Tag: ನಕಲಿ ಟಿಕೆಟ್

  • RCB ಅಭಿಮಾನಿಗಳೇ ಎಚ್ಚರ – ಬ್ಲ್ಯಾಕ್‌ನಲ್ಲಿ ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿ ಮೋಸ ಹೋಗದಿರಿ

    RCB ಅಭಿಮಾನಿಗಳೇ ಎಚ್ಚರ – ಬ್ಲ್ಯಾಕ್‌ನಲ್ಲಿ ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿ ಮೋಸ ಹೋಗದಿರಿ

    ಬೆಂಗಳೂರು: ಆರ್‌ಸಿಬಿ (RCB) ಅಭಿಮಾನಿಗಳೇ ಎಚ್ಚರವಾಗಿರಿ. ಬೆಂಗಳೂರಿನಲ್ಲಿ (Bengaluru) ಕ್ರಿಕೆಟ್ (Cricket) ಪಂದ್ಯಗಳ ನಕಲಿ ಟಿಕೆಟ್‌ಗಳು (Fake Tickets) ದುಬಾರಿ ಬೆಲೆಗೆ ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿದೆ.

    ಹೌದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ನಡೆದಿದ್ದ ಮುಂಬೈ ಹಾಗೂ ಆರ್‌ಸಿಬಿ ತಂಡಗಳ ನಡುವಿನ ಪಂದ್ಯದ ವೇಳೆ ಭಾರೀ ಸಂಖ್ಯೆಯಲ್ಲಿ ನಕಲಿ ಟಿಕೆಟ್ ಮಾರಾಟವಾಗಿದೆ.

    ಏ.2 ರಂದು ಆರ್‌ಸಿಬಿ ಮತ್ತು ಮುಂಬೈ ತಂಡದ ಪಂದ್ಯದ ವೇಳೆ ಹಲವು ಟಿಕೆಟ್‌ಗಳು ಸ್ಕ್ಯಾನ್ ಆಗುತ್ತಿರಲಿಲ್ಲ. ಟಿಕೆಟ್ ಸ್ಕ್ಯಾನ್ ಆಗದೇ ಇದ್ದರೂ ಸ್ಕ್ಯಾನರ್‌ನಲ್ಲಿ ತಾಂತ್ರಿಕ ದೋಷ ಇದ್ದಿರಬಹುದು ಎಂಬ ಕಾರಣಕ್ಕೆ ಭದ್ರತಾ ಸಿಬ್ಬಂದಿ ಅಭಿಮಾನಿಗಳನ್ನು ಒಳಗಡೆ ಬಿಟ್ಟಿದ್ದರು. ಆದರೆ ಈಗ ಟಿಕೆಟ್ ಯಾಕೆ ಸ್ಕ್ಯಾನ್ ಆಗಿಲ್ಲ ಎನ್ನುವುದ್ದಕ್ಕೆ ಕಾರಣ ಪತ್ತೆಯಾಗಿದೆ.

    ಆರ್‌ಸಿಬಿಯ ಮೊದಲ ಪಂದ್ಯಕ್ಕೆ ಬರೋಬ್ಬರಿ 7 ಸಾವಿರಕ್ಕೂ ಅಧಿಕ ನಕಲಿ ಟಿಕೆಟ್‌ಗಳು ಮಾರಾಟವಾಗಿದೆ. ಈ ನಕಲಿ ಟಿಕೆಟ್‌ಗಳ ಕ್ಯೂಆರ್ ಕೋಡ್ ಸ್ಕ್ಯಾನ್ ಆಗದೇ ಇದ್ದರೂ ತಾಂತ್ರಿಕ ಸಮಸ್ಯೆಯೆಂದು ಭಾವಿಸಿದ್ದ ಸಿಬ್ಬಂದಿ ಎಲ್ಲರನ್ನೂ ಸ್ಟೇಡಿಯಂನ ಒಳಗಡೆ ಪ್ರವೇಶಿಸಲು ಅನುಮತಿ ನೀಡಿದ್ದರು. ಇದನ್ನೂ ಓದಿ: ಒಂದೇ ಕೈಯಲ್ಲಿ ಜಡೇಜಾ ಕ್ಯಾಚ್‌ – 10 ವರ್ಷದ ಹಿಂದೆ ʼಸರ್‌ ಜಡೇಜಾʼ ಎಂದಿದ್ದ ಧೋನಿ ಟ್ವೀಟ್‌ ವೈರಲ್‌

    ಮೊದಲ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಟ್ಟು 33 ಸಾವಿರ ಸೀಟುಗಳ ಬದಲಿಗೆ 40 ಸಾವಿರ ಟಿಕೆಟ್‌ಗಳು ಮಾರಾಟವಾಗಿತ್ತು. ಈಗ ಬ್ಲ್ಯಾಕ್‌ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಕಿಡಿಗೇಡಿಗಳು ನಕಲಿ ಟಿಕೆಟ್‌ಗಳನ್ನು 2-3 ಪಟ್ಟು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸೋಮವಾರ ಆರ್‌ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪಂದ್ಯಕ್ಕೆ ಮಫ್ತಿಯಲ್ಲಿ ಹೆಚ್ಚು ಪೊಲೀಸರ ನಿಯೋಜನೆಗೆ ಸಿದ್ಧತೆ ನಡೆಸಲಾಗಿದೆ. ಇದೀಗ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಲೂ ಪೊಲೀಸರು ಮಫ್ತಿಯಲ್ಲಿದ್ದಾರೆ. ಇದನ್ನೂ ಓದಿ: IPL 2023: ವೇಗದ ಅರ್ಧಶತಕ ಸಿಡಿಸಿ ಧೂಳೆಬ್ಬಿಸಿದ ರಹಾನೆ

  • ಆನ್‍ಲೈನ್‍ನಲ್ಲಿ ತಾಜ್‍ಮಹಲ್‍ಗೆ ನಕಲಿ ಟಿಕೆಟ್ ಮಾರುತ್ತಿದ್ದ ಟೆಕ್ಕಿ ಅರೆಸ್ಟ್

    ಆನ್‍ಲೈನ್‍ನಲ್ಲಿ ತಾಜ್‍ಮಹಲ್‍ಗೆ ನಕಲಿ ಟಿಕೆಟ್ ಮಾರುತ್ತಿದ್ದ ಟೆಕ್ಕಿ ಅರೆಸ್ಟ್

    ನವದೆಹಲಿ: ತಾಜ್‍ಮಹಲ್‍ಗೆ ಆನ್‍ಲೈನ್‍ನಲ್ಲಿ ನಕಲಿ ಟಿಕೆಟ್‍ಗಳನ್ನು ಮಾರಾಟ ಮಾಡುವ ಮೂಲಕ ನೂರಾರು ಜನರನ್ನು ವಂಚಿಸುತ್ತಿದ್ದ  ಸಾಫ್ಟ್ ವೇರ್ ಇಂಜಿನಿಯರನ್ನು ದೆಹಲಿಯ ಸೈಬರ್ ಸೆಲ್ ಕ್ರೈಂ ಬ್ರಾಂಚ್ ಬಂಧಿಸಿದೆ.

    ಆರೋಪಿಯನ್ನು ಸಂದೀಪ್ ಚಂದ್ ಎಂದು ಗುರುತಿಸಲಾಗಿದ್ದು, ಈತ ಉತ್ತರಾಖಂಡದ ಡೆಹ್ರಾಡೂನ್ ನಿವಾಸಿಯಾಗಿದ್ದಾನೆ. ಅಲ್ಲದೇ ಆರೋಪಿ ಉತ್ತರ ಪ್ರದೇಶದ ನೋಯ್ಡಾದ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಹಿರಿಯ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್

    ಆನ್‍ಲೈನ್‍ನಲ್ಲಿ ತಾಜ್‍ಮಹಲ್‍ಗೆ ಟಿಕೆಟ್ ಬುಕ್ ಮಾಡಿ ಜನರು ವಂಚನೆಗೊಳಗಾಗುತ್ತಿರುವ ಬಗ್ಗೆ ಸಂಸ್ಕೃತ ಸಚಿವಾಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‍ಐ) ಮಹಾ ನಿರ್ದೇಶಕರು ದೂರು ನೀಡಿದ ಬಳಿಕ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದರು. ಪ್ರವಾಸಿಗರಲ್ಲಿ ಒಬ್ಬರು www.agramonuments ಎಂಬ ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಟಿಕೆಟ್ ಬುಕಿಂಗ್ ಮಾಡಿದ್ದರು. ಆದರೆ ಟಿಕೆಟ್ ಸಹ ಪಡೆಯದೇ ಬ್ಯಾಂಕ್‍ನಿಂದ ಹಣ ಕಡಿತವಾದಾಗ ಈ ವಿಚಾರ ಬೆಳಕಿಗೆ ಬಂದಿದೆ.

    ಈ ಕುರಿತಂತೆ ತನಿಖೆ ವೇಳೆ ಪೊಲೀಸರಿಗೆ ಆರೋಪಿ ವೆಬ್‍ಸೈಟ್ ಕುರಿತ ಮಾಹಿತಿ ಲಭ್ಯವಾಗಿದೆ ಮತ್ತು ಆರೋಪಿ ಆಗಾಗ ಸ್ಥಳ ಬದಲಾಯಿಸುತ್ತಿದ್ದನು ಎಂಬ ವಿಚಾರ ಬಹಿರಂಗಗೊಂಡಿದ್ದು, ಆತನನ್ನು ಉತ್ತರಾಖಂಡದ ಚಂಪಾವತ್‍ನಿಂದ ಪೊಲೀಸರು ಬಂಧಿಸಲಾಗಿದೆ. ಇದನ್ನೂ ಓದಿ:  ನೀವು ಲಂಚ ಪಡೆದಿಲ್ಲ ಅಂದ್ರೆ ಹ್ಯೂಬ್ಲೋಟ್ ವಾಚ್ ಎಲ್ಲಿಂದ ಬಂತು – ಸಿದ್ದುಗೆ ಬಿಜೆಪಿ ಪ್ರಶ್ನೆ

    ವಿಚಾರಣೆ ವೇಳೆ ಆರೋಪಿ ಲಾಕ್‍ಡೌನ್‍ನಿಂದಾಗಿ ತನಗೆ ಸರಿಯಾಗಿ ಕೆಲಸ ಇರಲಿಲ್ಲ. ಹೀಗಾಗಿ ಇಂಟರ್‌ನೆಟ್‌ನಲ್ಲಿ ಹುಡುಕಾಡುತ್ತಿದ್ದ ವೇಳೆ ನಕಲಿ ವೆಬ್‍ಸೈಟ್ ಸೃಷ್ಟಿಸುವ ಆಲೋಚನೆ ಬಂತು. ತಾಜ್ ಮಹಲ್‍ಗೆ ಭೇಟಿ ನೀಡಲು ಆನ್‍ಲೈನ್ ಟಿಕೆಟ್‍ಗಳನ್ನು ಮಾರಾಟ ಮಾಡುವ ನೆಪದಲ್ಲಿ ಜನರನ್ನು ವಂಚಿಸಿ, ಸುಲಭವಾಗಿ ಹಣ ಸಂಪಾದಿಸಲು www.agramonuments ಎಂಬ ನಕಲಿ ವೆಬ್‍ಸೈಟ್ ಕ್ರಿಯೆಟ್ ಮಾಡಿರುವುದಾಗಿ ತಿಳಿಸಿದ್ದಾನೆ.