Tag: ನಕಲಿ ಬಿಲ್

  • 42 ನಕಲಿ ಕಾಮಗಾರಿ ಬಿಲ್‌ – ED, ಲೋಕಾಯುಕ್ತಕ್ಕೆ ಮಾಜಿ ಸಚಿವ ಮುನಿರತ್ನ ದೂರು

    42 ನಕಲಿ ಕಾಮಗಾರಿ ಬಿಲ್‌ – ED, ಲೋಕಾಯುಕ್ತಕ್ಕೆ ಮಾಜಿ ಸಚಿವ ಮುನಿರತ್ನ ದೂರು

    ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ 42 ನಕಲಿ ಕಾಮಗಾರಿಯ ಬಿಲ್ ತಯಾರಾಗಿದ್ದು, 9.5 ಕೋಟಿ ರೂ. ಅವ್ಯವಹಾರದ ವಿರುದ್ಧ ಜಾರಿ ನಿರ್ದೇಶನಾಲಯ (ED) ಹಾಗೂ ಲೋಕಾಯುಕ್ತಕ್ಕೆ (Karnataka Lokayukta) ದೂರು ಕೊಟ್ಟಿರುವುದಾಗಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಮುನಿರತ್ನ (Munirathna) ಹೇಳಿದ್ದಾರೆ.

    ಈ ಸಂಬಂಧ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತನಿಖೆ ಮಾಡುವವರು ಎಲ್ಲವನ್ನೂ ತರಿಸಿಕೊಳ್ಳುತ್ತಾರೆ. ನಾನು ಒಬ್ಬ ಶಾಸಕನಾಗಿ ನನ್ನ ಗಮನಕ್ಕೆ ಬಂದಿದ್ದನ್ನ ತಿಳಿಸಿದ್ದೇನೆ. ಸರ್ಕಾರ SIT ಮೂಲಕ ತನಿಖೆಗೆ ಮುಂದಾಗಿದೆ. ನನ್ನ ಗಮನಕ್ಕೆ ಬಂದಿರೋದನ್ನ ನಾನು ಮಾಡುತ್ತಿದ್ದೇನೆಯೇ ಹೊರತು ತಪ್ಪೇನು ಮಾಡಿಲ್ಲ. ಲೋಕಾಯುಕ್ತ, ಇಡಿಗೆ ದೂರು ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಣವಾನಂದ ಶ್ರೀಗಳ ಕ್ಷಮೆ ಕೋರುವಂತೆ ಸಚಿವ ಮಧು ಬಂಗಾರಪ್ಪಗೆ ಈಡಿಗ ಮಹಾಮಂಡಳಿ ಆಗ್ರಹ

    ಇಡೀ ಕ್ಷೇತ್ರದಲ್ಲೇ ಅಭಿವೃದ್ಧಿ ಕಾಮಗಾರಿ (Development Work) ನಿಂತಿದೆ, ಬೇಕಿದ್ದರೆ ತನಿಖೆ ಮಾಡಲಿ, ಸತ್ಯ ಹೊರಬರಲಿ. ಈಗಾಗಲೇ 4 ತಿಂಗಳು ಕಳೆದಿದೆ. ಫ್ಲೈ ಓವರ್ ಕಾಮಗಾರಿ ನಿಂತಿದೆ, ಶಾಲೆಗಳ ಕಾಮಗಾರಿಯೂ ನಿಂತಿದೆ. ಮನೆ ಕಟ್ಟುವವರಿಗೆ ತೊಂದರೆಯಾಗಿದೆ, ಲಾ ಆಂಡ್ ಆರ್ಡರ್ ಸಮಸ್ಯೆಯಿದೆ. ನಡೆಯುತ್ತಿರೋ ಕಾಮಗಾರಿ ನಿಲ್ಲಿಸಿ ಏನು ಸಾಧನೆ ಮಾಡ್ತಾರೆ? ಸರ್ಕಾರದಲ್ಲಿ ಹೊಸ ಕಾಮಗಾರಿಗೆ ದುಡ್ಡಿಲ್ಲ. ಹೊಸದಾಗಿ ಮಾಡೋಕಾಗಲ್ಲ ಅಂತ ಉಪಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹಣ ಇಲ್ಲದೇ ಇದ್ರೆ ಹಿಂದಿನ ಸರ್ಕಾರದ ಕಾಮಗಾರಿಯನ್ನಾದರೂ ಮಾಡಬೇಕಲ್ಲ. ನನ್ನ ಕ್ಷೇತ್ರ ಬೆಂಗಳೂರು ಗ್ರಾಮಾಂತರದಲ್ಲಿದೆ. ಅದಕ್ಕೆ ನನ್ನ ಮೇಲೆ ಅಭಿಮಾನ, ಈ ಚುನಾವಣೆಯಲ್ಲಿ ಮತ್ತೆ ಆಯ್ಕೆಯಾಗಿದ್ದು, ತಾಯಿ ರಾಜರಾಜೇಶ್ವರಿ ತೀರ್ಪು. ಮುನಿರತ್ನ ಇಲ್ಲದೇ ಇದ್ದಿದ್ದರೆ ಈ ಕ್ಷೇತ್ರವನ್ನ ಯಾರೂ ತಿರುಗಿ ನೋಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

    ಇವತ್ತು ಐಟಿ-ಬಿಟಿಗೆ ಇಡೀ ದೇಶದಲ್ಲೇ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಆದ್ರೆ ನಮ್ಮ ರಾಜ್ಯಕ್ಕೆ ಬರಬೇಕಿರುವ ತೆರಿಗೆ ಪಕ್ಕದ ರಾಜ್ಯಕ್ಕೆ ಹೈದರಾಬಾದ್‌ಗೆ ಹೋಗ್ತಿದೆ. ಅದರ ಬಗ್ಗೆ ಗಮನ ಹರಿಸೋದು ಬಿಟ್ಟು ಬೇಡದಿರುವುದರ ಬಗ್ಗೆ ಈ ಸರ್ಕಾರ ಮಾತನಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: 12 ಲಕ್ಷ ರೂ. ಮೌಲ್ಯದ ಅಮೆರಿಕನ್ ಡೈಮಂಡ್ ಹರಳುಗಳಿಂದ ಸಿದ್ಧಗೊಂಡ ವಿಶೇಷ ವಿನಾಯಕ ಮೂರ್ತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಕಲಿ ಬಿಲ್‍ಗೆ ಸಹಿ ಮಾಡದ ಅಧಿಕಾರಿ ಮೇಲೆ ಹಲ್ಲೆ – ಪುರಸಭೆ ಸದಸ್ಯನ ಗೂಂಡಾಗಿರಿ

    ನಕಲಿ ಬಿಲ್‍ಗೆ ಸಹಿ ಮಾಡದ ಅಧಿಕಾರಿ ಮೇಲೆ ಹಲ್ಲೆ – ಪುರಸಭೆ ಸದಸ್ಯನ ಗೂಂಡಾಗಿರಿ

    ಕಲಬುರಗಿ: ನಕಲಿ ಬಿಲ್‍ಗಳಿಗೆ ಅಧಿಕಾರಿ ಸಹಿ ಮಾಡದ ಹಿನ್ನೆಲೆ ಚಿಂಚೋಳಿ ತಾಲೂಕಿನ ಪುರಸಭೆಯ ಮುಖ್ಯಾಧಿಕಾರಿ ಅಭಯ್ ಮೇಲೆ ಪುರಸಭೆಯ ಸದಸ್ಯ ಆನಂದ್, ಪುರಸಭೆ ಕಚೇರಿ ಆವರಣದಲ್ಲಿಯೇ ಹಲ್ಲೆ ಮಾಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

    ಚಿಂಚೋಳಿ ತಾಲೂಕಿನಲ್ಲಿ ಪುರಸಭೆ ಮುಖ್ಯಾಧಿಕಾರಿಯಾಗಿ ಹಲವು ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತಂದ ಅಭಯ್, ನಕಲಿ ಬಿಲ್ ಗಳಿಗೂ ಸಹ ಕಡಿವಾಣ ಹಾಕಿದ್ದಾರೆ. ಇದು ಅಲ್ಲಿನ ಕೆಲ ಪುರಸಭೆ ಸದಸ್ಯರಿಗೆ ಇದೀಗ ನುಂಗಲಾಗದ ಬಿಸಿ ತುಪ್ಪವಾಗಿದೆ. ಇದೇ ವೇಳೆ ಚಿಂಚೋಳಿ ಪುರಸಭೆಯ ಆರ್ ಪಿಐ ಪಕ್ಷದ ಪುರಸಭೆ ಸದಸ್ಯನಾದ ಆನಂದ್ ಟೈಗರ್ ಮಂಗಳವಾರ ಸಂಜೆ ತನ್ನ ಸ್ನೇಹಿತ ಶಶಿಕುಮಾರ್ ಜೊತೆ ಪುರಸಭೆಗೆ ಹೋಗಿದ್ದಾನೆ. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಅಭಯ್ ಹಾಗೂ ಆನಂದ್ ನಡುವೆ ಬಿಲ್ ಮಾಡುವ ಕುರಿತು ಮಾತಿನ ಚಕಮಕಿ ನಡೆದಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ಆನಂದ ನನ್ನ ಬಿಲ್‍ಗೆ ಸಹಿ ಮಾಡಲು ನೀಕಾರಿಸುತ್ತಿಯಾ ಎಂದು ಅಧಿಕಾರಿಗೆ ವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ.

    ಈ ಪುರಸಭೆ ಸದಸ್ಯನ ಗೂಂಡಾಗಿರಿಯ ದೃಶ್ಯ ಪುರಸಭೆ ಆವರಣದಲ್ಲಿ ಇರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪುರಸಭೆ ಸದಸ್ಯನ ಗೂಂಡಾಗಿರಿ ವಿರುದ್ಧ ಅಧಿಕಾರಿ ಅಭಯ್ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ಸರ್ಕಾರಕ್ಕೆ ಕೋಟ್ಯಂತರ ವಂಚನೆ: ಜಿಎಸ್‍ಟಿ ಕಾಯ್ದೆ ಅಡಿ ಬೆಂಗ್ಳೂರಲ್ಲಿ ಗುತ್ತಿಗೆದಾರ ಅರೆಸ್ಟ್

    ಸರ್ಕಾರಕ್ಕೆ ಕೋಟ್ಯಂತರ ವಂಚನೆ: ಜಿಎಸ್‍ಟಿ ಕಾಯ್ದೆ ಅಡಿ ಬೆಂಗ್ಳೂರಲ್ಲಿ ಗುತ್ತಿಗೆದಾರ ಅರೆಸ್ಟ್

    ಬೆಂಗಳೂರು: ನಕಲಿ ಬಿಲ್ ತಯಾರಿಸಿ ವರ್ತಕರಿಗೆ ನೀಡಿ ಸರ್ಕಾರಕ್ಕೆ ಭಾರೀ ನಷ್ಟವನ್ನು ಉಂಟು ಮಾಡಿದ್ದ ಗುತ್ತಿಗೆದಾರನನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಇಸ್ಮಾಯಿಲ್ ಬಂಧಿತ ಆರೋಪಿಯಾಗಿದ್ದು, ಸರ್ಕಾರದಿಂದ ಕಾಮಗಾರಿಗಳ ಗುತ್ತಿಗೆ ಪಡೆದುಕೊಂಡು ನಕಲಿ ಬಿಲ್ ಗಳನ್ನು ನೀಡಿ ತೆರಿಗೆ ಕಟ್ಟದೇ ಮೋಸ ಮಾಡುತ್ತಿದ್ದ ಆರೋಪದಡಿ ಆತನನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.

    ಆರೋಪಿ ಇಸ್ಮಾಯಿಲ್ ಇದುವರೆಗೂ 48 ಕೋಟಿ ರೂ. ಮೌಲ್ಯದ ನಕಲಿ ಬಿಲ್ ಗಳನ್ನು ನೀಡಿದ್ದು, ಇದರಿಂದ ಸರ್ಕಾರಕ್ಕೆ ಸುಮಾರು 9 ಕೋಟಿ ರೂ. ನಷ್ಟ ಮಾಡಿದ್ದಾನೆ. ಆರೋಪಿ ಎಆರ್ ಎಸ್ ಎಂಟರ್ಪ್ರೈಸಸ್ ಸಂಸ್ಥೆಯ ಮಾಲೀಕನಾಗಿದ್ದು, ನಕಲಿ ಬಿಲ್ ವರ್ತರಕರಿಗೆ ನೀಡುತ್ತಿದ್ದ ಖಚಿತ ಮಾಹಿತಿ ತಿಳಿದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv