Tag: ನಟಿ ತಾರಾ

  • ರಾಜಕೀಯ ಏನಾದ್ರೂ ಇರಲಿ, ಜಯನಗರಕ್ಕೆ ಅನುದಾನ ಕೊಡಿ – ಡಿಕೆಶಿಗೆ ಸೆಲೆಬ್ರಿಟಿಗಳ ಮನವಿ

    ರಾಜಕೀಯ ಏನಾದ್ರೂ ಇರಲಿ, ಜಯನಗರಕ್ಕೆ ಅನುದಾನ ಕೊಡಿ – ಡಿಕೆಶಿಗೆ ಸೆಲೆಬ್ರಿಟಿಗಳ ಮನವಿ

    ಬೆಂಗಳೂರು: ಜಯನಗರಕ್ಕೆ ಅನುದಾನ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಅಲ್ಲಿ ವಾಸವಿರುವ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಅನುದಾನ ನೀಡುವಂತೆ ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಅವರಿಗೆ ಮನವಿ ಮಾಡಿದ್ದಾರೆ.

    ಸಹೋದರ ಡಿಕೆ ಶಿವಕುಮಾರ್ ಅವರೇ ದಯಮಾಡಿ ಅನುದಾನ ಕೊಡಿ. ರಾಮಮೂರ್ತಿ ಅವರು ಹೊಸದಾಗಿ ಶಾಸಕರಾಗಿದ್ದಾರೆ. ಕೆಲಸ ಮಾಡೋ ಉತ್ಸಾಹ ಇದೆ ಅನುದಾನ ಕೊಡಿ ಅಂತ ನಟಿ ತಾರಾ (Tara Anuradha) ಮನವಿ ಮಾಡಿದ್ದಾರೆ. ನಟ ಅನಿರುದ್ಧ ಕೂಡ ಜಯನಗರ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಇದೆ, ಅನುದಾನ ಕೊಡಿ ಅಭಿವೃದ್ಧಿ ಕಾರ್ಯಗಳ ಆಗಲಿ ಎಂದು ಕೋರಿದ್ದಾರೆ.

    ಇನ್ನೂ ನಟ ಅನಿರುದ್ಧ (Anirudh Jatkar) ಮಾತನಾಡಿ, ರಾಜಕೀಯ ಏನೇ ಇರಲಿ ಅನುದಾನ ಕೊಟ್ರೆ ಅಭಿವೃದ್ಧಿ ಕಾರ್ಯಗಳು ಆಗ್ತವೆ. ಮಳೆಯಿಂದಾಗಿ ರಸ್ತೆ ಗುಂಡಿಗಳು ಜಾಸ್ತಿ ಆಗ್ತಿವೆ. ಶಾಸಕ ರಾಮಮೂರ್ತಿ ಅವರನ್ನ ಕೇಳಿದ್ರೆ ಸರ್ಕಾರದಿಂದ ಅನುದಾನ ಬಂದಿಲ್ಲ ಅಂತಾರೆ ಎಂದು ಬೇಸರ ಹೊರಹಾಕಿದ್ದಾರೆ.

    ಜಯನಗರದಲ್ಲಿ ಸಮಸ್ಯೆ ಇದೆ. ಅಭಿವೃದ್ಧಿ ವಿಚಾರದಲ್ಲಿ ಸಮಸ್ಯೆ ಇದೆ. ರಸ್ತೆಗಳು ಸರಿ ಇಲ್ಲ, ಗುಂಡಿ ಬಿದ್ದಿವೆ. ಹಂಪ್‌ಗಳು ಇಲ್ಲ, ವೈಜ್ಞಾನಿಕವಾಗಿ ಸಮಸ್ಯೆ ಇದೆ. ಶಾಸಕರನ್ನ ಕೇಳಿದ್ರೆ ಸರ್ಕಾರದಿಂದ ಅನುದಾನ ಬಂದಿಲ್ಲ ಅಂತಾರೆ. ಏನಾದ್ರು ಮನಸ್ತಾಪ ಇದ್ರೆ, ಬಗೆಹರಿಸಿಕೊಳ್ಳಿ ಅಭಿವೃದ್ಧಿ ವಿಚಾರದಲ್ಲಿ ಎಲ್ಲರಿಗೂ ಸಮನಾದ ಹಕ್ಕು ಇದೆ. ಆಗಾಗಿ ಅನುದಾನ ಕೊಡಿ ಎಂದು ಮನವಿ ಮಾಡಿದಾರೆ.

    ಡಿಕೆಶಿ ಸಮರ್ಥನೆ ಏನು?
    ಇತ್ತೀಚೆಗೆ ಜಯನಗರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡದ ವಿಚಾರವನ್ನ ಡಿಸಿಎಂ ಡಿಕೆಶಿವಕುಮಾರ್ ಮತ್ತೆ ಸಮರ್ಥನೆ ಮಾಡಿಕೊಂಡಿದ್ದರು. ಬಿಜೆಪಿ ಅವರು ವಿರೋಧ ಮಾಡಲಿ. ಮಾಡಲಿ ಅಂತಾನೇ ಸುಮ್ಮನೆ ಇರೋದು. ನಾನು ಎಲ್ಲರಿಗೂ ಅನುದಾನ ಕೊಟ್ಡಿದ್ದೇನೆ. ಡಿಸಿಎಂ ನಿಧಿಯ ಹಣ ಕೊಟ್ಟಿರೋದು. ಸಮಸ್ಯೆ ಇದೆ ಅಂತ 10 ಕೋಟಿ ಎಮರ್ಜೆನ್ಸಿ ಅಂತ ರಿಲೀಸ್ ಮಾಡಿದ್ದೇನೆ. ಜಯನಗರ ಬಹಳ ಚಿಕ್ಕ ಕ್ಷೇತ್ರ. ಅಲ್ಲಿ ದೊಡ್ಡ ಸಮಸ್ಯೆ ಇಲ್ಲ. ಆದರೂ ನನಗೆ ಅನುದಾನ ಕೊಡಬೇಕು ಅಂತ ಅರಿವಿದೆ.‌ ಆದರೆ ಅವರು ಬಹಳ ದೊಡ್ಡ ಆರೋಪಗಳನ್ನ ಮಾಡಿದ್ರು. ಸ್ವಲ್ಪ ಆರೋಪಗಳನ್ನ ನೋಡಬೇಕು. ಜಾಸ್ತಿ ಬೇಕೋ, ಕಡಿಮೆ ಬೇಕೋ ಅಂತ ನೋಡಬೋಕಲ್ಲವಾ? ಅಂತ ಹೇಳಿದ್ದರು.

    ಈಗಾಗಲೇ ಜಯನಗರಕ್ಕೆ 40 ಕೋಟಿ ಕೊಟ್ಟಿದ್ದೇವೆ. ಎಲ್ಲಾ ಕ್ಷೇತ್ರಕ್ಕೆ 600 ಕೋಟಿ ರೂ. ಪ್ರಾಜೆಕ್ಟ್ ಕೊಡ್ತಿದ್ದೇವೆ. ಆ ಕ್ಷೇತ್ರ ಒಂದಕ್ಕೆ 40 ಕೋಟಿ ಸೇರಿದೆ. ಆದರೆ ರಾಮಲಿಂಗಾರೆಡ್ಡಿ ಕ್ಷೇತ್ರಕ್ಕೆ ಇಲ್ಲವೇ ಇಲ್ಲ. ಕಣ್ಣಲ್ಲಿ ಬಂದು ನೋಡಬೇಕು ಅಂತ ಶಾಸಕರು ಕೇಳಿದ್ದಾರೆ. ಕ್ಷೇತ್ರಕ್ಕೆ ಹೋಗಿ ನೋಡ್ತೀನಿ. ಟೀಕೆ ಮಾಡೋರು ಮಾಡಲಿ. ಟೀಕೆ ಮಾಡೋರನ್ನ ಬೇಡ ಅನ್ನೋಕೆ ಆಗೊಲ್ಲ. ಮೊಟ್ಟೆಯಾದ್ರು ಹೊಡೆಯಲಿ, ಕಲ್ಲಾದ್ರು ಹೊಡೆಯಲಿ, ಕಪ್ಪು ಬಾವುಟವಾದ್ರು ತೋರಿಸಲಿ ಅಂತ ತಮ್ಮ ನಡೆ ಸಮರ್ಥನೆ ಮಾಡಿಕೊಂಡಿದ್ದರು.

  • ಇವತ್ತಿನ ತೀರ್ಪು ನ್ಯಾಯಯುತವಾಗಿದೆ: ನಟಿ ತಾರಾ

    ಇವತ್ತಿನ ತೀರ್ಪು ನ್ಯಾಯಯುತವಾಗಿದೆ: ನಟಿ ತಾರಾ

    ಗದಗ: ಶಾಲೆಯಲ್ಲಿ ಎಲ್ಲವನ್ನು ಸಮನಾಗಿ ಕಾಣುವುದೇ ಸಮವಸ್ತ್ರ. ಇವತ್ತಿನ ತೀರ್ಪು ನ್ಯಾಯಯುತವಾಗಿದೆ ಎಂದು ಚಿತ್ರನಟಿ ತಾರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಹಿಜಬ್ ತೀರ್ಪು ಕುರಿತಂತೆ ಗದಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮನೆಯಲ್ಲಿ ನಮ್ಮ ಜಾತಿ, ಧರ್ಮ ಆಚರಣೆ ಮಾಡಲಿ. ಎಲ್ಲಾ ಜಾತಿ ಧರ್ಮ ಒಗ್ಗೂಡಿ ಹೋಗುವುದು ಅಂದರೆ ಅದೇ ಭಾರತ ದೇಶ. ಶಾಲೆಯಲ್ಲಿ ಸಮವಸ್ತ್ರ ಅಂದರೆ ಬಡವ, ಶ್ರೀಮಂತ, ಜಾತಿ ಮತ ಬೇಧ ಏನೂ ಇಲ್ಲದೆ ಕೂತು ಪಾಠ ಕಲಿಯುವ ಒಂದು ದೇವಾಲಯವಾಗಿದೆ. ಒಂದು ದೇವಾಲಯದಲ್ಲಿ ಜಾತಿ-ಧರ್ಮ ಪಾಲಿಸಬಾರದು. ಶಾಲೆಯಲ್ಲಿ ಎಲ್ಲವನ್ನು ಸಮನಾಗಿ ಕಾಣುವುದೇ ಸಮವಸ್ತ್ರ. ಇವತ್ತಿನ ತೀರ್ಪು ನ್ಯಾಯಯುತವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವರ ಪ್ರಚೋದನೆ ಮಾತುಗಳನ್ನು ಕೇಳ್ಬೇಡಿ, ನಿಮಗೆ ನಿಮ್ಮ ಭವಿಷ್ಯ ಮುಖ್ಯ: ರೇಣುಕಾಚಾರ್ಯ

    ಇದೇ ವೇಳೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತಂತೆ ಪ್ರತಿಕ್ರಿಯಿಸಿದ ಅವರು, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದೆ. ಹಿಂದೂ ರಾಷ್ಟ್ರ ಎಂದು ಇಡೀ ಪ್ರಪಂಚದಲ್ಲಿ ಇರುವ ಏಕೈಕ ರಾಷ್ಟ್ರ ಭಾರತ. ಈಗಲೂ ನಾವು ಎಚ್ಚೆತ್ತುಕೊಳ್ಳದೇ ಹೋದರೆ ನಮಗೆ ಕಾಶ್ಮೀರದ ಒಂದು ಘೋರವಾದ ನಿಜ ಇಡೀ ರಾಷ್ಟ್ರಕ್ಕೆ ಹಬ್ಬುತ್ತಿತ್ತೇನೋ.. ಸದ್ಯ ನಮ್ಮ ಪುಣ್ಯ ನಾವು ಎಚ್ಚೆತ್ತುಕೊಂಡಿದ್ದೇವೋ ಎನಿಸುತ್ತದೆ. ಇಂದಿಗೂ ಸಹ ಮಹಿಳೆಯ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ನೋಡಿದರೆ, ನಾವು ಇನ್ನೂ ಸಂಪೂರ್ಣವಾಗಿ ಎಚ್ಚೆತ್ತುಕೊಳ್ಳಬೇಕು ಅನಿಸುತ್ತದೆ. ದಯವಿಟ್ಟು ಸಿನಿಮಾವನ್ನು ರಾಜಕೀಯ ಮಾಡಬೇಡಿ ಎಂದಿದ್ದಾರೆ. ಇದನ್ನೂ ಓದಿ: ಮಂಗಳವಾರ ಬೆಳಗ್ಗೆ 10:30ಕ್ಕೆ ಹಿಜಬ್‌ ಹೈಕೋರ್ಟ್‌ ತೀರ್ಪು

    ಸಿನಿಮಾ ಎನ್ನುವುದು ಒಂದು ಕಲೆ. ಸಾಹಸ, ಸಂಗೀತ, ನೃತ್ಯ, ಮಾತುಕತೆ, ಸತ್ಯ ಎಲ್ಲವೂ ಒಂದುಗೂಡಿದರೆ ಸಿನಿಮಾವಾಗುತ್ತದೆ. ಕಲೆಗೆ ಎಲ್ಲರನ್ನು ಒಟ್ಟಿಗೆ ಕೂರಿಸಿಕೊಂಡು ಒಟ್ಟಿಗೆ ಕರೆದುಕೊಂಡು ಹೋಗುವ ದೊಡ್ಡ ಶಕ್ತಿ ಇದೆ. ಸಿನಿಮಾಕ್ಕೆ ಜಾತಿ, ಮತ, ಧರ್ಮ, ರಾಜಕೀಯವನ್ನು ಸೇರಿಸಬೇಡಿ. ದಿ ಕಾಶ್ಮೀರ್ ಫೈಲ್ಸ್ ರಾಜಕೀಯ ಸಿನಿಮಾವಲ್ಲ. ಇದೊಂದು ಸತ್ಯ ಘಟನೆಗಳ ಬಿಚ್ಚಿಟ್ಟ ಸಿನಿಮಾವಾಗಿದೆ. ಯಾವುದೇ ರೀತಿಯ ಸುಳ್ಳನ್ನು ತೋರಿದೇ, ಯಾವುದನ್ನು ಹೆಚ್ಚಿಗೆ ತೋರಿಸದೇ ಆ ಕ್ಷಣದಲ್ಲಿ ಏನು ನಡೆದಿದೆ ಅದನ್ನು ಮಾತ್ರ ಸಿನಿಮಾದಲ್ಲಿ ಬಿಚ್ಚಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

  • ಸಮನ್ವಿ ತುಂಬಾ ಪ್ರತಿಭಾವಂತೆ, ಮಾಡೆಲ್‌ ಥರಾನೆ ಇದ್ದಳು: ಪುಟಾಣಿ ನೆನೆದು ತಾರಾ ಕಂಬನಿ

    ಸಮನ್ವಿ ತುಂಬಾ ಪ್ರತಿಭಾವಂತೆ, ಮಾಡೆಲ್‌ ಥರಾನೆ ಇದ್ದಳು: ಪುಟಾಣಿ ನೆನೆದು ತಾರಾ ಕಂಬನಿ

    ಬೆಂಗಳೂರು: ಭೀಕರ ಅಪಘಾತದಲ್ಲಿ ನನ್ನಮ್ಮ ಸೂಪರ್‌ ಸ್ಟಾರ್‌ ಸ್ಪರ್ಧಿ ಸಮನ್ವಿ ಸಾವಿಗೆ ಹಿರಿಯ ನಟಿ ತಾರಾ ಕಂಬನಿ ಮಿಡಿದಿದ್ದಾರೆ.

    ಸಮನ್ವಿ ತುಂಬಾ ಪ್ರತಿಭಾವಂತೆ. ಮಾಡೆಲ್‌ ಥರಾನೆ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಅವಳಿಲ್ಲ ಎಂಬ ಸುದ್ದಿಯನ್ನು ನನ್ನಿಂದ ನಂಬುವುದಕ್ಕೇ ಆಗುತ್ತಿಲ್ಲ. ಮನಸ್ಸಿಗೆ ತುಂಬಾ ನೋವಾಗುತ್ತಿದೆ ಎಂದು ನಟಿ ವಿಷಾದಿಸಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು

    ನಾನು ಬೆಂಗಳೂರಿನಲ್ಲಿಲ್ಲ, ಹೊರಗಡೆ ಇದ್ದೇನೆ. ಅದ್ಯಾಕೋ ಒಂದೇ ಸಮನೆ ಫೋನ್‌ ಕರೆಗಳು ಬರುತ್ತಿದ್ದವು. ಏನು ಅಂತ ವಿಚಾರಿಸಿದಾಗ ಸಮನ್ವಿ ಇಲ್ಲ ಅಂತ ಹೇಳಿದರು. ಈ ಸುದ್ದಿ ಕೇಳಿ ನನಗೆ ಶಾಕ್‌ ಆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ತಾಯಿ-ಮಕ್ಕಳು ನಮ್ಮ ಕುಟುಂಬದ ಸದಸ್ಯರೇ ಆಗಿದ್ದರು. ಎಲ್ಲರೂ ನನ್ನ ಜೊತೆ ಚೆನ್ನಾಗಿದ್ದರು ಎಂದು ನೆನೆದಿದ್ದಾರೆ.

    ಸಮನ್ವಿ ತಾಯಿ ಅಮೃತಾ ನಾಯ್ಡು ತುಂಬು ಗರ್ಭಿಣಿ. ಶೋನಲ್ಲಿ ಅವಳಿಂದ ಹೆಚ್ಚು ಡ್ಯಾನ್ಸ್‌ ಮಾಡಿಸಲು ಆಗಲ್ಲ. ಆಕೆಗೆ ತುಂಬಾ ಒತ್ತಡ ಹಾಕಿದಂತಾಗುತ್ತದೆ ಎಂಬ ಕಾರಣಕ್ಕೆ ಶೋನಿಂದ ಎಲಿಮಿನೇಷನ್‌ ಮಾಡಿದ್ದೆವು. ಅದಾದ ಬಳಿಕವೂ ಆಕೆ ಫೋನ್‌ ಮಾಡಿ ನನ್ನೊಟ್ಟಿಗೆ ಚೆನ್ನಾಗಿಯೇ ಮಾತನಾಡುತ್ತಿದ್ದಳು. ಒಮ್ಮೆ ನನ್ನನ್ನು ಭೇಟಿಯಾಗಬೇಕು ಎನ್ನುತ್ತಿದ್ದಳು. ನನಗೆ ಲೊಕೇಷನ್‌ ಕಳುಹಿಸಿ, ನಾನೇ ಕಾರು ಕಳುಹಿಸುತ್ತೇನೆ ಬಾ ಎಂದು ತಿಳಿಸಿದ್ದೆ. ಇಲ್ಲ ಅಮ್ಮ ಇನ್ನೊಮ್ಮೆ ಭೇಟಿಯಾಗುತ್ತೇನೆ ಎಂದಿದ್ದಳು. ಆಗ ಸಮನ್ವಿ ಕೂಡ ನನ್ನ ಜೊತೆ ಮಾತನಾಡಿದ್ದಳು ಎಂದು ನೆನೆಯುತ್ತಾ ತಾರಾ ದುಃಖ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೀಟೂ ಕೇಸಲ್ಲಿ ಅರ್ಜುನ್ ಸರ್ಜಾಗೆ ರಿಲೀಫ್

    ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ಶೋನ ಸ್ಪರ್ಧಿ ಸಮನ್ವಿ ದಾರುಣವಾಗಿ ಮೃತಪಟ್ಟ ಘಟನೆ ಕೋಣನ ಕುಂಟೆ ಬಳಿ ನಡೆದಿದೆ.

  • ಹಳೆ ತಲೆಮಾರಿನ ಕೊಂಡಿಯನ್ನು ಕಳೆದುಕೊಂಡೆವು – ನಟಿ ತಾರಾ

    ಹಳೆ ತಲೆಮಾರಿನ ಕೊಂಡಿಯನ್ನು ಕಳೆದುಕೊಂಡೆವು – ನಟಿ ತಾರಾ

    ಬೆಂಗಳೂರು: ಶಿವರಾಂ ಅವರ ಸಾವು ತುಂಬಾ ನೋವುಂಟು ಮಾಡಿದೆ. ಇವರಿಗೆ ಭಾರತೀಯ ಹಲವು ಭಾಷಾ ಚಿತ್ರರಂಗದ ಕಲಾವಿದರ ಪರಿಚಯ ತುಂಬಾ ಚೆನ್ನಾಗಿ ಇತ್ತು ಎಂದು ನಟಿ ತಾರಾ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಅವರೊಂದಿಗೆ ಭಜನೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಇವರು ಓರ್ವ ಅಯ್ಯಪ್ಪ ಸ್ವಾಮಿ ಅವರ ಮಹಾನ್ ದೈವ ಭಕ್ತರು ಆಗಿದ್ದರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಸಾಮಾನ್ಯ ವ್ಯಕ್ತಿಯಲ್ಲ ಶಿವರಾಂ, ಅವರಂತೆ ಯಾರು ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ: ದ್ವಾರಕೀಶ್

    ಇವರಿಗೆ ಸಿನಿಮಾ ರಂಗದ ಬಗ್ಗೆ ತಿಳಿಯದ ವಿಚಾರವಿಲ್ಲ. ನಟ ರಜನಿಕಾಂತ್, ಡಾ.ವಿಷ್ಣುವರ್ಧನ್, ಡಾ.ರಾಜ್‍ಕುಮಾರ್, ಚಲನಚಿತ್ರ ನಿದೇರ್ಶಕ ಪುಟ್ಟಣ್ಣಕಣಗಲ್, ನಟ ಕಲ್ಯಾಣ್‍ಕುಮಾರ್ ಇವರೊಡನೆ ಉತ್ತಮ ಒಡನಾಟವನ್ನು ಹೊಂದಿದ್ದರು ಹಾಗೂ ಈ ಎಲ್ಲಾ ವ್ಯಕ್ತಿಗಳ ಬಗ್ಗೆ ನನಗೆ ಗೊತ್ತಿಲ್ಲದ ಕೆಲವು ವಿಚಾರಗಳನ್ನು ತಿಳಿಸಿದ್ದರು. ಇದನ್ನೂ ಓದಿ: ಕನ್ನಡದ ಹಿರಿಯ ನಟ ಶಿವರಾಂ ಇನ್ನಿಲ್ಲ

    ಚಲನಚಿತ್ರರಂಗದ ಹಳೆ ತಲೆಮಾರಿನವರನ್ನು ಕಳೆದುಕೊಳ್ಳುತ್ತಿದ್ದೇವೆ. ಇದು ಚಂದನವನಕ್ಕೆ ದೊಡ್ಡ ಹೊಡೆತವನ್ನು ನೀಡಿದೆ ಎಂದು ನಟಿ ತಾರಾ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

  • ನಿಮ್ಮತ್ರ ಕ್ಷಿಪಣಿ ಇದ್ರೆ ನಮ್ಮೋರನ್ನು ಯಾಕೆ ಹುಡುಕಲಿಲ್ಲ? – ಬಿಜೆಪಿಗೆ ಮೀನುಗಾರ ಮುಖಂಡ ಪ್ರಶ್ನೆ

    ನಿಮ್ಮತ್ರ ಕ್ಷಿಪಣಿ ಇದ್ರೆ ನಮ್ಮೋರನ್ನು ಯಾಕೆ ಹುಡುಕಲಿಲ್ಲ? – ಬಿಜೆಪಿಗೆ ಮೀನುಗಾರ ಮುಖಂಡ ಪ್ರಶ್ನೆ

    ಉಡುಪಿ: ಮಲ್ಪೆ ಕಡಲ ತೀರದಿಂದ ತ್ರಿಭುಜ ಹೆಸರಿನ ಹಡಗಿನೊಂದಿಗೆ ನಾಪತ್ತೆಯಾದ ಏಳು ಮೀನುಗಾರರನ್ನು ಹುಡುಕೋದಕ್ಕೆ ಆಗಲ್ವ? ಪ್ರಧಾನಿ ಮೋದಿ ಬಳಿ ಇರುವ ದೊಡ್ಡ ದೊಡ್ಡ ಕ್ಷಿಪಣಿ ಏನಕ್ಕದು? ಎಂದು ಉಡುಪಿ ಪ್ರಭಾವಿ ಮೀನುಗಾರ ಮುಖಂಡರೊಬ್ಬರು ಬಿಜೆಪಿ ನಾಯಕರಿಗೆ ಮಾತಿನ ಚಾಟಿ ಬೀಸಿದ್ದಾರೆ.

    ಮೀನುಗಾರರ ಮುಖಂಡರು ಹಾಗೂ ಗುತ್ತಿಗೆದಾರರು ಆಗಿರುವ ಡಾ. ಜಿ.ಶಂಕರ್ ಅವರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನ ಪ್ರಚಾರ ಸಭೆ ಮುಗಿಸಿ ನಟಿ ತಾರಾ ಬಗ್ವಾಡಿ ದೇವಸ್ಥಾನಕ್ಕೆ ತೆರಳಿದ ವೇಳೆ ಈ ಘಟನೆ ನಡೆದಿದೆ.

    ನಟಿ ತಾರಾ ಅವರು ಪ್ರಚಾರ ಸಭೆಯ ಭಾಷಣದಲ್ಲಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ಬಳಿಕ ಅವರು ಅಲ್ಲಿಂದ ತೆರಳಿದ ವೇಳೆ ಧಾರ್ಮಿಕ ಸಭೆಯ ವೇದಿಕೆ ಬಳಿ ಶಂಕರ್ ಹಾಗೂ ಬಿಜೆಪಿ ಶಾಸಕ ಸುಕುಮಾರ ಅವರು ಎದುರಾಗಿದ್ದರು. ಈ ವೇಳೆ ಶಾಸಕರನ್ನು ಪ್ರಶ್ನೆ ಮಾಡಿದ ಶಂಕರ್ ಅವರು, ಯಾರೇ ಆಗಲಿ ಉಡಾಫೆ ಮಾತನಾಡಬೇಡಿ, ಇದೆಲ್ಲಾ ನಡೆಯುದಿಲ್ಲಾ ಇನ್ನು. ನಿಮಗೆ ನೆತ್ತಿಗೆ ಏರಿದೆಯೇ, ಕಾಂಗ್ರೆಸ್ ನವರನ್ನು ಬಿಡಿ. ನೀವು ಏನು ಮಾಡಿದ್ದೀರಿ ಹೇಳಿ. ನಾನು ನಿಮ್ಮ ಗುರು ಮಾಜಿ ಸಿಎಂ ಯಡಿಯೂರಪ್ಪ ನವರ ಬಳಿ ಫೈಲ್ ಹಿಡಿದು ತಿರುಗಾಡಿದ್ದೇನೆ. ಯಡಿಯೂರಪ್ಪ ನಿಮ್ಮ ಗುರುಗಳು, ಹಾಗೆಯೇ ನನ್ನ ಗುರುಗಳು ಆದರೆ ಕೆಲಸ ಮಾಡಬೇಕಾಗಿತ್ತಲ್ಲಾ. ಕರಾವಳಿಯವರ ಮತಗಳು ನಿಮಗೇ ಬೇಡವೇ? ಕೆಲಸ ಮಾಡಲ್ವಾ? ನೀವು ಬಂದು ಏನು ಮಾಡಿದ್ದೀರಿ ಹೇಳಿ? ಮೀನುಗಾರರಿಗೆ 9 ರೂಪಾಯಿ ಡಿಸೇಲ್ ಸಬ್ಸಿಡಿ ಕೊಟ್ಟಿದ್ದೀರಾ? ನಿಮ್ಮ ಹತ್ರ ದೊಡ್ಡ ದೊಡ್ಡ ಕ್ಷಿಪಣಿ ಎಲ್ಲಾ ಇದೆ ಎಂದು ಹೇಳ್ತೀರಿ, ಮೂರು ತಿಂಗಳಿಂದ ಕಳೆದು ಹೋದ ಏಳು ಜನ ಮೀನುಗಾರರನ್ನು ಹುಡುಕಲು ಆಗಿಲ್ಲಾ ಅಂದರೆ ಮೋದಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

    ಇದನ್ನು ಕಂಡ ಇತರೇ ಮುಖಂಡರು, ಶಾಸಕ ಸುಕುಮಾರ ಶೆಟ್ಟಿ, ಬಿಜೆಪಿ ಪದಾಧಿಕಾರಿಗಳು ಮತ್ತು ಮೀನುಗಾರ ಮುಖಂಡರು ಜಿ. ಶಂಕರ್ ಅವರನ್ನು ಸಂತೈಸಿದ್ದಾರೆ. ಚುನಾವಣಾ ಪ್ರಚಾರ ಸಭೆಯಲ್ಲಿ ಆರೋಪ ಪ್ರತ್ಯಾರೋಪ ಮಾಮೂಲಿ. ನಿಮ್ಮ ಕೆಲಸಗಳನ್ನು ಮಾಡಿಕೊಡುವ ಎಂದು ಹೇಳಿದ್ದಾರೆ.

  • ಕ್ಷಮೆ ಕೇಳಿ ಇಲ್ಲವೇ ರಾಜೀನಾಮೆ ನೀಡಿ – ಸ್ಪೀಕರ್ ವಿರುದ್ಧ ತಾರಾ ಅಸಮಾಧಾನ

    ಕ್ಷಮೆ ಕೇಳಿ ಇಲ್ಲವೇ ರಾಜೀನಾಮೆ ನೀಡಿ – ಸ್ಪೀಕರ್ ವಿರುದ್ಧ ತಾರಾ ಅಸಮಾಧಾನ

    ಬೆಂಗಳೂರು: ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ಸ್ಥಿತಿಯನ್ನು ವಿವರಿಸಲು ರೇಪ್ ಉದಾಹರಣೆಯನ್ನು ಸದನದಲ್ಲಿ ಪ್ರಸ್ತಾಪಿಸಿದ ಬಗ್ಗೆ ಬಿಜೆಪಿ ನಾಯಕಿ ತಾರಾ ಅವರು ಬೇಸರ ವ್ಯಕ್ತಪಡಿಸಿ, ರಾಜೀನಾಮೆಗೆ ಒತ್ತಾಯಿಸಿದ್ದಾರೆ.

    ವಿಧಾನಸಭೆ ಸದನದಲ್ಲಿ ಅತ್ಯಾಚಾರ ಸಂತ್ರಸ್ತರನ್ನು ಅತ್ಯಂತ ಹಗುರವಾಗಿ ಪರಿಗಣಿಸಿ, ಅತ್ಯಾಚಾರದ ವಿಚಾರಣೆಯನ್ನು ಹಾಸ್ಯ ಪ್ರಸಂಗವೆಂಬಂತೆ ಆಡಿರುವ ನಿಮ್ಮ ಮಾತುಗಳನ್ನು ಬಲವಾಗಿ ಖಂಡಿಸುತ್ತೇವೆ. ವಿಧಾನಸಭೆಯ ಅಧ್ಯಕ್ಷ ಸ್ಥಾನದಲ್ಲಿ ಕುಳಿತು, ಸದನದ ಸದಸ್ಯರ ಮಾತು, ನಡಾವಳಿಗಳನ್ನು ಘನತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಮರೆತು ನೀವು ಹೀಗೆ ಮಾತನಾಡಿರುವುದು ಬಹಳ ಖೇದಕರ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಸದನದಲ್ಲಿ ನಿಮ್ಮ ಆ ಮಾತುಗಳನ್ನು ತಮಾಷೆಯೆಂಬಂತೆ ನಗುತ್ತಾ ಆಸ್ವಾದಿಸಿದ ಸದನದ ಘನ ಸದಸ್ಯರ ಹೀನ ಮನಸ್ಥಿತಿ ಮತ್ತು ಇಂತಹದ್ದನ್ನು ಕಂಡೂ ಖಂಡಿಸದೇ ಉಳಿದ ಮಹಿಳಾ ಸದಸ್ಯರ ನಿಷ್ಕ್ರಿಯತೆ ಸಹ ಅಷ್ಟೇ ಖಂಡನೀಯ. ನೀವು ಆಡಿರುವ ಮಾತುಗಳಿಗೆ ಸದನದಲ್ಲಿ ಕ್ಷಮೆ ಕೇಳಬೇಕು. ಇಲ್ಲವೇ ರಾಜೀನಾಮೆ ನೀಡಬೇಕು. ನಿಮ್ಮಂತಹ ಅಸೂಕ್ಷ್ಮ ಮನಸ್ಸಿನ ಸಭಾಧ್ಯಕ್ಷರು ನಮ್ಮ ರಾಜ್ಯಕ್ಕೆ ಖಂಡಿತ ಬೇಡ ಎಂದು ತಿಳಿಸಿದ್ದಾರೆ.

    ರಮೇಶಣ್ಣನ ಬಗಗೆ ನನಗೆ ತುಂಬಾ ಹೆಮ್ಮೆ ಇದ್ದು, ಸದನದಲ್ಲಿ ಅವರ ತಾಯಿಯನ್ನು ನೆನೆದು ಬಾವುಕರಾಗಿದ್ದ ರಮೇಶಣ್ಣ ಇಂದಿಗೂ ಮಹಿಳೆಯರನ್ನು ಗೌರವಿಸುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ತಮ್ಮ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎಂದು ಹೇಳಿಕೆ ನೀಡಿರುವುದು ನಮಗೆ ತುಂಬಾ ಬೇಸರ ಮೂಡಿಸಿದೆ. ನಿಮ್ಮಿಂದ ಇಂತಹ ಮಹಿಳಾ ವಿರೋಧಿ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು ಅಣ್ಣ ಎಂದು ಖೇದ ವ್ಯಕ್ತಪಡಿಸಿದ್ದಾರೆ.

    50 ಕೋಟಿ ರೂ. ಸ್ಪೀಕರ್ ಅವರಿಗೆ ನೀಡಲಾಗಿದೆ ಎಂಬ ಆಡಿಯೋ ಕುರಿತು ಸದನದಲ್ಲಿ ಪ್ರಸ್ತಾಪ ಮಾಡಿದ್ದ ರಮೇಶ್ ಕುಮಾರ್ ಅವರು ಭಾವುಕರಾಗಿದ್ದರು. ಅಲ್ಲದೇ ನನ್ನ ಕುಟುಂಬ, ಬೆಂಬಲಿಗರು, ಪತ್ನಿ, ಮಕ್ಕಳಿಗೆ ನನ್ನ ಮುಖ ಹೇಗೆ ತೋರಿಸುವುದು ಎಂದು ಸ್ಪೀಕರ್ ನುಡಿದ್ದರು. ಆದರೆ ಎರಡು ಪಕ್ಷಗಳ ನಾಯಕರು ಸ್ಪೀಕರ್ ಅವರಿಗೆ ಬೆಂಬಲ ನೀಡಿ ನಿಮ್ಮನ್ನು ಬೀದಿಗೆ ತಂದಿಟ್ಟವರು ಎಂದು ಪರಸ್ಪರ ಆರೋಪ ಮಾಡಿದ್ದರು. ಇದಕ್ಕೆ ಉತ್ತರಿಸುವ ಸಂದರ್ಭದಲ್ಲಿ ರೇಪ್ ಸಂತ್ರಸ್ತೆಯ ಉದಾಹರಣೆ ನೀಡಿ ಸ್ಪೀಕರ್ ಅವರು ಚಾಟಿ ಬೀಸಿದ್ದರು.

    “ನನಗೆ ಹೆಂಗಸರ ಬಗ್ಗೆ ಬಹಳ ಗೌರವ ಇದೆ. ಅವರನ್ನು ಎಂದೂ ಅಗೌರವದಿಂದ ನಡೆಸಿಕೊಂಡಿಲ್ಲ” ಇತ್ಯಾದಿ ಮಾತುಗಳನ್ನು ದಯವಿಟ್ಟು ಆಡಬೇಡಿ. ಅಂತಹ ಯಾವ ಸಮರ್ಥನೆಗಳೂ ಬೇಡ. ನೀವು ಆಡಿರುವ ಮಾತು ಹೊಣೆಗೇಡಿತನದ ಮಾತು ಎನ್ನುವುದನ್ನು ಒಪ್ಪಿಕೊಂಡು ಕ್ಷಮೆ ಕೇಳಿ. ಇಲ್ಲವೆ ರಾಜಿನಾಮೆ ನೀಡಿ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv