Tag: ನಟಸಾರ್ವಭೌಮ

  • ಎದೆಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡ ‘ನಟಸಾರ್ವಭೌಮ’ ನಟಿಗೆ ನೆಟ್ಟಿಗರಿಂದ ತರಾಟೆ

    ಎದೆಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡ ‘ನಟಸಾರ್ವಭೌಮ’ ನಟಿಗೆ ನೆಟ್ಟಿಗರಿಂದ ತರಾಟೆ

    ನ್ನಡದ ‘ನಟಸಾರ್ವಭೌಮ’ (Natasaarvabhowma) ನಟಿ ಅನುಪಮಾ ಪರಮೇಶ್ವರನ್ (Anupama Parameshwaran) ಅವರು ಇದೀಗ ಸುದ್ದಿಯಲ್ಲಿದ್ದಾರೆ. ಸದಾ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದ ನಟಿ ಅನುಪಮಾ ಪರಮೇಶ್ವರನ್ ಇದೀಗ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಎದೆಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿರುವ ಫೋಟೋವನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ತೆಲುಗು, ಮಲಯಾಳಂ, ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ನಟಿಸುತ್ತಿರುವ ಪುನೀತ್ ರಾಜ್‌ಕುಮಾರ್ ನಾಯಕಿ ಅನುಪಮಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ರವಿತೇಜಾಗೆ ನಾಯಕಿಯಾಗಿ ‘ಈಗಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟಿಲ್ಲು 2 ಚಿತ್ರದಲ್ಲೂ ಅನುಪಮಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಸೀತೆ ಭಾರತದ ಮಗಳಲ್ಲ: ‘ಆದಿಪುರುಷ’ ಸಿನಿಮಾ ಡೈಲಾಗ್ ವಿರುದ್ಧ ಕಠ್ಮಂಡು ಮೇಯರ್ ಗರಂ

    ಕನ್ನಡದ ‘ನಟಸಾರ್ವಭೌಮ’ ನಾಯಕಿ ಅನುಪಮಾ, ಎದೆಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿರುವ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಹಳದಿ ಬಣ್ಣ ಧಿರಿಸಿನಲ್ಲಿ ನಟಿ ಫೋಟೋ ಅಪ್‌ಲೋಡ್ ಮಾಡಿದ್ದಾರೆ. ಕರ್ಲಿ ಹೇರ್ ಫ್ರಿಯಾಗಿ ಬಿಟ್ಟು ಮಿರರ್ ಸೆಲ್ಫಿ ಶೇರ್ ಮಾಡಿದ್ದಾರೆ. ನಟಿ ಎದೆಯ ಮೇಲೆ ಟ್ಯಾಟೂ ಹಾಕಿಸಿರೋದು ಫೋಟೋದಲ್ಲಿ ಹೈಲೆಟ್ ಆಗಿದೆ. ಅನುಪಮಾ ಹಾಟ್ ಲುಕ್ ನೋಡಿ, ನಿಮ್ಮ ಮೇಲೆ ಇದ್ದ ಅಭಿಮಾನ ಕಮ್ಮಿಯಾಯ್ತು. ದಯವಿಟ್ಟು ಈ ತರಹ ಎಕ್ಸ್‌ಪೋಸ್‌ ಮಾಡಬೇಡಿ ಎಂದು ಫ್ಯಾನ್ಸ್ ಕಿಡಿಕಾರಿದ್ದಾರೆ.

    ನಿಜಕ್ಕೂ ಇದು ನೀವೇನಾ? ನಿಮ್ಮನ್ನು ಈ ರೀತಿ ನೋಡಲು ನಾವು ಇಷ್ಟಪಡಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಆದರೆ, ಅನುಪಮಾ ಇದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಈ ಫೋಟೋಗೆ ಭರ್ಜರಿ ಲೈಕ್ಸ್, ಕಾಮೆಂಟ್ ಬಂದಿದೆ. ಒಂದು ವರ್ಗದ ಜನರಿಗೆ ಅನುಪಮಾ ಪರಮೇಶ್ವರನ್ ಟ್ಯಾಟೂ ಇಷ್ಟ ಆಗಿದೆ.

  • `ನಟಸಾರ್ವಭೌಮ’ ಚಿತ್ರದ ನಾಯಕಿ ಅನುಪಮಾಗೆ ಕೊರೋನಾ ಪಾಸಿಟಿವ್

    `ನಟಸಾರ್ವಭೌಮ’ ಚಿತ್ರದ ನಾಯಕಿ ಅನುಪಮಾಗೆ ಕೊರೋನಾ ಪಾಸಿಟಿವ್

    ಸೌತ್ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟಿ ಅನುಪಮಾ ಪರಮೇಶ್ವರನ್ ಸದ್ಯ `ಕಾರ್ತಿಕೇಯನ್ 2′ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. ಇದೀಗ  ನಟಿ ಅನುಪಮಾಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದು ತಿಳಿದು ಬಂದಿದೆ.

    ದಕ್ಷಿಣದ ಸಿನಿಮಾಗಳ ಜತೆ ಕನ್ನಡದ `ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ನಾಯಕಿಯಾಗುವ ಮೂಲಕ ಛಾಪೂ ಮೂಡಿಸಿದ ಚೆಲುವೆ ಅನುಪಮಾ ಪರಮೇಶ್ವರನ್‌ `ಕಾರ್ತಿಕೇಯನ್’ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. ಇನ್ನು ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ನಟಿಗೆ ಇದೀಗ ಕೊರೋನಾ ಸೋಂಕು ತಗುಲಿದೆ.

