Tag: ನಕಲಿ ನಾಗಮಣಿ

  • ನಕಲಿ ನಾಗಮಣಿ ದಂಧೆ- ಕೊಳ್ಳೇಗಾಲದಲ್ಲಿ ಓರ್ವನ ಬಂಧನ

    ನಕಲಿ ನಾಗಮಣಿ ದಂಧೆ- ಕೊಳ್ಳೇಗಾಲದಲ್ಲಿ ಓರ್ವನ ಬಂಧನ

    ಚಾಮರಾಜನಗರ: ಇಷ್ಟು ದಿನ ಗೂಬೆ ಮಾರಾಟ ಆಯ್ತು, ಈಗ ನಕಲಿ ನಾಗಮಣಿ ಮಾರಾಟ ದಂಧೆಯು ಕೊಳ್ಳೇಗಾಲದಲ್ಲಿ ನಡೆಯುತ್ತಿದ್ದು, ಈ ದಂಧೆಯಲ್ಲಿ ಭಾಗಿಯಾಗಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಮುತ್ತು ಎಂದು ಗುರುತಿಸಲಾಗಿದ್ದು, ಈತ ಹನೂರು ಸಮೀಪದ ಎಂ.ಜಿ.ದೊಡ್ಡಿಯಲ್ಲಿ ನಕಲಿ ನಾಗಮಣಿ ಮಾರಾಟ ಮಾಡುತ್ತಿದ್ದನು. ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸುತ್ತಮುತ್ತ ನಾಗಮಣಿ ಖರೀದಿಸಿದರೆ ಅದೃಷ್ಟ ಬರುತ್ತೆ, ಒಳ್ಳೆಯದಾಗುತ್ತೆ ಎಂದು ಜನರನ್ನು ನಂಬಿಸಿ ದುಷ್ಕರ್ಮಿಗಳು ನಕಲಿ ನಾಗಮಣಿಗಳನ್ನು ಮಾರಾಟ ಮಾಡುತ್ತಿದ್ದರು.

    ಮಾಟ ಮಂತ್ರಕ್ಕೆ ಹೆಸರಾಗಿರುವ ಕೊಳ್ಳೇಗಾಲದಲ್ಲಿ ನಾಗಮಣಿಗೆ ಹೆಚ್ಚಿನ ಡಿಮ್ಯಾಂಡ್ ಇದ್ದಿದ್ದರಿಂದ ದಂಧೆಕೋರರು ನಕಲಿ ನಾಗಮಣಿ ದಂಧೆಯನ್ನು ಪ್ರಾರಂಭಿಸಿದ್ದರು. ಆದರಿಂದ ದಂಧೆಕೋರರು ಲಕ್ಷಾಂತರ ರೂಪಾಯಿಗೆ ನಕಲಿ ನಾಗಮಣಿಗಳನ್ನು ಜನರಿಗೆ ಮಾರಾಟ ಮಾಡುತ್ತಿದ್ದರು.

    ಈ ವಿಷಯ ತಿಳಿದ ಪೊಲೀಸರು ದಂಧೆಯಲ್ಲಿ ಶಾಮಿಲಾಗಿದ್ದ ಓರ್ವ ಆರೋಪಿಯನ್ನು ನಕಲಿ ನಾಗಮಣಿಯನ್ನು ಜನರಿಗೆ ಮಾರುತ್ತಿದ್ದ ವೇಳೆ ಬಂಧಿಸಿದ್ದಾರೆ. ಘಟನೆ ಕುರಿತು ಹನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಕಲಿ ನಾಗಮಣಿ ಮಾರಾಟ ಯತ್ನ- ಮೂವರು ಆರೋಪಿಗಳ ಬಂಧನ!

    ನಕಲಿ ನಾಗಮಣಿ ಮಾರಾಟ ಯತ್ನ- ಮೂವರು ಆರೋಪಿಗಳ ಬಂಧನ!

    ದಾವಣಗೆರೆ: ಜಿಲ್ಲೆಯ ಆನಗೋಡು ಗ್ರಾಮದ ಬಳಿ ನಕಲಿ ನಾಗಮಣಿಯನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ.

    ಕರಿಬಸಪ್ಪ, ಕುಮಾರ್ ಹಾಗೂ ಸುರೇಶ್ ಬಂಧಿತ ಆರೋಪಿಗಳು. ಕುಮಾರ್ ಹಾಗೂ ಸುರೇಶ್ ಎಂಬವರು ಆನಗೋಡು ಗ್ರಾಮದ ಕರಿಬಸಪ್ಪ ಎನ್ನುವರಿಗೆ ನಕಲಿ ನಾಗಮಣಿಯನ್ನು ತೋರಿಸಿ, ಇದು ನೂರಾರು ಕೋಟಿ ರೂ. ಬೆಲೆಬಾಳುತ್ತದೆ ಎಂದು ನಂಬಿಸಿ ವ್ಯಾಪಾರವನ್ನು ಕುದುರಿಸಿದ್ದರು. ಅಲ್ಲದೇ 10 ಲಕ್ಷಕ್ಕೆ ನಕಲಿ ನಾಗಮಣಿಯ ಡೀಲ್ ಮುಗಿಸಿಕೊಂಡಿದ್ದ ಇಬ್ಬರೂ, ಮುಂಗಡವಾಗಿ 50 ಸಾವಿರ ರೂಪಾಯಿಯನ್ನು ಪಡೆದುಕೊಂಡಿದ್ದರು.

    ಇದರ ಖಚಿತ ಮಾಹಿತಿ ಪಡೆದ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‍ಐ ಕಿರಣ್ ಕುಮಾರ್ ಹಾಗೂ ಡಿಸಿಬಿ ಇನ್ಸ್ ಪೆಕ್ಟರ್ ದೇವರಾಜ್ ನೇತೃತ್ವದ ತಂಡ ದಾಳಿ ನಡೆಸಿತ್ತು. ದಾಳಿ ವೇಳೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಳಿಯಿದ್ದ ನಕಲಿ ನಾಗಮಣಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಜಿಲ್ಲೆಯಾದ್ಯಂತ ಇಲ್ಲಿಯವರೆಗೆ ನಕಲಿ ಬಂಗಾರದ ಹಾವಳಿ ಹೆಚ್ಚಾಗಿದ್ದು, ಇದೀಗ ನಕಲಿ ನಾಗಮಣಿ ಮಾರಾಟದ ಜಾಲ ತಲೆ ಎತ್ತಿದೆ. ಹೀಗಾಗಿ ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ಸಂಬಂಧ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv