Tag: ನಕಲಿ ನೋಟು

  • ಆರ್‌ಬಿಐ ಪರಿಶೀಲನೆ ವೇಳೆ ನಕಲಿ ನೋಟುಗಳು ಪತ್ತೆ

    ಆರ್‌ಬಿಐ ಪರಿಶೀಲನೆ ವೇಳೆ ನಕಲಿ ನೋಟುಗಳು ಪತ್ತೆ

    ಲಕ್ನೋ: ನೋಟುಗಳ ಪರಿಶೀಲನೆ ವೇಳೆ 454 ನಕಲಿ ನೋಟುಗಳು ಪತ್ತೆಯಾಗಿರುವ ಬಗ್ಗೆ ಆರ್‌ಬಿಐ ಸಹಾಯಕ ವ್ಯವಸ್ಥಾಪಕ ಸತ್ಯವೀರ್ ಸಿಂಗ್ ದೂರು ದಾಖಲಿಸಿದ್ದಾರೆ.

    ಲಕ್ನೋದ ಆಡಿಟ್‌ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಚೆಸ್ಟ್‌ನಲ್ಲಿ 47,710 ರೂ. ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿವೆ. ನೋಟುಗಳ ಪರಿಶೀಲನೆಯ ವೇಳೆ 454 ನಕಲಿ ನೋಟುಗಳು ಪತ್ತೆಯಾಗಿರುವ ಬಗ್ಗೆ ಆರ್‌ಬಿಐ ವ್ಯವಸ್ಥಾಪಕ ಸತ್ಯವೀರ್ ಸಿಂಗ್ ದೂರು ದಾಖಲಿಸಿಕೊಂಡಿದ್ದಾರೆ.

    ನಕಲಿ ನೋಟುಗಳಲ್ಲಿ 10 ರೂ.ಯ 1 ನೋಟು, 50 ರೂ.ಯ 18 ನೋಟುಗಳು, 100 ರೂ.ಯ 443 ನೋಟುಗಳು, 500 ರೂ. ಹಾಗೂ 2,000 ರೂ.ಯ ಒಂದೊಂದು ನಕಲಿ ನೋಟುಗಳು ಪತ್ತೆಯಾಗಿವೆ ಎಂದು ಸತ್ಯವೀರ್ ಸಿಂಗ್ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇಂಟರ್​ನೆಟ್ ಇಲ್ಲದೆ ಆನ್‍ಲೈನ್‍ನಲ್ಲಿ ಹಣ ಕಳುಹಿಸಿ!

    RBI

    ನಕಲಿ ನೋಟುಗಳ ಮುದ್ರಣ ಹಾಗೂ ಚಲಾವಣೆ ಗಂಭೀರ ಅಪರಾಧ. ಪ್ರಕರಣ ದಾಖಲಾದ ಬಳಿಕ ತನಿಖೆಗಾಗಿ ಅವುಗಳನ್ನು ಕರೆನ್ಸಿ ಪ್ರಿಂಟಿಂಗ್ ಪ್ರೆಸ್ ಅಥವಾ ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಬಹುದು ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರದ ಶೆ.50ರಷ್ಟು ಸಿಬ್ಬಂದಿಗೆ ವರ್ಕ್ ಫ್ರಂ ಹೋಂ

    ನಕಲಿ ನೋಟುಗಳನ್ನು ಅಸಲಿ ನೋಟುಗಳ ಮೌಲ್ಯದಲ್ಲಿ ಬಳಸಿರುವ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ದಿನೇಶ್ ಚಂದ್ರ ಮಿಶ್ರಾ ತಿಳಿಸಿದ್ದಾರೆ. ಕಳೆದವರ್ಷವೂ ಆರ್‌ಬಿಐ ಪರಿಶೀಲನೆ ವೇಳೆ 20 ಹಾಗೂ 100 ರೂ. ಮುಖಬೆಲೆಯ 44 ನಕಲಿ ನೋಟುಗಳು ಪತ್ತೆಯಾಗಿದ್ದವು.

  • ಧಾರವಾಡದಲ್ಲಿ ನಕಲಿ ನೋಟಿನ ಹಾವಳಿ- ದೀಪಾವಳಿಯಲ್ಲೇ ತಂದು ಮಾರುಕಟ್ಟೆಯಲ್ಲಿ ಚಲಾವಣೆ

    ಧಾರವಾಡದಲ್ಲಿ ನಕಲಿ ನೋಟಿನ ಹಾವಳಿ- ದೀಪಾವಳಿಯಲ್ಲೇ ತಂದು ಮಾರುಕಟ್ಟೆಯಲ್ಲಿ ಚಲಾವಣೆ

    ಧಾರವಾಡ: ನಗರದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ದೀಪಾವಳಿಯಲ್ಲೇ ಸಂದರ್ಭವನ್ನೇ ಬಳಸಿಕೊಂಡು ಮಾರುಕಟ್ಟೆಯಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.

    ನಗರದ ಎಲೆಕ್ಟ್ರಿಕ್ ವ್ಯಾಪಾರಿಯೊಬ್ಬರಿಗೆ 500 ಮುಖಬೆಲೆಯ ಎರಡು ನಕಲಿ ನೋಟುಗಳನ್ನು ಕೊಟ್ಟು ಯಾಮಾರಿಸಿರುವ ಘಟನೆ ನಡೆದಿದೆ. ವ್ಯಾಪಾರಸ್ಥರಿಗೆ ಯಾರು ಈ ನೋಟುಗಳನ್ನು ಕೊಟ್ಟಿದ್ದಾರೆ? ಇದೇ ರೀತಿ ಬೇರೆ ಎಲ್ಲೆಲ್ಲೆ ನಕಲಿ ನೋಟು ಚಲಾವಣೆ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಇದನ್ನೂ ಓದಿ: ಗ್ಯಾಸ್, ಅಡುಗೆ ಎಣ್ಣೆ ದರ ಕಡಿಮೆ ಆಗ್ಬೇಕಿದೆ: ಡಿ.ಕೆ ಶಿವಕುಮಾರ್

    ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಗಳಲ್ಲಿ ವ್ಯಾಪಾರ ಚಟುವಟಿಕೆ ಜೋರಾಗಿರುತ್ತದೆ. ಖರೀದಿಗೆ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿರುತ್ತಾರೆ. ಈ ವೇಳೆ ನೋಟುಗಳು ಅಸಲಿಯೋ ಅಥವಾ ನಕಲಿಯೋ ಎಂದು ವ್ಯಾಪಾರಸ್ಥರು ಪರಿಶೀಲಿಸಿ ನೋಡುವ ವ್ಯವಧಾನ ಇರುವುದಿಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡು ಕೆಲವರು ನಕಲಿ ನೋಟುಗಳ ಚಲಾವಣೆ ಮಾಡುತ್ತಾರೆ. ಇದನ್ನೂ ಓದಿ: ಪುನೀತ್ ಮಾಡುತ್ತಿದ್ದ ಕೆಲಸಕ್ಕೆ ನಾನೂ ಕೈ ಜೋಡಿಸುತ್ತೇನೆ: ರೇಣುಕಾಚಾರ್ಯ

    ನಕಲಿ ನೋಟುಗಳ ಚಲಾವಣೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

  • ನಕಲಿ ನೋಟುಗಳನ್ನು ಜೆರಾಕ್ಸ್ ಮಾಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್

    ನಕಲಿ ನೋಟುಗಳನ್ನು ಜೆರಾಕ್ಸ್ ಮಾಡಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್

    – 6 ಕೋಟಿ ಮೌಲ್ಯದ ನಕಲಿ ನೋಟುಗಳು ವಶಕ್ಕೆ

    ಬೆಂಗಳೂರು: ನಿಷೇಧಗೊಂಡಿರುವ ನೋಟುಗಳ ಬದಲಾವಣೆ ಮಾಡುತ್ತೇವೆಂದು ಬ್ಲಾಕ್ ಅಂಡ್ ವೈಟ್ ದಂಧೆ ನಡೆಸುತ್ತಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 6 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಮೊದಲಿಗೆ 35 ಲಕ್ಷ ಅಸಲಿ ನೋಟುಗಳನ್ನು ತಂದು ಬ್ಲಾಕ್ ಅಂಡ್ ವೈಟ್ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, 1 ಸಾವಿರ 500 ಮುಖಬೆಲೆಯ 70 ಲಕ್ಷ ಅಸಲಿ ನೋಟುಗಳ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಮತ್ತಷ್ಟು ಹಣ ಕಾಸರಗೋಡಿನಲ್ಲಿದೆ ಎಂದು ಬಹಿರಂಗಪಡಿಸಿದ್ದಾರೆ. ಹೀಗಾಗಿ ಕಾಸರಗೋಡಿಗೆ ಹೊರಟ ಪೊಲೀಸರಿಗೆ 6 ಕೋಟಿ ಜೆರಾಕ್ಸ್ ನೋಟುಗಳು ಪತ್ತೆಯಾಗಿದೆ. ಜೊತೆಗೆ 16 ಮೂಟೆ ಪೇಪರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಮಾರ್ಚ್ ಅಂತ್ಯದ ವೇಳೆಗೆ ಹುಬ್ಬಳ್ಳಿ ಸೇರಿ 13 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಸಿದ್ಧತೆ

    ಈ ಪ್ರಕರಣ ಕುರಿತಂತೆ ಮಂಜುನಾಥ್, ದಯಾನಂದ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಿ ಗೋವಿಂದಪುರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇವರಲ್ಲಿ ಮತ್ತೋರ್ವ ಆರೋಪಿ ವೆಂಕಟೇಶ್ ಬಿಬಿಎಂಪಿಯಲ್ಲಿ ಸಬ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: BJP, RSS ವಿರುದ್ಧ ಹೋರಾಡಲು ಪಕ್ಷದಲ್ಲಿ ಏಕತೆ ಇರಬೇಕು: ಸೋನಿಯಾ ಗಾಂಧಿ

  • ನಕಲಿ ನೋಟು ದಂಧೆ – ಜನರಿಗೆ ಪಂಗನಾಮ ಹಾಕುತ್ತಿದ್ದ ವಂಚಕರ ಬಂಧನ

    ನಕಲಿ ನೋಟು ದಂಧೆ – ಜನರಿಗೆ ಪಂಗನಾಮ ಹಾಕುತ್ತಿದ್ದ ವಂಚಕರ ಬಂಧನ

    ಚಿಕ್ಕೋಡಿ: ನಕಲಿ ನೋಟು ಮುದ್ರಣ ಇಟ್ಟುಕೊಂಡು ಜನರಿಗೆ ವಂಚನೆ ಮಾಡುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.

    ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹಣ ಡಬಲ್, ತ್ರಿಬಲ್ ಮಾಡುವುದಾಗಿ ಜನರಿಗೆ ವಂಚನೆ ಮಾಡುತ್ತಿದ್ದ, ಖದೀಮರನ್ನು ಬಂಧಿಸಿದ್ದಾರೆ. ಗೋಕಾಕ ತಾಲೂಕಿನ ಘಟಪ್ರಭಾ ಮೂಲದ ಆಸೀಫ್ ಬಳೆಗಾರ್(26), ಗಜಾನನ ನಾಯಕ(31), ಸಲೀಲ್ ಸೈಯದ್(25) ಬಂಧಿತರು. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

    ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ರಮೇಶ್ ಘೋರ್ಪಡೆ ಎಂಬವರಿಗೆ ಈ ಖದೀಮರು ಲಕ್ಷಾಂತರ ರೂ. ಹಣ ಪಂಗನಾಮ ಹಾಕಿದ್ದರು. ವಂಚನೆಗೆ ಒಳಗಾದ ರಮೇಶ್ ಅವರು ರಾಯಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಮೂವರು ವಂಚಕರನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳಿಂದ ನೋಟು ಮುದ್ರಣ ಯಂತ್ರ ಸೇರಿ ಕಟ್ಟಿಂಗ್ ಬಾಕ್ಸ್, ವಿದ್ಯುತ್ ಸಂಬಂಧಿತ ವಸ್ತುಗಳು, ಬಿಳಿ ಕಾಗದ ಪತ್ರಗಳು, 59,000 ಸಾವಿರ ನಗದು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ

  • ನಕಲಿ ನೋಟು ಮುದ್ರಿಸುತ್ತಿದ್ದವರು ಪೊಲೀಸರ ಬಲೆಗೆ- 1 ಲಕ್ಷದ 37 ಸಾವಿರ ರೂ. ವಶಕ್ಕೆ

    ನಕಲಿ ನೋಟು ಮುದ್ರಿಸುತ್ತಿದ್ದವರು ಪೊಲೀಸರ ಬಲೆಗೆ- 1 ಲಕ್ಷದ 37 ಸಾವಿರ ರೂ. ವಶಕ್ಕೆ

    ಬೀದರ್: 500 ಮುಖ ಬೆಲೆಯ ನಕಲಿ ನೋಟು ಮುದ್ರಿಸುತ್ತಿದ್ದ ಖೋಟಾ ನೋಟು ಜಾಲವನ್ನು ಬೀದರ್ ಪೊಲೀಸರು ಬೇಧಿಸಿ ಭರ್ಜರಿ ಕಾರ್ಯಚರಣೆ ಮಾಡಿದ್ದಾರೆ.

    ರಾಕೇಶ್ ಹಾಗೂ ಶರತ್‍ಕುಮಾರ ಬಂಧಿತ ಆರೋಪಿಗಳಾಗಿದ್ದಾರೆ. 500 ಮುಖ ಬೆಲೆಯ ನಕಲಿ ನೋಟು ಮುದ್ರಿಸುತ್ತಿದ್ದರು. ಇದೇ ಪ್ರಕರಣಕ್ಕೆ ಸಂಬಂದಿಸಿದಂತೆ ಈ ಹಿಂದೆ ನಾಲ್ಕು ಜನ ಅರೋಪಿಗಳಾದ ಅಶೋಕ್, ಸೈಯದ್ ಇಬ್ರಾಹಿಂ, ಉಮಾಕಾಂತ್,ಜವದ ಬಂಧನವಾಗಿತ್ತು. ಇಂದು ಇಬ್ಬರನ್ನು ಬಂಧನ ಮಾಡುವ ಮೂಲಕ ಒಟ್ಟು ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹದಗೆಟ್ಟ ರಾಜ್ಯ ಹೆದ್ದಾರಿ ರಸ್ತೆ- ಸಸಿ ನೆಟ್ಟು ಆಕ್ರೋಶ

    500 ಮುಖ ಬೆಲೆಯ ಒಟ್ಟು 274 ನಕಲಿ ನೋಟುಗಳು ಹಾಗೂ ನೋಟುಗಳನ್ನು ತಯಾರಿಸಲು ಉಪಯೋಗಿಸಿದ ಲ್ಯಾಪಟಾಪ್, ಪ್ರಿಂಟರ್ ಹಾಗೂ ಇತರೆ ಸಾಮಗ್ರಿಗಳು ಬೀದರ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದೂರು ದಾಖಲಾಗಿದ್ದು, ಇಂದು ಎಸ್‍ಪಿ ನಾಗೇಶ್ ಡಿಎಲ್ ಮಾರ್ಗದರ್ಶನದಲ್ಲಿ ಗಾಂಧಿಗಂಜ್ ಪೊಲೀಸರು ನಕಲಿ ನೋಟು ಜಾಲ ಬೇದಿಸಿ ಭರ್ಜರಿ ಕಾರ್ಯಚರಣೆ ಮಾಡಿದ್ದಾರೆ.

  • ಕೊರೊನಾ ನಷ್ಟ ಸರಿದೂಗಿಸಲು ನಕಲಿ ನೋಟ್ ಪ್ರಿಂಟ್ ಮಾಡಿದ್ರು

    ಕೊರೊನಾ ನಷ್ಟ ಸರಿದೂಗಿಸಲು ನಕಲಿ ನೋಟ್ ಪ್ರಿಂಟ್ ಮಾಡಿದ್ರು

    – ಹಳೆ ಟಿವಿ, ರೆಡಿಯೋಗಳಲ್ಲಿಯ ರೆಡ್ ಮರ್ಕ್ಯೂರಿ ದಂಧೆ

    ಚಿಕ್ಕಮಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸೂರತ್ಕಲ್ ಹಾಗೂ ಉಜಿರೆ ಭಾಗದಿಂದ ಕಾರಿನಲ್ಲಿ 500 ಮುಖ ಬೆಲೆಯ ಐದು ಲಕ್ಷದ ಐವತ್ತು ಸಾವಿರ ನಕಲಿ ನೋಟುಗಳನ್ನ ಸಾಗಿಸುವಾಗ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರು ಸಮೀಪದ ಹಾಂದಿಯಲ್ಲಿ ನಡೆದಿದೆ. ಅಷ್ಟು ದೊಡ್ಡ ಮೊತ್ತದ ಹಣ ಸಿಕ್ಕಿದೆ ಅನ್ನೋದಕ್ಕಿಂತ ಆ ಹಣ ಎಲ್ಲಿಗೆ ಹೋಗುತ್ತಿತ್ತು ಅನ್ನೋದು ಅದಕ್ಕಿಂತ ಆಶ್ಚರ್ಯ ತಂದಿದೆ.

    ಕಾರಿನಲ್ಲಿದ್ದ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ರೆಡ್ ಮಕ್ರ್ಯೂರಿ ಕೊಳ್ಳಲು ಹೋಗುತ್ತಿರುವುದಾಗಿ ಆರೋಪಿಗಳು ಹೇಳಿದ್ದಾರೆ. ಚಿಕ್ಕಮಗಳೂರಿನ ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಹಳೇ ಟಿವಿ, ರೆಡಿಯೋಗಳಲ್ಲಿ ರೆಡ್ ಮರ್ಕ್ಯೂರಿ ಲಿಕ್ವಿಡ್‍ಗಾಗಿ ಆರೋಪಿಗಳು ಈ ನಕಲಿ ಹಣದೊಂದಿಗೆ ಚಿಕ್ಕಮಗಳೂರಿಗೆ ಬರುತ್ತಿದ್ದರು. ಆರೋಪಿ ಸಂತೋಷ್ ನಿಮಗೆ ರೆಡ್ ಮರ್ಕ್ಯೂರಿ ಕೊಡಿಸೋ ಜವಾಬ್ದಾರಿ ನನ್ನದು, ಅದು ತುಂಬಾ ದುಬಾರಿ, ಹಾಗಾಗಿ ಹಣ ಅರೆಂಜ್ ಮಾಡಿ ಎಂದು ಮತ್ತೊಬ್ಬ ಆರೋಪಿ ನಜೀರ್ ಗೆ ಹೇಳಿದ್ದ.

    ನಜೀರ್ ಕಸ್ಟಮರ್ ರೂಪದ ಮತ್ತೊಬ್ಬ ಆರೋಪಿ ಜುಬೇದ್‍ನಿಂದ ಹಣ ತರಲು ಮುಂದಾಗುತ್ತಾರೆ. ಜುಬೇದ್ ಮೇಲೆ ಮಂಗಳೂರಿನಲ್ಲಿ ಹಲವು ಕೇಸ್‍ಗಳು ಇವೆ. ಹತ್ತು ಲಕ್ಷಕ್ಕೆ ರೆಡ್ ಮರ್ಕ್ಯೂರಿ ಕೊಳ್ಳಲು ಸಿದ್ಧರಾಗಿ, ಹಣದೊಂದಿಗೆ ಚಿಕ್ಕಮಗಳೂರಿಗೆ ಬರುವಾಗ ಆಲ್ದೂರು ಬಳಿ ಪೊಲೀಸರ ಅತಿಥಿಯಾಗಿದ್ದಾರೆ. ಆದರೆ ರೆಡ್ ಮರ್ಕ್ಯೂರಿಗಾಗಿ ಚಿಕ್ಕಮಗಳೂರಿಗೆ ಬರುವಾಗ ಜುಬೇದ್, ರಿಯಾಜ್ ಕಾರನ್ನ ಹಿಂದಿರುಗಿಸಿಕೊಂಡು ನಾಪತ್ತೆಯಾಗುತ್ತಾರೆ. ಕೋಟಾ ನೋಟಿನೊಂದಿಗೆ ಮತ್ತೊಂದು ಕಾರಿನಲ್ಲಿ ಬರುತ್ತಿದ್ದ ನಜೀರ್ ಹಾಗೂ ಸಂತೋಷ್ ಐದು ಲಕ್ಷದ ಐವತ್ತು ಸಾವಿರ ನಕಲಿ 500 ಮುಖಬೆಲೆಯ ನೋಟಿನೊಂದಿಗೆ ಸಿಕ್ಕಿ ಬಿದ್ದಿದ್ದಾರೆ. ರೆಡ್ ಮರ್ಕ್ಯೂರಿಯಿಂದ ಬಹಳ ಉಪಯೋಗವಿದೆ ಎಂದು ನಂಬಿ ಬಹಳ ಜನ ಹಣ ಕಳೆದುಕೊಂಡಿದ್ದಾರೆ. ಚಿಕ್ಕಮಗಳೂರಿಗೆ ಬನ್ನಿ ರೆಡ್ ಮರ್ಕ್ಯೂರಿ ಕೊಡಿಸುತ್ತೇನೆ ಎಂದಿದ್ದ ಸಂತೋಷ್ ಸೇರಿದಂತೆ ರೆಡ್ ಮರ್ಕ್ಯೂರಿಗಾಗಿ ಬರುತ್ತಿದ್ದ ನಜೀರ್, ರಿಯಾಜ್, ಜುಬೇದ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

    ಇತ್ತ ಮೂಡಿಗೆರೆಯಲ್ಲಿ ಅಪ್ಪನ ಜೊತೆ ಕಾಫಿ-ಮೆಣಸು-ಏಲಕ್ಕಿ ವ್ಯಾಪಾರ ಮಾಡುತ್ತಿದ್ದ ಪ್ರಮೋದ್ ಹಾಗೂ ತರಕಾರಿ ವ್ಯಾಪಾರ ಮಾಡುತ್ತಿದ್ದ ಶಕೀಲ್ ಎಂಬವರಿಗೆ ಕೊರೊನಾದಿಂದ ತೀವ್ರ ನಷ್ಟವಾಗಿತ್ತು. ಹಾಗಾಗಿ ನಕಲಿ ನೋಟ್ ಪ್ರಿಂಟ್ ಮಾಡಿ ಜನರನ್ನ ಯಾಮರಿಸಿ ನಷ್ಟ ಸರಿದೂಗಿಸಲು ಸಜ್ಜಾಗಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರೋ ಮೂಡಿಗೆರೆ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದು, ಬಂಧಿತರಿಂದ ನೋಟ್ ಪ್ರಿಂಟ್ ಮಾಡುತ್ತಿದ್ದ ಕಲರ್ ಜೆರಾಕ್ಸ್ ಮೆಷಿನ್ ಸೇರಿದಂತೆ ಇತರೆ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಇವರು ಅದಾಗಲೇ ಸುಮಾರು ಎ4 ಸೈಜಿನ 350 ಶೀಟ್‍ಗಳಲ್ಲಿ 2,000 ಮುಖಬೆಲೆಯ ನೋಟುಗಳನ್ನ ನಕಲಿಯಾಗಿ ಮುದ್ರಿಸಿ ಇಟ್ಟಿದ್ದರು. ಅವರನ್ನೂ ವಶಕ್ಕೆ ಪಡೆದಿರೋ ಪೊಲೀಸರು ಇಬ್ಬರ ಮೇಲೂ ಪ್ರಕರಣ ದಾಖಲಿಸಿದ್ದಾರೆ.

  • ನಕಲಿ ನೋಟು ಎಸೆದು ಮುಸುಕುಧಾರಿ ಪರಾರಿ- ಉಡುಪಿಯಲ್ಲಿ ಟೆನ್ಷನ್

    ನಕಲಿ ನೋಟು ಎಸೆದು ಮುಸುಕುಧಾರಿ ಪರಾರಿ- ಉಡುಪಿಯಲ್ಲಿ ಟೆನ್ಷನ್

    ಉಡುಪಿ: ಮುಸುಕುಧಾರಿ ವ್ಯಕ್ತಿ ನಕಲಿ ನೋಟುಗಳನ್ನು ಎಸೆದು ಉಡುಪಿಯ ರೆಸಿಡೆನ್ಶಿಯಲ್ ಏರಿಯಾದಲ್ಲಿ ಪರಾರಿಯಾಗಿದ್ದಾನೆ. ಮನೆಯೊಳಗೆ ಲಾಕ್ ಆಗಿದ್ದ ಜನರಲ್ಲಿ ಇದು ಆತಂಕ ಮೂಡಿಸಿದೆ.

    ದೇಶಕ್ಕೆ ಕೊರೊನಾ ಸೋಂಕು ಅಪ್ಪಳಿಸಿದ ಮೇಲೆ ಇಡೀ ಭಾರತಕ್ಕೆ ಭಾರತವೇ ಬೆಚ್ಚಿಬಿದ್ದಿದೆ. ಕಳೆದ ಇಪ್ಪತ್ತು ದಿವಸಗಳಿಂದ ಉಡುಪಿ ಸಂಪೂರ್ಣ ಲಾಕ್ ಡೌನ್ ಆಗಿತ್ತು. ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯ ಗಡಿಯಲ್ಲಿ ಡಬಲ್ ಲಾಕ್ ಡೌನ್ ವಿಧಿಸಲಾಗಿತ್ತು .

    ಉಡುಪಿ ನಗರದ ವಾದಿರಾಜ ರಸ್ತೆಯಲ್ಲಿ ಇಂದು ಕಿಡಿಗೇಡಿ ನೋಟ್ ಎಸೆದು ಹೋಗುತ್ತಿದ್ದಂತೆ ಇದು ಕೊರೊನಾ ಹರಡಿಸುವ ದುಷ್ಕೃತ್ಯ ಅಂತ ಪೊಲೀಸರಿಗೆ ದೂರು ನೀಡಲಾಗಿದೆ. ಸುತ್ತಮುತ್ತ ಸಾವಿರಾರು ಮನೆಗಳಿದ್ದು ಜನ ಆತಂಕದಿಂದ ಹೊರಬರುವಂತಾಯಿತು. ಕ್ಷಣ ಮಾತ್ರದಲ್ಲಿ ಈ ವಿಚಾರ ಇಡೀ ಏರಿಯಾಗೆ ಪಸರಿಸಿತು. ವಾಟ್ಸಪ್ ಗ್ರೂಪ್ ಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.

    ಸ್ಥಳಕ್ಕೆ ಉಡುಪಿ ನಗರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು ಸುತ್ತಮುತ್ತ ಇರುವ ಕಮರ್ಷಿಯಲ್ ಕಾಂಪ್ಲೆಕ್ಸ್, ಮನೆಯ ಮುಂಭಾಗದ ಸಿಸಿಟಿವಿಯ ದೃಶ್ಯಾವಳಿಗಳನ್ನು ಜಾಲಾಡಿದರು. ಒಂದು ಮನೆಯ ಸಿಸಿಟಿವಿಯಲ್ಲಿ ನೋಟು ಎಸೆದ ದುಷ್ಕರ್ಮಿಯ ಚಹರೆ ಪತ್ತೆಯಾಗಿದೆ. ಸಿಸಿಟಿವಿ ವಿಡಿಯೋ ಸಿಕ್ಕಿದ್ದು, ಪೊಲೀಸರು ಆತನ ಜಾಡು ಹಿಡಿದಿದ್ದಾರೆ.

    ಸ್ಥಳೀಯ ಗೃಹಿಣಿ ಸ್ವರ್ಣ ಪೈ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾವೆಲ್ಲಾ ಮನೆಯ ಒಳಗೆ ಕುಟುಂಬ ಸಮೇತರಾಗಿ ಇದ್ದೆವು. ಈ ಸಂದರ್ಭ ಯಾರೋ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೇಪರ್ ನೋಟುಗಳನ್ನು ಎಸೆದು ಹೋಗಿದ್ದಾನೆ. ಅದರಲ್ಲಿ ಕೊರೊನಾ ಸೋಂಕು ಇದೆ ಎಂಬ ಬಗ್ಗೆ ಮಾಹಿತಿ ಬಂತು. ಹೊರಗೆ ಬಂದು ನೋಡುವಾಗ ಸುತ್ತಮುತ್ತಲಿನ ಕೆಲವರೆಲ್ಲ ಜಮಾಯಿಸಿದ್ದರು. ಸ್ವಲ್ಪ ಹೊತ್ತು ಬಿಟ್ಟು ಪೊಲೀಸರು ಕೂಡ ಬಂದರು ಎಂದು ಹೇಳಿದರು.

  • ಮೇಲೆ ಗರಿಗರಿ ನೋಟು ಒಳಗೆ ಖಾಲಿ ಪೇಪರ್ – 23 ಲಕ್ಷ ರೂ. ನಕಲಿ ನೋಟು ಪತ್ತೆ

    ಮೇಲೆ ಗರಿಗರಿ ನೋಟು ಒಳಗೆ ಖಾಲಿ ಪೇಪರ್ – 23 ಲಕ್ಷ ರೂ. ನಕಲಿ ನೋಟು ಪತ್ತೆ

    ಬೆಳಗಾವಿ(ಚಿಕ್ಕೋಡಿ): ನಕಲಿ ನೋಟು ಸರಬರಾಜು ಮಾಡುತ್ತಿದ್ದ 5 ಅಂತರಾಜ್ಯ ಕಳ್ಳರನ್ನು ಬೆಳಗಾವಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.

    ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಕ್ರಾಸ್ ಬಳಿ ಎರಡು ಪ್ರತ್ಯೇಕ ವಾಹನಗಳಲ್ಲಿ 23.88 ಲಕ್ಷ ರೂ. ನಕಲಿ ಮತ್ತು 12 ಸಾವಿರ ರೂ. ಮೌಲ್ಯದ ಅಸಲಿ ನೋಟು ಸಾಗಿಸುವ ಸಂದರ್ಭದಲ್ಲಿ ದಾಳಿ ನಡೆಸಿದ ಡಿಸಿಐಬಿ ಹಾಗೂ ಸಂಕೇಶ್ವರ ಠಾಣೆಯ ಪೊಲೀಸರು ಐವರು ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಹಾರಾಷ್ಟ್ರದ ಕೊಲ್ಲಾಪುರದ ಅಮರ್ ಶಂಕರ್ ಅಂಬೇಕರ(28), ಕಾಗಲ್ ತಾಲೂಕಿನ ಬೆಲ್ಲೋಳಿಬಾಚಲಿ ಗ್ರಾಮದ ದೈರ್ಯಶೀಲ ಬಾಬುರಾವ್ ಪಾಟೀಲ್(42), ಬಾಬಾಸೋ ವಸಂತ್ ಪಾಟೀಲ್(31), ನಿಪ್ಪಾಣಿ ಪಟ್ಟಣದ ರಾಜೇಶ್ ಮಾರುತಿ ಮೋಹಿತೆ(48) ಮತ್ತು ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಅಶೋಕ್ ಶಂಕರ್ ತೇಲಿ(50) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ನೋಟಿನ ಬಂಡಲ್ ಮೇಲೆ ಕೆಳಗೆ 500ರೂ. ಮುಖ ಬೆಲೆಯ ನೋಟು ಇಟ್ಟು ಮಧ್ಯದಲ್ಲಿ ನೋಟಿನ ಮಾದರಿಯ ಬಿಳಿ ಹಾಳೆಗಳನ್ನು ಇಡಲಾಗಿದೆ.

    ಇಂತಹ 12 ಬಂಡಲ್ ನಕಲಿ ನೋಟು ಪತ್ತೆಯಾಗಿವೆ. ಪ್ರತಿ ಬಂಡಲ್ ನಲ್ಲಿ 2 ಲಕ್ಷ ರೂ. ನಕಲಿ ನೋಟುಗಳಿವೆ ಎಂದು ನಂಬುವ ಹಾಗೆ ಮಾಡಿ 1 ಲಕ್ಷ ರೂ. ಅಸಲಿ ನೋಟು ಕೊಟ್ಟರೆ 3 ಲಕ್ಷ ರೂ. ನಕಲಿ ನೋಟು ಕೊಡುವುದಾಗಿ ನಂಬಿಸಿ, ಮೋಸ ಮಾಡುವ ಪ್ರಯತ್ನ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ನಕಲಿ ನೋಟಿನ ಬಂಡಲ್‍ನ ಎರಡೂ ಬದಿಗೆ ಅಸಲಿ ನೋಟು ಕಾಣುವ ರೀತಿಯಲ್ಲಿ ಬಣ್ಣ ಮಾಡಿ ಪ್ಲಾಸ್ಟಿಕ್‍ನಿಂದ ಸುತ್ತಿಡಲಾಗಿತ್ತು. ಒಟ್ಟು 12 ಸಾವಿರ ರೂ. ಅಸಲಿ ನೋಟು ಮತ್ತು 23.88 ಲಕ್ಷ ರೂ. ನಕಲಿ ನೋಟನ್ನು ಪೊಲೀಸರಿಂದ ವಶ ಪಡಿಸಿಕೊಳ್ಳಲಾಗಿದೆ.

    ದಾಳಿ ಸಂದರ್ಭದಲ್ಲಿ ನೋಟುಗಳ ಜೊತೆಗೆ ಸಾಗಾಣಿಕೆಗೆ ಬಳಸುತ್ತಿದ್ದ ಬುಲೇರೋ ಜೀಪ್, ಸುಜುಕಿ ಸ್ವಿಫ್ಟ್ ಕಾರು ಹಾಗೂ 5 ವಿವಿಧ ಕಂಪನಿಯ ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಜನರಿಗೆ ಖೋಟಾ ನೋಟು ನೀಡ್ತಿದ್ದ ಗ್ಯಾಂಗ್ ಅಂದರ್

    ಜನರಿಗೆ ಖೋಟಾ ನೋಟು ನೀಡ್ತಿದ್ದ ಗ್ಯಾಂಗ್ ಅಂದರ್

    ದಾವಣಗೆರೆ: ಮುಗ್ಧ ಜನರಿಗೆ ಖೋಟಾ ನೋಟು ನೀಡಿ ವಂಚಿಸುತ್ತಿದ್ದ ಗ್ಯಾಂಗ್ ಒಂದನ್ನು ಬಂಧಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಕಳೆದ ಭಾನುವಾರ ದಾವಣಗೆರೆಯ ಲೋಲೇಶ್ವರ ಜಾತ್ರೆಯ ಸಮಯದಲ್ಲಿ ಚಲಾವಣೆ ಮಾಡುತ್ತಿದ್ದ ಸಂದರ್ಭ ಸಾರ್ವಜನಿಕರಾದ ಮಲ್ಲಿಕಾರ್ಜುನ, ಕುರುವಪ್ಪ ಹಾಗೂ ಸೋಮಶೇಖರಪ್ಪ,  ಆರೋಪಿ ಹನುಮಂತಪ್ಪನನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದರು.

    ಆರೋಪಿಗಳು ಹೂವಿನ ಹಡಗಲಿ, ಕೊಟ್ಟೂರು ಹಾಗೂ ಸುತ್ತಮುತ್ತಲ ಪ್ರದೇಶಗಳ ಜಾತ್ರೆ ಹಾಗೂ ಸಂತೆಗಳಲ್ಲಿ ನೋಟುಗಳು ಚಲಾವಣೆ ಮಾಡಿರುವ ಅನುಮಾನವಿದೆ. ಖೋಟಾ ನೋಟುಗಳನ್ನು ಅಮಾಯಕ ರೈತರಿಗೆ ನೀಡುತ್ತಿದ್ದರು. ಜಾನುವಾರಗಳನ್ನು ಖರೀದಿ ಮಾಡಿ ನಂತರ ಖೋಟಾ ನೋಟುಗಳನ್ನು ನೀಡುತ್ತಿದ್ದರು.

    ಖೋಟಾ ನೋಟು ಚಲಾವಣೆ ಮಾಡುವವರಿಗೆ ರೈತರು ಹಾಗೂ ಜಾನುವಾರು ವ್ಯಾಪಾರ ಮಾಡುವವರೇ ಟಾರ್ಗೆಟ್ ಆಗಿದ್ದು, ಆರೋಪಿಗಳು ನಕಲಿ ನೋಟುಗಳನ್ನು ಇಟ್ಟುಕೊಂಡು ವ್ಯಾಪಾರಕ್ಕೆ ಹೋಗುತ್ತಾರೆ. ರೈತರು ಕೇಳಿದ ಬೆಲೆಗೆ ಜಾನುವಾರಗಳನ್ನು ಕೊಂಡು ನಕಲಿ ನೋಟುಗಳನ್ನು ನೀಡಿ ಹೋಗುತ್ತಾರೆ. ಬೆಂಗಳೂರು, ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಹನುಮಂತಪ್ಪ, ಪುಟ್ಟಪ್ಪ ಎಂಬವರ ಮೇಲೆ ಪ್ರಕರಣಗಳು ದಾಖಲಾಗಿವೆ. ಈ ಗ್ಯಾಂಗ್ ನಲ್ಲಿ ಸಾಕಷ್ಟು ಜನರಿದ್ದು ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಆರೋಪಿಗಳು ರೈತರಿಗೆ ನೀಡುವ ನೋಟುಗಳಲ್ಲಿ ಗಾಂಧಿ ಚಿತ್ರ ಸರಿಯಾಗಿ ಕಾಣಿಸುವುದಿಲ್ಲ. ಅಲ್ಲದೆ ನೋಟು ತೀರಾ ತೆಳುವಾಗಿ ಇರುತ್ತವೆ. ಹಳ್ಳಿಯ ಮುಗ್ಧ ಜನರನ್ನು ಟಾರ್ಗೆಟ್ ಮಾಡಿ ಹೆಚ್ಚು ಹಣ ನೀಡಿ ಖೋಟಾ ನೋಟುಗಳನ್ನು ಜನರಿಗೆ ನೀಡಿ ಮೋಸ ಮಾಡುತ್ತಿದ್ದರು. ಇನ್ನು ಮುಂದೆ ರೈತರಿಗೆ ಹಾಗೂ ಮುಗ್ಧ ಜನರು ವ್ಯಾಪಾರ ಮಾಡುವಾಗ ನೋಟುಗಳನ್ನು ಪರಿಶೀಲನೆ ಮಾಡಿ ತೆಗೆದುಕೊಳ್ಳಬೇಕು, ಏನಾದರೂ ಅನುಮಾನಗಳು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕು ಎಂದು ಜಿಲ್ಲಾ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

  • 6.4 ಕೋಟಿ ಮೌಲ್ಯದ ಪಿಂಕ್ ನೋಟ್ ಪತ್ತೆ- ಇದೇನಾ ನಿಮ್ಮ ನೋಟ್ ಬ್ಯಾನ್ ಎಂದ ಕಾಂಗ್ರೆಸ್

    6.4 ಕೋಟಿ ಮೌಲ್ಯದ ಪಿಂಕ್ ನೋಟ್ ಪತ್ತೆ- ಇದೇನಾ ನಿಮ್ಮ ನೋಟ್ ಬ್ಯಾನ್ ಎಂದ ಕಾಂಗ್ರೆಸ್

    ನವದೆಹಲಿ: ತೆಲಂಗಾಣದಲ್ಲಿ 6.4 ಕೋಟಿ ರೂ. ಮೌಲ್ಯದ 2 ಸಾವಿರ ಮುಖಬೆಲೆಯ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸುದ್ದಿಗೆ ಪ್ರತಿಕ್ರಿಯಿಸುವ ಕಾಂಗ್ರೆಸ್, ಇದೇನಾ ನಿಮ್ಮ ನೋಟ್ ಬ್ಯಾನ್ ಎಂದು ವ್ಯಂಗ್ಯವಾಗಿ ಟೀಕಿಸಿದೆ.

    ಕಾಂಗ್ರೆಸ್ ಟ್ವೀಟ್: ಪಿಎಂ ಮೋದಿಯವರೇ ಭ್ರಷ್ಟಾಚಾರದ ವಿರುದ್ಧದ ನಿಮ್ಮ ಹೋರಾಟ ಸುಳ್ಳು ಎಂಬುವುದು ಸಾಬೀತಾಗಿದೆ. ನಕಲಿ ಕರೆನ್ಸಿ ತೆಗೆದು ಹಾಕುತ್ತೇವೆ ಎಂದು ನೋಟ್ ಬ್ಯಾನ್ ಮಾಡಲಾಯ್ತು. ಆದರೆ ಇಷ್ಟು ದೊಡ್ಡ ಮೊತ್ತದ ನಕಲಿ ನೋಟು ಪತ್ತೆಯಾಗಿದ್ದು ಹೇಗೆ? ಇದೇನಾ ನಿಮ್ಮ ನೋಟ್ ಬ್ಯಾನ್? ಇಷ್ಟು ದೊಡ್ಡ ಪ್ರಮಾಣದ ನಕಲಿ ನೋಟುಗಳು ಹೇಗೆ ಚಲಾವಣೆಗೆ ಬಂತು ಎಂಬುದಕ್ಕೆ ಉತ್ತರಿಸಿ.

    ಶನಿವಾರ ತೆಲಂಗಾಣ ಪೊಲೀಸರು ಅಂತರ ರಾಜ್ಯ ಗ್ಯಾಂಗ್ ನ್ನು ಬಂಧಿಸಿ, 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಖಮ್ಮಾಮ್ ಜಿಲ್ಲೆಯ ವೆಮ್ಸೂರ್ ನಲ್ಲಿ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಈ ತಂಡ ಗ್ರಾಹಕರಿಗೆ ನಕಲಿ ನೋಟುಗಳನ್ನು ಅಸಲಿ ಎಂದು ನಂಬಿಸಿ ವ್ಯವಹರಿಸುತ್ತಿದ್ದರು. 20% ಕಮಿಷನ್ ಮೇಲೆ ನೋಟುಗಳ ವರ್ಗಾವಣೆ ನಡೆಸುತ್ತಿದ್ದರು.

    2 ಸಾವಿರ ರೂಪಾಯಿಯ 320 ಬಂಡಲ್ ಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರು ತೆಲಂಗಾಣದ ನಿವಾಸಿಗಳೆಂದು ತಿಳಿದು ಬಂದಿದ್ದು, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ವ್ಯವಹರಿಸುತ್ತಿದ್ದರು ಎಂದು ವರದಿಯಾಗಿದೆ.