Tag: ನಕಲಿ ನೋಟು

  • ಮೆಟ್ರೋ ನಿಲ್ದಾಣದಲ್ಲಿ 4.64 ಲಕ್ಷ ರೂ. ನಕಲಿ ನೋಟು ಪತ್ತೆ

    ಮೆಟ್ರೋ ನಿಲ್ದಾಣದಲ್ಲಿ 4.64 ಲಕ್ಷ ರೂ. ನಕಲಿ ನೋಟು ಪತ್ತೆ

    ನವದೆಹಲಿ: ಸಿಐಎಸ್‍ಎಫ್ (Central Industrial Security Force) ಅಧಿಕಾರಿಗಳು ದೆಹಲಿಯ ಕಾಶ್ಮೇರ್ ಮೆಟ್ರೋ ನಿಲ್ದಾಣದ ಗೇಟ್ ಬಳಿ 500 ರೂ. ಮುಖಬೆಲೆಯ 4,64,000 ರೂ. ಮೊತ್ತದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

    ಶನಿವಾರ ಸಂಜೆ 5.30ಕ್ಕೆ ಕಾಶ್ಮೇರ್ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 8ರಲ್ಲಿ ಅನುಮಾನಸ್ಪಾದ ಬ್ಯಾಗ್ ಪತ್ತೆಯಾಗಿತ್ತು. ಕೂಡಲೇ ನಿಲ್ದಾಣದ ಭದ್ರತಾ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಯ ಸಬ್ ಇನ್‍ಸ್ಪೆಕ್ಟರ್ ಬೀರೇಂದ್ರ ಕುಮಾರ್ ಸ್ಥಳೀಯ ಪೊಲೀಸರಿಗೆ ಮತ್ತು ಬಾಂಬ್ ನಿಷ್ಕಿಯ ತಂಡಕ್ಕೆ ಮಾಹಿತಿ ರವಾನಿಸಿದ್ದಾರೆ.

    ಬ್ಯಾಗ್ ಪತ್ತೆಯಾದ ಕೂಡಲೇ ಗೇಟ್ ನಂಬರ್ 8 ರಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬ್ಯಾಗ್ ಪರಿಶೀಲನೆ ನಡೆಸಿದಾಗ ನಕಲಿ ನೋಟುಗಳ ಕಂತೆ ಪತ್ತೆಯಾಗಿದೆ. ನಕಲಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮೆಟ್ರೋ ನಿಲ್ದಾಣದ ಮತ್ತು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

    ಇಂದು ಸಿಐಎಸ್‍ಎಫ್ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದ್ದು, ಬ್ಯಾಗಿನಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳು ದೊರೆತಿಲ್ಲ. ಬ್ಯಾಗಿನಲ್ಲಿ 500 ರೂ. ಮುಖಬೆಲೆಯ 4.64 ಲಕ್ಷ ರೂ. ನಕಲಿ ನೋಟು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದೆ.

  • ಲಿಕ್ವಿಡ್ ಹಾಕಿದ್ರೆ ನಕಿಲಿ ನೋಟು ಅಸಲಿಯಾಗುತಂತೆ..!

    ಲಿಕ್ವಿಡ್ ಹಾಕಿದ್ರೆ ನಕಿಲಿ ನೋಟು ಅಸಲಿಯಾಗುತಂತೆ..!

    – ಖೋಟಾ ನೋಟು ವಂಚಕರ ಜಾಲ ಪತ್ತೆ

    ಬಾಗಲಕೋಟೆ: ಜನರನ್ನು ನಂಬಿಸಿ ಕಪ್ಪು ಕಾಗದಕ್ಕೆ ಲಿಕ್ವಿಡ್ ಹಾಕಿದ್ರೆ ನೈಜ ನೋಟಾಗಿ ಬದಲಾಗುತ್ತವೆ ಎಂದು ಮೋಸ ಮಾಡುತ್ತಿದ್ದ ವಂಚಕರ ಜಾಲವನ್ನು ಜಿಲ್ಲೆಯ ಸಿಇಎನ್ ಪೊಲೀಸರು ಕಾರ್ಯಾಚರಣೆ ಮಾಡಿ ಪತ್ತೆ ಮಾಡಿದ್ದಾರೆ.

    ಸೋಮಶೇಖರ್ ಹಳ್ಳೂರ, ಮಲ್ಲಿಕಾರ್ಜುನ ತೋರಗಲ್, ಈರಣ್ಣ ಹಾದಿಮನಿ ಬಂಧಿತ ವಂಚಕರು. ಈ ಮೂವರ ಇನ್ನೋರ್ವ ಸೇರಿ ನೋಟಿನಾಕಾರದ ಕಪ್ಪು ಕಾಗದವನ್ನು ಜನರಿಗೆ ನೀಡಿ ಇದಕ್ಕೆ ನಾವು ಕೊಡುವ ಲಿಕ್ವಿಡ್ ಹಾಕಿದ್ರೆ ನಿಜವಾದ ನೋಟು ಆಗುತ್ತೆ ಎಂದು ವಂಚನೆ ಮಾಡುತ್ತಿದ್ದರು. ಅಲ್ಲದೆ 500 ಹಾಗೂ 2000 ಮುಖಬೆಲೆಯ ನೋಟ್‍ಗಳಾಗುತ್ತವೆ ಎಂದು ಜನರನ್ನು ವಂಚಿಸುತ್ತಿದ್ದರು. ಆರೋಪಿಗಳಲ್ಲಿ ಮೂವರು ನಕಲಿ ನೋಟ್ ವಂಚಕರನ್ನು ಪೊಲೀಸರು ಕಾರ್ಯಚರಣೆ ಮಾಡಿ ಬಂಧಿಸಿದ್ದು, ಓರ್ವ ಆರೋಪಿ ಪರಾರಿಯಾಗಿದ್ದಾನೆ.

    ಬಂಧಿತ ಮೂವರು ಗುಳೇದಗುಡ್ಡ ಪಟ್ಟಣದವರು ಎಂದು ಗುರುತಿಸಲಾಗಿದ್ದು, ಮರಿಯಪ್ಪ ಮಾದರ ಎಂಬ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಗಳು ಜನರಿಗೆ ಕಪ್ಪು ನಕಲಿ ನೋಟ್ ನೀಡಿ ಹಣ ಪಡೆದು ವಂಚಿಸುವ ಪ್ರಯತ್ನದಲ್ಲಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಇಎನ್ ಪೊಲೀಸರು ಗುಳೇದಗುಡ್ಡ ಪಟ್ಟಣದ ಶಿಕ್ಷಕರ ಕಾಲೋನಿಯಲ್ಲಿ ನಡೆಯುತ್ತಿದ್ದ ದಂದೆಗೆ ಬ್ರೇಕ್ ಹಾಕಿದ್ದಾರೆ. ಆರೋಪಿಗಳ ಬಳಿ ಇದ್ದ 2 ಸಾವಿರ ರೂ. ಮುಖಬೆಲೆಯ ಎರಡು ಖೋಟಾ ನೋಟನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಈ ಘಟನೆ ಕುರಿತು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಲ್ಲಿ 7 ಲಕ್ಷ ರೂ. ಅಧಿಕ ಮೌಲ್ಯದ ಮೌಲ್ಯದ ಖೋಟಾನೋಟುಗಳು ಪತ್ತೆ!

    ಬೆಂಗ್ಳೂರಲ್ಲಿ 7 ಲಕ್ಷ ರೂ. ಅಧಿಕ ಮೌಲ್ಯದ ಮೌಲ್ಯದ ಖೋಟಾನೋಟುಗಳು ಪತ್ತೆ!

    ಸಾಂದರ್ಭಿಕ ಚಿತ್ರ

    ಬೆಂಗಳೂರು: ಖಚಿತ ಮಾಹಿತಿ ಮೇರೆಗೆ ಮುಂಬೈನ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ)ಯ ಅಧಿಕಾರಿಗಳು ನಗರದ ಎರಡು ಕಡೆ ದಾಳಿ ನಡೆಸಿ ಸುಮಾರು 7 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

    ಶ್ರೀರಾಮಪುರ ಹಾಗೂ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಆಲೂರಿನಲ್ಲಿ ಖಚಿತ ಮಾಹಿತಿ ಮೇರೆಗೆ ಮುಂಬೈನ ಎನ್‍ಐಎ ಹಾಗೂ ಸ್ಥಳೀಯ ಪೊಲೀಸರು ಇಬ್ಬರು ಆರೋಪಿಗಳ ಮೇಲೆ ದಾಳಿ ಮಾಡಿ ಸುಮಾರು 7 ಲಕ್ಷ ರೂಪಾಯಿ ಮೌಲ್ಯದ 2,000 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಸಾಜಿದ್ ಅಲಿ, ಎಂ.ಜಿ. ರಾಜು ಹಾಗೂ ಗಂಗಾಧರ್ ಕೋಲ್ಕರ್ ಬಂಧಿತ ಆರೋಪಿಗಳಾಗಿದ್ದು, ಇವರು ಬಾಂಗ್ಲಾದೇಶದಿಂದ ಕಳ್ಳಸಾಗಣೆ ಮೂಲಕ ನಕಲಿ ನೋಟುಗಳನ್ನು ತಮ್ಮ ನಿವಾಸಗಳಲ್ಲಿ ಶೇಖರಿಸಿಟ್ಟುಕೊಂಡಿದ್ದರು ಎಂದು ಎನ್‍ಐಎ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆ ಸಂಬಂಧ ಶ್ರೀರಾಮಪುರ ಹಾಗೂ ಮಾನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 7ಕೋಟಿ ರೂ. ಮೌಲ್ಯದ ನಕಲಿ ನೋಟು ಪತ್ತೆ- ಓರ್ವನ ಬಂಧನ

    ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 7ಕೋಟಿ ರೂ. ಮೌಲ್ಯದ ನಕಲಿ ನೋಟು ಪತ್ತೆ- ಓರ್ವನ ಬಂಧನ

    ಬೆಳಗಾವಿ: ಚುನಾವಣೆ ಮೇಳೆ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 7 ಕೋಟಿ ರೂ.ಮೌಲ್ಯದ ನಕಲಿ ನೋಟುಗಳನ್ನು ಜಿಲ್ಲೆಯಲ್ಲಿ ವಶಕ್ಕೆ ಪಡೆಯಲಾಗಿದೆ.

    ವಿಶ್ವೇಶ್ವರಯ್ಯ ನಗರದ ಪಿಡಬ್ಲೂಡಿ ಹಾಪಾಳು ಬಿದ್ದ ವಸತಿ ಗೃಹದಲ್ಲಿ ಪತ್ತೆಯಾದ ನಕಲಿ ನೋಟುಗಳು ಪತ್ತೆಯಾಗಿದ್ದು, ಸದ್ಯ ಆರೋಪಿ ವಿಜಯಪುರ ಮೂಲದ ಅಜೀತಕುಮಾರ್ ನಿಡೋಣಿ(35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ಎರಡು ಸಾವಿರ ಹಾಗೂ ಐನೂರು ಮುಖ ಬೆಲೆಯ ನಕಲಿ ನೋಟುಗಳನ್ನು ಸಂಗ್ರಹ ಮಾಡಲಾಗಿತ್ತು. ಇದರ ಖಚಿತ ಮಾಹಿತಿ ಪಡೆದಿದ್ದ ಚುನಾವಣಾಧಿಕಾರಿಗಳು ಇಂದು ದಾಳಿ ನಡೆಸಿ ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

    ಕಲರ್ ಪ್ರಿಂಟಿಂಗ್ ಮಷಿನ್‍ನಲ್ಲಿ ಬಿಳಿ ಕಾಗದದ ಮೇಲೆ ಪ್ರಿಂಟ್ ಮಾಡಿರುವ ನೋಟುಗಳು, ಜೊತೆಗೆ ರದ್ದಾದ ಒಂದು ಸಾವಿರ ಮುಖ ಬೆಲೆಯ ನೋಟುಗಳು ಹಾಗೂ ಎರಡು ಸಾವಿರ ನೋಟಿನ ಅಳತೆಯ ಕಟ್ ಮಾಡಿರುವ ಬಿಳಿ ಕಾಗದ ಬಂಡಲ್‍ಗಳು ಪತ್ತೆಯಾಗಿವೆ.

    ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಚುನಾವಣೆ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಓಡಾಡ್ತಿವೆ 2000ರೂ. ಮುಖಬೆಲೆಯ ನಕಲಿ ನೋಟು!

    ಚುನಾವಣೆ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಓಡಾಡ್ತಿವೆ 2000ರೂ. ಮುಖಬೆಲೆಯ ನಕಲಿ ನೋಟು!

    ಕೊಪ್ಪಳ: ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ 2000 ರೂ. ಮುಖಬೆಲೆಯ ನಕಲಿ ನೋಟು ಓಡಾಡುತ್ತಿವೆ. ಈ ನಕಲಿ ನೋಟುಗಳು ದಿನವೆಲ್ಲ ದುಡಿದ ಕೂಲಿ ಕಾರ್ಮಿಕರ ಕೈ ಸೇರುತ್ತಿವೆ.

    ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ 2000 ರೂ. ಮುಖಬೆಲೆಯ ಪಿಂಕ್ ನೋಟ್ ಓಡಾಡುತ್ತಿವೆ. ನಗರದ 22ನೇ ವಾರ್ಡ್ ನಿವಾಸಿಯೊಬ್ಬರು ಗಾರೆ ಕೆಲಸ ಮಾಡಿದ ಕಾರ್ಮಿಕರಿಗೆ ವೇತನ ನೀಡುವ ವೇಳೆ 2000ರೂ. ಮುಖ ಬೆಲೆಯ ಖೋಟಾ ನೋಟು ಪತ್ತೆಯಾಗಿದೆ. ಥೇಟ್ ಆರ್ ಬಿಐ ಮುದ್ರಿಸಿರುವ ಮಾದರಿಯಲ್ಲಿರುವ ಈ ನೋಟಿನ ಮಧ್ಯದಲ್ಲಿರುವ ಬಿಳಿ ಬಣ್ಣದ ಜಾಗದಲ್ಲಿ ಗಾಂಧೀಜಿ ಭಾವಚಿತ್ರದಲ್ಲಿ ವ್ಯತ್ಯಾಸ ಕಂಡುಬಂದಿದೆ.

    ಅನುಮಾನಗೊಂಡ ಸ್ಥಳೀಯರು ಕೂಡಲೇ ಪರಿಶೀಲನೆ ನೆಡೆಸಿದಾಗ 2 ಸಾವಿರ ಮುಖಬೆಲೆಯ ನೋಟು ನಕಲಿ ಎಂದು ದೃಢಪಡಿಸಿದ್ದಾರೆ. ಹೊಸ ನೋಟು ಮುದ್ರಣಕ್ಕೆ ಬಳಸಿರುವ ನಾನಾ ರೀತಿಯ ಬಣ್ಣ ನೋಟಿನ ಗಾತ್ರ, ವಿನ್ಯಾಸ, ಸೀರಿಯಲ್ ನಂಬರ್, ಅಂಕಿ, ಸಂಖ್ಯೆ, ಆರ್ ಬಿಐ, ಗೌವರ್ನರ್ ರುಜು ಭದ್ರತಾ ಧಾರ ಮಂಗಳಯಾನ ಚಿತ್ರ, ಮೈಕ್ರೋ ಲೇಟರ್ಸ್ ಸೇರಿದಂತೆ ಇತರೆ ಮಾಹಿತಿಗಳು ಯಥಾವತ್ತಾಗಿವೆ.

    ಆದರೆ ಸೂರ್ಯನ ಕಿರಣದ ಬೆಳಕಿಗೆ ನೋಟು ಹಿಡಿದಾಗ ಗಾಂಧೀಜಿ ಭಾವಚಿತ್ರ ಮುದ್ರಣದಲ್ಲಿ ವ್ಯತ್ಯಾಸ ಕಂಡು ಬರುವುದು. ಬಿಟ್ಟರೆ ಉಳಿದಂತೆ ಪಿಂಕ್ ನೋಟನ್ನು ನಾಚಿಸುವಂತೆ ಇದೆ. ಏನೇ ಆಗಲಿ ಹೊಸ 2000 ರೂ. ನೋಟ್ ಜನರಲ್ಲಿ ಗೊಂದಲ ಮೂಡಿಸಿರುವುದಂತೂ ಸತ್ಯ.

  • ನಡಿಗೆಯಿಂದ ಸಿಕ್ಕಿಬಿದ್ದ- ಶೂನಲ್ಲಿ 4 ಲಕ್ಷ ರೂ. ನಕಲಿ ನೋಟು ಸಾಗಿಸ್ತಿದ್ದ ವ್ಯಕ್ತಿಯ ಬಂಧನ

    ನಡಿಗೆಯಿಂದ ಸಿಕ್ಕಿಬಿದ್ದ- ಶೂನಲ್ಲಿ 4 ಲಕ್ಷ ರೂ. ನಕಲಿ ನೋಟು ಸಾಗಿಸ್ತಿದ್ದ ವ್ಯಕ್ತಿಯ ಬಂಧನ

    ಕೋಲ್ಕತ್ತಾ: ಶೂ ನ ಅಡಿಭಾಗದಲ್ಲಿ 2,000 ರೂ. ಮುಖಬೆಲೆಯ ಸುಮಾರು 4 ಲಕ್ಷ ರೂ. ನಕಲಿ ನೋಟುಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ವ್ಯಕ್ತಿಯನ್ನು ವಾಸಿಮ್ ಅಕ್ರಮ್ ಎಂದು ಗುರುತಿಸಲಾಗಿದ್ದು, ಈತನನ್ನು ಕೋಲ್ಕತ್ತಾ ಪೊಲೀಸರು ತಡೆದು ಪರಿಶೀಲಿಸಿದಾಗ ನಕಲಿ ನೋಟುಗಳನ್ನ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಗುರುವಾರದಂದು ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಖಚಿತ ಮಾಹಿತಿ ಆಧರಿಸಿ ಕೋಲ್ಕತ್ತಾ ಪೊಲೀಸ್‍ನ ಸ್ಪೆಷಲ್ ಟಾಸ್ಕ್ ಫೋರ್ಸ್ ಅಧಿಕಾರಿಗಳು ಬಿನಿಯಾಪುಕುರ್ ಬಳಿ ವಾಸಿಮ್‍ನನ್ನು ತಡೆದು ಆತ ಕೊಂಡೊಯ್ಯುತ್ತಿದ್ದ ಬ್ಯಾಗ್ ತಪಾಸಣೆ ಮಾಡಿದ್ದರು. ಮೊದಲಿಗೆ ಹೆಚ್ಚಿನದ್ದೇನೂ ಪತ್ತೆಯಾಗಿರಲಿಲ್ಲ. ಕೇವಲ 3 ಜೊತೆ ಹೊಸ ಶೂಗಳು ಬ್ಯಾಗ್‍ನಲ್ಲಿದ್ದವು.

    ನಡಿಗೆಯಿಂದ ಸಿಕ್ಕಿಬಿದ್ದ: ವಾಸಿಮ್ ತನ್ನ ಬ್ಯಾಗ್‍ನಲ್ಲಿದ್ದ ಶೂನಂತೇಯೇ ಮತ್ತೊಂದು ಶೂ ಧರಿಸಿ ವಿಚಿತ್ರವಾಗಿ ನಡೆಯುತ್ತಿದ್ದ. ಇದನ್ನು ಗಮನಿಸಿ ತಪಾಸಣೆ ಮಾಡಿದಾಗ ನಕಲಿ ನೋಟುಗಳು ಇದ್ದಿದ್ದು ಪತ್ತೆಯಾಯ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 2 ಸಾವಿರ ರೂ. ಮುಖಬೆಲೆಯ 4 ಲಕ್ಷ ರೂ ಮೊತ್ತದ ಹಣವನ್ನ ಬ್ಯಾಗ್‍ನಲ್ಲಿದ್ದ ಶೂನ ಸೋಲ್‍ನಲ್ಲಿ ಹಾಗೂ ತಾನು ಧರಿಸಿದ್ದ ಶೂನಲ್ಲಿ ಅಡಗಿಸಿದ್ದ ಎಂದು ಅವರು ಹೇಳಿದ್ದಾರೆ.

    ಈತ ನಕಲಿ ನೋಟುಗಳನ್ನ ಮುಂಬೈಗೆ ಸಾಗಾಟ ಮಾಡಲು ವಾಸಿಮ್ ಪ್ಲಾನ್ ಮಾಡಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿರುವುದಾಗಿ ಅವರು ತಿಳಿಸಿದ್ದಾರೆ.

    ಮಾಲ್ದಾ ಜಿಲ್ಲೆಯ ಬೈಶ್ನಾಬ್‍ನಗರ್ ನಿವಾಸಿಗಿರೋ ವಾಸಿಮ್ ನಕಲಿ ನೋಟು ಜಾಲದಲ್ಲಿ ಕೆಲಸ ಮಾಡುತ್ತಿದ್ದಾನಾ ಎಂಬುದರ ಬಗ್ಗೆ ಎಸ್‍ಟಿಎಫ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

  • ಎಟಿಎಂ ನಲ್ಲಿ ಬಂತು 2 ಸಾವಿರ ರೂ. ಮುಖಬೆಲೆಯ ನಕಲಿ ನೋಟು

    ಎಟಿಎಂ ನಲ್ಲಿ ಬಂತು 2 ಸಾವಿರ ರೂ. ಮುಖಬೆಲೆಯ ನಕಲಿ ನೋಟು

    ಬೆಂಗಳೂರು: ನಗರದ ಲಕ್ಕಸಂದ್ರದ ಬಳಿಯ ಆ್ಯಕ್ಸಿಸ್ ಬ್ಯಾಂಕ್ ಶಾಖೆಯ ಎಟಿಎಂ ನಲ್ಲಿ ಸಾರ್ವಜನಿಕರೊಬ್ಬರಿಗೆ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟು ದೊರೆತಿದೆ.

    ಲಕ್ಕಸಂದ್ರದ ಎರಡನೇ ಕ್ರಾಸ್‍ನಲ್ಲಿರುವ ಎಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ದಯಾನಂದ್ ರೆಡ್ಡಿ ಎಂಬ ಯುವಕ ಆರು ಸಾವಿರ ರೂಪಾಯಿ ಡ್ರಾ ಮಾಡಿದ್ದಾರೆ. ಬಳಿಕ ಪೆಟ್ರೋಲ್ ಹಾಕಿಸಲು ಬಂಕ್ ಗೆ ಹೋದಾಗ ಅಲ್ಲಿ ಖೋಟಾನೋಟು ಎಂಬುದು ಗೊತ್ತಾಗಿದೆ. ಈ ನೋಟಿನ ಮೇಲೆ ನಂಬರ್ ಇರುವ ಜಾಗದಲ್ಲಿ ಇಂಗ್ಲಿಷ್ ಅಕ್ಷರಗಳಿಂದ `ದಿಸ್ ಈಸ್ ಶೂಟಿಂಗ್ ಪರ್ಪಸ್ ಓನ್ಲಿ’ ಎಂದು ಪ್ರಿಂಟ್ ಆಗಿದೆ.

    ನಕಲಿ ನೋಟು ಹಿಡಿದು ದಯಾನಂದ್ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಆದರೆ ಪೊಲೀಸರು ಒಂದೇ ನೋಟು ಪತ್ತೆಯಾಗಿರೋದು ಎಂದು ಕೇಸ್ ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ. ಇನ್ನೂ ಬ್ಯಾಂಕ್ ಸಿಬ್ಬಂದಿ ಕೇಳಲು ಹೋದ್ರೆ ಯಾರೂ ಕೂಡ ಸರಿಯಾಗಿ ಪ್ರತಿಕ್ರಿಯಿಸಿಲ್ಲ ಎಂದು ದಯಾನಂದ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

     

  • ಇಂಗ್ಲೆಂಡ್‍ನಲ್ಲಿ ನಕಲಿ ಮಾಡೋಕೆ ಸಾಧ್ಯವೇ ಇಲ್ಲದ ನೋಟು ಬಿಡುಗಡೆ!

    ಇಂಗ್ಲೆಂಡ್‍ನಲ್ಲಿ ನಕಲಿ ಮಾಡೋಕೆ ಸಾಧ್ಯವೇ ಇಲ್ಲದ ನೋಟು ಬಿಡುಗಡೆ!

    ಲಂಡನ್: ಪ್ರಪಂಚದಲ್ಲಿ ಏನೇ ವಸ್ತುಗಳು ಬಂದ್ರೂ ನಕಲಿ ಆಗಿಬಿಡುತ್ತವೆ. ನಮ್ಮ ದೇಶದಲ್ಲಿ ಈ ಖೋಟಾ ನೋಟುಗಳೇ ದೊಡ್ಡ ಸಮಸ್ಯೆಯಾಗಿದೆ. ಆದರೆ ಬ್ರಿಟನ್‍ನಲ್ಲಿ ಜಗತ್ತಿನಲ್ಲೇ ನಕಲಿ ಮಾಡಲು ಸಾಧ್ಯವೇ ಇಲ್ಲದ ನೋಟನ್ನು ಹೊರ ತರಲಾಗಿದೆ.

    19ನೇ ಶತಮಾನದ ಕಾದಂಬರಿಗಾರ್ತಿ ಜೇನ್ ಆಸ್ಟಿನ್ ಮುಖದೊಂದಿಗೆ ಪ್ರಿಂಟ್ ಆಗಿರುವ 10 ಹಾಗೂ 5 ಪೌಂಡ್ ಮೌಲ್ಯದ ಹೊಸ ನೋಟ್‍ನ್ನು ಹೊರ ತರಲಾಗಿದೆ.

    ಏನಿದರ ವಿಶೇಷತೆ?
    ಪಾಲಿಮರ್‍ನಿಂದ ಮಾಡಿರುವ ವಿಶೇಷ ನೋಟು ಇದಾಗಿದ್ದು ಪೇಪರ್‍ಗಿಂತ 2.5 ಪಟ್ಟು ಹೆಚ್ಚು ಬಾಳಿಕೆಗೆ ಯೋಗ್ಯವಾಗಿದೆ. ಎಡಬದಿಯ ಮೇಲ್ಭಾಗದಲ್ಲಿ ದೃಷ್ಟಿಹೀನರಿಗೆ ವಿಶೇಷ ಸ್ಪರ್ಶ ಇದರಲ್ಲಿದ್ದು ರಾಜಕಿರೀಟ ಮತ್ತು 10 ಎಂಬ ಎರಡು ಹಾಲೋಗ್ರಾಮ್ ಇದೆ. ಅಷ್ಟೇ ಅಲ್ಲದೇ ನೋಟನ್ನು ಓರೆ ಹಿಡಿದರೆ ಪೌಂಡ್ಸ್ ಎಂದು ಬದಲಾಗುತ್ತದೆ.

    2ನೇ ರಾಣಿ ಎಲಿಜಬೆತ್ ಪಾರದರ್ಶಕ ಭಾವಚಿತ್ರ (ಮುಂಭಾಗದಲ್ಲಿ ಬಂಗಾರ, ಹಿಂಭಾಗದಲ್ಲಿ ಬೆಳ್ಳಿ ಲೇಪಿತ) ಇದೆ. ರಾಣಿ ಚಿತ್ರದ ಕೆಳಗೆ ಮೈಕ್ರೋಸ್ಕೋಪ್‍ನಿಂದ ನೋಡಿದರೆ ಅಕ್ಷರ ಮತ್ತು ಸಂಖ್ಯೆ ಕಾಣುತ್ತದೆ. ಈ ನೋಟು ಓರೆ ಮಾಡಿದರೆ ಹಕ್ಕಿಗರಿ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ.

  • ನಕಲಿ ನೋಟು ಕೊಟ್ಟಿದ್ದಕ್ಕೆ ಪ್ರಶ್ನಿಸಿದ ಗ್ರಾಹಕನ ಮೇಲೆ ಹಲ್ಲೆಗೆ ಮುಂದಾದ ಅಂಗಡಿ ಮಾಲೀಕ!

    ನಕಲಿ ನೋಟು ಕೊಟ್ಟಿದ್ದಕ್ಕೆ ಪ್ರಶ್ನಿಸಿದ ಗ್ರಾಹಕನ ಮೇಲೆ ಹಲ್ಲೆಗೆ ಮುಂದಾದ ಅಂಗಡಿ ಮಾಲೀಕ!

    ತುಮಕೂರು: ಜಿಲ್ಲೆಯ ಪಾವಗಡದಲಲ್ಲಿ 100 ರೂ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ.

    ವೈಎನ್ ಹೊಸಕೋಟೆಯ ನ್ಯೂ ಪ್ರಾವಿಜನ್ ಸ್ಟೋರ್ಸ್ ನಲ್ಲಿ ಈ ನೋಟುಗಳು ಪತ್ತೆಯಾಗಿದ್ದು, ಅಂಗಡಿ ಮಾಲೀಕ ಧಾದಪೀರ್ ಬಳಿ ಹಲವಾರು ನಕಲಿ ನೋಟುಗಳು ಇರುವುದು ಕಂಡುಬಂದಿದೆ.

    ಈ ಬಗ್ಗೆ ಈಗಾಗಲೇ ಹಲವು ಬಾರಿ ದೂರು ದಾಖಲಾಗಿದ್ದರೂ ಮತ್ತೆ ಆತನ ಅಂಗಡಿಯಿಂದಲೇ ಖೊಟಾ ನೋಟುಗಳು ಚಲಾವಣೆಯಾಗುತ್ತಿರುವುದರಿಂದ ಇದೀಗ ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ.

    ಗ್ರಾಹಕ ನಾಗೇಶ್ ಎಂಬವರಿಗೆ ಅಂಗಡಿ ಮಾಲೀಕ ದಾಧಪಿರ್ 2000 ರೂ ಗೆ ಚಿಲ್ಲರೆ ನೀಡುವಾಗ 100ರ ಮುಖಬೆಲೆಯ 9 ನಕಲಿ ನೋಟು ನೀಡಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ದಾದಫಿರ್ ಮತ್ತು ಆತನ ಸಹಚರರು ನಾಗೇಶ್ ಮತ್ತು ಸ್ನೇಹಿತರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

    ಈ ಬಗ್ಗೆ ವೈ ಎನ್ ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಕಲಿ ನೋಟು ಕೊಟ್ಟು 1 ಕೆಜಿ ಚಿನ್ನ ಖರೀದಿಸಿದ ಖದೀಮರು

    ನಕಲಿ ನೋಟು ಕೊಟ್ಟು 1 ಕೆಜಿ ಚಿನ್ನ ಖರೀದಿಸಿದ ಖದೀಮರು

    ಬೆಂಗಳೂರು: ಮಗಳ ಮದುವೆಗೆ ಎಂದು ಹೇಳಿ ನಕಲಿ ನೋಟುಗಳನ್ನ ನೀಡಿ 1 ಕೆಜಿಯಷ್ಟು ಚಿನ್ನ ಖರೀದಿ ಮಾಡಿದ್ದ ಮೂವರು ಆರೋಪಿಗಳನ್ನ ಹಲಸೂರು ಗೇಟ್  ಪೊಲೀಸರು ಬಂಧಿಸಿದ್ದಾರೆ.

    ವಿನೋದ್, ಹೇಮಂತ್ ಹಾಗೂ ಹರೀಶ್ ಕುಮಾರ್ ಬಂಧಿತ ಆರೋಪಿಗಳು. ಈ ಮೂವರು 32 ಲಕ್ಷ ರೂ. ನಕಲಿ ನೋಟು ನೀಡಿ ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿಸಿದ್ದರು.

    ಆರೋಪಿಯೊಬ್ಬ ತಾನು ಚಿಕ್ಕಮಗಳೂರು ಮೂಲದ ಜುಂಗರಾಜ್ ಎಂದು ಪರಿಚಯ ಮಾಡಿಕೊಂಡಿದ್ದ. ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನದಂಗಡಿ ಇಟ್ಟುಕೊಂಡಿದ್ದ ದಿನೇಶ್ ಕುಮಾರ್ ಅವರೊಂದಿಗೆ ಚಿನ್ನ ಕೊಟ್ಟು ಹಣ ಪಡೆಯುವಂತೆ ಫೋನ್ ಮೂಲಕವೇ ವ್ಯವಹಾರ ನಡೆಸಿದ್ದ.

    ಕಾರಿನಲ್ಲಿ ಬಂದು 2 ಸಾವಿರ ರೂ. ಮುಖಬೆಲೆಯ 32 ಲಕ್ಷ ರೂ. ಖೋಟಾ ನೋಟು ನೀಡಿ ಆರೋಪಿಗಳು ಚಿನ್ನದ ಗಟ್ಟಿ ಖರೀದಿಸಿದ್ದಾರೆ. ಅಲ್ಲದೆ ಕೋಟಕ್ ಮಹಿಂದ್ರ ಬ್ಯಾಂಕ್ ಸೀಲನ್ನು ದುರ್ಬಳಕೆ ಮಾಡಿದ್ದಾರೆ.

    https://www.facebook.com/publictv/videos/1682564341761311/