Tag: ನಗರ ವಿನ್ಯಾಸ

  • ಚಂಡೀಗಢ ಕೇಸ್‌ನಲ್ಲಿ ಪ್ರತಿಧ್ವನಿಸಿದ ಬೆಂಗಳೂರಿನ ಅವ್ಯವಸ್ಥಿತ ನಗರೀಕರಣ ಯೋಜನೆ

    ಚಂಡೀಗಢ ಕೇಸ್‌ನಲ್ಲಿ ಪ್ರತಿಧ್ವನಿಸಿದ ಬೆಂಗಳೂರಿನ ಅವ್ಯವಸ್ಥಿತ ನಗರೀಕರಣ ಯೋಜನೆ

    ನವದೆಹಲಿ: ಬೆಂಗಳೂರಿನ (Bengaluru) ಅವ್ಯವಸ್ಥಿತ ನಗರೀಕರಣ (Haphazard Urban Planning) ವಿಚಾರ ಸುಪ್ರೀಂಕೋರ್ಟ್‍ನಲ್ಲಿ (Supreme Court) ಪ್ರತಿಧ್ವನಿಸಿದೆ.

    ಚಂಡೀಘಡದಲ್ಲಿ (Chandigarh) ಅಪಾರ್ಟ್‍ಮೆಂಟ್‍ಗಳ ವಿಂಗಡಣೆ ಮತ್ತು ಉಪವಿಂಗಡಣೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಬಿವಿ ನಾಗರತ್ನ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ನಡೆಯಿತು.

    ಈ ವೇಳೆ, ಒಂದು ಕಾಲದಲ್ಲಿ ದೇಶದ ಅತ್ಯುತ್ತಮ ನಗರಗಳಲ್ಲಿ ಒಂದೆಂದು ಪರಿಗಣಿತವಾಗಿದ್ದ ಬೆಂಗಳೂರು ಈಗ ಹೇಗೆ ಹಾಳಾಗಿದೆ ನೋಡಿ. ಬೆಂಗಳೂರಿನ ಅವ್ಯವಸ್ಥಿತ ನಗರೀಕರಣ ಒಂದು ಎಚ್ಚರಿಕೆಯ ಕರೆಗಂಟೆ ಈ ಬಗ್ಗೆ ಶಾಸಕಾಂಗ, ಕಾರ್ಯಾಂಗ ಗಮನ ಹರಿಸಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಜಾನ್ಸನ್‌ & ಜಾನ್ಸನ್‌ ಬೇಬಿ ಪೌಡರ್‌ ಉತ್ಪಾದನೆ, ಮಾರಾಟಕ್ಕೆ ಬಾಂಬೆ ಹೈಕೋರ್ಟ್‌ ಅನುಮತಿ

    ಯಾವುದೇ ನಗರದ ಅಭಿವೃದ್ಧಿಗೆ ಅನುಮತಿ ನೀಡುವ ಮೊದಲು, ಆ ಅಭಿವೃದ್ಧಿ ಕೆಲಸಗಳು ಪರಿಸರದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಮೌಲ್ಯಮಾಪನ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

    ಚಂಡೀಘಡದಲ್ಲಿ ನಡೆಯುತ್ತಿರುವ ಅಪಾರ್ಟ್‍ಮೆಂಟ್‌ಗಳು ನಗರದ ವಿನ್ಯಾಸಕ ಕಾರ್ಬುಸಿಯ ಪರಿಕಲ್ಪನೆಗೆ ವಿರುದ್ಧವಾಗಿದೆ. ಇದು ಚಂಢೀಘಡದ ಹಸಿರು ಪ್ರದೇಶಕ್ಕೆ ಘಾಸಿ ಉಂಟು ಮಾಡುತ್ತಿದೆ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k