Tag: ನಗರ

  • ದೇಶದಲ್ಲಿ 8 ಹೊಸ ನಗರ ನಿರ್ಮಾಣಕ್ಕೆ ಕೇಂದ್ರ ಯೋಜನೆ

    ದೇಶದಲ್ಲಿ 8 ಹೊಸ ನಗರ ನಿರ್ಮಾಣಕ್ಕೆ ಕೇಂದ್ರ ಯೋಜನೆ

    ನವದೆಹಲಿ: ಪ್ರಸ್ತುತ ಅಸ್ತಿತ್ವದಲ್ಲಿರುವ ದೇಶದ ಪ್ರಮುಖ ನಗರಗಳ (Cities) ಮೇಲಿನ ಹೊರೆಯನ್ನು ತಗ್ಗಿಸುವ ಪ್ರಯತ್ನದಲ್ಲಿ ಕೇಂದ್ರ ಹೊಸ 8 ನಗರಗಳನ್ನು (New Cities) ಸ್ಥಾಪಿಸಲು ಯೋಜನೆ ನಡೆಸಿರುವುದಾಗಿ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

    ದೇಶದಲ್ಲಿ 8 ಹೊಸ ನಗರಗಳನ್ನು ಅಭಿವೃದ್ಧಿಪಡಿಸಲು 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವುದಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಜಿ20 ಘಟಕದ ನಿರ್ದೇಶಕ ಎಂಬಿ ಸಿಂಗ್ ತಿಳಿಸಿದ್ದಾರೆ.

    ‘ಅರ್ಬನ್ 20’ ಹೆಸರಿನ ಸಭೆಯಲ್ಲಿ ಮಾತನಾಡಿರುವ ಸಿಂಗ್ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಆಯೋಗದ ಮಹತ್ವದ ಶಿಫಾರಸಿನ ಬಳಿಕ ವಿವಿಧ ರಾಜ್ಯಗಳು ತಡ ಮಾಡದೇ ತಮ್ಮ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಇಂತಹ ಒಟ್ಟು 26 ಪ್ರಸ್ತಾಪಗಳನ್ನು ಸ್ವೀಕರಿಸಲಾಗಿದ್ದು, ಜಾಗರೂಕತೆಯಿಂದ ಪರಿಶೀಲನೆ ಮತ್ತು ವಿಶ್ಲೇಷಣೆ ನಡೆಸಿದ ಬಳಿಕ 8 ನಗರಗಳನ್ನು ಅಭಿವೃದ್ಧಿಪಡಿಸಲು ಮುಂದಾಗಬಹುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂಕೋರ್ಟ್ ಜಡ್ಜ್ ಆಗಿ ಪ್ರಶಾಂತ್ ಮಿಶ್ರಾ, ಕೆವಿ ವಿಶ್ವನಾಥನ್ ಪ್ರಮಾಣ ವಚನ ಸ್ವೀಕಾರ

    ಅಸ್ತಿತ್ವದಲ್ಲಿರುವ ನಗರಗಳು ತಮ್ಮ ನಾಗರಿಕರ ಬೇಡಿಕೆಗಳನ್ನು ಪೂರೈಸಲು ಹೆಣಗಾಡುತ್ತಿವೆ ಎಂಬ ಅಂಶದ ಕಾರಣಕ್ಕೆ ಹೊಸ ನಗರಗಳನ್ನು ನಿರ್ಮಿಸಲು ಯೋಜಿಸಲಾಗುತ್ತಿದೆ. ಕೊನೆಯಲ್ಲಿ ಸರ್ಕಾರ ಆಯ್ಕೆಗೊಳಿಸಿದ 8 ಪ್ರದೇಶಗಳನ್ನು ಅಭಿವೃದ್ಧಿಗೆ ಉದ್ದೇಶಿತ ಸಮಯಾವಧಿಯೊಂದಿಗೆ ಸರಿಯಾದ ಸಮಯದಲ್ಲಿ ಬಹಿರಂಗಪಡಿಸುತ್ತದೆ ಎಂದು ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ರಾಜಕೀಯ ಒತ್ತಡದ ನಡುವೆಯೂ IPL ವೀಕ್ಷಿಸಿ ರಿಲ್ಯಾಕ್ಸ್ ಆದ ನೂತನ ಸಿಎಂ ಸಿದ್ದರಾಮಯ್ಯ

  • ಮಂಗಳೂರಿನಲ್ಲಿ ಲಸಿಕೆ ಪಡೆಯದೇ ಓಡಾಟ ನಡೆಸುವವರ ಮೇಲೆ ನಿಗಾ

    ಮಂಗಳೂರಿನಲ್ಲಿ ಲಸಿಕೆ ಪಡೆಯದೇ ಓಡಾಟ ನಡೆಸುವವರ ಮೇಲೆ ನಿಗಾ

    ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಖಚಿತ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿವೆ. ಆದರೆ, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹೆಚ್ಚಳವಾಗುವ ಸಾಧ್ಯತೆಯೂ ಕೂಡ ಇದೆ. ಜೊತೆಗೆ ಸಂಭಾವ್ಯ ಕೋವಿಡ್ ಮೂರನೇ ಅಲೆಯ ಭೀತಿಯನ್ನು ತಪ್ಪಿಸಲು ಲಸಿಕೆ ಪಡೆಯದೇ ಓಡಾಟ ನಡೆಸುವವರ ಮೇಲೆ ಪಾಲಿಕೆ ನಿಗಾ ವಹಿಸಿದೆ.

    ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಅಕ್ಷಯ್ ಶ್ರೀಧರ್, ನಗರ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಷ್ಠಾನಗೊಳಿಸಿ, ಸಂಭಾವ್ಯ ಕೋವಿಡ್ ಮೂರನೇ ಅಲೆಯ ಭೀತಿಯನ್ನು ತಪ್ಪಿಸಲು, ನಗರ ವ್ಯಾಪ್ತಿಯಲ್ಲಿ ಕೋವಿಡ್ ಸಮುಚಿತ ವರ್ತನೆ ಪಾಲನೆಯಾಗುತ್ತಿರುವುದರ ಬಗ್ಗೆ ನಿಗಾವಹಿಸುವುದು ಅನಿವಾರ್ಯವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಅಪಾರ್ಟ್ಮೆಂಟ್‌ಗೆ ಬೆಂಕಿ – 46 ಸಾವು, 41 ಜನರಿಗೆ ಗಾಯ

    ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯದವರನ್ನು ಗುರುತಿಸಿ, ಲಸಿಕೆ ಕೊಡಿಸುವ ಕೆಲಸ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಅ.14 ರಿಂದ 16 ರವರೆಗೆ ನಗರದ ವಿವಿಧೆಡೆ ಹಮ್ಮಿಕೊಳ್ಳಲಾಗಿರುವ ಲಸಿಕಾ ಮೇಳಗಳ ಸಂಪೂರ್ಣ ಲಾಭವನ್ನು ನಾಗರಿಕರು ಪಡೆಯಬೇಕು. ತಪ್ಪಿದಲ್ಲಿ ಅ.16 ರಂದು ಮಾಲ್, ಸಹಿತ ಎಲ್ಲಾ ಸಾರ್ವಜನಿಕ ಸ್ಥಳಗಳು ಸೇರಿದಂತೆ ಸಾರ್ವಜನಿಕರಿಗೆ ಲಸಿಕೆ ಪಡೆದ ದಾಖಲೆ ಇಲ್ಲದೆ, ಬೇಕಾಬಿಟ್ಟಿ ಓಡಾಡುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ 13 ಸಾವಿರಕ್ಕೂ ಹೆಚ್ಚು ಕೋಳಿಗಳ ಮಾರಣಹೋಮ – ರೈತ ಕಂಗಾಲು

  • ಬೆಂಗಳೂರಿನಲ್ಲಿ ನಿಯಂತ್ರಣ, ಜಿಲ್ಲೆಗಳಲ್ಲಿ ಸ್ಫೋಟ – ಕೊರೊನಾ ಹೆಚ್ಚಾಗಲು ಕಾರಣ ಏನು?

    ಬೆಂಗಳೂರಿನಲ್ಲಿ ನಿಯಂತ್ರಣ, ಜಿಲ್ಲೆಗಳಲ್ಲಿ ಸ್ಫೋಟ – ಕೊರೊನಾ ಹೆಚ್ಚಾಗಲು ಕಾರಣ ಏನು?

    ಬೆಂಗಳೂರು: ಇಷ್ಟು ದಿನ ನಗರಗಳಲ್ಲಿ ಹೆಚ್ಚಾಗಿದ್ದ ಕೊರೊನಾ ಸಾಂಕ್ರಾಮಿಕ ರೋಗ, ಇದೀಗ ಹಳ್ಳಿಗಳಿಗೂ ಕಾಲಿಟ್ಟಿದೆ. ಬೆಂಗಳೂರು ಮಹಾನಗರದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೆ ಜಿಲ್ಲೆಗಳಲ್ಲಿ ಸೋಂಕು ಸ್ಫೋಟಗೊಳ್ಳುತ್ತಿದೆ.

    ಯಾಕೆ ಹೆಚ್ಚಾಯ್ತು?
    ಆರಂಭದ ಹಂತದಲ್ಲಿ ಸರ್ಕಾರ ಕೇವಲ ಬೆಂಗಳೂರಿನತ್ತ ಗಮನವನ್ನು ಕೇಂದ್ರೀಕರಿಸಿತು. ಜಿಲ್ಲೆಗಳಿಗೆ ಬೆಂಗಳೂರಿನಿಂದ ಗುಳೆ ಹೊರಡುವ ಸಮಯದಲ್ಲಿ ಸರ್ಕಾರ ಗ್ರಾಮೀಣ ಭಾಗದಲ್ಲಿ ಟೆಸ್ಟಿಂಗ್ ಹೆಚ್ಚಿಸುವ ಗೋಜಿಗೆ ಹೋಗದೇ ಸುಮ್ಮನಾಯಿತು. ಹೀಗಾಗಿ ನಗರದತ್ತ ಇದ್ದ ಕೊರೊನಾ ಇದೀಗ ಹಳ್ಳಿಗಳಿಗಳಲ್ಲಿಯೂ ಹಬ್ಬುತ್ತಿದೆ.

    ಮಾರ್ಗಸೂಚಿ ಸಡಿಲಿಕೆ ಮಾಡಿದ್ದರಿಂದ ಉಸ್ತುವಾರಿ ಸಚಿವರುಗಳು ಆಯಾಯ ಜಿಲ್ಲೆಯ ಪರಿಸ್ಥಿತಿಯನ್ನು ಮನಕಂಡು ಟಫ್ ರೂಲ್ಸ್ ತರುವುದಕ್ಕೆ ಹೊರಟಿದ್ದರು. ಆದರೆ ಸರ್ಕಾರ ಆರ್ಥಿಕತೆಗೆ ಹೊಡೆತ ಬೀಳಬಹುದು ಎಂಬ ಕಾರಣ ನೀಡಿ ಟಫ್ ರೂಲ್ಸ್‍ಗೆ ಅವಕಾಶ ನೀಡಲಿಲ್ಲ.

    ಗ್ರಾಮೀಣ ಭಾಗದಲ್ಲಿ ಖಾಕಿ ಫೋರ್ಸ್‍ನ್ನು ಜನರನ್ನು ನಿಯಂತ್ರಿಸಲು ಇನ್ನಷ್ಟು ಹೆಚ್ಚಾಗಿ ಬಳಸಬೇಕಾಗಿತ್ತು. ಆದರೆ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಇಲ್ಲದೇ ಜನರು ಓಡಾಟ ನಡೆಸಿದರು. ಅಲ್ಲದೆ ಮದುವೆ ಸಮಾರಂಭಗಳಿಗೆ ಅವಕಾಶ ಕೊಂಡಿದ್ದರಿಂದ ಸ್ಥಳೀಯ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಹೆಚ್ಚಿನ ಜನ ಸೇರುತ್ತಿದ್ದರು.

    ಲಾಕ್‍ಡೌನ್ ಮೇಲೆ ನಿಗಾ ಇಡಲು ಜಿಲ್ಲಾಡಳಿತ ವಿಫಲವಾಗಿತ್ತು. ಇನ್ನೂ ಹೆಚ್ಚು ಕೇಸ್ ಇರುವ ಭಾಗದಲ್ಲಿ ಮಾರ್ಕೆಟ್‍ಗಳ ತೆರೆದಿದ್ದರಿಂದ ಜನರು ಹೆಚ್ಚಾಗಿ ಸೇರುತ್ತಿದ್ದರು. ಜಿಲ್ಲೆಗಳಲ್ಲಿ ಟೆಸ್ಟಿಂಗ್‍ನತ್ತ ಕೂಡ ಗಮನವೇ ಹರಿಸಿಲ್ಲ. ಟೆಸ್ಟಿಂಗ್ ಹೆಚ್ಚಿಸಬೇಕಾಗಿತ್ತು.

    ಪ್ರಾಥಮಿಕ ಸಂಪರ್ಕಿತರ ಟ್ರೇಸಿಂಗ್‍ನಲ್ಲಿ ಜಿಲ್ಲಾಡಳಿತ ಕೂಡ ಎಡವಿತು. ಈ ಎಲ್ಲಾ ಕಾರಣಗಳಿಂದ ನಗರಗಳಷ್ಟೇ ಅಲ್ಲದೆ ಹಳ್ಳಿಗಳಲ್ಲಿಯೂ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

  • ಗ್ರಾಮೀಣ ಭಾಗದಲ್ಲಿ ಬಿಜೆಪಿ ಕಮಾಲ್: ನಗರ, ಗ್ರಾಮೀಣದಲ್ಲಿ ಯಾರು ಎಷ್ಟು ಸ್ಥಾನ ಗೆದ್ದಿದ್ದಾರೆ?

    ಗ್ರಾಮೀಣ ಭಾಗದಲ್ಲಿ ಬಿಜೆಪಿ ಕಮಾಲ್: ನಗರ, ಗ್ರಾಮೀಣದಲ್ಲಿ ಯಾರು ಎಷ್ಟು ಸ್ಥಾನ ಗೆದ್ದಿದ್ದಾರೆ?

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಭಾರತೀಯ ಜನತಾ ಪಕ್ಷ ಕೇವಲ ನಗರದ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳಿಸುವುದರ ಜೊತೆಗೆ ಗ್ರಾಮೀಣ ಭಾಗದಲ್ಲೂ ತನ್ನ ಸಾಮರ್ಥ್ಯವನ್ನು ವೃದ್ಧಿಸಿದೆ.

    ಬಿಜೆಪಿಯನ್ನು ನಗರದ ಜನತೆ ಜಾಸ್ತಿ ಬೆಂಬಲಿಸಿದರೆ, ಗ್ರಾಮೀಣ ಭಾಗದ ಜನತೆ ಕಾಂಗ್ರೆಸ್ ಬೆಂಬಲಿಸುತ್ತಾರೆ ಎನ್ನುವ ಮಾತಿದೆ. ಗುಜರಾತ್ ಚುನಾವಣೆಯಲ್ಲಿ ಇದು ಸಾಬೀತಾಗಿತ್ತು. ಹೀಗಾಗಿ ಈ ಬಾರಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಮತದಾನವಾಗಿರುವ ಕಾರಣ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಬಹುದು ಎನ್ನುವ ಲೆಕ್ಕಾಚಾರವನ್ನು ರಾಜಕೀಯ ಪಂಡಿತರು ಮುಂದಿಟ್ಟಿದ್ದರು. ಆದರೆ ಈ ಲೆಕ್ಕಾಚಾರ ತಲೆಕೆಳಗಾಗಿದ್ದು ಗ್ರಾಮೀಣ ಭಾಗದಲ್ಲೂ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನವನ್ನು ಗೆದ್ದುಕೊಂಡಿದೆ.

    ಈ ಬಾರಿ ಎಷ್ಟು ಏರಿಕೆಯಾಗಿದೆ?
    ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗ್ರಾಮೀಣ ಭಾಗದಲ್ಲಿ 82, ನಗರದಲ್ಲಿ 40 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ಗ್ರಾಮೀಣ ಭಾಗದಲ್ಲಿ 51 ಸ್ಥಾನ, ನಗರಗಳಲ್ಲಿ 27 ಸ್ಥಾನಗಳನ್ನು ಗೆದ್ದುಕೊಂಡಿದೆ.

    2013ರಲ್ಲಿ ಗ್ರಾಮೀಣದಲ್ಲಿ 22, ನಗರದಲ್ಲಿ 18 ಸ್ಥಾನ ಗೆದ್ದಿದ್ದ ಬಿಜೆಪಿ, ಈ ಬಾರಿ ಗ್ರಾಮೀಣ ಭಾಗದಲ್ಲಿ ಗೆದ್ದ ಸ್ಥಾನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಗ್ರಾಮೀಣ ಭಾಗದಲ್ಲಿ 69, ನಗರದಲ್ಲಿ 35 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದೆ.

    ಜನತಾ ದಳ ಸ್ಥಾನದ ಪ್ರಮಾಣದಲ್ಲಿ ನಿಖರತೆಯನ್ನು ಮುಂದುವರೆಸಿದ್ದು, 2013 ರಲ್ಲಿ ಗ್ರಾಮೀಣದಲ್ಲಿ 30, ನಗರದಲ್ಲಿ 10 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಗ್ರಾಮೀಣ ಭಾಗದಲ್ಲಿ 2 ಕ್ಷೇತ್ರ ಕಳೆದುಕೊಂಡು 28 ಸ್ಥಾನ ಗೆದ್ದರೆ, ನಗರ ಭಾಗದಲ್ಲಿ ಒಟ್ಟು 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

    ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಬಿಜೆಪಿ ಗೆದ್ದರೂ ಶೇಖಡವಾರು ಮತಗಳಿಕೆಯ ಪ್ರಮಾಣದಲ್ಲಿ ಕಾಂಗ್ರೆಸ್ ಮುಂದಿದೆ. 2013 ರಲ್ಲಿ ಕಾಂಗ್ರೆಸ್ 36.6% ಮತ ಪಡೆದಿದ್ದರೆ, ಈ ಬಾರಿ 38% ಮತ ಪ್ರಮಾಣ ಪಡೆದಿದೆ. ಬಿಜೆಪಿ 2013 ರಲ್ಲಿ ಕೇವಲ 19.9% ಮತಗಳನ್ನು ಪಡೆದಿದ್ದರೆ, ಈ ಬಾರಿ 36.2% ರಷ್ಟು ಮತ ಪಡೆದಿದೆ. ಉಳಿದಂತೆ ಜೆಡಿಎಸ್ 2013ರಲ್ಲಿ 20.2% ಮತ ಪಡೆದಿದ್ದರೆ, ಈ ಬಾರಿ 18.4% ರಷ್ಟು ಮತ ಪಡೆಯುವಲ್ಲಿ ಯಶಸ್ವಿಯಾಗಿದೆ.

  • ಇನ್ನು ಮುಂದೆ ನಗರ ಮತ್ತು ಹೈವೇಯಲ್ಲಿ ಕಾರು, ಬೈಕ್‍ಗಳು ಮತ್ತಷ್ಟು ಜಾಸ್ತಿ ವೇಗದಲ್ಲಿ ಹೋಗಬಹುದು!

    ಇನ್ನು ಮುಂದೆ ನಗರ ಮತ್ತು ಹೈವೇಯಲ್ಲಿ ಕಾರು, ಬೈಕ್‍ಗಳು ಮತ್ತಷ್ಟು ಜಾಸ್ತಿ ವೇಗದಲ್ಲಿ ಹೋಗಬಹುದು!

    ನವದೆಹಲಿ: ನಗರ ರಸ್ತೆ ಮತ್ತು ಹೆದ್ದಾರಿಯಲ್ಲಿ ವೇಗದ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೊಸ ನಿಯಮದ ಪ್ರಕಾರ ನಗರದಲ್ಲಿ ಕಾರುಗಳು ಗಂಟೆಗೆ 70 ಕಿ.ಮೀ. ವೇಗ ಮತ್ತು ಬೈಕುಗಳಿಗೆ 60 ಕಿ.ಮೀ. ವೇಗದ ಮಿತಿಯನ್ನು ನಿಗದಿ ಪಡಿಸಿದೆ.

    ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಿ ನಿತಿನ್ ಗಡ್ಕರಿ ಬುಧವಾರದಂದು ನಗರದ ರಸ್ತೆಗಳು ಮಾತ್ರವಲ್ಲದೇ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇಗಳಲ್ಲೂ ವೇಗದ ಮಿತಿಯನ್ನು ಹೆಚ್ಚಿಸಲು ಒಪ್ಪಿಗೆ ನೀಡಿದ್ದಾರೆ. ಅಧಿಸೂಚನೆ ಹೊರಡಿಸಲು ಈ ಪ್ರಸ್ತಾವನೆಯನ್ನು ಕಾನೂನು ಸಚಿವಾಲಯಕ್ಕೆ ಈಗ ಕಳುಹಿಸಲಾಗಿದೆ.

    ಹೊಸ ವ್ಯವಸ್ಥೆಯ ಪ್ರಕಾರ ಒಂದು ವೇಳೆ ನಿಗದಿಯಾಗಿರುವ ಮಿತಿಯ 5% ರಷ್ಟು ಜಾಸ್ತಿ ವೇಗದಲ್ಲಿ ಸಂಚರಿಸಿದ್ದಲ್ಲಿ ಎಚ್ಚರಿಕೆ ನೀಡಲಾಗುತ್ತದೆ ಅಷ್ಟೇ ಅಲ್ಲದೇ ದಂಡ ವಿಧಿಸಲಾಗುವುದಿಲ್ಲ. ನಗರದಲ್ಲಿ ಗಂಟೆಗೆ 70 ಕಿ.ಮೀ ವೇಗದಲ್ಲಿ ಸಂಚರಿಸುವುದು ಪ್ರಯೋಗಿಕವಾಗಿ ಸಾಧ್ಯವಾಗದೇ ಇದ್ದರೂ ಹಲವು ನಗರಗಳಲ್ಲಿ ರಿಂಗ್ ರಸ್ತೆಗಳು ಇರುವ ಕಾರಣ ವೇಗದ ಮಿತಿಯನ್ನು ಏರಿಸಲಾಗಿದೆ.

    ದೇಶಾದ್ಯಂತ ವೇಗ ಮಿತಿಯನ್ನ ಹೆಚ್ಚಿಸುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಇದ್ದು, ರಾಜ್ಯ ಸರ್ಕಾರ ಮತ್ತು ಇನ್ನಿತರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ರಸ್ತೆಯ ಮೇಲೆ ವೇಗದ ಮಿತಿಯನ್ನು ಹೇರಲು ಅನುಮತಿ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ನಿಗದಿ ಪಡಿಸಿದ ಗರಿಷ್ಟ ವೇಗದ ಮಿತಿಯನ್ನು ಮೀರುವಂತಿಲ್ಲ.

    ಬದಲಾಗಿರುವ ನಿಯಮಗಳ ಪ್ರಕಾರ ಎಕ್ಸ್ ಪ್ರೆಸ್ ವೇನಲ್ಲಿ ಇಲ್ಲಿಯವರೆಗೆ ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದ್ದ ಕಾರು ಇನ್ನು ಮುಂದೆ ಪ್ರತಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಸಂಚರಿಸಬಹುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಹೋಗುತ್ತಿದ್ದ ಕಾರುಗಳು ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸಬಹುದಾಗಿದೆ.