Tag: ನಟಿ ಕಂಗನಾ ರನೌತ್

  • ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ ಕಂಗನಾ ರನೌತ್

    ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ ಕಂಗನಾ ರನೌತ್

    ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಶುಕ್ರವಾರ ಬೆಳಿಗ್ಗೆ ಒಡಿಶಾದ ಪವಿತ್ರ ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

    ತಮ್ಮ ಮುಂದಿನ ಧಾಕಾಡ್ ಸಿನಿಮಾದ ಚಿತ್ರೀಕರಣದಿಂದ ಕಂಗನಾ ಕೊಂಚ ಬಿಡುವು ಮಾಡಿಕೊಂಡಿದ್ದು, ಶುಕ್ರವಾರ ಮುಂಜಾನೆ 6 ಗಂಟೆಗೆ ದೇವಾಲಯಕ್ಕೆ ಭೇಟಿ ನೀಡಿಲಿರುವ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಖಾತೆಯಲ್ಲಿ ತಿಳಿಸಿದ್ದರು.

    ಸದ್ಯ ಇಂದು ದೇವಾಲಯಕ್ಕೆ ಭೇಟಿ ನೀಡಿದ ಅನುಭವ ಕುರಿತು ಕೆಲವೊಂದಷ್ಟು ಫೋಟೋಗಳನ್ನು ಕಂಗನಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಕಂಗನಾ, ಬಿಳಿ ಬಟ್ಟೆಯನ್ನು ಧರಿಸಿದ್ದು, ಅದಕ್ಕೆ ಸೂಟ್ ಆಗುವಂತಹ ಚಿನ್ನದ ಒಡವೆಗಳನ್ನು ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅವರ ಕರ್ಲಿ ಹೇರ್‍ನನ್ನು ಬನ್ ಮೂಲಕ ಅಚ್ಚುಕಟ್ಟಾಗಿ ಮೇಲಕ್ಕೆತ್ತಿ ಕಟ್ಟಿದ್ದಾರೆ. ಅವರ ಉಡುಗೆ ತೊಡುಗೆಯೂ ದೇವಾಲಯಕ್ಕೆ ಭೇಟಿ ನೀಡುವವರು ಧರಿಸುವಂತ ಉಡುಗೆಯಂತೆಯೇ ಎದ್ದು ಕಾಣಿಸುತ್ತದೆ.

    ಈ ಕುರಿತ ಫೋಟೋ ಶೇರ್ ಮಾಡಿಕೊಂಡಿರುವ ಕಂಗನಾ, ನಾವು ಯಾವಾಗಲೂ ಕೃಷ್ಣ ರಾಧ, ರುಕ್ಮಿಣಿ ಜೊತೆ ಇರುವುದನ್ನು ನೋಡಿದ್ದೇವೆ. ಆದರೆ ಪುರಿ ಜಗನ್ನಾಥ ದೇವಾಲಯದಲ್ಲಿ ಕೃಷ್ಣನನ್ನು ತನ್ನ ಸಹೋದರ ಬಲರಾಮ ಮತ್ತು ಅರ್ಜುನನ ಪತ್ನಿ ಸುಭದ್ರೆ ಜೊತೆ ಇರಿಸಲಾಗಿದೆ. ಅಲ್ಲದೆ ತನ್ನ ಹೃದಯ ಚಕ್ರದ ಮೂಲಕ ಈ ಸ್ಥಳ ಎಲ್ಲವನ್ನು ಗುಣಪಡಿಸುತ್ತದೆ ಮತ್ತು ಹಿತವಾದ ಅನುಭವ ನೀಡುತ್ತದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.