Tag: ನಕಲು

  • 10 ನೇ ತರಗತಿ ಬೋರ್ಡ್ ಪರೀಕ್ಷೆ ವೇಳೆ ಚೀಟಿ ಪಾಸ್‌ ಮಾಡಲು ಗೋಡೆ ಏರಿದ್ರು!

    10 ನೇ ತರಗತಿ ಬೋರ್ಡ್ ಪರೀಕ್ಷೆ ವೇಳೆ ಚೀಟಿ ಪಾಸ್‌ ಮಾಡಲು ಗೋಡೆ ಏರಿದ್ರು!

    ಚಂಡೀಗಢ: ಹರಿಯಾಣದ ನುಹ್ ಜಿಲ್ಲೆಯ ಶಾಲೆಯೊಂದರಲ್ಲಿ 10 ನೇ ತರಗತಿಯ ಬೋರ್ಡ್ ಪರೀಕ್ಷೆಯ (10th Board Exam) ಸಂದರ್ಭದಲ್ಲಿ ನಕಲಿಗೆ ಸಹಕರಿಸಿರುವ ವಿಚಾರ ಬಯಲಾಗಿದೆ.

    ನುಹ್ ಜಿಲ್ಲೆಯ ತೌರುನಲ್ಲಿರುವ ಚಂದ್ರಾವತಿ ಶಾಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಪರೀಕ್ಷೆ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ವರದಿಯಾಗಿದೆ.

    ಇದಕ್ಕೆ ಸಂಬಂಧಪಟ್ಟ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ವೀಡಿಯೋದಲ್ಲಿ ಜನರು ಬೋರ್ಡ್ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಚೀಟಿ ರವಾನಿಸಲು ಶಾಲೆಯ ಗೋಡೆಗಳನ್ನು ಏರುತ್ತಿರುವುದನ್ನು ಕಾಣಬಹುದಾಗಿದೆ. ಈ ಸಂಬಂಧ ವಿದ್ಯಾರ್ಥಿಗಳ ಜೊತೆಗಿದ್ದ ಪೋಷಕರು ಮತ್ತು ಸಂಬಂಧಿಕರು ಪರೀಕ್ಷೆಯ ಹೊರಗೆ ಗಲಾಟೆ ಸೃಷ್ಟಿಸಿದರು.

    ಕೆಲವು ಮಕ್ಕಳು ಶಾಲೆಯ ಛಾವಣಿಯ ಮೇಲೆ ಹತ್ತಿದ ವೀಡಿಯೋ ನಾನು ನೋಡಿದೆ. ಘಟನೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಜಿಲ್ಲಾ ಶಿಕ್ಷಣಾಧಿಕಾರಿ ಪರಮಜೀತ್ ಚಹಾಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ- ಸರ್ಕಾರಕ್ಕೆ ತೇಜಸ್ವಿ ಸೂರ್ಯ ಎಚ್ಚರಿಕೆ

    ಪರೀಕ್ಷೆಯ ಸಮಯದಲ್ಲಿ ನಕಲು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪರೀಕ್ಷಾ ಕೇಂದ್ರಗಳ ಹೊರಗೆ ಪೊಲೀಸರ ನಿಯೋಜನೆಯನ್ನು ಹೆಚ್ಚಿಸಲು ಶಿಕ್ಷಣ ಮಂಡಳಿಯು ಪೊಲೀಸರನ್ನು ವಿನಂತಿಸುತ್ತದೆ ಎಂದು ಬ್ಲಾಕ್ ಶಿಕ್ಷಣಾಧಿಕಾರಿ ಧರಂಪಾಲ್ ಹೇಳಿದರು.

  • SSLC ಪರೀಕ್ಷಾ ಕೇಂದ್ರದಲ್ಲಿ ನಕಲು – ಮುಖ್ಯೋಪಾಧ್ಯಾಯ ಸೇರಿ 15 ಸಿಬ್ಬಂದಿ ಅಮಾನತು

    SSLC ಪರೀಕ್ಷಾ ಕೇಂದ್ರದಲ್ಲಿ ನಕಲು – ಮುಖ್ಯೋಪಾಧ್ಯಾಯ ಸೇರಿ 15 ಸಿಬ್ಬಂದಿ ಅಮಾನತು

    ಕಲಬುರಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷಾ (SSLC Exam) ಕೇಂದ್ರದಲ್ಲಿ ಸಾಮೂಹಿಕ ನಕಲು ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾಯ ಸೇರಿದಂತೆ ಪರೀಕ್ಷಾ ಕೇಂದ್ರದ 15 ಸಿಬ್ಬಂದಿಯನ್ನು ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಅಪರ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬುರ್ ಬಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ದಿಢೀರನೆ ಭೇಟಿ ನೀಡಿದ್ದಾಗ ಸಾಮೂಹಿಕ ನಕಲು (Copy) ನಡೆಯುತ್ತಿರುವುದನ್ನು ಕಲಬುರಗಿ ಎಸ್‌ಪಿ ಇಶಾ ಪಂತ್ ಕಣ್ಣಾರೆ ಕಂಡಿದ್ದರು. ಇದನ್ನೂ ಓದಿ: Congress List: ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ – ಯಾರಿಗೆ ಎಲ್ಲಿ ಟಿಕೆಟ್?

    ಏಪ್ರಿಲ್ 3 ರಂದು ನಡೆದ ಪರೀಕ್ಷೆಯಲ್ಲಿ ಗೊಬ್ಬುರ್ ಬಿ ಗ್ರಾಮ, ಅತನೂರ್ ಗ್ರಾಮ ಸೇರಿದಂತೆ ವಿವಿಧೆಡೆ ಸಾಮೂಹಿಕ ನಕಲು ನಡೆದಿದೆ. ನಕಲು ಮಾಡಲು ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯ ಹಾಗೂ ಸಿಬ್ಬಂದಿ ಅವಕಾಶ ಮಾಡಿಕೊಟ್ಟಿದ್ದರು ಎಂದು ಆರೋಪಿಸಲಾಗಿದೆ.

    ಮೈಕ್ರೋ ಜೆರಾಕ್ಸ್ ಮಾಡಿಕೊಂಡು ಪುಸ್ತಕ ಹಿಡಿದು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದರು. ಈ ಕಾರಣಕ್ಕೆ ಮುಖ್ಯೋಪಾಧ್ಯಾಯ ಸೇರಿದಂತೆ 15 ಜನ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಒಟ್ಟು 22.79 ಕೋಟಿ ನಗದು, 1,52 ಕೋಟಿ ಮೌಲ್ಯದ ಲಿಕ್ಕರ್ ವಶ

  • ನಕಲು ತಡೆಗೆ ಕಠಿಣ ಕ್ರಮ – ವಾರ್ಷಿಕ ಪರೀಕ್ಷೆಯ ಮೊದಲ ದಿನವೇ 4 ಲಕ್ಷ ವಿದ್ಯಾರ್ಥಿಗಳು ಗೈರು

    ನಕಲು ತಡೆಗೆ ಕಠಿಣ ಕ್ರಮ – ವಾರ್ಷಿಕ ಪರೀಕ್ಷೆಯ ಮೊದಲ ದಿನವೇ 4 ಲಕ್ಷ ವಿದ್ಯಾರ್ಥಿಗಳು ಗೈರು

    ಲಕ್ನೋ: ಉತ್ತರ ಪ್ರದೇಶದ (Uttar Pradesh) 10 ಹಾಗೂ 12ನೇ ತರಗತಿಯ ವಾರ್ಷಿಕ ಪರೀಕ್ಷೆಯ (Board Exams) ಮೊದಲ ದಿನವೇ 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ಗೈರು ಹಾಜರಾಗಿರುವ ಘಟನೆ ನಡೆದಿದೆ.

    ಉತ್ತರ ಪ್ರದೇಶದ ಯೋಗಿ ಸರ್ಕಾರವು ನಕಲು ತಡೆಗಟ್ಟಲು ಕಠಿಣ ಕ್ರಮ ಕೈಗೊಂಡಿದೆ. ಈ ಬೆನ್ನಲ್ಲೆ ಗುರುವಾರದಿಂದ ಪರೀಕ್ಷೆ ಆರಂಭವಾಗಿದೆ. ಯುಪಿ ಬೋರ್ಡ್‍ನ ಪ್ರಧಾನ ಕಚೇರಿಯ ವರದಿಯ ಪ್ರಕಾರ ಪರೀಕ್ಷೆಗೆ ನೋಂದಣಿ ಮಾಡಿಕೊಂಡ 31 ಲಕ್ಷಕ್ಕೂ ಅಧಿಕ 10ನೇ ತರಗತಿ ವಿದ್ಯಾರ್ಥಿಗಳಲ್ಲಿ 2.18 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಹಾಗೆಯೇ ದ್ವಿತೀಯ ಪಿಯುಸಿಯ 25.80 ಲಕ್ಷ ವಿದ್ಯಾರ್ಥಿಗಳ ಪೈಕಿ 1.83 ಲಕ್ಷ ವಿದ್ಯಾರ್ಥಿಗಳು ಪರಿಕ್ಷೆಗೆ ಗೈರಾಗಿದ್ದಾರೆ. ನಕಲು ತಡೆಗೆ ಕಠಿಣ ಕ್ರಮ ತೆಗೆದುಕೊಂಡಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.

    ಇನ್ನೂ ಮೊದಲ ದಿನವೇ 9 ಪ್ರಾಕ್ಸಿ ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ಗಾಜಿಪುರದಲ್ಲಿ ಐವರು ಹಾಗೂ ಮಥುರಾದ, ಜೌನ್‍ಪುರ, ಬುಲಂದ್‍ಶಹರ್ ಹಾಗೂ ಲಕ್ನೋದಲ್ಲಿ ತಲಾ ಒಬ್ಬರನ್ನು ಬಂಧಿಸಲಾಯಿತು. ಜೊತೆಗೆ 11 ವಿದ್ಯಾರ್ಥಿಗಳು ನಕಲು ಮಾಡಿ ಸಿಕ್ಕಿಬಿದ್ದಿದ್ದಾರೆ. ಪ್ರೌಢಶಾಲೆಯ 8 ಹುಡುಗರು ಮತ್ತು ಮೂವರು ಹುಡುಗಿಯರು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಅರಣ್ಯ ಇಲಾಖೆ ಸಿಬ್ಬಂದಿ, ತಮಿಳುನಾಡು ಬೇಟೆಗಾರರ ನಡುವೆ ಗುಂಡಿನ ಚಕಮಕಿ – ಒಬ್ಬ ಬೇಟೆಗಾರ ಸಾವು?

    TET EXAM 2

    ನಕಲು ತಡೆಗೆ ಕ್ರಮ: ವಾರ್ಷಿಕ ಪರೀಕ್ಷೆಗಳಲ್ಲಿ ನಕಲು ತಡೆಗೆ ಯುಪಿ ಸರ್ಕಾರ ಹತ್ತಾರು ಕಠಿಣ ಕ್ರಮ ತೆಗೆದುಕೊಂಡಿದೆ. ರಾಜ್ಯದ 75 ಜಿಲ್ಲೆಗಳ 8,753 ಪರೀಕ್ಷಾ ಕೇಂದ್ರಗಳ 1.43 ಪರೀಕ್ಷಾ ಕೊಠಡಿಗಳಲ್ಲಿ ವಾಯ್ಸ್ ರೆಕಾರ್ಡರ್ ಸಹಿತ 3 ಲಕ್ಷ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿ ಪರೀಕ್ಷಾ ಕೇಂದ್ರದ ಒಳಗೆ ಬಿಡುತ್ತಿದ್ದಾರೆ. ಇನ್ನೂ ವಿದ್ಯುನ್ಮಾನ ಡಿವೈಸ್‍ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಗೆ ಭರ್ಜರಿ ಕೊಡುಗೆ – ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಘೋಷಣೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನರ್ಸಿಂಗ್ ಕಾಲೇಜಿನಲ್ಲಿ ಮಾಸ್ ಕಾಪಿ – 10 ಸಾವಿರ ವಸೂಲಿ ಮಾಡಿ ಪರೀಕ್ಷೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ

    ನರ್ಸಿಂಗ್ ಕಾಲೇಜಿನಲ್ಲಿ ಮಾಸ್ ಕಾಪಿ – 10 ಸಾವಿರ ವಸೂಲಿ ಮಾಡಿ ಪರೀಕ್ಷೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ

    ದಾವಣಗೆರೆ: ನರ್ಸಿಂಗ್ ಪರೀಕ್ಷೆಯಲ್ಲಿ (Exam) ವಿದ್ಯಾರ್ಥಿಗಳು ಸಾಮೂಹಿಕವಾಗಿ ನಕಲು (Mass Copy) ಮಾಡುತ್ತಿದ್ದ ವೇಳೆ ಏಕಾಏಕಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಕಾಲೇಜಿಗೆ ದಾಳಿ ನಡೆಸಿದ ಘಟನೆ ದಾವಣಗೆರೆಯ (Davanagere) ಆಂಜನೇಯ ಬಡಾವಣೆಯಲ್ಲಿರುವ ಸಂಜೀವಿನಿ ನರ್ಸಿಂಗ್ ಕಾಲೇಜಿನಲ್ಲಿ (Sanjeevini Nursing College) ನಡೆದಿದೆ.

    ಸೋಮವಾರ ನರ್ಸಿಂಗ್‌ನ ಪರೀಕ್ಷೆ ಇದ್ದ ಹಿನ್ನೆಲೆ ಕೊಠಡಿಯ ಒಳಗೆ ವಿದ್ಯಾರ್ಥಿಗಳು ಅನಟಾಮಿ ವಿಷಯದ ಪರೀಕ್ಷೆ ಬರೆಯುತ್ತಿದ್ದರು. ಅಲ್ಲಿದ್ದ ಸಿಬ್ಬಂದಿಯೊಬ್ಬ ಮೊಬೈಲ್‌ನಲ್ಲಿ ಉತ್ತರಗಳನ್ನು ತರಿಸಿಕೊಂಡು, ವಿದ್ಯಾರ್ಥಿಗಳಿಗೆ ಪರೀಕ್ಷೆ ನಕಲು ಮಾಡಲು ಹೇಳಿ ಕೊಡುತ್ತಿದ್ದ. ಅಲ್ಲದೆ ನಕಲು ಮಾಡಲು ಕಾಲೇಜು ಸಿಬ್ಬಂದಿ ಸಾಥ್ ನೀಡಿದ್ದರು ಎಂಬ ಗಂಭೀರ ಆರೋಪ ಬಂದಿದೆ.

    ವರದಿಗಳ ಪ್ರಕಾರ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ನೀಡಲು ಪ್ರತಿಯೊಬ್ಬರಿಂದ 10 ಸಾವಿರ ರೂ. ಹಣ ವಸೂಲಿ ಮಾಡಲಾಗಿದೆ ಎನ್ನಲಾಗಿದೆ. ಹಣ ನೀಡಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಿ ಅವರಿಗೆ ಮಾತ್ರ ಉತ್ತರ ಹೇಳಿಕೊಡುತ್ತಿದ್ದರು. ಇದನ್ನೂ ಓದಿ: ಪತ್ರಕರ್ತರ 37ನೇ ರಾಜ್ಯ ಸಮ್ಮೇಳನಕ್ಕೆ ಡಾ.ವೀರೇಂದ್ರ ಹೆಗ್ಗಡೆಗೆ ಆಹ್ವಾನ

    ವಿದ್ಯಾರ್ಥಿಗಳು ಮೊಬೈಲಿನಲ್ಲಿ ಪರೀಕ್ಷೆ ನಕಲು ಮಾಡಿ ಬರೆಯುತ್ತಿದ್ದ ವೇಳೆಯೇ ಸಿಕ್ಕಿಹಾಕಿಕೊಂಡಿದ್ದು, ಕಾಲೇಜು ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ನಮ್ಮಲ್ಲಿ ನಕಲು ನಡೆದಿಲ್ಲ ಎಂದು ವಾದ ಮಾಡಿದ್ದಾರೆ. ಕಾಲೇಜು ಸಿಬ್ಬಂದಿಯೇ ನಕಲು ಮಾಡಲು ಅವಕಾಶ ನೀಡಿದರೆ ಸಾಮಾನ್ಯ ವಿದ್ಯಾರ್ಥಿಗಳ ಗತಿ ಏನು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇದನ್ನೂ ಓದಿ: ಸದನದ ಬಗ್ಗೆ ಹಗುರವಾಗಿ ಯಾರೂ ಮಾತನಾಡಬಾರದು, ಅದನ್ನು ಸಹಿಸಲಸಾಧ್ಯ: ಕಾಗೇರಿ

    Live Tv
    [brid partner=56869869 player=32851 video=960834 autoplay=true]

  • ನಕಲು ಮಾಡ್ಬಾರ್ದು ಅಂತ ಚಿತ್ರ ವಿಚಿತ್ರ ಕಿರೀಟ ಹಾಕಿಸಿ ಪರೀಕ್ಷೆ ಬರೆಸಿದ್ರು

    ನಕಲು ಮಾಡ್ಬಾರ್ದು ಅಂತ ಚಿತ್ರ ವಿಚಿತ್ರ ಕಿರೀಟ ಹಾಕಿಸಿ ಪರೀಕ್ಷೆ ಬರೆಸಿದ್ರು

    ಮನಿಲ: ಪರೀಕ್ಷೆಯ (Exam) ಸಮಯದಲ್ಲಿ ನಕಲು (Copy) ಮಾಡುವುದು ವಿದ್ಯಾರ್ಥಿಗಳ (Students) ಸಾಮಾನ್ಯ ಅಭ್ಯಾಸವಾಗಿದೆ. ಇಲ್ಲೊಂದು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಬಾರದು ಎಂದು ಅವರಿಗೆ ಚಿತ್ರ ವಿಚಿತ್ರ ಕಿರೀಟ (Headgears) ಹಾಕಿಸಿದ್ದಾರೆ. ಈ ರೀತಿ ವಿದ್ಯಾರ್ಥಿಗಳಿಗೆ ವಿಭಿನ್ನ ರೀತಿಯಲ್ಲಿ ಪರೀಕ್ಷೆ ಬರೆಸಿರುವ ಫೋಟೋಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

    ಫಿಲಿಪೈನ್ಸ್‌ನ ಬಿಕಾಲ್ ಯೂನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ವಿದ್ಯಾರ್ಥಿಗಳಿಗೆ ಈ ರೀತಿಯಾಗಿ ಕಿರೀಟಗಳನ್ನು ಧರಿಸಿ ಪರೀಕ್ಷೆ ಬರೆಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಬಾರದು ಎಂದಾದರೆ ಇದೊಂದು ಒಳ್ಳೆಯ ಹಾಗೂ ವಿಭಿನ್ನವಾದ ಉಪಾಯವಾಗಿದೆ ಎಂದು ಅಲ್ಲಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪ್ರಾಧ್ಯಾಪಕ ಮೇರಿ ಜಾಯ್ ಮಂಡನೆ ಒರ್ಟಿಜ್ ಹೇಳಿದ್ದಾರೆ.

    ವರದಿಗಳ ಪ್ರಕಾರ ಒರ್ಟಿಜ್ ತನ್ನ ವಿದ್ಯಾರ್ಥಿಗಳಳಿಗೆ ಪರೀಕ್ಷೆಗಾಗಿ ಕಿರೀಟಗಳನ್ನು ತಾವೇ ತಯಾರಿಸುವಂತೆ ಕೇಳಿದ್ದಾರೆ. ಬಳಿಕ ಪರೀಕ್ಷೆಗೆ ತಯಾರಾಗಿ ಬಂದ ವಿದ್ಯಾರ್ಥಿಗಳು ತಾವೇ ತಯಾರಿಸಿದ ಭಿನ್ನ ವಿಭಿನ್ನ ರೀತಿಯ ಕಿರೀಟಗಳೊಂದಿಗೆ ಹಾಜರಾಗಿದ್ದಾರೆ. ಪರೀಕ್ಷೆಯ ಒತ್ತಡದ ನಡುವೆಯೂ ವಿದ್ಯಾರ್ಥಿಗಳು ತಮ್ಮ ಮಾತಿಗೆ ಬೆಲೆ ನೀಡಿ, ಕಿರೀಟಗಳನ್ನು ತಾವೇ ತಯಾರಿಸಿ ಬಂದಿದ್ದಕ್ಕೆ ಪ್ರಾಧ್ಯಾಪಕರು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಾನು ನನ್ನ ತಂದೆ ಬಗ್ಗೆ ಮಾತ್ರ ಯೋಚಿಸುತ್ತೇನೆ – ಗ್ರೌಂಡ್‌ನಲ್ಲೇ ಕಣ್ಣೀರಿಟ್ಟ ಪಾಂಡ್ಯ

    ಕೆಲ ವರ್ಷಗಳ ಹಿಂದೆ ಥೈಲ್ಯಾಂಡ್‌ನಲ್ಲಿಯೂ ವಿದ್ಯಾರ್ಥಿಗಳು ನಕಲು ಮಾಡಬಾರದು ಎಂದು ಇದೇ ರೀತಿಯ ಉಪಾಯ ಮಾಡಲಾಗಿತ್ತು. ಬ್ಯಾಂಕಾಕ್‌ನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಕಿರೀಟಗಳನ್ನು ಧರಿಸಿ ಪರೀಕ್ಷೆ ಬರೆದಿದ್ದ ಫೋಟೋಗಳು ವೈರಲ್ ಆಗಿದ್ದವು. ಇದನ್ನೂ ಓದಿ: ದೀಪಾವಳಿ ಎಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬ: ಮೋದಿ

    Live Tv
    [brid partner=56869869 player=32851 video=960834 autoplay=true]

  • ಪರೀಕ್ಷೆಯಲ್ಲಿ ಕಾಪಿ ಮಾಡಲು ಬಿಡಲಿಲ್ಲವೆಂದು ಥಳಿಸಿ, ಬೆದರಿಸಿದ ವಿದ್ಯಾರ್ಥಿ

    ಪರೀಕ್ಷೆಯಲ್ಲಿ ಕಾಪಿ ಮಾಡಲು ಬಿಡಲಿಲ್ಲವೆಂದು ಥಳಿಸಿ, ಬೆದರಿಸಿದ ವಿದ್ಯಾರ್ಥಿ

    – 10ನೇ ತರಗತಿ ವಿದ್ಯಾರ್ಥಿಯಿಂದ ಚಾಕು ಇರಿತದ ಬೆದರಿಕೆ

    ಅಹಮದಾಬಾದ್: ತನಗೆ ಪರೀಕ್ಷೆಯಲ್ಲಿ ಕಾಪಿ ಮಾಡಲು ಬಿಡದ ವಿದ್ಯಾರ್ಥಿಗೆ ಮತ್ತೊಬ್ಬ ವಿದ್ಯಾರ್ಥಿ ಚಾಕು ಇರಿಯುವುದಾಗಿ ಬೆದರಿಕೆ ಹಾಕಿದ ಪ್ರಸಂಗವೊಂದು ಅಹಮಾದಾಬಾದ್ ನಲ್ಲಿ ನಡೆದಿದೆ.

    ಈ ಘಟನೆ ಶನಿವಾರ ನಡೆದಿದೆ. ಕೃಷ್ಣನಗರದ ಪರೀಕ್ಷಾ ಕೇಂದ್ರದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಎಕ್ಸಾಂ ನಡೆಯುತ್ತಿದೆ. ಈ ವೇಳೆ ವಿದ್ಯಾರ್ಥಿ ಮತ್ತೊಬ್ಬ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದಾನೆ. ಘಟನೆ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 323 (ಹಲ್ಲೆ) ಹಾಗೂ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಂತ್ರಸ್ತ ಬಾಲಕನ ತಂದೆ ದೂರು ನೀಡಿದ್ದು, ದೂರಿನಲ್ಲಿ ನನ್ನ ಮಗ ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಬರೆಯಲು ಹೋಗಿದ್ದಾನೆ. ಈ ವೇಳೆ ಆತನಿಗೆ ವಿದ್ಯಾರ್ಥಿಯೊಬ್ಬ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ.

    ಬಾಲಕ ಪರೀಕ್ಷೆ ಬರೆಯಲು ಎಕ್ಸಾಂ ಹಾಲ್ ಗೆ ತೆರಳಿ ತನ್ನ ಸೀಟಿನಲ್ಲಿ ಕುಳಿತಿದ್ದಾನೆ. ಈತನ ಪಕ್ಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಬಂದು ಕುಳಿತುಕೊಂಡಿದ್ದಾನೆ. ಅಲ್ಲದೆ ತನಗೆ ನಿನ್ನ ಉತ್ತರ ಪತ್ರಿಕೆ ನಕಲಿ ಮಾಡಲು ತೋರಿಸುವಂತೆ ಹೇಳಿದ್ದಾನೆ. ಆದರೆ ಇದನ್ನು ಸಂತ್ರಸ್ತ ವಿದ್ಯಾರ್ಥಿ ನಿರಾಕರಿಸಿದ್ದಾನೆ. ಇದರಿಂದ ಸಿಟ್ಟುಗೊಂಡ ವಿದ್ಯಾರ್ಥಿ ಸಂತ್ರಸ್ತ ವಿದ್ಯಾರ್ಥಿ ನಿನ್ನನ್ನು ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಬಳಿಕ ಸಂತ್ರಸ್ತ ವಿದ್ಯಾರ್ಥಿ ಕೂಡಲೇ ಕ್ಲಾಸ್ ಸೂಪರ್ ವೈಸರ್ ಬಳಿ ನಡೆದ ಘಟನೆಯನ್ನು ವಿರಿಸಿದ್ದಾನೆ. ಪರೀಕ್ಷೆ ಮುಗಿದ ಬಳಿಕ ಸಂತ್ರಸ್ತ ವಿದ್ಯಾರ್ಥಿ ಶಾಲೆಯಿಂದ ಹೊರಬಂದು ಮಠದ ಮುಂದೆ ನಿಂತಿದ್ದನು. ಈ ವೇಳೆ ಅಲ್ಲಿಗೆ ಬಂದ ವಿದ್ಯಾರ್ಥಿ ಸಂತ್ರಸ್ತ ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿಸಿ, ನೂಕಿ ತನ್ನ ಪಾಕೆಟ್ ನಲ್ಲಿದ್ದ ಚಾಕು ತೆಗೆದು ಬೆದರಿಸಿದ್ದಾನೆ.

    ವಿದ್ಯಾರ್ಥಿ ಚಾಕು ತೆಗೆಯುತ್ತಿದ್ದಂತೆಯೇ ಭಯಗೊಂಡ ಸಂತ್ರಸ್ತ ವಿದ್ಯಾರ್ಥಿ ಅಲ್ಲಿಂದ ಓಡಿ ತನ್ನ ತಂದೆಗೆ ತಿಳಿಸಿದ್ದಾನೆ. ಮಗನ ಮಾತನ್ನು ಆಲಿಸಿದ ತಂದೆ ಕೂಡಲೇ ಪೊಲೀಸರ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ವಿದ್ಯಾರ್ಥಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಆರೋಪಿ ಅಪ್ರಾಪ್ತನಾಗಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳುವಾಗಿ ಕೃಷ್ಣನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿ.ಆರ್ ಚೌಧರಿ ತಿಳಿಸಿದ್ದಾರೆ.

  • ಎಕ್ಸಾಂ ಹಾಲ್‍ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಸೂಪರ್ ಸ್ಮಾರ್ಟ್ ನಕಲು

    ಎಕ್ಸಾಂ ಹಾಲ್‍ನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಸೂಪರ್ ಸ್ಮಾರ್ಟ್ ನಕಲು

    ಉಡುಪಿ: ಸ್ಮಾರ್ಟ್ ವಿದ್ಯಾರ್ಥಿಯೊಬ್ಬ ಸ್ಮಾರ್ಟ್ ಆಗಿ ನಕಲು ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ.

    ಎಂಐಟಿ ಕಾಲೇಜು ಎಂಜಿನಿಯರ್ ವಿದ್ಯಾರ್ಥಿ ಸ್ಮಾರ್ಟ್ ವಾಚ್ ಕಟ್ಟಿಕೊಂಡು ಹೋಗಿ ಪರೀಕ್ಷೆಯಲ್ಲಿ ನಕಲು ಮಾಡಿದ್ದಾನೆ. ಸ್ಮಾರ್ಟ್ ವಾಚ್ ಕಟ್ಟಿದ್ದ ವಿದ್ಯಾರ್ಥಿಯನ್ನು ಪರೀಕ್ಷೆ ಹಾಲ್ ನಿಂದ ಎಬ್ಬಿಸಿ ಹೊರಗೆ ಕಳುಹಿಸಿದ್ದಾರೆ.

    ಈ ಸ್ಮಾರ್ಟ್ ವಾಚ್ ಎಷ್ಟು ತಂತ್ರಜ್ಞಾನದಿಂದ ಕೂಡಿದೆ ಎಂದರೆ ಇಡೀ ಪುಸ್ತಕವನ್ನು ಇದರೊಳಗೆ ಅಪ್ಲೋಡ್ ಮಾಡಬಹುದು. ಪರೀಕ್ಷೆಗೆ ಸಂಬಂಧಪಟ್ಟ ಎಲ್ಲಾ ಪ್ರೋಗ್ರಾಂಗಳು, ಅದರ ಸೂತ್ರಗಳು, ಕೆಲ ಉತ್ತರಗಳು ಮೆಮೋರಿ ಕಾರ್ಡ್ ಮೂಲಕ ಸ್ಟೋರ್ ಮಾಡಿಕೊಳ್ಳಬಹುದು. ಝೂಮ್ ಮಾಡುವ ಆಪ್ಶನ್ ಕೂಡ ಇದೆ.

    ನಕಲು ಮಾಡಿದ ವಿದ್ಯಾರ್ಥಿ ಯಾರು ಎಂಬುದು ಗೌಪ್ಯವಾಗಿ ಇಡಲಾಗಿದೆ. ಸದ್ಯ ವಾಚ್‍ನ ಕಾರ್ಯವೈಖರಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಲೇಜಿನ ಹಳೆ ವಿದ್ಯಾರ್ಥಿ ರಾಜ್ ಶೆಟ್ಟಿ, ಎಕ್ಸಾಂ ಹಾಲ್‍ನಲ್ಲಿ ಸಿಸಿಟಿವಿ ಅಳವಡಿಸಿದ್ದಾರೆ ಎಂಬುದು ಗೊತ್ತಿದೆ. ಆದರೂ ವಿದ್ಯಾರ್ಥಿ ಅತೀ ಬುದ್ಧಿವಂತಿಕೆಯ ಪ್ರದರ್ಶನ ಮಾಡಿದ್ದಾನೆ. ಚೆನ್ನಾಗಿ ವಿದ್ಯಾರ್ಜನೆ ಮಾಡಿ ಆವಿಷ್ಕಾರ ಮಾಡಬೇಕಾದವರು ಇಂತದರಲ್ಲಿ ಸಿಕ್ಕಿಹಾಕಿಕೊಳ್ಳುವ ಬದಲು ಚೆನ್ನಾಗಿ ಕಲಿತು ತಾನೇ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.

  • ಕಾಲೇಜು ಆವರಣದಲ್ಲಿ ಗುಂಪುಗುಂಪಾಗಿ ಕುಳಿತು ಪರೀಕ್ಷೆ ಬರೆದ ವಿದ್ಯಾರ್ಥಿಗಳು: ವಿಡಿಯೋ ವೈರಲ್

    ಕಾಲೇಜು ಆವರಣದಲ್ಲಿ ಗುಂಪುಗುಂಪಾಗಿ ಕುಳಿತು ಪರೀಕ್ಷೆ ಬರೆದ ವಿದ್ಯಾರ್ಥಿಗಳು: ವಿಡಿಯೋ ವೈರಲ್

    – ಶಾಂತಿಯುತ ಪರೀಕ್ಷೆ ನಡೆಯುತ್ತಿದೆ ಎಂದ ಪ್ರಾಂಶುಪಾಲರು

    ಪಾಟ್ನಾ: ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಗುಂಪುಗುಂಪಾಗಿ ಕುಳಿತು ಪರೀಕ್ಷೆ ಬರೆದ ಘಟನೆ ಬಿಹಾರದಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಶ್ಚಿಮ ಚಂಪಾರಣ್ ಜಿಲ್ಲೆಯ ಬೇತಿಯಾ ಪಟ್ಟಣದ ರಾಮ್ ಲಖನ್ ಸಿಂಗ್ ಯಾದವ್ (ಆರ್‌ಎಲ್‍ಎಸ್‍ವೈ) ಕಾಲೇಜಿನಲ್ಲಿ ಪರೀಕ್ಷಾ ನಕಲು ನಡೆದಿದೆ. ಆರ್‌ಎಲ್‍ಎಸ್‍ವೈ ಕಾಲೇಜು ಬಾಬಾ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾಲಯದ ಘಟಕವಾಗಿದ್ದು, ಅಂತಿಮ ವರ್ಷದ ಪದವಿಪೂರ್ವ ಪರೀಕ್ಷೆಯನ್ನು ವಿದ್ಯಾರ್ಥಿಗಳು ಗುಂಪು ಗುಂಪಾಗಿ ಕುಳಿತು ಬರೆದಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳು ಕಾಪಿ ಮಾಡುತ್ತಾರೆ ಎಂದು ತಲೆಗೆ ಡಬ್ಬ ಕಟ್ಟಿದ್ದ ಕಾಲೇಜ್

    ವಿಶ್ವವಿದ್ಯಾಲಯ ಪರೀಕ್ಷೆ  ನಡೆಸಿದ ಹಲವಾರು ಕಾಲೇಜುಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿದೆ. ಅನೇಕ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್‍ನಲ್ಲಿ ಎಲ್ಲಿಯಾದರೂ ಕುಳಿತು ಸಾಮೂಹಿಕ ನಕಲು ಮಾಡುವಲ್ಲಿ ತೊಡಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ವಿದ್ಯಾರ್ಥಿಗಳು ಮಹಡಿಗಳಲ್ಲಿ ಮತ್ತು ಕಾರಿಡಾರ್ ಗಳಲ್ಲಿ ಏಕೆ ಕುಳಿತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್‌ಎಲ್‍ಎಸ್‍ವೈ ಕಾಲೇಜಿನ ಪ್ರಾಂಶುಪಾಲ ರಾಜೇಶ್ವರ್ ಪ್ರಸಾದ್ ಯಾದವ್, ಕಾಲೇಜಿನಲ್ಲಿ ಸ್ಥಳಾವಕಾಶದ ಕೊರತೆ ಇದೆ. ಕಾಲೇಜು ಕಟ್ಟಡದಲ್ಲಿ ಕೇವಲ 2,500 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಸಾಧ್ಯ. ಆದರೆ ವಿಶ್ವವಿದ್ಯಾಲಯವು ನಮ್ಮ ಕಾಲೇಜಿಗೆ ಸುಮಾರು 6,000 ವಿದ್ಯಾರ್ಥಿಗಳನ್ನು ನಿಗದಿಪಡಿಸಿದೆ ಎಂದು ದೂರಿದ್ದಾರೆ.

    ಸಾಮೂಹಿಕ ಪರೀಕ್ಷಾ ನಕಲು ನಡೆಯುತ್ತಿದೆ ಎಂಬ ಆರೋಪವನ್ನು ಪ್ರಾಂಶುಪಾಲರು ತಳ್ಳಿ ಹಾಕಿದ್ದಾರೆ. ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರೂ ಪರೀಕ್ಷೆಗಳನ್ನು ಶಾಂತಿಯುತವಾಗಿ ನಡೆಸಲಾಗಿದೆ ಎಂದು ಹೇಳಿದರು.

    ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ಪದವಿ ವಿದ್ಯಾರ್ಥಿಗಳಿಗೆ ಒಟ್ಟಿಗೆ ಪರೀಕ್ಷೆಗೆ ನಡೆಯುತ್ತಿವೆ. ಒಂದು ದಿನಕ್ಕೆ ಎರಡು ಬ್ಯಾಚ್‍ನಂತೆ ಪರೀಕ್ಷೆ ನಡೆಸಲಾಗುತ್ತಿದೆ. ಬೆಳಗ್ಗೆ 9ರಿಂದ 12 ಗಂಟೆ ವೆರೆಗೆ ನಡೆಯುವ ಮೊದಲ ಬ್ಯಾಚ್‍ನಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ 2,000 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಬಳಿಕ ಮಧ್ಯಾಹ್ನ 2ರಿಂದ 5ಗಂಟೆ ವರೆಗೆ ನಡೆಯುವ ಕಲಾ ಪರೀಕ್ಷೆಗೆ 6,000 ವಿದ್ಯಾರ್ಥಿಗಳು ಬರುತ್ತಾರೆ ಎಂದು ತಿಳಿಸಿದರು.

  • SSLC ಪರೀಕ್ಷೆ ವೇಳೆ ನಕಲಿಗೆ ಸಹಕರಿಸುತ್ತಿದ್ದ ಪ್ರಾಚಾರ್ಯ ಸೇರಿ ನಾಲ್ವರು ಅರೆಸ್ಟ್

    SSLC ಪರೀಕ್ಷೆ ವೇಳೆ ನಕಲಿಗೆ ಸಹಕರಿಸುತ್ತಿದ್ದ ಪ್ರಾಚಾರ್ಯ ಸೇರಿ ನಾಲ್ವರು ಅರೆಸ್ಟ್

    ಬೆಳಗಾವಿ: ಎಸ್‍ಎಸ್‍ಎಲ್‍ಸಿ ಗಣಿತ ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಕರಿಸಿದ್ದ ನಾಲ್ವರು ಶಿಕ್ಷಕರನ್ನು ಪೊಲೀಸರು ಬಂಧಿಸಿದ ಘಟನೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣ ನಡೆದಿದೆ.

    ಹಾರೂಗೇರಿ ವಿದ್ಯಾಲಯದ ಪ್ರಾಚಾರ್ಯ ಎಂ.ಆರ್.ಮಗದುಮ್, ಸಹಶಿಕ್ಷಕರಾದ ಡಿ.ಪಿ.ದೇಸಾಯಿ, ಎ.ಬಿ.ಪಾಟೀಲ, ಅಲಕನೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಪಿ.ಬಿ.ಪಾಲಯಾ ಬಂಧಿತರು. ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

    ಆಗಿದ್ದೇನು?:
    ಮವಾರ ಗಣಿತ ಪರೀಕ್ಷೆ ನಡೆದಿತ್ತು. ಹಾರೂಗೇರಿ ವಿದ್ಯಾಲಯದ ಶಿಕ್ಷಕರು ಕೆಲ ವಿದ್ಯಾರ್ಥಿಗಳಿಂದ ಪಶ್ನೆ ಪತ್ರಿಕೆ ಪಡೆದು ಕೊಠಡಿಯಲ್ಲಿ ಕುಳಿತು ಉತ್ತರ ಸಿದ್ಧಪಡಿಸಿದ್ದಾರೆ. ಬಳಿಕ ಪ್ರತಿಯೊಂದು ಪರೀಕ್ಷಾ ಕೊಠಡಿಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಉತ್ತರವನ್ನು ಹೇಳಲು ಮುಂದಾಗಿದ್ದರು. ಕೊಠಡಿಯಲ್ಲಿ ಶಿಕ್ಷಕರು ಪ್ರಶ್ನೆ ಪತ್ರಿಕೆ ಹಿಡಿದು ಉತ್ತರ ಬರೆಯುತ್ತಿದ್ದ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು, ರಾಯಬಾಗ ಬಿಇಒ ಎಚ್.ಎ.ಭಜಂತ್ರಿ ಅವರಿಗೆ ನೀಡಿದ್ದರು.

    ವಿಡಿಯೋ ನೋಡಿದ ಬಿಇಒ ಎಚ್.ಎ.ಭಜಂತ್ರಿ ಅವರು ಹಾರೂಗೇರಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಶಿಕ್ಷಕರನ್ನು ಮಂಗಳವಾರ ಸಂಜೆ 4 ಗಂಟೆಗೆ ಬಂಧಿಸಿದ್ದಾರೆ.

  • SSLC ಸಾಮೂಹಿಕ ನಕಲು – ಸಹಕರಿಸಲು ಪರೀಕ್ಷಾ ಕೇಂದ್ರದತ್ತ ಮುಗಿಬಿದ್ದ ಪೋಷಕರು, ಸ್ನೇಹಿತರು

    SSLC ಸಾಮೂಹಿಕ ನಕಲು – ಸಹಕರಿಸಲು ಪರೀಕ್ಷಾ ಕೇಂದ್ರದತ್ತ ಮುಗಿಬಿದ್ದ ಪೋಷಕರು, ಸ್ನೇಹಿತರು

    ಕಲಬುರಗಿ: ಇಂದು ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಕಲು ಮಾಡಲು ಪೋಷಕರು ಹಾಗೂ ಸ್ನೇಹಿತರು ಸಹಕರಿಸುತ್ತಿದ್ದ ದೃಶ್ಯ ಜಿಲ್ಲೆ ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಕಂಡು ಬಂದಿದೆ.

    ಮಣ್ಣೂರು ಗ್ರಾಮದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಮಾಡುತ್ತಿದ್ದ ವೇಳೆ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಮಣ್ಣೂರು ಪರೀಕ್ಷಾ ಕೇಂದ್ರದಲ್ಲಿ 298ರ ಪೈಕಿಯ 296 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಂದು ಎಸ್‍ಎಸ್‍ಎಲ್‍ಸಿ ಪ್ರಥಮ ಭಾಷೆ ಕನ್ನಡ ಪರೀಕ್ಷೆ ವೇಳೆ ನಕಲು ಮಾಡಲು ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ನೇಹಿತರು ಪರೀಕ್ಷಾ ಕೇಂದ್ರದ ಹೊರಗಿನಿಂದ ಸಹಾಯ ಮಾಡುತ್ತಿದ್ದ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪರೀಕ್ಷಾ ಕೊಠಡಿಯ ಕಿಟಕಿ ಹೊರಗಿನಿಂದ ವಿದ್ಯಾರ್ಥಿಗಳಿಗೆ ಕಾಪಿ ಚೀಟಿ, ಪುಸ್ತಕಗಳನ್ನು ಕೊಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

    ಪರೀಕ್ಷಾ ಕೇಂದ್ರದಲ್ಲಿರುವ ಸಿಬ್ಬಂದಿಯೇ ಸಾಮೂಹಿಕ ನಕಲಿಗೆ ಸಹಕರಿಸಿದ್ದಾರೆಂದು ಆರೋಪಗಳು ಕೇಳಿ ಬಂದಿದ್ದು, ಸ್ಕ್ಟಾಡ್ ತಂಡದಿಂದ ಪರೀಕ್ಷಾ ಕೇಂದ್ರದ ಮೇಲೆ ದಾಳಿ ನಡೆಸಿದಾಗ ನಕಲು ಮಾಡುತ್ತಿರುವುದು ಬಹಿರಂಗವಾಗಿದೆ. ಅಫಜಲಪುರ ಬಿಇಒ ವಸಂತ ರಾಠೋಡ್ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಆದರಿಂದಲೇ ಈ ರೀತಿ ಆಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.