Tag: ನಕಲಿ ರಸಗೊಬ್ಬರ

  • ಅಕ್ರಮವಾಗಿ ನಕಲಿ ರಸಗೊಬ್ಬರ, ಕ್ರಿಮಿನಾಶಕ ಸಾಗಿಸುತ್ತಿದ್ದ ವಾಹನ ಜಪ್ತಿ

    ಅಕ್ರಮವಾಗಿ ನಕಲಿ ರಸಗೊಬ್ಬರ, ಕ್ರಿಮಿನಾಶಕ ಸಾಗಿಸುತ್ತಿದ್ದ ವಾಹನ ಜಪ್ತಿ

    ಯಾದಗಿರಿ: ನಕಲಿ ರಸಗೊಬ್ಬರ, ಕ್ರಿಮಿನಾಶಕ ಸಾಗಿಸುತ್ತಿದ್ದ ವಾಹನ ಜಪ್ತಿ ಮಾಡಿದ್ದು, 2.26 ಲಕ್ಷ ರೂ. ಮೌಲ್ಯದ ನಕಲಿ ಕ್ರಿಮಿನಾಶಕವನ್ನು ಗೋಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ವಾಹನ ಚಾಲಕ ಸೈಯದ್ ಅಮೀನ್ ಸಾಬ್ ಉಕ್ಕಲಿ ಎಂಬಾತನನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ನಿಯತ್ತಾಗಿರುವವರು ಯಾರು ಬೇಕಾದರೂ ಕಾಂಗ್ರೆಸ್‌ಗೆ ಬರಬಹುದು: ಕೊತ್ತೂರು ಮಂಜುನಾಥ್

    ವಿಜಯಪುರ (Vijayapura) ಜಿಲ್ಲೆಯ ಸಿಂದಗಿಯಿಂದ (Sindagi) ಚಾಮನಾಳ ಕಡೆಗೆ ಟಾಟಾ ಎಸಿ ವಾಹನವೊಂದು ಹೊರಟಿತ್ತು. ಖಚಿತ ಮಾಹಿತಿಯ ಮೇರೆಗೆ ಗೋಗಿ ಪೊಲೀಸರು ವಾಹನವನ್ನು ಪರಿಶೀಲಿಸಿದ್ದಾರೆ. ಈ ವೇಳೆ 2.26 ಲಕ್ಷ ರೂ. ಮೌಲ್ಯದ ವಸ್ತು ಪತ್ತೆಯಾಗಿದ್ದು, ಅದರಲ್ಲಿ 70 ಸಾವಿರ ರೂ. ಮೌಲ್ಯದ 50 ಚೀಲ ರಸಗೊಬ್ಬರ, 1.44 ಲಕ್ಷ ಮೌಲ್ಯದ 44 ಡಬ್ಬಾ ಕ್ರಿಮಿನಾಶಕ ಪತ್ತೆಯಾಗಿದೆ.

    ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ವಿಜಯಪುರದಲ್ಲಿ ಭೂಕಂಪನ: ಜೋರು ಶಬ್ದಕ್ಕೆ ಹೆದರಿ ಮನೆಯಿಂದಾಚೆ ಓಡಿ ಬಂದ ಜನ!

  • ನಕಲಿ ರಸಗೊಬ್ಬರ ದಾಸ್ತಾನು ಪತ್ತೆಹಚ್ಚಿದ ರೈತರು

    ನಕಲಿ ರಸಗೊಬ್ಬರ ದಾಸ್ತಾನು ಪತ್ತೆಹಚ್ಚಿದ ರೈತರು

    ವಿಜಯಪುರ: ಅಕ್ರಮ ರಸಗೊಬ್ಬರ ತಯಾರಿಕಾ ಜಾಲವನ್ನು ರೈತರೇ ಬೇಧಿಸಿದ್ದಾರೆ. ಜಿಲ್ಲೆಯ ಇಂಡಿ ತಾಲೂಕಿನ ಇಂಗಳಗಿ ಗ್ರಾಮದ ಹೊರ ಭಾಗದಲ್ಲಿ ಅಕ್ರಮ ದಾಸ್ತಾನು ಪತ್ತೆಯಾಗಿದೆ.

    ಜಮ್ಮು ಭಾಗವಾನ್ ಅವರಿಗೆ ಸೇರಿದ ತೋಟದ ಮನೆಯಲ್ಲಿ ಅಕ್ರಮವಾಗಿ ಇಟ್ಟಿದ್ದ ರಸಗೊಬ್ಬರಗಳ ಮೂಟೆಗಳನ್ನು ರೈತರು ಪತ್ತೆಹಚ್ಚಿದ್ದಾರೆ. ನಂತರ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ಅಧಿಕಾರಿಗಳೊಂದಿಗೆ ದಾಳಿ ಮಾಡಿದ್ದಾರೆ.

    ದಾಳಿ ವೇಳೆ ತೋಟದ ಮನೆಯಲ್ಲಿ ಯಾರೂ ಕಂಡು ಬಂದಿಲ್ಲ. ನಂತರ ಅಧಿಕಾರಿಗಳು ರಸಗೊಬ್ಬರ ತಯಾರಿಕೆ, ಸಾಗಾಟ ಹಾಗೂ ಮಾರಾಟ ಮಾಡಿದ್ದರ ಬaಗ್ಗೆ ತನಿಖೆ ನಡೆಸಿದ್ದಾರೆ.ನಕಲಿ ರಸಗೊಬ್ಬರ ಸಂಗ್ರಹಿಸಿದ ಮನೆಗೆ ಪೊಲೀಸ್ ಕಾವಲು ಇರಿಸಿ, ನಕಲಿ ರಸಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೃಷಿ ಜಂಟಿ ನಿರ್ದೇಶಕ ರಾಜಶೇಖರ್ ವಿಲಿಯಮ್ಸ್ ಹಾಗೂ ಇತರ ಸಿಬ್ಬಂದಿಯಿಂದ ಪರಿಶೀಲನೆ ನಡೆಸಲಾಗಿದ್ದು, ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಲಿದೆ.