Tag: ನಟಿ ನಿಧಿ ಅಗರ್ ವಾಲ್

  • ನಟಿ ನಿಧಿ ಅಗರ್ವಾಲ್ ಜೊತೆ ಸುತ್ತಾಟ: ಸ್ಪಷ್ಟನೆ ಕೊಟ್ಟ ಕ್ರಿಕೆಟಿಗ ರಾಹುಲ್

    ನಟಿ ನಿಧಿ ಅಗರ್ವಾಲ್ ಜೊತೆ ಸುತ್ತಾಟ: ಸ್ಪಷ್ಟನೆ ಕೊಟ್ಟ ಕ್ರಿಕೆಟಿಗ ರಾಹುಲ್

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಬಾಲಿವುಡ್ ನಟಿ ನಿಧಿ ಅಗರ್ವಾಲ್ ಜೊತೆಗಿನ ಫೋಟೋ ಕುರಿತು ಸ್ಪಷ್ಟನೆ ನೀಡಿರುವ ಕ್ರಿಕೆಟಿಗ ಕೆಎಲ್ ರಾಹುಲ್, ನಾವಿಬ್ಬರು ಉತ್ತಮ ಸ್ನೇಹಿತರಾಗಿದ್ದು, ಹಲವು ವರ್ಷಗಳಿಂದ ಪರಸ್ಪರ ಪರಿಚಯವಿರುವ ಕಾರಣ ಭೇಟಿ ಮಾಡಿದ್ದಾಗಿ ತಿಳಿಸಿದ್ದಾರೆ.

    ಇದೇ ವೇಳೆ ಡೇಟಿಂಗ್ ಕುರಿತ ಪ್ರಶ್ನೆಗೆ ಉತ್ತರಿಸಿ, ತಾನು ಪ್ರೀತಿಸುವ ಮಹಿಳೆಯನ್ನು ಮಹಾರಾಣಿಯಾಗಿ ನೋಡಿಕೊಳ್ಳುತ್ತೇನೆ. ಅಲ್ಲದೇ ಈ ವಿಷಯವನ್ನು ಯಾರಿಂದಲೂ ಮುಚ್ಚಿಡಲು ಪ್ರಯತ್ನ ಪಡುವುದಿಲ್ಲ. ನಾವಿಬ್ಬರು ಒಂದೇ ನಗರದದಿಂದ ಮುಂಬೈಗೆ ಆಗಮಿಸಿದ್ದು, ಇಬ್ಬರ ವೃತ್ತಿ ಜೀವನದಲ್ಲಿ ಸಾಕಷ್ಟು ಬೆಳವಣಿಗೆ ಹೊಂದುತ್ತಿದ್ದೇವೆ. ಹಲವು ಬಾರಿ ಈ ಕುರಿತು ಮಾತನಾಡಲು ಸಿಗುತ್ತೇವೆ ಎಂದು ಹೇಳಿದ್ದಾರೆ.

    ಬಾಲಿವುಡ್ ನಲ್ಲಿ ನಟಿ ನಿಧಿ ಅಗರ್ವಾಲ್ ಉತ್ತಮ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಅಲ್ಲದೇ ನಾವಿಬ್ಬರೇ ಎಲ್ಲೂ ಭೇಟಿ ಆಗುವುದಿಲ್ಲ. ನಮ್ಮೊಂದಿಗೆ ಬೆಂಗಳೂರಿನಿಂದ ಆಗಮಿಸಿದ ಮೂವರು ಸ್ನೇಹಿತರು ಸಹ ಸೇರಿ ಕೊಳುತ್ತಾರೆ. ಒಂದೇ ಊರಿನ ಸ್ನೇಹಿತರು ಬೇರೆ ಊರಲ್ಲಿ ಭೇಟಿ ಮಾಡಿ ಮಾತನಾಡುವುದು ಸಂತಸ ನೀಡುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

    https://instagram.com/p/BjZxMiNBl9d/?utm_source=ig_embed

    ಕಳೆದ ಎರಡು ದಿನಗಳ ಹಿಂದೆ ಬೆಂಗಳೂರು ಮೂಲದ ಬಾಲಿವುಡ್ ನಟಿ ನಿಧಿ ಅಗರ್ವಾಲ್ ಜೊತೆ ರಾಹುಲ್ ಕಾಣಿಸಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಇಬ್ಬರು ಡೇಟಿಂಗ್ ನಡೆಸುತ್ತಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿತ್ತು. ಆದರೆ ಈಗ ಖಾಸಗಿ ಮಾಧ್ಯಮದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ರಾಹುಲ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ಈ ಬಾರಿಯ ಐಪಿಎಲ್ ನಲ್ಲಿ ತಮ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ರಾಹುಲ್ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದರು. ಬೆಂಗಳೂರಿನಲ್ಲಿ ನಡೆಯುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಪಂದ್ಯದಲ್ಲಿ ರಾಹುಲ್ ಆಡಲಿದ್ದಾರೆ. ಇನ್ನು ಬೆಂಗಳೂರು ಮೂಲದ ನಟಿ ನಿಧಿ ಅಗರ್ವಾಲ್ 2017 ರಲ್ಲಿ ತೆರೆಕಂಡ ಬಾಲಿವುಡ್ `ಮುನ್ನ ಮೈಕಲ್’ ಸಿನಿಮಾದಲ್ಲಿ ನಟಿಸಿದ್ದರು.

    https://www.instagram.com/p/BjZ2T-YgW_3/?utm_source=ig_embed