Tag: ನಗರಸಭೆ

  • ಕೋಲಾರ ನಗರದ 19 ಉದ್ಯಾನವನಗಳ ಅಭಿವೃದ್ಧಿಗೆ ಮುಂದಾದ ನಗರಸಭೆ

    ಕೋಲಾರ ನಗರದ 19 ಉದ್ಯಾನವನಗಳ ಅಭಿವೃದ್ಧಿಗೆ ಮುಂದಾದ ನಗರಸಭೆ

    – ಅಮೃತ್ ಸಿಟಿ ಯೋಜನೆಯ 8 ಕೋಟಿ ಹಣ ಬಳಕೆ ಮೂಲಕ ಕಾಯಕಲ್ಪ

    ಕೋಲಾರ: ಮಕ್ಕಳಿಗೆ ಆಟವಾಡೋದಕ್ಕೆ, ಹಿರಿಯರು ವಿಶ್ರಾಂತಿ ಪಡೆಯೋದಕ್ಕೆ, ಜನರು ಬೆಳಗ್ಗೆ ಸಂಜೆ ವಾಯು ವಿಹಾರಕ್ಕೆ ಉದ್ಯಾನವನಗಳು (Park) ಅವಶ್ಯಕ. ಹಳ್ಳಿಯಲ್ಲಾದ್ರೆ ಮರ, ಗಿಡಗಳು ಸಿಗುತ್ತವೆ. ಆದರೆ ನಗರ ಪ್ರದೇಶದಲ್ಲಿ ವಾಯು ವಿಹಾರಕ್ಕೆ ಸೂಕ್ತ ಜಾಗ ಉದ್ಯಾನವನಗಳು. ಇಂತಹ ಉದ್ಯಾನವನಗಳ ಅಭಿವೃದ್ದಿಗೆ ಕೋಲಾರ ನಗರಸಭೆ (Kolar City Municipal Council) ಮಾಸ್ಟರ್ ಪ್ಲಾನ್ ರೂಪಿಸಿದೆ.

    ಹೌದು, ನಗರವನ್ನ ಸುತ್ತಿ ಬರುವ ಜನರು ಸುಸ್ತಾಗಿ ಕೊನೆ ಪಕ್ಷ ಒಂದು ಕ್ಷಣ ವಿಶ್ರಮಿಸೋಣ ಅಂದರೆ ನಗರ ಪ್ರದೇಶಗಳಲ್ಲಿ ಸಿಗೋದೇ ಪಾರ್ಕ್‌ಗಳು. ಇನ್ನೂ ಸಾಕಷ್ಟು ಜನರು ಬೆಳಗ್ಗೆ ಸಂಜೆ ವಾಯು ವಿಹಾರ ಮಾಡೋದು ಸಹ ಇದೆ ಪಾರ್ಕ್‌ಗಳಲ್ಲಿ. ಮತ್ತೆ ಕೆಲವು ಉದ್ಯಾನವನಗಳಲ್ಲಿ ಇತ್ತೀಚೆಗೆ ತೆರೆದ ವ್ಯಾಯಾಮ, ಜಿಮ್ ಸಹ ಮಾಡಲಾಗಿದೆ. ಆದರೆ ಈ ಪಾರ್ಕ್‌ಗಳು ಸರಿಯಾದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಪಾರ್ಕ್‌ಗಳು ಕುಡುಕರ ಅಡ್ಡೆಗಳಾಗಿ, ನಿರ್ವಹಣೆ ಇಲ್ಲದೆ ಅಳವಿನಂಚಿಗೆ ತಲುಪಿವೆ. ಇದನ್ನ ಮನಗಂಡ ಡಿಸಿ ಎಂಆರ್ ರವಿ ಅವರು ನಗರಸಭೆ ಮೂಲಕ ಅಭಿವೃದ್ಧಿಗೆ ಮುಂದಾಗಿದ್ದಾರೆ. ಕೋಲಾರ ನಗರಸಭೆ ಸರ್ವಜ್ಞ ಪಾರ್ಕ್, ಅಂಬೇಡ್ಕರ್ ಪಾರ್ಕ್, ಕುವೆಂಪು ಪಾರ್ಕ್ ಸೇರಿದಂತೆ ನಗರದಲ್ಲಿರುವ 19 ಉದ್ಯಾನವನಗಳಿಗೆ ಕಾಯಕಲ್ಪ ನೀಡಲು ಮಾಸ್ಟರ್ ಪ್ಲಾನ್‌ವೊಂದು ತಯಾರಾಗಿದೆ. ಇದನ್ನೂ ಓದಿ: ಕರ್ತವ್ಯನಿರತ ಯೋಧನಿಗೆ ವಿದ್ಯುತ್ ಶಾಕ್ – ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಸಾವು

    ಸ್ವಚ್ಛತಾ ಹಿ ಸೇವಾ ಆಂದೋಲನದ ಭಾಗವಾಗಿ ಅಕ್ಟೋಬರ್ 2ರವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ, ಪ್ರತಿ ಭಾನುವಾರ ನಗರದ ಎಲ್ಲಾ ಉದ್ಯಾನವನಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛಗೊಳಿಸಲು ನಿರ್ಧರಿಸಲಾಗಿದೆ. ಅದರಂತೆ 85 ವರ್ಷಗಳಷ್ಟು ಹಳೆಯದಾದ ಸರ್ವಜ್ಞ ಪಾರ್ಕ್‌ನಲ್ಲಿರುವ ಬ್ಯಾಂಡ್ ಸ್ಟಾಂಡ್ ಮತ್ತು ರೇಡಿಯೋ ಕಿಯೋಸ್ಕ್ ಅನ್ನು ದುರಸ್ತಿಪಡಿಸಿ ಜನರ ಅನುಕೂಲಕ್ಕೆ ಅನುವು ಮಾಡಿಕೊಡಲು ಈಗಾಗಲೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದನ್ನೂ ಓದಿ: ನೇಪಾಳದಲ್ಲಿ ಅಲ್ಲೋಲ ಕಲ್ಲೋಲ – ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದ ಉದ್ರಿಕ್ತರು

    ಇನ್ನು ಕೋಲಾರ ಜಿಲ್ಲೆಯಲ್ಲಿ ಸುಮಾರು 56 ಪಾರ್ಕ್ಗಳಿವೆ. ಈ ಪೈಕಿ 19 ಕೋಲಾರ ನಗರದಲ್ಲೆ ಇವೆ. ಇದರಲ್ಲಿ ಉತ್ತಮ ಸ್ಥಿತಿಯಲ್ಲಿರುವ ಪಾರ್ಕ್‌ಗಳೇ ಕಡಿಮೆ. ಜಿಲ್ಲೆಯ ಬಹುತೇಕ ಪಾರ್ಕ್‌ಗಳು ನಿರ್ವಹಣೆ ಇಲ್ಲದೆ ಸೊರಗಿ ತನ್ನ ಸ್ವರೂಪವನ್ನೇ ಕಳೆದುಕೊಂಡಿವೆ. ಹಾಗಾಗಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ 15ನೇ ಹಣಕಾಸು ಯೋಜನೆಯಡಿ ಅಮೃತ್ ನಗರೋತ್ಥಾನ ಕಾರ್ಯಕ್ರಮದಡಿಯಲ್ಲಿ ಉದ್ಯಾನಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮುಲ್ಲಾಗಳ ಸರ್ಕಾರ ಅನ್ನೋದು ಸಾಬೀತಾಗಿದೆ: ಅಶೋಕ್

    ನಗರದ ಸಮಾನ ಮನಸ್ಕರು ನಾಗರಿಕ ವೇದಿಕೆ ರಚಿಸಿಕೊಂಡು ಉದ್ಯಾನಗಳ ನಿರ್ವಹಣೆ ಮತ್ತು ಸ್ವಚ್ಛತಾ ಪಾಲನೆಗೆ ಅಮೃತ್ ಯೋಜನೆಯಡಿ ಉದ್ಯಾನಗಳಿಗೆ ಕಾಯಕಲ್ಪ ನೀಡುವುದು ಇದರ ಉದ್ದೇಶವಾಗಿದೆ. ಈಗಾಗಲೆ 8 ಕೋಟಿ ರೂ. ಅನುದಾನ ಮೀಸಲಿಟ್ಟಿರುವ ನಗರಸಭೆ ಮುಂದಿನ ಅಕ್ಟೋಬರ್ 2ರ ವೇಳೆ ಎಲ್ಲಾ ಪಾರ್ಕ್‌ಗಳನ್ನು ಸುಂದರೀಕರಣ ಮಾಡೋದು ಇದರ ಉದ್ದೇಶವಾಗಿದೆ. ಇದನ್ನೂ ಓದಿ: ನೇಪಾಳದ ಏರ್‌ಪೋರ್ಟ್ ಬಳಿ ಹೊಗೆ ಕಂಡು ದೆಹಲಿಗೆ ವಾಪಸಾದ ವಿಮಾನ – ಏರ್‌ ಇಂಡಿಯಾ, ಇಂಡಿಗೋ ಹಾರಾಟ ರದ್ದು

    ಅದರಂತೆ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳು, ನಡಿಗೆ ಪಥ, ಕಾರಂಜಿಗಳು ಹಾಗೂ ವಿದ್ಯುತ್ ದೀಪಗಳನ್ನು ಸರಿಪಡಿಸಿ ಸಾರ್ವಜನಿಕರ ಅನುಕೂಲಕ್ಕೆ ತಕ್ಕ ಹಾಗೆ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವುದು ಇವರ ಉದ್ದೇಶ. ಅದರಂತೆ ಸ್ವಚ್ಛತಾ ಹಿ ಸೇವಾ ಅಭಿಯಾನದ ನೆನಪಿಗಾಗಿ ಎಲ್ಲಾ ಉದ್ಯಾನಗಳಲ್ಲಿ ಸಸಿಗಳನ್ನು ನೆಟ್ಟು, ಮಕ್ಕಳಿಗೆ, ವೃದ್ಧರಿಗೆ, ಸಮಾನ ಮನಸ್ಕರಿಗೆ ಉದ್ಯಾನವನಗಳನ್ನ ಹಸಿರಾಗಿಸಿ ಸುಂದರ ಮಾಡಲು ನಿರ್ಧಾರ ಮಾಡಲಾಗಿದೆ. ಇದು ಕೋಲಾರ ನಾಗರೀಕರು ಸೇರಿದಂತೆ ನಿತ್ಯ ಪಾರ್ಕ್‌ನಲ್ಲಿ ವಾಯುವಿಹಾರ ಮಾಡುವವರಿಗೆ ಖುಷಿಯ ವಿಚಾರವಾಗಿದೆ. ಇದನ್ನೂ ಓದಿ: ಪುತ್ರನಿಗೆ ಶಸ್ತ್ರಚಿಕಿತ್ಸೆ – ಶಾಸಕ ವಿನಯ್‌ಗೆ 2 ದಿನಗಳ ಮಧ್ಯಂತರ ಜಾಮೀನು ಮಂಜೂರು

    ಒಟ್ಟಿನಲ್ಲಿ ಮನಸ್ಸಿಗೆ ನೆಮ್ಮದಿ ಸಿಗಲಿ, ದೇಹಕ್ಕೆ ಒಂದಷ್ಟು ಉಲ್ಲಾಸ ಉತ್ಸಾಹ ಸಿಗಲಿ ಎಂದು ಜನರು ಉದ್ಯಾನವನಗಳಿಗೆ ಬರುತ್ತಾರೆ. ಆದರೆ ಪಾರ್ಕ್‌ಗಳ ಸರಿಯಾದ ನಿರ್ವಹಣೆ ಇಲ್ಲದೆ ಒಂದಷ್ಟು ನೆಮ್ಮದಿ ಇಲ್ಲದೆ ಇರುವುದನ್ನ ಮನಗಂಡ ಅಧಿಕಾರಿಗಳು ಉದ್ಯಾನವಗಳ ಅಭಿವೃದ್ಧಿಗೆ ಒತ್ತು ನೀಡಿರುವುದು ಖುಷಿಯ ವಿಚಾರವೇ ಸರಿ. ಇದನ್ನೂ ಓದಿ: ಈ ಜನ್ಮದಲ್ಲೇ ಮುಸ್ಲಿಂ ಧರ್ಮಕ್ಕೆ ಹೋಗಿಬಿಡಿ, ನಾವೇ ಹಾರ ಹಾಕಿ ಕಳುಹಿಸ್ತೇವೆ: ಶೋಭಾ ಕರಂದ್ಲಾಜೆ

  • PUBLiC TV Impact | ಪಾಪನಾಶ ಕೆರೆಗೆ ನಗರಸಭೆ ಅಧಿಕಾರಿಗಳ ಭೇಟಿ, ಸಿಬ್ಬಂದಿಯಿಂದ ಸ್ವಚ್ಛತೆ

    PUBLiC TV Impact | ಪಾಪನಾಶ ಕೆರೆಗೆ ನಗರಸಭೆ ಅಧಿಕಾರಿಗಳ ಭೇಟಿ, ಸಿಬ್ಬಂದಿಯಿಂದ ಸ್ವಚ್ಛತೆ

    ಬೀದರ್: ಜಿಲ್ಲೆಯ ಐತಿಹಾಸಿಕ ಪಾಪನಾಶ ಕೆರೆಯಲ್ಲಿ ಮೀನುಗಳ ಮಾರಣಹೋಮವಾಗಿದ್ದ ಸುದ್ದಿ ಬೆನ್ನಲ್ಲೇ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಕೆರೆಗೆ ಭೇಟಿ ನೀಡಿ, ಸಿಬ್ಬಂದಿಯಿಂದ ಕೆರೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಾರೆ.

    ಬುಧವಾರ ಪಾಪನಾಶ ಕೆರೆಯಲ್ಲಿ ವಿಷಕಾರಿ ನೀರಿನಿಂದಾಗಿ ಮೀನುಗಳ ಮಾರಣಹೋಮವಾಗಿತ್ತು. ಈ ಕುರಿತು `ಪಬ್ಲಿಕ್ ಟಿವಿ’ ವರದಿ ಬಿತ್ತರಿಸಿದ ಬೆನ್ನಲ್ಲೇ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಕೆರೆಗೆ ಭೇಟಿ ನೀಡಿದ್ದು, ಸಿಬ್ಬಂದಿಗೆ ಕೆರೆಯನ್ನು ಸ್ವಚ್ಛಗೊಳಿಸುವಂತೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಸಾಕ್ಷ್ಯಾಧಾರಗಳ ಇರದ್ದಕ್ಕೆ ಸಿದ್ದರಾಮಯ್ಯಗೆ ಲೋಕಾಯುಕ್ತದಿಂದ ಕ್ಲೀನ್ ಚಿಟ್ – ಪರಮೇಶ್ವರ್

    ಸೂಚನೆ ಬೆನ್ನಲ್ಲೇ ಸಿಬ್ಬಂದಿ ಕೆರೆಯನ್ನು ಸ್ವಚ್ಛಗೊಳಿಸಿದ್ದು, ಎಸೆದಿದ್ದ ರಾಶಿ ರಾಶಿ ತ್ಯಾಜ್ಯವನ್ನು ಜೆಸಿಬಿ ಮೂಲಕ ಹೊರತೆಗೆದು ಪೂರ್ಣವಾಗಿ ಸ್ವಚ್ಛಗೊಳಿಸಿದ್ದಾರೆ. ಕೆರೆಯಲ್ಲಿ ಬಿದಿದ್ದ ಪ್ಲಾಸ್ಟಿಕ್, ಪೂಜಾ ಸಾಮಗ್ರಿಗಳು, ಫೋಟೋಗಳು ಎಲ್ಲವನ್ನು ಜೆಸಿಬಿ ಹಾಗೂ ಕ್ಲೀನಿಂಗ್ ವಾಹನಗಳು, ಹತ್ತಾರು ಸಿಬ್ಬಂದಿ ಸೇರಿ ಸ್ವಚ್ಛ ಮಾಡಿದ್ದಾರೆ.

    ಜಿಲ್ಲಾಡಳಿತ ಹಾಗೂ ಜನರ ನಿರ್ಲಕ್ಷ್ಯದಿಂದಾಗಿ ಪ್ರತಿನಿತ್ಯ ಜನರು ನಗರದ ತ್ಯಾಜ್ಯವನ್ನು ಕೆರೆಗೆ ತಂದು ಬಿಸಾಡುತ್ತಿದ್ದು, ಕೆರೆಯ ನೀರು ಸಂಪೂರ್ಣ ವಿಷಕಾರಿಯಾಗಿ ಲಕ್ಷಾಂತರ ಮೀನುಗಳ ಮಾರಣಹೋಮವಾಗಿತ್ತು.ಇದನ್ನೂ ಓದಿ: ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತ ಪ್ರಮಾಣ ಸ್ವೀಕಾರ

  • ಮಡಿಕೇರಿಯಲ್ಲಿ 2 ಲೀಟರ್‌ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್‌ ಬಾಟಲ್‌ ಬಳಕೆ ನಿಷೇಧ

    ಮಡಿಕೇರಿಯಲ್ಲಿ 2 ಲೀಟರ್‌ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್‌ ಬಾಟಲ್‌ ಬಳಕೆ ನಿಷೇಧ

    ಮಡಿಕೇರಿ: ಮಂಜಿನ ನಗರಿಯ ಪ್ರವಾಸಿ ತಾಣಗಳಲ್ಲಿ‌ ಸ್ವಚ್ಛತೆ ಕಾಪಾಡುವ‌ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ 2 ಲೀಟರ್‌ಗಿಂತಲೂ ಕಡಿಮೆ ಪ್ರಮಾಣದ ತಾತ್ಕಾಲಿಕ (ಮರುಬಳಕೆ ಮಾಡದ) ಪ್ಲಾಸ್ಟಿಕ್‌ ಬಾಟಲಿಗಳ (Plastic Bottle) ಬಳಿಕೆಯನ್ನು ಸಂಪೂರ್ಣ ನಿಷೇಧಿಸಿ ನಗರಸಭೆ ಆದೇಶ ಹೊರಡಿಸಿದೆ.

    ಹೌದು. ಮಡಿಕೇರಿ (Madikeri) ಪ್ರವಾಸಿಗರ ಪಾಲಿನ ಹಾಟ್‌ಸ್ಪಾಟ್‌ ಆಗಿದೆ. ವಾರಾಂತ್ಯದಲ್ಲಿ ಪ್ರವಾಸಿ ತಾಣಗಳಿಗೆ ದಾಂಗುಡಿ ಇಡುವವರ ಸಂಖ್ಯೆ ತುಸು ಹೆಚ್ಚೇ ಇರುತ್ತದೆ. ಬರುವವರು ನೀರು ಕುಡಿದ ಬಳಿಕ ತಾವು ತರುವ ಪ್ಲಾಸ್ಟಿಕ್‌ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಇದರಿಂದ ಪ್ರತಿನಿತ್ಯ ನಗರದಲ್ಲಿ ಸಾವಿರಕ್ಕೂ ಅಧಿಕ ಕೆಜಿಯಷ್ಟು ಪ್ಲಾಸ್ಟಿಕ್‌ ಸಂಗ್ರಹವಾಗುತ್ತಿದೆ. ಇದರಿಂದ ನಗರದ ಸ್ವಚ್ಛತೆಯೂ ಹಾಳಾಗುತ್ತಿದೆ. ಅಲ್ಲದೇ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಪರಿಸರಕ್ಕೂ ಮಾರಕವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಮಡಿಕೇರಿ ನಗರಸಭೆ 2 ಲೀ.ಗಿಂತಲೂ ಕಡಿಮೆ ಪ್ರಮಾಣದ ತಾತ್ಕಾಲಿಕ ಪ್ಲಾಸ್ಟಿಕ್‌ ಬಾಟಲಿಗಳನ್ನು ಸಂಪೂರ್ಣ ನಿಷೇಧಿಸಿದೆ.

    ಈಗಾಗಲೇ ನಗರದ ವರ್ತಕರಿಗೆ ಪ್ರಕಟಣೆ ಮೂಲಕ ನೋಟಿಸ್‌ ಕೊಡಲಾಗಿದೆ. ಜೊತೆಗೆ ಪ್ರತಿ ಅಂಗಡಿ ಮುಂಗಟ್ಟುಗಳಿಗೆ ಭಿತ್ತಿಪತ್ರ ಅಂಟಿಸಿ, ಪ್ಲಾಸ್ಟಿಕ್‌ ಬಾಟಲಿಗಳಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಖರೀದಿ ಮಾಡಿರುವ ಬಾಟಲಿಗಳ ಮಾರಾಟಕ್ಕೆ ಅವಕಾಶವಿದ್ದು, ಹೊಸದಾಗಿ ತರಿಸದಂತೆ ನಗರಸಭೆ ಸೂಚನೆ ಕೊಟ್ಟಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ 50 ಕೋಟಿಗೂ ಅಧಿಕ ಮೌಲ್ಯದ ವಿವಾದಿತ ಜಾಗ ಕಬ್ಜಾ: ಬಿಜೆಪಿ ಆರೋಪ

    ಅಲ್ಲದೇ ನಗರಕ್ಕೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿ ತರದಂತೆ ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಮುಂದಿನ ಎರಡು ತಿಂಗಳವರೆಗೆ ಅರಿವು ಮೂಡಿಸಿ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಮಡಿಕೇರಿ‌ ನಗರಸಭೆಯ ನಿರ್ಧಾರವನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ. ಕೊಡಗು ಜಿಲ್ಲೆ ಪ್ರವಾಸಿಗರಿಂದ ಕಸದ ತೊಟ್ಟಿಯಾಗುವುದು ಬೇಡ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾಲಗಾರರ ಕಿರುಕುಳಕ್ಕೆ ಎದೆಗುಂದಿ ತಪ್ಪು ನಿರ್ಧಾರಕ್ಕೆ ಮುಂದಾಗಬೇಡಿ: ಉ.ಕನ್ನಡ ಎಸ್‌ಪಿ ಸಲಹೆ

  • ಹಾವೇರಿಯಲ್ಲಿ ನಿಲ್ದಾಣ ನಿರ್ಮಾಣವಾಗಿ 12 ವರ್ಷ ಕಳೆದರೂ ಇನ್ನೂ ಆರಂಭಗೊಂಡಿಲ್ಲ ನಗರ ಸಾರಿಗೆ!

    ಹಾವೇರಿಯಲ್ಲಿ ನಿಲ್ದಾಣ ನಿರ್ಮಾಣವಾಗಿ 12 ವರ್ಷ ಕಳೆದರೂ ಇನ್ನೂ ಆರಂಭಗೊಂಡಿಲ್ಲ ನಗರ ಸಾರಿಗೆ!

    – ಬಸ್ ಇಲ್ಲದೇ ಹೆಚ್ಚಾದ ಆಟೋ ಹಾವಳಿ

    ಹಾವೇರಿ: ಹಾವೇರಿ (Haveri) ಜಿಲ್ಲಾ ಕೇಂದ್ರವಾಗಿ 27 ವರ್ಷ ಕಳೆದಿದೆ. ಆದರೆ ನಗರದ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯ ಸಿಗುತ್ತಿಲ್ಲ. ಜೊತೆಗೆ ಸಾರಿಗೆ ಸೌಲಭ್ಯವೂ ಇಲ್ಲದೇ ಪರದಾಡುತ್ತಿದ್ದಾರೆ.

    ಹಾವೇರಿ ನಗರಸಭೆಯು ನಗರದ ಜನರ ಅನುಕೂಲಕ್ಕಾಗಿ ಕಚೇರಿ ಹಾಗೂ ಬೇರೆ ಬೇರೆ ಏರಿಯಾಗಳಿಗೆ ಸಾಗಲು ನಗರ ಸಂಚಾರವನ್ನು ಆರಂಭಿಸಿತ್ತು. ಪ್ರಮುಖ ನಗರದಲ್ಲಿ ಬಸ್ ನಿಲ್ದಾಣ (Bus Stand) ನಿರ್ಮಾಣ ಮಾಡಿ 12 ವರ್ಷ ಕಳೆದಿದೆ. 2013ರಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಗರದ ಪ್ರಮುಖ ಏರಿಯಾದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಯಿತು.ಇದನ್ನೂ ಓದಿ:

    ನಗರ ಸಂಚಾರ ಆರಂಭಿಸಿದ ಒಂದೇ ಒಂದು ತಿಂಗಳಲ್ಲಿ ಬಸ್ ಸಂಚಾರ ಬಂದ್ ಆಗಿದೆ. ಬಸ್ ಬಿಡದೇ ಬಸ್ ನಿಲ್ದಾಣಗಳೇ ಹಾಳಾಗಿವೆ. ನಗರಸಭೆ, ಸಾರಿಗೆ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಜನರು ಪರಿಸ್ಥಿತಿ ಪರದಾಡುವಂತಾಗಿದೆ.

    ಇದರಿಂದ ಆಟೋಗಳ ಹಾವಳಿ ಹೆಚ್ಚಾಗಿದೆ. ಸಮೀಪದ ಪ್ರದೇಶಗಳಿಗೆ 50 ರಿಂದ 100 ರುಪಾಯಿ ಕೇಳುತ್ತಾರೆ. ಹೀಗಾಗಿ ಬಡ ಜನರು ನಗರದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಶಾಲೆಯ ಮಕ್ಕಳು ಸಹ ನಿತ್ಯವು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಗರದಲ್ಲಿ 2 ಎಲೆಕ್ಟ್ರಿಕ್ ಬಸ್ ಬಿಡುವ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಒಟ್ಟಿನಲ್ಲಿ ಹಾವೇರಿ ಜಿಲ್ಲಾಕೇಂದ್ರವಾಗಿ 27 ವರ್ಷ ಕಳೆದರೂ ಜನರು ವಂಚಿತರಾಗುತ್ತಿದ್ದಾರೆ. ಇನ್ನಾದರೂ ಸಾರಿಗೆ ಇಲಾಖೆ ಮತ್ತು ನಗರಸಭೆ ಸಿಬ್ಬಂದಿ ಹಾವೇರಿ ನಗರದಲ್ಲಿ ನಗರಸಾರಿಗೆ ಆರಂಭಿಸುವ ಮೂಲಕ ಜನರಿಗೆ ಅನುಕೂಲ ಮಾಡಬೇಕಿದೆ.ಇದನ್ನೂ ಓದಿ:

  • ನಗರಸಭೆ ಸದಸ್ಯರ ಗುದ್ದಾಟ, ತಳ್ಳಾಟದ ವೀಡಿಯೋ ವೈರಲ್-‌ ಅಖಿಲೇಶ್‌ ಯಾದವ್‌ ಹೇಳಿದ್ದೇನು?

    ನಗರಸಭೆ ಸದಸ್ಯರ ಗುದ್ದಾಟ, ತಳ್ಳಾಟದ ವೀಡಿಯೋ ವೈರಲ್-‌ ಅಖಿಲೇಶ್‌ ಯಾದವ್‌ ಹೇಳಿದ್ದೇನು?

    ಲಕ್ನೋ: ಉತ್ತರಪ್ರದೇಶದಲ್ಲಿ (Uttarpradesh) ನಗರಸಭೆಯ ಸದಸ್ಯರುಗಳ (Civic Body Meeting) ನಡುವೆ ಭಾರೀ ಗುದ್ದಾಟ-ತಳ್ಳಾಟ ನಡೆದಿದೆ. ಸದ್ಯ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

    ಶಾಮ್ಲಿ ಪುರಸಭೆಯ (Shamli Municipal Council) ಆಡಳಿತ ಮಂಡಳಿ ಸಭೆಯಲ್ಲಿ ಪುರಸಭೆ ಅಧ್ಯಕ್ಷ (Municipal Chairman) ಅರವಿಂದ ಸಂಗಲ್  ಮತ್ತು ಶಾಸಕ ಪ್ರಸನ್ನ ಚೌಧರಿ ಉಪಸ್ಥಿತರಿದ್ದರು. ಸಭೆಯಲ್ಲಿ 4 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ಆರಂಭವಾಯಿತು. ಈ ವೇಳೆ ಅರವಿಂದ ಸಂಗಲ್ ಮತ್ತು ಪ್ರಸನ್ನ ಚೌಧರಿ ನಡುವೆ ತೀವ್ರ ವಾಗ್ವಾದ ನಡೆಯಿತು. ಮಾತಿನ ಚಕಮಕಿಯಿಂದ ಪ್ರಾರಂಭವಾದ ಜಗಳ ಪರಸ್ಪರ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ತಿರುಗಿತು.

    ಇಬ್ಬರು ಸದಸ್ಯರು ಪರಸ್ಪರ ಗುದ್ದಾಟ ನಡೆಸುವುದರೊಂದಿಗೆ ನಗರ ಪಾಲಿಕೆ ಆಡಳಿತ ಮಂಡಳಿ ಸಭೆಯು ಸಂಪೂರ್ಣ ಕುಸ್ತಿ ಅಖಾಡವಾಯಿತು. ಪೊಲೀಸರು ಮತ್ತು ಹಿರಿಯ ಮುಖಂಡರ ಎದುರೇ ಇಡೀ ಘಟನೆ ನಡೆದಿದೆ. ಇನ್ನು ಇದರ ವೀಡಿಯೋವನ್ನು ಸಭೆಯಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.‌

    ಅಖಿಲೇಶ್‌ ಯಾದವ್‌ ಹೇಳಿದ್ದೇನು..?: ಇತ್ತ ವೈರಲ್‌ ವೀಡಿಯೋವನ್ನು ಗಮನಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಬಿಜೆಪಿಯನ್ನು (BJP) ತೀವ್ರ ತರಾಟೆಗೆ ತೆಗೆದುಕೊಂಡರು.

    ಈ ಸಂಬಂಧ ತಮ್ಮ ಎಕ್ಸ್‌ ಖಾತೆಯಲ್ಲಿ ವೀಡಿಯೋ ಹಂಚಿಕೊಂಡು, ಯಾವುದೇ ಅಭಿವೃದ್ಧಿ ಕೆಲಸಗಳು ಆಗದಿದ್ದಾಗ ಪರಿಶೀಲನಾ ಸಭೆಯಲ್ಲಿ ಇನ್ನೇನು ಆಗಿರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಇದರಿಂದಾಗಿ ಶಾಮ್ಲಿಯಲ್ಲಿ ನಡೆದ ಕೌನ್ಸಿಲರ್‌ಗಳ ಸಭೆಯಲ್ಲಿ ಪರಸ್ಪರ ದೈಹಿಕ ಹಲ್ಲೆಗಳು ನಡೆದಿವೆ ಎಂದಿದ್ದಾರೆ. ಒಟ್ಟಿನಲ್ಲಿ ನಿಮ್ಮ ಸ್ವಂತ ಭದ್ರತೆಯನ್ನು ಏರ್ಪಡಿಸಿದ ನಂತರ ಪರಿಶೀಲನಾ ಸಭೆಗೆ ಬನ್ನಿ ಎಂಬುದು ಬಿಜೆಪಿ ಆಡಳಿತದ ಪಾಠವಾಗಿದೆ ಎಂದು ಅವರು ಗರಂ ಆದರು.

  • ಯಾದಗಿರಿ: ಹಿಂದಿನ ಪೌರಾಯುಕ್ತ ಸೇರಿ 8 ಮಂದಿ ಅಧಿಕಾರಿಗಳ ಅಮಾನತು

    ಯಾದಗಿರಿ: ಹಿಂದಿನ ಪೌರಾಯುಕ್ತ ಸೇರಿ 8 ಮಂದಿ ಅಧಿಕಾರಿಗಳ ಅಮಾನತು

    ಯಾದಗಿರಿ: ಜಿಲ್ಲೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಆಸ್ತಿ ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯಿಂದ ಅಧಿಕಾರಿಗಳನ್ನ ಅಮಾನತು ಮಾಡಿ ಆದೇಶಿಸಲಾಗಿದೆ.

    ಯಾದಗಿರಿ ನಗರಸಭೆ (Yadagiri City Council) ವ್ಯಾಪ್ತಿಯ 391 ಸ.ನಂ.ನಲ್ಲಿ ಅಕ್ರಮವೆಸಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿಕೊಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಸತತ ವರದಿ ಬಿತ್ತರಿಸಿತ್ತು. ಈ ಬಳಿಕ ಎಚ್ಚೆತ್ತುಕೊಂಡಿದ್ದ ಜಿಲ್ಲಾಧಿಕಾರಿಗಳಿಂದ ತನಿಖಾ ತಂಡ ರಚನೆ ಮಾಡಲಾಗಿತ್ತು. ತನಿಖಾ ತಂಡದ ವರದಿಯಲ್ಲಿ ಅಕ್ರಮ ಪರಭಾರೆ ಆರೋಪ ಸಾಬೀತಾಗಿರೋದ್ರಿಂದ 8 ಜನ ಅಧಿಕಾರಿಗಳನ್ನ ಅಮಾನತು ಮಾಡಿ ಪೌರಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ನೀಡಿದ್ದಾರೆ.

    ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಪೌರಾಯುಕ್ತ ಶರಣಪ್ಪ, ಕಂದಾಯ ಅಧಿಕಾರಿ ವಿಶ್ವಪ್ರತಾಪ ಅಲೆಕ್ಸಾಂಡರ್, ಎಇಇ ರಾಕೇಶರಡ್ಡಿ, ಸಿಬ್ಬಂದಿ ಸುರೇಶ ವಿಭೂತೆ, ಪದ್ಮಾವತಿ, ರಿಯಾಜುದ್ದೀನ್, ಲಿಂಗಾರಡ್ಡಿ ಹಾಗೂ ಪುಷ್ಪಾವತಿ ಇವರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಕನ್ನಡಿಗರಿಗೆ ಫ್ರಂಟ್ ಡೆಸ್ಕ್ ಉದ್ಯೋಗ ಕೊಡಿ: ಜಗ್ಗೇಶ್ ಒತ್ತಾಯ

  • ಸಿ.ಟಿ.ರವಿ ಆಪ್ತನಿಂದಲೇ ಬಿಜೆಪಿಗೆ ಭಾರೀ ಮುಖಭಂಗ; ಅವಿಶ್ವಾಸ ಮಂಡನೆಯಲ್ಲಿ ಬಿಜೆಪಿಗೆ ಸೋಲು

    ಸಿ.ಟಿ.ರವಿ ಆಪ್ತನಿಂದಲೇ ಬಿಜೆಪಿಗೆ ಭಾರೀ ಮುಖಭಂಗ; ಅವಿಶ್ವಾಸ ಮಂಡನೆಯಲ್ಲಿ ಬಿಜೆಪಿಗೆ ಸೋಲು

    ಚಿಕ್ಕಮಗಳೂರು: ಕಳೆದ ನಾಲ್ಕೈದು ತಿಂಗಳಿಂದ ದಿನದಿಂದ ದಿನಕ್ಕೆ ಒಂದೊಂದು ರೀತಿಯ ಹೈಡ್ರಾಮಕ್ಕೆ ಸಾಕ್ಷಿಯಾಗಿದ್ದ ಚಿಕ್ಕಮಗಳೂರು (Chikkamagaluru) ನಗರಸಭೆಯ ಹೈಡ್ರಾಮಕ್ಕೆ ಪೂರ್ಣವಿರಾಮ ಬಿದ್ದಿದೆ. ಸಿ.ಟಿ.ರವಿ (C.T.Ravi) ಆಪ್ತನಿಂದಲೇ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.

    20 ವರ್ಷಗಳಿಂದ ನಗರಸಭೆಯ ಚುಕ್ಕಾಣಿ ಹಿಡಿದಿದ್ದ ಬಿಜೆಪಿಗೆ ಈಗ ತನ್ನದೇ ಪಕ್ಷದ ಅಧ್ಯಕ್ಷನಿಂದ ಮುಖಭಂಗವಾಗಿದೆ. ಬಿಜೆಪಿಯವರೇ ಆರಿಸಿ ಅಧ್ಯಕ್ಷನನ್ನಾಗಿ ಮಾಡಿದ್ದ ಬಿಜೆಪಿಯ ಅಧ್ಯಕ್ಷನ ವಿರುದ್ಧ ಅಸಮಾಧಾನಗೊಂಡು ಅವಿಶ್ವಾಸ ಮಂಡನೆಗೆ ಮುಂದಾಗಿದ್ದ ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್ ಶಾಕ್ ನೀಡಿದೆ. ಅವಿಶ್ವಾಸ ಮಂಡನೆಯಲ್ಲಿ ಸೋಲುವ ಮೂಲಕ ಬಿಜೆಪಿ ನಗರಸಭೆಯ ಅಧಿಕಾರ ಕಳೆದುಕೊಂಡಿದೆ. ಇದನ್ನೂ ಓದಿ: ಜಾಗತಿಕ ಮಟ್ಟದ KHIR ಸಿಟಿ ನಿರ್ಮಾಣ- 40 ಸಾವಿರ ಕೋಟಿ ರೂ. ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಟಿ

    ಕಳೆದ ಮೂರ್ನಾಲ್ಕು ತಿಂಗಳಿಂದ ಬಿಜೆಪಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧ ಅಕ್ರೋಶಗೊಂಡಿದ್ದ ನಗರಸಭೆಯ ಬಿಜೆಪಿಯ ಸದಸ್ಯರು ತಮ್ಮದೇ ಪಕ್ಷದ ಅಧ್ಯಕ್ಷನ ವಿರುದ್ಧ ಅವಿಶ್ವಾಸ ಮಂಡನೆಗೆ ಮುಂದಾಗಿದ್ದರು. ಬಿಜೆಪಿ ಪಕ್ಷದ ಆಂತರಿಕ ಒಪ್ಪಂದದಂತೆ ನಗರಸಭೆ ಅಧ್ಯಕ್ಷ ಸ್ಥಾನ ಹಂಚಿಕೆ ಮಾಡಲಾಗಿತ್ತು. ಅವಧಿ ಮುಗಿದರೂ ಪಕ್ಷದ ನಾಯಕರು ಸೇರಿದಂತೆ ಸಿ.ಟಿ.ರವಿ ಸೂಚನೆ ನೀಡಿದ್ದರು. ರಾಜೀನಾಮೆ ನೀಡಿ ಮತ್ತೆ ಮತ್ತೆ ವಾಪಸ್ ಪಡೆದಿದ್ದ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧ ಶುಕ್ರವಾರ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದರು. ಬಿಜೆಪಿಗೆ ಜೆಡಿಎಸ್, ಪಕ್ಷೇತರರು ಬೆಂಬಲ ನೀಡಿದ್ದರೂ ಕೂಡ ಕಾಂಗ್ರೆಸ್ ಅವಿಶ್ವಾಸ ನಿರ್ಣಯದಲ್ಲಿ ನಗರಸಭೆ ಸದಸ್ಯನಿಗೆ ಬೆಂಬಲ ನೀಡಿದ ಪರಿಣಾಮ ಬಿಜೆಪಿಗೆ ಮುಖಭಂಗವಾಗಿದೆ.

    ಇದರೊಂದಿಗೆ ಎರಡು ದಶಕಗಳಿಂದ ನಗರಸಭೆಯಲ್ಲಿ ತನ್ನ ಪಾರುಪತ್ಯ ಮೆರೆದಿದ್ದ ಬಿಜೆಪಿ ನಗರಸಭೆಯಲ್ಲಿರುವ 35 ಸ್ಥಾನಗಳಲ್ಲಿ ಬಿಜೆಪಿ 18 ಸ್ಥಾನ ಗೆದ್ದಿತ್ತು. ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಉಳಿದಂತೆ ಕಾಂಗ್ರೆಸ್ 12, ಜೆಡಿಎಸ್ 3, ಎಸ್‌ಡಿಪಿಐ 1, ಪಕ್ಷೇತರರು 1 ಸದಸ್ಯರು ಗೆದ್ದಿದ್ದರು. ಆದರೆ, ಈಗ ಬಿಜೆಪಿಯ ಅಧ್ಯಕ್ಷ ಸ್ಥಾನದ ಕುರ್ಚಿ ಕಿತ್ತಾಟದಿಂದ ನಗರಸಭೆ ಅಧಿಕಾರವನ್ನ ಕಳೆದುಕೊಂಡಿದೆ. ಶುಕ್ರವಾರ ನಿರ್ಧಾರವಾಗಿದ್ದ ನಗರಸಭೆ ಅಧ್ಯಕ್ಷನ ವಿರುದ್ಧದ ಅವಿಶ್ವಾಸ ಸಭೆಯಲ್ಲಿ ಬಿಜೆಪಿ ಸದಸ್ಯರು ಬಿಜೆಪಿ ಅಧ್ಯಕ್ಷನ ವಿರುದ್ಧ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಲೋಕಸಭೆ ಚುನಾವಣೆ ಆದ್ಮೇಲೆ ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗುತ್ತೆ – ಆರ್. ಅಶೋಕ್

    ನಗರದಲ್ಲಿ ಇದ್ದರೂ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಎಂಎಲ್‌ಸಿ ಪ್ರಾಣೇಶ್ ನಗರಸಭೆಯ ಅವಿಶ್ವಾಸ ಸಭೆಗೆ ಗೈರಾಗಿದ್ದರು. ಇದು ಕೂಡ ವರಸಿದ್ಧಿ ವೇಣುಗೋಪಾಲ್‍ಗೆ ವರವಾಗಿ ಪರಿಣಮಿಸಿತ್ತು. ಇನ್ನು ಚಿಕ್ಕಮಗಳೂರು ಶಾಸಕ ತಮ್ಮಯ್ಯ ಸಭೆಯಲ್ಲಿ ಭಾಗಿಯಾಗಿ ವರಸಿದ್ಧಿ ವೇಣುಗೋಪಾಲ್ ಕಾಂಗ್ರೆಸ್ ಪಕ್ಷದ ತೀರ್ಮಾನದಂತೆ ತಟಸ್ಥವಾಗುವ ಮೂಲಕ ಬೆಂಬಲ ಸೂಚಿಸಿದ್ದರು. ಬಿಜೆಪಿ ನಗರಸಭೆ ಸದಸ್ಯರು ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ಮಂಡನೆ ಮಾಡುವಲ್ಲಿ ವಿಫಲವಾಗುವ ಮೂಲಕ ಅಧಿಕಾರ ಕಳೆದುಕೊಂಡಿದೆ. ದಶಕಗಳಿಂದ ಕಾಫಿನಾಡ ನಗರಸಭೆ ಮೇಲೆ ಹಿಡಿತ ಸಾಧಿಸಿದ್ದ ಬಿಜೆಪಿಗೆ ತಮ್ಮ ಪಕ್ಷದ ಅಧ್ಯಕ್ಷನಿಂದಲೇ ಮುಖಭಂಗವಾಗಿದ್ದು, ತೀವ್ರ ಹಿನ್ನೆಡೆಯಾಗಿದೆ. ಬಿಜೆಪಿಯೊಳಗಿನ ನಗರಸಭೆ ಅಧ್ಯಕ್ಷರ ಕುರ್ಚಿಗಾಗಿ ಕಿತ್ತಾಟದಿಂದ ಅಧಿಕಾರ ಕಳೆದುಕೊಂಡಿದ್ದು ಕಾಂಗ್ರೆಸ್ ನಗರಸಭೆಯನ್ನ ಬಿಜೆಪಿ ಅಧ್ಯಕ್ಷನ ಮೂಲಕವೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಬುದ್ಧಿವಂತಿಕೆಯ ಹೆಜ್ಜೆ ಇಟ್ಟಿದೆ.

  • ಒಂದೇ ನಗರಸಭೆಗೆ ಇಬ್ಬರು ಆಯುಕ್ತರು – ಕುರ್ಚಿಗಾಗಿ ಅಧಿಕಾರಿಗಳ ಕಿತ್ತಾಟ

    ಒಂದೇ ನಗರಸಭೆಗೆ ಇಬ್ಬರು ಆಯುಕ್ತರು – ಕುರ್ಚಿಗಾಗಿ ಅಧಿಕಾರಿಗಳ ಕಿತ್ತಾಟ

    ಬಾಗಲಕೋಟೆ: ಇಲ್ಲಿನ (Bagalkote) ನಗರಸಭೆ ಆಯುಕ್ತರ ಸ್ಥಾನಕ್ಕಾಗಿ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ಶುರುವಾಗಿದೆ. ಇಬ್ಬರು ಅಧಿಕಾರಿಗಳು ಒಂದೇ ಚೇಂಬರ್‍ನಲ್ಲಿ ಕುಳಿತು ಕಿತ್ತಾಟ ಆರಂಭಿಸಿದ್ದಾರೆ.

    ಹಿಂದಿನ ನಗರಸಭಾ (City Municipal Council) ಆಯುಕ್ತರಾಗಿದ್ದ ವಾಸಣ್ಣ.ಆರ್ ಹಾಗೂ ಈಗಿನ ಆಯುಕ್ತ ರಮೇಶ್ ಜಾಧವ್ ಮಧ್ಯೆ ಕುರ್ಚಿ ಕಿತ್ತಾಟ ನಡೆಯುತ್ತಿದೆ. ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ವಾಸಣ್ಣ ಅವರನ್ನು ಆ.11 ರಂದು ವರ್ಗಾವಣೆ ಮಾಡಲಾಗಿತ್ತು. ಅವರ ಸ್ಥಾನಕ್ಕೆ ರಮೇಶ್ ಜಾಧವ್ ಅವರನ್ನು ನಿಯೋಜಿಸಲಾಗಿತ್ತು. ಬಳಿಕ ವಾಸಣ್ಣ ಅವರು ಕೆಇಟಿ ಮೆಟ್ಟಿಲೇರಿದ್ದರು. ಇದನ್ನೂ ಓದಿ: 5 ವರ್ಷದ ಮಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ!

    ಇದಿಗ ಕೆಇಟಿ ಆದೇಶ ತಂದಿದ್ದೇನೆ ಎಂದು ವಾಸಣ್ಣ ವಾದಿಸಿದ್ದಾರೆ. ವಾಸಣ್ಣ ಅವರು ಸರ್ಕಾರಿ ಆದೇಶ ತೆಗೆದುಕೊಂಡು ಬಂದು ಬೇಕಾದರೆ ಹುದ್ದೆಗೆ ನಿಯೋಜನೆಗೊಳ್ಳಲಿ ಎಂದು ರಮೇಶ್ ವಾದಿಸಿದ್ದಾರೆ. ಇಬ್ಬರೂ ಅಧಿಕಾರಿಗಳು ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿರುವುದರಿಂದ ಸಿಬ್ಬಂದಿ ಈಗ ಗೊಂದಲದಲ್ಲಿದ್ದಾರೆ.

    ಈ ವೇಳೆ ತೆರಳಿದ್ದ ಮಾಧ್ಯಮಗಳ ಪ್ರತಿನಿಧಿಗಳ ಮೇಲೂ ವಾಸಣ್ಣ ಗರಂ ಆಗಿದ್ದಾರೆ. ನಾವು ನಿಮ್ಮನ್ನು ಬರಲು ತಿಳಿಸಿದ್ದೇವೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಂಗಳೂರು ದಸರಾ ಮೆರವಣಿಗೆಯಲ್ಲಿ ದೈವದ ಸ್ತಬ್ದಚಿತ್ರಕ್ಕಿಲ್ಲ ಅವಕಾಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾದಗಿರಿ ನಗರಸಭೆಯಿಂದ ಆಪರೇಷನ್ ಪುಣ್ಯಕೋಟಿ- ನಿಟ್ಟುಸಿರು ಬಿಟ್ಟ ಸವಾರರು

    ಯಾದಗಿರಿ ನಗರಸಭೆಯಿಂದ ಆಪರೇಷನ್ ಪುಣ್ಯಕೋಟಿ- ನಿಟ್ಟುಸಿರು ಬಿಟ್ಟ ಸವಾರರು

    ಯಾದಗಿರಿ: ನಗರಸಭೆ ಪೌರಾಯುಕ್ತ ಸಂಗಪ್ಪ ಉಫಾಸೆ ನೇತೃತ್ವದಲ್ಲಿ ಯಾದಗಿರಿಯಲ್ಲಿ ಆಪರೇಷನ್ ಪುಣ್ಯಕೋಟಿ (Operation Punyakoti) ನಡೆಸಲಾಯಿತು. ವಾಹನ ಸವಾರರಿಗೆ ಅಡ್ಡಿಯಾಗಿದ್ದ, ರಸ್ತೆ ಮೇಲೆ ಓಡಾಡ್ತಿದ್ದ ಜಾನುವಾರಗಳ ಸ್ಥಳಾಂತರ ಮಾಡಲಾಗಿದೆ.

    ಯಾದಗಿರಿ (Yadagiri) ನಗರದಲ್ಲಿ ದನಗಳ ಹಾವಳಿಯಿಂದ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿತ್ತು. ರಸ್ತೆ ಮೇಲೆ ಜಾನುವಾರುಗಳ ಓಡಾಟದಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿತ್ತು. ನಗರದ ಗಾಂಧಿ ವೃತ್ತ, ಎಪಿಎಂಸಿ ಪ್ರದೇಶ ಸೇರಿದಂತೆ ವಿವಿಧ ಪ್ರಮುಖ ರಸ್ತೆಯಲ್ಲಿಯೇ ಜಾನುವಾರುಗಳು ರಾತ್ರಿ ಕಳೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಇದೀಗ ಸಾರ್ವಜನಿಕರ ಹಿತ ದೃಷ್ಟಿಯಿಂದ ಜಾನುವಾರುಗಳನ್ನು ರಕ್ಷಣೆ ಮಾಡಿ ಗೋ ಶಾಲೆಗೆ ಸ್ಥಳಾಂತರ ಮಾಡಲಾಗಿದೆ.

    ನಗರದಲ್ಲಿ ಓಡಾಡುತ್ತಿದ್ದ 15 ಗೋವುಗಳನ್ನ (Cow Shift) ರಕ್ಷಣೆ ಮಾಡಿ ಗೋಶಾಲೆಗೆ ಸ್ಥಳಾಂತರಿಸಲಾಗಿದೆ. ಗೋವುಗಳ ರಕ್ಷಣೆ ವೇಳೆ ಮಹಿಳೆಯೊಬ್ಬರ ಕಣ್ಣೀರು ಹಾಕಿದ ಪ್ರಸಂಗ ಕೂಡ ನಡೆಯಿತು. ತನ್ನ ಹಸುವನ್ನ ನಗರಸಭೆ ವಾಹನದಲ್ಲಿ ಹಾಕಿಕೊಂಡಾಗ ಮಹಿಳೆ ಕಣ್ಣೀರಿಟ್ಟರು. ನಮ್ಮ ಆಕಳನ್ನ ಲಾರಿಯಲ್ಲಿ ಹಾಕಿಕೊಂಡು ಹೋದ್ರೆ ಹೇಗೆ? ನಮ್ಮ ಆಕಳು ಬಿಡಿ, ಪುಣ್ಯ ಬರುತ್ತದೆ, ಆಕಳುಗಳಿಂದಲೇ ಜೀವನ ಸಾಗಿಸುತ್ತೇನೆ ಎಂದು ಕಣ್ಣೀರು ಹಾಕುತ್ತಲೇ ಲಾರಿ ಹತ್ತಿ ಕೆಲ ಹೊತ್ತು ಮಹಿಳೆ ಹೈಡ್ರಾಮಾ ಸೃಷ್ಟಿಸಿದರು. ಇದನ್ನೂ ಓದಿ: ಕೆಪಿಸಿಸಿಗೆ 50 ಸಾವಿರ ದಂಡ ವಿಧಿಸಿದ ಬಿಬಿಎಂಪಿ

    ಈ ಹಿಂದೆಯೇ ಜಾನುವಾರುಗಳನ್ನ ರಸ್ತೆ ಮೇಲೆ ಬಿಡದಂತೆ ಸೂಚನೆ ಕೊಟ್ಟರೂ ಮಾಲೀಕರು ಎಚ್ಚೆತ್ತುಕೊಂಡಿರಲಿಲ್ಲ. ಹೀಗಾಗಿ ಪುಣ್ಯಕೋಟಿ ಹೆಸರಿನಲ್ಲಿ ನಗರಸಭೆ ಅಧಿಕಾರಿಗಳು ಆಪರೇಷನ್ ಮಾಡಿದ್ದು, ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾದಗಿರಿ ನಗರಸಭೆಯಲ್ಲಿ ನಿವೇಶನ ಗೋಲ್ಮಾಲ್-ಸರ್ಕಾರದ ಬೊಕ್ಕಸಕ್ಕೆ 18 ಕೋಟಿ ನಷ್ಟ

    ಯಾದಗಿರಿ ನಗರಸಭೆಯಲ್ಲಿ ನಿವೇಶನ ಗೋಲ್ಮಾಲ್-ಸರ್ಕಾರದ ಬೊಕ್ಕಸಕ್ಕೆ 18 ಕೋಟಿ ನಷ್ಟ

    ಯಾದಗಿರಿ: ಯಾದಗಿರಿಯಲ್ಲಿ (Yadagiri) ನಗಾರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಪಡೆಯದೆ ಕೃಷಿ ಭೂಮಿಯಲ್ಲಿ ನಿವೇಶನಗಳನ್ನು ವಿನ್ಯಾಸಗೊಳಿಸುವ ಮೂಲಕ ಮೊಟ್ಟೆ ದಾಖಲೆ ಸೃಷ್ಟಿಸಿ ಇಲ್ಲಿನ ನಗರಸಭೆಯಲ್ಲಿ ಅವುಗಳಿಗೆ ಖಾತಾ ನಕಲು ನೀಡಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ.ನಷ್ಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

    ಯಾದಗಿರಿ ಜಿಲ್ಲಾ ಕೇಂದ್ರವಾದ ಬಳಿಕ ಇಲ್ಲಿನ ಭೂಮಿಗೆ ಚಿನ್ನದ ಬೆಲೆ ಬಂದಿದೆ. ರಾತೋರಾತ್ರಿ ಧನಿಕರಾಗಬೇಕು ಎಂಬ ಆಸೆಗೆ ಬಿದ್ದ ಕೆಲವರು ಅಡ್ಡ ಮಾರ್ಗದ ಮೂಲಕ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದು, ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರುವ ಕೆಲಸ ಎಗ್ಗಿಲ್ಲದೆ ನಡೆದಿದ್ದು, ಇದಕ್ಕೆ ನಗರಸಭೆ ಅಧಿಕಾರಿಗಳೇ ಪರೋಕ್ಷ ಸಹಕಾರ ಕೊಟ್ಟಿರುವುದು ಬಯಲಾಗಿದೆ. 2019 ರಿಂದ 2023 ಮಾರ್ಚ್ ತಿಂಗಳವರೆಗೆ ನಗರಸಭೆಯಲ್ಲಿ ಬೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಇ- ಆಸ್ತಿ ತಂತ್ರಾಂಶದಲ್ಲಿ ಒಟ್ಟು 1,310 ಅನಧಿಕೃತ ಖಾತಾ ನೀಡಲಾಗಿದೆ.  ಇದನ್ನೂ ಓದಿ: ಸಿಎಂ ಭೇಟಿಯಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಸ್ಥರು – ಸಿಐಡಿ ತನಿಖೆಗೆ ಮನವಿ

    ನಗರ ವ್ಯಾಪ್ತಿಯ ಕೃಷಿ (ಗ್ರೀನ್ ಹಾಗೂ ಯಲ್ಲೋ ಬೆಲ್ಸ್) ಜಮೀನಿನಲ್ಲಿ ಎನ್‍ಎ (ಕೃಷಿಯೇತರ) ಆಗದೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇಔಟ್ ವಿನ್ಯಾಸಗೊಳಿಸಿದ ನಿವೇಶನಗಳನ್ನು ಸೃಷ್ಟಿಸಲಾಗಿದೆ. ಒಟ್ಟು 45 ಎಕರೆ ಜಮೀನಿನಲ್ಲಿ 30/40 ಚದರ ಅಡಿ ಅಳತೆಯ 1310 ನಿವೇಶನಗಳಿಗೆ ಖಾತಾ ನೀಡಲಾಗಿದೆ. ಎನ್ ಶುಲ್ಕ, ಲೇಔಟ್ ಶುಲ್ಕ, ಲೇಔಟ್ ಅಭಿವೃದ್ಧಿಪಡಿಸಲು ಪ್ರಾಧಿಕಾರಕ್ಕೆ ಸಲ್ಲಿಸುವ ಶುಲ್ಕ ಭರಿಸಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 18,12,75000 ನಷ್ಟವಾಗಿದೆ ಎಂದು ಪೌರಾಯುಕ್ತ ಸಂಗಪ್ಪ ಉಪಾಸೆ ಕಲಬುರಗಿ ವಿಭಾಗೀಯ ಆಯುಕ್ತರಿಗೆ ಸಲ್ಲಿಸಿದ ದಾಖಲೆಗಳಲ್ಲಿ ವಿವರಿಸಿದ್ದಾರೆ.

    ಈ ಹಗರಣದಲ್ಲಿ ನಗರಸಭೆ ಹಿಂದಿನ ಪೌರಾಯುಕ್ತರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅಲ್ಲದ ಕಚೇರಿಯ ಎತ್ತರ, ಕರ ವಸೂಲಿಗಾರರು, ಕಂದಾಯ ನಿರೀಕ್ಷಕರು ಸಹ ಶಾಮೀಲಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಸದ್ಯ ಅವರ ಮೇಲೆ ತೂಗುಕತ್ತಿ ನೇತಾಡುತ್ತಿದೆ. ಹೀಗಾಗಿ ಸರ್ಕಾರ ಮೊಟ್ಟೆ ದಾಖಲೆಯ ಖಾತಾ ವಿತರಣೆ ಬಗ್ಗೆ ಸಮಗ್ರ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಲ್ಲದೆ ನಷ್ಟಭರ್ತಿಗೆ ಕ್ರಮ ಕೈಗೊಳ್ಳುವ ಮೂಲಕ ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟುವ ಕೆಲಸ ಮಾಡುವುದು ಜರೂರಿ ಎನಿಸಿದೆ.

    ಯಾರ ಯಾರ ಅವಧಿಯಲ್ಲಿ ಎಷ್ಟೆಷ್ಟು ಹಂಚಿಕೆ: 2019 ರಲ್ಲಿ ಪೌರಾಯುಕ್ತರಾಗಿದ್ದ ರಮೇಶ್ ಸುಣಗಾರ ಹಾಗೂ ಕಂದಾಯ ಅಧಿಕಾರಿ ಪ್ರಶಾಪ ಅಲೆಕ್ಸಾಂಡರ್ ಸೇರಿ ಒಟ್ಟು 139 ಫಾರಂ -3 ನೀಡಿದರೆ, 2020-21ನೇ ಸಾಲಿನಲ್ಲಿ ಪೌರಾಯುಕ್ತ ಎಚ್.ಲಕ್ಕಪ್ಪ 169, ಅದೇ ಸಾಲಿನಲ್ಲಿ ಪೌರಾಯುಕ್ತರಾಗಿದ್ದ ಬಿ.ಟಿ.ನಾಯಕ್ 468, ಪ್ರಭಾರಿ ಪೌರಾಯುಕ್ತ ಹುದ್ದೆಗೆ ಬಂದ ಎಚ್.ಲಕ್ಕಪ್ಪ 111 ಹಾಗೂ 2023 ರ ಮಾರ್ಚ್‍ವರಗೆ ಪೌರಾಯುಕ್ತರಾಗಿದ್ದ ಶರಣಪ್ಪ ಎಸ್. ಮತ್ತು ಕಂದಾಯ ಅಧಿಕಾರಿ ನರಸಿಂಹರೆಡ್ಡಿ ಸೇರಿ 423 ಹೀಗೆ ಒಟ್ಟು ಮೂರು ವರ್ಷಗಳಲ್ಲಿ 1310 ಖಾತಾ ನೀಡುವ ಮೂಲಕ ರಾಜ್ಯ ಸರ್ಕಾರಕ್ಕೆ ಕೋಟಿ ಕೋಟಿ ರೂ. ನಷ್ಟ ಮಾಡಿರುವುದು ಸ್ಪಷ್ಟವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]