Tag: ನಗರಾಭಿವೃದ್ಧಿ ಇಲಾಖೆ

  • BBMP 243 ವಾರ್ಡ್ ವಿಂಗಡಣೆಗೆ ಸರ್ಕಾರ ಗ್ರೀನ್ ಸಿಗ್ನಲ್ – 40ಕ್ಕೂ ಹೆಚ್ಚು ವಾರ್ಡ್‌ಗಳ ಸೇರ್ಪಡೆ

    BBMP 243 ವಾರ್ಡ್ ವಿಂಗಡಣೆಗೆ ಸರ್ಕಾರ ಗ್ರೀನ್ ಸಿಗ್ನಲ್ – 40ಕ್ಕೂ ಹೆಚ್ಚು ವಾರ್ಡ್‌ಗಳ ಸೇರ್ಪಡೆ

    ಬೆಂಗಳೂರು: ರಾಜ್ಯ ಗೆಜೆಟ್‌ನಲ್ಲಿ ಕರಡು ಅಧಿಸೂಚನೆ ಹೊರಡಿಸಿರುವ ಸರ್ಕಾರ ಬಿಬಿಎಂಪಿಯ 243 ವಾರ್ಡ್ ವಿಂಗಡಣೆ ಪೂರ್ಣಗೊಳಿಸಿ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ 40ಕ್ಕೂ ಹೆಚ್ಚು ವಾರ್ಡ್‌ಗಳು ಸೇರ್ಪಡೆಯಾಗಿವೆ.

    243 ವಾರ್ಡ್‌ಗಳ ಹೆಸರು, ವ್ಯಾಪ್ತಿ, ಗಡಿ ನಿಗದಿಗೊಳಿಸಿದ್ದು, ಸಾರ್ವಜನಿಕ ಆಕ್ಷೇಪಣೆಗೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಿದೆ. ಇದನ್ನೂ ಓದಿ: ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರಲು ಮುಸ್ಲಿಂ ಯುವಕರಿಗೆ ಉತ್ತೇಜನ – ವಿಶೇಷ ಅಭಿಯಾನ

    ಜೂನ್ 9ರಂದು ಬಿಬಿಎಂಪಿ ಸಲ್ಲಿಸಿದ್ದ ಡಿ ಲಿಮಿಟೇಷನ್ ವರದಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಹೊಸ ರಚನಾ ವರದಿಯ ಕರಡನ್ನು ಪ್ರಕಟಿಸಿದೆ. ಇದರಿಂದ 198 ಇದ್ದ ವಾರ್ಡ್ 243ಕ್ಕೆ ಅಧಿಕೃತವಾಗಿ ಏರಿಕೆಯಾಗಿದೆ. ಹೊಸ ವಾರ್ಡ್ ರಚನೆ ಕುರಿತು ಸಾರ್ವಜನಿಕ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳ ಒಳಗೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.

    BBMP

    ಈಗಾಗಲೇ 243 ವಾರ್ಡ್‌ಗಳ ನಕ್ಷೆ, ಚೆಕ್ ಬಂದಿ ಸಹಿತ ವಾರ್ಡ್ ವಿವರವನ್ನು ಬಿಡುಗಡೆ ಮಾಡಿದೆ. ಆಕ್ಷೇಪಣೆ ಪರಿಶೀಲನೆ, ಬದಲಾವಣೆಗಳ ನಂತರ ಅಂತಿಮ ವರದಿ ಪ್ರಕಟಿಸಲಾಗುತ್ತದೆ ಎಂದು ಇಲಾಖೆ ಹೇಳಿದೆ. ಇದನ್ನೂ ಓದಿ: ಮೊದಲ ದಲಿತ, ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ- ಟ್ವೀಟ್ ಮಾಡಿ ಮುಜುಗರಕ್ಕೀಡಾದ ಕೋಟಾ

    ವಾರ್ಡ್ ವಿಂಗಡಣೆಯಿಂದಾಗಿ ಪಾಲಿಕೆ ಚುನಾವಣೆಗೆ ತೊಡಕಾಗಿದ್ದ ಡಿ ಲಿಮಿಟೇಷನ್ ವಿಘ್ನವೂ ನಿವಾರಣೆಯಾದಂತಾಗಿದೆ.

    Live Tv

  • ಕಟ್ಟಡ ಕುಸಿದ ಪ್ರಕರಣದಲ್ಲಿ ಟ್ವಿಸ್ಟ್ – ದೂರು ನೀಡಿದ್ದ ಅಧಿಕಾರಿಯೇ ಅಮಾನತು!

    ಕಟ್ಟಡ ಕುಸಿದ ಪ್ರಕರಣದಲ್ಲಿ ಟ್ವಿಸ್ಟ್ – ದೂರು ನೀಡಿದ್ದ ಅಧಿಕಾರಿಯೇ ಅಮಾನತು!

                                     ಸಂತೋಷ ಆಣಿಶೆಟ್ಟರ್                          ಮುಕುಂದ ಜೋಶಿ

    ಧಾರವಾಡ: ಜಿಲ್ಲೆಯಲ್ಲಿ ನಿರ್ಮಾಣ ಹಂತದ ಕಟ್ಟಡ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ. ಘಟನೆ ಸಂಬಂಧ ಪೊಲೀಸರಿಗೆ ದೂರು ಕೊಟ್ಟಿದ್ದ ಅಧಿಕಾರಿಯನ್ನೇ ಅಮಾನತು ಮಾಡಲಾಗಿದೆ.

    ಪಾಲಿಕೆಯ ವಲಯ ಆಯುಕ್ತ ಮುಕುಂದ ಜೋಶಿ ಮತ್ತು ಸಹಾಯಕ ಆಯುಕ್ತ ಸಂತೋಷ ಆಣಿಶೆಟ್ಟರ್ ನನ್ನು ಅಮಾನತು ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ಧಾರವಾಡ ದುರಂತ: 4 ದಿನಗಳ ಬಳಿಕ ಬದುಕಿಬಂದ ಯುವಕ – ಸಾವಿನ ಸಂಖ್ಯೆ 15ಕ್ಕೆ ಏರಿಕೆ

    ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ಮಾಲೀಕರ ಮತ್ತು ಎಂಜಿನಿಯರ್ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ಸಂತೋಷ ಆನಿಶೆಟ್ಟರ್ ದೂರು ನೀಡಿದ್ದನು. ಸಂತೋಷ ಆನಿಶೆಟ್ಟರ್ ವಲಯ ಕಚೇರಿ 3ರ ಸಹಾಯಕ ಆಯುಕ್ತನಾಗಿದ್ದನು. ಈ ವಲಯದ ಮೂಲಕವೇ ಕಟ್ಟಡಕ್ಕೆ ಅನುಮತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಈಗ ದೂರುದಾರನೂ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವುದರಿಂದ ಆನಿಶೆಟ್ಟರ್ ನನ್ನು ಅಧಿಕಾರದಿಂದ ಅಮಾನತು ಮಾಡಲಾಗಿದೆ.

    ಕಟ್ಟಡ ದುರಂತದಲ್ಲಿ ಇದೂವರೆಗೆ 15 ಜನರು ಮೃತಪಟ್ಟಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಆರೋಪಿಗಳಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಸವರಾಜ ನಿಗದಿ ಮತ್ತು ಗಂಗಪ್ಪ ಸಿಂತ್ರೆ  ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಉಪನಗರ ಠಾಣೆ ಪೊಲೀಸರು ಹಾಜರುಪಡಿಸಿದ್ದರು. ಧಾರವಾಡದ ಜೆಎಂಎಫ್‍ಸಿ ನ್ಯಾಯಾಲಯ ಆದೇಶದ ಮೇರೆಗೆ ಉಳಿದ ರವಿ ಸಬರದ್, ಮಹಾಬಳೇಶ್ವರ ಮತ್ತು ವಿವೇಕ್ ಪವಾರ್ ಎಂಬ ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.