    ಸಾಕಷ್ಟು ಕಡೆ ಪ್ರಚಾರ ಕಾರ್ಯದಲ್ಲಿ ತಂಡದ ಜತೆ ಭಾಗಿಯಾಗಿದ್ದ ಅನುಪಮಾ ಶೀತ ಜ್ವರದಿಂದ ಬಳಲುತ್ತಿದ್ದಾರೆ. ವೈದ್ಯರನ್ನ ಸಂಪರ್ಕಿಸಿದಾಗ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ಇನ್ನು ತಮ್ಮ ನಿವಾಸದಲ್ಲಿಯೇ ನಟಿ ಕ್ವಾರಂಟೈನಲ್ಲಿದ್ದಾರೆ. ಇದನ್ನೂ ಓದಿ:ಸೌತ್ ಸ್ಟಾರ್ ವಿಜಯ್ ದೇವರಕೊಂಡ ವಿರುದ್ಧ ಸಿಡಿದೆದ್ದ ಬಾಲಿವುಡ್ ಥಿಯೇಟರ್ ಮಾಲೀಕ

     

    View this post on Instagram

     

    A post shared by Nikhil Siddhartha (@actor_nikhil)

    ಇನ್ನು `ಕಾರ್ತೀಕೇಯನ್ 2′ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರದಲ್ಲಿನ ಅನುಪಮಾ ಪಾತ್ರ ಮತ್ತು ನಟನೆ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಬೆನ್ನಲ್ಲೇ ನಟಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನಟಸಾರ್ವಭೌಮ ಚಿತ್ರತಂಡದಿಂದ ರಾಜ್ಯಾದ್ಯಂತ ವಿಜಯ ಯಾತ್ರೆ

    ನಟಸಾರ್ವಭೌಮ ಚಿತ್ರತಂಡದಿಂದ ರಾಜ್ಯಾದ್ಯಂತ ವಿಜಯ ಯಾತ್ರೆ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟನೆಯ ‘ನಟಸಾರ್ವಭೌಮ’ ಚಿತ್ರ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ರಾಜ್ಯಾದ್ಯಂತ ಸಕ್ಸಸ್ ಯಾತ್ರೆ ಕೈಗೊಂಡಿದೆ.

    ಮೈಸೂರು, ಮಂಡ್ಯ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಭೇಟಿ ಕೊಟ್ಟು ಧನ್ಯವಾದ ಅರ್ಪಿಸಿದ್ದ ಚಿತ್ರತಂಡ, ಮಾರ್ಚ್ 3 ರಂದು ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ಶಿರಾ, ತುಮಕೂರಿನ ಮುಖ್ಯ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ.

    ನಟಸಾರ್ವಭೌಮ ಸಿನಿಮಾಗೆ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿದ್ದು, ರಾಕ್‍ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಪುನೀತ್‍ಗೆ ನಾಯಕಿಯಾಗಿ ರಚಿತರಾಮ್-ಅನುಪಮಾ ಪರಮೇಶ್ವರ್ ಜೋಡಿಯಾಗಿ ಕಾಣಿಸಿಕೊಂಡು ಸಿನಿರಸಿಕರ ಮನ ಗೆದ್ದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೋಸ್ಟರ್‌ಗೆ ಬಿಯರ್ ಅಭಿಷೇಕ – ನಟ ಪುನೀತ್ ಪ್ರತಿಕ್ರಿಯೆ

    ಪೋಸ್ಟರ್‌ಗೆ ಬಿಯರ್ ಅಭಿಷೇಕ – ನಟ ಪುನೀತ್ ಪ್ರತಿಕ್ರಿಯೆ

    ಬೆಂಗಳೂರು: ಸ್ಯಾಂಡಲ್‍ವುಡ್ ಬಹುನಿರೀಕ್ಷೆಯ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರ ಬಿಡುಗಡೆ ಆಗಿದ್ದು, ಸಿನಿಮಾಗೆ ಭರ್ಜರಿ ಸ್ವಾಗತ ದೊರೆತಿದೆ. ಆದರೆ ಅಭಿಮಾನಿಯೊಬ್ಬ ಪುನೀತ್ ಅವರ ಪೋಸ್ಟರ್‌ಗೆ ಬಿಯರ್ ಅಭಿಷೇಕ ಮಾಡಿ ವಿಕೃತಿ ಮೆರೆದಿದ್ದಾರೆ.

    ಈ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಪ್ರತಿಕ್ರಿಯಿಸಿ, “ಆ ರೀತಿ ಮಾಡುವುದು ಬೇಡ. ಸಿನಿಮಾದಲ್ಲಿ ನಾವು ಏನೇನೋ ಮಾಡುತ್ತೇವೆ. ನಾವು ಚಿತ್ರದಲ್ಲಿ ಕೊಲೆ ಮಾಡುತ್ತೇವೆ. ಹಾಗಂತ ನೀವು ನಿಜಜೀವನದಲ್ಲಿ ಕೊಲೆ ಮಾಡಿ ಎಂದು ಹೇಳುವುದಿಲ್ಲ. ಇದು ಕೇವಲ ಒಂದು ಹಾಡು ಅಷ್ಟೇ. ಆ ಹಾಡಿನಲ್ಲಿ ಒಂದು ಥ್ರಿಲ್ ಇದೆ. ಸಮಾಜಕ್ಕೆ ಸಂದೇಶ ನೀಡುವ ಕೆಲವು ಸಿನಿಮಾದಲ್ಲಿ ಇರುತ್ತದೆ. ಅದನ್ನು ಉಪಯೋಗಿಸಿ. ಹಾಗಂತ ಬಿಯರ್ ಉಪಯೋಗಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.

    ಒಟ್ಟು 500ಕ್ಕೂ ಹೆಚ್ಚಿನ ಸ್ಕ್ರೀನ್‍ಗಳಲ್ಲಿ ನಟಸಾರ್ವಭೌಮ ರಿಲೀಸ್ ಆಗಿದ್ದು, ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಜೊತೆ ಡಿಂಪಲ್ ಬೆಡಗಿ ರಚಿತಾ ರಾಮ್, ಅನುಪಮಾ ಪರಮೇಶ್ವರ್, ಸಾಧುಕೋಕಿಲಾ, ಬಿ. ಸರೋಜಾ ದೇವಿ, ಚಿಕ್ಕಣ್ಣ, ರವಿಶಂಕರ್ ನಟಿಸಿದ್ದಾರೆ. ಈ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸಿದ್ದು, ಪವನ್ ಒಡೆಯರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮಾನಿಗಳ ಪ್ರೀತಿಗೆ ಮನಸೋತ ಪವರ್ ಸ್ಟಾರ್

    ಅಭಿಮಾನಿಗಳ ಪ್ರೀತಿಗೆ ಮನಸೋತ ಪವರ್ ಸ್ಟಾರ್

    ಬೆಂಗಳೂರು: ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆ ಕಂಡಿರುವ ನಟಸಾರ್ವಭೌಮ ಚಿತ್ರಕ್ಕೆ ಅಭಿಮಾನಿಗಳು ಕೊಡುತ್ತಿರುವ ರೆಸ್ಪಾನ್ಸ್ ನೋಡಿ ಪವರ್ ಸ್ಟಾರ್ ಫುಲ್ ಖುಷ್ ಆಗಿದ್ದಾರೆ.

    ಇಂದು ಬೆಳಗ್ಗೆ ತ್ರಿವೇಣಿ ಚಿತ್ರಮಂದಿರಕ್ಕೆ ಆಗಮಿಸಿದ್ದ ಪುನೀತ್ ರಾಜ್‍ಕುಮಾರ್ ಪ್ರೇಕ್ಷಕರ ಪ್ರೀತಿಗೆ ಮನಸೋತಿದ್ದಾರೆ. ಚಿತ್ರಮಂದಿರಗಳಲ್ಲಿ ಕಿಕ್ಕಿರಿದು ಸೇರಿ ನಟಸಾರ್ವಭೌಮ ಚಿತ್ರವನ್ನು ಪ್ರೀತಿಯಿಂದ ಸ್ವಾಗತಿಸಿದ ಎಲ್ಲಾ ಅಭಿಮಾನಿಗಳಿಗೂ ಪುನೀತ್ ಧನ್ಯವಾದ ತಿಳಿಸಿದರು. ಅಲ್ಲದೆ ತ್ರಿವೇಣಿ ಚಿತ್ರಮಂದಿರದಲ್ಲಿ ಇದ್ದ ಅಭಿಮಾನಿಗಳತ್ತ ಕೈ ಬೀಸಿ ಪವರ್ ಸ್ಟಾರ್ ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದ್ಯ ಚಿತ್ರಕ್ಕೆ ತುಂಬಾ ಒಳ್ಳೆ ರೆಸ್ಪಾನ್ಸ್ ಬರ್ತಿದೆ. ಅಭಿಮಾನಿಗಳಿಗೆ ನಾನು ಸದಾ ಚಿರಋಣಿ. ಅಭಿಮಾನಿಗಳಿಗಾಗಿಯೇ ನಾವು ಸಿನಿಮಾ ಮಾಡೋದು. ಅವರಿಗೆ ಸಂತೋಷವಾದ್ರೆ ನಾವು ಮಾಡಿರುವ ಕೆಲಸಕ್ಕೆ ಸಾರ್ಥಕತೆ ಸಿಗೋದು. ಇದು ಮೊದಲನೆಯ ದಿನ, ಮುಂದಿನ ದಿನಗಳಲ್ಲಿ ಯಾವ ರೀತಿ ರೆಸ್ಪಾನ್ಸ್ ಬರುತ್ತೋ ಅಂತ ಕಾಯ್ತಿದ್ದೀನಿ. ಅಭಿಮಾನಿಗಳೇ ನಮ್ಮ ವಿಮರ್ಶಕರು ಅವರು ಸಿನಿಮಾ ನೋಡಿ ಸಂತೋಷ ಪಟ್ಟರೆ ನಮಗೂ ಸಂತೋಷ ಎಂದು ಹೇಳಿದ್ದಾರೆ.

    ಅಲ್ಲದೇ ಚಿತ್ರಮಂದಿರಗಳಲ್ಲಿ ಕಟೌಟ್ ನಿಲ್ಲಿಸಿ, ಪೂಜೆ ಮಾಡಿ ನಟಸಾರ್ವಭೌಮ ಚಿತ್ರವನ್ನು ಹಬ್ಬದ ರೀತಿ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಅವರ ಪ್ರೀತಿಗೆ ನಾನು ಹಾಗೂ ನಮ್ಮ ಕುಟುಂಬದವರು ಎಂದಿಗೂ ಚಿರಋಣಿ ಎಂದು ಅಭಿಮನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ಈಗಾಗಲೇ ನಟಸಾರ್ವಭೌಮ ಸಿನಿಮಾವನ್ನು ರಾಘವೇಂದ್ರ ರಾಜ್‍ಕುಮಾರ್ ಹಾಗೂ ಕುಟುಂಬದವರು ತ್ರಿವೇಣಿ ಚಿತ್ರಮಂದಿರದಲ್ಲಿ ವೀಕ್ಷಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಟಸಾರ್ವಭೌಮ ಚಿತ್ರ ಅಭಿಮಾನಿಗಳ ಮನತಣಿಸಿ, ಯಶಸ್ವಿಯಾಗಲಿ: ಪುನೀತ್‍ಗೆ ಸ್ಟಾರ್ ನಟ ವಿಶ್

    ನಟಸಾರ್ವಭೌಮ ಚಿತ್ರ ಅಭಿಮಾನಿಗಳ ಮನತಣಿಸಿ, ಯಶಸ್ವಿಯಾಗಲಿ: ಪುನೀತ್‍ಗೆ ಸ್ಟಾರ್ ನಟ ವಿಶ್

    ಬೆಂಗಳೂರು: ಸ್ಯಾಂಡಲ್‍ವುಡ್ ಬಹುನಿರೀಕ್ಷಿತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಟಿಸಿದ ‘ನಟಸಾರ್ವಭೌಮ’ ಚಿತ್ರ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ರಾಕಿಂಗ್ ಸ್ಟಾರ್ ಯಶ್ ಅವರು ಪುನೀತ್ ಅವರ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

    ರಾಕಿಂದ ಸ್ಟಾರ್ ಯಶ್ ತಮ್ಮ ಟ್ವಿಟ್ಟರಿನಲ್ಲಿ, “ತಮ್ಮ ವಿಶಿಷ್ಟ ರೀತಿಯ ನೃತ್ಯ ಹಾಗೂ ವಿಭಿನ್ನ ಪಾತ್ರ ಪೋಷಣೆಯ ಮೂಲಕ ಅಪಾರ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಪವರ್ ಸ್ಟಾರ್ ಅಪ್ಪು ಸರ್ ಅಭಿನಯದ ‘ನಟಸಾರ್ವಭೌಮ’ ಚಿತ್ರವು ಅಭಿಮಾನಿಗಳ ಮನತಣಿಸಿ, ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

    ಅಲ್ಲದೇ ಯಶ್ ಅವರು ಪುನೀತ್ ಜೊತೆಯಿರುವ ಫೋಟೋ ಹಾಕಿ ಅದಕ್ಕೆ, “ಪವರ್ ಸ್ಟಾರ್ ಅಪ್ಪು ಅವರು, ಸಹೃದಯಿ ನಿರ್ಮಾಪಕರಾದ ರಾಕ್‍ಲೈನ್ ವೆಂಕಟೇಶ್, ನಿರ್ದೇಶಕರಾದ ಸಹೋದರ ಪವನ್ ಒಡೆಯರ್, ಛಾಯಾಗ್ರಾಹಕ ರಾ ವೈದಿ ಸೇರಿದಂತೆ ನಟಸಾರ್ವಭೌಮ ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳು” ಎಂದು ಯಶ್ ಟ್ವೀಟ್ ಮಾಡಿದ್ದಾರೆ.

    ಇಂದು ನಟಸಾರ್ವಭೌಮ ಚಿತ್ರ ಬಿಡುಗಡೆ ಆಗಿದ್ದು, ಪ್ರೇಕ್ಷಕರು ಭರ್ಜರಿಯಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಇದೇ ವೇಳೆ ಪುನೀತ್ ರಾಜ್‍ಕುಮಾರ್ ಅವರು ಚಿತ್ರ ಬಿಡುಗಡೆ ಆದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ.

    ಬೆಂಗಳೂರಿನ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಬುಧವಾರ ರಾತ್ರಿ 10 ಗಂಟೆಗೆ ಫಸ್ಟ್ ಶೋ ನಡೆದಿದೆ. ಅಭಿಮಾನಿಗಳು ನಟಸಾರ್ವಭೌಮ ಚಿತ್ರವನ್ನು ಭರ್ಜರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ. ಅಲ್ಲದೆ ಚಿತ್ರದ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಚಿತ್ರಮಂದಿರಕ್ಕೆ ಭೇಟಿ ನೀಡಿ ಚಿತ್ರ ವೀಕ್ಷಿಸಿದ್ದಾರೆ.

