Tag: ನಗ್ಮಾ

  • ನಟಿ ನಗ್ಮಾ ಜೊತೆಗೆ ಯಾವುದೇ ಸಂಬಂಧ ಹೊಂದಿಲ್ಲ : ನಟ ರವಿಕಿಶನ್

    ನಟಿ ನಗ್ಮಾ ಜೊತೆಗೆ ಯಾವುದೇ ಸಂಬಂಧ ಹೊಂದಿಲ್ಲ : ನಟ ರವಿಕಿಶನ್

    ನ್ನಡದ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ, ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿರುವ ನಗ್ಮಾ (Nagma) ಜೊತೆ ನಟ ರವಿಕಿಶನ್ (Ravikishan) ವಿವಾಹೇತರ ಸಂಬಂಧ (Relationship) ಹೊಂದಿದ್ದಾರೆ ಎಂದು ಹೇಳಲಾಗಿತ್ತು. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಅನೇಕ ಫೋಟೋಗಳನ್ನು ಇದಕ್ಕೆ ಸಾಕ್ಷಿಯಾಗಿ ನೀಡಲಾಗಿತ್ತು. ಈ ಜೋಡಿಯ ಬಗ್ಗೆ ನಾನಾ ರೀತಿಯ ಗಾಸಿಪ್ ಗಳು (Gossi) ಹರಡಿದರೂ, ಈ ಕುರಿತು ಒಬ್ಬರೂ ಪ್ರತಿಕ್ರಿಯೆ ನೀಡರಲಿಲ್ಲ.

    ಹರಡಿದ ಸುದ್ದಿಗಳ ಬಗ್ಗೆ ಯಾರೂ ಮಾತನಾಡದೇ ಇರುವ ಕಾರಣದಿಂದಾಗಿ ಸಂಬಂಧ ಹೊಂದಿದ್ದಾರೆ ಎಂದೇ ಭಾವಿಸಲಾಗಿತ್ತು. ಈ ಕುರಿತು ಕೊನೆಗೂ ನಟ ರವಿಕಿಶನ್ ಮೌನ ಮುರಿದಿದ್ದಾರೆ. ವಿವಾಹೇತರ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಎಲ್ಲದರ ಬಗ್ಗೆಯೂ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:`ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆಲಿಯಾ ಭಟ್- ರಶ್ಮಿಕಾ ಮಂದಣ್ಣ

    ‘ನಾನು ಮತ್ತು ನಗ್ಮಾ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಈ ಕಾರಣದಿಂದಾಗಿ ಬಹುಶಃ ಆ ಸುದ್ದಿ ಹಬ್ಬಿರಬಹುದು. ನಾನು ಮದುವೆಯಾಗಿದ್ದೇನೆ. ನನ್ನ ಹೆಂಡತಿಯ ಜೊತೆ ಖುಷಿಯಾಗಿ ಇದ್ದೇನೆ. ಆರಾಧಿಸುವಂತಹ ಹೆಂಡತಿ ಇರುವಾಗ ನಾನು ಯಾಕೆ ಬೇರೆಯವರ ಜೊತೆ ಸಂಬಂಧ ಇಟ್ಟುಕೊಳ್ಳಲಿ. ಅದೆಲ್ಲವೂ ಸುಳ್ಳು ಸುದ್ದಿ. ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್’ ಎಂದಿದ್ದಾರೆ ರವಿಕಿಶನ್.

    ಮುಂದುವರೆದು ಮಾತನಾಡಿರುವ ಅವರು, ‘ನನ್ನ ಹೆಂಡತಿ ಕಷ್ಟದ ಕಾಲದಲ್ಲೂ ಇದ್ದಾಳೆ, ಸುಖದಲ್ಲೂ ಜೊತೆಯಿದ್ದಾಳೆ. ನಾನು ಏನು ಅನ್ನುವುದು ಅವಳಿಗೆ ಚೆನ್ನಾಗಿ ಗೊತ್ತಿದೆ. ಅಂತಹ ಹೆಂಡತಿಗೆ ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ. ನಗ್ಮಾ ವಿಚಾರದಲ್ಲಿ ನನ್ನ ಪತ್ನಿ ತಲೆಕೆಡಿಸಿಕೊಂಡಿಲ್ಲ. ನಾನು ಏನು ಎನ್ನುವುದು ಆಕೆಗೆ ಗೊತ್ತಿದೆ’ ಎಂದಿದ್ದಾರೆ ರವಿಕಿಶನ್.

  • ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ನಟಿ ನಗ್ಮಾ

    ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ನಟಿ ನಗ್ಮಾ

    ಸೈಬರ್ (Cyber) ಖದೀಮರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾನಾ ರೂಪದಲ್ಲಿ ಅವರೆಲ್ಲ ವಂಚನೆ (Fraud) ಮಾಡುತ್ತಿದ್ದು, ನಟಿ ನಗ್ಮಾ (Nagma) ಸೈಬರ್ ವಂಚಕರು ಬೀಸಿದ್ದ ಬಲೆಗೆ ಬಿದ್ದಿದ್ದಾರೆ. ಕೇವಲ ಐದೇ ನಿಮಿಷದಲ್ಲಿ  ಸಾಕಷ್ಟು ಹಣವನ್ನೂ ಅವರು ಕಳೆದುಕೊಂಡಿದ್ದಾರೆ. ಬ್ಯಾಂಕ್ ಹೆಸರಿನಲ್ಲಿ ನಗ್ಮಾಗೆ ಕರೆ ಮಾಡಿದ್ದ ವಂಚಕರು, ಕ್ಷಣಾರ್ಧದಲ್ಲೇ ಅವರ ಖಾತೆಯನ್ನು ಹಣವನ್ನು ದೋಚಿಸಿದ್ದಾರೆ.

    ಫೆಬ್ರವರಿ 28 ರಂದು ನಗ್ಮಾ ಅವರ ಮೊಬೈಲ್ ಸಂಖ್ಯೆಗೆ ಮಸೇಜ್ ಬಂದಿದೆ. ಬ್ಯಾಂಕ್ ಖಾತೆಗಾಗಿ ಕೆವೈಸಿ ಭರ್ತಿ ಮಾಡಿ ಎಂದು ಮಸೇಜ್ ನಲ್ಲಿ ಉಲ್ಲೇಖಿಸಲಾಗಿದೆ. ಮಸೇಜ್ ಬಂದ ಹಿಂದೆಯೇ ಖದೀಮರು ಕಾಲ್ ಕೂಡ ಮಾಡಿದ್ದಾರೆ. ಮಸೇಜ್ ಹೇಳಿದಂತೆ ಭರ್ತಿ ಮಾಡಲು ತಿಳಿಸಿದ್ದಾರೆ. ಅದು ಬ್ಯಾಂಕ್ ನಿಂದ ಬಂದಿರುವ ಕರೆ ಎಂದು ನಂಬಿರುವ ನಗ್ಮಾ ಕೆವೈಸಿ ಭರ್ತಿ ಮಾಡಿದ್ದಾರೆ. ಕ್ಷಣಾರ್ಧಲ್ಲೆ ಅವರ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂಪಾಯಿ ಡ್ರಾ ಆಗಿದೆ. ಇದನ್ನೂ ಓದಿ: ಕಿಚ್ಚ ಸುದೀಪ್ ನಟನೆಯ ಹೊಸ ಸಿನಿಮಾ ಏಪ್ರಿಲ್ ನಲ್ಲಿ ಘೋಷಣೆ

    ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸೈಬರ್ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಸೈಬರ್ ವಂಚನೆಯ ಕುರಿತು ಸಾಕಷ್ಟು ಜಾಗ್ರತೆ ಮೂಡಿಸುತ್ತಿದ್ದರೂ, ಬುದ್ಧಿವಂತರೇ ಹೆಚ್ಚು ಮೋಸ ಹೋಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ ಸೈಬರ್ ಪೊಲೀಸ್ ಅಧಿಕಾರಿಗಳು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರಿಗೆ ಬಲೆ ಬೀಸಿದ್ದಾರೆ.

  • ಕೋವಿಡ್ ಲಸಿಕೆ ಪಡೆದುಕೊಂಡ 6 ದಿನಕ್ಕೆ ನಗ್ಮಾಗೆ ಕೊರೊನಾ

    ಕೋವಿಡ್ ಲಸಿಕೆ ಪಡೆದುಕೊಂಡ 6 ದಿನಕ್ಕೆ ನಗ್ಮಾಗೆ ಕೊರೊನಾ

    ಮುಂಬೈ: ನಟಿ ಕಂ ರಾಜಕಾರಣಿ ನಗ್ಮಾ ಅವರಿಗೆ ಬುಧವಾರ ಕೊರೊನಾ ಪಾಸಿಟಿವ್ ಬಂದಿದ್ದು, ಸದ್ಯ ಅವರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ.

    50 ವರ್ಷ ನಗ್ಮಾ ಅವರು ಟ್ವೀಟ್ ಮಾಡಿದ್ದು, ಕೆಲ ದಿನಗಳ ಹಿಂದೆ ಕೋವಿಡ್ 19 ಮೊದಲನೇ ಡೋಸ್ ಲಸಿಕೆ ತೆಗೆದುಕೊಂಡಿದ್ದೆ. ಇದೀಗ ಮತ್ತೆ ಕೊರೊನಾ ಟೆಸ್ನ್ ನಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಸದ್ಯ ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ದಯವಿಟ್ಟು ಎಲ್ಲಾರೂ ಜಾಗರೂಕರಾಗಿರಿ. ಅಲ್ಲದೆ ಈಗಾಗಲೇ ಮೊದಲೇ ಡೋಸ್ ಪಡೆದುಕೊಂಡವರು ಕೂಡ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ನಗ್ಮಾ ಅವರು ಏಪ್ರಿಲ್ 2ರಂದು ಮೊದಲನೇ ಲಸಿಕೆ ಹಾಕಿಸಿಕೊಂಡಿದ್ದರು. ಆ ಬಳಿಕ ಇದೀಗ ಮತ್ತೆ ಟೆಸ್ಟ್ ಮಾಡಿದಾಗ ಪಾಸಿಟಿವ್ ಇರುವುದು ಗೊತ್ತಾಗಿದ್ದು, ಸದ್ಯ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಗ್ಮಾ ಅವರು ತೆಲುಗು, ತಮಿಳು, ಭೊಜ್ ಪುರಿ, ಮಲಯಾಳಂ, ಕನ್ನಡ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದಾರೆ.