Tag: ನಟಿ ಚಂದ್ರಿಕಾ

  • ಕಾರು – ಕ್ಯಾಂಟರ್ ಡಿಕ್ಕಿ: ಬಿಗ್ ಬಾಸ್ ಚಂದ್ರಿಕಾ ಪ್ರಾಣಾಪಾಯದಿಂದ ಪಾರು

    ಕಾರು – ಕ್ಯಾಂಟರ್ ಡಿಕ್ಕಿ: ಬಿಗ್ ಬಾಸ್ ಚಂದ್ರಿಕಾ ಪ್ರಾಣಾಪಾಯದಿಂದ ಪಾರು

    ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ, ನಟಿ ಚಂದ್ರಿಕಾ ಅವರ ಕಾರಿಗೆ ಕ್ಯಾಂಟರ್ ವಾಹನ ಡಿಕ್ಕಿಯಾದ ಘಟನೆ ವಸಂತನಗರದ ಅಂಬೇಡ್ಕರ್ ಭವನದ ಬಳಿ ಘಟನೆ ನಡೆದಿದೆ.

    ಚಂದ್ರಿಕಾ ಅವರು ಆರಮನೆ ಮೈದಾನದಲ್ಲಿ ಆಯೋಜನೆಗೊಂಡಿದ್ದ ಮದುವೆಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಕುರಿತು ಮಾಹಿತಿ ಪಡೆದ ಹೈಗ್ರೌಂಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಬಹುದಿನಗಳ ಬ್ರೇಕ್ ಬಳಿಕ ನಟಿ ಚಂದ್ರಿಕಾ ಬಿಗ್‍ಬಾಸ್ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಸಾಕಷ್ಟು ಅಭಿಮಾನಿಗಳನ್ನು ಚಂದ್ರಿಕಾ ಹೊಂದಿದ್ದು, ತಮ್ಮ ಗ್ಲಾಮರ್ ಮೂಲವೇ ಖ್ಯಾತಿ ಪಡೆದಿದ್ದಾರೆ.