Tag: ನಕಲಿ ನೋಟು

  • 500 ರೂ. ಮುಖಬೆಲೆಯ ನಕಲಿ ನೋಟುಗಳ ಬಗ್ಗೆ ಹೈ ಅಲರ್ಟ್‌ – ಫೇಕ್‌ ನೋಟ್‌ ಗುರುತಿಸೋದು ಹೇಗೆ?

    500 ರೂ. ಮುಖಬೆಲೆಯ ನಕಲಿ ನೋಟುಗಳ ಬಗ್ಗೆ ಹೈ ಅಲರ್ಟ್‌ – ಫೇಕ್‌ ನೋಟ್‌ ಗುರುತಿಸೋದು ಹೇಗೆ?

    ನವದಹೆಲಿ: ನಕಲಿ ನೋಟುಗಳ (Fake Notes) ಹಾವಳಿ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಚಲಾವಣೆಯಾಗುತ್ತಿರುವ 500 ರೂ. ಮುಖಬೆಲೆ ನಕಲಿ ನೋಟಿನ ಬಗ್ಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೈ ಅಲರ್ಟ್‌ ನೀಡಿದೆ.

    ಕಂದಾಯ ಗುಪ್ತಚರ ನಿರ್ದೇಶನಾಲಯ (DRI), ಹಣಕಾಸು ಗುಪ್ತಚರ ಘಟಕ (FIU), ಕೇಂದ್ರ ತನಿಖಾ ದಳ (CBI), ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಭಾರತೀಯ ಭದ್ರತಾ ಪತ್ರಗಳು ಮತ್ತು ವಿನಿಮಯ ಮಂಡಳಿ (SEBI) ಮತ್ತು ಇತರ ಪ್ರಮುಖ ಹಣಕಾಸು ಮತ್ತು ನಿಯಂತ್ರಕ ಸಂಸ್ಥೆಗಳಿಗೆ ಈ ಎಚ್ಚರಿಕೆ ನೀಡಲಾಗಿದೆ. ನಕಲಿ ನೋಟುಗಳು ಯಾವುವು, ನಿಜವಾದ ನೋಟುಗಳು ಯಾವುವು ಎಂಬುದನ್ನು ಗುರುತಿಸಲು ಜನರಿಗೆ ಅರಿವು ಮೂಡಿಸುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಈಗಾಗಲೇ ಕಾರ್ಯಾಂಗವನ್ನು ಅತಿಕ್ರಮಿಸಿರುವ ಆರೋಪ ನಮ್ಮ ಮೇಲಿದೆ: ಸುಪ್ರೀಂ ಕೋರ್ಟ್‌

    ನಕಲಿ ನೋಟನ್ನು ಗುರುತಿಸುವುದು ಹೇಗೆ?
    500 ರೂ. ಮುಖಬೆಲೆಯ ನಕಲಿ ನೋಟುಗಳು, ಅಧಿಕೃತ ನೋಟುಗಳ ಗುಣಮಟ್ಟ ಮತ್ತು ಮುದ್ರಣವನ್ನು ಬಹುತೇಕ ಹೋಲುತ್ತವೆ. ಆದ್ದರಿಂದ ಸಾಮಾನ್ಯ ವ್ಯಕ್ತಿಗೆ ಅದನ್ನು ಗುರುತಿಸುವುದು ತುಂಬಾ ಕಷ್ಟ. ಬ್ಯುಸಿ ಸಂದರ್ಭದಲ್ಲಿ ವಹಿವಾಟು ನಡೆಸುವಾಗ ನಕಲಿ ನೋಟುಗಳನ್ನು ಗಮನಿಸಲು ಸಾಧ್ಯವಾಗಿರುವುದಿಲ್ಲ. ಹೀಗಾಗಿ, ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಇದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ನಕಲಿ ನೋಟುಗಳನ್ನು ಪತ್ತೆ ಮಾಡುವುದು ಹೇಗೆ?

    * ‘RESERVE BANK OF INDIA’ ಎಂಬ ಪದಗುಚ್ಛದಲ್ಲಿ, ‘RESERVE’ ಎಂಬ ಪದದಲ್ಲಿನ ‘E’ ಅಕ್ಷರವನ್ನು ‘A’ ಅಕ್ಷರದಿಂದ ತಪ್ಪಾಗಿ ಬರೆದಿರಲಾಗುತ್ತದೆ. ಈ ಸಣ್ಣ ದೋಷವು ನಕಲಿ ನೋಟುಗಳನ್ನು ಹುಡುಕಲು ಮತ್ತು ಸಂಭಾವ್ಯ ನಷ್ಟದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಒಂದು ಮಾರ್ಗವಾಗಿದೆ. ಈ ಸೂಕ್ಷ್ಮ ದೋಷವು ಸಾಂದರ್ಭಿಕ ವಹಿವಾಟುಗಳ ಸಮಯದಲ್ಲಿ ಗಮನಕ್ಕೆ ಬಾರದೆ ಹೋಗಬಹುದು. ಇದು ಗಮನಾರ್ಹ ಸಮಸ್ಯೆಯನ್ನು ತಂದೊಡ್ಡುತ್ತದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಸುಂಕ ಸಮರದ ನಡುವೆ ಕುಟುಂಬ ಸಮೇತ ಭಾರತಕ್ಕೆ ಬಂದಿಳಿದ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್

    * ಭದ್ರತಾ ಥ್ರೆಡ್ ಪರಿಶೀಲಿಸಿ: ಅಸಲಿ 500 ರೂ. ಮುಖಬೆಲೆ ನೋಟುಗಳು ಭದ್ರತಾ ಥ್ರೆಡ್ ಅನ್ನು ಹೊಂದಿದ್ದು, ನೋಟು ಓರೆಯಾಗಿಸಿದಾಗ ಅದು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬಣ್ಣವನ್ನು ಬದಲಾಯಿಸುತ್ತದೆ. ಈ ಥ್ರೆಡ್‌ನಲ್ಲಿ ‘ಭಾರತ’ ಮತ್ತು ‘RBI’ ನಂತಹ ಗೋಚರ ಶಾಸನಗಳಿವೆ. ನಕಲಿ ನೋಟುಗಳು ಈ ಬಣ್ಣ ಬದಲಾವಣೆ ಕಂಡುಬರುವುದಿಲ್ಲ.

    * ವಾಟರ್‌ಮಾರ್ಕ್ ಗಮನಿಸಿ: ಮಹಾತ್ಮ ಗಾಂಧಿಯವರ ಭಾವಚಿತ್ರ ಮತ್ತು ಮುಖಬೆಲೆಯ 500 ಅನ್ನು ತೋರಿಸುವ ಎಲೆಕ್ಟ್ರೋಟೈಪ್ ವಾಟರ್‌ಮಾರ್ಕ್ ಅನ್ನು ನೋಡಲು ನೋಟನ್ನು ಬೆಳಕಿಗೆ ಎದುರಾಗಿ ಹಿಡಿದುಕೊಳ್ಳಿ. ನಕಲಿ ನೋಟುಗಳು ಮಸುಕಾದ ಅಥವಾ ತಪ್ಪಾಗಿ ಜೋಡಿಸಲಾದ ವಾಟರ್‌ಮಾರ್ಕ್‌ಗಳನ್ನು ಹೊಂದಿರುತ್ತದೆ. ಇದನ್ನೂ ಓದಿ: ಚುನಾವಣಾ ಆಯೋಗ ರಾಜಿಯಾಗಿದೆ, ವ್ಯವಸ್ಥೆಯಲ್ಲಿ ದೋಷವಿದೆ: ಅಮೆರಿಕದಲ್ಲಿ ರಾಹುಲ್‌ ಕಿಡಿ

    * ಮುದ್ರಣದಲ್ಲಿ ವ್ಯತ್ಯಾಸ: ಅಸಲಿ 500 ರೂ. ನೋಟುಗಳಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರ, ಅಶೋಕ ಸ್ತಂಭದ ಲಾಂಛನ ಮುಂತಾದ ಪ್ರಮುಖ ಅಂಶಗಳ ಮೇಲೆ ಇಂಟ್ಯಾಗ್ಲಿಯೊ (ಎತ್ತರದ) ಮುದ್ರಣವಿರುತ್ತದೆ. ಈ ಪ್ರದೇಶಗಳ ಮೇಲೆ ನಿಮ್ಮ ಬೆರಳುಗಳನ್ನು ಚಲಾಯಿಸಿ, ಅದು ಏನೂ ಅನುಭವಕ್ಕೆ ಬಾರದಿದ್ದರೆ ನೋಟು ನಕಲಿಯಾಗಿರುತ್ತದೆ.

    * ಆರ್‌ಬಿಐನ ಮೊಬೈಲ್ ಅಪ್ಲಿಕೇಶನ್ ಅಥವಾ ಯುವಿ ಲೈಟ್ ಬಳಸಿ: ತ್ವರಿತ ಪರಿಶೀಲನೆಗಾಗಿ, ನಿಜವಾದ ನೋಟುಗಳನ್ನು ಸ್ಕ್ಯಾನ್ ಮಾಡಲು ಮತ್ತು ಗುರುತಿಸಲು ಆರ್‌ಬಿಐನ ‘ಮನಿ’ ಅಪ್ಲಿಕೇಶನ್ ಬಳಸಿ. ನೀವು ಯುವಿ ಬೆಳಕಿನ ಅಡಿಯಲ್ಲಿ ನೋಟನ್ನು ಸಹ ಪರಿಶೀಲಿಸಬಹುದು. ಸರಣಿ ಸಂಖ್ಯೆಗಳು ಮತ್ತು ಭದ್ರತಾ ದಾರವು ಹೊಳಪಿನ ವೈಶಿಷ್ಟ್ಯತೆ ಇರುತ್ತದೆ. ಇದು ನಕಲಿ ನೋಟಲ್ಲಿ ಕಂಡುಬರುವುದಿಲ್ಲ.

    ಗೃಹ ಸಚಿವಾಲಯದಿಂದ ರಾಷ್ಟ್ರವ್ಯಾಪಿ ಎಚ್ಚರಿಕೆ
    ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಮತ್ತು ಇತರ ಸಂಬಂಧಿತ ಏಜೆನ್ಸಿಗಳಿಗೆ ಹೈ ಅಲರ್ಟ್‌ ಘೋಷಿಸಲಾಗಿದೆ. ಏಕೆಂದರೆ ಈ ನಕಲಿ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಚಲಾವಣೆಯಲ್ಲಿರಬಹುದು ಎನ್ನಲಾಗಿದೆ. ಇದನ್ನೂ ಓದಿ: ಚಿನ್ನದ ಬೆಲೆ ಗಗನಕ್ಕೆ – ಮಾರುಕಟ್ಟೆ ಏರಿಳಿತದ ನಡುವೆಯೂ ನೆಚ್ಚಿನ ಹೂಡಿಕೆಯಾಗಲು ಕಾರಣವೇನು?

  • ಕಾರವಾರ | ಮನೆಯಲ್ಲಿ 14 ಕೋಟಿ ಮೌಲ್ಯದ ನಕಲಿ ನೋಟು ಪತ್ತೆ

    ಕಾರವಾರ | ಮನೆಯಲ್ಲಿ 14 ಕೋಟಿ ಮೌಲ್ಯದ ನಕಲಿ ನೋಟು ಪತ್ತೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ (Dandeli) ಗಾಂಧಿನಗರದ ಅರ್ಷದ್ ಖಾನ್ ಎಂಬಾತನ ಮನೆಯಲ್ಲಿ 500 ರೂ. ಮುಖಬೆಲೆಯ 14 ಕೋಟಿ ರೂ.ನಷ್ಟು ನಕಲಿ ನೋಟುಗಳು (Duplicate Note) ಪತ್ತೆಯಾಗಿದೆ.

    ಸ್ಥಳೀಯರೊಬ್ಬರು ನೀಡಿದ ಮಾಹಿತಿ ಮೇರೆಗೆ ದಾಂಡೇಲಿ ಪೊಲೀಸರು (Dandeli Police) ಅರ್ಷದ್ ಖಾನ್ ಎಂಬಾತನ ಮನೆಗೆ ತೆರಳಿ ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದಾಗ ಭಾರತೀಯ ರಿಸರ್ವ್ ಬ್ಯಾಂಕ್ ಬರಹ ಇಲ್ಲದ, ಗವರ್ನರ್ ಸಹಿ ಇಲ್ಲದ‌ ನೋಟುಗಳು ಪತ್ತೆಯಾಗಿದೆ. ಅಲ್ಲದೇ ನೋಟುಗಳ ಮೇಲೆ ʻಮೂವಿ‌‌‌ ಶೂಟಿಂಗ್ ಪರ್ಪಸ್ʼ ಎಂದೂ ಸಹ ಬರೆದಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಯ ಟಿಎಂಸಿಯಲ್ಲಿ ನಾಯಕರ ತಿಕ್ಕಾಟ – ಟಿಎಂಸಿ ವಾಟ್ಸಪ್ ಚಾಟ್ ಬಹಿರಂಗಪಡಿಸಿದ ಬಿಜೆಪಿಯ ಅಮಿತ್ ಮಾಳವೀಯ

    ಇನ್ನೂ ನೋಟಿನ ಸಂಖ್ಯೆಯಲ್ಲಿ ಸೊನ್ನೆ ಅಷ್ಟೇ ನಮೂದು ಮಾಡಲಾಗಿದ್ದು ಯಾವ ಉದ್ದೇಶಕ್ಕಾಗಿ ಈ ನೋಟುಗಳನ್ನು ಬಳಸಲಾಗುತ್ತಿದೆ ಅನ್ನೋದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೇ ಮನೆಯ ಮಾಲೀಕ ಅರ್ಷದ್ ಖಾನ್ ಕಳೆದ ಒಂದು ತಿಂಗಳಿಂದ ಘಟನಾ ಸ್ಥಳಕ್ಕೆ ಆಗಮಿಸಿಯೇ ಇಲ್ಲ. ಆದ್ದರಿಂಧ ಇಷ್ಟೊಂದು ನೋಟುಗಳು ಯಾವುದಕ್ಕೆ ಬಳಕೆ ಮಾಡಲು ಸಂಗ್ರಹಿಸಲಾಗಿದೆ ಎಂಬುದು ನಿಗೂಢವಾಗಿದೆ. ಇದನ್ನೂ ಓದಿ: ಚನ್ನಪಟ್ಟಣ ಬೊಂಬೆ ಉದ್ಯಮಕ್ಕೆ ಮರುಜೀವ ನೀಡುವಂತೆ ಡಾ. ಮಂಜುನಾಥ್ ಮನವಿಗೆ ಸ್ಮಂದಿಸಿದ ಕೇಂದ್ರ

    ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಈ ನೋಟುಗಳನ್ನು ಸಿನಿಮಾ ಚಿತ್ರೀಕರಣಕ್ಕೆ ತರಿಸಲಾಗಿದೆ ಎನ್ನಲಾಗುತಿದೆ. ಮುಂದಿನ ತನಿಖೆ ನಂತರ ಹೆಚ್ಚಿನ ವಿವರ ಹೊರಬರಲಿದೆ. ಸದ್ಯ ಘಟನೆ ಸಂಬಂಧ ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರನ್‌ ಹೊಳೆ ಹರಿಸಿ ಈಡನ್‌ ಗಾರ್ಡನ್‌ನಲ್ಲಿ ದಾಖಲೆ ಬರೆದ ಲಕ್ನೋ 

  • ಆರ್‌ಬಿಐಗೆ ನಕಲಿ ನೋಟ್‌ ಕೊಟ್ಟು ವಂಚಿಸುವ ಪ್ಲ್ಯಾನ್‌ -‌ ನಾಲ್ವರು ಅರೆಸ್ಟ್!

    ಆರ್‌ಬಿಐಗೆ ನಕಲಿ ನೋಟ್‌ ಕೊಟ್ಟು ವಂಚಿಸುವ ಪ್ಲ್ಯಾನ್‌ -‌ ನಾಲ್ವರು ಅರೆಸ್ಟ್!

    ಬೆಂಗಳೂರು: ಕಂತೆ ಕಂತೆ ನಕಲಿ ನೋಟುಗಳನ್ನು (Fake Currency) ಮುದ್ರಿಸಿ ಆರ್‌ಬಿಐಗೆ (RBI) ನೀಡಿ ಟೊಪ್ಪಿ ಹಾಕಲು ಯತ್ನಿಸಿದ ವಂಚಕರ ಗ್ಯಾಂಗ್‌ ಪೊಲೀಸರ ಬಲೆಗೆ ಬಿದ್ದಿದೆ.

    ಬಂಧಿತ ಆರೋಪಿಗಳನ್ನು ಅಬ್ದುಲ್, ಪ್ರಸೀತ್, ಮೊಹಮ್ಮದ್ ಅಫ್ನಾಸ್, ನೂರುದ್ದೀನ್ ಅನ್ವರ್ ಹಾಗೂ ಪ್ರಿಯೇಶ್ ಎಂದು ತಿಳಿದು ಬಂದಿದೆ. ಆರೋಪಿಗಳು ಹಿಂದಿಯ ವೆಬ್ ಸೀರಿಸ್ ಒಂದರಲ್ಲಿ ನೋಟುಗಳನ್ನ ಮುದ್ರಿಸಿ ವಾಮಮಾರ್ಗದಲ್ಲಿ ಸರಬರಾಜು ಮಾಡುವ ಕತೆಯನ್ನು ಮೀರಿಸುವ ಹಾಗೆ ನಕಲಿ ನೋಟುಗಳನ್ನು ಮುದ್ರಿಸಿ ವಂಚಿಸುತ್ತಿದ್ದರು.‌ ಅಲ್ಲದೇ ನಕಲಿ ನೋಟುಗಳನ್ನು ಆರ್‌ಬಿಐಗೆ ನೀಡಿ ರಾಜಾರೋಷವಾಗಿ ಚಾಲ್ತಿಗೆ ತರಲು ಪ್ರಯತ್ನಿಸಿದ್ದರು.

    ಇದರಲ್ಲಿ ಸಿರಗುಪ್ಪ ಮೂಲದ ಅಬ್ದುಲ್ ಉದ್ಯಮಿ ಆಗಿದ್ದು, ಪ್ರಸೀತ್ ಅಲಿಯಾಸ್ ಪ್ರಸಿದ್‌ಗೆ 40 ಲಕ್ಷ ರೂ. ಮೌಲ್ಯದ ಗ್ರಾನೈಟ್ ಮಾರಾಟ ಮಾಡಿದ್ದ. ಪದೇ ಪದೇ ಹಣ ಕೇಳುತ್ತಿದ್ದ. ಅಬ್ದುಲ್‌ಗೆ ನನ್ನ ಹತ್ರ‌ 2000 ರೂ. ಮುಖಬೆಲೆಯ 25 ಲಕ್ಷ ರೂ. ಹಣ ಇದೆ, ಅದನ್ನು ಆರ್‌ಬಿಐನಲ್ಲಿ ಎಕ್ಸ್‌ಚೇಂಜ್ ಮಾಡಿಸಿಕೋ ಎಂದು ಪ್ರಸಿದ್ದ್ 25 ಲಕ್ಷ ರೂ. ನಕಲಿ ನೋಟ್‌ ಕೊಟ್ಟಿದ್ದನಂತೆ. ಈ ಹಣವನ್ನ ಬೆಂಗಳೂರಿನ ಆರ್‌ಬಿಐಗೆ ತಂದ ಅಬ್ದುಲ್, ಅಲ್ಲಿ ಮೆಷಿನ್‌ನಲ್ಲಿ ಹಾಕಿದಾಗ ಹಣ ಚಲಾವಣೆ ಆಗಿರಲಿಲ್ಲ. ಈ ವೇಳೆ ಅಬ್ದುಲ್‌ಗೆ ನೋಟಿನ ಬಗ್ಗೆ ಅನುಮಾನ ಬಂದಿದ್ದರೂ ಕೂಡ, ನೇರವಾಗಿ ಅಧಿಕಾರಿಗಳ ಬಳಿ ಹೋಗಿ ನೋಟು ಎಕ್ಸ್ ಚೇಂಜ್ ಮಾಡಲು ಕೇಳಿದ್ದಾನೆ. ಈ ವೇಳೆ ನೋಟು ಪರಿಶೀಲನೆ ಮಾಡಿದಾಗ ನಕಲಿ ನೋಟುಗಳು ಎಂಬುದು ಬೆಳಕಿಗೆ ಬಂದಿದೆ.

    ಆರ್‌ಬಿಐ ಅಧಿಕಾರಿಗಳು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಕಲಿ ನೋಟಿನ ಮೂಲ ಬೆನ್ನತ್ತಿ ವಿಚಾರಣೆ ನಡೆಸಿದಾಗ ಕೇರಳದ (Kerala) ಕಾಸರಗೋಡು ಲಿಂಕ್ ಸಿಕ್ಕಿದ್ದು, ಅಲ್ಲಿನ ಪ್ರಿಯೇಶ್, ಮೊಹಮ್ಮದ್ ಅಫ್ನಾಸ್ ಹಾಗೂ ನೂರುದ್ದೀನ್ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಪ್ರಿಯೇಶ್ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದು, ಅದರಲ್ಲಿ ಎರಡು ಸಾವಿರ ಮುಖಬೆಲೆ ಖೋಟಾ ನೋಟು ಮುದ್ರಿಸಿ ಹಂಚಿಕೆ ಮಾಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.‌

    ಹಲಸೂರು ಗೇಟ್ ಪೊಲೀಸರು ಕಾಸರಗೋಡಿನಲ್ಲಿ 29 ಲಕ್ಷ ರೂ. ನಕಲಿ ನೋಟು, ಪ್ರಿಂಟಿಂಗ್ ಮೆಷಿನ್, ಕಚ್ಚಾ ಪೇಪರ್ ಹಾಗೂ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಒಟ್ಟು 52 ಲಕ್ಷ ರೂ. ನಕಲಿ‌ ನೋಟು ಪತ್ತೆಯಾಗಿದ್ದು, ಎಲ್ಲವನ್ನು ಜಪ್ತಿ ಮಾಡಿದ್ದಾರೆ. ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ನಕಲಿ ನೋಟು ಕೇಸ್‌ನಲ್ಲಿ ಗುಜರಾತ್‌ ಪೊಲೀಸರಿಗೆ ಶಾಕ್‌ – ನೋಟುಗಳಲ್ಲಿ ಗಾಂಧೀಜಿ ಬದಲಿಗೆ ಇತ್ತು ಬಾಲಿವುಡ್‌ ನಟನ ಫೋಟೋ

    ನಕಲಿ ನೋಟು ಕೇಸ್‌ನಲ್ಲಿ ಗುಜರಾತ್‌ ಪೊಲೀಸರಿಗೆ ಶಾಕ್‌ – ನೋಟುಗಳಲ್ಲಿ ಗಾಂಧೀಜಿ ಬದಲಿಗೆ ಇತ್ತು ಬಾಲಿವುಡ್‌ ನಟನ ಫೋಟೋ

    ಗಾಂಧೀನಗರ: ನಕಲಿ ನೋಟುಗಳ (Fake Notes) ಪ್ರಕರಣ ಬೇಧಿಸಿದ ಗುಜರಾತ್‌ ಪೊಲೀಸರು ಶಾಕ್‌ ಆಗಿದ್ದಾರೆ. 500 ರೂ. ಮುಖಬೆಲೆಯ ನಕಲಿ ನೋಟುಗಳಲ್ಲಿ ಗಾಂಧೀಜಿ ಬದಲಿಗೆ ಬಾಲಿವುಡ್‌ ನಟ ಅನುಪಮ್‌ ಖೇರ್‌ (Anupam Kher) ಅವರ ಚಿತ್ರ ಬಳಸಿರುವುದು ಕಂಡುಬಂದಿದೆ.

    ಸುಮಾರು 1.6 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನೋಟುಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲಿಗೆ ‘ರಿಸೋಲ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಪದ ಬಳಕೆ ಮಾಡಲಾಗಿದೆ. ಇದೀಗ ನೋಟಿನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ದೇಶಿ ಹಸುಗಳನ್ನು ‘ರಾಜ್ಯಮಾತಾ’ ಎಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರ

    ಅಹಮದಾಬಾದ್‌ನ ವ್ಯಾಪಾರಿಯೊಬ್ಬರು ನಕಲಿ ನೋಟುಗನ್ನು ಬಳಸಿ ವಂಚಿಸಿರುವ ಸಂಬಂಧ ವೈರಲ್‌ ಆಗಿರುವ ವೀಡಿಯೋವನ್ನು ಟ್ಯಾಗ್‌ ಮಾಡಿ ಅನುಪಮ್‌ ಖೇರ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. 500 ರೂ. ನೋಟುಗಳಲ್ಲಿ ಗಾಂಧೀಜಿಯವರ ಫೋಟೋ ಬದಲಿಗೆ ನನ್ನ ಫೋಟೋ ಎಂದು ನಟ ಶೀರ್ಷಿಕೆ ನೀಡಿದ್ದಾರೆ.

    ಸೆ.24 ರಂದು ನವರಂಗಪುರ ಪೊಲೀಸ್ ಠಾಣೆಯಲ್ಲಿ ಬುಲಿಯನ್ ವ್ಯಾಪಾರಿ ಮೆಹುಲ್ ಠಕ್ಕರ್ ದೂರು ದಾಖಲಿಸಿದ್ದರು. 1.6 ಕೋಟಿ ರೂ. ಮೌಲ್ಯದ 2,100 ಗ್ರಾಂ ಚಿನ್ನವನ್ನು ಒಳಗೊಂಡ ಡೀಲ್‌ಗಾಗಿ ಶಂಕಿತರು ತಮ್ಮ ಉದ್ಯೋಗಿಯೊಬ್ಬರನ್ನು ಸಂಪರ್ಕಿಸಿದ್ದರು. ಉಳಿದ 30 ಲಕ್ಷವನ್ನು ಮರುದಿನ ಪಾವತಿಸುವುದಾಗಿ ಭರವಸೆ ನೀಡಿ, 1.3 ಕೋಟಿ ನಗದು ನೀಡಿದ್ದಾರೆ. ಆದರೆ, ಚಿನ್ನವನ್ನು ಹಸ್ತಾಂತರಿಸಿದ ನಂತರ ಅವರು ಎಸ್ಕೇಪ್‌ ಆದರು. ಎಲ್ಲಾ ನೋಟುಗಳನ್ನು ಗಮನಿಸಿದಾಗ ನಕಲಿ ಎಂದು ತಿಳಿಯಿತು.

    ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: MUDA Scam Case: ಸಿಎಂ ಸಿದ್ದರಾಮಯ್ಯ ವಿರುದ್ಧ ಇಸಿಐಆರ್ ದಾಖಲಿಸಿದ ED

  • ಲಿಂಗಸುಗೂರಿನಲ್ಲಿ ನಕಲಿ ನೋಟು ಜಾಲ ಪತ್ತೆ – 500 ರೂ. ಮುಖಬೆಲೆಯ 62 ಬಂಡಲ್ ಜಪ್ತಿ

    ಲಿಂಗಸುಗೂರಿನಲ್ಲಿ ನಕಲಿ ನೋಟು ಜಾಲ ಪತ್ತೆ – 500 ರೂ. ಮುಖಬೆಲೆಯ 62 ಬಂಡಲ್ ಜಪ್ತಿ

    ರಾಯಚೂರು: ಜಿಲ್ಲೆಯ ಲಿಂಗಸುಗೂರಿನಲ್ಲಿ (Lingasuguru) ನಕಲಿ ನೋಟಿನ (Fake Note) ಜಾಲ ಪತ್ತೆಯಾಗಿದೆ. ಮನೆಯೊಂದರಲ್ಲಿ ಅಕ್ರಮ ಮದ್ಯ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮೇರೆಗೆ ಜಪ್ತಿ ಮಾಡಲು ಹೋದ ಅಧಿಕಾರಿಗಳು ನಕಲಿ ನೋಟ್ ಕಂಡು ಶಾಕ್ ಆಗಿದ್ದಾರೆ. ದಾಳಿ ವೇಳೆ ಮದ್ಯ ಸಿಗದಿದ್ದರೂ ಕಂತೆ ಕಂತೆ ನಕಲಿ ನೋಟು ಪತ್ತೆಯಾಗಿವೆ.

    ಒಂದು ಕಡೆ 500 ರೂ. ಮುಖಬೆಲೆಯ ನೋಟುಗಳು, ಮತ್ತೊಂದು ಕಡೆ ಬಿಳಿ ಪೇಪರ್ ಇರುವ ನೋಟುಗಳು ಪತ್ತೆಯಾಗಿವೆ. ದಾಳಿ ವೇಳೆ 500 ರೂ. ಮುಖಬೆಲೆಯ 62 ಬಂಡಲ್ ಮುದ್ರಿತ ನೋಟು ಸಿಕ್ಕಿವೆ. ಲಿಂಗಸುಗೂರಿನ ಗೌಳೀಪುರ ಓಣಿಯಲ್ಲಿ ನಕಲಿ ನೋಟು ತಯಾರಿಕೆ ಜಾಲ ಪತ್ತೆಯಾಗಿದ್ದು, ನಕಲಿ ನೋಟು ತಯಾರಿಸುತ್ತಿದ್ದ ಚೋಟಾಸಾಬ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಚುನಾವಣೆಯ ಹಬ್ಬವನ್ನ ನಾವು ಪ್ರೀತಿಯಿಂದ ಆಚರಿಸೋಣ: ‘ಕೈ’ ಅಭ್ಯರ್ಥಿ ಮನವಿ

    ಜನರಿಗೆ ವಂಚಿಸುವ ದೃಷ್ಟಿಯಿಂದ ನಕಲಿ ನೋಟು ತಯಾರಿಸುತ್ತಿದ್ದ ಎನ್ನಲಾಗಿದೆ. ಲಿಂಗಸುಗೂರು ಸಹಾಯಕ ಆಯುಕ್ತರು ಹಾಗೂ ಪಿಐ ಪುಂಡಲೀಕ ನೇತೃತ್ವದಲ್ಲಿ ದಾಳಿ ನಡೆದಿದೆ. ಯಾಕಾಗಿ ನಕಲಿ ನೋಟು ಶೇಖರಿಸಿದ್ದ? ಜಾಲ ಎಲ್ಲಿವರೆಗೆ ಹರಡಿದೆ ಅನ್ನೋ ಬಗ್ಗೆ ತನಿಖೆ ಮುಂದುವರೆದಿದೆ. ಇದನ್ನೂ ಓದಿ: ಮಹಾರಾಜರ ಗೆಟಪ್‌ನಲ್ಲಿ ಬಂದು ಮತದಾನ ಮಾಡಿದ ವ್ಯಕ್ತಿ

    ಈ ಕುರಿತು ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ ನಿಖಿಲ್ ಬಿ ಹಾಗೂ ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಂಡಿದೆ. ಇದನ್ನೂ ಓದಿ: ಮತ ಚಲಾಯಿಸಿ ರಾಮದೇವರ ಪ್ರಾಣ ಪ್ರತಿಷ್ಠೆ ಮಾಡಿದಷ್ಟೇ ಧನ್ಯತೆ: ಪೇಜಾವರ ಶ್ರೀ

  • ರಾಯಚೂರಿನಲ್ಲಿ ಹೆಚ್ಚಾಯ್ತು ನಕಲಿ ನೋಟುಗಳ ಹಾವಳಿ – ನಿಮ್ಮಲ್ಲಿನ 200 ರೂ.‌ ನೋಟು ಒಮ್ಮೆ ಚೆಕ್ ಮಾಡಿಕೊಳ್ಳಿ

    ರಾಯಚೂರಿನಲ್ಲಿ ಹೆಚ್ಚಾಯ್ತು ನಕಲಿ ನೋಟುಗಳ ಹಾವಳಿ – ನಿಮ್ಮಲ್ಲಿನ 200 ರೂ.‌ ನೋಟು ಒಮ್ಮೆ ಚೆಕ್ ಮಾಡಿಕೊಳ್ಳಿ

    ರಾಯಚೂರು: ಜಿಲ್ಲೆಯಲ್ಲಿ ನಕಲಿ ಕರೆನ್ಸಿ ನೋಟುಗಳ (Fake Currency Note) ಹಾವಳಿ ಹೆಚ್ಚಾಗುತ್ತಿದೆ. ಅಸಲಿ ನೋಟುಗಳ ಜೊತೆಗೆ ಆಗಾಗ ನಕಲಿ ನೋಟುಗಳು ಬರುತ್ತಿವೆ. ನಕಲಿ ನೋಟುಗಳ ಹಾವಳಿಗೆ ಸಣ್ಣ ವ್ಯಾಪಾರಿಗಳು ಸುಸ್ತಾಗಿದ್ದಾರೆ. 200 ರೂಪಾಯಿ ಮುಖಬೆಲೆಯ ಕಳ್ಳ ನೋಟುಗಳ ಚಲಾವಣೆ ನಡೆಯುತ್ತಿದೆ.

    ವ್ಯಾಪಾರಿಗಳು ಹಣ ಪಾವತಿಸಲು ಬ್ಯಾಂಕ್‌ಗೆ (Bank) ಹೋದಾಗ ನಕಲಿ ನೋಟುಗಳು ಪತ್ತೆಯಾಗುತ್ತಿವೆ. ಒಂದೊಂದು ಕಟ್ಟಿನಲ್ಲಿ ಒಂದು, ಎರಡು ನಕಲಿ ನೋಟುಗಳು ಪತ್ತೆಯಾಗುತ್ತಿದ್ದು, ಸಣ್ಣ ವ್ಯಾಪಾರಿಗಳಿಗೆ ನಕಲಿ ನೋಟುಗಳಿಂದ ನಷ್ಟ ಭೀತಿ ಎದುರಾಗಿದೆ.

    200 ರೂಪಾಯಿ ನೋಟುಗಳ ಕಲರ್ ಝೆರಾಕ್ಸ್ ದಂಧೆ ನಡೆಯುತ್ತಿರುವ ಅನುಮಾನ ವ್ಯಕ್ತವಾಗಿದೆ. ‌ ನಕಲಿ ನೋಟುಗಳನ್ನ ಕಲರ್ ಝೆರಾಕ್ಸ್ ಮೂಲಕ ತಯಾರಿಸಿ ಅಡ್ಡದಾರಿಯಲ್ಲಿ ಸಣ್ಣ ಪ್ರಮಾಣದಲ್ಲೇ ಚಲಾವಣೆ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ.  ಇದನ್ನೂ ಓದಿ: ದೀಪಾವಳಿಗೆ ಕರೆಂಟ್‌ ಕಳ್ಳತನ – ಬೆಸ್ಕಾಂ ನೋಟಿಸ್‌ ನೀಡಲಿ, ದಂಡ ಕಟ್ಟುತ್ತೇನೆ ಎಂದ ಹೆಚ್‌ಡಿಕೆ

    ನಕಲಿ ನೋಟುಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಅದರ ಅಸಲಿಯತ್ತು ಬಯಲಾಗುತ್ತದೆ. ಆದರೆ ಅವಸರಲ್ಲಿ ಹಣ ಪಡೆಯುವಾಗ ಅಸಲಿ ಜೊತೆ ನಕಲಿ ನೋಟು ಇರುವುದು ಗೊತ್ತಾಗುವುದಿಲ್ಲ. ವ್ಯಾಪಾರಿಗಳ ಕೈಗೆ ಸುಲಭವಾಗಿ ನಕಲಿ ನೋಟು ಸೇರುತ್ತಿದ್ದು, ಸ್ವಲ್ಪ ದಿನದಲ್ಲೇ ನಕಲಿ ನೋಟು ಮುದ್ದೆಯಾಗುತ್ತದೆ.

    ರಾಯಚೂರು ಜಿಲ್ಲೆಯಲ್ಲಿ ಈ ಹಿಂದೆ 500 ರೂ. ಮುಖಬೆಲೆಯ ಖೋಟಾ ನೋಟುಗಳು ಪತ್ತೆಯಾಗಿದ್ದವು. ಈಗ 200 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಓಡಾಡುತ್ತಿವೆ. ಕೂಡಲೇ ಇದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕಿದೆ.

     

  • ಡಾಕ್ಟರ್‌ಗೆ 500 ರೂ. ಮುಖಬೆಲೆಯ ನಕಲಿ ನೋಟು ಕೊಟ್ಟು ಯಾಮಾರಿಸಿದ ರೋಗಿ

    ಡಾಕ್ಟರ್‌ಗೆ 500 ರೂ. ಮುಖಬೆಲೆಯ ನಕಲಿ ನೋಟು ಕೊಟ್ಟು ಯಾಮಾರಿಸಿದ ರೋಗಿ

    ನವದೆಹಲಿ: ಡಾಕ್ಟರ್‌ಗೆ 500 ರೂ. ಮುಖಬೆಲೆಯ ನಕಲಿ ನೋಟು (500 rs Fake Note) ಕೊಟ್ಟು ಯಾಮಾರಿಸಿದ ರೋಗಿ ಯಾಮಾರಿಸಿರುವ ಘಟನೆ ನಡೆದಿದೆ. ನಕಲಿ ನೋಟಿನ ಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಡಾಕ್ಟರ್‌, ಇದೊಂದು ಫನ್ನಿ ಮೂಮೆಂಟ್‌ ಅಂತ ಬರೆದುಕೊಂಡಿದ್ದಾರೆ.

    ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ ಡಾ.ಮಾನನ್‌ ವೊರ ಬಳಿ ರೋಗಿಯೊಬ್ಬರು ವೈದ್ಯಕೀಯ ತಪಾಸಣೆಗೆ ಬಂದಿದ್ದರು. ಚಿಕಿತ್ಸೆ ಬಳಿಕ ಶುಲ್ಕವಾಗಿ 500 ರೂ. ಮುಖಬೆಲೆ ನೋಟನ್ನು ಕೊಟ್ಟಿದ್ದರು. ಆದರೆ ಇದು ನಕಲಿ ನೋಟು ಎಂದು ನಂತರ ವೈದ್ಯರಿಗೆ ಗೊತ್ತಾಗಿದೆ. ಇದನ್ನೂ ಓದಿ: ಹಿಮಾಚಲದಲ್ಲಿ ಭಾರೀ ಮಳೆ – ಕೊಚ್ಚಿ ಹೋಯ್ತು ಕಾರು, ಕುಸಿದು ಬಿದ್ದವು ಅಂಗಡಿಗಳು

    ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ನೋಟಿನೊಂದಿಗೆ ಡಾ. ಮಾನನ್‌ ವೊರ ಅವರು ಪೋಸ್ಟ್‌ವೊಂದನ್ನು ಹಾಕಿದ್ದಾರೆ. ವೈದ್ಯಕೀಯ ತಪಾಸಣೆಗೆ ಬಂದಿದ್ದ ರೋಗಿಯೊಬ್ಬರು ನಕಲಿ ನೋಟನ್ನು ಕೊಟ್ಟು ಹೋಗಿದ್ದಾರೆ. ನಮ್ಮ ಸಿಬ್ಬಂದಿ ಕೂಡ ಅದನ್ನು ಸರಿಯಾಗಿ ಗಮನಿಸಿಲ್ಲ. ಕೊನೆಗೆ ಅದು ನನ್ನ ಬಳಿಗೆ ಬಂದಿದೆ. ಈ ನೋಟನ್ನು ನೋಡಿ ನನಗೆ ನಗು ಬಂತು. ಆ ರೋಗಿ ನನ್ನ ಬಳಿ ದರೋಡೆ ಮಾಡಿದ್ದಾರೆ. ಆದರೂ ಇದು ಫನ್ನಿಯಾಗಿದೆ. ಈ ನೆನಪಿಗಾಗಿ ಆ ನೋಟನ್ನು ಇಟ್ಟುಕೊಳ್ಳುತ್ತೇನೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

    ವೈದ್ಯರ ಈ ಪೋಸ್ಟ್‌ನ್ನು ಅನೇಕರು ಲೈಕ್‌ ಮಾಡಿದ್ದಾರೆ. ಇನ್ನೂ ಕೆಲವು ನೆಟ್ಟಿಗರು ಕಾಮೆಂಟ್‌ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಭಾರತದ ಪ್ರೇಮಿಯೊಂದಿಗೆ ಹೊಸ ಜೀವನ ಶುರು ಮಾಡ್ತಿದ್ದಾಳೆ ಪಾಕ್ ಮಹಿಳೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೇಪಾಳದ ಮನೆಯಲ್ಲೇ ಶೂಟೌಟ್ – ISI ಏಜೆಂಟ್, ದೇಶದ ದೊಡ್ಡ ನಕಲಿ ನೋಟು ವಿತರಕನ ಹತ್ಯೆ

    ನೇಪಾಳದ ಮನೆಯಲ್ಲೇ ಶೂಟೌಟ್ – ISI ಏಜೆಂಟ್, ದೇಶದ ದೊಡ್ಡ ನಕಲಿ ನೋಟು ವಿತರಕನ ಹತ್ಯೆ

    ಕಠ್ಮಂಡು: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‍ಐ)ನ ಏಜೆಂಟ್ (ISI Agent) ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ನೇಪಾಳದ (Nepal) ಕಠ್ಮಂಡುವಿನಲ್ಲಿದ್ದ (Kathmandu) ಆತನ ಅಡಗುತಾಣದ ಹೊರಗೆ ಗುಂಡಿಕ್ಕಿ ಸೋಮವಾರ ಕೊಲ್ಲಲಾಗಿದೆ. ಈತ ಭಾರತದಲ್ಲಿ ನಕಲಿ ನೋಟುಗಳನ್ನು ಅತಿ ಹೆಚ್ಚು ಪೂರೈಕೆ ಮಾಡುತ್ತಿದ್ದ ವಿತರಕ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

    ಮೃತ ಐಎಸ್‍ಐ ಏಜೆಂಟ್ ಅನ್ನು ಲಾಲ್ ಮೊಹಮ್ಮದ್ (Laal Mohammad) (55) ಅಲಿಯಾಸ್ ಮೊಹಮ್ಮದ್ ದರ್ಜಿ (Alias Mohammad Darji) ಎಂದು ಗುರುತಿಸಲಾಗಿದೆ. ಐಎಸ್‍ಐ ಸೂಚನೆ ಮೇರೆಗೆ ಲಾಲ್ ಮೊಹಮ್ಮದ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುದ್ರಣವಾಗುತ್ತಿದ್ದ ಭಾರತದ ನಕಲಿ ಕರೆನ್ಸಿಗಳನ್ನು ನೇಪಾಳಕ್ಕೆ ಸಾಗಿಸಿ ನಂತರ ಭಾರತದಲ್ಲಿ ತನ್ನ ಏಜೆಂಟರಿಗೆ ನೀಡುತ್ತಿದ್ದ. ಇದನ್ನೂ ಓದಿ: ಕೈಯಲ್ಲಿ ಮಚ್ಚು ಹಿಡಿದು ಫುಟ್‍ಬೋರ್ಡ್ ಮೇಲೆ ವಿದ್ಯಾರ್ಥಿ ಪುಂಡಾಟ

    CRIME 2

    ಲಾಲ್ ಮೊಹಮ್ಮದ್ ಐಎಸ್‍ಐಗೆ ಲಾಜಿಸ್ಟಿಕ್ಸ್ ಬೆಂಬಲದೊಂದಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡಿ-ಗ್ಯಾಂಗ್‍ನೊಂದಿಗೆ (Dawood Ibrahim’s D-Gang) ಸಂಪರ್ಕ ಹೊಂದಿದ್ದಲ್ಲದೇ ಸಹಾಯ ಕೂಡ ಮಾಡುತ್ತಿದ್ದನು. ಇದರ ಜೊತೆಗೆ ಐಎಸ್‍ಐ ಏಜೆಂಟ್‍ಗಳಿಗೂ ಆಶ್ರಯ ನೀಡಿದ್ದನು. ಇದನ್ನೂ ಓದಿ: 3 ದಿನಗಳ ಹಿಂದೆ ಸಭೆ – 6 ಕಂಟ್ರೋಲ್‌ ರೂಂ – PFI, SDPI ಮೇಲೆ NIA, ED ದಾಳಿಯ ಇನ್‌ಸೈಡ್‌ ನ್ಯೂಸ್‌

    ಇದೀಗ ಲಾಲ್ ಮೊಹಮ್ಮದ್ ಗುಂಡಿಕ್ಕಿ ಹತ್ಯೆಗೈದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಕಠ್ಮಂಡುವಿನ ಗೊತಾಟರ್ ಪ್ರದೇಶದಲ್ಲಿರುವ ತನ್ನ ಮನೆಯ ಮುಂದೆ ಐಷಾರಾಮಿ ಕಾರಿನಲ್ಲಿ ಬಂದ ಲಾಲ್ ಮೊಹಮ್ಮದ್ ಕೆಳಗಿಳಿಯುತ್ತಿದ್ದಂತೆ ಇಬ್ಬರು ಹಂತಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಕಾರಿನ ಹಿಂದೆ ಬಚ್ಚಿಟ್ಟಿಕೊಳ್ಳಲು ಲಾಲ್ ಮೊಹಮ್ಮದ್ ಪ್ರಯತ್ನಿಸಿದರೂ ದುಷ್ಕರ್ಮಿಗಳು ಬಿಟ್ಟುಬಿಡದೇ ಗುಂಡಿನ ದಾಳಿ ನಡೆಸಿದ್ದಾರೆ.

    ಇದೇ ವೇಳೆ ಮೊಹಮ್ಮದ್ ಅವರ ಮಗಳು ತಮ್ಮ ತಂದೆಯನ್ನು ರಕ್ಷಿಸಲು ಮನೆಯ ಮೊದಲನೇ ಮಹಡಿಯಿಂದ ಜಿಗಿಯುತ್ತಾರೆ. ಆದರೆ ಅಷ್ಟರಲ್ಲಿ ಆರೋಪಿಗಳು ಮೊಹಮ್ಮದ್‍ನನ್ನು ಕೊಂದು ಎಸ್ಕೇಪ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಕಲಿ ನೋಟು ಚಲಾವಣೆ – ಬಿಜೆಪಿ ಮಾಜಿ ಶಾಸಕನ 2ನೇ ಪತ್ನಿಗೆ 4 ವರ್ಷ ಜೈಲು ಶಿಕ್ಷೆ

    ನಕಲಿ ನೋಟು ಚಲಾವಣೆ – ಬಿಜೆಪಿ ಮಾಜಿ ಶಾಸಕನ 2ನೇ ಪತ್ನಿಗೆ 4 ವರ್ಷ ಜೈಲು ಶಿಕ್ಷೆ

    ರಾಂಚಿ: ನಕಲಿ ನೋಟು ಚಲಾವಣೆ ಮಾಡಿದ್ದಕ್ಕೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಬಿಜೆಪಿ ಮಾಜಿ ಶಾಸಕ ಪುಟ್ಕರ್ ಹೆಂಬ್ರೋಮ್ ಅವರ ಪತ್ನಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

    ಬಿಜೆಪಿ ಮಾಜಿ ಶಾಸಕನ ಪತ್ನಿ ಮಲಯಾ ಹೆಂಬ್ರೋಮ್ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸೂರ್ಯಭೂಷಣ್ ಓಜಾ ಅವರು ಬುಧವಾರ ಮಲಯಾ ಹೆಂಬ್ರೋಮ್‌ಗೆ ಜೈಲು ಶಿಕ್ಷೆ ವಿಧಿಸಿದ್ದಾರೆ. ಇದನ್ನೂ ಓದಿ: ಉಜ್ಜಯಿನಿ ಮಹಾಕಾಳೇಶ್ವರ ಮಂದಿರದಲ್ಲಿ ಸಂಸದ ತೇಜಸ್ವಿ ಸೂರ್ಯ ಬೆಂಬಲಿಗರ ಗಲಾಟೆ

    ನ್ಯಾಯಾಲಯ ಆಕೆಗೆ 5,000 ದಂಡವನ್ನೂ ವಿಧಿಸಿದೆ. ಜೈಲು ಶಿಕ್ಷೆಗೆ ಒಳಗಾಗಿರುವ ಮಲಯಾ ಅವರು ಚೈಬಾಸಾ ಕ್ಷೇತ್ರದ ಮಾಜಿ ಶಾಸಕನ ಎರಡನೇ ಪತ್ನಿ. ಮಟ್ಕಮ್ಹತು ಗ್ರಾಮದ ನಿವಾಸಿ ಜಯಂತಿ ದೇವಗಂ ಎಂಬವರು 2020ರ ಸೆಪ್ಟೆಂಬರ್‌ನಲ್ಲಿ ಮಲಯಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಮಲಯಾ ನಮ್ಮ ಅಂಗಡಿಯಿಂದ 1,600 ರೂ. ಮೌಲ್ಯದ ವಸ್ತುಗಳನ್ನು ಖರೀದಿಸಿ 2,000 ರೂ. ಮುಖಬೆಲೆಯ ನೋಟು ನೀಡಿದ್ದರು. ಆ ನೋಟಿನೊಂದಿಗೆ ಠೇವಣಿ ಇಡಲು ಎಸ್‌ಬಿಐಗೆ ಹೋಗಿದ್ದೆ. ಆದರೆ ಬ್ಯಾಂಕ್‌ನಲ್ಲಿ ಆ ನೋಟನ್ನು ಸ್ವೀಕರಿಸಲಿಲ್ಲ ಎಂದು ಜಯಂತಿ ತಮ್ಮ ದೂರಿನಲ್ಲಿ ಆರೋಪಿಸಿದ್ದರು. ಇದನ್ನೂ ಓದಿ: ಮಧ್ಯರಾತ್ರಿ, ಮದ್ಯ ಸೇವಿಸಿದ ಅಮಲಿನಲ್ಲಿ ಕಾಂಗ್ರೆಸ್ ಐಟಿ ಸೆಲ್ ಟ್ವೀಟ್ ಮಾಡಿದೆ: ರೇಣುಕಾಚಾರ್ಯ

    ಮರುದಿನ ಅದೇ ನೋಟನ್ನು ಸ್ಥಳೀಯ ಅಂಗಡಿಗೆ ನೀಡಿದಾಗ ಅಲ್ಲಿಯೂ ಸ್ವೀಕರಿಸಲಿಲ್ಲ. ನೋಟು ಸಮೇತ ಮಲಯಾ ಅವರ ಬಳಿ ಹೋದಾಗ ನನ್ನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಘಟನೆ ನಡೆದಾಗ ಆ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಪೊಲೀಸ್ ತಂಡವು ನಕಲಿ ನೋಟು ಸಹಿತ ಮಲಯಾ ಅವರನ್ನು ಬಂಧಿಸಿದೆ. ದೆಹಲಿಯಿಂದ 500 ರೂ.ಗೆ ನಕಲಿ ನೋಟು ಖರೀದಿಸಿ ಇಲ್ಲಿ ಚಲಾವಣೆ ಮಾಡಲು ಯತ್ನಿಸಿದ್ದೆ ಎಂದು ಮಲಯಾ, ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿಗೆ ರಾಖಿ ಕಟ್ಟಿದ ಮಕ್ಕಳು

    Live Tv
    [brid partner=56869869 player=32851 video=960834 autoplay=true]

  • ನಕಲಿ ನೋಟುಗಳ ಹಾವಳಿ ಹೆಚ್ಚಳ – ಕೇಂದ್ರದ ವಿರುದ್ಧ ಕಾಂಗ್ರೆಸ್, ಟಿಎಂಸಿ ತರಾಟೆ

    ನಕಲಿ ನೋಟುಗಳ ಹಾವಳಿ ಹೆಚ್ಚಳ – ಕೇಂದ್ರದ ವಿರುದ್ಧ ಕಾಂಗ್ರೆಸ್, ಟಿಎಂಸಿ ತರಾಟೆ

    ನವದೆಹಲಿ: ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ವರದಿಯಲ್ಲಿ ದೇಶದಲ್ಲಿ ನಕಲಿ ನೋಟುಗಳ ಹಾವಳಿ ಭಾರೀ ಪ್ರಮಾಣದ ಏರಿಕೆಯನ್ನು ಬಹಿರಂಗಪಡಿಸಿದೆ. 2016ರಲ್ಲಿ ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡ ನೋಟು ಅಮಾನ್ಯೀಕರಣ ಕ್ರಮದ ಬಗ್ಗೆ ಇತರ ಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.

    ಆರ್‌ಬಿಐ ವರದಿ ಪ್ರಕಾರ, 2021-22ರ ಆರ್ಥಿಕ ವರ್ಷದಲ್ಲಿ ಎಲ್ಲಾ ಮುಖಬೆಲೆಯ ನಕಲಿ ನೋಟುಗಳು ಹೆಚ್ಚಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, 500 ರೂ. ಮುಖಬೆಲೆಯ ನಕಲಿ ನೋಟುಗಳು ಶೇ.101.9 ರಷ್ಟು ಹೆಚ್ಚಾಗಿದೆ. 2,000 ರೂ. ಮುಖಬೆಲೆಯ ನಕಲಿ ನೋಟುಗಳು ಶೇ.54.16 ರಷ್ಟು ಹೆಚ್ಚಾಗಿದೆ.

    2016ರಲ್ಲಿ ಕೇಂದ್ರ ಸರ್ಕಾರ ಕಪ್ಪು ಹಣ ಹೊರಹಾಕುವುದು ಮಾತ್ರವಲ್ಲದೇ ನಕಲಿ ನೋಟುಗಳನ್ನು ನಿರ್ಮೂಲನೆ ಮಾಡುವ ಕಾರಣಕ್ಕೂ 500 ಹಾಗೂ 1,000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿತ್ತು.

    ಇದೀಗ ಆರ್‌ಬಿಐ ವರದಿಯಲ್ಲಿ ದೇಶದಲ್ಲಿ ನಕಲಿ ನೋಟು ಹೆಚ್ಚುತ್ತಿರುವ ಮಾಹಿತಿಯನ್ನು ಹೊರಹಾಕಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಟಿಎಂಟಿಸಿ ಸಂಸದ ಓಬ್ರೇನ್ ಅವರು ಟ್ವಿಟ್ಟರ್‌ನಲ್ಲಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಯುನಿಕಾರ್ನ್‌ಗಳ ಮೌಲ್ಯ 25 ಲಕ್ಷ ಕೋಟಿಗೆ ಹೆಚ್ಚಳ – ಮೋದಿ

    ಕೇಂದ್ರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ನೋಟು ರದ್ದತಿಯ ಏಕೈಕ ದುರದೃಷ್ಟಕರ ಯಶಸ್ಸು ಎಂದರೆ ಭಾರತದ ಆರ್ಥಿಕತೆಯ ನಾಶ ಎಂದಿದ್ದಾರೆ.

    ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಟಿಎಂಸಿ ನಾಯಕ ಡೆರೆಕ್ ಒಬ್ರೇನ್, ನರೇಂದ್ರ ಮೋದಿಯವರೆ, ನೋಟು ಅಮಾನ್ಯೀಕರಣ ನೆನಪಿದೆಯಾ? ನೋಟು ರದ್ದತಿ ರಾಷ್ಟ್ರದ ಎಲ್ಲಾ ನಕಲಿ ನೋಟುಗಳನ್ನು ತೊಡೆದು ಹಾಕುತ್ತದೆ ಎಂದು ನೀವು ಯಾವ ಭರವಸೆಯಲ್ಲಿ ಹೇಳಿದ್ದೀರಿ? ಇದೀಗ ಆರ್‌ಬಿಐ ವರದಿ ಪ್ರಕಾರ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

    ನೋಟು ಅಮಾನ್ಯೀಕರಣ:
    2016ರ ನವೆಂಬರ್‌ನಲ್ಲಿ ಸರ್ಕಾರ ಎಲ್ಲಾ 500 ಹಾಗೂ 1,000 ರೂ. ನೋಟುಗಳನ್ನು ಅಮಾನ್ಯೀಕರಿಸಿತು ಹಾಗೂ ಹೊಸ 500 ಮತ್ತು 2,000 ರೂ. ನೋಟುಗಳನ್ನು ಬಿಡುಗಡೆ ಮಾಡಿತು. ಈ ಕ್ರಮದಿಂದ ಭ್ರಷ್ಟಾಚಾರಕ್ಕೆ ಹಾಗೂ ನಕಲಿ ನೋಟು ಬಳಕೆಗೆ ಕಡಿವಾಣ ಬೀಳಲಿದ್ದು, ಡಿಜಿಟಲ್ ವಹಿವಾಟಿಗೆ ಉತ್ತೇಜನ ಸಿಗಲಿದೆ ಎಂದು ಕೇಂದ್ರ ತಿಳಿಸಿತ್ತು.

    ಹಠಾತ್ತನೆ ನೋಟು ಅಮಾನ್ಯೀಕರಣದ ಘೋಷಣೆಯಿಂದಾಗಿ ಜನರು ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕ್‌ಗಳ ಎದುರು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಸರ್ಕಾರದ ಕ್ರಮದಿಂದ ನಗದು ಕೊರತೆ ಹಾಗೂ ಅನಾನುಕೂಲತೆಯೂ ಉಂಟಾಗಿತ್ತು. ಅಂದಿನಿಂದಲೂ ಈ ವಿಷಯ ದೇಶದಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ.