Tag: ನಟಿಯರು

  • ಹಿಜಬ್ ಕಾನೂನು ಉಲ್ಲಂಘನೆ – ಇರಾನ್‌ನಲ್ಲಿ 12 ನಟಿಯರಿಗೆ ನಿಷೇಧ

    ಹಿಜಬ್ ಕಾನೂನು ಉಲ್ಲಂಘನೆ – ಇರಾನ್‌ನಲ್ಲಿ 12 ನಟಿಯರಿಗೆ ನಿಷೇಧ

    ಟೆಹ್ರಾನ್: ಇರಾನ್‌ನಲ್ಲಿ (Iran) ಮಹಿಳೆಯರಿಗೆ ಕಡ್ಡಾಯವಾದ ಹಿಜಬ್ (Hijab) ಒಳಗೊಂಡ ಡ್ರೆಸ್ ಕೋಡ್ (Dress Code) ಅನ್ನು ಅನುಸರಿಸಲು ವಿಫಲರಾಗಿದ್ದಕ್ಕೆ 12 ನಟಿಯರನ್ನು ನಟನೆಯ ವೃತ್ತಿಯಿಂದ ನಿಷೇಧಿಸಿರುವುದಾಗಿ ಇರಾನ್‌ನ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

    ಕಾನೂನನ್ನು ಅನುಸರಿಸದವರಿಗೆ ಕೆಲಸ ಮಾಡಲು ಅನುಮತಿಸಲಾಗುವುದಿಲ್ಲ ಎಂದು ಇರಾನ್‌ನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವ ಮೊಹಮ್ಮದ್ ಮೆಹದಿ ಎಸ್ಮಾಯಿಲಿ ತಿಳಿಸಿದ್ದಾರೆ.

    ಇರಾನ್‌ನ ನಟಿಯರಾದ ತರನೆಹ್ ಅಲಿದೋಸ್ತಿ, ಕಟಾಯೂನ್ ರಿಯಾಹಿ, ಫತೇಮೆ ಮೊಟಮೆಡ್ ಅರಿಯಾ ಸೇರಿದಂತೆ 12 ನಟಿಯರು ಹಿಜಬ್ ಕಾನೂನನ್ನು ಉಲ್ಲಂಘಿಸುತ್ತಿದ್ದು, ಅವರಿಗೆ ಇನ್ನುಮುಂದೆ ಚಲನಚಿತ್ರಗಳಲ್ಲಿ ಪಾತ್ರಗಳನ್ನು ನಿರ್ವಹಿಸಲು ಅನುಮತಿಸಲಾಗುವುದಿಲ್ಲ ಎಂದು ಮಂಗಳವಾರ ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ.

    ಕಳೆದ ವರ್ಷ ಇರಾನ್‌ನಲ್ಲಿ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧಿತಳಾಗಿದ್ದ 22 ವರ್ಷದ ಕುರ್ದ್ ಮಹ್ಸಾ ಅಮಿನಿ ಪೊಲೀಸ್ ಕಸ್ಟಡಿಯಲ್ಲಿ ಸಾವಾಗಿತ್ತು. ಬಳಿಕ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು. ಈ ಸಂದರ್ಭ ಬಂಧಿಸಲ್ಪಟ್ಟಿದ್ದ ಸಾರ್ವಜನಿಕ ವ್ಯಕ್ತಿಗಳಲ್ಲಿ ಅಲಿದೂಸ್ತಿ ಮತ್ತು ರಿಯಾಹಿ ಕೂಡಾ ಸೇರಿದ್ದರು.

    ಇರಾನ್‌ನ ಮಹಿಳೆಯರ ಕಟ್ಟುನಿಟ್ಟಿನ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ್ದ ಆರೋಪದ ಮೇಲೆ ಮಹ್ಸಾ ಅಮಿನಿಯನ್ನು ಈ ಹಿಂದೆ ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಆಕೆಯ ಸಾವಾಗಿತ್ತು. ಈ ಹಿನ್ನೆಲೆ ಮಹಿಳೆಯರ ಕಟ್ಟುನಿಟ್ಟಿನ ಡ್ರೆಸ್ ಕೋಡ್ ಅನ್ನು ವಿರೋಧಿಸಿ ತಿಂಗಳುಗಳವರೆಗೆ ದೇಶಾದ್ಯಂತ ಭಾರೀ ಪ್ರತಿಭಟನೆ, ಗಲಭೆಗಳು ನಡೆದಿತ್ತು. ಇದನ್ನೂ ಓದಿ: ಹುಲಿ ಉಗುರಿನ ಸಂಕಷ್ಟ- ದರ್ಶನ್ ಮನೆಗೆ ಅರಣ್ಯಾಧಿಕಾರಿಗಳ ಭೇಟಿ

    ಇರಾನ್‌ನ 1979ರ ಇಸ್ಲಾಮಿಕ್ ಕ್ರಾಂತಿಯ ನಂತರ 1983 ರಿಂದ ಕುತ್ತಿಗೆ ಮತ್ತು ತಲೆಯನ್ನು ಮುಚ್ಚುವ ವಸ್ತ್ರವನ್ನು ಧರಿಸುವುದು ಮಹಿಳೆಯರಿಗೆ ಕಡ್ಡಾಯವಾಗಿದೆ. ಆದರೆ ಕಳೆದ ವರ್ಷದ ಈ ಸಾಮೂಹಿಕ ಪ್ರತಿಭಟನೆಗಳ ನಂತರ ಇರಾನ್‌ನಲ್ಲಿ ಮಹಿಳೆಯರು ಹಿಜಬ್ ಸೇರಿದಂತೆ ಡ್ರೆಸ್ ಕೋಡ್ ಅನ್ನು ಹೆಚ್ಚಾಗಿ ಉಲ್ಲಂಘಿಸುತ್ತಿದ್ದಾರೆ.

    ಹಿಜಬ್ ನಿಯಮಗಳನ್ನು ಉಲ್ಲಂಘಿಸುವ ಮಹಿಳೆಯರ ವಿರುದ್ಧ ಇರಾನ್ ಕಳೆದ ಕೆಲವು ತಿಂಗಳುಗಳಿಂದ ಕ್ರಮಗಳನ್ನು ಹೆಚ್ಚಿಸಿದೆ. ಸೆಪ್ಟೆಂಬರ್‌ನಲ್ಲಿ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸುವ ಮಹಿಳೆಯರಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡವನ್ನು ಹೆಚ್ಚಿಸುವ ಪರವಾಗಿ ಶಾಸಕರು ಮತ ಹಾಕಿದ್ದಾರೆ. ಇದನ್ನೂ ಓದಿ: 4 ಕೋಟಿ ಮೊತ್ತದ ಲ್ಯಾಂಬೊರ್ಗೀನಿ ಕಾರು ಖರೀದಿಸಿದ ಶ್ರದ್ಧಾ ಕಪೂರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಶ್‌ ಮೇಲೆ ಬಾಲಿವುಡ್‌ ನಟಿಯರ ಕಣ್ಣು.!

    ಯಶ್‌ ಮೇಲೆ ಬಾಲಿವುಡ್‌ ನಟಿಯರ ಕಣ್ಣು.!

    `ಕೆಜಿಎಫ್ 2′ ಚಿತ್ರವನ್ನು ಅಭಿಮಾನಿಗಳು ಅಪ್ಪಿ ಒಪ್ಪಿಕೊಂಡ ಮೇಲೆ  `ಕೆಜಿಎಫ್ 3ಗಾಗಿ’ ಫ್ಯಾನ್ಸ್ ಕಾಯ್ತಿದ್ದಾರೆ. ‌ʻಕೆಜಿಎಫ್ 3ʼಗಾಗಿ ಅಭಿಮಾನಿಗಳು ಅಷ್ಟೇ ಕಾಯ್ತಿರೋದಲ್ಲ, ಬಾಲಿವುಡ್‌ ನಟಿಯರು ಕಾಯ್ತಿದ್ದಾರೆ. ಯಶ್ ಮೇಲೆ ಬಾಲಿವುಡ್‌ ನಟಿಮಣಿಯರು ಕಣ್ಣಿಟ್ಟಿದ್ದಾರೆ.

    ಯಶ್ ನಟನೆಯ `ಕೆಜಿಎಫ್ 2′ ಬ್ಲಾಕ್ ಬಸ್ಟರ್ ಚಿತ್ರದ ಬಳಿಕ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಈಗಾಗಲೇ ‘ಕೆಜಿಎಫ್ 3′ ಪ್ರಾಜೆಕ್ಟ್ ಬಗ್ಗೆ ಅನೌನ್ಸ್ ಮಾಡಿದ್ದಾರೆ. ಸಂದರ್ಶನದಲ್ಲಿವೊಂದರಲ್ಲಿ `ಕೆಜಿಎಫ್ 3′ ಸಿನಿಮಾ ಸೆಟ್ಟೇರುವ ಬಗ್ಗೆ ಸುಳಿವು ನೀಡಿದ್ದರು. ಯಶ್ ಹಾಗೂ ಪ್ರಶಾಂತ್ ನೀಲ್ ಸೃಷ್ಟಿಸಿದ ನರಾಚಿ ಕೋಟೆಯ ಚರಿತ್ರೆ ಕೇವಲ ಕರ್ನಾಟಕಕ್ಕಷ್ಟೇ ಅಲ್ಲ. ಇಡೀ ವಿಶ್ವವೇ ಇಷ್ಟಪಟ್ಟಿತ್ತು. ದೇಶದ ಮೂಲೆ ಮೂಲೆಯಲ್ಲೂ ರಾಕಿಭಾಯ್‌ನ ನೋಡಿ ಮೆಚ್ಚಿಕೊಂಡಿದ್ದರು. `ಕೆಜಿಎಫ್ 2′ ಆರ್ಭಟ ನೋಡಿ ಶಾಕ್ ಆಗಿರುವ ಬಾಲಿವುಡ್ ಮಂದಿ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ. ಈ ಕಾರಣಕ್ಕೆ ಎಲ್ಲರ ಕಣ್ಣು `ಕೆಜಿಎಫ್ ಚಾಪ್ಟರ್ 3′ ಸಿನಿಮಾ ಮೇಲಿದೆ. ಅದರಲ್ಲೂ ಬಾಲಿವುಡ್ ಸ್ಟಾರ್ ನಟಿಯರು `ಕೆಜಿಎಫ್ 3’ ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ. ಇದನ್ನೂ ಓದಿ:ದಿಗಂತ್ ಬಾಳಲ್ಲಿ ನಡೀತು ಮತ್ತೊಂದು ದುರಂತ

    `ಆರ್‌ಆರ್‌ಆರ್’, `ಪುಷ್ಪ’ ಹಾಗೂ `ಕೆಜಿಎಫ್ 2′ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿತ್ತು. ಈ ಬಿರುಗಾಳಿಯನ್ನು ನೋಡಿದ ಬಳಿಕ ಬಾಲಿವುಡ್ ನಟಿಯರು `ಕೆಜಿಎಫ್ 3′ ಸಿನಿಮಾದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇವರೆಲ್ಲರೂ ಬಾಲಿವುಡ್ ಚಿತ್ರರಂಗದ ಟಾಪ್ ನಟಿಯರು ಅನ್ನುವುದು ವಿಶೇಷ. ಈಗಾಗಲೇ ಚಿತ್ರದ ನಿರ್ಮಾಪಕರ ಜೊತೆ ಬಾಲಿವುಡ್ ನಟಿಯರು ಸಿನಿಮಾದಲ್ಲಿ ನಟಿಸುವ ಆಸೆ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.

    ಬಾಲಿವುಡ್ ನಟಿ ರವೀನಾ ಟಂಡನ್, ಸಂಜಯ್ ದತ್, ಮೌನಿ ರಾಯ್, ಇವರೆಲ್ಲರೂ ಕೆಜಿಎಫ್‌ನಲ್ಲಿ ನಟಿಸಿದ ಮೇಲೆ ಇವರ ಕೆರಿಯರ್ ಗ್ರಾಫ್ ಚೇಂಜ್ ಆಗಿದೆ. ಹಾಗಾಗಿ ಬಾಲಿವುಡ್ ಚೆಲುವೆಯರು ʻಕೆಜಿಎಫ್ ಚಾಪ್ಟರ್ 3ʼನಲ್ಲಿ ನಟಿಸಲು ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ.

    Live Tv

  • ನಟಿಯರು, ಮಹಿಳಾ ಜರ್ನಲಿಸ್ಟ್‌ಗಳಿಗೆ ಹೊಸ ಧಾರ್ಮಿಕ ಮಾರ್ಗಸೂಚಿ ಹೊರಡಿಸಿದ ತಾಲಿಬಾನ್‌

    ನಟಿಯರು, ಮಹಿಳಾ ಜರ್ನಲಿಸ್ಟ್‌ಗಳಿಗೆ ಹೊಸ ಧಾರ್ಮಿಕ ಮಾರ್ಗಸೂಚಿ ಹೊರಡಿಸಿದ ತಾಲಿಬಾನ್‌

    ಕಾಬೂಲ್‌: ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತವು ಧಾರ್ಮಿಕ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದು, ಟಿವಿ ವಾಹಿನಿಗಳು ನಟಿಯರಿರುವ ನಾಟಕಗಳು ಹಾಗೂ ಮಹಿಳೆಯರು ಬಳಸುವ ಸೋಪುಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ತೋರಿಸುವುದಕ್ಕೆ ನಿರ್ಬಂಧ ವಿಧಿಸಿದೆ.

    ಟಿವಿ ವಾಹಿನಿಗಳ ಮಹಿಳಾ ಪತ್ರಕರ್ತರು ಇಸ್ಲಾಮಿಕ್‌ ಹಜೀಬ್‌ಗಳನ್ನು ಧರಿಸಿ ಸುದ್ದಿಗಳನ್ನು ಓದಬೇಕು. ಅಲ್ಲದೇ ವಾಹಿನಿಗಳ ಪ್ರವಾದಿ ಮೊಹಮ್ಮದ್‌ ಅಥವಾ ಇತರ ಪೂಜ್ಯ ವ್ಯಕ್ತಿಗಳನ್ನು ತೋರಿಸುವ ಚಲನಚಿತ್ರಗಳು, ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಎಂದು ತಾಲಿಬಾನ್‌ ಸಚಿವಾಲಯವು ಸೂಚಿಸಿದೆ. ಇದನ್ನೂ ಓದಿ: ಚಹರ್ ಸಿಕ್ಸ್‌ಗೆ ಸೆಲ್ಯೂಟ್ ಹೊಡೆದ ರೋಹಿತ್

    ಇಸ್ಲಾಮಿಕ್‌ ಹಾಗೂ ಅಫ್ಘಾನ್‌ ಮೌಲ್ಯಗಳನ್ನು ಉಲ್ಲಂಘಿಸುವ ಯಾವುದೇ ಸಿನಿಮಾ ಅಥವಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಖಡಕ್‌ ಸೂಚನೆ ನೀಡಲಾಗಿದೆ. ಇವು ನಿಯಮಗಳಲ್ಲ. ಆದರೆ ಧಾರ್ಮಿಕ ಮಾರ್ಗಸೂಚಿಗಳು ಎಂದು ಸಚಿವಾಲಯದ ವಕ್ತಾರ ಹಕಿಫ್‌ ಮೊಹಜಿರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಲಿಂಗ ತಾರತಮ್ಯಕ್ಕೆ ಬ್ರೇಕ್‌ – ಕೇರಳ ಶಾಲೆಯಲ್ಲಿ ಒಂದೇ ವಿನ್ಯಾಸದ ಸಮವಸ್ತ್ರ

    ಅಮೆರಿಕವು ತನ್ನ ಸೈನ್ಯವನ್ನು ಅಫ್ಘಾನಿಸ್ತಾನದಿಂದ ವಾಪಸ್‌ ಕರೆಸಿಕೊಂಡ ನಂತರ ಇಡೀ ದೇಶವನ್ನು ತಾಲಿಬಾನಿಗಳು ನಿಯಂತ್ರಣಕ್ಕೆ ತೆಗೆದುಕೊಂಡರು. ನಂತರ ಇಸ್ಲಾಮಿಕ್‌ ಸಾಂಪ್ರದಾಯಿಕ ನಿಯಮಗಳನ್ನು ಜನರ ಮೇಲೆ ಹೇರಲಾಗುತ್ತಿದೆ. ಮಹಿಳೆಯರಿಗಿದ್ದ ಎಲ್ಲಾ ಬಗೆಯ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ.

  • ಚಿತ್ರರಂಗದ ಉದಯೋನ್ಮುಖ ಮೇಕಪ್ ಕಲಾವಿದೆ ಶ್ವೇತ ಸುಧಿ

    ಚಿತ್ರರಂಗದ ಉದಯೋನ್ಮುಖ ಮೇಕಪ್ ಕಲಾವಿದೆ ಶ್ವೇತ ಸುಧಿ

    ತ್ತೀಚಿನ ದಿನಗಳಲ್ಲಿ ಮೇಕಪ್ ಇಲ್ಲದೆ ಹೊರಗೆ ಹೋಗುವವರ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಸಿನಿಮಾ ಸೀರಿಯಲ್ ಆರ್ಟಿಸ್ಟ್ ಮೇಕಪ್ ಇಲ್ಲದೇ ಹೊರಗೆ ಕಾಲಿಡೋದಿಲ್ಲ ಅನ್ನೋದಂತು ಸುಳ್ಳಲ್ಲ. ಸ್ಟಾರ್ ನಟ-ನಟಿಯರಂತೂ ಪರ್ಸನಲ್ ಮೇಕಪ್ ಕಲಾವಿದರನ್ನ ತಮ್ಮ ಜೊತೆ ಇಟ್ಟುಕೊಂಡಿರುತ್ತಾರೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಮೇಕಪ್ ಕಲಾವಿದರಿಗೂ ಬೇಡಿಕೆ ಹೆಚ್ಚಾಗುತ್ತಿದ್ದು. ಮೇಕಪ್ ಕೋರ್ಸ್ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈಗಾಗಲೇ ಹಲವಾರು ಮೇಕಪ್ ಕಲಾವಿದರು ತಮ್ಮದೇ ವಿಭಿನ್ನ ಸ್ಟೈಲ್ ಮೂಲಕ ಖ್ಯಾತಿಯನ್ನು ಗಳಿಸುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಉದಯೋನ್ಮುಖ ಮೇಕಪ್ ಕಲಾವಿದೆ ಶ್ವೇತ ಸುಧಿ.

    ಮೇಕಪ್ ಕಲಾವಿದೆಯಾಗಿ ಹೆಸರು ಮಾಡಬೇಕೆಂಬ ಕನಸಿಟ್ಟುಕೊಂಡು ಮೇಕಪ್ ಕೋರ್ಸ್ ಮಾಡಿ ಹಂತ ಹಂತವಾಗಿ ಬೆಳೆಯುತ್ತಿರುವ ಪ್ರತಿಭೆ ಶ್ವೇತ ಸುಧಿ. ಮೂಲತಃ ಬೆಂಗಳೂರಿನ ದೇವನಹಳ್ಳಿಯವರಾದ ಇವರು, ಮೇಕಪ್ ಲೋಕದಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಿರುವ ಕಲಾವಿದೆ. ಮೇಕಪ್ ಪ್ಯಾಷನ್ ಸೆಳೆತಕ್ಕೆ ಒಳಗಾಗಿ ಖಾಸಗಿ ಕಂಪನಿಯ ಕೆಲಸ ಬಿಟ್ಟು ಮೇಕಪ್ ಕೋರ್ಸ್ ಮುಗಿಸಿ ತಮ್ಮದೇ ಬದುಕು ಕಟ್ಟಿಕೊಂಡಿದ್ದಾರೆ. ಕಳೆದ ಮೂರುವರೆ ವರ್ಷದಿಂದ ಸ್ವತಂತ ಮೇಕಪ್ ಕಲಾವಿದೆಯಾಗಿ ಸಿನಿಮಾ ಹಾಗೂ ಸೀರಿಯಲ್ ಆರ್ಟಿಸ್ಟ್ ಗಳ ನೆಚ್ಚಿನ ಮೇಕಪ್ ಕಲಾವಿದೆಯಾಗಿ ಖ್ಯಾತಿಗಳಿಸಿಕೊಂಡಿದ್ದಾರೆ ಶ್ವೇತ ಸುಧಿ.

    ಇಂದು ತಮ್ಮದೇ ಐಡೆಂಟಿಟಿ ಹೊಂದಿರುವ ಶ್ವೇತ ಸುಧಿ ಆರಂಭಿಕ ದಿನಗಳು ಸುಲಭದ ಹಾದಿಯಾಗಿರಲಿಲ್ಲ. ಈ ಕುರಿತು ಶ್ವೇತ ಸುಧಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮೇಕಪ್ ಕೋರ್ಸ್ ಮುಗಿಸಿದ ನಂತರ ಕೆಲಸ ಸಿಗುತ್ತೆ, ಗ್ರಾಹಕರು ಸಿಗುತ್ತಾರೆ ಎಂಬ ಗ್ಯಾರಂಟಿ ಇರೋದಿಲ್ಲ. ಆರಂಭಿಕ ದಿನಗಳಲ್ಲಿ ನನ್ನ ಜೊತೆ ಕೋರ್ಸ್ ಮಾಡಿದವರೆಲ್ಲ ಬೇರೆ ಪ್ರೊಫೆಷನ್ ನೋಡಿಕೊಂಡರು. ಆದರೆ ನನಗೆ ಇದೇ ಪ್ರೊಫೆಷನ್ ನಲ್ಲಿ ಬೆಳೆಯಬೇಕು ಎಂಬ ಆಸೆ ಇತ್ತು. ಅಲ್ಲೊಂದು ಇಲ್ಲೊಂದು ಆಫರ್ ಸಿಕ್ಕಾಗ ನಾನೇ ಟ್ರಾವೆಲ್ ಮಾಡಿಕೊಂಡು ಹೋಗಿ ಮೇಕಪ್ ಮಾಡಿ ಅವರು ಕೊಟ್ಟಷ್ಟು ಹಣ ತೆಗೆದುಕೊಳ್ಳುತ್ತಿದ್ದೆ. ಹಾಗಂತ ಗುಣಮಟ್ಟದಲ್ಲಿ ನಾನು ಯಾವುದೇ ಹೊಂದಾಣಿಕೆ ಮಾಡಿಕೊಳ್ಳುತ್ತಿರಲಿಲ್ಲ. ಉತ್ತಮ ಗುಣಮಟ್ಟದ ಮೇಕಪ್ ಕಿಟ್ ಗಳನ್ನೇ ಬಳಸುತ್ತಿದ್ದೆ. ಒಂದಷ್ಟು ತಿಂಗಳುಗಳ ಏಳುಬೀಳಿನ ನಂತರ ನನ್ನ ಕೆಲಸದ ಗುಣಮಟ್ಟ ನೋಡಿ ಆಫರ್ ಗಳು ಬರಲಾರಂಭಿಸಿದವು. ಈಗ ವರ್ಷದಲ್ಲಿ ಮುನ್ನೂರು ದಿನವಾದರೂ ಬಿಡುವಿಲ್ಲದೆ ಕೆಲಸ ಮಾಡುತ್ತೇನೆ ಎಂದು ತಾವು ಬೆಳೆದು ಬಂದ ಹಾದಿಯನ್ನು ಮೆಲುಕು ಹಾಕುತ್ತಾರೆ ಶ್ವೇತ ಸುಧಿ.

    ಸಿನಿಮಾ, ಸೀರಿಯಲ್ ಆರ್ಟಿಸ್ಟ್ ಗಳಿಗಷ್ಟೇ ಮೇಕಪ್ ಮಾಡಬೇಕು ಎಂದೇನೂ ಆಸೆಯಿಲ್ಲ. ಒಟ್ಟಿನಲ್ಲಿ ಮೇಕಪ್ ಮಾಡುತ್ತಿರಬೇಕು ಹೊಸ ಹೊಸ ಪ್ರಯತ್ನ ಮಾಡಬೇಕು ಎನ್ನೋದಷ್ಟೇ ನನ್ನ ಆಸೆ ಎನ್ನುವ ಇವರು, ತಮ್ಮದೇ ಸಿಗ್ನೇಚರ್ ಲುಕ್ ಕ್ರಿಯೇಟ್ ಮಾಡಬೇಕು ಎಂಬ ಬಹುದೊಡ್ಡ ಕನಸಿಟ್ಟುಕೊಂಡಿದ್ದಾರೆ. ಇನ್ನು ಬಿಡುವಿಲ್ಲದೆ ಕೆಲಸದ ನಡುವೆಯೂ ಮೇಕಪ್ ಕಲಿಕೆಯಲ್ಲಿ ಆಸಕ್ತಿ ಇರುವವರಿಗೆ ತರಗತಿಗಳನ್ನು ಕೂಡ ತೆಗೆದುಕೊಳ್ಳುತ್ತಾರೆ. ನಿರಂತರ ಕಲಿಕೆ, ತಾಳ್ಮೆ, ಹೊಸತನದಿಂದ ಸ್ವತಂತ್ರ ಮೇಕಪ್ ಕಲಾವಿದೆಯಾಗಿ ಹೆಸರು ಗಳಿಸಿರುವ ಶ್ವೇತ ಸುಧಿ ಇಂದು ಚಿತ್ರರಂಗದ ಬೇಡಿಕೆಯ ಮೇಕಪ್ ಕಲಾವಿದೆಯಾಗಿ ಬೆಳೆಯುತ್ತಿದ್ದಾರೆ.

  • ನಟಿಮಣಿಯರ ಮಾಲ್ಡಿವ್ಸ್ ಟ್ರಿಪ್ ರಹಸ್ಯ ರಿವೀಲ್ – ಷರತ್ತುಗಳು ಅನ್ವಯ, ರೆಸಾರ್ಟ್‍ಗಳಿಂದ ಫ್ರೀ ಟಿಕೆಟ್

    ನಟಿಮಣಿಯರ ಮಾಲ್ಡಿವ್ಸ್ ಟ್ರಿಪ್ ರಹಸ್ಯ ರಿವೀಲ್ – ಷರತ್ತುಗಳು ಅನ್ವಯ, ರೆಸಾರ್ಟ್‍ಗಳಿಂದ ಫ್ರೀ ಟಿಕೆಟ್

    ಬೆಂಗಳೂರು: ಮಾಲ್ಡಿವ್ಸ್ ಕಡಲ ಕಿನಾರೆಯಲ್ಲಿ ನಟಿ ಮಣಿಯರ ದಂಡೇ ಕಾಣುತ್ತಿದ್ದು, ಬಹುತೇಕ ನಟಿಯರ ಸಾಮಾಜಿಕ ಜಾಲತಾಣಗಳಲ್ಲಿ ಅವೇ ಚಿತ್ರಗಳು ತುಂಬಿಕೊಂಡಿವೆ. ತುಂಡುಡುಗೆ ತೊಟ್ಟು ಪೋಸ್ ನೀಡಿದ ಚಿತ್ರಗಳು ಹುಡುಗರ ಹಾರ್ಟ್ ಬ್ರೇಕ್ ಮಾಡಿವೆ. ಇದರೊಂದಿಗೆ ಉಳಿದೆಲ್ಲ ಪ್ರವಾಸಿ ತಾಣಗಳನ್ನು ಬಿಟ್ಟು ಇದ್ದಕ್ಕಿಂತೆ ಎಲ್ಲ ನಟಿಯರು ಮಾಲ್ಡಿವ್ಸ್ ಗೆ ತೆರಳು ಕಾರಣವೇನು ಎಂಬ ಯೋಚನೆ ಸಹ ತಲೆಯಲ್ಲಿ ಓಡುತ್ತಿದೆ. ಇದಕ್ಕೆ ಇದೀಗ ಉತ್ತರ ಸಿಕ್ಕಿದೆ, ಇಲ್ಲಿದೆ ನೋಡಿ ಅಸಲಿ ಸತ್ಯ.

     

    View this post on Instagram

     

    A post shared by Shanvi sri (@shanvisri)

    ಬಹುತೇಕ ನಟಿಯರ ಸಾಮಾಜಿಕ ಜಾಲತಾಣಗಳಲ್ಲಿ ಶುಭ್ರ ಆಕಾಶ, ನೀಲಿ ನೀರಿನ ಸಮುದ್ರ, ತುಂಡುಡುಗೆ ತೊಟ್ಟು ಮರಳಿನ ಮೇಲೆ ಮಲಗಿ ಸೂರ್ಯನ ಕಾಂತಿಗೆ ಮೈವೊಡ್ಡಿದ ಚಿತ್ರಗಳು ರಾರಾಜಿಸುತ್ತಿವೆ. ಇದೇನು ಎಂದೂ ಇಲ್ಲದ ಮಾಲ್ಡಿವ್ಸ್ ಪ್ರೇಮ ಇದ್ದಕ್ಕಿದ್ದಂತೆ ಇಷ್ಟೋಂದು ಪ್ರಮಾಣದಲ್ಲಿ ನಟಿ ಮಣಿಯರಿಗೆ ಬಂದಿದ್ದೇಕೆ ಎಂಬುದು ಹಲವರ ಪ್ರಶ್ನೆಯಾಗಿತ್ತು ಸಹ.

    ಇದೀಗ ಇದಕ್ಕೆ ಉತ್ತರ ಸಿಕ್ಕಿದ್ದು, ಇದರ ಹಿಂದೆ ಮಾಲ್ಡಿವ್ಸ್ ಪ್ರವಾಸೋದ್ಯಮದ ಕೆಲಸ ಕಾಣತೊಡಗಿದೆ. ಅಂದರೆ ಈ ನಟಿಮಣಿಯರು ಮಾಲ್ಡಿವ್ಸ್ ನಲ್ಲಿ ಮಜಾ ಮಾಡುತ್ತಿರುವುದು ಇವರ ಸ್ವಂತ ಖರ್ಚಿನಿಂದಲ್ಲ ಬದಲಿಗೆ ರೆಸಾರ್ಟ್ ಮಾಲೀಕರ ಕರಾಮತ್ತಿನಿಂದ. ಹೌದು ದ್ವೀಪ ರಾಷ್ಟ್ರವಾಗಿರುವ ಮಾಲ್ಡಿವ್ಸ್ ಮೂಲ ಆದಾಯ ಪ್ರವಾಸೋದ್ಯಮ. ಆದರೆ ಕೊರೊನಾ ವೈರಸ್‍ನಿಂದಾಗಿ ಎಲ್ಲ ಕ್ಷೇತ್ರಗಳಂತೆ ಪ್ರವಾಸೋದ್ಯಮದ ಮೇಲೂ ಹೊಡೆತ ಬಿದ್ದಿದೆ. ಇತ್ತೀಚೆಗೆ ವಿದೇಶಿ ಪ್ರವಾಸಕ್ಕೆ ಅನುಮತಿ ನೀಡಿದರೂ ಕೊರೊನಾ ಹಿನ್ನೆಲೆ ಯಾರೂ ಹೋಗುತ್ತಿಲ್ಲ. ಹೀಗಾಗಿ ಅಲ್ಲಿನ ಟೂರಿಸಂ ನೆಲಕಚ್ಚಿದೆ.

    ಕುಂಠಿತವಾಗಿರುವ ಪ್ರವಾಸೋದ್ಯಮವನ್ನು ಮೇಲೆತ್ತಲೇಬೇಕು ಎಂಬ ಉದ್ದೇಶದಿಂದ ಅಲ್ಲಿನ ರೆಸಾರ್ಟ್ ಮಾಲೀಕರು ಇನ್ನಿಲ್ಲದ ಪ್ಲಾನ್ ಮಾಡಿದ್ದಾರೆ. ಇದರ ಭಾಗವಾಗಿ ಕಂಡಿದ್ದು, ನಮ್ಮ ಭಾರತೀಯ ಸಿನಿಮಾ ನಟ, ನಟಿಯರು. ಜಾಹೀರಾತುಗಳು ವರ್ಕೌಟ್ ಆಗಲ್ಲ ಎಂಬುದನ್ನು ಅರಿತ ಮಾಲೀಕರು ಮ್ಯಾನೇಜರ್, ಪಿಆರ್ ಗಳ ಮೂಲಕ ಸ್ಯಾಂಡಲ್‍ವುಡ್, ಬಾಲಿವುಡ್, ಟಾಲಿವುಡ್ ಹೀಗೆ ವಿವಿಧ ಭಾಷೆಗಳ ಸಿನಿಮಾಗಳ ನಟಿಯರನ್ನು ಸಂಪರ್ಕಿಸಿ ಮಾಲ್ಡಿವ್ಸ್ ಗೆ ಆಹ್ವಾನಿಸಿದ್ದಾರೆ. ಈ ಗುಟ್ಟನ್ನು ಬಾಲಿವುಡ್ ನಟರೊಬ್ಬರು ರಟ್ಟು ಮಾಡಿದ್ದು, ಬಾಲಿವುಡ್‍ನಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

