Tag: ನಟಸಾರ್ವಭೌಮ

  • ರಚಿತಾ ‘ನಟಸಾರ್ವಭೌಮ’ ಹೀರೋಯಿನ್ – ಚಿತ್ರದ ಶೇ.45ರಷ್ಟು ಶೂಟಿಂಗ್ ಕಂಪ್ಲೀಟ್

    ರಚಿತಾ ‘ನಟಸಾರ್ವಭೌಮ’ ಹೀರೋಯಿನ್ – ಚಿತ್ರದ ಶೇ.45ರಷ್ಟು ಶೂಟಿಂಗ್ ಕಂಪ್ಲೀಟ್

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರ ನಟಸಾರ್ವಭೌಮದಲ್ಲಿ ರಚಿತಾರಾಮ್ ಅವರೇ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ರಚಿತಾ ರಾಮ್ ಅಭಿನಯದ ಶೂಟಿಂಗ್ ಬಹುಪಾಲು ಮುಗಿದಿದೆ. ಇನ್ನೂ ವಿಶೇಷ ಏನಪ್ಪಾ ಅಂದ್ರೆ ರಚಿತಾ ರಾಮ್ ಜೊತೆ ಈ ಚಿತ್ರದಲ್ಲಿ ಇನ್ನೊಬ್ಬರು ನಾಯಕಿಯೂ ಇದ್ದಾರಂತೆ. ಈ ಹೀರೋಯಿನ್ ಹೆಸರು ಫೈನಲ್ ಆಗಿದೆಯಂತೆ. ಆದರೆ ಚಿತ್ರತಂಡ ಈ ನಟಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಈಗಾಗಲೇ ಚಿತ್ರದ ಶೇ.45ರಷ್ಟು ಭಾಗದ ಶೂಟಿಂಗ್ ಮುಗಿದಿದೆ.

    ನಟ ಸಾರ್ವಭೌಮ ಚಿತ್ರದಲ್ಲಿ ಇನ್ನು ರಚಿತಾ ರಾಮ್ ಅಭಿನಯದ ಕೆಲವೇ ಸೀನ್ ಗಳ ಶೂಟಿಂಗ್ ಮಾತ್ರ ಬಾಕಿ ಇದೆ. ಕಳೆದ ವಾರವಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಟಸಾರ್ವಭೌಮ ಚಿತ್ರದ ಶೂಟಿಂಗ್ ಬಳ್ಳಾರಿಯಲ್ಲಿ ನಡೆದಿತ್ತು. ತೋರಣಗಲ್ ನಲ್ಲಿರುವ ಜಿಂದಾಲ್ ಏರ್‍ಪೋರ್ಟ್‍ನಲ್ಲಿ ಚಿತ್ರದ ಚಿತ್ರೀಕರಣ ನಡೆದಿತ್ತು.

    ಬಳ್ಳಾರಿಯಲ್ಲಿ ಶೂಟಿಂಗ್ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪುನೀತ್ ರಾಜ್‍ಕುಮಾರ್, ಬಳ್ಳಾರಿ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆಯಾಗುತ್ತದೆ. ರಣವಿಕ್ರಮ, ದೊಡ್ಮನೆ ಹುಡುಗದ ಚಿತ್ರೀಕರಣವೂ ಇಲ್ಲೇ ನಡೆಯಿತು. ನಟ ಸಾರ್ವಭೌಮದ ಚಿತ್ರದ ಬಗ್ಗೆ ನಾನು ಈಗಲೂ ಏನೂ ಮಾತನಾಡಲ್ಲ. ಸಿನೆಮಾ ಬಂದ ಮೇಲೆ ಸಿನೆಮಾ ಮಾತನಾಡುತ್ತೆ ಎಂದರು. ಈಗಾಗಲೇ ಚಿತ್ರದ ಶೇ.45ರಷ್ಟು ಭಾಗದ ಶೂಟಿಂಗ್ ಮಗಿದಿದೆ. ರಿಲೀಸ್ ದಿನಾಂಕವನ್ನು ನಿರ್ದೇಶಕರು, ನಿರ್ಮಾಪಕರು ನಿರ್ಧರಿಸುತ್ತಾರೆ ಎಂದು ಹೇಳಿದರು. ನಟ ಸಾರ್ವಭೌಮ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಿದ್ದಾರೆ.

  • ಟ್ರೋಲ್ ಮಾಡಿದವರಿಗೆ ಫೋಟೋ ಮೂಲಕ ಉತ್ತರ ಕೊಟ್ಟ ರಚಿತಾ ರಾಮ್!

    ಟ್ರೋಲ್ ಮಾಡಿದವರಿಗೆ ಫೋಟೋ ಮೂಲಕ ಉತ್ತರ ಕೊಟ್ಟ ರಚಿತಾ ರಾಮ್!

    ಬೆಂಗಳೂರು: ಕಾಲೆಳೆಯೋರ ಮಧ್ಯೆ ಮಾತನಾಡಿದರೆ ಆಡಿಕೊಳ್ಳೋರು ಇನ್ನೂ ಜಾಸ್ತಿಯಾಗ್ತಾರೆ ಎಂಬ ನೀತಿಯನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ಅನುಸರಿಸುತ್ತಾರೆ. “ರಚಿತಾ ಹಠಾವೋ” ಆಂದೋಲನಕ್ಕೆ ಮಾತಿನ ಮೂಲಕವಲ್ಲ ಫೋಟೋ ಮೂಲಕ ರಚಿತಾ ಉತ್ತರ ಕೊಟ್ಟಿದ್ದಾರೆ.

    ರಚಿತಾ ರಾಮ್ ಕಾಲೆಳೆದು ಟ್ರೋಲ್ ಮಾಡೋ ಮಂದಿಗೆ ಏನೂ ಹೇಳದೆ ಸುಮ್ಮನಿರುತ್ತಿದ್ದರು. ನಂತರ ರಚಿತಾ `ನಟಸಾರ್ವಭೌಮ’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ “ರಚಿತಾ ಹಠಾವೋ” ಆಂದೋಲನವೇ ಶುರುವಾಗಿತ್ತು. ಕಾಲೆಳೆಯೋರ ಮಧ್ಯೆ ಬೆಳೆದು ನಿಲ್ಲುತ್ತೀನಿ ಎಂದು ರಚಿತಾ ತನ್ನ ಪಾಡಿಗೆ ಶೂಟಿಂಗ್ ಹೋಗಿ ಈಗ ಕಾಲೆಳೆದೋರಿಗೆ ಭರ್ಜರಿ ಶಾಕ್ ಕೊಟ್ಟಿದ್ದಾರೆ.

    ಚಕ್ರವ್ಯೂಹ ಸಿನಿಮಾದ ನಂತರ ರಚಿತಾ ಹಾಗೂ ಪುನೀತ್ ನಟಸಾರ್ವಭೌಮದಲ್ಲಿ ಮತ್ತೆ ಜೋಡಿಯಾಗುತ್ತಿದ್ದಾರೆ. ಹೀಗಾಗಿ ಪುನೀತ್ ಪರಿಚಯ, ಸ್ನೇಹ ರಚಿತಾಗೆ ಹೊಸತೇನಲ್ಲ. ಆದರೆ ಪುನೀತ್ ಅಭಿಮಾನಿ ಬಳಗದ ಹೆಸರಲ್ಲಿ ಅನೇಕ ಅಭಿಮಾನಿಗಳು ಮತ್ತೆ ನಮ್ಮ ಅಪ್ಪು ಜೊತೆ ನಟಿಸಬೇಡಿ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಹರಿದು ಬಿಡುತ್ತಿದ್ದಾರೆ. ಕಾರಣ ಇಲ್ಲದೆ ಕಾಲೆಳೆದ ಆ ಅಭಿಮಾನಿಗಳಿಗೆ ರಚಿತಾ ಟಾಂಗ್ ನೀಡಿದ್ದಾರೆ.

    ಚಿತ್ರತಂಡ ಹಾಗೂ ಪುನೀತ್ ಅವರೇ ನನ್ನನ್ನು ಬೇಡ ಅಂದಿಲ್ಲ. ರಿಯಲ್ ಫ್ಯಾನ್ಸ್ ಗಳೂ ಬೇಡ ಎನ್ನುವುದಿಲ್ಲ. ಫೇಕ್ ಫ್ಯಾನ್ಸ್ ಗಳು ಮಾತ್ರ ಈ ರೀತಿ ಮಾಡುತ್ತಿರೋದು ಎಂದು ರಚಿತಾ ರಾಮ್ ಪುನೀತ್ ಮತ್ತು ತಾನು ಅದೆಷ್ಟು ಕ್ಲೋಸ್ ಫ್ರೆಂಡ್ಸ್ ಎನ್ನುವುದನ್ನು ಒಂದೇ ಒಂದು ಸೆಲ್ಫಿ ಮೂಲಕ ತೋರಿಸಿ ಉತ್ತರಿಸಿದ್ದಾರೆ.

    ನಟಸಾರ್ವಭೌಮ ಚಿತ್ರದ ಶೂಟಿಂಗ್ ವೇಳೆ ತೆಗೆದ ಫೋಟೋ ಇನ್ಯಾರೊ ತೆಗೆದ ಫೋಟೋ ಅಲ್ಲ, ಇದು ಉದ್ದೇಶಪೂರ್ವಕವಾಗಿ ತೆಗೆದ ಸೆಲ್ಫಿ ಫೋಟೋ ಎಂದು ಹೇಳಲಾಗಿದೆ. ಇಲ್ಲಿ ನಿರ್ದೇಶಕ ಪವನ್ ಒಡೆಯರ್, ಪುನೀತ್ ರಾಜ್‍ಕುಮಾರ್ ಮತ್ತು ರಚಿತಾ ಕಾಣಿಸುತ್ತಿದ್ದಾರೆ. ಆದರೆ ರಚಿತಾ ರಾಮ್ ಪುನೀತ್ ಹೆಗಲ ಮೇಲೆ ಕೈ ಹಾಕಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದವರಿಗೆ ಟಾಂಗ್ ಕೊಡೋಕೆ ಕ್ಲಿಕ್ ಮಾಡಿದಂತಿದೆ ಎಂದು ಹೇಳಲಾಗ್ತಿದೆ.