Tag: ನಗ್ನ

  • ನಗ್ನನಾದ ರಣವೀರ್ ಸಿಂಗ್ ಗೆ ಎರಡನೇ ಪತ್ನಿಯಾಗಲು ರೆಡಿ ಎಂದ ಉರ್ಫಿ ಜಾವೇದ್

    ನಗ್ನನಾದ ರಣವೀರ್ ಸಿಂಗ್ ಗೆ ಎರಡನೇ ಪತ್ನಿಯಾಗಲು ರೆಡಿ ಎಂದ ಉರ್ಫಿ ಜಾವೇದ್

    ರೆಬರೆ ಕಾಸ್ಟ್ಯೂಮ್ ಮೂಲಕ ಬಿಟೌನ್ ನಲ್ಲಿ ಫೇಮಸ್ ಆಗಿರುವ ಉರ್ಫಿ ಜಾವೇದ್ ಅವರಿಗೆ ತಮಗಿಂತಲೂ ಕಡಿಮೆ ಬಟ್ಟೆ ಹಾಕುವವರನ್ನು ಕಂಡರೆ ಆಗುವುದಿಲ್ಲ. ಹಾಗಾಗಿ ಹಲವಾರು ಬಾರಿ ಅವರು ಅಂತಹ ನಟಿಯರ ವಿರುದ್ಧ ಕಾಮೆಂಟ್ ಮಾಡಿದ್ದೂ ಇದೆ. ಆದರೆ, ರಣವೀರ್ ಸಿಂಗ್ ವಿಷಯದಲ್ಲಿ ಅವರು ಹಾಗೆ ಮಾಡಿಲ್ಲ. ಫೋಟೋ ಶೂಟ್ ಗಾಗಿ ರಣವೀರ್ ಸಿಂಗ್ ಪೂರ್ಣ ನಗ್ನರಾಗಿ ಕಾಣಿಸಿಕೊಂಡರೂ, ಜಾವೇದ್ ಗರಂ ಆಗಿಲ್ಲ. ಯಾಕೆಂದರೆ, ಅವರ ಮೇಲೆ ಉರ್ಫಿಗೆ ವಿಶೇಷ ಪ್ರೀತಿಯಿದೆಯಂತೆ.

    ಫೋಟೋ ಶೂಟ್ ನಲ್ಲಿ ಸಂಪೂರ್ಣ ಬೆತ್ತಲೆಯಾಗಿ ಕಾಣಿಸಿಕೊಂಡಿರುವ ರಣವೀರ್ ಸಿಂಗ್ ಬಗ್ಗೆ ಕಾಮೆಂಟ್ ಮಾಡಿರುವ ಉರ್ಫಿ ಜಾವೇದ್ ‘ನನಗೆ ರಣವೀರ್ ಕಂಡರೆ ತುಂಬಾ ಪ್ರೀತಿ. ಅವರನ್ನು ತುಂಬಾ ಪ್ರೀತಿಸುತ್ತೇನೆ. ಅವರನ್ನು ಕಂಡರೆ ನನಗೆ ಇಷ್ಟ. ಆದರೆ, ಏನು ಮಾಡೋದು ದೀಪಿಕಾ ಪಡುಕೋಣೆ ಅವರನ್ನು ಮದುವೆ ಆಗಿದ್ದಾರೆ. ಆದರೂ, ಪರವಾಗಿಲ್ಲ. ಅವರು ಒಪ್ಪಿದರೆ ಎರಡನೇ ಪತ್ನಿಯಾಗಲು ನಾನು ರೆಡಿ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ

    ಅರೆಬರೆ ಬಟ್ಟೆ ಹಾಕಿಕೊಂಡು ಹಾಟ್ ಹಾಟ್ ಆಗಿ ಕಾಣುವ ಉರ್ಫಿ ಜಾವೇದ್, ಈ ಕಾರಣದಿಂದಾಗಿಯೇ ಫೇಮಸ್ ಆದವರು. ಅವರು ಹಾಕುವ ಕಾಸ್ಟ್ಯೂಮ್ ಚಿತ್ರ ವಿಚಿತ್ರವಾಗಿರುತ್ತವೆ. ಅಲ್ಲದೇ, ವಿವಾದಿತ ತಾರೆಯರೊಂದಿಗೆ ಯಾವಾಗಲೂ ಅವರು ಕಾಣಿಸಿಕೊಳ್ಳುತ್ತಾರೆ. ಈ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಿರಮಿಡ್ ಮೇಲೆ ಹತ್ತಿ ಬೆತ್ತಲಾಗಿ ಸೆಕ್ಸ್ – ಯೂಟ್ಯೂಬಿನಲ್ಲಿ ವಿಡಿಯೋ ಅಪ್ಲೋಡ್

    ಪಿರಮಿಡ್ ಮೇಲೆ ಹತ್ತಿ ಬೆತ್ತಲಾಗಿ ಸೆಕ್ಸ್ – ಯೂಟ್ಯೂಬಿನಲ್ಲಿ ವಿಡಿಯೋ ಅಪ್ಲೋಡ್

    ಕೈರೋ: ಈಜಿಪ್ಟ್ ವಿಶ್ವ ಪ್ರಸಿದ್ಧ ಗೀಝಾ ಕುಫು ಪಿರಮಿಡ್ ಮೇಲೆ ಹತ್ತಿರದ ಡ್ಯಾನಿಷ್ ಜೋಡಿಯೊಂದು ಬಟ್ಟೆ ಬಿಚ್ಚಿ ಬೆತ್ತಲಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಜೋಡಿಯ ಅಸಭ್ಯ ವರ್ತನೆಯಿಂದ ಈಜಿಪ್ಟ್ ಅಧಿಕಾರಿಗಳು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಡ್ಯಾನಿಷ್ ಜೋಡಿಯ 3 ನಿಮಿಷಗಳ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

    ವಿಡಿಯೋದಲ್ಲಿ ಏನಿದೆ?
    ಈ ವಿಡಿಯೋದಲ್ಲಿ ಯುವತಿಯೊಬ್ಬಳು ಪಿರಮಿಡ್ ಮೇಲೆ ಕಿರಿದಾದ ಜಾಗದ ಮೂಲಕ ಕತ್ತಲೆಯಲ್ಲಿ ಮೇಲೆ ಹತ್ತಿ ಹೋಗಿದ್ದಾಳೆ. ಬಳಿಕ ಮೇಲೆ ನಿಂತು ಕೈರೋ ಪಟ್ಟಣವನ್ನು ನೋಡಿ ಸಂತೋಷ ಪಟ್ಟಿದ್ದಾಳೆ. ಆದರೆ ಈ ವೇಳೆ ತನ್ನ ಬಟ್ಟೆ ಬಿಚ್ಚಿ ನಗ್ನಳಾಗಿದ್ದಾಳೆ. ಬಳಿಕ ಪಿರಮಿಡ್ ಮೇಲೆ ಜೋಡಿ ಬೆತ್ತಲಾಗಿ ಸೆಕ್ಸ್ ಮಾಡುತ್ತಿರುವ ಫೋಟೋ ಮತ್ತು ಇಬ್ಬರು ಜೋಡಿಯಾಗಿ ನಿಂತು ಪೋಸ್ ಕೊಟ್ಟಿರುವ ಫೋಟೋವನ್ನು ಹಾಕಲಾಗಿದೆ.

    ಈಜಿಪ್ಟ್ ದೇಶದ ಕಾನೂನಿನ ಪ್ರಕಾರ ಈ ರೀತಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಲ್ಲಿನ ಪುರಾತತ್ವ ಇಲಾಖೆಗಳ ಸಚಿವ ಖಲೀದ್ ಅಲ್ ಅನಾನಿ ಈ ಕುರಿತು ತನಿಖೆ ಮಾಡುವಂತೆ ಆದೇಶಿಸಿದ್ದಾರೆ. ಇಬ್ಬರು ವಿದೇಶಿಗರು ರಾತ್ರಿ ವೇಳೆ ಪಿರಮಿಡ್ ಮೇಲೆ ಹತ್ತಿ ಅಸಭ್ಯವಾಗಿ ವರ್ತಿಸಿರುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಲಾಗಿದೆ. ಆದ್ದರಿಂದ ಶೀಘ್ರವೇ ಆ ಜೋಡಿಯನ್ನು ಪತ್ತೆ ಮಾಡಿ ತನಿಖೆ ಮಾಡುವಂತೆ ಅನಾನಿ ತಿಳಿಸಿದ್ದಾರೆ.

