Tag: ನಕಲಿ ಸುದ್ದಿ

  • ಬೆಂಗ್ಳೂರಲ್ಲಿ ಬುಲೆಟ್ ಬೈಕ್ ಸ್ಫೋಟ- ವೈರಲ್ ವಿಡಿಯೋ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ಬೆಂಗ್ಳೂರಲ್ಲಿ ಬುಲೆಟ್ ಬೈಕ್ ಸ್ಫೋಟ- ವೈರಲ್ ವಿಡಿಯೋ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ಬೆಂಗಳೂರು: ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ರಾಯಲ್ ಎನ್ ಫೀಲ್ಡ್ ಬೈಕ್ ಸವಾರ ಸುಟ್ಟು ಮೃತಪಟ್ಟಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

    ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬೇಗೂರು ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು, ಬೈಕಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಮೆಸೇಜ್ ಬರೆಯಲಾಗಿದೆ.

    ಆದರೆ ಈ ಸುದ್ದಿ ಸುಳ್ಳು ಸುದ್ದಿಯಾಗಿದ್ದು ಬೆಂಗಳೂರಿನಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಸ್ಫೋಟಗೊಂಡಿಲ್ಲ. ಅಷ್ಟೇ ಅಲ್ಲದೇ ಕೆಲ ಜನ ಇದು ಹೈದರಾಬಾದ್ ಮಲ್ಕಪೇಟ್ ನಲ್ಲಿ ನಡೆದಿದೆ ಎಂದು ಬರೆದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

    ಈ ಘಟನೆ ನಡೆದಿದ್ದು ಎಲ್ಲಿ?
    ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ 2016 ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಘಟನೆಯಾಗಿದೆ. ಟೆಂಪೋ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕಿಗೆ ಬೆಂಕಿ ಹೊತ್ತಿಕೊಂಡಿತ್ತು. ದೆಹಲಿಯ ಶಂಕರ್ ವಿಹಾರ್ ಪ್ರದೇಶದಲ್ಲಿ ನಡೆದ ಅಪಘಾತದ ಫೋಟೋವನ್ನು ಎಡಿಟ್ ಮಾಡಿ ಜನ ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಾರೆ.