಸಿ.ಟಿ.ರವಿ
ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಇಬ್ಬರು ನಟಿಯರು ಅರೆಸ್ಟ್ ಆದ ಬಳಿಕ ಕೇಸ್‍ನಲ್ಲಿ ರಾಜಕೀಯ ನಂಟಿನ ಕುರಿತ ಚರ್ಚೆ ಜೋರಾಗಿದೆ. ಶಾಸಕ ಜಮೀರ್ ಅಹ್ಮದ್ ಅವರ ಹೆಸರನ್ನು ಪ್ರಕರಣದಲ್ಲಿ ಬಿಜೆಪಿ ಎಳೆದು ತಂದಿದೆ. ಇದರ ಬೆನ್ನಲ್ಲೇ ಇನ್ನೆರಡು ದಿನಗಳಲ್ಲಿ ಜಮೀರ್ ಬಂಧನವಾಗುತ್ತದೆ ಎಂದು ಬಿಜೆಪಿ ವಕ್ತಾರ ರವಿ ಕುಮಾರ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ರವಿ ಕುಮಾರ್ ಅವರು, ಇನ್ನು ಕೆಲ ದಿನಗಳಲ್ಲಿ ಶಾಸಕ ಜಮೀರ್ ಅವರನ್ನು ಪ್ರಕರಣದಲ್ಲಿ ಬಂಧನ ಮಾಡುವ ಸಮಯ ಬರುತ್ತದೆ. ಜವಾಬ್ದಾರಿಯುತ ಸರ್ಕಾರ ಆಗಿರುವುದರಿಂದ ಅರೆಸ್ಟ್ ಮಾಡಲು ಬೇಕಾದ ಸೂಕ್ತ ಆಧಾರಗಳನ್ನು ಇಟ್ಟುಕೊಂಡು ಬಂಧನ ಮಾಡಬೇಕಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸಂಜನಾ, ಜಮೀರ್ ಸಹಾಯ ಕೇಳಿದ್ದೇಕೆ?- ಡ್ರಗ್ಸ್ ಪ್ರಕರಣದಲ್ಲಿ ರಾಹುಲ್‍ಗೆ ಬಿಜೆಪಿ ಟಾಂಗ್
ಪ್ರಶಾಂತ್ ಸಂಬರಗಿ ಅವರು ನೀಡಿದ ಹೇಳಿಕೆಯಂತೆ ಸಚಿವ ಸಿಟಿ ರವಿ ಅವರು ಕೂಡ ಹವಾಲಾ ಹಣದ ಕುರಿತು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ಜಮೀರ್ ಅವರ ಹೆಸರನ್ನು ಇಂದು ಎಳೆದು ತಂದಿದ್ದರು. ಡ್ರಗ್ಸ್ ವಿರುದ್ಧ ಈ ಬಾರಿ ಮಾತ್ರವಲ್ಲ, ಹಿಂದಿನ ಸರ್ಕಾರ ಇದ್ದಾಗಲೂ ಕೂಗು ಕೇಳಿ ಬರುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಮಾತ್ರ ಈ ಬಗ್ಗೆ ಕಠಿಣವಾದ ನಿರ್ಧಾರ ತೆಗೆದುಕೊಂಡು ಮಾಫಿಯಾ ಮಟ್ಟಹಾಕಲು ಮುಂದಾಗಿದೆ ಎಂದು ಕಟೀಲ್ ಹೇಳಿದ್ದಾರೆ. ಇದನ್ನೂ ಓದಿ: ಜಮೀರ್‌ನನ್ನು ಯಾಕೆ ಬಂಧಿಸಿಲ್ಲ- ಸರ್ಕಾರಕ್ಕೆ ಪ್ರತಾಪ್ ಸಿಂಹ ಪ್ರಶ್ನೆ
ಇತ್ತ ಜಮೀರ್ ಅವರ ಪಾತ್ರದ ಕುರಿತು ಟ್ವೀಟ್ ಮಾಡಿರುವ ಸಚಿವ ಸಿಟಿ ರವಿ ಅವರು, ಶ್ರೀಲಂಕಾದಲ್ಲಿ ನಡೆದ ಪಾರ್ಟಿಯಲ್ಲಿ ಜಮೀರ್ ಉಪಸ್ಥಿತರಿದ್ದರು, ಇದರಲ್ಲಿ ಬಂಧನಕ್ಕೊಳಗಾಗಿರುವ ನಟಿ ಇದ್ದರು ಎಂಬುದು ನಿಜವಲ್ಲವೇ? ಬಂಧಿತ ಇನ್ನೊಬ್ಬ ನಟಿ ಸಹಾಯಕ್ಕಾಗಿ ಯಾಕೆ ಮನವಿ ಮಾಡಿದರು? ಅವನ ಮತ್ತು ಡ್ರಗ್ ಮಾಫಿಯಾ ನಡುವಿನ ಸಂಬಂಧ ಏನು ಎಂದು ಪ್ರಶ್ನಿಸಿದ್ದಾರೆ. ನಟಿ ಸಂಜನಾ ಬಂಧನ ಮುನ್ನ ಜಮೀರ್ ಅವರ ಸಹಾಯ ಕೋರಿದನ್ನೇ ಆಸ್ತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿ, ಪ್ರಕರಣದಲ್ಲಿ ಜಮೀರ್ ಅವರಿಗೆ ನೋಟಿಸ್ ನೋಡಿ ವಿಚಾರಣೆಗೆ ಕರೆತರಲು ಆಗ್ರಹಿಸಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳಿಗೆ ಪಕ್ಷದ ರಾಜ್ಯ ಘಟಕವೂ ಬೆಂಬಲ ನೀಡಿ ಸರಣಿ ಟ್ವೀಟ್ ಮಾಡಿದೆ. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?
ಬೆಂಗಳೂರು: ದೇಶದಲ್ಲಿ ಡ್ರಗ್ಸ್ ಮಾಫಿಯಾ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ವೇಳೆ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧನವಾಗಿರುವ ನಟಿ ಸಂಜನಾ ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರಿಗೂ ಇರುವ ಸಂಬಂಧವನ್ನು ಪ್ರಶ್ನಿಸಿರುವ ಕರ್ನಾಟಕ ಬಿಜೆಪಿ, ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದೆ.
ಡ್ರಗ್ಸ್ ಮಾಫಿಯಾ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ನಟಿ ಸಂಜನಾ ಕಾಂಗ್ರೆಸ್ ನ ಹಿರಿಯ ನಾಯಕ, ಶಾಸಕ ಜಮೀರ್ ಅಹ್ಮದ್ ಖಾನ್ ಸಹಾಯವನ್ನು ಏಕೆ ಪಡೆದರು? ಸಂಜನಾಳೊಂದಿಗೆ ಅವರ ಸಂಬಂಧ ಏನು? ರಾಹುಲ್ ಗಾಂಧಿ ಈ ವಿಷಯದ ಬಗ್ಗೆ ತನಿಖೆಯನ್ನು ಏಕೆ ಕೇಳ್ತಿಲ್ಲ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಜಮೀರ್‌ನನ್ನು ಯಾಕೆ ಬಂಧಿಸಿಲ್ಲ- ಸರ್ಕಾರಕ್ಕೆ ಪ್ರತಾಪ್ ಸಿಂಹ ಪ್ರಶ್ನೆ
Why did Actress Sanjana, arrested by the Police in Drugs case seek the help of @INCKarnataka senior leader & MLA @BZZameerAhmedK?
ಕಾಂಗ್ರೆಸ್ ವಿರುದ್ಧ ಟ್ವೀಟ್ ವಾರ್ ಮುಂದುವರಿಸಿರುವ ಬಿಜೆಪಿ, ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಬೆಳೆಯುತ್ತಿದ್ದಾಗ ಅಂದಿನ ಸಿಎಂ ಸಿದ್ದರಾಮಯ್ಯ ಬೇರೆ ಕಡೆ ಬ್ಯುಸಿಯಾಗಿದ್ದರು. ಭಯೋತ್ಪಾದಕರ ಬೆಂಬಲಿತ ಪಿಎಫ್‍ಐ, ಎಸ್‍ಡಿಪಿಐ ವಿರುದ್ಧದ ಕೇಸ್‍ಗಳನ್ನು ವಾಪಸ್ ಪಡೆಯುವಲ್ಲಿ ಹಾಗೂ ಮೂಲಭೂತವಾದಿಗಳಿಂದ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ನೋಡುತ್ತಿದ್ದರು. ಆ ಮೂಲಕ ಓಲೈಕೆಯ ರಾಜಕಾರಣದಲ್ಲಿ ತೊಡಗಿದ್ದರು ಎಂದು ಬಿಜೆಪಿ ಆರೋಪಿಸಿದೆ. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?
While the #DrugMafia grew strongly in the State, then CM @siddaramaiah was busy:
✓ Withdrawing cases against Terror Supporters PFI & SDPI.
✓ Indulging in Appeasement Politics.
✓ Overseeing the brutal murders of Hindu Karyakartas by Fundamentalists.#CONgressSupportsDrugMafia
ಕಾಂಗ್ರೆಸ್ ನಾಯಕರು ಹಾಗೂ ಡ್ರಗ್ಸ್ ಮಾಫಿಯಾ ನಡುವಿನ ಸಂಬಂಧವೇನು? ಸಿದ್ದರಾಮ್ಯಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಡ್ರಗ್ಸ್ ಮಾಫಿಯಾ ವಿರುದ್ಧ ಏಕೆ ಕ್ರಮಕೈಗೊಳ್ಳಲಿಲ್ಲ? ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಇಂತಹ ಪ್ರಮುಖ ವಿಚಾರದಲ್ಲಿ ಮೌನವಹಿಸಿರುವುದು ಏಕೆ? ಕಾಂಗ್ರೆಸ್ ನಾಯಕರು ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಸಹಾಯ ಮಾಡುತ್ತಿರುವುದು ಏಕೆ? ನಿಮಗೆ ಎಲ್ಲದರ ಬಗ್ಗೆಯೂ ಅರಿವಿದ್ದರೂ ಇದನ್ನು ಮಾಡಲು ಏಕೆ ಅನುಮತಿ ನೀಡಿದ್ದೀರಿ ಎಂದು ರಾಹುಲ್ ಗಾಂಧಿಗೆ ಬಿಜೆಪಿ ಪ್ರಶ್ನಿಸಿದೆ. ಇದನ್ನೂ ಓದಿ: ಮೆಸೇಜ್, ಫೋಟೋಸ್ ಡಿಲೀಟ್ – ಸಂಜನಾಳ ಖತರ್ನಾಕ್ ಐಡಿಯಾಗೆ ಪೊಲೀಸ್ರು ಸುಸ್ತು
ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾದ ನಂಟಿದೆ ಎಂದು ಸಿಸಿಬಿ ಪೊಲೀಸರ ಅತಿಥಿಯಾಗಿರುವ ನಟಿ ಸಂಜನಾ ಗಲ್ರಾನಿ ಅವರ ಮದುವೆ ಕುರಿತವಾಗಿ ಸ್ಫೋಟಕ ಫೋಟೋವೊಂದು ಹೊರಬಿದ್ದಿದ್ದು, ನನಗೆ ಮದುವೆ ಆಗಿಲ್ಲ ಅಗಿಲ್ಲ ಎಂದು ನಟಿ ಸುಳ್ಳು ಹೇಳಿದರಾ ಎಂಬ ಅನುಮಾನ ಮೂಡಲು ಕಾರಣವಾಗಿದೆ.
ನಟಿ ಸಂಜನಾರನ್ನು ಪೊಲೀಸರು ಬಂಧಿಸಿದ ಸಂದರ್ಭದಲ್ಲಿ ಅವರ ಡ್ರಗ್ ನಂಟಿನ ಜೊತೆ ಮದುವೆ ವಿಚಾರವೂ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಂಧನವಾಗುವ ಒಂದು ದಿನಕ್ಕೂ ಮೊದಲು ಬಾರಿ ನನಗಿನ್ನು ಮದುವೆಯಾಗಿಲ್ಲ. ನಾನು ಹುಡುಗಿ. ನನ್ನ ಬಗ್ಗೆ ಸುಳ್ಳು ವರದಿ ಮಾಡಬೇಡಿ ಎಂದು ಹೇಳಿ ಮದುವೆ ಸುದ್ದಿಗೆ ಬ್ರೇಕ್ ಹಾಕಿ ನುಣುಚಿಕೊಳ್ಳಲು ಸಂಜನಾ ಪ್ರಯತ್ನಿಸಿದ್ದರು. ಮಾಧ್ಯಮಗಳ ಎದುರು ತನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಬೇಡಿ ಎಂದು ಕಣ್ಣೀರಿಟ್ಟಿದ್ದರು. ಆದರೆ ಒಂದು ವರ್ಷದ ಹಿಂದೆಯೇ ನಟಿ ಸಂಜನಾಗೆ ಮದುವೆ ಆಗಿದೆ ಎಂಬ ಸುದ್ದಿ ಈಗ ಹರಿದಾಡಲು ಆರಂಭವಾಗಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?
ನಟಿ ಸಂಜನಾ ಒಂದು ವರ್ಷದ ಹಿಂದೆಯೇ ಮುಸ್ಲಿಂ ಸಂಪ್ರದಾಯದಲ್ಲಿ ವೈದ್ಯ ಅಜೀಜ್ ಪಾಷ ಅವರೊಂದಿಗೆ ಮದುವೆಯಾಗಿದ್ದಾರೆ ಎನ್ನಲಾಗಿದೆ. ಅಜೀಜ್ ಪಾಷ ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಆಗಾಗ ಇಂದಿರಾನಗರದಲ್ಲಿರುವ ಸಂಜನಾ ಮನೆಗೆ ಬರುತ್ತಿದ್ದರು. ಮದುವೆಯ ಬಳಿಕ ಒಂದು ವರ್ಷದಿಂದ ಗಂಡನ ಜೊತೆಗೆ ಸಂಜನಾ ಇದ್ದರು. ಅಲ್ಲದೇ ಸಂಜನಾ ಮಾಡುತ್ತಿದ್ದ ಪಾರ್ಟಿಗಳಲ್ಲಿ ಅಜೀಜ್ ಪಾಷ ಭಾಗಿಯಾಗುತ್ತಿದ್ದರು ಎನ್ನಲಾಗುತ್ತಿದೆ. ಸಂಜನಾ ಡ್ರಗ್ ಮಾಫಿಯಾ ನಂಟಿನ ಬಗ್ಗೆ ಅಜೀಜ್ ಪಾಷಗೂ ಮಾಹಿತಿ ಇತ್ತಾ ಎಂಬ ಅನುಮಾನ ಜೋರಾಗಿದೆ. ಇದನ್ನೂ ಓದಿ: ನನ್ನ ಶ್ರೀಮತಿ ಬಿಟ್ಟು ನನಗೆ ಸಂಜನಾ, ರಾಗಿಣಿ ಗೊತ್ತಿಲ್ಲ: ವಿ. ಸೋಮಣ್ಣ
ಇದಕ್ಕೆ ಪೂರಕ ಎಂಬಂತೆ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಸೆ.8 ರಂದು ಬೆಳ್ಳಂಬೆಳಗ್ಗೆ ನಟಿ ಸಂಜನಾ ಮನೆಯ ಮೇಲೆ ದಾಳಿದ್ದರು. ಈ ವೇಳೆ ಸಂಜನಾ ನಟಿ ನ್ಯೂರೋ ಸರ್ಜನ್ ಕರೆಯಲು ಗಲಾಟೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಅದೇ ಅಪಾರ್ಟ್ ಮೆಂಟ್ ಅಲ್ಲಿ ಡಾಕ್ಟರ್ ವಾಸಿಸುತ್ತಿದ್ದು, ಆತನ ಜೊತೆ ಸಂಜನಾ ಸ್ನೇಹ ಇಟ್ಟುಕೊಂಡಿದ್ದಾರೆ ಎಂದು ತಿಳಿದಿತ್ತು. ಅಲ್ಲದೇ ಅವರಿಬ್ಬರು ಅಮೆರಿಕಾಗೆ ಹೋಗಿ ಮದುವೆ ಆಗಿದ್ದಾರೆ ಎಂದು ಗುಮಾನಿ ಸಹ ಕೇಳಿ ಬಂದಿತ್ತು. ಆದರೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಸಂದರ್ಭದಲ್ಲಿ ರಾಹುಲ್ ತಂದೆ ರಾಮಚಂದ್ರ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡುವ ವೇಳೆ ಸಂಜನಾ ಪತಿ ಚಿಕಿತ್ಸೆ ನೀಡಿದ್ದರು ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಮೆಸೇಜ್, ಫೋಟೋಸ್ ಡಿಲೀಟ್ – ಸಂಜನಾಳ ಖತರ್ನಾಕ್ ಐಡಿಯಾಗೆ ಪೊಲೀಸ್ರು ಸುಸ್ತು
ನನ್ನ ಮಗನಿಗೆ ಸಂಜನಾ ಒಬ್ಬರೇ ಪರಿಚಯ ಇರುವುದು. ರಾಹುಲ್ ಎಂಜಿನಿಯರ್ ಮಾಡಿ ಆರ್ಕಿಟೆಕ್ಚರ್ ಕೆಲಸ ಮಾಡುತ್ತಿದ್ದಾನೆ. ಒಮ್ಮೆ ಸಂಜನಾ ಮನೆಗೆ ಹೋಗಿ ಇಂಟಿರಿಯರ್ ಡಿಸೈನರ್ ಕೆಲಸ ಮಾಡಿಕೊಟ್ಟಿದ್ದನು. ಅಂದಿನಿಂದ ಇಬ್ಬರಿಗೂ ಪರಿಚಯವಾಗಿದೆ. ಅವರ ಮನೆ ಇವನು, ನಮ್ಮ ಮನೆಗೆ ಸಂಜನಾ ಬಂದು ಹೋಗುತ್ತಿದ್ದರು ಎಂದು ಹೇಳಿದ್ದರು. ಆ ವೇಳೆಯೇ ಸಂಜನಾ ಅವರ ಮದುವೆ ವಿಚಾರದ ಚರ್ಚೆ ಆರಂಭವಾಗಲು ಕಾರಣವಾಗಿತ್ತು. ಇದನ್ನೂ ಓದಿ: ಸಂಜನಾ ಪತಿ ನನಗೆ ಚಿಕಿತ್ಸೆ ನೀಡಿದ್ರು – ಡಾಕ್ಟರ್ ಜೊತೆ ಸಂಜನಾ ಮದ್ವೆ ಆಗಿದ್ದಾರಾ?
ಈ ಫೋಟೋ ಮದುವೆಯದ್ದೋ ಅಥವಾ ನಿಶ್ಚಿತಾರ್ಥದ್ದೋ ಯಾವುದು ಎಂಬುದರ ಬಗ್ಗೆ ಅಧಿಕೃತವಾಗಿ ತಿಳಿದು ಬಂದಿಲ್ಲ.
ಸಂಬರಗಿ ವಿರುದ್ಧ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಲು ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳುವಂತೆ ತಮ್ಮ ವಕೀಲರೊಂದಿಗೆ ಜಮೀರ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ಸಂಬರಗಿ ಆಧಾರ ರಹಿತ ಆರೋಪ ಮಾಡಿದ್ದು, ನಾನು ಡ್ರಗ್ಸ್ ಪ್ರಕರಣದ ಆರೋಪಿ ನಟಿ ಸಂಜನಾ ಜತೆ ಶ್ರೀಲಂಕಾದ ಕ್ಯಾಸಿನೋದಲ್ಲಿ ಕಾಣಿಸಿಕೊಂಡಿದ್ದೆ ಎಂದಿದ್ದಾರೆ. ಈ ಮೂಲಕ ನನ್ನ ತೇಜೋವಧೆ ಮಾಡಿದ್ದು, ಸಂಬರಗಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಜಮೀರ್ ದೂರಿನಲ್ಲಿ ಮನವಿ ಮಾಡಿದ್ದಾರೆ.ಇದನ್ನೂ ಓದಿ: ನನ್ನ ಬಗ್ಗೆ ಮಾತಾಡಿದ್ರೆ ಸುಮ್ನೆ ಇರಲ್ಲ: ಪ್ರಶಾಂತ್ ಸಂಬರಗಿಗೆ ಸಂಜನಾ ಎಚ್ಚರಿಕೆ
ಸೆ.7 ರಂದು ಸಂಬರಗಿ ಮಾಡಿದ್ದ ಆರೋಪದ ಬಗ್ಗೆ ಪ್ರಕ್ರಿಯೆ ಕೇಳಿದ್ದ ಪಬ್ಲಿಕ್ ಟಿವಿಗೆ ಉತ್ತರಿಸಲು ನಿರಾಕರಿಸಿದ ಜಮೀರ್, ಥ್ಯಾಂಕ್ಯೂ, ಥ್ಯಾಂಕ್ಯೂ ಸ್ಥಳದಿಂದ ಕಾರು ಹತ್ತಿ ಹೋಗಿದ್ದರು. ಆದರೆ ಅಂದೇ ನಟಿ ಸಂಜನಾ, ಶಾಸಕ ಜಮೀರ್ ಬಳಿ ಪ್ರಶಾಂತ್ ಸಂಬರಗಿ ಅವರನ್ನು ಸುಮ್ಮನೇ ಬಿಡಬೇಡಿ ಕಣ್ಣೀರು ಹಾಕಿಕೊಂಡು ಮನವಿ ಮಾಡಿಕೊಂಡಿದ್ದರು. ಆದರೆ ಪಬ್ಲಿಕ್ ಟಿವಿ ಪ್ರಶ್ನೆ ಮಾಡಿದ್ದಕ್ಕೆ ಜಮೀರ್, ನಾನು ಯಾವುದಕ್ಕೂ ಪ್ರತಿಕ್ರಿಯಿಸಲ್ಲ, ಉತ್ತರನೂ ಕೊಡಲ್ಲ ಎಂದು ಹೇಳಿದ್ದರು.
ಜಮೀರ್ ಅಹಮದ್ ಸರ್ ದಯವಿಟ್ಟು ಪ್ರಶಾಂತ್ ಸಂಬರಗಿ ಅವರನ್ನು ಸುಮ್ಮನೇ ಬಿಡಬೇಡಿ. ಆ ಬೀದಿ ನಾಯಿ ನನ್ನ ಹಿಂದೆ ಯಾಕೆ ಬಿದ್ದಿದ್ದಾನೆ ಗೊತ್ತಿಲ್ಲ. ನಾನು ತುಂಬಾ ಕಷ್ಟಪಟ್ಟು ಮೇಲೆ ಬಂದ ಕಲಾವಿದೆ. ಆದರೆ ಇದರಲ್ಲಿ ನನ್ನ ತಪ್ಪು ಏನಿದೆ. ನಾನು ಸೆಲೆಬ್ರಿಟಿ ಆಗಿರೋದೆ ತಪ್ಪಾ. ನನಗೆ ತುಂಬಾ ಕಷ್ಟ ಆಗುತ್ತಿದೆ. ದಯವಿಟ್ಟು ಪ್ರಶಾಂತ್ ಸಂಬರಗಿಯನ್ನು ಬಿಡಬೇಡಿ ಎಂದು ಕೈ ಮುಗಿದು ಸಂಜನಾ ಕಣ್ಣೀರು ಹಾಕಿದ್ದರು. ಇದನ್ನೂ ಓದಿ: ಜಮೀರ್ ತಾನು ಏನೆಂದು ಅವರೇ ಯೋಚಿಸಬೇಕು: ಸಿ.ಟಿ.ರವಿ
2019ರ ಜುಲೈ 8 ರಂದು ಶ್ರೀಲಂಕಾದ ಕೊಲಂಬೋದಲ್ಲಿ ಸಂಜನಾ ಮತ್ತು ಜಮೀರ್ ಇದ್ದರು. ನಾನು ಸುಳ್ಳು ಹೇಳುತ್ತಿಲ್ಲ. ನೀವು ಜೂಜು ಮತ್ತು ಡ್ರಗ್ಸ್ ನಲ್ಲಿ ಭಾಗಿಯಾಗದೇ ಇದ್ದರೆ ನಿಮಗೆ ಹೆದರಿಕೆ ಯಾಕೆ ಎಂದು ಪ್ರಶಾಂತ್ ಸಂಬರಗಿ ಪ್ರಶ್ನಿಸಿದ್ದರು.