Tag: ನಕಲಿ ಸ್ವಾಮಿ

  • ಬೆಂಗಳೂರಿನಲ್ಲೊಬ್ಬ ನಕಲಿ ಸ್ವಾಮಿಯ ಕಾಮ ಪುರಾಣ – 7 ವರ್ಷದಿಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ

    ಬೆಂಗಳೂರಿನಲ್ಲೊಬ್ಬ ನಕಲಿ ಸ್ವಾಮಿಯ ಕಾಮ ಪುರಾಣ – 7 ವರ್ಷದಿಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಕಲಿ ಸ್ವಾಮೀಯೊಬ್ಬನ ಕಾಮಪುರಾಣ ಬಹಿರಂಗವಾಗಿದೆ.

    ಕಳೆದ 7 ವರ್ಷಗಳಿಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ನಂತರ ‘ನೀನು ಮದುವೆಯಾಗಿ ಚೆನ್ನಾಗಿರು’ ಎಂದು ಹೇಳಿ ಇದೀಗ ಮದುವೆ ನಿಶ್ಚಿಯವಾಗಿದ್ದ ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಅಲ್ಲದೇ ಕಪಟ ಸ್ವಾಮೀಜಿಯ ಕಾಮಪುರಾಣಕ್ಕೆ ಆತನ ಪತ್ನಿಯೂ ಸಾಥ್ ನೀಡಿದ್ದಾರೆ ಎನ್ನಲಾಗುತ್ತಿದ್ದು, ಸ್ವಂತ ಪತ್ನಿಗೆ ‘ನಾನು ಶ್ರೀ ಕೃಷ್ಣ ನೀನು ರಾಧೆ ಇವಳು ರುಕ್ಮಿಣಿ ಎಂದು ಯುವತಿಯನ್ನ ಪರಿಚಯ ಮಾಡಿಕೊಟ್ಟಿದ್ದನು.  ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ – ಪತಿ ವಿರುದ್ಧ ಕೇಸ್

    ಆರೋಪಿಯನ್ನು ಆನಂದ ಮೂರ್ತಿ ಎಂದು ಗುರುತಿಸಲಾಗಿದ್ದು, ಅವಲಹಳ್ಳಿ ಸಮೀಪ ಆಶ್ರಮ, ಮನೆ ಹೊಂದಿದ್ದಾನೆ. 7 ವರ್ಷಗಳ ಹಿಂದೆ ಸಂತ್ರಸ್ತ ಯುವತಿಗೆ ಕಪಟ ಸ್ವಾಮೀಜಿಯ ಪರಿಚಯವಾಗಿದ್ದು, ನಿನಗೂ ಹಾಗೂ ನಿನ್ನ ಕುಟುಂಬಕ್ಕೆ ದೋಷವಿದೆ. ಹೀಗಾಗಿ ಪೂಜೆ ಮಾಡಬೇಕು ಎಂದು ಆಶ್ರಮಕ್ಕೆ ಯುವತಿಯನ್ನು ಕರೆಸಿಕೊಂಡಿದ್ದನು. ಈ ವೇಳೆ ಯುವತಿಗೆ ಮತ್ತು ಬರುವ ಔಷಧ ನೀಡಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.

    ಯುವತಿಯ ಜೊತೆ ಇದ್ದ ಖಾಸಗಿ ಕ್ಷಣಗಳನ್ನು ವೀಡಿಯೋ ಮಾಡಿಕೊಂಡಿದ್ದ ಆನಂದಮೂರ್ತಿ ನಿನ್ನ ಜಾತಕದ ಪ್ರಕಾರ ನೀನು ನನ್ನೊಂದಿಗೆ ಇರಬೇಕೆಂದು ಇದೆ. ನಾನು ಕಾಳಿ ಆರಾಧಕ ನನ್ನನ್ನು ನಂಬು ನಿನ್ನ ಎಲ್ಲಾ ಕಷ್ಟ ಪರಿಹಾರ ಮಾಡುತ್ತೇನೆ. ನನ್ನ ಆಶ್ರಮಕ್ಕೆ ಬಾ ನಿನಗೆ ದಿಕ್ಷೆ ಕೊಡುತ್ತನೆ ಎಂದು ವಂಚಿಸಿದ್ದಾನೆ. ಇದನ್ನೂ ಓದಿ: 35 ಸಾವಿರಕ್ಕೂ ಹೆಚ್ಚು ಉರಗಗಳನ್ನು ರಕ್ಷಿಸಿದ್ದ ಸ್ನೇಕ್ ಲೋಕೇಶ್ ಇನ್ನಿಲ್ಲ

    7 ವರ್ಷಗಳಿಂದ ಯುವತಿಯನ್ನು ಆಗಾಗ ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಂಡಿದ್ದ ಕಾಮಿ ಸ್ವಾಮೀಜಿ ಇತ್ತೀಚೆಗೆ ನೀನು ಮದುವೆಯಾಗಿ ಚೆನ್ನಾಗಿರು ಎಂದು ಹೇಳಿದ್ದನು. ಆದರೆ ಅಸಲಿ ವಿಚಾರ ತಿಳಿಯದೇ ಯುವತಿಯ ಮನೆಯವರು ಆಕೆಗೆ ಮದುವೆ ತಯಾರಿ ನಡೆಸಿದ್ದರು. ಆದರೆ 2 ದಿನಗಳ ಬಳಿಕ ಮದುವೆ ನಿಶ್ಚಯವಾಗಿದ್ದ ಹುಡುಗನಿಗೆ ಯುವತಿಯ ಖಾಸಗಿ ಫೋಟೋ ಕಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

    ಆನಂದಮೂರ್ತಿಯ ಕುಕೃತ್ಯ ತಿಳಿದು ಯುವತಿಯ ಪೋಷಕರು ಕಂಗಾಲಾಗಿದ್ದು, ಇದೀಗ ಕೆ.ಆರ್.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]