    ಈ ವಿಡಿಯೋವನ್ನು ಬುಧವಾರ ಡ್ಯಾನಿಷ್ ಛಾಯಾಗ್ರಾಹಕ ಆಂಡ್ರಿಯಾಸ್ ಹ್ವಿಡ್ ಅಪ್ಲೋಡ್ ಮಾಡಿದ್ದಾರೆ. ಅವರು ಪ್ರಪಂಚದಾದ್ಯಂತ ಅಧಿಕ ಎತ್ತರದ ವೀವ್ ಪಾಯಿಂಟ್ ಗಳಿಗೆ ಹೋಗಿ ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡುತ್ತಾರೆ. ಕೆಲವೊಮ್ಮೆ ನಗ್ನ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ ಎಂದು ಈಜಿಪ್ಟ್ ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ನೇಹಿತೆಯಿಂದಲೇ ನಗ್ನ ಫೋಟೋ ಕ್ಲಿಕ್- ಬ್ಲ್ಯಾಕ್‍ಮೇಲ್ ಮಾಡ್ತಿದ್ದ ಅರಣ್ಯಾಧಿಕಾರಿ ವಿರುದ್ಧ ಮಹಿಳೆ ದೂರು

    ಸ್ನೇಹಿತೆಯಿಂದಲೇ ನಗ್ನ ಫೋಟೋ ಕ್ಲಿಕ್- ಬ್ಲ್ಯಾಕ್‍ಮೇಲ್ ಮಾಡ್ತಿದ್ದ ಅರಣ್ಯಾಧಿಕಾರಿ ವಿರುದ್ಧ ಮಹಿಳೆ ದೂರು

    ಬೆಂಗಳೂರು: ಮಹಿಳೆಯೊಬ್ಬರ ನಗ್ನ ಮತ್ತು ಅರೆನಗ್ನ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡಿರೋ ಅರಣ್ಯ ಅಧಿಕಾರಿ ವಿರುದ್ಧ ನೊಂದ ಮಹಿಳೆ ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದಾರೆ.

    ವಿವಾಹಿತ ಮಹಿಳೆಗೆ ಮದುವೆ ಆಗುವಂತೆ ದೌರ್ಜನ್ಯ ಎಸಗಿದ್ದಕ್ಕೆ ಅರಣ್ಯಾಧಿಕಾರಿ ಸಿ. ಕೃಷ್ಣ ಮತ್ತು ನಗ್ನ ಚಿತ್ರ ತೆಗೆದ ಸುಮಲತಾ ದೇವನ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಏನಿದು ಪ್ರಕರಣ?: ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರೋ ಮಹಿಳೆಯ ನಗ್ನ ಚಿತ್ರವನ್ನು ಆಕೆಯ ಸ್ನೇಹಿತೆ ಸುಮಲತಾ ದೇವನ್ ತೆಗೆದು ಅರಣ್ಯಾಧಿಕಾರಿ ಸಿ. ಕೃಷ್ಣಗೆ ನೀಡಿದ್ದಾಳೆ. ಈ ಫೋಟೋವನ್ನು ಪಡೆದ ಕೃಷ್ಣ, ಮದುವೆ ಆಗುವಂತೆ ದೌರ್ಜನ್ಯವೆಸಗಿ ಬಳಿಕ ಲೈಂಗಿಕವಾಗಿ ಸಹಕರಿಸುವಂತೆ ಬ್ಲ್ಯಾಕ್ ಮೇಲೆ ಮಾಡಿದ್ದು, ಒಂದು ವೇಳೆ ನೀನು ಇದಕ್ಕೆ ಒಪ್ಪದಿದ್ದರೆ ನಿನ್ನ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹರಡುತ್ತೇನೆ ಅಂತಾ ಬೆದರಿಸಿದ್ದಾನೆ.

    2013 ರಿಂದ ಈವರೆಗೆ 4.76 ಲಕ್ಷ ರೂ. ಸುಲಿಗೆ ಮಾಡಿರೋ ಕೃಷ್ಣ 30 ಗ್ರಾಂ ಮಾಂಗಲ್ಯ ಸರವನ್ನು ಕೂಡ ಪಡೆದಿದ್ದಾನೆ. ಇನ್ನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರೆ ಸಾಯಿಸೋದಾಗಿ ಬೆದರಿಕೆ ಹಾಕಿದ್ದಾನೆ ಅಂತಾ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಧಾನಸೌಧ ಪೊಲೀಸರು ಕೃಷ್ಣ ವಿರುದ್ಧ ಎಫ್‍ಐಆರ್ ಹಾಗೂ ನಗ್ನ ಚಿತ್ರ ತೆಗೆದ ಸುಮಲತಾ ದೇವನ್ ಎಂಬುವರ ವಿರುದ್ಧವೂ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.