Tag: ನಟಸಾರ್ವಭೌಮ ಚಿತ್ರ

  • ಲಿಪ್‌ಲಾಕ್‌ ಮಾಡಿದ್ಮೇಲೆ ಬದಲಾಯ್ತು ಲಕ್-‌ ಅನುಪಮಾಗೆ ಬಂಪರ್‌ ಆಫರ್ಸ್

    ಲಿಪ್‌ಲಾಕ್‌ ಮಾಡಿದ್ಮೇಲೆ ಬದಲಾಯ್ತು ಲಕ್-‌ ಅನುಪಮಾಗೆ ಬಂಪರ್‌ ಆಫರ್ಸ್

    ನ್ನಡದ ‘ನಟಸಾರ್ವಭೌಮ’ ನಾಯಕಿ ಅನುಪಮಾ ಪರಮೇಶ್ವರನ್ (Anupama Parameshwaran) ಇದೀಗ ಭಾರೀ ಬೇಡಿಕೆಯಲ್ಲಿದ್ದಾರೆ. ‘ಟಿಲ್ಲು ಸ್ಕ್ವೇರ್’ (Tillu Square) ರಿಲೀಸ್ ಆದ್ಮೇಲೆ ಪಡ್ಡೆಹುಡುಗರ ಕ್ರಶ್ ಕ್ವೀನ್ ಆಗಿದ್ದಾರೆ. ಮಡಿವಂತಿಗೆ ಬಿಟ್ಟು ಕೊಂಚ ಬೋಲ್ಡ್ ಆಗಿರುವ ಅನುಪಮಾಗೆ ಟಾಲಿವುಡ್‌ನಲ್ಲಿ ಭಾರೀ ಅವಕಾಶಗಳು ಅರಸಿ ಬರುತ್ತಿವೆ.

    ಲಿಪ್‌ಲಾಕ್ ಮಾಡಲ್ಲ, ಹಸಿಬಿಸಿ ದೃಶ್ಯಗಳಲ್ಲಿ ನಟಿಸಲ್ಲ ಎಂದು ಶಪಥ ಮಾಡಿದ್ದ ನಟಿ ಈಗ ಬದಲಾಗಿದ್ದಾರೆ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂಬಂತೆ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ನಟಿ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ.

    ಶ್ರೀಲೀಲಾ (Sreeleela) ನಟಿಸಲ್ಲ ಎಂದು ಕೈಬಿಟ್ಟಿದ್ದ ಈ ಸಿನಿಮಾ ಅನುಪಮಾ ಪಾಲಿಗೆ ವರವಾಗಿದೆ. ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾದಲ್ಲಿ ಹೀರೋ ಸಿದ್ದು ಜೊತೆ ಮೈ ಚಳಿ ಬಿಟ್ಟು ನಟಿಸಿದ್ದೇ ನಟಿಸಿದ್ದು, ಅನುಪಮಾ ಪಡ್ಡೆಹುಡುಗರ ಇಷ್ಟದೇವತೆಯಾಗಿದ್ದಾರೆ. ಇದನ್ನೂ ಓದಿ:‘ದೇವರ’ ಸಿನಿಮಾಗಾಗಿ ಜ್ಯೂ.ಎನ್‌ಟಿಆರ್‌ಗೆ ಸಾಥ್ ಕೊಟ್ಟ ಕರಣ್ ಜೋಹರ್

    ಮಾರ್ಚ್ 29ರಂದು ರಿಲೀಸ್ ಆಗಿದ್ದ ‘ಟಿಲ್ಲು ಸ್ಕ್ವೇರ್’ ಸಿನಿಮಾ 90 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಹಿಟ್ ಸೇರಿದೆ. ಇದರಿಂದ ಮತ್ತೆ ಟಾಪ್ ನಟಿಯರ ರೇಸ್‌ನಲ್ಲಿದ್ದಾರೆ ಅನುಪಮಾ. ಈ ಚಿತ್ರದ ನಂತರ ಅನುಪಮಾಗೆ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳಿಂದ ನಾಯಕಿಯಾಗಿ ನಟಿಸಲು ಆಫರ್ ಸಿಗುತ್ತಿದೆಯಂತೆ. ಸದ್ಯದಲ್ಲೇ ಹೊಸ ಸಿನಿಮಾಗಳ ಅಪ್‌ಡೇಟ್ ನೀಡಲಿದ್ದಾರೆ ಪ್ರೇಮಂ ನಟಿ.

    ಅಂದಹಾಗೆ, 2019ರಲ್ಲಿ ನಟಸಾರ್ವಭೌಮ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಅನುಪಮಾ ಪರಮೇಶ್ವರನ್ ನಾಯಕಿಯಾಗಿ ನಟಿಸಿದ್ದರು. ಮೊದಲ ಚಿತ್ರದಲ್ಲೇ ಕನ್ನಡಿಗರ ಮನಗೆದ್ದಿದ್ದರು. ಮತ್ತೆ ಅದ್ಯಾವಾಗ ಅನುಪಮಾ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡುತ್ತಾರೆ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

  • ‘ನಟಸಾರ್ವಭೌಮ’ ಸಂಗೀತ ನಿರ್ದೇಶಕನ ಮಾಜಿ ಪತ್ನಿ ಜೊತೆ ಶಿವಕಾರ್ತಿಕೇಯನ್ ಅಫೇರ್?

    ‘ನಟಸಾರ್ವಭೌಮ’ ಸಂಗೀತ ನಿರ್ದೇಶಕನ ಮಾಜಿ ಪತ್ನಿ ಜೊತೆ ಶಿವಕಾರ್ತಿಕೇಯನ್ ಅಫೇರ್?

    ‘ನಟಸಾರ್ವಭೌಮ’ (Natasaarvabhowma) ಸಂಗೀತ ನಿರ್ದೇಶಕ ಡಿ ಇಮ್ಮಾನ್- ಅವರ ಮೊದಲ ಪತ್ನಿಯ ವೈಯಕ್ತಿಕ ವಿಚಾರದಲ್ಲಿ ಶಿವಕಾರ್ತಿಕೇಯನ್ ಹೆಸರು ಕೇಳಿ ಬಂದಿದೆ. ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಶಿವಕಾರ್ತಿಕೇಯನ್ (Sivakarthikeyan) ವಿರುದ್ಧ ಡಿ ಇಮ್ಮಾನ್ (D Imman)  ಆರೋಪವೊಂದನ್ನು ಮಾಡಿದ್ದು, ಇಮ್ಮಾನ್ ಮೊದಲ ಪತ್ನಿಗೂ ಅಫೇರ್ ಇತ್ತಾ ಎಂಬ ಚರ್ಚೆ ನಡೆಯುತ್ತಿದೆ. ಇದು ಶಿವಕಾರ್ತಿಕೇಯನ್‌ಗೆ ಸಮಸ್ಯೆ ತಂದೊಡ್ಡಿದೆ. ಇದನ್ನೂ ಓದಿ:ಮತ್ತೊಂದು ಮದುವೆಗೆ ಮುಂದಾದ ಪವನ್ ಕಲ್ಯಾಣ್ ಮಾಜಿ ಪತ್ನಿ

    2008ರಲ್ಲಿ ಮೋನಿಕಾ ರಿಚರ್ಡ್ ಎಂಬುವರನ್ನು ಮದುವೆ ಆಗಿದ್ದ ಡಿ ಇಮ್ಮಾನ್ 2021ರಲ್ಲಿ ಡಿವೋರ್ಸ್ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರು ಅಮೆಲಿ ಎಂಬುವರನ್ನು 2ನೇ ಮದುವೆ ಆಗಿದ್ದರು. ಇಮ್ಮಾನ್- ಮೋನಿಕಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇತ್ತೀಚೆಗೆ ಇಮ್ಮಾನ್ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವಾಗ ತಮ್ಮ ಹಾಗೂ ಮೊದಲ ಪತ್ನಿ ಡಿವೋರ್ಸ್‌ಗೆ ಶಿವಕಾರ್ತಿಕೇಯನ್ ಕಾರಣ ಎಂದು ಪರೋಕ್ಷವಾಗಿ ಆರೋಪ ಮಾಡಿದ್ದಾರೆ. ಶಿವಕಾರ್ತಿಕೇಯನ್ ಮಾಡಿದ ದ್ರೋಹವನ್ನು ನಾನು ಎಂದಿಗೂ ಮರೆಯುವುದಿಲ್ಲ. ಆದರೆ ಅವರು ಮಾಡಿದ ದ್ರೋಹ ಏನೆಂದು ಹೇಳಲಾಗುವುದಿಲ್ಲ. ಏಕೆಂದರೆ ನನಗೆ ನನ್ನ ಮಕ್ಕಳ ಭವಿಷ್ಯ ಬಹಳ ಮುಖ್ಯ ಎಂದು ಇಮ್ಮಾನ್ ಹೇಳಿದ್ದಾರೆ.

    ಮಕ್ಕಳ ಭವಿಷ್ಯಕ್ಕೂ, ಶಿವಕಾರ್ತಿಕೇಯನ್ ಮಾಡಿದ ದ್ರೋಹಕ್ಕೂ ಏನು ಸಂಬಂಧ? ಇಮ್ಮಾನ್ ಈ ರೀತಿ ಹೇಳಲು ಕಾರಣವೇನು? ನಿರ್ದೇಶಕನ ಮೊದಲ ಪತ್ನಿಯ ಜೊತೆಗೆ ನಟನಿಗೆ ಅಫೇರ್ ಇರಬಹುದಾ ಎಂದೆಲ್ಲಾ ಚರ್ಚೆ ಶುರುವಾಗಿದೆ. ಆದರೆ ಈ ಆರೋಪವನ್ನು ಮೋನಿಕಾ ರಿಚರ್ಡ್ ನಿರಾಕರಿಸಿದ್ದಾರೆ. ಶಿವಕಾರ್ತಿಕೇಯನ್ ನನಗೆ ಹಾಗೂ ಇಮ್ಮಾನ್ ಇಬ್ಬರಿಗೂ ಬಹಳ ಒಳ್ಳೆಯ ಫ್ರೆಂಡ್. ನಮ್ಮಿಬ್ಬರ ನಡುವೆ ಜಗಳವಾದಾಗ, ಡಿವೋರ್ಸ್ ವಿಚಾರ ಬಂದಾಗ ಶಿವಕಾರ್ತಿಕೇಯನ್ ನಾವಿಬ್ಬರೂ ದೂರ ಆಗದಂತೆ ತಡೆದಿದ್ದರು. ಕಾರಣ ತಿಳಿದು ಅವರು ನನ್ನ ಪರ ನಿಂತಿದ್ದರು. ತನಗೆ ಸಪೋರ್ಟ್ ಮಾಡಲಿಲ್ಲ ಎಂಬ ಕಾರಣಕ್ಕೆ ಈಗ ಇಮ್ಮಾನ್, ಶಿವಕಾರ್ತಿಕೇಯನ್ ವಿರುದ್ದ ಈ ರೀತಿ ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ಅಫೇರ್ ಬಗ್ಗೆ ಮಾತನಾಡುವುದು ಏನೂ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇಮ್ಮಾನ್ ಮೊದಲ ಪತ್ನಿ ಜೊತೆಗಿನ ಅಫೇರ್ ಸುದ್ದಿಗೆ ನಟ ಶಿವಕಾರ್ತಿಕೇಯನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಇಮ್ಮಾನ್ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದು ಆ ಹಾಡುಗಳು ಸೂಪರ್ ಹಿಟ್ ಆಗಿವೆ. ಪುನೀತ್ ರಾಜ್‌ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರಕ್ಕೆ ಕೂಡಾ ಇದೇ ಇಮ್ಮಾನ್ ಸಂಗೀತ ನೀಡಿದ್ದಾರೆ. ಇಮ್ಮಾನ್ ಮೊದಲ ಪತ್ನಿಗೆ ವಿಚ್ಚೇದನ ನೀಡಿದ್ದು ಈಗ 2ನೇ ಮದುವೆ ಆಗಿದ್ದಾರೆ.

    ಶಿವಕಾರ್ತಿಕೇಯನ್ ತಮಿಳು ಚಿತ್ರರಂಗದಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ‘ವಜ್ರಕಾಯ’ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಆರತಿ ಎಂಬುವರನ್ನು ಕೈ ಹಿಡಿದಿರುವ ಶಿವಕಾರ್ತಿಕೇಯನ್‌ಗೆ ಇಬ್ಬರು ಮಕ್ಕಳಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ನಟಸಾರ್ವಭೌಮ’ ನಟಿ ಅನುಪಮ ಪರಮೇಶ್ವರನ್‌ಗೆ ಲವ್ ಆಗಿದೆಯಂತೆ: ಹುಡುಗ ಯಾರು?

    `ನಟಸಾರ್ವಭೌಮ’ ನಟಿ ಅನುಪಮ ಪರಮೇಶ್ವರನ್‌ಗೆ ಲವ್ ಆಗಿದೆಯಂತೆ: ಹುಡುಗ ಯಾರು?

    ಟಾಲಿವುಡ್‌ನ ಪ್ರತಿಭಾವಂತ ನಟಿ ಅನುಪಮ ಪರಮೇಶ್ವರನ್ ಸ್ಟಾರ್ ನಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಳ್ತಿದ್ದಾರೆ. ನಟಿ ಅನುಪಮಾ ಲವ್‌ಸ್ಟೋರಿ ಟಿಟೌನ್ ನಗರಿಯಲ್ಲಿ ಸಖತ್ ಸದ್ದು ಮಾಡುತ್ತಿದೆ. `ನಟಸಾರ್ವಭೌಮ’ ನಾಯಕಿಗೆ ಲವ್ ಆಗಿದೆಯಂತೆ.

    ಬಹುಭಾಷಾ ನಾಯಕಿಯಾಗಿ ಟಾಪ್ ಸ್ಟಾರ್ ನಟಿಯರ ಸಾಲಿನಲ್ಲಿರುವ ಅನುಪಮ ಪರಮೇಶ್ವರನ್ ಕನ್ನಡದ `ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್‌ಗೆ ನಾಯಕಿಯಾಗಿ ಗುರುತಿಸಿಕೊಂಡಿದ್ರು. ಶೃತಿ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದಿದ್ರು. ಈಗ ನಟಿಯ ಲವ್ ಮತ್ತು ಮದುವೆ ವಿಚಾರದ ಸುತ್ತ ಸಖತ್ ಸದ್ದು ಮಾಡುತ್ತಿದೆ. ಅನುಪಮಾಗೆ ಒನ್ ಸೈಡ್ ಲವ್ ಆಗಿದೆಯಂತೆ ಹಾಗಂತ ಸ್ವತಃ ಅನುಪಮಾ ಅವರೇ ಹೇಳಿಕೊಂಡಿದ್ದಾರೆ.

    ಇದೀಗ ಅನುಪಮಾ `ಕಾರ್ತಿಕೇಯ 2′ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ತಮ್ಮ ಲವ್ ಕಹಾನಿ ಬಗ್ಗೆ ಕೂಡ ಅನುಪಮ ಮಾತನಾಡಿದ್ದಾರೆ. ಈ ಸಮಾರಂಭದಲ್ಲಿ ಅನುಪಮಾ ಪರಮೇಶ್ವರನ್, ನಾನು ಇನ್ನೂ ಹೆಚ್ಚು ದಿನಗಳ ಕಾಲ ಒಂಟಿಯಾಗಿರಲ್ಲ. ಬಹುಶಃ ಇದು ಒನ್ ಸೈಡ್ ಲವ್ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಯಾಕೆಂದರೆ ಅನುಪಮಾ ಪರಮೇಶ್ವರನ್ ಸದ್ಯ ಪ್ರೀತಿಯಲ್ಲಿ ಬಿದ್ದಿದ್ದು ಆ ಹುಡುಗ ಯಾರು ಎನ್ನುವುದನ್ನು ರಿವೀಲ್ ಮಾಡಿಲ್ಲ. ಜೊತೆಗೆ ಇದು ಒಂದು ಸೈಡ್ ಲವ್ ಎಂದು ಹೇಳುವ ಮೂಲಕ ತಾನಿನ್ನೂ ಪ್ರೀತಿಯನ್ನು ವ್ಯಕ್ತಪಡಿಸಿಲ್ಲ ಎಂದಿದ್ದಾರೆ.

    ಕೆಲ ಸಮಯದ ಹಿಂದೆ ಅನುಪಮಾ ಹೆಸರು ಜಸ್ರೀತ್ ಬುಮ್ರಾ ಜತೆ ಪ್ರೀತಿಯಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು. ನಾವು ಇಬ್ಬರು ಒಳ್ಳೆಯ ಫ್ರೇಂಡ್ಸ್ ಅಷ್ಟೇ ಎಂದು ಗಾಸಿಪ್‌ಗೆ ತೆರೆ ಎಳೆದಿದ್ದರು. ಸದ್ಯ ಅನುಪಮಾ ಇಷ್ಟದ ಹುಡುಗ ಯಾರು ಅಂತಾ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.