     

    View this post on Instagram

     

    A post shared by disha patani (paatni) (@dishapatani)

    ಆಫರ್ ಏನು?
    ಡಜನ್‍ಗಟ್ಟಲೇ ನಟಿಯರನ್ನು ಆಹ್ವಾನಿಸಿರುವ ರೆಸಾರ್ಟ್ ಮಾಲೀಕರು ತಾರೆಯರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ಆಫರ್ ಮಾಡಿದ್ದಾರೆ. ಪ್ರಯಾಣ ವೆಚ್ಚ, ಊಟ-ವಸತಿ, ಶಾಪಿಂಗ್ ಸೇರಿದಂತೆ ಎಲ್ಲವನ್ನೂ ಆಯೋಜಕರೇ ಒದಗಿಸಿ ತಂಡೋಪತಂಡವಾಗಿ ನಟಿಮಣಿಯರನ್ನು ಕರೆಸಿಕೊಂಡಿದ್ದಾರೆ. ಇದರೊಂದಿಗೆ ಕೆಲ ಷರತ್ತುಗಳನ್ನು ಸಹ ವಿಧಿಸಿದ್ದಾರೆ. ಈ ಮೂಲಕ ಪ್ರವಾಸೋದ್ಯಮ ಮೇಲೆತ್ತಲು ಪ್ರಯತ್ನಿಸಿದ್ದಾರೆ.

     

    View this post on Instagram

     

    A post shared by Sonakshi Sinha (@aslisona)

    ಷರತ್ತುಗಳು ಏನ್ ಗೊತ್ತಾ?
    ನಟಿ ಮಣಿಯರಿಗೆ ಊಟ, ವಸತಿ, ಶಾಪಿಂಗ್ ಜೊತೆಗೆ ಪ್ರತ್ಯೇಕ ಫೋಟೋಗ್ರಾಫರ್‍ಗಳನ್ನೂ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಷರತ್ತುಗಳನ್ನೂ ವಿಧಿಸಿದ್ದಾರೆ. ಪ್ರತಿ ದಿನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ 2-3 ಫೋಟೋ ಅಪ್‍ಲೋಡ್ ಮಾಡಬೇಕು. ಪ್ರತಿ ಚಿತ್ರಗಳಲ್ಲಿಯೂ ಹಾಟ್, ಗ್ಲಾಮರ್ ಆಗಿ ಕಾಣಿಸಿಕೊಳ್ಳಬೇಕು. ಇದರ ಜೊತೆಗೆ ಪ್ರತಿ ಫೋಟೋಗೆ ಲೊಕೇಶನ್ ಜೊತೆಗೆ ರೆಸಾರ್ಟ್ ಹೆಸರು ಹಾಕಬೇಕು. ಆದರೆ ಈ ಗುಟ್ಟು ಯಾರಿಗೂ ತಿಳಿಯಬಾರದು. ಈ ಮೂಲಕ ಮಾಲ್ಡಿವ್ಸ್ ಕೊರೊನಾ ಫ್ರೀ, ಇಲ್ಲಿ ಮಸ್ತ್ ಮಜಾ ಮಾಡಬಹುದು. ಕೊರೊನಾ ಬಂದ ನಂತರ ಮೊದಲ ವಿದೇಶ ಪ್ರವಾಸ ಎಂಬುದನ್ನು ಸಾಬೀತು ಪಡಿಸಬೇಕು ಎಂದು ನಟಿಮಣಿಯರಿಗೆ ತಿಳಿಸಿದ್ದಾರೆ. ಈ ಎಲ್ಲ ಷರತ್ತುಗಳಿಗೆ ಒಪ್ಪಿರುವ ತಾರೆಯರು ತಂಡೋಪತಂಡವಾಗಿ ತೆರಳಿ, ಮಜಾ ಮಾಡುತ್ತಿದ್ದಾರೆ. ಜೊತೆಗೆ ಹಾಟ್ ಫೋಟೋಗಳನ್ನು ಹಾಕುತ್ತಿದ್ದಾರೆ.

    ಯಾರೆಲ್ಲ ಹೋಗಿದ್ದಾರೆ?
    ಸ್ಯಾಂಡಲ್‍ವುಡ್, ಬಾಲಿವುಡ್ ಸೇರಿದಂತೆ ಹಲವು ಮಂದಿ ಸಿನಿಮಾ ಕಲಾವಿದರು ಮಾಲ್ಡಿವ್ಸ್‍ಗೆ ತೆರಳಿದ್ದಾರೆ. ಈ ಪೈಕಿ ಖರ್ಚು ಮಾಡಿ ಹೋದವರು ಮತ್ತು ಉಚಿತವಾಗಿ ಹೋದವರ ಬಗ್ಗೆ ವಿವರ ಸಿಕ್ಕಿಲ್ಲ. ಆದರೆ ಸ್ಯಾಂಡಲ್‍ವುಡ್‍ನ ಶಾನ್ವಿ ಶ್ರೀವಾಸ್ತವ್, ಪ್ರಣಿತಾ, ಬಾಲಿವುಡ್‍ನ ರಾಕುಲ್ ಪ್ರೀತ್ ಸಿಂಗ್ ತಾಪ್ಸಿ ಪನ್ನು, ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ, ಇಲಿಯಾನಾ, ಮೌನಿ ರಾಯ್, ಟಾಲಿವುಡ್‍ನ ಸಮಂತಾ, ಕಾಜಲ್ ಅಗರ್‍ವಾಲ್ ಹೀಗೆ ಸಾಲು ಸಾಲು ನಟಿಯರು ವಿಮಾನ ಹತ್ತಿದ್ದಾರೆ.

     

    View this post on Instagram

     

    A post shared by Rakul Singh (@rakulpreet)

  • ಹೈ ಟೆಕ್ ವೇಶ್ಯಾವಾಟಿಕೆ- ಓರ್ವ ಸಿನಿಮಾ ನಟಿ ಅರೆಸ್ಟ್, ಮೂವರು ಧಾರಾವಾಹಿ ನಟಿಯರ ರಕ್ಷಣೆ

    ಹೈ ಟೆಕ್ ವೇಶ್ಯಾವಾಟಿಕೆ- ಓರ್ವ ಸಿನಿಮಾ ನಟಿ ಅರೆಸ್ಟ್, ಮೂವರು ಧಾರಾವಾಹಿ ನಟಿಯರ ರಕ್ಷಣೆ

    – ಗ್ರಾಹಕರ ಸೋಗಿನಲ್ಲಿ ವೇಶ್ಯಾವಾಟಿಕೆ ಅಡ್ಡೆಗೆ ನುಗ್ಗಿದ ಪೊಲೀಸರು
    – ಮೂವರಿಗೆ 10.50 ಲಕ್ಷ ವ್ಯವಹಾರ ಕುದುರಿಸಿದ್ದ ಪೊಲೀಸರು
    – 5 ಸ್ಟಾರ್ ಹೋಟೆಲ್‍ನಲ್ಲಿ ಹೈ ಟೆಕ್ ಸೆಕ್ಸ್ ದಂಧೆ

    ಮುಂಬೈ: ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದು, ಓರ್ವ ಸಿನಿಮಾ ನಟಿಯನ್ನು ಬಂಧಿಸಿದ್ದಾರೆ. ಅಲ್ಲದೆ ಮೂವರು ಧಾರಾವಾಹಿ ನಟಿಯರನ್ನು ರಕ್ಷಿಸಿದ್ದಾರೆ.

