ಬಿ.ಬಿ.ಆರ್ ಫಿಲ್ಮಂಸ್ ಹಾಗೂ ಎವರೆಸ್ಟ್ ಇಂಡಿಯಾ ಎಂಟರ್ ಟೈನರ್ ಬ್ಯಾನರ್ ನಡಿ ಬಿ.ಬಸವರಾಜ್ ಹಾಗೂ ರೇಣುಕಾ ಬಸವರಾಜ್ ಚೊಚ್ಚಲ ಬಾರಿಗೆ ನಿರ್ಮಾಣ ಮಾಡ್ತಿರುವ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ.
ಪಂಚಮ ವೇದ, ಶ್ರೀಗಂಧ, ಅರಗಿಣಿ, ಅರುಣೋದಯ, ರಂಗೋಲಿ, ಅಂಡಮಾನ್, ಮುಂಜಾನೆ ಮಂಜು, ಮುಸುಕು ಸಿನಿಮಾಗಳ ಖ್ಯಾತಿ ಹಿರಿಯ ನಿರ್ದೇಶಕ ಕೆ.ಎಚ್.ವಿಶ್ವನಾಥ್ (K.H. Vishwanath) ಆಕ್ಷನ್ ಕಟ್ ಹೇಳ್ತಿರುವ ಚಿತ್ರಕ್ಕೆ ‘ಆಡೇ ನಮ್ God’ (Aade Nam God) ಎಂಬ ಶೀರ್ಷಿಕೆ ಇಡಲಾಗಿದೆ. ಇದನ್ನೂ ಓದಿ:ಬೀಚ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ನಟಿ ಇಲಿಯಾನಾ
ಮೂಡನಂಬಿಕೆ ಸುತ್ತ ಸಾಗುವ ಈ ಕಥೆಯಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, ರಾಮ ರಾಮ ರೇ ಸಿನಿಮಾ ಖ್ಯಾತಿಯ ನಟರಾಜ್ (Nataraj), ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಪಿಂಕಿ ಎಲ್ಲಿ ಚಿತ್ರದ ಅನೂಪ್ ಶೂನ್ಯ, ಸಾರಿಕ ರಾವ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಬಿ ಸುರೇಶ್ ಸೇರಿದಂತೆ ಇತರರು ತಾರಾಬಳಗದಲ್ಲಿದ್ದಾರೆ.
ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ಬಿ.ಎಸ್,ಕೆಂಪರಾಜು ಸಂಕಲನ, ಸ್ವಾಮಿನಾಥನ್ ಸಂಗೀತ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಅಕ್ಷಯ್ ವಿಶ್ವನಾಥ್ ಚಿತ್ರಕಥೆ-ಸಹ ನಿರ್ದೇಶನ ‘ಆಡೇ ನಮ್ God’ ಚಿತ್ರಕ್ಕಿದೆ. ಸೆನ್ಸಾರ್ ಪಾಸಾಗಿರುವ ಸಿನಿಮಾ ಶೀಘ್ರದಲ್ಲಿಯೇ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಕುಂ.ವೀರಭದ್ರಪ್ಪ ‘ಕುಬುಸ’ ಕಥೆ ಆಧಾರಿಸಿ ರಘು ರಾಮಚರಣ್ ಹೂವಿನ ಹಡಗಲಿ ‘ಕುಬುಸ’ ಸಿನಿಮಾ ನಿರ್ದೇಶಿಸಿದ್ದಾರೆ. ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವ ಈ ಚಿತ್ರ ಜನವರಿ ಕೊನೆಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ತಾಯಿ ಮಗನ ಸೆಂಟಿಮೆಂಟ್ ಹೊತ್ತ ಈ ಸಿನಿಮಾ ಸೆನ್ಸಾರ್ ಅಂಗಳದಲ್ಲಿ ಪಾಸ್ ಆಗಿದ್ದು ‘ಯು’ ಸರ್ಟಿಫಿಕೇಟ್ ಪಡೆದುಕೊಂಡಿದೆ. ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡಲಿದೆ. ‘ಕುಬುಸ’ ಆರ್. ಚಂದ್ರು ಶಿಷ್ಯ ರಘು ರಾಮಚರಣ್ ಹೂವಿನ ಹಡಗಲಿ ನಿರ್ದೇಶನದ ಮೊದಲ ಸಿನಿಮಾ. ನಿರ್ದೇಶಕರಾದ ಟಿ.ಎಸ್. ನಾಗಾಭರಣ, ಪ್ರೇಮ್, ಸತ್ಯ ಪ್ರಕಾಶ್ ಸಿನಿಮಾಗಳಲ್ಲೂ ಸಹಾಯಕ ನಿರ್ದೇಶಕನಾಗಿ, ಕಲಾವಿದನಾಗಿ ಗುರುತಿಸಿಕೊಂಡಿರುವ ಇವರು ‘ಕುಬುಸ’ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.
ಕಲ್ಲು ಒಡೆದು ಹಳ್ಳಿಯಲ್ಲಿ ಜೀವನ ಸಾಗಿಸುವ ತಾಯಿ ತನ್ನ ಮಗನನ್ನು ದೂರದ ಊರಿನಲ್ಲಿ ಓದಿಸುತ್ತಿರುತ್ತಾಳೆ. ಯಾವತ್ತೂ ಬೇರೆ ಊರಿಗೆ ಪಯಣ ಬೆಳೆಸದ, ಬಸ್ಸು ಕೂಡ ಹತ್ತಿರದ ಆಕೆಯನ್ನು ಮಗ ಕೆಲಸ ಸಿಕ್ಕ ಮೇಲೆ ನಗರಕ್ಕೆ ಕರೆದುಕೊಂಡು ಬರುತ್ತಾನೆ. ಮೊದಲಿನಿಂದಲೂ ಕುಬುಸ ಧರಿಸಿ ಅಭ್ಯಾಸವಿರದ ಆಕೆ ಈ ಕಾರಣದಿಂದ ನಗರಕ್ಕೆ ಬಂದಾಗ ಹೇಗೆಲ್ಲ ಜನರಿಂದ ಮುಜುಗರಕ್ಕೆ ಒಳಗಾಗುತ್ತಾಳೆ, ಮುಂದೆ ಏನಾಗುತ್ತೆ ಅನ್ನೋದು ಸಿನಿಮಾದ ಕಹಾನಿ. ತಾಯಿ ಮಗನ ಸೆಂಟಿಮೆಂಟ್ ಇರುವ ಈ ಚಿತ್ರದಲ್ಲಿ ರಾಮ ರಾಮ ರೇ ಸಿನಿಮಾ ಖ್ಯಾತಿಯ ನಟರಾಜ್. ಎಸ್. ಭಟ್, ರಂಗಭೂಮಿ ಕಲಾವಿದೆ ಹನುಮಕ್ಕ ಮರಿಯಮ್ಮನ ಹಳ್ಳಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟರಾಜ್. ಎಸ್. ಭಟ್ ಚಿತ್ರದಲ್ಲಿ ಎರಡು ಶೇಡ್ ನಲ್ಲಿ ನಟಿಸಿದ್ದು, ಆರ್ಯ ಮೈಸೂರು, ಅನಿಕ ರಮ್ಯ, ಮಹಾಲಕ್ಷ್ಮೀ ಕೂಡ ಚಿತ್ರದ ಲೀಡ್ ರೋಲ್ ನಲ್ಲಿ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ
ಪದ್ಮಶ್ರೀ ಪುರಸ್ಕೃತ ಜೋಗತಿ ಮಂಜಮ್ಮ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ದೊಡ್ಡ ಪಾತ್ರವೊಂದನ್ನು ಪೋಷಣೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಯುವ ಪ್ರಶಸ್ತಿ ಹಾಗೂ ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಗುಂಡಿ ರಮೇಶ್ ಹಾಗೂ ಪತ್ನಿ ಗುಂಡಿ ಭಾರತಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಹೊನ್ನಾವರ ಸ್ವಾಮಿ, ಹುಲಿಗಪ್ಪ ಕಟ್ಟೋಮನಿ, ಕನ್ನಡ ಕಲಾ ಸಂಘ ಹೊಸಪೇಟೆ ಕಲಾವಿದರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ಕಲಾತ್ಮಕ ಸಿನಿಮಾಗಳಿಗಿಂತ ಭಿನ್ನವಾದ ಹೊಸತನ ಒಳಗೊಂಡ ಸಿನಿಮಾ ‘ಕುಬುಸ’. ಚಿತ್ರದಲ್ಲಿ ಮೂಲ ಕಥೆಯಲ್ಲಿರುವಂತೆ ಬಳ್ಳಾರಿ ಭಾಷೆಯ ಸೊಗಡನ್ನು ಕಾಣಬಹುದಾಗಿದೆ. ಮ್ಯೂಸಿಕಲ್ ಸಿನಿಮಾ ಕೂಡ ಆಗಿದ್ದು ಸನ್ನಿವೇಶಕ್ಕೆ ತಕ್ಕ ಹಾಗೆ ನಾಲ್ಕು ಹಾಡುಗಳಿದ್ದು ನಾಲ್ಕು ಬಿಟ್ ಗಳಿವೆ. ಜೋಗಿ ಪ್ರೇಮ್, ವಾಸುಕಿ ವೈಭವ್, ಶೃತಿ.ವಿ.ಎಸ್, ಶಿಲ್ಪ ಮುಡ್ಬಿ, ಪ್ರದೀಪ್ ಚಂದ್ರ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ.
ಪ್ರದೀಪ್ ಚಂದ್ರ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಶರ್ಮಾ. ಎ ಕ್ಯಾಮೆರಾ ವರ್ಕ್, ಶಿವಮೂರ್ತಿ ಡೋಣಿಮಲೈ ಸಹ ನಿರ್ದೇಶನ ಚಿತ್ರಕ್ಕಿದೆ. ವಿ. ಶೋಭಾ ಸಿನಿಮಾಸ್ ಬ್ಯಾನರ್ ನಡಿ ವಿ. ಶೋಭಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲಿದೆ ಚಿತ್ರತಂಡ.
Live Tv
[brid partner=56869869 player=32851 video=960834 autoplay=true]
ರಾಮಾ ರಾಮಾ ರೇ (Rama Rama Re) ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲೊಂದು. ಥಿಯೇಟರ್ ನಲ್ಲಿ ಬರೋಬ್ಬರಿ 100 ದಿನ ಪೂರೈಸಿದ್ದ ಈ ಚಿತ್ರ ಸಿದ್ಧ ಸೂತ್ರಗಳನ್ನು ಪಕ್ಕಕ್ಕಿಟ್ಟು ತಯಾರಿಸಲಾಗಿತ್ತು. ಹೊಸ ತಾರಾಗಣ, ಹೊಸ ಕಥೆಯನ್ನು ಸತ್ಯಪ್ರಕಾಶ್ ಸಿನಿಮಾಪ್ರೇಮಿಗಳಿಗೆ ಉಣಬಡಿಸಿದ್ದರು. ಇದನ್ನೂ ಓದಿ:ಯುವ ರಾಜ್‌ಕುಮಾರ್ ಸಿನಿಮಾದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದವರಿಗೆ ಇಲ್ಲಿದೆ ಸಿಹಿ ಸುದ್ದಿ
ಪೊಲೀಸರನ್ನು ಕೊಂದು ನೇಣು ಶಿಕ್ಷೆಗೆ ಒಳಗಾಗಿರುವ ಖೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಳ್ಳುವುದರಿಂದ ಆರಂಭವಾಗುವ ಸಿನಿಮಾ, ಅವನು ತಾನಾಗಿಯೇ ಜೈಲಿಗೆ ಬಂದು ಶರಣಾಗುವ ದೃಶ್ಯದೊಂದಿಗೆ ಮುಗಿಯುತ್ತದೆ. ಇದರ ಮಧ್ಯೆ ಬದುಕಲು ಅವನು ನಡೆಸುವ ಹೋರಾಟ, ಪ್ರೇಮಿಗಳ ಕಷ್ಟ, ಸೈನಿಕನ ಪತ್ನಿಯ ಪ್ರಸವ ವೇದನೆ ಎಲ್ಲವನ್ನೂ ನಿರ್ದೇಶಕ ಸತ್ಯ ಪ್ರಕಾಶ್ ಚೆಂದವಾಗಿ ಕಟ್ಟಿಕೊಟ್ಟಿದ್ದರು. ಅಕ್ಟೋಬರ್ 21, 2016ರಂದು ರಿಲೀಸ್ ಆಗಿದ್ದ ಈ ಚಿತ್ರ ಆರು ವರ್ಷದ ಬಳಿಕ ಟಿವಿಯಲ್ಲಿ ಪ್ರದರ್ಶನವಾಗುತ್ತಿದೆ.
ದಸರಾ ಹಬ್ಬದ ಪ್ರಯುಕ್ತ ರಾಮಾ ರಾಮಾ ರೇ ಚಿತ್ರ ಜೀ ಪಿಕ್ಚರ್ಸ್ ನಲ್ಲಿ (OTT) ಸಂಜೆ 6ಕ್ಕೆ ಪ್ರಸಾರವಾಗಲಿದೆ. ಸತ್ಯಪ್ರಕಾಶ್ (Satya Prakash) ಚಿತ್ರಕಥೆ ಬರೆದು ನಿರ್ದೇಶನದಲ್ಲಿ ನಟರಾಜ್ (Nataraj), ಧರ್ಮಣ್ಣ ಕಡೂರ್ (Dharmanna Kadur), ಎಂ.ಕೆ.ಮಠ, ಶ್ರೀಧರ್, ರಾಧಾ ರಾಮಚಂದ್ರ, ಪ್ರಿಯಾ ಷಟಮರ್ಶನ್, ಶ್ರೀಧರ್ ಸೇರಿದಂತೆ ಎಲ್ಲ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದರು. ತಾಂತ್ರಿಕತೆಯಿಂದಲೂ ಗಮನ ಸೆಳೆದಿದ್ದ ರಾಮಾ ರಾಮಾ ರೇ ಕನ್ನಡದ ಪ್ರಯೋಗಾತ್ಮಕ ಸಿನಿಮಾವಾಗಿದ್ದು, ಇಂತಹ ಚಿತ್ರವನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಈಗ ಮನೆಯಲ್ಲಿ ನೋಡಬಹುದು.
Live Tv
[brid partner=56869869 player=32851 video=960834 autoplay=true]
ಸಿನಿಮಾ ರಂಗದಲ್ಲಿ ಈಜುವ ಕನಸು ಇಟ್ಟುಕೊಂಡು ಬರುವ ಅದೆಷ್ಟೋ ಪ್ರತಿಭೆಗಳು ದಡ ಸೇರಲು ನಾನಾ ರೀತಿಯ ಸರ್ಕಸ್ ಮಾಡ್ತಾರೆ. ಪ್ರತಿಭೆ ಜೊತೆಗೆ ಪರಿಶ್ರಮ ಇದ್ದವರು ಮಾತ್ರ ಇಲ್ಲಿ ಗೆಲುವು ದಕ್ಕಿಸಿಕೊಳ್ಳುತ್ತಾರೆ. ನಿರ್ದೇಶಕನಾಗಬೇಕು ಎಂಬ ಸ್ಪಷ್ಟ ನಿಲುವು ಹೊಂದಿದ್ದ ವೀಲ್ ಚೇರ್ ರೋಮಿಯೋ ಸೂತ್ರಧಾರಿ ನಟರಾಜ್‌ಗೆ ಅಷ್ಟು ಸುಲಭವಾಗಿ ನಿರ್ದೇಶಕನಾಗುವ ಅವಕಾಶ ಸಿಗಲಿಲ್ಲ. ಈ ಅವಕಾಶಕ್ಕಾಗಿ ನಟರಾಜ್ ಪಟ್ಟ ಶ್ರಮ ಅಷ್ಟಿಷ್ಟಲ್ಲ.
ಕಳೆದ ಹದಿನೈದು ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟರಾಜ್, ಆರಂಭಿಕ ದಿನಗಳಲ್ಲಿ ಕಷ್ಟವನ್ನು ನುಂಗಿಕೊಂಡು ಬಂದವರು. ಆ ನಂತರ ಮಠ ಗುರುಪ್ರಸಾದ್, ಪಿ.ಸಿ.ಶೇಖರ್, ಪ್ರಶಾಂತ್ ರಾಜ್ ಹೀಗೆ ಹಲವು ನಿರ್ದೇಶಕರ ಗರಡಿಯಲ್ಲಿ ಪಳಗಿದ ನಟರಾಜ್, ಗಣೇಶ್ ನಟನೆಯ ಜೂಮ್, ಆರೆಂಜ್, ರೋಮಿಯೋ ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆಯುವ ಮೂಲಕ ಯಶಸ್ವೀ ಸಂಭಾಷಣಾಕಾರರಾಗಿಯೂ ಚಿತ್ರರಂಗಕ್ಕೆ ಪರಿಚಿತರಾದರು. ಇದನ್ನೂ ಓದಿ: ಈ ವಾರ ಜಾಕ್ ಮಾಮನಾಗಿ ಬರ್ತಿದ್ದಾರೆ ರಂಗಾಯಣ ರಘು
ದಶಕಕ್ಕೂ ಹೆಚ್ಚು ಕಾಲ ನಿರ್ದೇಶನ ವಿಭಾಗದಲ್ಲಿ, ಸಂಭಾಷಣೆಗಾರನಾಗಿಯೂ ತಮ್ಮ ಕಲಾಚಾಕಚಕತ್ಯೆ ತೋರಿಸಿದ ನಟರಾಜ್, ವೀಲ್ ಚೇರ್ ರೋಮಿಯೂ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟರು. ಪ್ರೇಕ್ಷಕರ ರುಚಿಗೆ ತಕ್ಕಂತೆ, ಅವರನ್ನು ಮನರಂಜಿಸುವ ಸಿನಿಮಾ ಮಾಡಲೇಬೇಕು ಎಂಬ ಛಲ ತೊಟ್ಟು ನಟರಾಜ್ ವೀಲ್ ಚೇರ್ ರೋಮಿಯೋ ಚಿತ್ರಕ್ಕೆ ತಯಾರಿಸಿದ್ದಾರೆ.
ಹೊಡಿ ಬಡಿ ಸಿನಿಮಾಗಳ ಹಾವಳಿ ನಡುವೆ ಎಲ್ಲಾ ಚಿತ್ರಪ್ರೇಮಿಗಳಿಗೆ ಇಷ್ಟವಾಗುವ, ಇಡೀ ಕುಟುಂಬ ಕುಳಿತು ನೋಡುವಂತಹ ಚಿತ್ರವನ್ನು ನಟರಾಜ್ ಕಟ್ಟಿಕೊಟ್ಟಿದ್ದಾರೆ ಅನ್ನೋದು ಈಗಾಗಲೇ ಟ್ರೇಲರ್ ಹಾಗೂ ಹಾಡುಗಳಿಗೆ ಸಿಕ್ಕ ಯಶಸ್ಸು ಉದಾಹರಣೆ. ನಮ್ಮ ನಿಮ್ಮ ಮಧ್ಯೆ ನಡುವೆಯ ಒಂದು ಸೂಕ್ಷ್ಮ ಎಳೆಯನ್ನು ಇಟ್ಟುಕೊಂಡು ವೀಲ್ ಚೇರ್ ರೋಮಿಯೋ ಸಿನಿಮಾವನ್ನು ನಟರಾಜ್ ನಿರ್ದೇಶನ ಮಾಡಿದ್ದಾರೆ. ಕಣ್ಣು ಕಾಣದ ವೇಶ್ಯೆ ಮತ್ತು ಸದಾ ವೀಲ್ ಚೇರ್ ಮೇಲೆ ಕುಳಿತುಕೊಳ್ಳುವ ರೋಮಿಯೋ ನಡುವಿನ ಪ್ರೀತಿ ಜೊತೆಗೆ ತಂದೆ-ಮಗನ ಸೆಂಟಿಮೆಂಟ್‌ನ ಈ ಸಿನಿಮಾ ಇದೇ 27ರಂದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ರೋಮಿಯೋ ಆಗಿ ರಾಮ್ ಚೇತನ್ ನಟಿಸಿದ್ದು, ಜೂಲಿಯಟ್ ಆಗಿ ಮಯೂರಿ ಕಾಣಿಸಿಕೊಂಡಿದ್ದಾರೆ. ಒಂದಷ್ಟು ನಿರೀಕ್ಷೆ ಹುಟ್ಟಿಸಿರುವ ವೀಲ್ ಚೇರ್ ರೋಮಿಯೋ ಸಿನಿಮಾ ಪ್ರೇಕ್ಷಕರಿಗೆ ಪಕ್ಕಾ ಮನರಂಜನೆ ನೀಡುವುದು ಸತ್ಯ. ಇದನ್ನೂ ಓದಿ: ನಿರ್ದೇಶಕ ಆರ್‌ಜಿವಿ ವಿರುದ್ಧ 56 ಲಕ್ಷ ವಂಚನೆ ಪ್ರಕರಣ ದಾಖಲು
ಚಲನಚಿತ್ರವನ್ನು ನೋಡಿದ ವಿಮರ್ಶಕ, ಲಾರೆನ್ಸ್ ವೈಟ್ನರ್, ನಿರ್ದೇಶಕರನ್ನ ಅಭಿನಂದಿಸಿ ಟ್ವೀಟ್ ಮಾಡಿ ‘ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್‍ಗಾಗಿ ನೋಡಿದ ಒಂದು ಅದ್ಭುತವಾದ ಭಾರತೀಯ ವ್ಯಂಗ್ಯಭರಿತ ಚಿತ್ರ. … ನಾನು ಅದಕ್ಕೆ 10/10 ನೀಡಿದ್ದೇನೆ’ ಎಂದು ಹೇಳಿದ್ದಾರೆ. ರಾಮಾ ರಾಮಾ ರೇ ಮತ್ತು ಒಂದಲ್ಲಾ ಎರಡಲ್ಲಾ ಸಿನಿಮಾಗಳ ನಂತರ ಮೂರನೇ ಚಿತ್ರ, ಮ್ಯಾನ್ ಆಫ್ ದಿ ಮ್ಯಾಚ್. ಸತ್ಯ ಮತ್ತು ಮಯೂರ ಪಿಕ್ಚರ್ಸ್ ಸಹಯೋಗದಲ್ಲಿ ಪಿಆರ್‌ಕೆ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ
ಆಡಿಷನ್‌ಗೆ ಕರೆದ ನಿರ್ದೇಶಕ, ಆಡಿಷನ್‌ಗೆ ಹಾಜರಾಗುವ ಕಲಾವಿದರ ನಡುವೆ ಘರ್ಷಣೆಯನ್ನು ಸೃಷ್ಟಿಸುವ ಮೂಲಕ ಚಲನಚಿತ್ರವನ್ನು ಮಾಡುತ್ತಾರೆ. ದೊಡ್ಡ ಪಾತ್ರವರ್ಗ ಹೊಂದಿರುವ ಮತ್ತು ಪ್ರಸ್ತುತ ಸಾಮಾಜಿಕ ಸಂಘರ್ಷಗಳನ್ನು ಹಾಸ್ಯಮಯ ಮತ್ತು ವಿಡಂಬನಾತ್ಮಕ ರೀತಿಯಲ್ಲಿ ಸ್ಪರ್ಶಿಸುವ ಚಿತ್ರವಾಗಿದೆ. ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50
ನಟರಾಜ್ ಎಸ್ ಭಟ್ ಮತ್ತು ಧರ್ಮಣ್ಣ ಕಡೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ, ಇಬ್ಬರೂ ರಾಮಾ ರಾಮಾ ರೇ ನಂತರ ಮತ್ತೆ ಒಟ್ಟಿಗೆ ಬರುತ್ತಿದ್ದಾರೆ. ಅಥರ್ವ ಪ್ರಕಾಶ್ ಮತ್ತು ಮಯೂರಿ ನಟರಾಜ್ ಅವರಂತಹ ಹೊಸಬರೊಂದಿಗೆ, ವೀಣಾ ಮತ್ತು ಸುಂದರ್ ಕೂಡ ಈ ಚಿತ್ರದಲ್ಲಿ ತಮ್ಮ ನಿಜ ಜೀವನದ ಪಾತ್ರವನ್ನು ನಿರ್ವಹಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸುವುದರ ಜೊತೆಗೆ, ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ
ರಾಮಾ ರಾಮಾ ರೇ ಸಿನಿಮಾ ಖ್ಯಾತಿಯ ನಟರಾಜ್ ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ವಿಶೇಷ ಅಂದರೆ, ಕನ್ನಡದ ಖ್ಯಾತ ಕಥೆಗಾರ ಕುಂ.ವೀರಭದ್ರಪ್ಪ ಬರೆದ ಕುಬುಸ ಕಥೆಯನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸಿನಿಮಾ ‘ಕುಬುಸ’ ಹೆಸರಿನಲ್ಲೇ ಮೂಡಿ ಬರಲಿದೆ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ
ನಟರಾಜ್ ನಾಯಕನಾಗಿ ಬಣ್ಣ ಹಚ್ಚಿದ್ದು, ಈ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಮೇಶ್ ರೇಣುಕಾ ರಾಮ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಸಿನಿಮಾದ ಫಸ್ಟ್ ಲುಕ್ ನಟರಾಜ್ ಬರ್ತ್ ಡೇಗೆ ರಿಲೀಸ್ ಆಗಿದೆ. ನಟರಾಕ್ಷಸ ಡಾಲಿ ಧನಂಜಯ್ ಫಸ್ಟ್ ಲುಕ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅಂದಹಾಗೇ ಕುಬುಸ ಸಿನಿಮಾಗೆ ವಿ ಶೋಭಾ ಶರ್ಮಾ ಬಂಡವಾಳ ಹಾಕಿದ್ದು, ಚೇತನ್ ಶರ್ಮಾ ಕ್ಯಾಮೆರಾ, ಪ್ರವೀಣ್ ಚಂದ್ರ ಮ್ಯೂಸಿಕ್ ಚಿತ್ರಕ್ಕಿದೆ. ಇದನ್ನೂ ಓದಿ : ನಾನು ರಾಧಿಕಾ ಕುಮಾರಸ್ವಾಮಿ’.. ನಿಮ್ಮೊಂದಿಗೆ..
ನಟರಾಜ್.. ಮೂಲತಃ ಚಿಕ್ಕಮಗಳೂರಿನ ಕಡೂರಿನವರಾದ ನಟರಾಜ್ ಕಾನೂನು ಪದವೀದರರು. ಕಾನೂನು ಪದವಿ ಪಡೆದು ವಕೀಲ ವೃತ್ತಿಗಿಂತ ಅವರನ್ನು ಸೆಳೆದಿದ್ದು ಸಿನಿಮಾಲೋಕ. ಹೀಗಾಗಿ ಸಿನಿಮಾ ಕಡೆ ಬಂದ ನಟರಾಜ್ ಹೊಸ ಸಿನಿಮಾಗಳ ಪೋಸ್ಟರ್ ಜೊತೆಗೆ ಮತ್ತೆರೆಡು ಸಿನಿಮಾಗೂ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
‘ವೀಲ್ ಚೇರ್ ರೋಮಿಯೋ’..ಹೀಗೊಂದು ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡ್ತಿರೋದು ಎಲ್ಲರ ಗಮನಕ್ಕೂ ಬಂದಿದೆ. ಡಿಫ್ರೆಂಟ್ ಟೈಟಲ್, ಅಷ್ಟೇ ಡಿಫ್ರೆಂಟ್ ಕಾನ್ಸೆಪ್ಟ್‌ನೊಂದಿಗೆ ಬರ್ತಿರೋ ಈ ರೋಮಿಯೋ ಈಗಾಗಲೇ ಹಾಡು ಮತ್ತು ಟ್ರೇಲರ್ ಮೂಲಕ ಒಂದಷ್ಟು ಸಿನಿಪ್ರಿಯರ ಮನದಲ್ಲೂ ಅಚ್ಚೊತ್ತಿದ್ದಾನೆ. ಒಂದಿಷ್ಟು ಕುತೂಹಲವನ್ನು ಕೆರಳಿಸಿದ್ದಾನೆ. ಅದ್ರಲ್ಲೂ ಟ್ರೇಲರ್ ಬಿಡುಗಡೆಯಾದ ಮೇಲಂತೂ ಚಿತ್ರದ ಮೇಲಿನ ಹೋಪ್ಸ್ ಸಿನಿಪ್ರಿಯರಲ್ಲಿ ದುಪ್ಪಟ್ಟಾಗಿದೆ. ಮಾಮೂಲಿ ಕಥೆ ಅಲ್ಲ ಸಂಥಿಂಗ್ ಈಸ್ ದೇರ್ ಅನ್ನೋ ಟಾಕ್ ಜೋರಾಗಿದೆ. ಈ ಪಾಸಿಟಿವ್ ಟಾಕ್ ನೋಡಿದ್ರೇನೆ ಗೊತ್ತಾಗುತ್ತೆ ವೀಲ್ ಚೇರ್ ರೋಮಿಯೋ ಹೊಸ ಬಝ್ ಕ್ರಿಯೇಟ್ ಮಾಡೋದ್ರಲ್ಲಿ ಡೌಟೇ ಇಲ್ಲ ಎಂದು. ಸದ್ಯ ಬಿಡುಗಡೆಯಾಗಿ ಪ್ರೇಕ್ಷಕರ ಮುಂದೆ ಬರಲು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿರೋ ವೀಲ್ ಚೇರ್ ರೋಮಿಯೋಗೆ ಈಗ ಬಂಪರ್ ಆಫರ್ ಸಿಕ್ಕಿದೆ. ಅದುವೇ ಬೆಂಗಳೂರು ಫಿಲ್ಮಂ ಫೆಸ್ಟ್.
ಎಸ್,, ಈ ಬಾರಿಯ ಬೆಂಗಳೂರು ಫಿಲ್ಮಂ ಫೆಸ್ಟ್‌ಗೆ ಅದ್ಧೂರಿ ವೇದಿಕೆ ಸಜ್ಜಾಗುತ್ತಿದೆ. ಮಾರ್ಚ್‌ನಲ್ಲಿ ನಡೆಯಲಿರೋ ಬೆಂಗಳೂರು ಫಿಲ್ಮಂ ಫೆಸ್ಟ್‌ನಲ್ಲಿ ಬೇರೆ ಬೇರೆ ದೇಶದ ನೂರಾರು ಸಿನಿಮಾಗಳು ಆಯ್ಕೆಯಾಗಿ ತೆರೆ ಕಾಣಲಿವೆ. ಈ ಚಲನಚಿತ್ರೋತ್ಸವಕ್ಕೆ ‘ವೀಲ್ ಚೇರ್ ರೋಮಿಯೋ’ ಸಿನಿಮಾ ಆಯ್ಕೆಯಾಗಿದೆ. ಸಿನಿಮಾದಲ್ಲಿರೋ ಕಂಟೆಂಟ್, ಚಿತ್ರ ಮೂಡಿ ಬಂದ ರೀತಿ ಆಯ್ಕೆದಾರರ ಮನಸ್ಸಿಗೆ ಇಷ್ಟವಾಗಿದೆ. ಆದ್ದರಿಂದ ನಮ್ಮ ಸಿನಿಮಾ ಕೂಡ ಬೆಂಗಳೂರು ಫಿಲ್ಮಂ ಫೆಸ್ಟ್‌ಗೆ ಸೆಲೆಕ್ಟ್ ಆಗಿದೆ ಎಂದು ಚಿತ್ರದ ನಿರ್ದೇಶಕ ನಟರಾಜ್ ಸಂತಸ ಹಂಚಿಕೊಂಡಿದ್ದಾರೆ.
‘ವೀಲ್ ಚೇರ್ ರೋಮಿಯೋ’ ಹೆಸರಿಗೆ ತಕ್ಕಂತೆ ಚಿತ್ರದ ನಾಯಕ ವೀಲ್ ಚೇರ್ ಮೇಲೆ ಕುಳಿತು ಪ್ರೀತಿಯಲ್ಲಿ ಬೀಳುತ್ತಾನೆ. ಆತ ಪ್ರೀತಿಯಲ್ಲಿ ಬೀಳೋದು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಅಂಧ ಹುಡುಗಿ ಜೊತೆ. ಈ ವಿಚಾರ ನಾಯಕನ ಮನೆಯಲ್ಲಿ ಗೊತ್ತಾದಾಗ ಏನೆಲ್ಲ ಆಗಬಹುದು ಎನ್ನೋದು ಚಿತ್ರದ ಒನ್ ಲೈನ್ ಕಹಾನಿ. ಹಾಗಂತ ಇದು ಸೀರಿಯಸ್ ಸಬ್ಜೆಕ್ಟ್ ಸಿನಿಮಾ ಅಲ್ಲ ಬದಲಾಗಿ ಪಕ್ಕಾ ಕಾಮಿಡಿ ಎಂಟಟೈನ್ಮೆಂಟ್ ಸಿನಿಮಾ. ಈ ಕಾಮಿಡಿಯೊಂದಿಗೆ ಕೊಂಚ ಸೆಂಟಿಮೆಂಟ್ ಕೂಡ ಆಡ್ ಆಗಿದ್ದು ಎಲ್ಲೂ ಬೋರ್ ಹೊಡಿಸದೇ ನೋಡುಗರನ್ನು ನಗಿಸಲಿದ್ದಾನೆ ರೋಮಿಯೋ. ಇದನ್ನೂ ಓದಿ : ಉಪೇಂದ್ರ ಅಣ್ಣನ ಮಗನ ಬೆನ್ನುಬಿದ್ದ ಸ್ಯಾಂಡಲ್ ವುಡ್
ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡಿತಿರೋ ನಟರಾಜ್ ಸಿನಿಮಾ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ಕಥೆ, ಚಿತ್ರಕಥೆ ಬರೆದು ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ನಟರಾಜ್ ರೋಮಿಯೋ, ಜೂಮ್, ಆರೆಂಜ್ ಸೇರಿದಂತೆ ಹಲವು ಸಿನಿಮಾಗಳಿಗೆ ಡೈಲಾಗ್ ರೈಟರ್ ಆಗಿ, ಸಹಾಯಕ ನಿರ್ದೇಶಕನಾಗಿ ಸಿನಿಮಾ ನಿರ್ದೇಶನದ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ವೀಲ್ ಚೇರ್ ರೋಮಿಯೋ ಸಿನಿಮಾ ಕೂಡ ಅಷ್ಟೇ ಪ್ಯಾಶನ್ ನಿಂದ, ಶ್ರದ್ಧೆವಹಿಸಿ ತೆರೆ ಮೇಲೆ ತಂದಿದ್ದಾರೆ ಎನ್ನೋದಕ್ಕೆ ಚಿತ್ರದ ಸ್ಯಾಂಪಲ್ ಗಳೇ ಸಾಕ್ಷಿ. ಇದನ್ನೂ ಓದಿ:ಮುದ್ದಾದ ಹುಡುಗಿ ಅನುಶ್ರೀಗೆ ಸೈತಾನ್ ಅಂದೋರು ಯಾರು?
ಚಿತ್ರದಲ್ಲಿ ಸೀರಿಯಲ್‌ನಲ್ಲಿ ನಟಿಸಿ ಅನುಭವ ಹೊಂದಿರುವ ಹೊಸ ಪ್ರತಿಭೆ ರಾಮ್ ಚೇತನ್ ನಾಯಕನಾಗಿ ನಟಿಸಿದ್ದು, ಮಯೂರಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಬಿ.ಜೆ.ಭರತ್ ಸಂಗೀತ ನಿರ್ದೇಶನದಲ್ಲಿ ಹಾಡು ಹಾಗೂ ಹಿನ್ನೆಲೆ ಸಂಗೀತ ಮೂಡಿ ಬಂದಿದ್ದು, ಗುರುಕಶ್ಯಪ್ ಸಂಭಾಷಣೆ, ಸಂತೋಷ್ ಪಾಂಡಿ ಕ್ಯಾಮೆರಾ ವರ್ಕ್, ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸಾಹಿತ್ಯ ಕೃಷಿ ಚಿತ್ರಕ್ಕಿದೆ. ಸುಚೇಂದ್ರಪ್ರಸಾದ್, ತಬಲ ನಾಣಿ, ರಂಗಾಯಣ ರಘು ಚಿತ್ರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ನಡಿ ವೆಂಕಟಾಚಲಯ್ಯ ಚಿತ್ರಕ್ಕೆ ಬಂಡವಾಳ ಹೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಮಹರಾಷ್ಟ್ರ, ಪುಣೆಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಮೇನಲ್ಲಿ ವೀಲ್ ಚೇರ್ ರೋಮಿಯೋ ಪ್ರೇಕ್ಷಕರ ಮನಸ್ಸಿಗೆ ಕಚಗುಳಿ ಇಡಲು ತೆರೆಗೆ ಬರಲಿದ್ದಾನೆ.