Tag: ನಕಲಿ ಬಾಂಡ್

  • ಯೂಟ್ಯೂಬ್ ನೋಡಿ ನಕಲಿ ಬಾಂಡ್ ತಯಾರಿಸುತ್ತಿದ್ದ ಜಾಲ ಬೇಧಿಸಿದ ಪೊಲೀಸರು

    ಯೂಟ್ಯೂಬ್ ನೋಡಿ ನಕಲಿ ಬಾಂಡ್ ತಯಾರಿಸುತ್ತಿದ್ದ ಜಾಲ ಬೇಧಿಸಿದ ಪೊಲೀಸರು

    ದಾವಣಗೆರೆ: ದಶಕಗಳ ಕಾಲದ ಹಳೇ ಬಾಂಡ್ ಪೇಪರ್ ತಯಾರಿಸಿ ಜನರಿಗೆ ಮೋಸ ಮಾಡುತ್ತಿದ್ದ 11 ವಂಚಕರ ಜಾಲವನ್ನು ದಾವಣಗೆರೆ ಡಿಸಿಬಿ ವಿಶೇಷ ಪೊಲೀಸ್ ತಂಡ ಬೇಧಿಸಿದೆ.

    ರಾಘವೇಂದ್ರ, ಶಿವಕುಮಾರ್, ರೇವಣಸಿದ್ಧಯ್ಯ, ರಿಯಲ್ ಎಸ್ಟೇಟ್ ಉದ್ಯಮಿಗಳು. ಸತ್ಯಗೋವಿಂದರಾಜ, ಪ್ರಭು, ದ್ರಾವಿಡ, ಉಮೇಶ್, ಮಾರುತಿ, ನಂದು, ಆನಂದ್ ಸೇರಿದಂತೆ ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಮೂಲದವರು ಎಂದು ತಿಳಿದು ಬಂದಿದೆ.

    ಆರೋಪಿಗಳು ಯೂಟ್ಯೂಬ್‍ನಲ್ಲಿ ದಶಕಗಳ ಕಾಲದ ಹಿಂದೆ ಈಸ್ಟ್ ಇಂಡಿಯಾ ಕಂಪೆನಿಯ ಮುದ್ರಿಸುತ್ತಿದ್ದ ಬಾಂಡ್ ನೋಡಿಕೊಂಡು, ನಕಲಿ ಬಾಂಡ್‍ಗಳನ್ನು ತಯಾರಿಸುತ್ತಿದ್ದರು. ಅಲ್ಲದೇ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಬಾಂಡ್ ಪೇಪರ್ ಗಳಿಗೆ ಈಗಲೂ ಮಾನ್ಯತೆ ಇದೆ ಎಂದು ನಂಬಿಸಿ ಸಾರ್ವಜನಿಕರನ್ನ ಗಾಳಕ್ಕೆ ಬೀಳಿಸುತ್ತಿದ್ದರು.

    ಯಾವುದೋ ಒಂದು ಜಾಗ ಅಥವಾ ಜಮೀನಿನ ಹೆಸರಿನಲ್ಲಿ ನಕಲಿ ಬಾಂಡ್ ತಯಾರಿಸಿ, ನಂತರ ಇದು ಈಸ್ಟ್ ಇಂಡಿಯಾ ಕಂಪೆನಿಯ ಜಾಗವಾಗಿದೆ. ನಿಮಗೆ ಕಡಿಮೆ ದರದಲ್ಲಿ ಮಾರುತ್ತೇವೆ ಎಂದು ಜನರನ್ನು ನಂಬಿಸುತ್ತಿದ್ದರು. ಬಾಂಡ್ ಪೇಪರ್ ಮೇಲೆ ಮೊದಲೇ ರಂಜಕ ಹಾಕಿ, ನೀವು ಬಾಂಡ್ ಪೇಪರ್ ಗಳನ್ನು ಬಿಸಿಲಿಗೆ ತಗೆದುಕೊಂಡು ಹೋದರೆ ಸುಟ್ಟು ಹೋಗುತ್ತದೆ ಎಂದು ಹೆದರಿಸುತ್ತಿದ್ದರು.

    ಈಸ್ಟ್ ಇಂಡಿಯಾ ಕಂಪೆನಿಯ ನಕಲಿ ಆಟೋ ಫೈರ್ ಬಾಂಡ್ ಮಾರಾಟ ವೇಳೆ 11 ಮಂದಿ ವಂಚಕರನ್ನು ಡಿಸಿಬಿ ಪೊಲೀಸರ ಬಲೆಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

  • ನಕಲಿ ಬಾಂಡ್ ಮೂಲಕ ಸರ್ಕಾರಕ್ಕೆ ವಂಚನೆ- ದೂರು ದಾಖಲಾಗಿ 1 ವರ್ಷವಾದ್ರೂ ವಿಚಾರಣೆಯೂ ಇಲ್ಲ, ಅರೆಸ್ಟೂ ಇಲ್ಲ

    ನಕಲಿ ಬಾಂಡ್ ಮೂಲಕ ಸರ್ಕಾರಕ್ಕೆ ವಂಚನೆ- ದೂರು ದಾಖಲಾಗಿ 1 ವರ್ಷವಾದ್ರೂ ವಿಚಾರಣೆಯೂ ಇಲ್ಲ, ಅರೆಸ್ಟೂ ಇಲ್ಲ

    ಬಳ್ಳಾರಿ: ಕರೀಂಲಾಲ್ ತೆಲಗಿ ಜೈಲು ಪಾಲಾಗಿದ್ದ ಛಾಪಾಕಾಗದ ಹಗರಣ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇದೇ ರೀತಿಯಲ್ಲಿ ನಕಲಿ ಬಾಂಡ್ ಅಕ್ರಮ ಬಯಲಾಗಿದೆ. ವಿದ್ಯುತ್ ಸಂಪರ್ಕಕ್ಕಾಗಿ ವಿದ್ಯುತ್ ಕಂಪನಿಗಳು ಮತ್ತು ಗ್ರಾಹಕರು ಮಾಡಿಕೊಳ್ಳುವ ಬಾಂಡ್‍ಗಳನ್ನು ನಕಲಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಲಾಗಿದೆ.

    ಕಳೆದ ಮೂರು ವರ್ಷಗಳಲ್ಲಿ ಬಳ್ಳಾರಿ, ಬೆಂಗಳೂರಲ್ಲಿ 200 ರೂಪಾಯಿ ಮುಖಬೆಲೆಯ 1,440 ಅಗ್ರಿಮೆಂಟ್ ಬಾಂಡ್‍ಗಳನ್ನು ಮಾರಾಟ ಮಾಡಲಾಗಿದೆ. ಬಳ್ಳಾರಿ ವಿದ್ಯುತ್ ಗುತ್ತಿಗೆದಾರರ ಸಂಘದ ಹಿಂದಿನ ಕಾರ್ಯದರ್ಶಿ ಖಾದರ್ ಬಾಷಾ, ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಹಾಲಿ ಪ್ರಧಾನ ಕಾರ್ಯದರ್ಶಿ ಲಯನ್ ರುದ್ರೇಶ್ ಈ ದಂಧೆಯಲ್ಲಿ ಪಾಲು ಹೊಂದಿದ್ದಾರೆ ಅನ್ನೋ ಆರೋಪವಿದೆ.

    ಈ ಬಗ್ಗೆ ಒಂದು ವರ್ಷದ ಹಿಂದೆಯೇ ಅಂದರೆ ಮೇ 10ರಂದು ಬಳ್ಳಾರಿಯ ಗಾಂಧಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಇದುವರೆಗೆ ಆರೋಪಿಗಳ ವಿಚಾರಣೆ ನಡೆಸಿಲ್ಲ, ಅಕ್ರಮದಲ್ಲಿ ಭಾಗಿಯಾಗಿರೋರನ್ನು ಬಂಧಿಸಿಲ್ಲ. ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿಲ್ಲ. ನಕಲಿ ಬಾಂಡ್‍ಗಳ ಅಕ್ರಮದ ತನಿಖೆಯಲ್ಲಿ ಪೊಲೀಸರು ವಹಿಸಿರೋ ನಿರ್ಲಕ್ಷ್ಯ ನಾನಾ ಅನುಮಾನಗಳಿಗೆ ಕಾರಣವಾಗಿದೆ.