Tag: ನಕಲಿ ಪದವಿ

  • ನಕಲಿ ಪದವಿ ಪ್ರಮಾಣ ಪತ್ರ ನೀಡಿ ಮುಂಬಡ್ತಿ ಪಡೆದ ನಾಲ್ವರು ಅಧಿಕಾರಿಗಳು ವಜಾ

    ನಕಲಿ ಪದವಿ ಪ್ರಮಾಣ ಪತ್ರ ನೀಡಿ ಮುಂಬಡ್ತಿ ಪಡೆದ ನಾಲ್ವರು ಅಧಿಕಾರಿಗಳು ವಜಾ

    ಬೀದರ್: ಅಸ್ತಿತ್ವದಲ್ಲಿಯೇ ಇಲ್ಲದ ವಿವಿಯ ನಕಲಿ ಪದವಿ ಪ್ರಮಾಣ (Fake Degree Certificates) ಪತ್ರ ನೀಡಿ ಮುಂಬಡ್ತಿ ಪಡೆದ ನಾಲ್ವರು ಅಧಿಕಾರಿಗಳನ್ನು (Officer) ರಾಜ್ಯ ಸಾಂಖ್ಯಿಕ ನಿರ್ದೇಶನಾಲಯ ವಜಾಗೊಳಿಸಿದೆ.

    ಬೀದರ್ (Bidar) ಜಿಲ್ಲೆಯ ಆರೋಗ್ಯ ಇಲಾಖೆಯ ಸಹಾಯಕ ಸಾಂಖ್ಯಿಕ ಅಧಿಕಾರಿ ರಾಜ್‍ಕುಮಾರ್, ಔರಾದ್ ತಾಲೂಕು ಕಚೇರಿಯ ಸಾಂಖ್ಯಿಕ ನೀರಿಕ್ಷಕ ಅಬ್ದುಲ್ ರಬ್, ಹಾಗೂ ಭಾಲ್ಕಿ ತಾಲೂಕು ಕಚೇರಿಯ ಬಾಲಾಜಿ ಬಿರಾದಾರ ಹುದ್ದೆಯಿಂದ ವಜಾಗೊಂಡಿದ್ದಾರೆ.

    ಮುಂಬಡ್ತಿಗಾಗಿ ಅಸ್ತಿತ್ವದಲ್ಲೇ ಇಲ್ಲದ ಈಸ್ಟರ್ನ್ ಇನ್ಸ್ಟಿಟ್ಯೂಟ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಇನ್ ಮ್ಯಾನೇಜ್ಮೆಂಟ್ ಯುನಿವರ್ಸಿಟಿ ಹೆಸರಿನಲ್ಲಿ ಪದವಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಸಹಾಯಕ ಸಾಂಖ್ಯಿಕ ಅಧಿಕಾರಿಯಿಂದ ಸಹಾಯಕ ನಿರ್ದೇಶಕ ಹುದ್ದೆಗೆ ರಾಜ್‌ಕುಮಾರ್‌ ಮುಂಬಡ್ತಿಯಾಗಿದ್ದರೇ, ಅಬ್ದುಲ್ ರಬ್ ಮತ್ತು ಬಾಲಾಜಿ ಬಿರಾದಾರ ಸಾಂಖ್ಯಿಕ ನೀರಿಕ್ಷಕ ಹುದ್ದೆಯಿಂದ ಅಧಿಕಾರಿ ಹುದ್ದೆಗೆ ಮುಂಬಡ್ತಿ ಪಡೆದಿದ್ದರು. ಇದನ್ನೂ ಓದಿ: ಗುಜರಾತ್‍ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಹಳೆಯ ಪಿಂಚಣಿ ಯೋಜನೆ ಜಾರಿಗೆ: ರಾಹುಲ್ ಗಾಂಧಿ

    ಮುಂಬಡ್ತಿಗೆ ಅಧಿಕಾರಿಗಳು ನೀಡಿದ ಪದವಿ ಪ್ರಮಾಣ ಪತ್ರದ ನೈಜತೆಯನ್ನು ಪರಿಶೀಲಿಸಲು ವಿವಿಗೆ ಸಾಂಖ್ಯಿಕ ನಿರ್ದೇಶನಾಲಯವು ಪತ್ರ ಬರೆದಿತ್ತು. ಈ ವೇಳೆ ವಿವಿ ಈ ಹಿಂದೆಯೇ ಮುಚ್ಚಲಾಗಿದೆ ಎಂದು ಸಿಕ್ಕಿಂ ಸರ್ಕಾರ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬೀದರ್‌ನ ಮೂವರು ಸೇರಿದಂತೆ ಒಟ್ಟು ನಾಲ್ವರು ಅಧಿಕಾರಿಗಳನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಶಿವ ಭಕ್ತ: ಅಶೋಕ್‌ ಗೆಹ್ಲೋಟ್‌

    Live Tv
    [brid partner=56869869 player=32851 video=960834 autoplay=true]