Tag: ನಕ್ಸಲ್

  • ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ಕಾರ್ಯ – 7 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ

    ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ಕಾರ್ಯ – 7 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ

    – ಕಾಡಂಚಿನ ಕುಗ್ರಾಮಗಳಿಗೆ ಮೂಲಭೂತ ಸೌಕರ್ಯ ಭಾಗ್ಯ

    ಚಿಕ್ಕಮಗಳೂರು: ಇತ್ತೀಚಿಗೆ ಏಳೆಂಟು ಜನ ನಕ್ಸಲರು (Naxalites) ಸೆರೆಂಡರ್ ಆಗುವಾಗ ಸರ್ಕಾರಕ್ಕೆ ಮಲೆನಾಡು (Malenadu) ಅಭಿವೃದ್ಧಿ ಆಗಬೇಕು, ಶರಣಾದ ನಕ್ಸಲರಿಗೆ ಕೊಡುವ ಪ್ಯಾಕೇಜ್ ಕೊಡಬೇಕು ಎಂಬ ಬೇಡಿಕೆಯನ್ನ ಮುಂದಿಟ್ಟಿತ್ತು. ಅದಕ್ಕೆ ಸರ್ಕಾರ ಕೂಡ ಗ್ರೀನ್ ಸಿಗ್ನಿಲ್ ಕೊಟ್ಟಿತ್ತು. ಹಾಗಾಗಿಯೇ ಇತಿಹಾಸದಲ್ಲಿ ಮೊಟ್ಟ-ಮೊದಲು ನಕ್ಸಲರು ಸಿಎಂ ಎದುರು ಶರಣಾಗಿದ್ದರು. ಆದರೆ ಸರ್ಕಾರ ಇಂದು ಮಲೆನಾಡಿಗೆ 7 ಕೋಟಿ ಹಣ ಕೊಟ್ಟಿರೋದು ನೋಡಿದರೆ ಶರಣಾದ ನಕ್ಸಲರಿಗೆ ಕೊಟ್ಟ ಮಾತು ಉಳಿಸಿಕೊಂಡಿತಾ ಎಂಬ ಅನುಮಾನ ದಟ್ಟವಾಗಿದೆ.

    ಸರ್ಕಾರ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆಂದು ಕಾಫಿನಾಡಿಗೆ 7 ಕೋಟಿ 12 ಲಕ್ಷ ಹಣ ಬಿಡುಗಡೆ ಮಾಡಿದೆ. ನಕ್ಸಲರು ಮಲೆನಾಡು ಅಭಿವೃದ್ಧಿಗಾಗಿ ಹೋರಾಡುತ್ತಿದ್ದಾಗ ಅಲ್ಲಿನ ಪರಿಸ್ಥಿತಿ ಹೇಗಿತ್ತೋ ಹಲವೆಡೆ ಇಂದಿಗೂ ಹಾಗೇ ಇದೆ. ಕಾಡಂಚಿನ ಕುಗ್ರಾಮಗಳ ರಸ್ತೆ-ನೀರು-ಕರೆಂಟ್-ಕಾಲುಸಂಕ ಸೇರಿದಂತೆ ವಿವಿಧ ಸೌಲಭ್ಯ ನೀಡಲು ಸರ್ಕಾರ 7 ಕೋಟಿ ಹಣ ಬಿಡುಗಡೆ ಮಾಡಿದೆ. ಮಲೆನಾಡಿನ ಎಷ್ಟೋ ಗ್ರಾಮಗಳು ಈಗ ರಸ್ತೆ ನೋಡೋ ಅಂತಹಾ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಆಗಮನ ಹಿನ್ನೆಲೆ ಕೇಸರಿ ಧ್ವಜ ತೆರವಿಗೆ ಪೊಲೀಸರು ಸೂಚನೆ; ದಿಢೀರ್​ ಪ್ರತಿಭಟನೆ

    ಇನ್ನು ಸರ್ಕಾರ ನಕ್ಸಲರು ಸರ್ಕಾರ-ವ್ಯವಸ್ಥೆ ವಿರುದ್ಧ ಹೋರಾಡುತ್ತಿದ್ದಾಗಲೇ ಸರ್ಕಾರ ಕಾಡಂಚಿನ ಕುಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರೆ ನಕ್ಸಲರು-ಪೊಲೀಸರು-ಮಾಹಿತಿದಾರರ ಹೆಸರಲ್ಲಿ ಜನಸಾಮಾನ್ಯರು ಸಾಯುತ್ತಿರಲಿಲ್ಲ. ಆಗ ಸರ್ಕಾರ ನಕ್ಸಲರನ್ನು ಹುಡುಕೋದಕ್ಕೆ, ಸಿಕ್ಕಿದ್ರೆ ಸಾಯ್ಸೋದಕ್ಕೆ ಕೋಟ್ಯಂತರ ರೂ. ಖರ್ಚು ಮಾಡಿತ್ತು. ಅವರು ಆಚೆ ಬರುತ್ತೇವೆ ಅಂದಾಗ ಮತ್ತದೇ ಲಕ್ಷ-ಲಕ್ಷ ಹಣ ಕೊಟ್ಟು, ಸ್ಟೇಫಂಡ್, ಜಮೀನು ಅಂತ ಮತ್ತದೇ ಸರ್ಕಾರದ ಹಣವನ್ನ ಅವರಿಗೆ ಕೊಟ್ಟಿತು. ಸರ್ಕಾರಗಳು ಇದೇ ಕೆಲಸ ಅಂದೇ ಮಾಡಿದ್ದರೆ ಹಳ್ಳಿಗಳು ಅಭಿವೃದ್ಧಿಯಾಗುತ್ತಿತ್ತು. ಯಾರೂ ಸಾಯುತ್ತಿರಲಿಲ್ಲ. ಎಎನ್‌ಎಫ್ ಸಿಬ್ಬಂದಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಡು-ಮೇಡು ಅಲೆಯೋದು ತಪ್ಪುತ್ತಿತ್ತು. ಸರ್ಕಾರ ಈಗ್ಲಾದ್ರು ಎಚ್ಚೆತ್ತುಕೊಂಡಿರೋದು ಸಂತೋಷದ ಸಂಗತಿ. ಈಗಾಗಲೇ 7.12 ಕೋಟಿ ಬಿಡುಗಡೆಯಾಗಿದ್ದು, ಸರ್ಕಾರ ಎಲ್ಲೆಲ್ಲಿಗೆ ಏನೇನು ಬೇಕೆಂದು ಡಿ.ಪಿ.ಆರ್. ತಯಾರಿಸಿ ಸರ್ಕಾರದ ಅನುಮೋದನೆಯೊಂದಿಗೆ ಹಳ್ಳಿಗಳ ಅಭಿವೃದ್ಧಿಗೆ ಮುಂದಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮೊದಲಿನಂತಿಲ್ಲ, ಹೇಳಲಾಗದ ಒತ್ತಡ ಇದೆ: ರಾಜಣ್ಣ ಬಾಂಬ್

    ಒಟ್ಟಾರೆ, ಅಂತು-ಇಂತು ಮಲೆನಾಡ ಕುಗ್ರಾಮ ಹಾಗೂ ಕಾಡಂಚಿನ ಗ್ರಾಮಗಳಿಗೆ ಅಭಿವೃದ್ಧಿ ನೋಡುವ ಭಾಗ್ಯ ಬಂದಿದೆ. 75 ವರ್ಷಗಳ ಬಳಿಕ ಎಷ್ಟೋ ಗ್ರಾಮಗಳು ರಸ್ತೆ-ಕಾಲುಸಂಕ-ಶುದ್ಧ ನೀರು-ಚರಂಡಿ-ಕರೆಂಟ್ ನೋಡೋ ಭಾಗ್ಯ ಸಿಗಲಿದೆ. ಇದನ್ನೂ ಓದಿ:ಚುನಾವಣೆಗೂ ಮುನ್ನವೇ ಬಿಹಾರ ಯುವಜನಕ್ಕೆ ಮೋದಿ ಭರ್ಜರಿ ಗಿಫ್ಟ್‌

  • 1 ಕೋಟಿ ಬಹುಮಾನ ಘೋಷಿತ ನಕ್ಸಲ್ ನಾಯಕ ಸೇರಿ 8 ಮಂದಿ ಹತ್ಯೆ

    1 ಕೋಟಿ ಬಹುಮಾನ ಘೋಷಿತ ನಕ್ಸಲ್ ನಾಯಕ ಸೇರಿ 8 ಮಂದಿ ಹತ್ಯೆ

    ರಾಂಚಿ: ಕೇಂದ್ರ ಪಡೆಗಳು ನಕ್ಸಲರ ವಿರುದ್ಧ ನಡೆಸಿದ ದಾಳಿಯಲ್ಲಿ ಭಾರಿ ಪ್ರಗತಿ ಸಾಧಿಸಿದ್ದು, ಜಾರ್ಖಂಡ್‌ನ (Jharkhand) ಬೊಕಾರೊದಲ್ಲಿ (Bokaro) ತಲೆಗೆ 1 ಕೋಟಿ ರೂ. ಬಹುಮಾನ ಘೋಷಿಸಿದ್ದ ನಕ್ಸಲ್ ನಾಯಕ ಸೇರಿ 8 ಮಂದಿ ನಕ್ಸಲರನ್ನು ಸದೆಬಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೋಮವಾರ ಬೆಳಗ್ಗೆ ಕೇಂದ್ರ ಮೀಸಲು ಪೊಲೀಸ್ ಪಡೆ (CRPF), ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (CoBRA) ಕಮಾಂಡೋಗಳ ಅರಣ್ಯ ಯುದ್ಧ ಘಟಕ ಮತ್ತು ಜಾರ್ಖಂಡ್ ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ನಡೆಸಿದ್ದರು. ಇದನ್ನೂ ಓದಿ: ಒಂದು ವಾರದಿಂದ ಬೆದರಿಕೆ – ಪುತ್ರನಿಂದ ದೂರು, ಓಂ ಪ್ರಕಾಶ್‌ ಪತ್ನಿ ಅರೆಸ್ಟ್‌

    ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕನ ಪತ್ತೆಗೆ ಸರ್ಕಾರವು 1 ಕೋಟಿ ರೂ. ಬಹುಮಾನ ಫೋಷಿಸಿತ್ತು. ಇದೀಗ ಕೇಂದ್ರ ಮೀಸಲು ಪೊಲೀಸ್ ಪಡೆ ಆತನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಚರಣೆ ವೇಳೆ 2 ಐಎನ್‌ಎಸ್‌ಎಎಸ್ ರೈಫಲ್‌ಗಳು, 1 ಸೆಲ್ಫ್ ಲೋಡಿಂಗ್ ರೈಫಲ್ ಮತ್ತು 1 ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಲವ್ವರ್ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಹಸೆಮಣೆ ಏರಬೇಕಿದ್ದ ಶಿಕ್ಷಕಿ ಆತ್ಮಹತ್ಯೆ

    ಏಪ್ರಿಲ್ ಆರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಹಿಂಸೆಯಿಂದ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹೇಳಿ ನಕ್ಸಲರಿಗೆ ಶಸ್ತ್ರಾಸ್ತ್ರ ತ್ಯಜಿಸುವಂತೆ ಕರೆ ನೀಡಿದ್ದರು. ಛತ್ತೀಸ್‌ಗಢದಲ್ಲಿ ನಕ್ಸಲ್ ಮುಕ್ತ ಎಂದು ಘೋಷಿಸಲಾದ ಎಲ್ಲಾ ಗ್ರಾಮಗಳಿಗೆ ಅಭಿವೃದ್ಧಿ ನಿಧಿಯಾಗಿ 1 ಕೋಟಿ ರೂ.ಗಳನ್ನು ಘೋಷಿಸಿದ ಅವರು, ಶರಣಾದ ನಕ್ಸಲರು ಸರ್ಕಾರದ ಸಹಾಯದಿಂದ ಸುರಕ್ಷಿತ ಮತ್ತು ಗೌರವಾನ್ವಿತ ಜೀವನವನ್ನು ನಡೆಸುತ್ತಾರೆ ಎಂದು ಭರವಸೆ ನೀಡಿದರು.

  • ರಾಜ್ಯದಲ್ಲಿ ಕೆಂಪು ಉಗ್ರರ ಯುಗಾಂತ್ಯ – ನಕ್ಸಲರ ಕೊನೆ ವಿಕೆಟ್ ಪತನ!

    ರಾಜ್ಯದಲ್ಲಿ ಕೆಂಪು ಉಗ್ರರ ಯುಗಾಂತ್ಯ – ನಕ್ಸಲರ ಕೊನೆ ವಿಕೆಟ್ ಪತನ!

    – ಇಂದು ಕೋಟೆಹೊಂಡ ರವೀಂದ್ರ  ಪೊಲೀಸರಿಗೆ ಶರಣು 
    -ನಾಳೆ ನಕ್ಸಲ್ ಲಕ್ಷ್ಮಿ ಶರಣಾಗತಿಗೆ ಸಿದ್ಧತೆ

    ಚಿಕ್ಕಮಗಳೂರು: ನಕ್ಸಲ್ (Naxal) ಕೋಟೆಹೊಂಡ ರವೀಂದ್ರ ಶರಣಾಗತಿಗೆ ಸಿದ್ಧನಾಗಿದ್ದು, ಕರ್ನಾಟಕದಲ್ಲಿ ಕೆಂಪು ಉಗ್ರರ ಇತಿಹಾಸ ಯುಗಾಂತ್ಯವಾಗುತ್ತಿದೆ.

    ಇಂದು (ಶನಿವಾರ) ಎಸ್ಪಿ ಕಚೇರಿಯಲ್ಲಿ ಶಾಂತಿಗಾಗಿ ನಾಗರೀಕ ವೇದಿಕೆ ಸದಸ್ಯರ ಸಮ್ಮುಖದಲ್ಲಿ ಶರಣಾಗಲಿದ್ದಾನೆ. ಕಳೆದೊಂದು ದಶಕದಿಂದ ಈತ ಭೂಗತನಾಗಿದ್ದ. ಆತನ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್‌ (Police) ಠಾಣೆಯಲ್ಲಿ ಒಟ್ಟು 14 ಪ್ರಕರಣಗಳಿವೆ.

    ರವೀಂದ್ರ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ಗ್ರಾಮದವನು.

    ಜನವರಿ 8 ರಂದು 6 ಜನ ನಕ್ಸಲರು ಸಿಎಂ ಎದುರು ಶರಣಾಗಿದ್ದರು. ಆದರೆ ಈತ ಕಾಡಲ್ಲಿ ಒಬ್ಬನೇ ಉಳಿದು ಕೊಂಡಿದ್ದ. ಇನ್ನೂ ತಲೆಮರೆಸಿಕೊಂಡಿದ್ದ ನಕ್ಸಲ್ ಲಕ್ಷ್ಮಿ ಸಹ ನಾಳೆ (ಭಾನುವಾರ) ಪೊಲೀಸರ ಮುಂದೆ ಶರಣಾಗಲು ತಯಾರಾಗಿದ್ದು ರಾಜ್ಯದಲ್ಲಿ ಕೆಂಪು ಉಗ್ರರ ಯುಗ ಕೊನೆಯಾಗಲಿದೆ.

  • ಸರ್ಕಾರವೇ ನಕ್ಸಲರಿಗೆ ಶರಣಾಗಿದೆ: ಛಲವಾದಿ ನಾರಾಯಣಸ್ವಾಮಿ

    ಸರ್ಕಾರವೇ ನಕ್ಸಲರಿಗೆ ಶರಣಾಗಿದೆ: ಛಲವಾದಿ ನಾರಾಯಣಸ್ವಾಮಿ

    ಚಿತ್ರದುರ್ಗ: ನಕ್ಸಲರು (Naxals) ಸರ್ಕಾರಕ್ಕೆ ಶರಣಾಗಿಲ್ಲ, ಸರ್ಕಾರವೇ ನಕ್ಸಲರಿಗೆ ಶರಣಾಗಿದೆ. ಇಷ್ಟುವರ್ಷ ಸಿಗದವರು ಈಗ ಹೇಗೆ ಸಿಕ್ಕರು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಪ್ರಶ್ನಿಸಿದ್ದಾರೆ.

    ಚಿತ್ರದುರ್ಗದ (Chitradurga) ಮಾದಾರಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಕ್ಸಲರು ಬರಿಗೈನಲ್ಲಿ ಶರಣಾಗಿದ್ದಾರೆ. ಅವರ ಶಸ್ತ್ರಾಸ್ತ್ರ ಎಲ್ಲೋದವು? ಇವರ ಹಿಂದೆ ಇನ್ನೂ ನಕ್ಸಲಿರಿದ್ದಾರಾ? ಶಸ್ತ್ರಾಸ್ತ್ರ ಅವರಿಗೆ ಕೊಟ್ಟು ಬಂದಿದ್ದಾರೆಂಬ ಪ್ರಶ್ನೆ ಮೂಡಲಿವೆ. ನಕ್ಸಲರನ್ನು ಕೋರ್ಟ್, ಪೊಲೀಸರ ಮುಂದೆ ಶರಣಾಗತಿ ಮಾಡಬೇಕು. ಸಿಎಂ ಮುಂದೆ ನಕ್ಸಲರ ಶರಣಾಗತಿ ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: 5 ವರ್ಷಗಳಲ್ಲಿ 64 ಜನರಿಂದ ಲೈಂಗಿಕ ಶೋಷಣೆ – ಕರಾಳ ಅನುಭವ ಬಿಚ್ಚಿಟ್ಟ ದಲಿತ ಬಾಲಕಿ

    ಈ ಸರ್ಕಾರ ಸಂಪೂರ್ಣ ಭ್ರಷ್ಟರ ರಕ್ಷಣೆ ಮಾಡುತ್ತಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ನಾನು ಸಿಎಂ, ನೀನು ಸಿಎಂ ಆಗಬೇಕೆಂಬ ಪರಿಸ್ಥಿತಿ ಇದೆ. ಯಾರೂ ಊಟಕ್ಕೂ ಸೇರುವ ಸ್ವತಂತ್ರ ಇಲ್ಲ. ಒಡೆದು ಆಳುವ ನೀತಿ ರಾಜ್ಯದಲ್ಲಿದೆ. ದಲಿತ ಮಾಫಿಯಾ ಕಾಂಗ್ರೆಸ್‌ನಲ್ಲಿದೆ. ದಲಿತ ವಿರೋಧಿ ಸರ್ಕಾರವಿದು. ಕಾಂಗ್ರೆಸ್ ಕೆಲ ಕುಟುಂಬಗಳ ಹಿಡಿತದಲ್ಲಿದೆ. ಖರ್ಗೆ, ಮುನಿಯಪ್ಪ, ಹೆಚ್.ಸಿ ಮಹದೇವಪ್ಪನ ಕುಟುಂಬಗಳು ಕಾಂಗ್ರೆಸ್‌ನಲ್ಲಿ ಹಿಡಿತ ಸಾಧಿಸಿವೆ. ಇತರರಿಗೆ ಅವಕಾಶವೇ ಇಲ್ಲದಂತಾಗಿದೆ. ಇವರನ್ನು ಹೊರತುಪಡಿಸಿ ಯಾರು ಸಹ ಸಿಎಂ ಆಗಬಾರದೆಂಬ ಮಾಫಿಯಾವಿದೆ. ಇವರಲ್ಲಿ ಎರಡು ಗುಂಪುಗಳಿವೆ. ಒಂದು ದಲಿತ ವಿರೋಧಿ ಮಾಫಿಯಾವಿದೆ. ಇನ್ನೊಂದು ದಲಿತ ಮಾಫಿಯಾವಿದೆ. ಇವರೆಲ್ಲರೂ ಮತ್ತೋರ್ವ ದಲಿತ ಬೆಳೆಯಲು ಬಿಡಲ್ಲ. ಕಾಂಗ್ರೆಸ್‌ನಲ್ಲಿ ದಲಿತರಿಗೆ ಬೆಲೆ ಇಲ್ಲ. ಕಾಂಗ್ರೆಸ್ ನಾಶವಾಗುವ ಸ್ಥಿತಿಯಲ್ಲಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: MUDA Scam | ಜೆಡಿಎಸ್‌ ಶಾಸಕ ಜಿಟಿಡಿ ವಿರುದ್ಧವೂ ಲೋಕಾಯುಕ್ತಕ್ಕೆ ದೂರು – 2 ಸೈಟು ಕಿಕ್‌ಬ್ಯಾಕ್‌ ಆರೋಪ

    ಮುಡಾದಲ್ಲಿ ಸುಳ್ಳು ದಾಖಲೆ ನೀಡಿ ಜಿಟಿಡಿ ಫ್ಯಾಮಿಲಿ ಸೈಟ್ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು 14 ಸೈಟ್‌ಗಳ ವಿಚಾರವಲ್ಲ, ಸಾವಿರಾರು ಸೈಟ್‌ಗಳ ವಿಚಾರ. ಅವರನ್ನು ರಕ್ಷಣೆ ಮಾಡಲು ಎಲ್ಲಾ ಕೇಸ್ ಮುಚ್ಚಿ ಹಾಕುವ ಪ್ರಯತ್ನ. ಜಗ್ಗಲ್ಲ, ಬಗ್ಗಲ್ಲ ಎಂದು ಹೇಳಿ ರಾತ್ರೋರಾತ್ರಿ ಹೋಗಿ ಸೈಟ್ ವಾಪಾಸ್ ಕೊಟ್ಟಿದ್ದು ಯಾಕೆ? ತಪ್ಪು ಮಾಡಿದ್ದು ಅರಿವಾದ ಮೇಲೆ ಸಿಎಂ ಸೈಟ್ ವಾಪಸ್ ಕೊಟ್ಟಿದ್ದಾರೆ. ನಿಮಗೂ ಭ್ರಷ್ಟಾಚಾರಕ್ಕೂ ಹತ್ತಿರದ ನಂಟಿದೆ. ಈ ಕೇಸ್ ಕೂಡ ಸಿಬಿಐಗೆ ಕೊಟ್ಟರೆ ಎಲ್ಲರ ಬಂಡವಾಳ ಹೊರಗಡೆ ಬರುತ್ತದೆ. ಇದರಲ್ಲಿ ಯಾರಿದ್ದಾರೆ, ಯಾರಿಲ್ಲ ಎಂಬುದು ಪ್ರಶ್ನೆಯಲ್ಲ. ನನ್ನ ಸಂಬಂಧಿಗಳು ಇದ್ದರೂ ನಾನು ಇದನ್ನೇ ಮಾತನಾಡೋದು. ಜನಪರ ವ್ಯವಸ್ಥೆ ಆಗಬೇಕೆ ಹೊರತು, ಸಂಬಂಧಿಕರು, ಸ್ವಾರ್ಥದ ವ್ಯವಸ್ಥೆ ಆಗಬಾರದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ಮಾದಕ ವಸ್ತು ಮಾರಾಟ ಮಾಡ್ತಿದ್ದ ಆರೋಪಿ ಮೇಲೆ ಫೈರಿಂಗ್‌!

  • ಸರೆಂಡರ್ ಆಗುವವರಿಗೆ ಕೊಡೋ ಪರಿಹಾರ ನಮಗೂ ಕೊಡಿ – ನಕ್ಸಲ್‌ ವಿಕ್ರಂ ಗೌಡ ಸಹೋದರಿ ಮನವಿ

    ಸರೆಂಡರ್ ಆಗುವವರಿಗೆ ಕೊಡೋ ಪರಿಹಾರ ನಮಗೂ ಕೊಡಿ – ನಕ್ಸಲ್‌ ವಿಕ್ರಂ ಗೌಡ ಸಹೋದರಿ ಮನವಿ

    ಉಡುಪಿ: ಎನ್‌ಕೌಂಟರ್‌ (Encounter) ಆಗಿದೆ, ಜೀವವೂ ಹೋಗಿದೆ. ಜೀವ ವಾಪಸ್‌ ಕೊಡೋದಕ್ಕೆ ಸಾಧ್ಯವಿಲ್ಲ. ಸರೆಂಡರ್‌ ಕೊಡೋ ಪರಿಹಾರ ನಮಗೂ ಕೊಡಿ ಎಂದು ಮೃತ ನಕ್ಸಲ್‌ ಕಾರ್ಯಕರ್ತ ವಿಕ್ರಂ ಗೌಡ (Vikram Gowda) ಸಹೋದರಿ ಸುಗುಣ ಮನವಿ ಮಾಡಿದ್ದಾರೆ.

    ರಾಜ್ಯದಲ್ಲಿ ನಕ್ಸಲ್ ಶರಣಾಗತಿ ವಿಚಾರ ಚರ್ಚೆಯಲ್ಲಿರುವ ಸಂದರ್ಭ ಇತ್ತೀಚೆಗೆ ಎನ್‌ಕೌಂಟರ್‌ಗೆ ಬಲಿಯಾದ ನಕ್ಸಲ್‌ ಕಾರ್ಯಕರ್ತ ವಿಕ್ರಂ ಗೌಡ ಸಹೋದರಿ ಪ್ರತಿಕ್ರಿಯೆ ನೀಡಿದ್ದಾರೆ. ಅಣ್ಣನ ಜೀವ ವಾಪಸ್ ಕೊಡೋದಕ್ಕೆ ಸಾಧ್ಯವಿಲ್ಲ, ಪರಿಹಾರ ಆದ್ರೂ ನೀಡಿ ಅಂತ ಮನವಿ ಮಾಡಿದ್ದಾರೆ.

    ನಾವು ಕಷ್ಟದಲ್ಲಿದ್ದೇವೆ ಸ್ವಂತ ಮನೆಯಾಗಬೇಕಿದೆ. ಒಂದು ದಿನ ಕೆಲಸಕ್ಕೆ ಹೋಗದಿದ್ದರೂ ನಮ್ಮ ದಿನ ಸಾಗೋದಿಲ್ಲ. ಸರೆಂಡರ್ ಆಗುವವರಿಗೆ ಕೊಡೋ ಪರಿಹಾರ ನಮಗೂ ಕೊಡಿ ಸಾಕು. ನನ್ನ ಅಣ್ಣನ ಜೀವ ಕೊಡಲು ಸಾಧ್ಯವಿಲ್ಲ, ಎನ್‌ಕೌಂಟರ್ ಆಗಿದೆ ಅವರ ಜೀವ ಹೋಗಿಯಾಗಿದೆ. ಉಳಿದವರಿಗೆ ಕೊಡೋ ಪರಿಹಾರವನ್ನ ನಮಗೂ ಕೊಟ್ರೆ ಸಾಕು, ನಾವು ಕಷ್ಟದಲ್ಲಿದ್ದೇವೆ ಎಂದು ಸುಗುಣ ಕೋರಿದ್ದಾರೆ.

    ಕಳೆದ ನವೆಂಬರ್‌ 19ರಂದು ಹೆಬ್ರಿ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ (Kabbinale Forest) ನಕ್ಸಲ್‌ ಕಾರ್ಯಕರ್ತ ವಿಕ್ರಂ ಗೌಡನನ್ನು ಎನ್‌ಕೌಂಟರ್‌ (Encounter) ಮಾಡಿ ಹತ್ಯೆ ಮಾಡಲಾಗಿತ್ತು.

    3 ರಾಜ್ಯಕ್ಕೆ ಬೇಕಾಗಿದ್ದ ಮೋಸ್ಟ್‌ ವಾಟೆಂಡ್‌:
    ವಿಕ್ರಂ ಗೌಡ ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ಆಗಿದ್ದ. ಅಲ್ಲದೇ ವಿಕ್ರಂ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಮುಖ್ಯ ಕಾರಣ ಅರಣ್ಯ ಇಲಾಖೆಯವರು ಎಂದು ಸ್ಥಳಿಯರಾದ ವಿಕ್ರಮಾರ್ಜುನ ಹೆಗ್ಗಡೆ ʻಪಬ್ಲಿಕ್‌ ಟಿವಿʼಗೆ ತಿಳಿಸಿದ್ದರು.

    ಸುಮಾರು 2002-03ರಿಂದ ಆತ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾನೆ. ‘ಕರ್ನಾಟಕ ವಿಮೋಚನಾ ಸಂಘ’ ಆರಂಭಿಸಿದಾಗ ಆತ ಅದರಲ್ಲಿ ಸೇರಿಕೊಂಡ. ಸಾಕೇತ್ ರಾಜನ್ ಬಂದ ನಂತರ ಅದು ನಕ್ಸಲ್‌ರ ಸಂಘ ಎನ್ನುವಂತದ್ದು ಗೊತ್ತಾಯಿತು. ಆರಂಭದಲ್ಲಿ ಅವರು ಲಾವಣಿ ಪದಗಳನ್ನು ಹಾಡುತ್ತಾ ಮನೆ ಮನೆಗೆ ಬರುತ್ತಿದ್ದರು. ತದನಂತರ ನಮ್ಮ ಊರಿನಲ್ಲಿ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದರು. ನನ್ನನ್ನು ಒಮ್ಮೆ ಅವರ ಪ್ರತಿಭಟನೆಗೆ ಕರೆದಿದ್ದ ನಾನು ಹೋಗಿರಲಿಲ್ಲ. ಅದಕ್ಕಾಗಿ ನನ್ನ ಮೇಲೆ ದ್ವೇಷ ಇಟ್ಟಕೊಂಡು 2-3 ಬಾರಿ ನನ್ನ ಮನೆ ಮೇಲೆ ಪ್ರತಿಕಾರ ತೀರಿಸಲು ಮುಂದಾಗಿದ್ದ. 3-4 ಜನರ ತಂಡವನ್ನು ನಮ್ಮ ಮನೆಗೆ ದಾಳಿ ಮಾಡಲು ಕಳುಹಿಸುತ್ತಿದ್ದ. 2-3 ಬಾರಿ ನಮ್ಮ ಮನೆ ಮೇಲೆ ದಾಳಿ ಕೂಡ ಮಾಡಿದ್ದ ಎಂದು ವಿಕ್ರಮಾರ್ಜುನ ಹೇಳಿದ್ದರು.

  • ಬಡವರಿಗೆ ನೆರವು ನೀಡದೇ ನಕ್ಸಲರಿಗೆ ಲಕ್ಷಗಟ್ಟಲೇ ಹಣ ನೀಡ್ತಿದ್ದಾರೆ:  ಸುನಿಲ್‌ ಕುಮಾರ್‌

    ಬಡವರಿಗೆ ನೆರವು ನೀಡದೇ ನಕ್ಸಲರಿಗೆ ಲಕ್ಷಗಟ್ಟಲೇ ಹಣ ನೀಡ್ತಿದ್ದಾರೆ: ಸುನಿಲ್‌ ಕುಮಾರ್‌

    ಬೆಂಗಳೂರು: ಇದು ನಕ್ಸಲರ ಶರಣಾಗತಿ ಅಲ್ಲ. ಕಾಡು ನಕ್ಸಲರನ್ನು ನಾಡು ನಕ್ಸಲರನ್ನಾಗಿ ಮಾಡುವ ಪ್ಯಾಕೇಜ್ ಇದು ಎಂದು ಮಾಜಿ ಸಚಿವ ಸುನಿಲ್‌ ಕುಮಾರ್‌ (Sunil Kumar) ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮೇಶ್ವರ ಕಫೆಗೆ ಬಾಂಬ್ ಇಟ್ಟವರನ್ನು ಹಾಗೂ ಪೊಲೀಸ್ ಸ್ಟೇಷನ್ ಗೆ ಬೆಂಕಿ ಇಟ್ಟವರನ್ನ ಶರಣಾಗತಿ ಆದರೆ ಬಿಡ್ತಾರಾ? ಶರಣಾಗತಿಗೂ ಮೊದಲೇ ಎ, ಬಿ,ಸಿ ಎಂದು ಪ್ಯಾಕೇಜ್ ಘೋಷಣೆ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯನವರ (Siddaramaiah) ಮನೆಯಲ್ಲೇ ಶರಣಾಗತಿ ಆಗುತ್ತದೆ ಅಂದ್ರೆ ಅದಕ್ಕಿಂತ ದೊಡ್ಡ ದುರಂತ ಯಾವುದು ಇಲ್ಲ ಎಂದು ಹೇಳಿದರು.

    ನಕ್ಸಲ್ ಶರಣಾಗತಿ ಮಾಡುವಂತಹ ಘಟನೆ ಅತ್ಯಂತ ಆತಂಕಕಾರಿ. ನಕ್ಸಲ್ ಅವರನ್ನು ಶರಣಾಗತಿ ಮಾಡಿಸುವ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಬೇಕು. ಮುಂದಿನ ದಿನಗಳಲ್ಲಿ ನಾಗರಿಕ ಸಮಾಜ ಅತ್ಯಂತ ಅಪಾಯಕಾರಿಗೆ ತಲುಪಲಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಅಲ್ಲ, ಇಂದು ಸಿಎಂ ಸಮ್ಮುಖದಲ್ಲೇ ಶರಣಾಗಲಿದ್ದಾರೆ ನಕ್ಸಲರು

    ನಕ್ಸಲ್ ಚಿಂತನೆಗೆ ಬೆಂಬಲ ಸಿಗದೇ ಇದ್ದಾಗ ಸಿದ್ದರಾಮಯ್ಯ ಸರ್ಕಾರ ಪ್ಯಾಕೇಜ್‌ ಆಸೆಯ ಚಿಗುರು ಹೊರಡಿಸಿದೆ. ಹಣವನ್ನು ನೀಡಿ ಶರಣಾಗತಿ ಮಾಡಿಸುವುದನ್ನು ನಾವು ವಿರೋಧಿಸುತ್ತೇವೆ. ಬಡವರಿಗೆ ನೆರವು ಕೊಡದೇ ಬಂದೂಕುಗಳು ಹಿಡಿದವರಿಗೆ ನೆರವು ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

     

    ಹಲವು ವರ್ಷಗಳಿಂದ ನಕ್ಸಲ್ ವಿರುದ್ಧ ಹೋರಾಡಿದ ನಕ್ಸಲ್‌ ನಿಗ್ರಹ ಪಡೆಯ ನೈತಿಕ ಸ್ಥೈರ್ಯ ಕಳೆದುಕೊಳ್ಳುವ ಸಂದರ್ಭ ಇದು. ವಿಕ್ರಮ್ ಗೌಡ (Vikram Gowda) ಎನ್‌ಕೌಂಟರ್‌ ಆಗುತ್ತಿದ್ದಂತೆ ತನಿಖೆ ಆಗಬೇಕು ಅಂತಾರೆ. ಶರಣಾಗತಿ ಆಗುವುದಾದರೆ ನ್ಯಾಯಾಲಯದಲ್ಲಿ ಶರಣಾಗಲಿ. ಐದು ವರ್ಷಗಳಲ್ಲಿ ಬಿಡುಗಡೆ ಆಗಿರುವ ನಕ್ಸಲರ ಚಟುವಟಿಕೆಗಳನ್ನು ಬಿಡುಗಡೆ ಮಾಡಿ ಎಂದು ಸುನಿಲ್‌ ಕುಮಾರ್‌ ಗೃಹ ಸಚಿವರಿಗೆ ಮನವಿ ಮಾಡಿದರು.

    ಇವರು ನಗರಕ್ಕೆ ಬಂದ ನಂತರ ಕಾಡಿಗೆ ಕಳುಹಿಸಿ ಕೊಡುವ ಕೆಲಸ ಆಗಲಿದೆ. ಶಾಂತಿಗಾಗಿ ನಾಗರೀಕ ವೇದಿಕೆ ಮುಂದೆ ಶರಣಾಗತಿ ಆಗುವುದು ಬೇಡ. ನ್ಯಾಯಾಲಯದ ಮುಂದೆ ಶರಣಾಗಲಿ ಎಂದರು.

  • ಚಿಕ್ಕಮಗಳೂರಿನಲ್ಲಿ ಅಲ್ಲ, ಇಂದು ಸಿಎಂ ಸಮ್ಮುಖದಲ್ಲೇ ಶರಣಾಗಲಿದ್ದಾರೆ ನಕ್ಸಲರು

    ಚಿಕ್ಕಮಗಳೂರಿನಲ್ಲಿ ಅಲ್ಲ, ಇಂದು ಸಿಎಂ ಸಮ್ಮುಖದಲ್ಲೇ ಶರಣಾಗಲಿದ್ದಾರೆ ನಕ್ಸಲರು

    ಚಿಕ್ಕಮಗಳೂರು: 6 ಮಂದಿ ನಕ್ಸಲರು ಇಂದು ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಶರಣಾಗಲಿದ್ದಾರೆ.

    ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ತಮಿಳುನಾಡಿನ ಕೆ ವಸಂತ ಮತ್ತು ಕೇರಳದ ಟಿಎನ್ ಜೀಶಾ ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರಲಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಶರಣಾಗುತ್ತಿರುವ 6 ನಕ್ಸಲರ ಹಿನ್ನೆಲೆ ಏನು? ಅವರ ಮೇಲೆ ಎಷ್ಟು ಕೇಸ್‌ಗಳಿವೆ?

     

    ನಿಗದಿ ಪ್ರಕಾರ ಇಂದು ಬೆಳಗ್ಗೆ 10 ಗಂಟೆಗೆ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಬೇಕಿತ್ತು. ಆದರೆ ಕೊನೆ ಕ್ಷಣದ ಬದಲಾವಣೆ ಎಂಬಂತೆ ಇಂದು ಬೆಂಗಳೂರಿನಲ್ಲಿ ಸಿಎಂ ಮುಂದೆ ಶರಣಾಗಲಿದ್ದಾರೆ.  ಮಧ್ಯಾಹ್ನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶರಣಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಲಿದೆ.

    ನಕ್ಸಲರು ಮತ್ತು ಅವರ ಕುಟುಂಬ ಸದಸ್ಯರು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಈಗ ತೆರಳುತ್ತಿದ್ದಾರೆ. ಹೋರಾಟಗಾರರು, ಸಂಬಂಧಿಕರು, ಮಾಜಿ ನಕ್ಸಲರು, ಸಮಿತಿ ಸದಸ್ಯರೂ ಬೆಂಗಳೂರಿನತ್ತ ತೆರಳುತ್ತಿದ್ದಾರೆ.

  • ಚಿಕ್ಕಮಗಳೂರಿನಲ್ಲಿ ಶರಣಾಗುತ್ತಿರುವ 6 ನಕ್ಸಲರ ಹಿನ್ನೆಲೆ ಏನು? ಅವರ ಮೇಲೆ ಎಷ್ಟು ಕೇಸ್‌ಗಳಿವೆ?

    ಚಿಕ್ಕಮಗಳೂರಿನಲ್ಲಿ ಶರಣಾಗುತ್ತಿರುವ 6 ನಕ್ಸಲರ ಹಿನ್ನೆಲೆ ಏನು? ಅವರ ಮೇಲೆ ಎಷ್ಟು ಕೇಸ್‌ಗಳಿವೆ?

    ಚಿಕ್ಕಮಗಳೂರು: ಕರ್ನಾಟಕದಲ್ಲಿ ಆರು ನಕ್ಸಲರು (Six Naxals) ಮುಖ್ಯ ವಾಹಿನಿಗೆ ಬರಲು ಮುಂದಾಗಿದ್ದಾರೆ. ವಿಕ್ರಂಗೌಡ (Vikram Gowda) ಎನ್‌ಕೌಂಟರ್ ಪ್ರಕರಣದ ಬೆನ್ನಲ್ಲೇ ಕರ್ನಾಟಕದ (Karnataka) ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ತಮಿಳುನಾಡಿನ ಕೆ ವಸಂತ ಮತ್ತು ಕೇರಳದ ಟಿಎನ್ ಜೀಶಾ ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರಲು ಒಪ್ಪಿದ್ದಾರೆ.

    ಇಂದು ಬೆಳಗ್ಗೆ ಆರು ನಕ್ಸಲರು ಚಿಕ್ಕಮಗಳೂರು (Chikkamagaluru) ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆ. ಈಗಾಗಲೇ ನಕ್ಸಲರ ಜೊತೆ ಶರಣಾಗತಿ ಸಮಿತಿ ಮತ್ತು ಶಾಂತಿಗಾಗಿ ನಾಗರೀಕ ಸಮಿತಿ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಇದನ್ನೂ ಓದಿ: ಕರ್ನಾಟಕದ ಅಯ್ಯಪ್ಪ ಭಕ್ತರೇ ಗಮನಿಸಿ.. ಶಬರಿಮಲೆ ದರ್ಶನಕ್ಕೆ ಸ್ಪಾಟ್‌ ಬುಕಿಂಗ್‌ ದಿನಕ್ಕೆ 5,000 ಜನರಿಗೆ ಮಾತ್ರ


    ಯಾರ ಮೇಲೆ ಏನು ಕೇಸ್‌?
    ಮುಂಡಗಾರು ಲತಾ (Mundagaru Latha) ವಿರುದ್ಧ 59 ಪ್ರಕರಣಗಳು ದಾಖಲಾಗಿವೆ. ಸುಂದರಿ (Sundari) ವಿರುದ್ಧ ಉಡುಪಿ, ದ.ಕನ್ನಡದಲ್ಲಿ 3 ಕೇಸ್‌ಗಳು, ಜಯಣ್ಣ ಮೇಲೆ ಉಡುಪಿ, ಮಂಗಳೂರಿನಲ್ಲಿ 3 ಪ್ರಕರಣಗಳಿವೆ, ವನಜಾಕ್ಷಿ ವಿರುದ್ಧ15 ಕೇಸ್‌ ದಾಖಲಾಗಿವೆ. ಕೆ.ವಸಂತ ಮತ್ತು ಟಿ.ಎನ್. ಜೀಶಾ ವಿರುದ್ಧ ಹಲವು ಕೇಸ್‌ಗಳಿವೆ.

    ಮುಂಡಗಾರು ಲತಾ
    ಮುಂಡಗಾರು ಲತಾ ಶೃಂಗೇರಿಯ ಜೆ.ಸಿ.ಬಿ.ಎಂ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಪಿಯುಸಿ ವ್ಯಾಸಂಗ ಅರ್ಧಕ್ಕೆ ಮೊಟಕುಗೂಳಿಸಿದ್ದಾರೆ. ಕುದುರೆಮುಖ ವಿಮೋಚನಾ ಚಳುವಳಿ ಮುಖಾಂತರ ನಕ್ಸಲ್ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟ ಸಮಿತಿಯ ನಾಯಕಿಯಾಗಿದ್ದರು.

    ಸುಂದರಿ
    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕುತ್ಲೂರಿನ ನಿವಾಸಿಯಾಗಿದ್ದ ಸುಂದರಿ ಸಹೋದರ ವಸಂತ ಅಲಿಯಾಸ್ ಆನಂದ್ ಕೂಡ ನಕ್ಸಲ್ ಆಗಿದ್ದನು. ಸಹೋದರನ ಹಿಂದೆಯೇ ಸುಂದರಿ ಕೂಡ ನಕ್ಸಲ್ ಚಟುವಟಿಕೆಗೆ ಎಂಟ್ರಿಯಾಗಿದ್ದರು. 2010ರ ಎನ್‌ಕೌಂಟರ್‌ನಲ್ಲಿ ಆನಂದ್ ಹತ್ಯೆಯಾಗಿದ್ದ. ಸದ್ಯ ಕುದುರೆಮುಖ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಾಯಕಿ ಸುಂದರಿ ಇದ್ದಾರೆ.

    ವನಜಾಕ್ಷಿ
    ಭೂ ಮಾಲೀಕರ ವಿರುದ್ಧ ಹೋರಾಟಕ್ಕೆ ಧುಮುಕಿ ನಕ್ಸಲರ ಹಾದಿಗೆ ಎಂಟ್ರಿ. ವಿದ್ಯಾಭ್ಯಾಸಕ್ಕೂ ಕೊರತೆಯಾಗಿದ್ದ ವನಜಾಕ್ಷಿ ಉಳ್ಳವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ನಕ್ಸಲಿಸಂಗೆ ಎಂಟ್ರಿಯಾಗಿ ಅಲ್ಲಿಂದ ಹೋರಾಟದಲ್ಲಿ ನಿರಂತರವಾಗಿ ಸಾಗಿದ್ದರು.


    ಮಾರೆಪ್ಪ ಅರೋಳಿ @ ಜಯಣ್ಣ
    ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಆರೋಳಿ ಗ್ರಾಮದ ನಿವಾಸಿಯಾ ಮಾರೆಪ್ಪ ಬಡವರ ಮೇಲೆ ಶ್ರೀಮಂತರ ದಬ್ಬಾಳಿಕೆ ವಿರೋಧಿಸಿ ನಕ್ಸಲಿಸಂಗೆ ಎಂಟ್ರಿಯಾಗಿದ್ದರು. ಪಶ್ಚಿಮ ಘಟಗಳ ಆದಿವಾಸಿಗಳ ಹಕ್ಕುಗಳಿಗೆ ನಕ್ಸಲ್ ಚಳುವಳಿಯಲ್ಲಿ ಭಾಗಿ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟದಲ್ಲೂ ಸಕ್ರಿಯ

    ಕೆ.ವಸಂತ
    ಮೂಲತಃ ತಮಿಳುನಾಡಿನವರಾಗಿರುವ ಕೆ ವಸಂತ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಉಳಿಸಿ ವಿರೋಧಿ ಹೋರಾಟದಲ್ಲಿ ಸಕ್ರಿಯ.

    ಟಿ.ಎನ್. ಜೀಶಾ
    ಕೇರಳದ ಮೂಲದವರಾಗಿದ್ದು ನಕ್ಸಲ್ ಹೋರಾಟದ ಮೂಲಕ ರಾಜ್ಯಕ್ಕೆ ಎಂಟ್ರಿ. ಕರ್ನಾಟಕದ ಕರಾವಳಿ ಭಾಗದ ಹೋರಾಟದಲ್ಲೂ ಸಕ್ರಿಯ.

  • ವಿಕ್ರಂ ಗೌಡ ಎನ್‌ಕೌಂಟರ್‌| ಯಾವುದೇ ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ: ಪರಮೇಶ್ವರ್‌

    ವಿಕ್ರಂ ಗೌಡ ಎನ್‌ಕೌಂಟರ್‌| ಯಾವುದೇ ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ: ಪರಮೇಶ್ವರ್‌

    ಬೆಂಗಳೂರು: ವಿಕ್ರಂ ಗೌಡ ಎನ್‌ಕೌಂಟರ್‌ (Vikram Gowda) ವಿಚಾರದಲ್ಲಿ ಯಾವುದೇ ಅನುಮಾನ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದು ಗೃಹ ಪರಮೇಶ್ವರ್‌ (Parameshwar) ಸ್ಪಷ್ಟಪಡಿಸಿದ್ದಾರೆ.

    ಎನ್‌ಕೌಂಟರ್ (Encounter) ಬಗ್ಗೆ ಕೆಲ ಎಡಪಂಥೀಯರು ಅನುಮಾನ ವಿಚಾರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಬಂದ ಮಾಹಿತಿ ಪ್ರಕಾರ ವಿಕ್ರಮ್ ಗೌಡ ಬಳಿ ಅಪಾಯಕಾರಿ ಶಸ್ತ್ರಾಸ್ತ್ರಗಳಿದ್ದವು. ವಿಕ್ರಮ್ ಮೇಲೆ ಕೊಲೆ ಆರೋಪ ಸೇರಿ 60 ಕ್ಕೂ ಹೆಚ್ಚು ಪ್ರಕರಣಗಳಿದ್ದವು. ಪೊಲೀಸರು ಶೂಟ್ ಮಾಡದಿದ್ದರೆ ವಿಕ್ರಮ್ ಗೌಡ ಪೊಲೀಸರನ್ನೇ ಶೂಟ್ ಮಾಡುವ ಸಾಧ್ಯತೆ ಇತ್ತು. ಹೀಗಾಗಿ ಎನ್‌ಕೌಂಟರ್ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ ಎಂದರು.

    ಕಾಂಗ್ರೆಸ್ (Congress) ಬಂದ ಮೇಲೆ ನಕ್ಸಲ್ (Naxal) ಚಟುವಟಿಕೆ ಜಾಸ್ತಿಯಾಗಿದೆ ಎಂಬ ಶಾಸಕ ಸುನೀಲ್ ಕುಮಾರ್ ಆರೋಪಕ್ಕೆ, ನಕ್ಸಲ್ ನಿಗ್ರಹ ಪಡೆಯ ಕೇಂದ್ರ ಸ್ಥಳ ಕಾರ್ಕಳದಲ್ಲೇ ಇದೆ. ನಕ್ಸಲ್ ನಿಗ್ರಹ ದಳ ಸತತವಾಗಿ ನಕ್ಸಲರ ಚಟುವಟಿಕೆ ಮೇಲೆ ನಿಗಾ ಇಟ್ಟುಕೊಂಡೇ ಬಂದಿತ್ತು. ಆದರೆ ಕಳೆದ 15 ದಿನಗಳ ಹಿಂದೆ ನಕ್ಸಲ್ ಮುಖಂಡರಾದ ಲತಾ ಹಾಗೂ ರಾಜು ಕಾಣಿಸಿಕೊಂಡರು. ಆಗ ಕೂಂಬಿಂಗ್ ಮಾಡುವುದಕ್ಕೆ ಶುರು ಮಾಡಿದರು ಎಂದು ತಿಳಿಸಿದರು. ಇದನ್ನೂ ಓದಿ: ದಿನಸಿಗೆಂದು ಬಂದಿದ್ದ ವಿಕ್ರಂಗೌಡ ಉಡೀಸ್ – ಎನ್‌ಕೌಂಟರ್‌ಗೂ ಮುನ್ನ ಪೊಲೀಸರಿಂದ ಮನೆಯವರ ಶಿಫ್ಟ್

    ಈ ಮಧ್ಯೆ ವಿಕ್ರಮ್ ಗೌಡ ತಂಡದಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿತು. ವಿಕ್ರಮ್ ಗೌಡನನ್ನು ಹಾಗೇ ಬಿಟ್ಟುಕೊಂಡು ಅವರು ಏನು ಮಾಡಿದರೂ ಸರಿ ಎನ್ನುವ ಪರಿಸ್ಥಿತಿ ಇರಲಿಲ್ಲ. ಅದಕ್ಕಾಗಿ ಎನ್‌ಕೌಂಟರ್ ಮಾಡಲಾಗಿದೆ. ಈ ಎನ್‌ಕೌಂಟರ್ ಮೇಲೆ ತನಿಖೆ ಆಗಬೇಕು ಅಂತ ಕೆಲವರು ಮಾಧ್ಯಮಗಳಲ್ಲಿ ಹೇಳಿದ್ದಾರೆ. ಮಷಿನ್ ಗನ್ ಇಟ್ಟುಕೊಂಡಿದ್ದ 60 ಪ್ರಕರಣ ಇರುವ ವಿಕ್ರಮ್ ಗೌಡ ಎನ್‌ಕೌಂಟರ್ ಬಗ್ಗೆ ಯಾವ ದೃಷ್ಟಿಯಿಂದ ತನಿಖೆ ಮಾಡಬೇಕು ಹೇಳಿ ಎಂದು ಪ್ರಶ್ನಿಸಿದರು.

     

    ನಾವು ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೇವೆ. ಇಲ್ಲಿ ಕಾಂಗ್ರೆಸ್ ಬಿಜೆಪಿ ಎನ್ನುವ ಪ್ರಶ್ನೆ ಇಲ್ಲಿ ಬರಲ್ಲ, ಸುರಕ್ಷತೆ ಮುಖ್ಯ. ಈ ಹಿಂದೆಯೇ ಆತನಿಗೆ ಶರಣಾಗುವಂತೆ ಸೂಚಿಸಲಾಗಿತ್ತು. ಆದರೆ ಶರಣಾಗಿರಲಿಲ್ಲ ಎಂದು ಪರಮೇಶ್ವರ್‌ ಹೇಳಿದರು.

  • ದಿನಸಿಗೆಂದು ಬಂದಿದ್ದ ವಿಕ್ರಂಗೌಡ ಉಡೀಸ್ – ಎನ್‌ಕೌಂಟರ್‌ಗೂ ಮುನ್ನ ಪೊಲೀಸರಿಂದ ಮನೆಯವರ ಶಿಫ್ಟ್

    ದಿನಸಿಗೆಂದು ಬಂದಿದ್ದ ವಿಕ್ರಂಗೌಡ ಉಡೀಸ್ – ಎನ್‌ಕೌಂಟರ್‌ಗೂ ಮುನ್ನ ಪೊಲೀಸರಿಂದ ಮನೆಯವರ ಶಿಫ್ಟ್

    – ಮರಣೋತ್ತರ ಪರೀಕ್ಷೆ ಬಳಿಕ ಇಂದು ಮೃತದೇಹ ಹಸ್ತಾಂತರ

    ಉಡುಪಿ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಡೆದ ರಣರೋಚಕ ಕಾರ್ಯಚರಣೆಯಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂಗೌಡ (Vikram Gowda) ಹತನಾಗಿದ್ದಾನೆ. ಈ ರೋಚಕ ಕಾರ್ಯಾಚರಣೆಗೆ ಪೊಲೀಸರು ಸುಮಾರು ಒಂದು ತಿಂಗಳ ಹೋಂವರ್ಕ್ ಮಾಡಿದ್ದರು. ಕಂಪ್ಲೀಟ್ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ನಿಗ್ರಹದಳ, ಆತ ಬರುವ ಮೊದಲೇ ಮನೆಯನ್ನು ಹೊಕ್ಕಿ ಕುಳಿತಿತ್ತು.

    ಸೋಮವಾರ ರಾತ್ರಿ ಉಡುಪಿ (Udupi) ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆ (Kabbinale) ಪೇಟೆಯಿಂದ ಸುಮಾರು 10 ಕಿ.ಮೀ ದೂರದ ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳ ಗಡಿಯಾಗಿರುವ ಪೀತಬೈಲು ದಟ್ಟ ಕಾಡಂಚಿನಲ್ಲಿ ಈ ಕಾರ್ಯಾಚರಣೆ ನಡೆದಿದೆ. ನಕ್ಸಲ್ ಹಾಗೂ ಪೊಲೀಸರ ನಡುವಿನ ಗುಂಡಿನ ಚಕಮಕಿಯಲ್ಲಿ 61 ಪ್ರಕರಣಗಳಲ್ಲಿ ಬೇಕಾಗಿದ್ದ ನಕ್ಸಲ್ ನಾಯಕ ವಿಕ್ರಂಗೌಡನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಈತನ ತಲೆಗೆ ಕರ್ನಾಟಕ ಸರ್ಕಾರ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಇದನ್ನೂ ಓದಿ: ನಕ್ಸಲ್ ನಾಯಕ ವಿಕ್ರಂ ಗೌಡ ಮೃತದೇಹ ಮಣಿಪಾಲಕ್ಕೆ – ಕೆಎಂಸಿಯ ಫೊರೆನ್ಸಿಕ್ ಮೆಡಿಸಿನ್‌ನಲ್ಲಿ ಮರಣೋತ್ತರ ಪರೀಕ್ಷೆ

    ಹೆಬ್ರಿ ತಾಲೂಕು ಬಚ್ಚಪ್ಪು ಪೀತಬೈಲ್‌ನಲ್ಲಿ ನಾರಾಯಣ, ಜಯಂತ, ಸುಧಾಕರ ಎಂಬವರ ಮನೆಯಿದೆ. ನವೆಂಬರ್ 11ರಂದು ಬಂದು ರೇಷನ್ ತೆಗೆದಿರಿಸುವಂತೆ ನಕ್ಸಲ್ ಟೀಂ ತಾಕೀತು ಮಾಡಿತ್ತು. ರೇಷನ್ ಪಡೆಯಲು ಸೋಮವಾರ ಬರುವುದಾಗಿ ನಕ್ಸಲ್ ಟೀಂ ತಿಳಿಸಿತ್ತು. ವಾರದ ಹಿಂದೆಯೂ ಪೀತಬೈಲು ಮಲೆಕುಡಿಯರಿಂದ ಅಕ್ಕಿ, ಬೇಳೆ ಸಂಗ್ರಹಿಸಿತ್ತು ಎಂಬ ಮಾಹಿತಿ ದೊರೆತಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಎಎನ್‌ಎಫ್ ಯೋಧರು ಆ ಮನೆಯವರನ್ನು ತೆರವುಗೊಳಿಸಿ ಆ ಪ್ರದೇಶದಲ್ಲಿ ಕಾದು ಕುಳಿತಿದ್ದರು. ವಿಕ್ರಂಗೌಡ ಮತ್ತು ತಂಡ ಮನೆಯ ಅಂಗಳಕ್ಕೆ ಬರುತ್ತಿದ್ದಂತೆ ಪೊಲೀಸರು ಶರಣಾಗುವಂತೆ ಕೇಳಿದ್ದಾರೆ. ಪೊಲೀಸರನ್ನು ಕಂಡು ವಿಕ್ರಂ ಬಂದೂಕು ತೆಗೆದಿದ್ದಾನೆ. ಈ ವೇಳೆ ವಿಕ್ರಂ ತಂಡ ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ವಿಕ್ರಂಗೌಡನ ಎದೆಗೆ 3 ಗುಂಡುಗಳು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ತಂಡದ ಸದಸ್ಯರು ಕತ್ತಲಲ್ಲಿ ಕಾಡಿನೊಳಗೆ ಪರಾರಿಯಾಗಿದ್ದಾರೆ. ಮಂಗಳವಾರ ಇಡೀ ರಾತ್ರಿ ಕೂಂಬಿಂಗ್ ನಡೆಸಿದರೂ ತಪ್ಪಿಸಿಕೊಂಡ ನಕ್ಸಲರ ಸುಳಿವು ಪತ್ತೆಯಾಗಿಲ್ಲ. ಇದನ್ನೂ ಓದಿ: ಮೋದಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡ್ಲಿ, ನಾನೇ ನಿಂತು ಜಾಗ ಕೊಡಿಸ್ತೀನಿ: ಡಿಕೆಶಿ

    ಸುಮಾರು 20 ಗಂಟೆಗಳ ಪೊಲೀಸರ ಮಹಜರು ಪ್ರಕ್ರಿಯೆ ಮತ್ತಿತರ ದಾಖಲೆಗಳ ಸಂಗ್ರಹದ ಬಳಿಕ ವಿಕ್ರಂಗೌಡ ಮೃತ ದೇಹವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಯಿತು. ನ್ಯಾಯಾಧೀಶರ ಸಮ್ಮುಖದಲ್ಲಿ ಮಹಜರು ನಡೆಸಿ, ಕುಟುಂಬಕ್ಕೆ ಇಂದು ಮೃತದೇಹ ಹಸ್ತಾಂತರ ಆಗಲಿದೆ. ಘಟನಾ ಸ್ಥಳಕ್ಕೆ ಬೆಂಗಳೂರಿನಿಂದ ಎಫ್‌ಎಸ್‌ಎಲ್ ತಂಡ ಬಂದು ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡಲಿದೆ. ಮರಣೋತ್ತರ ಪರೀಕ್ಷೆ ನಡೆದ ನಂತರ ಪ್ರಕರಣದ ಖಚಿತ ಮಾಹಿತಿಗಳು ಲಭ್ಯವಾಗಲಿದೆ. ಇದನ್ನೂ ಓದಿ: MUDA Scam| ನೋಟಿಸ್‌ ಇಲ್ಲದೇ ರಾತ್ರಿ ದಿಢೀರ್‌ ಲೋಕಾ ಎಸ್‌ಪಿ ಕಚೇರಿಗೆ ಭೇಟಿ ಕೊಟ್ಟ ಸಿಎಂ ಬಾಮೈದ!