Tag: ನಕಲಿ ಪತ್ರಕರ್ತ

  • ಡಿಸಿಪಿ ಕೈಗೆ ಸಿಕ್ಕಿಬಿದ್ದ ನಕಲಿ ಪತ್ರಕರ್ತ- ಬೈಕ್ ಸೀಜ್, ಕೇಸ್ ದಾಖಲು

    ಡಿಸಿಪಿ ಕೈಗೆ ಸಿಕ್ಕಿಬಿದ್ದ ನಕಲಿ ಪತ್ರಕರ್ತ- ಬೈಕ್ ಸೀಜ್, ಕೇಸ್ ದಾಖಲು

    ಹುಬ್ಬಳ್ಳಿ: ಲಾಕಡೌನ್ ವೇಳೆ ಬಂದ್ ಆಗಿರುವ ಟಿವಿ ಚಾನಲ್ ಐಡಿ ಕಾರ್ಡ ಬಳಸಿ ಪೊಲೀಸರನ್ನ ಯಮಾರಿಸುತ್ತಿದ್ದ ನಕಲಿ ಪತ್ರಕರ್ತನನ್ನ ಹುಬ್ಬಳ್ಳಿಯಲ್ಲಿ ಪೊಲೀಸರು ವಶಕ್ಕೆ ಪಡೆದು ಬೈಕ್ ಸೀಜ್ ಮಾಡಿದ್ದಾರೆ.

    ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ಬಳಿ  ಡಿಸಿಪಿ ರಾಮರಾಜನ್ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಇಂದು ಮುಂಜಾನೆ ಅನಗತ್ಯವಾಗಿ ಓಡಾಟ ಮಾಡುತ್ತಿದ್ದ ನಕಲಿ ಪತ್ರಕರ್ತನನ್ನು ಹಿಡಿದು ಬೈಕ್ ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ.

    ಜಾನ್ ನಿಕೋಲಸ್ ಹಲವು ವರ್ಷಗಳ ಹಿಂದೇಯೇ ಬಂದ್ ಆಗಿರುವ ಟಿವಿ ಚಾನಲ್ ಐಡಿ ಕಾರ್ಡ ತೋರಿಸಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ. ಈ ವೇಳೆ ಐಡಿ ವಶಕ್ಕೆ ಪಡೆದ ಡಿಸಿಪಿ ರಾಮರಾಜನ್ ಸ್ಥಳದಲ್ಲಿದ್ದ ಇನ್ನೂಳಿದ ಪತ್ರಕರ್ತರ ಬಳಿ ಮಾಹಿತಿ ಪಡೆದ ಡಿಸಿಪಿ ರಾಮರಾಜನ್ ನಕಲಿ ಪತ್ರಕರ್ತನ ಬೈಕ್ ಸೀಜ್ ಮಾಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸಿಬ್ಬಂದಿಗಳಿಗೆ ಆದೇಶ ನೀಡಿದ್ದಾರೆ. ಹುಬ್ಬಳ್ಳಿಯ ಉಪನಗರ ಪೊಲೀಸರು ನಕಲಿ ಪತ್ರಕರ್ತನ ಬೈಕ್ ಸೀಜ್ ಮಾಡಿ ಠಾಣೆಗೆ ಕರೆದೊಯ್ಯು ತನಿಖೆ ಮುಂದುವರೆಸಿದ್ದಾರೆ.

  • ಬೆಂಗ್ಳೂರಿನಿಂದ ಮಂಗ್ಳೂರಿನವರೆಗೂ ಬಂದು ಜೈಲು ಸೇರಿದ ಅಸಾಮಿ

    ಬೆಂಗ್ಳೂರಿನಿಂದ ಮಂಗ್ಳೂರಿನವರೆಗೂ ಬಂದು ಜೈಲು ಸೇರಿದ ಅಸಾಮಿ

    ಮಂಗಳೂರು: ಪ್ರೆಸ್ ಅಂತ ನಕಲಿ ಗುರುತಿನ ಚೀಟಿ ಅಂಟಿಸಿ ವಾಹನ ಚಲಾಯಿಸುತ್ತಿದ್ದ ಮಧ್ಯ ವಯಸ್ಕನೊಬ್ಬ ಮಂಗಳೂರಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

    ಬೆಂಗಳೂರಿನ ಹುಸೈನ್ ಅಲಿ (58) ಬಂಧಿತ ನಕಲಿ ಪತ್ರಕರ್ತ. ಕೊರೊನಾ ಭೀತಿಯಿಂದ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಯಾರು ಅನಗತ್ಯವಾಗಿ ಮನೆಯಿಂದ ಹೊರಗಡೆ ಬರುವಂತಿಲ್ಲ. ಆದರೆ ತುರ್ತು ಸೇವೆಯಲ್ಲಿ ಇರುವವರಿಗೆ, ವಿವಿಧ ಮಾಧ್ಯಮಗಳಲ್ಲಿ ವೃತ್ತಿ ಮಾಡುವವರಿಗೆ ವಿನಾಯಿತಿ ಇದೆ. ಇದನ್ನೇ ಬಂಡವಾಳ ಮಾಡಿಕೊಂಡು ಪ್ರೆಸ್ ಅಂತ ನಕಲಿ ಗುರುತಿನ ಚೀಟಿ ಅಂಟಿಸಿ ವಾಹನ ಚಲಾಯಿಸುತ್ತಿದ್ದ ಹುಸೈನ್ ಅಲಿ ಮಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.

    ಬೆಂಗಳೂರಿನ ಹುಸೈನ್ ಪ್ರೆಸ್ ಅಂತ ನಕಲಿ ಗುರುತಿನ ಚೀಟಿಯನ್ನು ಇನ್ನೋವಾ ಕಾರ್ ನಲ್ಲಿ ಅಂಟಿಸಿಕೊಂಡು ಅನುಮಾನಾಸ್ಪದ ರೀತಿಯಲ್ಲಿ ಮಂಗಳೂರಿನಲ್ಲಿ ತಿರುಗಾಟ ನಡೆಸಿದ್ದ. ಕೂಡಲೇ ಕಂಕನಾಡಿ ನಗರ ಪೊಲೀಸರ ಕಾರ್ಯಾಚರಣೆ ನಡೆಸಿದಾಗ ಹುಸೈನ್ ಯಾವುದೇ ಮಾಧ್ಯಮ ಸಂಸ್ಥೆಗೆ ಸೇರಿದವನಲ್ಲ ನಕಲಿ ಪತ್ರಕರ್ತ ಎನ್ನುವ ವಿಷಯ ಗೊತ್ತಗಿದೆ. ಹೀಗಾಗಿ ಇನ್ನೋವಾ ಕಾರು ವಶಕ್ಕೆ ಪಡೆದು ಆರೋಪಿ ಹುಸೈನ್‍ನನ್ನು ಬಂಧಿಸಿದ್ದಾರೆ.