Tag: ನಗದು

  • ರಾಜ್ಯದಲ್ಲಿ ಒಟ್ಟು 22.79 ಕೋಟಿ ನಗದು, 1,52 ಕೋಟಿ ಮೌಲ್ಯದ ಲಿಕ್ಕರ್ ವಶ

    ರಾಜ್ಯದಲ್ಲಿ ಒಟ್ಟು 22.79 ಕೋಟಿ ನಗದು, 1,52 ಕೋಟಿ ಮೌಲ್ಯದ ಲಿಕ್ಕರ್ ವಶ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ (Karnataka Vidhanasabha Election 2023) ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾದ ಮೇಲೆ ಒಟ್ಟು 22.79 ಕೋಟಿ ನಗದು (Money) ಹಾಗೂ 1,52 ಕೋಟಿ ಮೌಲ್ಯದ ಲಿಕ್ಕರ್ (Liquor) ವಶಕ್ಕೆ ಪಡೆಯಲಾಗಿದೆ.

    ಬೆಂಗಳೂರು ನಗರ ಚುನಾವಣಾಧಿಕಾರಿಗಳು ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಅದರಲ್ಲಿ ನೀತಿ ಸಂಹಿತೆ (Code Of Conduct) ಉಲ್ಲಂಘನೆಯಾಗಿ ನಗದು, ಲಿಕ್ಕರ್, ಗಾಂಜಾ ವೆಹಿಕಲ್ ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಿಚ್ಚ ಸುದೀಪ್ ನಡೆಗೆ ಅಚ್ಚರಿಯಲ್ಲ, ನೋವು ತಂದಿದೆ : ಪ್ರಕಾಶ್ ರಾಜ್

    ಬುಧವಾರ ಒಂದೇ ದಿನ 6,52, 510 ನಗದು, 11,441,376 ಮೌಲ್ಯದ ಲಿಕ್ಕರ್, 2,001250 ಮೌಲ್ಯದ ಡ್ರಗ್ಸ್ ಹಾಗೂ 5 ವೆಹಿಕಲ್ ಗಳಲ್ಲಿ 38,5000 ನಗದು ಪತ್ತೆಯಾಗಿದೆ. ಒಟ್ಟಿನಲ್ಲಿ ನೀತೆ ಸಂಹಿತೆ ಜಾರಿಯಾದ ಮೇಲೆ ಇದ ಒಟ್ಟು 22.79 ಕೋಟಿ ನಗದು ಹಾಗೂ 3.14 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

    ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್, ಏಪ್ರಿಲ್ 13 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಆಯಾ ಜಿಲ್ಲಾ ಚುನಾವಣಾಧಿಕಾರಿಗಳು ಚುನಾವಣಾ ಅಧಿಸೂಚನೆ ಪ್ರಕಟಿಸಲಿದ್ದಾರೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏಪ್ರಿಲ್ 21 ನಾಮಪತ್ರ ಪರಿಶೀಲನೆ ನಡೆಲಿದ್ದು, ಏಪ್ರಿಲ್ 24 ನಾಮಪತ್ರ ವಾಪಸ್ಸಿಗೆ ಕೊನೆಯ ದಿನವಾಗಿದೆ. ಮೇ 10ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಮೇ 13 ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತದೆ ಎಂದು ತಿಳಿಸಿದ್ದರು.

  • ಬೆಳಗಾವಿಯಲ್ಲಿ ದಾಖಲೆ ಇಲ್ಲದ 2 ಕೋಟಿ ರೂ. ಹಣ ಜಪ್ತಿ

    ಬೆಳಗಾವಿಯಲ್ಲಿ ದಾಖಲೆ ಇಲ್ಲದ 2 ಕೋಟಿ ರೂ. ಹಣ ಜಪ್ತಿ

    ಬೆಳಗಾವಿ: ಬೆಳ್ಳಂಬೆಳಗ್ಗೆ ಬೆಳಗಾವಿ (Belagavi) ಚುನಾವಣಾ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು, ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಎರಡು ಕೋಟಿ ರೂ. ನಗದು ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.

    ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಹಿರೇಬಾಗೇವಾಡಿ (Hirebagewadi) ಟೋಲ್ (Toll) ಬಳಿ ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ ಕಂತೆ ಕಂತೆ ಹಣವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮುಂಬೈನಿಂದ (Mumbai) ಮಂಗಳೂರು (Mangaluru) ಕಡೆಗೆ ಹೊರಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಪಾಸಣೆ ನಡೆಸುವ ಸಂದರ್ಭದಲ್ಲಿ ಹಣದ (Money) ಬ್ಯಾಗ್ ಪತ್ತೆಯಾಗಿದೆ. ಇದನ್ನೂ ಓದಿ: ಹತ್ತು ವರ್ಷದಿಂದ ನಾಪತ್ತೆಯಾಗಿದ್ದ ನಟೋರಿಯಸ್ ರೌಡಿಶೀಟರ್‌ಗಳ ಬಂಧನ 

    ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಆದಾಯ ತೆರಿಗೆ (Income Tax) ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು (Election Officer) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವರುಣಾದಲ್ಲಿ ಸಿದ್ದು-ಬಿಎಸ್‌ವೈ ಹೊಂದಾಣಿಕೆ ಮಾಡ್ಕೊಂಡಿದ್ದಾರೆ: ಹೆಚ್‌ಡಿಡಿ ಹೊಸ ಬಾಂಬ್‌

  • ಒಂದೇ ದಿನದಲ್ಲಿ ಕಳ್ಳತನ‌ ಪ್ರಕರಣ ಭೇದಿಸಿದ ಪೊಲೀಸರು

    ಒಂದೇ ದಿನದಲ್ಲಿ ಕಳ್ಳತನ‌ ಪ್ರಕರಣ ಭೇದಿಸಿದ ಪೊಲೀಸರು

    ಚಿಕ್ಕೋಡಿ: ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಇತ್ತೀಚಿಗೆ ಜರುಗಿದ ಮನೆಕಳ್ಳತನ ಪ್ರಕರಣ ದಾಖಲಿಸಿಕೊಂಡ 24 ಗಂಟೆಯೊಳಗಾಗಿ ಆರೋಪಿಯನ್ನು ಪತ್ತೆ ಹಚ್ಚಿ ಆರೋಪಿತನಿಂದ 5.3 ಲಕ್ಷ ಮೊತ್ತದ ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿ ಸಂಕೇಶ್ವರ ಪೊಲೀಸರು (Police) ಯಶಸ್ವಿಯಾಗಿದ್ದಾರೆ.

    ಹೆಬ್ಬಾಳ ಗ್ರಾಮದಲ್ಲಿ ಕಳ್ಳನೊಬ್ಬ ಮನೆಯಲ್ಲಿದ್ದ ಚಿನ್ನಾಭರಣ (Gold), ನಗದು (Money), ಬೈಕ್ (Bike) ಅನ್ನು ಕದ್ದೊಯ್ದಿದ್ದನು. ಈ ಬಗ್ಗೆ ಸಂಕೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿ.ಎಸ್.ಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಡವನ್ನು ರಚನೆ ಮಾಡಿದ್ದಾರೆ. ಇದನ್ನೂ ಓದಿ: ‘ಸಿದ್ರಮುಲ್ಲಾ ಖಾನ್’ ಎಂದು ಕರೆದರೆ ಖುಷಿ ಪಡುವೆ: ಸಿದ್ದರಾಮಯ್ಯ

    ತಂಡದಲ್ಲಿ ಸಿಪಿಐ ಪಿ. ಆರ್. ಚನ್ನಗಿರಿ, ಪಿ.ಎಸ್ಐ ಎಸ್.ಬಿ. ನಾಯಿಕವಾಡಿ ಮತ್ತು ಸಿಬ್ಬಂದಿಯವರಾದ ಬಿ.ಕೆ ನಾಗನೂರಿ , ಐ.ಬಿ. ಅಲಗರಾವತ , ಬಿ.ವಿ. ಹುಲಕುಂದ, ಮೆಹಬೂಬ ದಾದಾಮಕ, ಬಿ.ಟಿ. ಪಾಟೀಲ್‌, ಎಮ್.ಎಮ್. ಜಂಬಗಿ, ಚಿ.ಎಸ್. ಕಪರಟ್ಟಿ, ಮಹೇಶ್‌ ಕರಗುಪ್ಪಿ, ಯಾಶೀನ ನದಾಫ್ ಅವರನ್ನು ಒಳಗೊಂಡ ತಂಡ 24 ಗಂಟೆಯೊಳಗೆ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಯಿಂದ ಸುಮಾರು 85 ಗ್ರಾಂ ಬಂಗಾರದ ಆಭರಣ ಹಾಗೂ 4,500 ರೂ. ನಗದು ಮತ್ತು ಬೈಕ್‌ ಜೊತೆಗೆ 5,03,000 ರೂ. ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಭೀಕರ ಅಪಘಾತ- ಸಿಪಿಐ, ಪತ್ನಿ ಸಾವು

    Live Tv
    [brid partner=56869869 player=32851 video=960834 autoplay=true]

  • ಹಾಡಹಗಲೇ ಮನೆ ಬೀಗ ಮುರಿದು ಚಿನ್ನ, ಬೆಳ್ಳಿ, ನಗದು ಕಳ್ಳತನ

    ಹಾಡಹಗಲೇ ಮನೆ ಬೀಗ ಮುರಿದು ಚಿನ್ನ, ಬೆಳ್ಳಿ, ನಗದು ಕಳ್ಳತನ

    ಕಲಬುರಗಿ: ಕಲಬುರಗಿ ನಗರದ ಬಿಲಾಲಬಾದ್ ಕಾಲೋನಿಯಲ್ಲಿ ಹಾಡುಹಗಲೇ ಮನೆಗಳ್ಳತನವಾಗಿರುವ ಘಟನೆ ನಡೆದಿದೆ.

    ಮಹ್ಮದ್ ಇಸ್ಮಾಯಿಲ್ ಖಾನ್ ಎಂಬವರ ಮನೆಯ ಬೀಗ ಮುರಿದು ಕಳ್ಳತನ ಮಾಡಲಾಗಿದೆ. 60 ಗ್ರಾಂ ಚಿನ್ನ, 20 ಗ್ರಾಂ ಬೆಳ್ಳಿ ಹಾಗೂ 3 ಲಕ್ಷ ರೂಪಾಯಿ ನಗದು ದೋಚಿ ಕಳ್ಳ ಪರಾರಿಯಾಗಿದ್ದಾನೆ. ಮನೆಗೆ ಬೀಗ ಹಾಕಿಕೊಂಡು ಹೊರಗಡೆ ಹೋದಾಗ ಈ ಕೃತ್ಯ ಎಸಗಲಾಗಿದೆ.

    ಇಬ್ಬರು ಕಳ್ಳರ ಚಲನವಲನ ದೃಶ್ಯ ಮನೆ ಮುಂದಿನ ರಸ್ತೆಯಲ್ಲಿರುವ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಓರ್ವ ಕಳ್ಳ ಮಹ್ಮದ್ ಇಸ್ಮಾಯಿಲ್ ಅವರ ಮನೆ ಕಾಂಪೌಂಡ್ ಹಾರೋ ದೃಶ್ಯ ಸೆರೆಯಾಗಿದೆ. ಇದನ್ನೂ ಓದಿ: ಇಂದಿನಿಂದ 3 ದಿನ ರಾಹುಲ್ ಗಾಂಧಿ ಕೇರಳ ಪ್ರವಾಸ

    ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv

  • ಮುರಗೋಡ ಡಿಸಿಸಿ ಬ್ಯಾಂಕ್‍ಗೆ ಕನ್ನ –  6 ಕೋಟಿ ರೂ. ಮೌಲ್ಯದ ವಸ್ತು ಕಳ್ಳತನ

    ಮುರಗೋಡ ಡಿಸಿಸಿ ಬ್ಯಾಂಕ್‍ಗೆ ಕನ್ನ – 6 ಕೋಟಿ ರೂ. ಮೌಲ್ಯದ ವಸ್ತು ಕಳ್ಳತನ

    ಬೆಳಗಾವಿ: ಡಿಸಿಸಿ ಬ್ಯಾಂಕಿನ ಮುರಗೋಡ ಶಾಖೆಗೆ ಕನ್ನ ಹಾಕಿರುವ ಕಳ್ಳರು ನಗದು, ಚಿನ್ನ ಸೇರಿ 6 ಕೋಟಿ ಮೌಲ್ಯದ ವಸ್ತುಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. ರಾತ್ರಿ ಬೀಗ ಮುರಿದು ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ.

    4.41 ಕೋಟಿ ರೂ. ನಗದು, 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿವೆ. ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಹಾಗೂ ಮುರಗೋಡ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ಉಕ್ರೇನ್ ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು: ಸುಜಯ್

    ರಾಜ್ಯದ ಜಿಲ್ಲಾ ಸಹಕಾರ ಬ್ಯಾಂಕ್‍ಗಳ ಪೈಕಿ ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಅತಿ ಹೆಚ್ಚು ಲಾಭದಲ್ಲಿದೆ. ನೂರು ವರ್ಷ ಪೂರೈಸಿರುವ ಈ ಬ್ಯಾಂಕ್ ಜಿಲ್ಲೆಯಲ್ಲಿ 100 ಶಾಖೆಗಳಿವೆ. ರೈತರ ಪಾಲಿನ ಆಶಾಕಿರಣವಾಗಿರುವ ಈ ಬ್ಯಾಂಕ್ ಠೇವಣಿ ಸಂಗ್ರಹ ಹಾಗೂ ಚಿನ್ನದ ಮೇಲೂ ಸಾಲ ನೀಡುತ್ತಿದೆ. ಠೇವಣಿ ಇಟ್ಟಿದ್ದ 4 ಕೋಟಿ 41 ಲಕ್ಷ ರೂಪಾಯಿ ನಗದು, ಅಡವಿಟ್ಟಿದ್ದ 1.5 ಕೋಟಿ ಮೌಲ್ಯದ ಚಿನ್ನಾಭರಣಗಳೀಗ ಕಳ್ಳತನವಾಗಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ಮುಗಿಬಿದ್ದ ರಷ್ಯಾ – ಬಾಂಬ್, ಕ್ಷಿಪಣಿ ದಾಳಿಗೆ ಕೀವ್ ನಗರ ತತ್ತರ

    ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿರುವ ಬಿಡಿಸಿಸಿ ಬ್ಯಾಂಕ್‍ನಲ್ಲಿ ಆಗಿರುವ ಕಳ್ಳತನ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಳ್ಳತನವಾದ ಬ್ಯಾಂಕ್‍ನಲ್ಲಿ ಯಾವುದೇ ಕೀ ಗಳನ್ನು ಒಡೆಯದೇ ಇರುವುದು ಪತ್ತೆಯಾಗಿದೆ. ಇತ್ತ ಬ್ಯಾಂಕ್‍ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದ ಡಿವೈಸ್‍ನ್ನು ಕಳ್ಳತನ ಮಾಡಲಾಗಿದೆ. ಇತ್ತ ಮುರಗೋಡ ಡಿಸಿಸಿ ಬ್ಯಾಂಕ್‍ನಲ್ಲಿ 50 ಲಕ್ಷ ಹಣ ಮಿತಿ ಇರಿಸಲಾಗಿತ್ತು. 50 ಲಕ್ಷಕ್ಕೆ ಮಾತ್ರ ಇನ್ಸುರೆನ್ಸ್ ಮಾಡಿಸಲಾಗಿತ್ತು. ಆದರೆ, ಬ್ಯಾಂಕ್‍ನಲ್ಲಿ ಇಷ್ಟು ಹಣವನ್ನು ಹೇಗೆ ಇಟ್ಟುಕೊಂಡಿದ್ದರು ಎಂಬ ಪ್ರಶ್ನೆ ಉದ್ಭವಾಗಿದೆ.

  • ಜಪ್ತಿ ಮಾಡುವ ನೆಪದಲ್ಲಿ ಚಿನ್ನಾಭರಣ, ನಗದು ರಾಬರಿ ಮಾಡಿದ್ದ ನಕಲಿ ಪೊಲೀಸ್ ಗ್ಯಾಂಗ್ ಅಂದರ್

    ಜಪ್ತಿ ಮಾಡುವ ನೆಪದಲ್ಲಿ ಚಿನ್ನಾಭರಣ, ನಗದು ರಾಬರಿ ಮಾಡಿದ್ದ ನಕಲಿ ಪೊಲೀಸ್ ಗ್ಯಾಂಗ್ ಅಂದರ್

    ಬೆಂಗಳೂರು: ನಾವು ಪೊಲೀಸರು ಎಂದು ಹೇಳಿ ಮನೆಯಲ್ಲಿದ್ದ ನಗದು, ಚಿನ್ನ ದೋಚಿ ಎಸ್ಕೇಪ್ ಆಗಿದ್ದ ಗ್ಯಾಂಗ್‍ ಅನ್ನು ನಗರದ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಸಮಯನಾಯ್ಕ್ ಅವರ ಮನೆಗೆ ಪೊಲೀಸರ ನೆಪದಲ್ಲಿ ನುಗ್ಗಿದ್ದ ಗ್ಯಾಂಗ್, ನಾವು ತಿಪಟೂರು ಪೊಲೀಸರು ನಿಮ್ಮ ಮನೆ ಸರ್ಚ್ ಮಾಡಬೇಕು ಎಂದು ಹೇಳಿ, ನಂತರ ಮನೆಯವರಿಗೆ ಗನ್ ಹಾಗೂ ಚಾಕು ತೋರಿಸಿ ಸುಮ್ಮನೆ ಕೂರುವಂತೆ ವಾರ್ನ್ ಮಾಡಿದರು. ಅಲ್ಲದೇ ಫೋನ್‍ಗಳನ್ನು ಕಿತ್ತುಕೊಂಡು ಎರಡು ಗಂಟೆಗಳ ಕಾಲ ಮನೆಯನ್ನು ಸರ್ಚ್ ಮಾಡಿದ್ದಾರೆ. ಇದನ್ನೂ ಓದಿ: ಪೊಲೀಸರನ್ನು ನೋಡಿ ಮಾಸ್ಕ್ ಹಾಕಬೇಡಿ – ಬೈಕ್ ಸವಾರನಿಗೆ ಮನವಿ ಮಾಡಿದ ಪೇದೆ

    ಮನೆಯಲ್ಲಿದ್ದ 19 ಲಕ್ಷ ನಗದು, 500 ಗ್ರಾಂ ಚಿನ್ನಾಭರಣ ಪೊಲೀಸರಂತೆ ಜಪ್ತಿ ಮಾಡಿ, ನಂತರ ಸಮಯನಾಯ್ಕ್ ಅವರ ಪುತ್ರ ಮಂಜುನಾಥ್ ಅವರನ್ನು ಠಾಣೆಗೆ ಕರೆದೊಯ್ಯುವುದಾಗಿ ಕಾರಿನಲ್ಲಿ ಕೂರಿಸಿಕೊಂಡು, ಮಹಾಲಕ್ಷ್ಮಿ ಲೇಔಟ್, BEL ಸರ್ಕಲ್, ಎಂ.ಎಸ್.ಪಾಳ್ಯ ಸುತ್ತಾಡಿಸಿದ್ದಾರೆ. ಈ ವೇಳೆ 20 ಲಕ್ಷ ಹಣ ಕೊಟ್ಟರೆ ಜಪ್ತಿ ಮಾಡಿದ ಕ್ಯಾಶ್ ಒಡವೆ ಕೊಟ್ಟು ಬಿಟ್ಟು ಬಿಡುತ್ತೇವೆ ಕೇಸ್ ಹಾಕಲ್ಲ ಎಂದು ತಿಳಿಸಿದ್ದರು. ಆದರೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಜಪ್ತಿ ಮಾಡುವ ನೆಪದಲ್ಲಿ 500 ಗ್ರಾಂ ಚಿನ್ನಾಭರಣ, 19 ಲಕ್ಷ ನಗದು ಕೊಂಡೊಯ್ದಿದ್ದಾರೆ.

    POLICE

    ಠಾಣೆಗೆ ಕರೆದಾಗ ಬರಬೇಕು, ಜಪ್ತಿ ಮಾಡಿದ ಹಣ ಒಡವೆ ಸ್ಟೇಷನ್‍ಗೆ ಬಂದು ಬಿಡಿಸಿಕೊಳ್ಳಿ ಎಂದಿದ್ದರು. ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ ನಕಲಿ ಪೊಲೀಸರು ರಾಬರಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: 50 ಕೋಟಿ ರೂ. ಜಾಗತಿಕ ಕ್ರೆಡಿಟ್ ಕಾರ್ಡ್ ಹಗರಣ ಭೇದಿಸಿದ ಪೊಲೀಸರು – 7 ಜನ ಅರೆಸ್ಟ್ 

  • 50 ಲಕ್ಷ ಮೌಲ್ಯದ ಚಿನ್ನ, ನಗದು ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಎಂ.ಜಿ ಕೃಷ್ಣಮೂರ್ತಿ

    50 ಲಕ್ಷ ಮೌಲ್ಯದ ಚಿನ್ನ, ನಗದು ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಎಂ.ಜಿ ಕೃಷ್ಣಮೂರ್ತಿ

    ಬೆಂಗಳೂರು: ನಗರದಲ್ಲಿ ಕಾಂಟ್ರಾಕ್ಟರೊಬ್ಬರು ರಿಯಲ್ ಹೀರೋ ಆಗಿದ್ದಾರೆ. 50 ಲಕ್ಷದಷ್ಟು ಬೆಲೆ ಬಾಳುವ ವಸ್ತುಗಳು ಹಾಗೂ ನಗದು ಹಣವನ್ನ ಹಿಂದಿರುಗಿಸಿ ಪ್ರಮಾಣಿಕತೆ ಮೆರೆದ ಕಾಂಟ್ರಾಕ್ಟರ್ ಎಂ.ಹೆಚ್ ಕೃಷ್ಣಮೂರ್ತಿಗೆ ಎಲ್ಲಡೆ ಅಭೂತಪೂರ್ವ ಶ್ಲಾಘನೆ ವ್ಯಕ್ತವಾಗುತ್ತಿದೆ.

    ಅಕ್ಟೊಬರ್ 7ರಂದು ರಾಮಮೂರ್ತಿ ನಗರದ ಕಸ್ತೂರಿ ನಗರದಲ್ಲಿ ಬಹುಮಹಡಿ ಕಟ್ಟಡ ಕುಸಿದಿತ್ತು. ಈ ಕಟ್ಟಡ ತೆರವು ಕಾರ್ಯಾಚರಣೆ ನಡೆಸಲು ಪಾಲಿಕೆಯಿಂದ ಗುತ್ತಿಗೆ ಪಡೆದಿದ್ದ ಪೀಣ್ಯದ ಶ್ರೀ ಚೈತನ್ಯ ಸರ್ವಿಸಸ್ ಮಾಲೀಕ ಕೃಷ್ಣಮೂರ್ತಿ, ಸತತ 72 ಘಂಟೆಗಳಿಂದ ತೆರವು ಕಾರ್ಯಾಚರಣೆ ನಡೆಸುತ್ತಿದ್ದರು. ಕಟ್ಟಡ ತೆರವು ಕಾರ್ಯಚರಣೆ ವೇಳೆ ಸಿಕ್ಕಿದ್ದ ಆಭರಣ, ನಗದು ಹಣ, ಲ್ಯಾಪ್ ಟಾಪ್ ಹಾರ್ಡ್ ಡಿಸ್ಕ್ ಸೇರಿ ಇತರೆ ವಸ್ತುಗಳನ್ನು ಕೃಷ್ಣಮೂರ್ತಿ ಹಿಂದಿರುಗಿಸಿದ್ದಾರೆ.

    ಕೃಷ್ಣಮೂರ್ತಿ ಅವರ ಪ್ರಮಾಣಿಕತೆಗೆ ಬಿಬಿಎಂಪಿಯ ಪೂರ್ವ ವಲಯ ಆಯುಕ್ತ ಮನೋಜ್ ಜೈನ್, ಜಂಟಿ ಆಯುಕ್ತ ಕೆ.ಆರ್ ಪಲ್ಲವಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಎರಡು ಕುಟುಂಬಗಳಿಂದ 1 ಕೋಟಿಗೂ ಹೆಚ್ಚು ಹಣ ಕಳೆದುಕೊಂಡಿದ್ರು. ಈ ಪೈಕಿ 50 ಲಕ್ಷದಷ್ಟು ಹಣ ಮಾತ್ರ ಮರಳಿ ಸಿಕ್ಕಿದೆ. ತಮ್ಮ ವಸ್ತುಗಳನ್ನ ಹಸ್ತಾಂತರಿಸಿದ ಕೃಷ್ಣಮೂರ್ತಿಗೆ ಎರಡು ಕುಟುಂಬಗಳು ಕೃತಜ್ಞತೆ ಸಲ್ಲಿಸಿವೆ. ಇದನ್ನೂ ಓದಿ: ರೈಲಿನಲ್ಲಿ ಮರೆತ 7.31 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಿದ ರೈಲ್ವೇ ಭದ್ರತಾ ಪಡೆ

    ನಿಮ್ಮ ಪ್ರಮಾಣಿಕತೆಗೆ ನಮ್ಮ ಸಲಾಂ, ಯಾವತ್ತು ನಿಮ್ಮನ್ನ ಮರೆಯೋದಿಲ್ಲ ಎಂದು ವಸ್ತುಗಳನ್ನ ಪಡೆದ ಎರಡು ಕುಟುಂಬಗಳು ಸಂತಸ ವ್ಯಕ್ತಪಡಿಸಿವೆ. ಸತತ 72 ಘಂಟೆಗಳ ಬಳಿಕ ಬಹುಮಹಡಿ ಕಟ್ಟಡ ತೆರವು ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಬಹುಮಹಡಿ ಕಟ್ಟಡದ ಪಕ್ಕದಲ್ಲಿದ್ದ ಮನೆಗಳಿಗೆ ಹಾನಿಯಾಗದಂತೆ ತೆರವು ಕಾರ್ಯಾಚರಣೆಯಾಗಿದೆ.

  • ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಬವಾರಿಯ ಗ್ಯಾಂಗ್ ಅರೆಸ್ಟ್

    ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಬವಾರಿಯ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಬವಾರಿಯ ಗ್ಯಾಂಗ್‍ನ್ನು ಹೆಡೆಮುರಿ ಕಟ್ಟುವಲ್ಲಿ ವಿಜಯ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

    ನಗರದಲ್ಲಿ ನಡೆದ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಬವಾರಿಯ ಗ್ಯಾಂಗ್‍ನ ರಾಹುಲ್, ಗೌರವ್, ನೀತಿನ್ ರಿಯಾಜ್ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಉತ್ತರಪ್ರದೇಶದಿಂದ ಬಂದು ನಗರದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಆರೋಪಿಗಳು ಉತ್ತರಪ್ರದೇಶ, ದೆಹಲಿ, ಜಮ್ಮುಕಾಶ್ಮೀರದಿಂದ ವಿಮಾನದಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಆಕ್ಟೀವ್ ಆಗಿದೆಯಾ ಓಜಿಕುಪ್ಪಂ ಗ್ಯಾಂಗ್? ಒಂಟಿ ಮಹಿಳೆಯರೇ ಇವರ ಟಾರ್ಗೆಟ್!

    ನಗರದ ವಿಜಯನಗರ, ಕೆಂಗೇರಿ, ತಿಲಕ ನಗರ, ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು, ಸರಗಳ್ಳತನ ಜೊತೆಗೆ ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಮನೆಯಲ್ಲಿ ಕಳ್ಳತನ ಮಾಡಿರುವುದು ಕೂಡ ತನಿಖೆಯ ವೇಳೆ ತಿಳಿದು ಬಂದಿದೆ. ಬಂಧಿತ ಆರೋಪಿಗಳಿಂದ 13 ಲಕ್ಷ ಬೆಲೆ ಬಾಳುವ 260 ಗ್ರಾಂ. ಚಿನ್ನಾಭರಣ, 2,000 ಸಾವಿರ ನಗದು, ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪ್ರತ್ಯೇಕವಾಗಿ ಮೂರು ಗ್ಯಾಂಗ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಆರೋಪಿಗಳು ವಿಜಯನಗರ ಪೊಲೀಸರ ವಶದಲ್ಲಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಎಸಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಕಿರಾತಕರು!

  • ಮಾಜಿ ಮೇಯರ್ ಮನೆಗೆ ಕನ್ನ ಹಾಕಿದ ಖದೀಮ

    ಮಾಜಿ ಮೇಯರ್ ಮನೆಗೆ ಕನ್ನ ಹಾಕಿದ ಖದೀಮ

    ಹುಬ್ಬಳ್ಳಿ: ಮಾಜಿ ಮೇಯರ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೇ ಮನೆಯಲ್ಲಿದ್ದ ನಗದು ಚಿನ್ನಾಭರಣ ದೋಚಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ಮಾಜಿ ಮೇಯರ್ ಬಿಜೆಪಿ ಮುಖಂಡ ಈರಣ್ಣ ಸವಡಿಯನವರ ವಿಜಯನಗರದ ನಿವಾಸದಲ್ಲಿ ಕಳ್ಳತನವಾಗಿದ್ದು, ಮನೆಯ ಬೆಡ್ ರೂಮ್‍ನ ಕಪಾಟಿನ ಬಾಕ್ಸ್‍ನಲ್ಲಿದ್ದ 1 ಲಕ್ಷ 32 ಸಾವಿರ ರೂಪಾಯಿ ಮೌಲ್ಯದ ಆಭರಣ ಮತ್ತು 23 ಸಾವಿರ ನಗದು, ಐದು ಸಾವಿರ ಮೌಲ್ಯದ ವಾಚ್‍ಗಳನ್ನು ದೋಚಲಾಗಿದೆ.

    ತಂದೆಯ ಆರೈಕೆಗಾಗಿ ಕೇರ್ ಟೇಕರ್ ಆಗಿ ನೇಮಕ ಮಾಡಿಕೊಂಡಿದ್ದ ವ್ಯಕ್ತಿಯೇ ಕಳ್ಳತನ ಮಾಡಿದ್ದಾನೆ ಎಂದು ಈರಣ್ಣ ಸವಡಿ ಆರೋಪಿಸಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರ ಬಡ್ನಿ ತಾಂಡಾದ ಅರುಣ ನಾಯಕ ಎಂಬಾತನೇ ದೋಚಿಕೊಂಡು ಪರಾರಿಯಾಗಿದ್ದಾನೆ ಎಂದು ಈರಣ್ಣ ಸವಡಿ ದೂರು ನೀಡಿದ್ದಾರೆ.

    ಈ ಕುರಿತು ಹುಬ್ಬಳ್ಳಿಯ ಅಶೋಕ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಮೊದಲ ರಾತ್ರಿಯೇ ವರ ಕಂಡ ಕನಸು ಭಗ್ನ- ಪೊಲೀಸ್ ಠಾಣೆಯಲ್ಲಿ ದೂರು

    ಮೊದಲ ರಾತ್ರಿಯೇ ವರ ಕಂಡ ಕನಸು ಭಗ್ನ- ಪೊಲೀಸ್ ಠಾಣೆಯಲ್ಲಿ ದೂರು

    – ದೇವಾಲಯದಲ್ಲಿ ಮದ್ವೆಯಾಗಿದ್ದ ಜೋಡಿ

    ಲಕ್ನೋ: ವರನಿಗೆ ರಾಡ್‍ನಿಂದ ಹಲ್ಲೆ ನಡೆಸಿ ನಗದು ಹಾಗೂ ಆಭರಣವನ್ನು ದೋಚಿಕೊಂಡು ವಧು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ವಧು ಹರಿದ್ವಾರ ನಿವಾಸಿಯಾಗಿದ್ದು, ವರ ಬಿಜ್ನೋರ್ ಕುಂದಾ ಖುರ್ದ್ ಗ್ರಾಮದವನಾಗಿದ್ದಾನೆ. ಮಾರ್ಚ್ 15ರಂದು ಇಬ್ಬರು ದೇವಾಲಯವೊಂದರಲ್ಲಿ ವಿವಾಹವಾದರು. ಮದುವೆ ಬಳಿಕ ವಧುವನ್ನು ಮನೆಗೆ ಕರೆದೊಯ್ದ ವರ ಇನ್ನು ಮುಂದೆ ಲೈಫ್‍ನಲ್ಲಿ ಸೆಟೆಲ್ಡ್ ಆದೇ ಎಂದು ಭಾವಿಸಿಸಿದ್ದನು. ಆದರೆ ಮದುವೆಯಾದ ಮೊದಲ ರಾತ್ರಿಯೇ ಆತನ ಕನಸುಗಳು ನುಚ್ಚುನೂರಾಗಿದೆ. ಮೊದಲ ರಾತ್ರಿಯೇ ವಧು ಕಬ್ಬಿಣದ ರಾಡ್‍ನಿಂದ ವರನ ಮೇಲೆ ಹಲ್ಲೆ ನಡೆಸಿ ಆತನನ್ನು ಗಂಭೀರವಾಗಿ ಗಾಯಗೊಳಿಸಿದ್ದಾಳೆ.

    ಘಟನೆ ಕುರಿತಂತೆ ಪ್ರತಿಕ್ರಿಯಿಸಿ ವರ, ಕಳ್ಳತನ ಮಾಡಲೆಂದು ವಧು ಮೊದಲೇ ಯೋಜಿಸಿಕೊಂಡು ಮದುವೆಯಾಗಿದ್ದಾಳೆ ಎಂದು ಹೇಳಿದ್ದಾನೆ. ನಿಜವಾಗಲೂ ಏನಾಯಿತು ಎಂದು ತಿಳಿಯುತ್ತಿಲ್ಲ. ಇದ್ದಕ್ಕಿದ್ದಂತೆ ನನ್ನ ಪತ್ನಿ ರಾಡ್‍ನಿಂದ ಹೊಡೆಯಲು ಆರಂಭಿಸಿದಳು. ಇದರಿಂದ ನಾನು ಪ್ರಜ್ಞೆ ತಪ್ಪಿ ಬಿದ್ದೆ. ನಂತರ ಆಕೆ 20,000 ರೂ ನಗದು ಹಾಗೂ 2 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾಳೆ ಎಂಬ ವಿಚಾರ ತಿಳಿದುಬಂದಿದೆ ಎಂದು ಹೇಳಿದನು.

    ಸದ್ಯ ಘಟನೆ ಕುರಿತಂತೆ ವರನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.