Tag: ನಕಲಿ ಮತದಾನ

  • ನಕಲಿ ಮತದಾನ ನಡೆದಿಲ್ಲ: ಉಡುಪಿ ಡಿ.ಸಿ ಡಾ.ವಿದ್ಯಾಕುಮಾರಿ ಸ್ಪಷ್ಟನೆ

    ನಕಲಿ ಮತದಾನ ನಡೆದಿಲ್ಲ: ಉಡುಪಿ ಡಿ.ಸಿ ಡಾ.ವಿದ್ಯಾಕುಮಾರಿ ಸ್ಪಷ್ಟನೆ

    ಉಡುಪಿ: ಇಲ್ಲಿನ ರಾಜೀವ ನಗರದಲ್ಲಿ (Rajeev Nagar) ನಕಲಿ ಮತದಾನ (Fake Vote) ಗೊಂದಲದ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ (Udupi)  ಡಿ.ಸಿ. ಡಾ.ವಿದ್ಯಾಕುಮಾರಿ (Dr Vidyakumari) ಸ್ಪಷ್ಟನೆ ನೀಡಿದ್ದು, ನಕಲಿ ಮತದಾನ ನಡೆದಿಲ್ಲ ಎಂದು ತಿಳಿಸಿದ್ದಾರೆ.

    ರಾಜೀವ ನಗರದಲ್ಲಿ ಯಾವುದೇ ನಕಲಿ ಮತದಾನ ನಡೆದಿಲ್ಲ. ಮಣಿಪಾಲದ ಅರ್ಬಿ ನಿವಾಸಿ ಕೃಷ್ಣ ನಾಯ್ಕ್ ಹೆಸರಲ್ಲಿ ಮತದಾನ ನಡೆದಿದ್ದು, ಒಂದೇ ಹೆಸರಿನ ಇಬ್ಬರು ಇರೋದರಿಂದ ಗೊಂದಲ ಉಂಟಾಗಿದೆ. ಒಂದೇ ಮತಗಟ್ಟೆಯಲ್ಲಿ ಕೃಷ್ಣ ನಾಯ್ಕ ಹೆಸರಿನ ಇಬ್ಬರು ಮತದಾರರು ಇದ್ದ ಕಾರಣ ವೋಟರ್ ಸ್ಲಿಪ್ ಅದಲು ಬದಲಾಗಿ ಗೊಂದಲ ಉಂಟಾಗಿದೆ ಎಂದರು. ಇದನ್ನೂ ಓದಿ:

    ನಡೆದಿದ್ದು ಏನು?
    ಮತ ಚಲಾಯಿಸಲೆಂದು ಮಣಿಪಾಲದ ಅರ್ಬಿ ನಿವಾಸಿ ಕೃಷ್ಣ ನಾಯ್ಕ್ ಮತಗಟ್ಟೆಗೆ ಆಗಮಿಸಿದ ವೇಳೆ ತನ್ನ ಹೆಸರಲ್ಲಿ ಬೇರೊಬ್ಬರು ಮತ ಚಲಾಯಿಸಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಎರಡೂ ಪಕ್ಷಗಳ ಮತಗಟ್ಟೆ ಏಜೆಂಟ್‌ಗಳಿಂದ ವಿರೋಧ ವ್ಯಕ್ತವಾಗಿದ್ದು, ಮತಗಟ್ಟೆ ಅಧಿಕಾರಿಗಳನ್ನು ಬೂತ್ ಏಜೆಂಟ್‌ಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಮಣಿಪಾಲದ ರಾಜೀವ ನಗರ ಮತಗಟ್ಟೆಯಲ್ಲಿ ಘಟನೆ ನಡೆದಿದ್ದು, ನಕಲಿ ಮತದಾನ ಮಾಡಿದವರನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಲಾಗಿತ್ತು. ಇದನ್ನೂ ಓದಿ:

  • ಯಶವಂತಪುರದಲ್ಲಿ ನಕಲಿ ಮತದಾನದ ಹಾವಳಿ

    ಯಶವಂತಪುರದಲ್ಲಿ ನಕಲಿ ಮತದಾನದ ಹಾವಳಿ

    ಬೆಂಗಳೂರು: ಮತದಾನ ಆರಂಭವಾದ ಕೆಲವೇ ಕ್ಷಣಗಳಲ್ಲಿ ನಕಲಿ ಮತದಾನದ ಹಾವಳಿ ಶುರುವಾಗಿದೆ.

    ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬೆಳ್ಳಂಬೆಳಗ್ಗೆಯೇ ಫ್ರಾಕ್ಸಿ ವೋಟ್ ಹಾವಳಿ ಶುರುವಾಗಿದೆ. ನಾಗದೇವನಹಳ್ಳಿ ರೋಟರಿ ವಿದ್ಯಾಲಯ ಮತಗಟ್ಟೆಯಲ್ಲಿ ತಮ್ಮ ಮತವನ್ನು ಬೇರೆ ಯಾರೋ ಚಲಾಯಿಸಿದ್ದಾರೆ ಎಂದು ಆರೋಪಿಸಿ ಮತದಾರ ಚಾಲೆಂಜ್ ವೋಟ್ (ಚಹರೆ ಮತ್ತು ಗುರುತು ಹೋಲಿಕೆ ಆಗದಿದ್ದಲ್ಲಿ) ಮಾಡಲು ಮುಂದಾಗಿದ್ದಾರೆ.

    ಮನ್ಸೂಖ್ ಪಟೇಲ್ ಮತವನ್ನು ಬೇರೆ ಯಾರೋ ಚಲಾಯಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ನಕಲಿ ಮತದಾನ ಮಾಡಿರುವ ಸಂಶಯ ವ್ಯಕ್ತವಾಗುತ್ತಿದ್ದು, ಚುನಾವಣಾ ಅಧಿಕಾರಿಗಳು ಈ ತಪ್ಪಿಗೆ ಸೂಕ್ತ ಉತ್ತರ ಕೊಡುತ್ತಿಲ್ಲ.

    ಕ್ರಮ ಸಂಖ್ಯೆ 1034 ವೋಟರ್ ಐಡಿಗೆ ನಕಲಿ ಮತದಾನ ನಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ. ಹೀಗಾಗಿ ಮನ್ಸೂಖ್ ಪಟೇಲ್ ಟೆಂಡರ್ ವೋಟಿಂಗ್‍ (ಮತಪತ್ರದ ಮೂಲಕ ಮತದಾನ ಮಾಡೋದು. ಈ ಪತ್ರವನ್ನು ಚುನಾವಣಾ ಆಯೋಗ ಸೀಲ್ ಮಾಡಿ ತನ್ನ ಬಳಿ ಇಟ್ಟುಕೊಳ್ಳುತ್ತದೆ. ನ್ಯಾಯಾಲಯದ ಸೂಚನೆ ಮೇರೆಗೆ ಈ ಪತ್ರವನ್ನು ತೆರೆಯಲಾಗುತ್ತದೆ)ಗೆ ಪಟ್ಡು ಹಿಡಿದಿದ್ದಾರೆ. ಟೆಂಡರ್ ವೋಟ್ ಮಾಡಲೇ ಬೇಕು ಎಂದು ಮನ್ಸೂಖ್ ಹಠ ಮಾಡುತ್ತಿದ್ದಾರೆ.

    ಇದೇ ವೇಳೆ ಭಾನು ವಿದ್ಯಕೇಂದ್ರದಲ್ಲಿ ಲೈಟ್ ಸರಿ ಆಗಿಲ್ಲ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೋಟಿಂಗ್ ಮಿಷನ್ ಸರಿಯಾಗಿ ಕಾಣುತ್ತಿಲ್ಲ. ಯಾರಿಗೋ ಹಾಕೋ ಮತ ಯಾರಿಗೋ ಹಾಕುವಂತೆ ಆಗುತ್ತಿದೆ ಎಂದು ಮತದಾರರು ಆಕ್ರೋಶಗೊಂಡಿದ್ದಾರೆ. ಅದಷ್ಟು ಬೇಗ ಲೈಟಿಂಗ್ ವ್ಯವಸ್ಥೆ ಮಾಡಿ ಮತದಾರರು ಆಗ್ರಹಿಸಿದ್ದಾರೆ.

  • ಮಂಗ್ಳೂರಲ್ಲಿ ನಕಲಿ ಮತದಾರರ ಸೃಷ್ಠಿ- ಕಾಂಗ್ರೆಸ್ ವಿರುದ್ಧ ಬಿಜೆಪಿ ದೂರು

    ಮಂಗ್ಳೂರಲ್ಲಿ ನಕಲಿ ಮತದಾರರ ಸೃಷ್ಠಿ- ಕಾಂಗ್ರೆಸ್ ವಿರುದ್ಧ ಬಿಜೆಪಿ ದೂರು

    ಮಂಗಳೂರು: ಚುನಾವಣೆಯಲ್ಲಿ ಅಧಿಕಾರಿಗಳನ್ನು ವಂಚಿಸಿ ನಕಲಿ ಮತ ಹಾಕೋದನ್ನು ಕೇಳಿದ್ದೇವೆ. ಆದರೆ, ಇಲ್ಲಿ ರಾಜಾರೋಷವಾಗಿಯೇ ನಕಲಿ ಮತದಾರರನ್ನು ಸೃಷ್ಟಿಸಲಾಗಿದೆ.

    ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಹಾಸ್ಟೆಲ್ ಗಳಲ್ಲಿ ವಾಸವಿರುವ ಹೊರರಾಜ್ಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಮತಪಟ್ಟಿಗೆ ಸೇರಿಸಲಾಗಿದೆ. ಕೇರಳ ಮೂಲದ ಸಾವಿರಾರು ವಿದ್ಯಾರ್ಥಿಗಳು ಮಂಗಳೂರಿನಲ್ಲಿದ್ದು ತಾತ್ಕಾಲಿಕ ನೆಲೆಯಲ್ಲಿ ಹೊರಗಡೆ ಇದ್ದರೂ, ಅವರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ.

    ಈ ಪೈಕಿ ಕೆಲವರ ಹೆಸರು ಕೇರಳದಲ್ಲಿಯೂ ಚಾಲ್ತಿಯಲ್ಲಿರುವುದು ಕಂಡುಬಂದಿದೆ. ದೀನಾ ಶಾಜಿ ಎನ್ನುವ ವಿದ್ಯಾರ್ಥಿನಿ ಕೇರಳದಲ್ಲಿ ಇಲೆಕ್ಟೋರಲ್ ಡಿವಿಶನ್ (ಚುನಾವಣಾ ವಿಭಾಗ)ದಲ್ಲಿ ಹೆಸರು ಹೊಂದಿದ್ದರೂ, ಮಂಗಳೂರಿನಲ್ಲಿ ಮತಪಟ್ಟಿಗೆ ಹೆಸರು ನೋಂದಣಿ ಮಾಡಿಸಿದ್ದು, ಎರಡು ಕಡೆ ಮತದಾನದ ಹಕ್ಕು ಪಡೆದಿದ್ದು, ಅಪರಾಧವಾಗಿದೆ.

    ಮಂಗಳೂರಿನಲ್ಲಿ ಹೀಗೆ ಶೇ.350 ರಷ್ಟು ಕೇರಳ ಮೂಲದವರು ಎರಡು ಕಡೆ ಮತದಾನದ ಹಕ್ಕು ಹೊಂದಿರುವುದನ್ನು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಿಜೆಪಿ, ಈ ನಕಲಿ ಮತದಾರರ ಸೃಷ್ಟಿಯ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಹಾಲಿ ಶಾಸಕ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೊ ಸೋಲುವ ಭೀತಿಯಿಂದ ಹೊರರಾಜ್ಯದ ವಿದ್ಯಾರ್ಥಿಗಳನ್ನು ಮತದಾನದ ಪಟ್ಟಿಗೆ ಸೇರಿಸಿದ್ದಾರೆ ಅಂತಾ ಆರೋಪಿಸಿದ್ದಾರೆ.