Tag: ನಕಲಿ ಗೊಬ್ಬರ

  • ನಕಲಿ ಗೊಬ್ಬರ ತಯಾರಿಕಾ ಅಡ್ಡೆ ಮೇಲೆ ದಾಳಿ

    ನಕಲಿ ಗೊಬ್ಬರ ತಯಾರಿಕಾ ಅಡ್ಡೆ ಮೇಲೆ ದಾಳಿ

    ಮೈಸೂರು: ನಕಲಿ ಗೊಬ್ಬರ ತಯಾರಿಕೆ ಅಡ್ಡೆಯ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಮಂಡಕಳ್ಳಿ ಬಳಿಯ ಹಳೆ ಕೋಳಿ ಫಾರಂ ಒಂದರಲ್ಲಿ ನಕಲಿ ಗೊಬ್ಬರ ತಯಾರಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧಾರಿಸಿ
    ಮೈಸೂರು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಮಧುಲತಾ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ‌ ನಡೆಸಿದ್ದಾರೆ.

    ದಾಳಿಯ ವೇಳೆ ಹಲವು ಸಲಕರಣೆಗಳು ಪತ್ತೆಯಾಗಿವೆ. ಅಸಲಿ ಗೊಬ್ಬರಕ್ಕೆ ಮಿಶ್ರಣ ಮಾಡಲು ಶೇಖರಿಸಿಟ್ಟಿದ್ದ ಜೇಡಿಮಣ್ಣಿನ ಚೀಲಗಳು, ಯಂತ್ರೋಪಕರಣಗಳು ಪತ್ತೆಯಾಗಿವೆ.ಈ ಕುರಿತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಪ್ಲೇಯಿಂಗ್ 11ನಲ್ಲಿ ಹೆಸರಿಲ್ಲ ಆದ್ರೂ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ!

    ಈ ಹಳೇ ಕೋಳಿ ಫಾರಂ ಬಾಡಿಗೆಗೆ ಪಡೆದು ನಕಲಿ ಗೊಬ್ಬರ ತಯಾರಿಸಲಾಗುತ್ತಿತ್ತು. ಮೈಸೂರು ಮೂಲದ ಮಹೇಶ್ ಎಂಬ ವ್ಯಕ್ತಿಯಿಂದ ನಕಲಿ ಗೊಬ್ಬರ ತಯಾರಿಕೆ ದಂಧೆ ನಡೆಯುತ್ತಿತ್ತು.

    Live Tv
    [brid partner=56869869 player=32851 video=960834 autoplay=true]

  • ಉಪ್ಪಿಗೆ ರೆಡ್ ಆಕ್ಸೈಡ್ ಮಿಶ್ರಣ ಮಾಡಿ ಗೊಬ್ಬರವೆಂದು ಮಾರಾಟ – ಆರೋಪಿಗಳು ಪೊಲೀಸರ ಬಲೆಗೆ

    ಉಪ್ಪಿಗೆ ರೆಡ್ ಆಕ್ಸೈಡ್ ಮಿಶ್ರಣ ಮಾಡಿ ಗೊಬ್ಬರವೆಂದು ಮಾರಾಟ – ಆರೋಪಿಗಳು ಪೊಲೀಸರ ಬಲೆಗೆ

    ಹಾಸನ: ಉಪ್ಪಿಗೆ ರೆಡ್ ಆಕ್ಸೈಡ್ ಬೆರೆಸಿ ಅದನ್ನೇ ಪೊಟ್ಯಾಷ್ ಗೊಬ್ಬರ ಎಂದು ಮಾರುತ್ತಿದ್ದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದ ಘಟನೆ ಹಾಸನದಲ್ಲಿ ನಡೆದಿದೆ.

    ಪೊಟ್ಯಾಷ್ ಗೊಬ್ಬರದ ಚೀಲವನ್ನು ಹೋಲುವ ಚೀಲಕ್ಕೆ ನಕಲಿ ಗೊಬ್ಬರ ತುಂಬಿ ಪೂರೈಕೆ ಮಾಡುತ್ತಿದ್ದ ಜಾಲ ಹಾಸನದಲ್ಲಿ ಸಿಕ್ಕಿಬಿದ್ದಿದೆ. ಹಾಸನದ ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸ್ ಠಾಣೆ ಪಿಎಸ್‍ಐ ಅಜಯ್ ತಂಡ ಈ ಪ್ರಕರಣ ಬೇಧಿಸಿದ್ದು ಇಬ್ಬರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಒಡೆದು ಹೋದ 4 ಕೆರೆ ಕಟ್ಟೆಗಳು – ಆತಂಕದಲ್ಲಿ ಗ್ರಾಮಸ್ಥರು

    ಆನಂದ್ ಮತ್ತು ಅವಿನಾಶ್ ಬಂಧಿತ ಆರೋಪಿಗಳು. ಮೈಸೂರಿನ ಜಿಲ್ಲೆಯ ಶೆಡ್ ಒಂದರಲ್ಲಿ ತಯಾರಾಗುವ ನಕಲಿ ಗೊಬ್ಬರವನ್ನು ಆರೋಪಿಗಳಾದ ಅವಿನಾಶ್, ಆನಂದ್ ಹಾಸನ ಜಿಲ್ಲೆಗೆ ಕಳ್ಳಸಾಗಾಣೆ ಮಾಡುತ್ತಿದ್ದರು. ಇದೇ ಟಾಟಾ ಎಸಿಯಲ್ಲಿ ನಕಲಿ ಗೊಬ್ಬರವನ್ನು ತುಂಬಿಕೊಂಡು ಸಾಲಿಗ್ರಾಮ ಕಡೆಯಿಂದ ಕೇರಳಾಪುರ ಮಾರ್ಗವಾಗಿ ಬರುವಾಗ, ಕೊಣನೂರು ಠಾಣೆ ಪಿಎಸ್‍ಐ ಅಜಯ್ ಕುಮಾರ್ ತಂಡ ಈ ನಕಲಿ ಗೊಬ್ಬರ ಸಾಗಿಸುತ್ತಿದ್ದವರನ್ನು ಗೂಡ್ಸ್ ವಾಹನ ಸಮೇತ ಬಂಧಿಸಿದ್ದಾರೆ. ಇದನ್ನೂ ಓದಿ: ಎಂಜಿನಿಯರಿಂಗ್ ಓದುತ್ತಿರುವಾಗಲೇ ಜಿ.ಪಂ.ಅಧ್ಯಕ್ಷೆಯಾದ ಯುವತಿ

    ಈ ಟಾಟಾ ಗೂಡ್ಸ್ ವಾಹನದಿಂದ 50 ಕೆಜಿ ತೂಕದ ಒಟ್ಟು 56 ನಕಲಿ ಗೊಬ್ಬರ ಚೀಲಗಳನ್ನು ವಶ ಪಡಿಸಿಕೊಳ್ಳಲಾಗಿದೆ. ನಕಲಿ ಗೊಬ್ಬರದ ಬಗ್ಗೆ ಎಚ್ಚರದಿಂದ ಇರುವಂತೆ ರೈತರಿಗೆ ಹಾಸನ ಎಸ್‍ಪಿ ಮನವಿ ಮಾಡಿದ್ದಾರೆ.

  • ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ರೂ. ಮೌಲ್ಯದ ನಕಲಿ ಡಿಎಪಿ ಗೊಬ್ಬರ ಜಪ್ತಿ

    ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ರೂ. ಮೌಲ್ಯದ ನಕಲಿ ಡಿಎಪಿ ಗೊಬ್ಬರ ಜಪ್ತಿ

    ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಕುಣೆಕೆಲ್ಲೂರು ಹಾಗೂ ಮಟ್ಟೂರು ಗ್ರಾಮಗಳಲ್ಲಿ ದಾಳಿ ನಡೆಸಿದ ಲಿಂಗಸುಗೂರು ತಾಲೂಕು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ತಂಡ 6 ಲಕ್ಷ ಮೌಲ್ಯದ 514 ಚೀಲ ನಕಲಿ ಡಿಎಪಿ ಗೊಬ್ಬರ ವಶಪಡಿಸಿಕೊಂಡಿದೆ.

    ದಾಳಿ ವೇಳೆ ಕುಣೆಕೆಲ್ಲೂರು, ಮಟ್ಟೂರು ಗ್ರಾಮದ ವಿವಿಧೆಡೆ ಸಂಗ್ರಹಿಸಿಟ್ಟಿದ್ದ ನಕಲಿ ಗೊಬ್ಬರ ಜಪ್ತಿಮಾಡಲಾಗಿದೆ. ಗಂಗಾವತಿ ಮೂಲದ ಪ್ರಶಾಂತ, ರಾಮಚಂದ್ರ ಎಂಬುವರಿಂದ ನಕಲಿ ಗೊಬ್ಬರ ಮಾರಾಟ ದಂಧೆ ನಡೆದಿದ್ದು, ಗಂಗಾವತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನನ್ವಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೂರ್ನಾಲ್ಕು ವರ್ಷದಿಂದ ನಕಲಿ ಗೊಬ್ಬರ ಮಾರಾಟದಲ್ಲಿ ತೊಡಗಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

    ತಾಲೂಕು ಕೃಷಿ ಅಧಿಕಾರಿಗಳಾದ ಮಂಜುಳಾ ಬಸರೆಡ್ಡಿ, ಮಹಾಂತೇಶ್ ಹವಾಲ್ದಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಮುಂಗಾರು ಹಂಗಾಮು ಚೆನ್ನಾಗಿರುವುದರಿಂದ ರೈತರು ಗೊಬ್ಬರಕ್ಕಾಗಿ ಅಂಗಡಿಯಿಂದ ಅಂಗಡಿಗಳಿಗೆ ಅಲೆಯುತ್ತಿರುವುದನ್ನು ನಕಲಿ ದಂಧೆಕೋರರು ಬಂಡವಾಳ ಮಾಡಿಕೊಂಡು ವಂಚನೆ ನಡೆಸಿದ್ದಾರೆ. ಗಂಗಾವತಿ ಠಾಣೆ ಪೊಲೀಸರ ಮಾಹಿತಿ ಮೇರೆಗೆ ದಾಳಿ ನಡೆಸಿ, ನಕಲಿ ಗೊಬ್ಬರ ವಶಪಡಿಸಿಕೊಳ್ಳಲಾಗಿದ್ದು, ಗೊಬ್ಬರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.