    ಗ್ರಾಹಕರ ಸೋಗಿನಲ್ಲಿ ಹೋಗಿ ಮುಂಬೈನ ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಅಪರಾಧ ವಿಭಾಗದ 11ನೇ ಯುನಿಟ್ ಪೊಲೀಸರು ದಾಳಿ ನಡೆಸಿದ್ದು, ಓರ್ವ ಸಿನಿಮಾ ನಟಿಯನ್ನು ಬಂಧಿಸಿದ್ದಾರೆ. ಅಲ್ಲದೆ ಮೂವರು ಧಾರಾವಾಹಿ ನಟಿಯರನ್ನು ರಕ್ಷಿಸಿದ್ದಾರೆ. ನಟಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲ. ಉಳಿದ ಮೂವರು ನಟಿಯರು ವಿವಿಧ ಧಾರಾವಾಹಿಗಳಲ್ಲಿ ಪಾತ್ರಗಳನ್ನು ನಿರ್ವಹಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ನಟಿಯರು ಹಾಗೂ ಬೆಳ್ಳಿ ಡ್ಯಾನ್ಸ್ ಮಾಡುವ ಹುಡುಗಿಯರು ಸೆಕ್ಸ್ ದಂಧೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ನಕಲಿ ಗ್ರಾಹಕರನ್ನು ಕಳುಹಿಸಿದ್ದು, ಮೂವರು ಮಹಿಳೆಯರಿಗೆ 10.50 ಲಕ್ಷ ರೂ. ವ್ಯವಹಾರ ಕುದುರಿಸಿ ನಟಿ ಮಣಿಯರಿಗೆ ಪೊಲೀಸರು ಬಲೆ ಬೀಸಿದ್ದಾರೆ.

    ಬಳಿಕ ಹಿರಿಯ ಇನ್‍ಸ್ಪೆಕ್ಟರ್ ಮಹೇಶ್ ತವಾಡೆ ಅವರ ನೇತೃತ್ವದ ತಂಡ ಗೋರೆಗಾಂವ್‍ನ 5 ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ ನಟಿಯರನ್ನು ಬಂಧಿಸಿದ್ದಾರೆ. ಐಪಿಸಿ ಹಾಗೂ ಅನೈತಿಕ ಕಳ್ಳಸಾಗಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ವನ್ರಾಯ್ ಪೊಲೀಸ್ ಠಾಣೆಯ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

  • ಜಮೀರ್‌ನನ್ನು ಯಾಕೆ ಬಂಧಿಸಿಲ್ಲ- ಸರ್ಕಾರಕ್ಕೆ ಪ್ರತಾಪ್ ಸಿಂಹ ಪ್ರಶ್ನೆ

    ಜಮೀರ್‌ನನ್ನು ಯಾಕೆ ಬಂಧಿಸಿಲ್ಲ- ಸರ್ಕಾರಕ್ಕೆ ಪ್ರತಾಪ್ ಸಿಂಹ ಪ್ರಶ್ನೆ

    ಮೈಸೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾಕೆ ಶಾಸಕ ಜಮೀರ್ ಅಹ್ಮದ್‍ನನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇವಲ ಕೆಲ ಸ್ಯಾಂಡಲ್‍ವುಡ್ ನಟಿಯರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಪ್ರಶಾಂತ್ ಸಂಬರಗಿ ನೇರವಾಗಿ ಹೆಸರಿಸಿರುವ ಶಾಸಕ ಜಮೀರ್ ಅಹ್ಮದ್‍ನನ್ನು ಬಂಧಿಸಿ ಯಾಕೆ ವಿಚಾರಣೆ ನಡೆಸುತ್ತಿಲ್ಲ, ಇದರ ಹಿಂದಿನ ಉದ್ದೇಶವೇನು ಎಂಬುದು ಅರ್ಥವಾಗುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

    ಪ್ರಶಾಂತ್ ಸಂಬರಗಿ ಹಲವರ ಹೆಸರು ಹೇಳಿದ್ದಾರೆ. ಈ ಪಟ್ಟಿಯಲ್ಲಿ ಜಮೀರ್ ಅಹಮ್ಮದ್ ಹೆಸರು ಸಹ ಇದೆ. ಈ ವರೆಗೆ ಜಮೀರ್ ಅಹಮ್ಮದ್ ರನ್ನ ಯಾಕೆ ಬಂಧಿಸಿಲ್ಲ. ಇದರ ಹಿಂದಿನ ಉದ್ದೇಶವೇನು? ತನಿಖಾಧಿಕಾರಿಗಳಿಗೆ ಪ್ರಶಾಂತ್ ಸಂಬರಗಿ ಆರೋಪಗಳ ಮೇಲೆ ಅನುಮಾನಗಳಿದ್ದರೆ ಅವರನ್ನೂ ತನಿಖೆಗೆ ಒಳಪಡಿಸಿ. ಅವರ ಆರೋಪಗಳಿಗೆ ಪೂರಕ ದಾಖಲೆಗಳಿದ್ದರೆ ಅದನ್ನು ಸಂಗ್ರಹಿಸಿಕೊಂಡು ತನಿಖೆ ಮುಂದುವರಿಸಿ ಎಂದು ಹೇಳಿದ್ದಾರೆ.

     

    ಪ್ರಶಾಂತ್ ಸಂಬರಗಿ ಯಾರ್ಯಾರ ಹೆಸರು ಹೇಳಿದ್ದಾರೆ. ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಿ, ಯಾರೋ ಒಬ್ಬಿಬ್ಬರು ಸಿನಿಮಾ ನಟಿಯರನ್ನು ಕೂಡಿ ಹಾಕಿ ವಿಚಾರಣೆ ನಡೆಸಿ ಕಳುಹಿಸಿದರೆ ಸರಿ ಆಗುವುದಿಲ್ಲ. ಈ ಪ್ರಕರಣ ಹೊರ ಬಂದಿದ್ದೇ ಇಂದ್ರಜಿತ್ ಲಂಕೇಶ್ ಅವರ ಧೈರ್ಯದ ನಿರ್ಧಾರದಿಂದ. ಹೀಗಾಗಿ ಅವರು ಹೇಳಿದ ಎಲ್ಲ ವಿಚಾರ ಹಾಗೂ ಮಜಲುಗಳಿಂದ ತನಿಖೆಯಾಗಬೇಕು ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ.

    ಡ್ರಗ್ಸ್ ವಿಚಾರದಲ್ಲಿ ರಾಜಕೀಯ ಪ್ರಭಾವ ಇರುವುದು ಸತ್ಯ. ಇಂತಹ ಪ್ರಕರಣಗಳಲ್ಲಿ ರಾಜಕೀಯ ಬೆರಸಿಕೊಳ್ಳುವುದೂ ಸಹಜ. ಆದರೆ ಗೃಹ ಮಂತ್ರಿಗಳು ಯಾವುದೇ ಪ್ರಭಾವಕ್ಕೆ ಮಣಿಯಲ್ಲ ಎಂದು ಹೇಳಿದ್ದಾರೆ ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ ಎಂದು ಪ್ರತಾಪ್ ಸಿಂಹ ಹೇಳಿದರು.

     

    ಇದು ಶಾಲಾ, ಕಾಲೇಜುಗಳಿಗೂ ಹಬ್ಬುತ್ತಿದ್ದು, ವಿದ್ಯಾರ್ಥಿಗಳು ಡ್ರಗ್ಸ್ ದಾಸರಾಗುತ್ತಿದ್ದಾರೆ. ಇದನ್ನು ಸೇವಿಸಿದರೆ ವಾಸನೆ ಸಹ ಬರುವುದಿಲ್ಲ. ಹೀಗಾಗಿ ಯುವಕರು ಹೆಚ್ಚು ಅಡಿಕ್ಟ್ ಆಗುತ್ತಿದ್ದಾರೆ. ಈ ಸಮಾಜದ ಪಿಡುಗನ್ನು ತೊಲಗಿಸಲು ಸಮಗ್ರ ತನಿಖೆ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

  • ನಟ, ನಟಿಯರು ಮಾತ್ರವಲ್ಲ ಯುವ ಪೀಳಿಗೆಯೂ ಡ್ರಗ್ಸ್ ಮಾಫಿಯಾದಲ್ಲಿದೆ: ಶ್ರೀರಾಮುಲು

    ನಟ, ನಟಿಯರು ಮಾತ್ರವಲ್ಲ ಯುವ ಪೀಳಿಗೆಯೂ ಡ್ರಗ್ಸ್ ಮಾಫಿಯಾದಲ್ಲಿದೆ: ಶ್ರೀರಾಮುಲು

    ದಾವಣಗೆರೆ: ಡ್ರಗ್ಸ್ ಮಾಫಿಯಾದಲ್ಲಿ ಕೇವಲ ಸ್ಯಾಂಡಲ್‍ವುಡ್ ನಟ, ನಟಿಯರು ಮಾತ್ರವಲ್ಲ ಯುವ ಪೀಳಿಯೇ ಇದೆ. ಈ ಡ್ರಗ್ಸ್ ಮಾಫಿಯಾವನ್ನು ನಮ್ಮ ಸರ್ಕಾರ ಬೇರು ಸಮೇತ ಕಿತ್ತು ಹಾಕಲಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

    ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ಅವರು, ಸ್ಯಾಂಡಲ್‍ವುಡ್ ನಟ, ನಟಿಯರು ಮಾತ್ರ ಡ್ರಗ್ಸ್ ಮಾಫಿಯಾದಲ್ಲಿಲ್ಲ. ಯುವ ಪೀಳಿಗೆಯೂ ಇದೆ. ನಮ್ಮ ಸರ್ಕಾರದ ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕಲಿದೆ. ತನಿಖೆ ಪ್ರಗತಿಯಲ್ಲಿದ್ದು, ಪೊಲೀಸರು ಆಳವಾದ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

    ನನ್ನ ಮಾತಿಗೆ ಈಗಲೂ ಬದ್ಧ
    ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಸಿಎಂ ಯಡಿಯೂರಪ್ಪ ಜಾರಿ ಮಾಡಲಿದ್ದಾರೆ. ವರದಿ ನೀಡಿ ಒಂದು ತಿಂಗಳು ಮಾತ್ರ ಆಗಿದೆ. ಅದರ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಸಿಎಂ ಬಳಿ ನಿಯೋಗ ಹೋಗಲಿದ್ದೇವೆ. ನಾಗಮೋಹನ್ ದಾಸ್ ವರದಿ ಸರ್ಕಾರದ ಮುಂದಿದೆ. ಕೋವಿಡ್ ಇರುವುದರಿಂದ ತಡೆಹಿಡಿಯಲಾಗಿದೆ. ಅದಷ್ಟು ಬೇಗ ಜಾರಿಗೊಳಿಸಲು ಸಭೆ ನಡೆಸಲಾಗುತ್ತಿದೆ. ಇಂದು ಸಭೆಯಲ್ಲಿ ಚರ್ಚೆ ಮಾಡಿ ಸರ್ಕಾರದ ಗಮನ ಸೆಳೆಯಲಿದ್ದೇವೆ. ವಾಲ್ಮೀಕಿ ಸಮಾಜಕ್ಕೆ ಶೇಕಡಾ 7.5ರಷ್ಟು ಮೀಸಲಾತಿ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ.

    ಈಗಾಗಲೇ ನ್ಯಾ.ನಾಗಮೋಹನ ದಾಸ್ ವರದಿ ನೀಡಿದ್ದಾರೆ. ಇದರಲ್ಲಿ ಶೇ.5ರಷ್ಟು ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಆದರೆ ಅದು ಶೇ.7.5 ರಷ್ಟು ಮೀಸಲಾತಿ ಹೆಚ್ಚಳ ಆಗಬೇಕು. ಈ ಹಿಂದೆ ನಾನು ನೀಡಿದ ಹೇಳಿಕೆಗೆ ಬದ್ಧನಾಗಿದ್ದೇನೆ. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಆಗಬೇಕು. ಅದು ಆಗದಿದ್ದರೆ, ಈ ಹಿಂದೆ ನಾನು ಮಾತು ನೀಡಿದಂತೆ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.

  • ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳು ಭಾಗಿಯಾಗಿದ್ರೂ ಶಿಸ್ತು ಕ್ರಮ: ಡಿಸಿಎಂ ಕಾರಜೋಳ

    ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳು ಭಾಗಿಯಾಗಿದ್ರೂ ಶಿಸ್ತು ಕ್ರಮ: ಡಿಸಿಎಂ ಕಾರಜೋಳ

    ಬಾಗಲಕೋಟೆ: ರಾಗಿಣಿ-ಪಾಗಿಣಿ ನನಗೆ ಗೊತ್ತಿಲ್ಲ. ಯಾರೇ ತಪ್ಪು ಮಾಡಿದರೂ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳು ಭಾಗಿಯಾಗಿದ್ದರೂ, ಈ ದೇಶದ ಕಾನೂನು ಎಲ್ಲರಿಗೂ ಒಂದೇ. ರಾಜಕಾರಣಿಗಳ ಮಕ್ಕಳಿರಲಿ, ಅಧಿಕಾರಿಗಳ ಮಕ್ಕಳೇ ಇರಲಿ, ಯಾರ ಮಕ್ಕಳಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಗೋವಿಂದ್ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಡ್ರಗ್ಸ್ ವಿವಾದದಲ್ಲಿ ಸಿಲುಕಿದವರ ಮೇಲೆ ಈಗಾಗಲೇ ಕ್ರಮ ಶುರುವಾಗಿದೆ. ತನಿಖೆ ನಡೆಯುತ್ತಿದೆ, ತನಿಖೆ ಮುಗಿಯುವವವರೆಗೆ ನಾವೇನೂ ಹೇಳಲು ಸಾಧ್ಯವಿಲ್ಲ. ತನಿಖೆ ಮುಗಿಯುವ ವರೆಗೂ ವಿಷಯವನ್ನು ಗೌಪ್ಯವಾಗಿ ಇಡಲಾಗುತ್ತದೆ. ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುವ ಮುನ್ನ ಎಲ್ಲರಿಗೂ ಮಾಹಿತಿ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಕಾರಜೋಳ ತಿಳಿಸಿದರು.

    ಇದು ಕೇವಲ ಕಾನೂನಿನಿಂದ ಬಗೆ ಹರಿಯುವ ಸಮಸ್ಯೆ ಅಲ್ಲ, ತನಿಖೆ ನಡೆಯುತ್ತಿದೆ. ಗೌಪ್ಯತೆ ಕಾಪಾಡಬೇಕಾಗುತ್ತದೆ. ಜನರಿಗೆ ಈ ಬಗ್ಗೆ ತಿಳುವಳಿಕೆ ಬರಬೇಕು. ಇಂತಹ ಚಟುವಟಿಕೆಗಳಿಂದ ಜೀವಕ್ಕೆ ಕುತ್ತು ಬರುತ್ತೆ. ಈ ರೀತಿ ನಡೆಯದಂತೆ ಇಡೀ ಸಮಾಜ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.

    ಡ್ರಗ್ಸ್ ಮಾಫಿಯಾದಿಂದ ಮೈತ್ರಿ ಸರ್ಕಾರ ಕೆಡವಿದರು ಎಂಬ ಕುಮಾರಸ್ವಾಮಿಯವರ ಆರೋಪದ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿ ಆರೋಪದಲ್ಲಿ ಸತ್ಯಾಂಶ ಇಲ್ಲ. ಅವರ ಆರೋಪ ಕೇವಲ ರಾಜಕೀಯ ಪ್ರೇರಿತ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.

  • ಅಕ್ಕನ ಕುರಿತು ಮಾತಾಡಿದ್ದು ದುಃಖ ತಂದಿದೆ- ಕಣ್ಣೀರು ಹಾಕಿದ ಇಂದ್ರಜಿತ್

    ಅಕ್ಕನ ಕುರಿತು ಮಾತಾಡಿದ್ದು ದುಃಖ ತಂದಿದೆ- ಕಣ್ಣೀರು ಹಾಕಿದ ಇಂದ್ರಜಿತ್

    – ಅವರ ಸಿದ್ಧಾಂತವೇ ಬೇರೆ, ಅವರದ್ದು ಸೈದ್ಧಾಂತಿಕ ಕೊಲೆ
    – ಚಿರು ಸರ್ಜಾ ಕುರಿತ ಹೇಳಿಕೆ ವಾಪಸ್ ಪಡೆದಿದ್ದೇನೆ

    ಬೆಂಗಳೂರು: ನನ್ನ ಅಕ್ಕ ಪತ್ರಕರ್ತೆ ಗೌರಿ ಲಂಕೇಶ್ ಸಾವಿನ ಕುರಿತು ಹೇಳಿಕೆ ನೀಡಿರುವುದು ತುಂಬಾ ನೋವು ತಂದಿದೆ ಎಂದು ಇಂದ್ರಜಿತ್ ಲಂಕೇಶ್ ಕಣ್ಣೀರು ಹಾಕಿದ್ದಾರೆ.

    ಈ ಕುರಿತು ಅವರ ನಿವಾಸದಲ್ಲಿ ಮಾತನಾಡಿರುವ ಇಂದ್ರಜಿತ್, ಅಕ್ಕ ಗೌರಿ ಲಂಕೇಶ್ ಅವರ ಬಗ್ಗೆ ಹೇಳಿಕೆ ನೀಡಿರುವುದು ತುಂಬಾ ದುಃಖ ತಂದಿದೆ. ಅವರ ತತ್ವ-ಸಿದ್ಧಾಂತ ಬೇರೆ ಇತ್ತು. ಅವರದ್ದು ಸೈದ್ಧಾಂತಿಕ ಕೊಲೆ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ.

    ಈ ಹಿಂದೆ ಒಬ್ಬ ನಟನ ಕುರಿತು ನಾನು ಹೇಳಿಕೆ ನೀಡಿದೆ. ಆದ್ರೆ ಸಾವಿನ ಬಳಿಕ ಈ ರೀತಿ ಹೇಳಬಾರದು ಎಂದು ನನ್ನ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದೇನೆ. ನಮ್ಮಕ್ಕನ ಸಾವು ಸಾವಲ್ಲವೇ, ನಮಗೂ ತಾಯಿ ಇಲ್ಲವೇ, ಅವರು ಕ್ಯಾನ್ಸರ್ ರೋಗಿ, ಅವರಿಗೆ ನೋವಾಗುವುದಿಲ್ಲವೇ, ನಮ್ಮಕ್ಕನನ್ನು ಸಿದ್ಧಾಂತ ದೃಷ್ಟಿಯಿಂದ ಹಲವರು ಒಪ್ಪದಿರಬಹುದು. ಆದರೆ ಒಂದು ಸಾವು ತರುವಷ್ಟೂ ಸಿದ್ಧಾಂತ ಕ್ರೂರಿಯಾ ಎಂದು ಪ್ರಮೋದ್ ಮುತಾಲಿಕ್ ಹೆಸರನ್ನು ಉಲ್ಲೇಖಿಸದೆ ತಿರುಗೇಟು ನೀಡಿದ್ದಾರೆ.

    ಸಿಸಿಬಿ ಪೊಲೀಸರ ಮೊದಲ ವಿಚಾರಣೆ ವೇಳೆ ಇಂದು ಮತ್ತಷ್ಟು ಸ್ಟೋಟಕ ಮಾಹಿತಿಗಳೊಂದಿಗೆ ಬರುವುದಾಗಿ ಹೇಳಿಕೆ ನೀಡಿದ್ದರು. ಎರಡನೇ ಹಂತದ ವಿಚಾರಣೆಯಲ್ಲಿ ನಟ- ನಟಿಯರ ಡ್ರಗ್ಸ್ ಡೀಲ್ ಸಂಬಂಧ ಟೆಕ್ನಿಕಲ್ ಎವಿಡೆನ್ಸ್ ಸಮೇತ ಹಾಜರಾಗುವುದಾಗಿ ಇಂದ್ರಜಿತ್ ಹೇಳಿದ್ದರು. ಅದರಂತೆ ಇಂದು ಇಂದ್ರಜಿತ್ ಹಾಜರಾಗುತ್ತಿದ್ದಾರೆ.

    ಸಾಕ್ಷ್ಯಾಧಾರಗಳನ್ನು ಏನೇನು ಕೊಟ್ಟಿದ್ದೇನೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ತನಿಖೆಗೆ ಸಹಾಯವಾಗಲು ಸಾಕಷ್ಟು ದಾಖಲೆ ಹಾಗೂ ಮಾಹಿತಿಗಳನ್ನು ನೀಡಿದ್ದೇನೆ. ಪೂರಕವಾಗಿ ಇನ್ನೂ ಹೆಚ್ಚಿನ ಮಾಹಿತಿ ಬೇಕಿರುವುದರಿಂದ ಇಂದು ಕರೆದಿದ್ದಾರೆ. ಹೀಗಾಗಿ ಮಾಹಿತಿ ನೀಡಲು, ಸಾಕ್ಷ್ಯಾಧಾರ ನೀಡಲು ತೆರಳುತ್ತಿದ್ದೇನೆ.

    ಸಿನಿಮಾ ಇಂಡಸ್ಟ್ರಿಗೆ ಕೆಟ್ಟ ಹೆಸರು ಬರುತ್ತದೆ ಎಂಬು ಹೇಳಲಾಗುತ್ತಿದೆ. ಆದರೆ ಈ ಹಿಂದೆ ಕೆಟ್ಟ ಹೆಸರು ಬರುತ್ತಿತ್ತು. ಇದನ್ನು ಸರಿ ಪಡಿಸುವ ಉದ್ದೇಶದಿಂದ, ಚಿತ್ರರಂಗವನ್ನು ಸ್ವಚ್ಛಗೊಳಿಸಬೇಕಿದೆ. ಇದರಲ್ಲಿ ಇತ್ತೀಚಿನ ನಟ, ನಟಿಯರು ಭಾಗಿಯಾಗಿದ್ದಾರೆ. ಈ ಕುರಿತು ಫಿಲ್ಮ್ ಚೇಂಬರ್ ಎಲ್ಲ ನಟ, ನಟಿಯರನ್ನು ಕರೆಸಿ ಎಚ್ಚರಿಕೆ, ಸಲಹೆ ನೀಡಿದ್ದರೆ ಈ ಮಟ್ಟಕ್ಕೆ ದೊಡ್ಡದಾಗುತ್ತಿರಲಿಲ್ಲ. ಇದಾವುದನ್ನೂ ವಾಣಿಜ್ಯ ಮಂಡಳಿ ಮಾಡಲಿಲ್ಲ. ಈ ರೀತಿ ಸ್ವಚ್ಛವಾಗುವುದರಿಂದ ಮುಂದೆ ಬರುವ ಯುವ, ನಟ, ನಟಿಯರಿಗೆ ಸಹಕಾರಿಯಾಗಲಿದೆ. ಹನಿಟ್ರ್ಯಾಪ್ ವಿಚಾರ ಬಂದಾಗಲೂ ಯಾರೂ ಕರೆಸಿ ಮಾತನಾಡಲಿಲ್ಲ ಎಂದು ದೂರಿದ್ದಾರೆ.

    ತನಿಖಾಧಿಕಾರಿಗಳಿಗೆ ಸಹಕಾರ ನೀಡುವುದು ನಮ್ಮ ಕರ್ತವ್ಯ, ನಿಮಗೆ ಗೊತ್ತಿದ್ದರೆ ನೀವೂ ಬಂದು ಹೇಳಿ, ಒಟ್ಟಿನಲ್ಲಿ ಚಿತ್ರರಂಗ ಸ್ವಚ್ಛವಾಗಬೇಕು. ನಮಗೆ ಸಪೋರ್ಟ್ ಬೇಕು ರಕ್ಷಣೆ ಅಗತ್ಯ ನನಗಿಲ್ಲ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

    ಇಂದ್ರಜಿತ್ ಲಂಕೇಶ್ ಮನೆಯಿಂದ ಸಿಸಿಬಿ ಕಚೇರಿಗೆ ಹೊರಟಿದ್ದು, ಸ್ಯಾಂಡಲ್‍ವುಡ್ ಡ್ರಗ್ಸ್ ಡೀಲ್ ಸಂಬಂಧ ಮಹತ್ವದ ದಾಖಲೆಗಳನ್ನು ಇಂದ್ರಜಿತ್ ರೆಡಿ ಮಾಡಿಕೊಂಡಿದ್ದು, ಸಿಡಿ, ಫೋಟೋ, ದಾಖಲೆಗಳ ಜೊತೆಗೆ ಎಲ್ಲೆಲ್ಲಿ ಡೀಲ್ ನಡೆಯುತ್ತಿದೆ. ಯಾವ ಸ್ಟಾರ್ ನಟರು ಎಲ್ಲಿ ಸೇರುತ್ತಾರೆ ಎಂಬುವರ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಇಂದ್ರಜಿತ್ ಲಂಕೇಶ್ ಕಲೆಹಾಕಿದ್ದಾರೆ ಎಂದು ತಿಳಿದು ಬಂದಿದೆ.