Tag: ನಟಿ ರಾಗಿಣಿ ದ್ವಿವೇದಿ

  • ಸ್ವಿಮ್ ಸೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ `ರಾ’ಗಿಣಿ

    ಸ್ವಿಮ್ ಸೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ `ರಾ’ಗಿಣಿ

    ಸ್ಯಾಂಡಲ್‌ವುಡ್ ನಟಿ ರಾಗಿಣಿ ದಿನದಿಂದ ದಿನಕ್ಕೆ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಳ್ತಿದ್ದಾರೆ. ಹೊಸ ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಈಗ ಸ್ವಿಮ್ ಸೂಟ್‌ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವೀರಮದಕರಿ, ಕೆಂಪೇಗೌಡ, ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಗಮನ ಸೆಳೆದಿರುವ ರಾಗಿಣಿ, ಈಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಡುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ರಾಗಿಣಿಯ ನಯಾ ಲುಕ್‌ನಿಂದ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಬ್ಲ್ಯಾಕ್ ಕಲರ್ ಸ್ವಿಮ್ ಸೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ನಟಿ ಪವಿತ್ರಾ ಲೋಕೇಶ್ ನನ್ನ ಬೆಸ್ಟ್ ಫ್ರೆಂಡ್ : ಪತ್ನಿ ರಮ್ಯಾ ಆರೋಪಕ್ಕೆ ನಟ ನರೇಶ್ ತಿರುಗೇಟು

    ನಟಿ ರಾಗಿಣಿ ಸಾಕಷ್ಟು ಸಂಕಷ್ಟಗಳನ್ನು ಏದುರಿಸಿದ ನಂತರ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಕನ್ನಡ ಮತ್ತು ತಮಿಳಿನ ಸಿನಿಮಾಗಳ ಮೂಲಕ ಸೌಂಡ್ ಮಾಡಿದ್ದಾರೆ. ಈ ವರ್ಷದಲ್ಲಿ ಒಂದೊಂದೇ ಸಿನಿಮಾಗಳ ಮೂಲಕ ತೆರೆಯ ಮೇಲೆ ಅಬ್ಬರಿಸಲಿದ್ದಾರೆ.

    Live Tv

  • ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್‌ ಕೊಟ್ಟ ತುಪ್ಪದ ಹುಡುಗಿ ರಾಗಿಣಿ

    ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್‌ ಕೊಟ್ಟ ತುಪ್ಪದ ಹುಡುಗಿ ರಾಗಿಣಿ

    ಸ್ಯಾಂಡಲ್‌ವುಡ್ ಚೆಲುವೆ ರಾಗಿಣಿ ದ್ವಿವೇದಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಿದ್ದಾರೆ. ಕೈತುಂಬಾ ಸಿನಿಮಾಗಳಿರುವ ರಾಗಿಣಿ ಕೊಂಚ ಬಿಡುವು ಮಾಡಿಕೊಂಡು ಟ್ರಾವೆಲಿಂಗ್ ಮೂಡ್‌ನಲ್ಲಿದ್ದಾರೆ. ಇದೀಗ ಸುಂದರ ತಾಣದಲ್ಲಿ ನಿಂತು ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿ, ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಕೆಂಪೇಗೌಡ, ವೀರ ಮದಕರಿ, ಹೀಗೆ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ರಾಗಿಣಿ, ಸಿನಿಮಾಗಳ ವಿಚಾರವಾಗಿ ಅದೆಷ್ಟು ಸುದ್ದಿಯಾಗುತ್ತಾರೋ, ಅಷ್ಟೇ ಹಾಟ್ ಫೋಟೋಶೂಟ್‌ಗಳ ಮೂಲಕ ಸುದ್ದಿಯಾಗುತ್ತಾರೆ. ಇದೀಗ ಶಾರ್ಟ್ಸ್ ಮತ್ತು ಕ್ರಾಪ್ ಟಾಪ್ ಧರಿಸಿ ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಇನ್ನು ರಾಗಿಣಿಯ ಹಾಟ್‌ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇದನ್ನೂ ಓದಿ: ಡಾ.ರಾಜ್‌ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿ ಮಹತ್ತರ ಸಾಧನೆ: 8 ಮಂದಿ ಯುಪಿಎಸ್‌ಸಿ ರ‍್ಯಾಂಕ್

     

    View this post on Instagram

     

    A post shared by Ragini dwivedi (@rraginidwivedi)

    ಇನ್ನು ರಾಗಿಣಿ ಲಿಸ್ಟ್ನಲ್ಲಿ ಸಾರಿ ಕರ್ಮ ರಿಟರ್ನ್ಸ್, ಗಾಂಧಿಗಿರಿ ಸೇರಿದಂತೆ ತಮಿಳಿನ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಬಗೆಯ ಪಾತ್ರಗಳ ಮೂಲಕ ರಂಜಿಸಲು ತುಪ್ಪದ ಬೆಡಗಿ ರಾಗಿಣಿ ಸಜ್ಜಾಗಿದ್ದಾರೆ.

  • ಚಿತಾಗಾರ ಸಿಬ್ಬಂದಿ ನೆರವಿಗೆ ಬಂದ ನಟಿ ರಾಗಿಣಿ

    ಚಿತಾಗಾರ ಸಿಬ್ಬಂದಿ ನೆರವಿಗೆ ಬಂದ ನಟಿ ರಾಗಿಣಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ಸದ್ಯ ತಾವು ಮಾಡುತ್ತಿರುವ ಸಮಾಜ ಸೇವೆಯಿಂದ ಸುದ್ದಿಯಾಗುತ್ತಿದ್ದಾರೆ. ಮನೆಯಿಲ್ಲದವರಿಗೆ, ಪೊಲೀಸರಿಗೆ, ಚಿತಾಗಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಊಟ ನೀಡುವ ಮೂಲಕವಾಗಿ ಕೊರೊನಾ ಸಂದರ್ಭದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ನಿರಾಶ್ರಿತರು ಹಾಗೂ ಬಂದೋಬಸ್ತ್​ನಲ್ಲಿದ್ದ ಪೊಲೀಸರಿಗೆ ಆಹಾರದ ಪೊಟ್ಟಣಗಳನ್ನು ನೀಡಿದ್ದ ರಾಗಿಣಿ ಚಿತಾಗಾರ ಹಾಗೂ ರುದ್ರಭೂಮಿಯ ಕೆಲಸಗಾರರಿಗೆ ದಿನಸಿ ಕಿಟ್ ಹಂಚಿದ್ದಾರೆ. ರಾಗಿಣಿ ದ್ವಿವೇದಿ ಕಳೆದ ಲಾಕ್‍ಡೌನ್‍ನಲ್ಲೂ ನಿರಾಶ್ರಿತರಿಗೆ ಹಾಗೂ ಬಡವರಿಗೆ ದಿನಸಿ ಹಾಗೂ ಆಹಾರ ನೀಡುವ ಮೂಲಕ ನೆರವಾಗಿದ್ದರು. ಈಗಲೂ ಸಹ ನಟಿ ರಾಗಿಣಿ ಈ ಕೆಲಸವನ್ನು ಮುಂದುವರೆಸಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ಮಾಸ್ಕ್ ಹಾಗೂ ಗ್ಲೌಸ್ ಧರಿಸಿ ಸ್ಮಶಾನಕ್ಕೆ ಭೇಟಿ ಕೊಟ್ಟು ಅಲ್ಲಿ ಕೆಲಸ ಮಾಡುವವರಿಗೆ ದಿನಸಿ ಕಿಟ್ ವಿತರಿಸಿದ್ದಾರೆ. ಒಂದು ತಿಂಗಳಿಗೆ ಆಗುವಷ್ಟು ದಿನಸಿಯನ್ನು ಚಿತಾಗಾರದಲ್ಲಿ ಕೆಲಸ ಮಾಡುವವರಿಗೆ ನೀಡಿದ್ದಾರೆ. ಸರ್ವಜ್ಞನಗರದ ಕಲ್ಲಹಳ್ಳಿ ರುದ್ರಭೂಮಿಗೆ ತೆರಳಿ ಅಲ್ಲಿ ನೆಲೆಸಿರುವ ಗುಂಡಿ ಅಗೆಯುವ ಕಾರ್ಮಿಕರು ಹಾಗೂ ಕುಟುಂಬದ ಮಹಿಳೆಯರನ್ನು ಭೇಟಿ ಮಾಡಿದ್ದಾರೆ ರಾಗಿಣಿ. ನಿರಾಶ್ರಿತರು ಹಾಗೂ ಬಂದೋಬಸ್ತ್​ನಲ್ಲಿದ್ದ ಪೊಲೀಸರಿಗೆ ಆಹಾರದ ಪೊಟ್ಟಣಗಳನ್ನು ನೀಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ನನ್ನ ಪ್ರಕಾರ ಚಿತಾಗಾರದಲ್ಲಿ ಕೆಲಸ ಮಾಡುವವರೇ ಗ್ರೇಟ್ ಕೊರೊನಾ ವಾರಿಯರ್ಸ್ ಇವರ ಕೆಲಸದ ಹಿಂದಿರುವ ನೋವನ್ನ ಯಾರೂ ಪರಿಗಣಿಸುವಿದೇ ಇಲ್ಲ. ಹಾಗೇ ಇವರಲ್ಲಿ ಅದೆಷ್ಟೋ ಜನರಿಗೆ ಸಂಬಳ ಹಾಗೂ ಊಟ ಕೂಡ ಸಿಗುತ್ತಿಲ್ಲ. ನಮ್ಮ ಕೈಲಾದಷ್ಟು ಅವರ ಒಂದು ತಿಂಗಳಿಗೆ ಆಗುಷ್ಟು ರೇಷನ್ ಸಹಾಯ ಮಾಡಿದ್ದೇವೆ. ಕಳೆದ ನಾಲ್ಕು ಪೀಳಿಗೆಯಿಂದಲೂ ಈ ಚಿತಾಗಾರದಲ್ಲಿ ಕೆಲಸ ಮಾಡುತ್ತಾ ಹೊರ ಜಗತ್ತನ್ನು ನೋಡದೇ ಇರುವ ಓರ್ವ ಮಹಿಳೆಯನ್ನು ಬೇಟಿ ಮಾಡಿದೆ. ಖುಷಿ ಆಯ್ತು. ಇವರಿಂದ ನಾವು ದಿನಾ ಕಲಿಯುವುದು ಬಹಳಷ್ಟಿದೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

    ರಾಗಿಣಿ ಕೊರೊನಾ ಸಮಯದಲ್ಲಿ ಮಾಡುತ್ತಿರುವ ಈ ಸಹಾಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಗಿಣಿ ತಾವು ಮಾಡುತ್ತಿರುವ ಸಹಾಯವನ್ನು ಮುಮದುವರೆಸಿದ್ದಾರೆ. ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುವಲ್ಲಿ ರಾಗಿಣಿ ತೊಡಗಿಸಿಕೊಂಡಿದ್ದಾರೆ.

     

    View this post on Instagram

     

    A post shared by Ragini dwivedi (@rraginidwivedi)

  • ನಟಿ ರಾಗಿಣಿಗಾಗಿ ಪ್ರೇಮಿಗಳಿಬ್ಬರ ಕಿತ್ತಾಟ

    ನಟಿ ರಾಗಿಣಿಗಾಗಿ ಪ್ರೇಮಿಗಳಿಬ್ಬರ ಕಿತ್ತಾಟ

    ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಗಾಗಿ ಅವರ ಇಬ್ಬರು ಬಾಯ್ ಫ್ರೆಂಡ್ಸ್ ಕಿತ್ತಾಡಿಕೊಂಡಿರುವ ಘಟನೆ ನಗರದ ಖಾಗಿಸಿ ಹೋಟೆಲ್ ನಲ್ಲಿ ನಡೆದಿದ್ದು, ನಟಿಯ ಮುಂದೆಯೇ ಇಬ್ಬರು ಗೆಳೆಯರು ಬಾಟಲಿಯಿಂದ ಬಡಿದಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ರಾಗಿಣಿ ಅವರ ಮಾಜಿ ಗೆಳೆಯ ಗಣಿ ಉದ್ಯಮಿ, ಶಿವಪ್ರಕಾಶ್ ಚಿಪ್ಪಿ ಹಾಗೂ ಆರ್ ಟಿಒ ಅಧಿಕಾರಿ ರವಿ ನಡುವೆ ಗಲಾಟೆ ನಡೆದಿದೆ. ನಿನ್ನೆ ರಾತ್ರಿ ರಿಟ್ಜ್ ಕಾರ್ಲ್ ಟನ್ ಹೋಟೆಲ್ ನಲ್ಲಿ ಶಿವಪ್ರಕಾಶ್ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ನಟಿ ತಮ್ಮ ಗೆಳೆಯ ರವಿರೊಂದಿಗೆ ಹೋಟೆಲ್ ತೆರಳಿದ್ದು, ಇದನ್ನು ಕಂಡ ಶಿವಪ್ರಕಾಶ್, ರವಿರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಅಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಇಬ್ಬರ ನಡುವೆ ಜಗಳ ಆರಂಭವಾಗಿ ಬಿಯರ್ ಬಾಟೆಲ್‍ನಿಂದ ಬಡಿದಾಡಿಕೊಂಡಿದ್ದಾರೆ.

    ಅಂದಹಾಗೇ ಉದ್ಯಮಿ ಶಿವಪ್ರಕಾಶ್ ನನ್ನ ಮೊದಲು ನಟಿ ರಾಗಿಣಿ ದ್ವಿವೇದಿ ಪ್ರೀತಿಸುತ್ತಿದ್ದರು. ಆದರೆ ಆ ಬಳಿಕ ರವಿ ಅವರೊಂದಿಗೆ ಒಡನಾಟ ಹೆಚ್ಚಿತ್ತು. ನಿನ್ನೆ ರಾತ್ರಿ ನಡೆದ ಗಲಾಟೆ ಬಳಿಕ ಶಿವಪ್ರಕಾಶ್, ರಾಗಿಣಿ ಅವರ ಬಳಿ ಇದ್ದ ಮರ್ಸಿಡೀಸ್ ಬೆಂಜ್ ಕಾರು ಕಿತ್ತುಕೊಂಡಿದ್ದಾರೆ. ಕೋರಮಂಗಲ ಆರ್ ಟಿಒ ಕಚೇರಿಯಲ್ಲಿ ಆಫೀಸರ್ ಆಗಿ ರವಿ ಕಾರ್ಯನಿರ್ವಹಿಸುತ್ತಿದ್ದಾರೆ.

    ರಾಗಿಣಿ ಅವರ ಬಳಿ ಇದ್ದ ಕಾರನ್ನು ಶಿವಪ್ರಕಾಶ್ ಕೊಡಿಸಿದ್ದರು ಎನ್ನಲಾಗಿದ್ದು, ಅದ್ದರಿಂದಲೇ ಕಾರನ್ನು ಕಿತ್ತುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಗಲಾಟೆಯಲ್ಲಿ ಗಾಯಗೊಂಡಿದ್ದ ರವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಆ ಬಳಿಕ ಅಶೋಕನಗರ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಸದ್ಯ ಅವರ ಆರೋಗ್ಯ ಪರಿಸ್ಥಿತಿ ಚೇತರಿಸಿ ಕೊಂಡಿದ್ದು, ರವಿ ನೀಡಿದ ದೂರಿನ ಅನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿ ಶಿವಪ್ರಕಾಶ್ ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.