    ಒಟ್ಟು 500ಕ್ಕೂ ಹೆಚ್ಚಿನ ಸ್ಕ್ರೀನ್‍ಗಳಲ್ಲಿ ನಟಸಾರ್ವಭೌಮ ರಿಲೀಸ್ ಆಗಿದ್ದು, ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ನಟಸಾರ್ವಭೌಮ ಚಿತ್ರ 2 ಚಿತ್ರಮಂದಿರಗಳಲ್ಲಿ 24 ಗಂಟೆಗಳ ಪ್ರದರ್ಶನ ಕಾಣಲಿದೆ. ಬೆಂಗಳೂರಿನ ಊರ್ವಶಿ ಮತ್ತು ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಒಂದೇ ದಿನದಲ್ಲಿ 8 ಬಾರಿ ಸಿನಿಮಾ ಪ್ರದರ್ಶನ ಕಾಣುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನ್ನಸಂತರ್ಪಣೆಯೊಂದಿಗೆ `ನಟಸಾರ್ವಭೌಮ’ನಿಗೆ ಅಭಿಮಾನಿಗಳು ಸ್ವಾಗತ

    ಅನ್ನಸಂತರ್ಪಣೆಯೊಂದಿಗೆ `ನಟಸಾರ್ವಭೌಮ’ನಿಗೆ ಅಭಿಮಾನಿಗಳು ಸ್ವಾಗತ

    ಚಿತ್ರದುರ್ಗ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ನಟಸಾರ್ವಭೌಮ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ನಟ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ಜಿಲ್ಲೆಯ ಬಸವೇಶ್ವರ ಚಿತ್ರ ಮಂದಿರದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

    ಕೋಟೆನಾಡಿನ ಬಸವೇಶ್ವರ ಚಿತ್ರ ಮಂದಿರದಲ್ಲಿ ತೆರೆಕಂಡಿರೋ ನಟಸಾರ್ವಭೌಮ ಚಿತ್ರ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಬೆಳ್ಳಂಬೆಳಗ್ಗೆ ಅನ್ನಸಂತರ್ಪಣೆ ಏರ್ಪಡಿಸಿ ಅಭಿಮಾನಿಗಳು ನಟಸಾರ್ವಭೌಮನಿಗೆ ವಿನೂತವಾಗಿ ಸ್ವಾಗತ ಕೋರಿದ್ದಾರೆ. ಮೊದಲ ಶೋಗೆ ಚಿತ್ರಮಂದಿರ ಮುಂದೆ ಅಪ್ಪು ಫ್ಯಾನ್ಸ್ ಕಿಕ್ಕಿರಿದು ಸೇರಿದ್ದಾರೆ. ಅಪ್ಪು ಬೃಹತ್ ಕಟೌಟ್ ಮುಂದೆ ಕುಂಬಳಕಾಯಿ ಒಡೆದು, ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ನಟಸಾರ್ವಭೌಮನನ್ನು ಅಭಿಮಾನಿಗಳು ಭರ್ಜರಿಯಾಗಿ ಬರ ಮಾಡಿಕೊಂಡಿದ್ದಾರೆ.

    ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನಟಸಾರ್ವಭೌಮನಾಗಿ ನೋಡಲು ಬಹು ದಿನಗಳಿಂದ ಕಾತುರದಿಂದ ಕಾದು ಕುಳಿತಿದ್ದರು. ಬೆಳ್ಳಂಬೆಳಗ್ಗೆ 5 ಗಂಟೆಗೆ ಚಿತ್ರಮಂದಿರದ ಬಳಿ ಅಪ್ಪು ಅಭಿಮಾನಿಗಳು ಜಮಾಯಿಸಿದ್ದು, ಈಗಾಗಲೇ 7 ಗಂಟೆಯಿಂದ ಬಸವೇಶ್ವರ ಚಿತ್ರ ಮಂದಿರದಲ್ಲಿ ಮೊದಲ ಶೋ ಆರಂಭವಾಗಿದೆ. ಅಭಿಮಾನಿಗಳು ಚಿತ್ರ ವೀಕ್ಷಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶುರುವಾಯ್ತು ನಟಸಾರ್ವಭೌಮನ ಆರ್ಭಟ – ಅಭಿಮಾನಿಗಳಿಂದ ಭರ್ಜರಿ ಸ್ವಾಗತ

    ಶುರುವಾಯ್ತು ನಟಸಾರ್ವಭೌಮನ ಆರ್ಭಟ – ಅಭಿಮಾನಿಗಳಿಂದ ಭರ್ಜರಿ ಸ್ವಾಗತ

    ಬೆಂಗಳೂರು: ಸ್ಯಾಂಡಲ್‍ವುಡ್ ಬಹುನಿರೀಕ್ಷೆಯ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರ ಬಿಡುಗಡೆ ಆಗಿದ್ದು, ಸಿನಿಮಾದ ಆರ್ಭಟ ಈಗಾಗಲೇ ಶುರುವಾಗಿದೆ.

    ಬೆಂಗಳೂರಿನ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಬುಧವಾರ ರಾತ್ರಿ 10 ಗಂಟೆಗೆ ಫಸ್ಟ್ ಶೋ ನಡೆದಿದೆ. ಅಭಿಮಾನಿಗಳು ನಟಸಾರ್ವಭೌಮ ಚಿತ್ರವನ್ನು ಭರ್ಜರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ. ಅಲ್ಲದೆ ಚಿತ್ರದ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಥೀಯೇಟರ್ ಗೆ ಭೇಟಿ ನೀಡಿ ಚಿತ್ರ ವೀಕ್ಷಿಸಿದ್ದಾರೆ.

