Tag: ನಟಿ ಮಾಧವಿ

  • ಮೂರು ಮಕ್ಕಳ ಜೊತೆ ಸ್ಪೇನ್‌ನಲ್ಲಿ ನಟಿ ಮಾಧವಿ ವೆಕೇಷನ್

    ಮೂರು ಮಕ್ಕಳ ಜೊತೆ ಸ್ಪೇನ್‌ನಲ್ಲಿ ನಟಿ ಮಾಧವಿ ವೆಕೇಷನ್

    80ರ ದಶಕದಲ್ಲಿ ಕನ್ನಡ ಚಿತ್ರರಂಗ ಆಳಿದ ನಟಿ ಮಾಧವಿ (Actress Madhavi) ಈಗ ವೆಕೇಷನ್ ಮೂಡ್‌ನಲ್ಲಿದ್ದಾರೆ. ಮೂರು ಹೆಣ್ಣು ಮಕ್ಕಳೊಂದಿಗೆ ಸ್ಪೇನ್‌ಗೆ (Spain) ಮಾಧವಿ ತೆರಳಿದ್ದಾರೆ. ವೆಕೇಷನ್‌ನ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

    ಮೂರು ಹೆಣ್ಣು ಮಕ್ಕಳೊಂದಿಗೆ ಸ್ಪೇನ್‌ನ ವಿವಿಧ ಸ್ಥಳಗಳಿಗೆ ನಟಿ ಭೇಟಿ ನೀಡಿದ್ದಾರೆ. ಕುಟುಂಬದ ಜೊತೆ ಮೋಜು ಮಸ್ತಿ ಮಾಡುತ್ತಿದ್ದಾರೆ. ಮಕ್ಕಳೊಂದಿಗಿನ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಕಪಟಿ’ ಟೀಸರ್‌ ಔಟ್- ಡಾರ್ಕ್ ವೆಬ್ ಜಗತ್ತಿನ ಅಸಲಿತನ ತೆರೆದಿಡಲಿದೆ ಸಿನಿಮಾ

    ಕನ್ನಡ ಸಿನಿಮಾ ಜೊತೆ ತಮಿಳು, ಹಿಂದಿಯಲ್ಲಿಯೂ ನಾಯಕಿಯಾಗಿ ಗೆದ್ದಿದ್ದ ಮಾಧವಿ ಈಗಾಗಲೇ ಸಿನಿಮಾಗೆ ಗುಡ್ ಬೈ ಹೇಳಿ ಹಲವು ವರ್ಷಗಳೇ ಕಳೆದಿದೆ. ಈಗ ವಿದೇಶದಲ್ಲಿನ ವೆಕೇಷನ್ ಫೋಟೋಶೂಟ್ ವಿಷ್ಯವಾಗಿ ನಟಿ ಸದ್ದು ಮಾಡುತ್ತಿದ್ದಾರೆ.

    ಅಂದಹಾಗೆ, ಡಾ.ರಾಜ್‌ಕುಮಾರ್ (Dr.Rajkumar) ಜೊತೆ ಹಾಲು ಜೇನು, ಭಾಗ್ಯದ ಲಕ್ಷ್ಮಿ ಬಾರಮ್ಮ, ಅನುರಾಗ ಅರಳಿತು, ಶ್ರುತಿ ಸೇರಿದಾಗ, ಜೀವನ ಚೈತ್ರ, ಆಕಸ್ಮಿಕ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ವಿಷ್ಣುವರ್ಧನ್, ಅನಂತ್ ನಾಗ್, ರೆಬೆಲ್ ಸ್ಟಾರ್ ಅಂಬರೀಶ್ ಜೊತೆ ಕೂಡ ಮಾಧವಿ ನಟಿಸಿದ್ದಾರೆ.