    ಒಟ್ಟು 500ಕ್ಕೂ ಹೆಚ್ಚಿನ ಸ್ಕ್ರೀನ್‍ಗಳಲ್ಲಿ ನಟಸಾರ್ವಭೌಮ ರಿಲೀಸ್ ಆಗಿದ್ದು, ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ನಟಸಾರ್ವಭೌಮ ಚಿತ್ರ 2 ಚಿತ್ರಮಂದಿರಗಳಲ್ಲಿ 24 ಗಂಟೆಗಳ ಪ್ರದರ್ಶನ ಕಾಣಲಿದೆ. ಬೆಂಗಳೂರಿನ ಊರ್ವಶಿ ಮತ್ತು ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಒಂದೇ ದಿನದಲ್ಲಿ 8 ಬಾರಿ ಸಿನಿಮಾ ಪ್ರದರ್ಶನ ಕಾಣುವ ಮೂಲಕ ಹೊಸ ದಾಖಲೆಗೆ ಮುಂದಾಗಿದೆ. ಇದನ್ನೂ ಓದಿ: ನೆಚ್ಚಿನ ನಟನ ಸಿನಿಮಾ ನೋಡಲು ರಜೆ ಪತ್ರ ಬರೆದ ವಿದ್ಯಾರ್ಥಿನಿ

    ನಟಸಾರ್ವಭೌಮ ಚಿತ್ರ ಕ್ರೇಜ್ ರಾಜ್ಯಾದ್ಯಂತ ಹೆಚ್ಚಾಗಿದೆ. ತಮ್ಮ ನೆಚ್ಚಿನ ನಟನ ಸಿನಿಮಾ ಫಸ್ಟ್ ಶೋ ವೀಕ್ಷಿಸಲು ಅಭಿಮಾನಿಗಳು ರಜೆ ಕೋರಿ ಪತ್ರ ಬರೆದಿದ್ದಾರೆ. ಮೈಸೂರಿನ ಕಾಲೇಜಿನ ವಿದ್ಯಾರ್ಥಿನಿ ಚಿತ್ರ ವೀಕ್ಷಿಸಲು ರಜೆ ಕೋರಿ ಪತ್ರ ಬರೆದರೆ, ಬಾಗಲಕೋಟೆಯಲ್ಲಿ ಗ್ರಾಮ ಪಂಚಾಯ್ತು ನೌಕರ ಕೂಡ ರಜೆ ಕೋರಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸಿನಿಮಾ ನೋಡಲು ರಜೆ ಕೇಳಿದ ಮೈಸೂರು ವಿದ್ಯಾರ್ಥಿನಿಗೆ ಪುನೀತ್ ಸಲಹೆ

    ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಜೊತೆ ಡಿಂಪಲ್ ಬೆಡಗಿ ರಚಿತಾ ರಾಮ್, ಅನುಪಮಾ ಪರಮೇಶ್ವರ್, ಸಾಧುಕೋಕಿಲಾ, ಬಿ. ಸರೋಜಾ ದೇವಿ, ಚಿಕ್ಕಣ್ಣ, ರವಿಶಂಕರ್ ನಟಿಸಿದ್ದಾರೆ. ಈ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸಿದ್ದು, ಪವನ್ ಒಡೆಯರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

    `ರಣವಿಕ್ರಮ’ ಸಿನಿಮಾದ ಬಳಿಕ ಪುನೀತ್ ರಾಜ್‍ಕುಮಾರ್ ಹಾಗೂ ಪವನ್ ಒಡೆಯರ್ ಒಂದಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರ ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿತ್ರ ವೀಕ್ಷಣೆಗಾಗಿ ರಜೆ ಕೇಳಿದ ಗ್ರಾಮ ಪಂಚಾಯ್ತಿ ನೌಕರ

    ಚಿತ್ರ ವೀಕ್ಷಣೆಗಾಗಿ ರಜೆ ಕೇಳಿದ ಗ್ರಾಮ ಪಂಚಾಯ್ತಿ ನೌಕರ

    ಬಾಗಲಕೋಟೆ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಹುನಿರೀಕ್ಷಿತ ‘ನಟಸಾರ್ವಭೌಮ’ ಚಿತ್ರ ವೀಕ್ಷಿಸಲು ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ರಜೆ ಕೋರಿ ಪತ್ರ ಬರೆದಿದ್ದಾರೆ.

    ಅನಿಲ್ ಚೌಹಾನ್ ರಜೆ ಪತ್ರ ಕಳುಹಿಸಿದ ನೌಕರ. ಅನಿಲ್ ಬಾಗಲಕೋಟೆ ತಾಲೂಕಿನ ಸೀಗಿಕೇರಿ ಪಂಚಾಯ್ತಿ ಬಿಲ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅನಿಲ್, ಪುನೀತ್ ರಾಜ್‍ಕುಮಾರ್ ಅವರ ಕಟ್ಟಾ ಅಭಿಮಾನಿ ಆಗಿದ್ದು, ಗುರುವಾರ ಬಿಡುಗಡೆ ಆಗುತ್ತಿರುವ ನಟಸಾರ್ವಭೌಮ ಚಿತ್ರ ವೀಕ್ಷಿಸಲು ರಜೆ ಕೋರಿದ್ದಾರೆ.

    ಅನಿಲ್ ಅವರು ಪಂಚಾಯ್ತಿ ಪಿಡಿಓ ಹಿರೇಮಠ್ ಅವರಿಗೆ ವಾಟ್ಸಪ್ ಮೂಲಕ ರಜೆ ಪತ್ರ ಕಳುಹಿಸಿದ್ದಾರೆ. ಅನಿಲ್ ಅವರ ರಜೆ ಕೋರಿಕೆಗೆ ಪಿಡಿಓ ಹಿರೇಮಠ್ ಅವರು ರಜೆ ನೀಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ನೆಚ್ಚಿನ ನಟನ ಸಿನಿಮಾ ನೋಡಲು ರಜೆ ಪತ್ರ ಬರೆದ ವಿದ್ಯಾರ್ಥಿನಿ

    ಪತ್ರದಲ್ಲಿ ಏನಿದೆ?
    ನಟಸಾರ್ವಭೌಮ ಚಿತ್ರ ಬಾಗಲಕೋಟೆಯಲ್ಲಿ ಫೆ. 7ರಂದು ನೋಡಲು ರಾಜ್ಯಾದ್ಯಂತ ಈ ಚಿತ್ರವು ಬಿಡುಗಡೆ ಆಗಲಿದೆ. ಈ ಚಿತ್ರ ಕುಟುಂಬದ ಎಲ್ಲಾ ಸದಸ್ಯರು ಹಾಗೂ ಎಲ್ಲಾ ವಯಸ್ಸಿನವರು ನೋಡುವಂತಹ ಒಳ್ಳೆಯ ಚಿತ್ರವಾಗಿದ್ದು ಹಾಗೂ ಚಿತ್ರದ ನಟ ನಮ್ಮ ರಾಜಕುಮಾರ ಅವರ ಹೆಮ್ಮೆಯ ತೃತೀಯ ಮಗನಾದ ಪುನೀತ್ ರಾಜ್‍ಕುಮಾರ್ ಅವರಾಗಿದ್ದು, ಹಾಗಾಗಿ ನಾನು ನಟಸಾರ್ವಭೌಮ ಚಿತ್ರ ನೋಡಲು ದಿನಾಂಕ 7ರಂದು ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿರುವುದರಿಂದ ನಾನು ಒಂದು ದಿನದ ರಜೆಯನ್ನು ಕೋರಿರುತ್ತೇನೆ. ಆದ್ದರಿಂದ ನನಗೆ ಕಾರ್ಯಾಲಯಕ್ಕೆ ಹಾಜರಾಗಲು ಆಗುವುದಿಲ್ಲ ಎಂದು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸಿನಿಮಾ ನೋಡಲು ರಜೆ ಕೇಳಿದ ಮೈಸೂರು ವಿದ್ಯಾರ್ಥಿನಿಗೆ ಪುನೀತ್ ಸಲಹೆ

    ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಜೊತೆ ಡಿಂಪಲ್ ಬೆಡಗಿ ರಚಿತಾ ರಾಮ್, ಅನುಪಮಾ ಪರಮೇಶ್ವರ್, ಸಾಧುಕೋಕಿಲಾ, ಬಿ. ಸರೋಜಾ ದೇವಿ, ಚಿಕ್ಕಣ್ಣ, ರವಿಶಂಕರ್ ನಟಿಸಿದ್ದಾರೆ. ಈ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸಿದ್ದು, ಪವನ್ ಒಡೆಯರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. `ರಣವಿಕ್ರಮ’ ಸಿನಿಮಾದ ಬಳಿಕ ಪುನೀತ್ ರಾಜ್‍ಕುಮಾರ್ ಹಾಗೂ ಪವನ್ ಒಡೆಯರ್ ಒಂದಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದ್ದು, ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರ ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿನಿಮಾ ನೋಡಲು ರಜೆ ಕೇಳಿದ ಮೈಸೂರು ವಿದ್ಯಾರ್ಥಿನಿಗೆ ಪುನೀತ್ ಸಲಹೆ

    ಸಿನಿಮಾ ನೋಡಲು ರಜೆ ಕೇಳಿದ ಮೈಸೂರು ವಿದ್ಯಾರ್ಥಿನಿಗೆ ಪುನೀತ್ ಸಲಹೆ

    – ಮಕ್ಕಳಂದ್ರೆ ನನಗೆ ತುಂಬಾ ಇಷ್ಟ ಅಂದ್ರು ಪವರ್ ಸ್ಟಾರ್

    ಬೆಂಗಳೂರು: ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಬಿಡುಗಡೆಯ ದಿನ ತನಗೆ ರಜೆ ನೀಡಬೇಕು ಎಂದು ರಜಾ ಅರ್ಜಿ ಬರೆದ ಮೈಸೂರು ವಿದ್ಯಾರ್ಥಿನಿಗೆ ಪುನೀತ್ ಅಪ್ಪು ಸಲಹೆ ನೀಡಿದ್ದಾರೆ.

    ಚಿತ್ರದ ಕುರಿತು ಪಬ್ಲಿಕ್ ಟಿವಿ ನಟ ಪುನೀತ್ ಅವರನ್ನು ಸಂದರ್ಶನ ನಡೆಸಿತ್ತು. ಈ ವೇಳೆ ಮಾತನಾಡುತ್ತಾ, ಮೈಸೂರು ವಿದ್ಯಾರ್ಥಿನಿ ಚಿತ್ರ ರಿಲೀಸ್ ದಿನದಂದು ತನಗೆ ರಜೆ ನೀಡಬೇಕು ಎಂದು ಬರೆದಿರುವ ಪತ್ರದ ವಿಚಾರ ಪ್ರಸ್ತಾಪವಾಯಿತು. ಈ ಸಂದರ್ಭದಲ್ಲಿ ಪುನೀತ್, ತುಂಬಾ ಧನ್ಯವಾದಗಳು. ದಯವಿಟ್ಟು ಈ ರೀತಿ ಮಾಡಿಕೊಳ್ಳಬೇಡಿ ಎಂದು ಕೈ ಮುಗಿದು ಕೇಳಿಕೊಂಡರು. ಒಬ್ಬಳು ವಿದ್ಯಾರ್ಥಿನಿಯಾಗಿ ಮೊದಲು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ. ಪ್ರೀತಿ, ವಿಶ್ವಾಸ ಹಾಗೆಯೇ ಉಳಿಸಿಕೊಳ್ಳಿ. ಓದು ಮುಗಿದ ಬಳಿಕ ಸಿನಿಮಾ ವೀಕ್ಷಿಸಿ ಎಂದು ಸಲಹೆ ನೀಡಿದ್ದಾರೆ.

    ಅಪ್ಪ-ಅಮ್ಮನಿಗೆ ಧನ್ಯವಾದ:
    ನಿಮ್ಮ ಕಂಡ್ರೆ ಯಾಕೆ ಎಲ್ಲರಿಗೂ ಇಷ್ಟ ಎಂದು ಇದೇ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲು ನನ್ನ ತಂದೆ-ತಾಯಿಗೆ ಧನ್ಯವಾದ ತಿಳಿಸಿದ್ರು. ಚಿಕ್ಕವಯಸ್ಸಿನಿಂದಲೇ ಸಿನಿಮಾಗಳನ್ನು ಮಾಡುತ್ತಿದ್ದೇನೆ ಅಲ್ಲವೇ? ಅದಕ್ಕೆ ಚಿಕ್ಕವರಿಂದ ಹಿಡಿದು ತಾತ-ಮುತ್ತಾತರವರೆಗೂ ನನ್ನ ಕಂಡರೆ ಇಷ್ಟ ಆಗಿರಬಹುದು. ಇನ್ನು ಮಕ್ಕಳಾದ ತಕ್ಷಣ ತಂದೆ-ತಾಯಿ ತಮ್ಮ ಮಕ್ಕಳಲ್ಲಿ ನಾವು ಚಿಕ್ಕವರಿದ್ದಾಗ ಈ ಹಾಡು ನೋಡುತ್ತಿದ್ದೆವು ನೋಡು ಅಂತ ಹೇಳುತ್ತಾರೆ. ಹೀಗೆ ನೋಡುತ್ತಾ ನೋಡುತ್ತಾ ಅವರು ಇಷ್ಟಪಟ್ಟಿರಬಹುದು ಅಂದ್ರು.

    ಸಾಮಾಜಿಕ ಜಾಲತಾಣದಲ್ಲೂ ಕೆಲವು ಬಾರಿ ತೋರಿಸುವುದನ್ನು ನಾನು ಗಮನಿಸಿದ್ದೇನೆ. ಪೋಸ್ಟರ್ ನೋಡಿಕೊಂಡು ಮಕ್ಕಳು ಯಾರು ಅಂತ ಗುರುತು ಹಿಡಿಯುವುದು, ಫೋನಿನಲ್ಲಿ ಫೋಟೋ ತೋರಿಸೋದನ್ನು ನೋಡಿದ್ದೇನೆ. ಇವೆಲ್ಲವನ್ನೂ ನೋಡಿದ್ರೆ ನನಗೆ ತುಂಬಾ ಸಂತಸವಾಗುತ್ತದೆ. ನನಗೂ ಮಕ್ಕಳೆಂದರೆ ತುಂಬಾ ಪ್ರೀತಿ. ತುಂಬಾನೇ ಇಷ್ಟ ಪಡುತ್ತೇನೆ. ಆ ಮಕ್ಕಳಲ್ಲಿ ಸಾಕಷ್ಟು ಮುಗ್ಧತೆ ಇರುತ್ತದೆ. ಒಟ್ಟಿನಲ್ಲಿ ನನ್ನನ್ನು ಸಿನಿಮಾ ರಂಗಕ್ಕೆ ಕರೆದುಕೊಂಡು ಬಂದ ನನ್ನ ತಂದೆ-ತಾಯಿಗೆ ಧನ್ಯವಾದಗಳು ಎಂದರು.

    ಪುನೀತ್ ರಾಜ್‍ಕುಮಾರ್ ಜೊತೆ ಡಿಂಪಲ್ ಬೆಡಗಿ ರಚಿತಾ ರಾಮ್, ಅನುಪಮಾ ಪರಮೇಶ್ವರ್, ಸಾಧುಕೋಕಿಲಾ, ಬಿ.ಸರೋಜಾ ದೇವಿ, ಚಿಕ್ಕಣ್ಣ, ರವಿಶಂಕರ್ ನಟಿಸಿದ್ದಾರೆ. ಈ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸಿದ್ದು, ಪವನ್ ಒಡೆಯರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. `ರಣವಿಕ್ರಮ’ ಸಿನಿಮಾದ ಬಳಿಕ ಪುನೀತ್ ರಾಜ್‍ಕುಮಾರ್ ಹಾಗೂ ಪವನ್ ಒಡೆಯರ್ ಒಂದಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದ್ದು, ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರ ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ನಮ್ಮ ಕನ್ನಡಿಗರು ಎಲ್ಲೆಲ್ಲ ಇದ್ದಾರೆ ಅಲ್ಲೆಲ್ಲ ಸಿನಿಮಾ ರಿಲೀಸ್ ಮಾಡುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv