Tag: ನಕಲಿ ಖಾತೆ

  • ಗೋಲ್ಡೋನ್‌ ಗೋಲ್ಮಾಲ್ – ಬ್ಯಾಂಕ್ ಮ್ಯಾನೇಜರ್‌ನಿಂದ 10.97 ಕೋಟಿ ವಂಚನೆ

    ಗೋಲ್ಡೋನ್‌ ಗೋಲ್ಮಾಲ್ – ಬ್ಯಾಂಕ್ ಮ್ಯಾನೇಜರ್‌ನಿಂದ 10.97 ಕೋಟಿ ವಂಚನೆ

    – 105 ನಕಲಿ ಖಾತೆ ಓಪನ್ ಮಾಡಿಸಿ ಪಂಗನಾಮ

    ರಾಯಚೂರು: ಜಿಲ್ಲೆಯ ಬ್ಯಾಂಕ್‌ವೊಂದರಲ್ಲಿ 105 ನಕಲಿ ಖಾತೆ ಓಪನ್ ಮಾಡಿಸಿ, ಬ್ಯಾಂಕ್ ಮ್ಯಾನೇಜರ್‌ನಿಂದ 10.97 ಕೋಟಿ ವಂಚಿಸಿ, ಗೋಲ್ಡೋನ್‌ ಗೋಲ್ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಜಿಲ್ಲೆಯ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ (Bank of Maharashtra) ನಡೆದಿದೆ.

    ಹೌದು, ಬೇಲಿಯೇ ಎದ್ದು ಹೊಲ ಮೇಯ್ದ ಹಾಗೇ ಜಿಲ್ಲೆಯಲ್ಲಿ ಬ್ಯಾಂಕ್ ಹಾಗೂ ಗ್ರಾಹಕರ ಹಿತ ಕಾಪಾಡಬೇಕಾದ ಬ್ಯಾಂಕ್ ಮ್ಯಾನೇಜರ್ ಕೋಟ್ಯಂತರ ರೂಪಾಯಿ ಗೋಲ್ಮಾಲ್ ಮಾಡಿ ಪರಾರಿಯಾಗಿದ್ದಾನೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ ಮ್ಯಾನೇಜರ್ ಗ್ರಾಹಕರ ಹೆಸರಲ್ಲಿ ನಕಲಿ ಖಾತೆಗಳನ್ನ (Fake Bank Accounts) ತೆಗೆದು, ಬಂಗಾರ ಅಡವಿಟ್ಟು ಗೋಲ್ಡೋನ್‌ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿರುವುದು ಹಿರಿಯ ಅಧಿಕಾರಿಗಳ ಬ್ಯಾಂಕ್ ಆಡಿಟ್ ವೇಳೆ ಸುಮಾರು 10.97 ಕೋಟಿ ರೂ. ಗೋಲ್ಮಾಲ್ ಮಾಡಿರುವುದು ಬಯಲಾಗಿದೆ.ಇದನ್ನೂ ಓದಿ:ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ

    ಆಂಧ್ರಪ್ರದೇಶ (Andhra Pradesh)ಪ್ರಕಾಶಂ ಜಿಲ್ಲೆ ಮೂಲದ ಕೆ.ನರೇಂದ್ರ ರೆಡ್ಡಿ ವಂಚಿಸಿ ಪರಾರಿಯಾಗಿರುವ ಮ್ಯಾನೇಜರ್. ಗ್ರಾಹಕರ ದಾಖಲೆಗಳನ್ನು ಪಡೆದು ಗೋಲ್ಡೋನ್‌ ಹೆಸರಿನಲ್ಲಿ ಖಾತೆ ತೆಗೆದು ಬ್ಯಾಂಕ್ ಹಾಗೂ ಗ್ರಾಹಕರಿಗೆ ವಂಚನೆ ಮಾಡಿದ್ದಾನೆ. ಬ್ಯಾಂಕ್‌ಗೆ ಬಂದು ಮೂರು ವರ್ಷದಲ್ಲಿ 105 ನಕಲಿ ಖಾತೆ ಓಪನ್ ಮಾಡಿದ್ದ ಮ್ಯಾನೇಜರ್ ಗೋಲ್ಡೋನ್‌ (Gold Loan) ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ.

    ಬ್ಯಾಂಕ್‌ನ ಹಣವನ್ನು 29 ನಕಲಿ ಖಾತೆಗಳಿಗೆ ಗೋಲ್ಡೋನ್‌ ಹೆಸರಿನಲ್ಲಿ ವರ್ಗಾವಣೆ ಮಾಡಿದ್ದಲ್ಲದೆ, 8 ಜನ ಸಂಬಂಧಿಕರ ಹೆಸರಿನ ಖಾತೆಗಳಿಗೂ ಹಣ ವರ್ಗಾವಣೆ ಮಾಡಿದ್ದಾನೆ. ಹಿಂದೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಬ್ಯಾಂಕ್‌ನ ಸಹೋದ್ಯೋಗಿ ಹೆಸರಿಗೆ 88 ಲಕ್ಷ ರೂ. ವರ್ಗಾವಣೆ ಮಾಡಿದ್ದಾನೆ. ಆಡಿಟ್ ವೇಳೆ ಕೆ.ನರೇಂದ್ರ ರೆಡ್ಡಿಯ ಬಣ್ಣ ಬಯಲಾಗಿದ್ದು, ಆಡಿಟ್ ಆರಂಭವಾಗುತ್ತಿದ್ದಂತೆಯೇ ಪರಾರಿಯಾಗಿದ್ದಾನೆ.

    ಬ್ಯಾಂಕ್ ಆಫ್ ಮಹಾರಾಷ್ಟ್ರದ ರಿಜಿನಲ್ ಮ್ಯಾನೇಜರ್ ಸುಚೇತ್ ಡಿಸೋಜಾ ರಾಯಚೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಮ್ಯಾನೇಜರ್ ಕೆ.ನರೇಂದ್ರ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು. ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.ಇದನ್ನೂ ಓದಿ:ರಾಜ್ಯ ಹವಾಮಾನ ವರದಿ 29-03-2025

  • ಶಾಸಕ ಸುರೇಶ್ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ- ಹಣ ಕೇಳಿದ ಕಿಡಿಗೇಡಿಗಳು

    ಶಾಸಕ ಸುರೇಶ್ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ- ಹಣ ಕೇಳಿದ ಕಿಡಿಗೇಡಿಗಳು

    ಬೆಂಗಳೂರು: ಶಾಸಕ ಸುರೇಶ್ ಕುಮಾರ್ (Suresh Kumar) ಅವರ ಹೆಸರಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ (Fake Facebook) ಖಾತೆ ತೆರದು ಹಣ ನೀಡುವಂತೆ ಕೇಳಿದ್ದಾರೆ.

    ಈ ಸಂಬಂಧ ಸ್ವತಃ ಸಚಿವರೇ ತನ್ನ ಫೇಸ್‍ಬುಕ್ ಖಾತೆಯಲ್ಲಿ ಸ್ಕ್ರೀನ್ ಶಾಟ್ ಹಾಕಿ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಹೆಸರಿನಲ್ಲಿ ಯಾರೋ ನಕಲಿ ಫೇಸ್ ಬುಕ್ ಅಕೌಂಟ್ ತೆಗೆದಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಈ ಕುರಿತು ಸೈಬರ್ ಪೊಲೀಸ್ ವಿಭಾಗಕ್ಕೆ ದೂರು ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

    ದಯವಿಟ್ಟು ನನ್ನ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ ತಾವ್ಯಾರೂ ಸ್ಪಂದಿಸಬಾರದೆಂದು ಮನವಿ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಧಿಕಾರಿಗಳ ವಿರುದ್ಧ ಸಚಿವ ಶ್ರೀರಾಮುಲು ಪ್ರತಿಭಟನೆ

    Live Tv
    [brid partner=56869869 player=32851 video=960834 autoplay=true]

  • ಆಯುರ್ವೇದ ವಿದ್ಯಾರ್ಥಿಗಳ 24 ಲಕ್ಷ ರೂ. ವಿದ್ಯಾರ್ಥಿ ವೇತನ ನಕಲಿ ಖಾತೆಗೆ ಜಮೆ

    ಆಯುರ್ವೇದ ವಿದ್ಯಾರ್ಥಿಗಳ 24 ಲಕ್ಷ ರೂ. ವಿದ್ಯಾರ್ಥಿ ವೇತನ ನಕಲಿ ಖಾತೆಗೆ ಜಮೆ

    ಹುಬ್ಬಳ್ಳಿ: ಹೆಗ್ಗೇರಿ ಆಯುರ್ವೇದ ಕಾಲೇಜಿನ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದ ಹಿಂದುಳಿದ ವರ್ಗ ಇಲಾಖೆಯ ಸಿಬ್ಬಂದಿಯೊಬ್ಬ ಬರೋಬ್ಬರಿ 24 ಲಕ್ಷ ರೂ. ಹಿಂದುಳಿದ ವರ್ಗದ ವಿದ್ಯಾರ್ಥಿ ವೇತನವನ್ನು ಆ ಖಾತೆಗೆ ಜಮಾ ಮಾಡಿಸಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಎ.ಎಸ್.ಅವರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ನಕಲಿ ಖಾತೆ ತೆರೆದು ಸಿಎಂ ವಿರುದ್ಧ ಪೋಸ್ಟ್ ಹಾಕಿದ್ದ ಮಂಡ್ಯದ ಟೆಕ್ಕಿಯ ಬಂಧನ

    ದೂರಿನಲ್ಲಿ ಏನಿದೆ?
    ಹಿಂದುಳಿದ ವರ್ಗದ ವಿದ್ಯಾರ್ಥಿ ವೇತನವನ್ನು ಕಾಲೇಜಿನ ಪ್ರಾಚಾರ್ಯರ ಖಾತೆಗೆ ಜಮೆ ಮಾಡುತ್ತಾರೆ. ಹೀಗಿರುವಾಗ ಇಲಾಖೆಯ ಸಿಬ್ಬಂದಿ ಹುಬ್ಬಳ್ಳಿ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್‍ನಲ್ಲಿ ಆಯುರ್ವೇದ ಕಾಲೇಜಿನ ಹೆಸರಿನಲ್ಲಿ ಖಾತೆ ತೆರೆದ್ದಿದ್ದಾನೆ. ಖಾತೆಗೆ 2017ರ ಏ.1ರಿಂದ 2018ರ ಮಾ. 31ರವರೆಗಿನ ಅವಧಿಯಲ್ಲಿ 24,04,090 ರೂ. ವಿದ್ಯಾರ್ಥಿ ವೇತನವನ್ನು ಪ್ರಾಚಾರ್ಯರ ಖಾತೆ ಬದಲಾಗಿ ನಕಲಿ ಖಾತೆಗೆ ಜಮಾ ಮಾಡಿಸಿಕೊಂಡು ಕಾಲೇಜು, ವಿದ್ಯಾರ್ಥಿಗಳಿಗೆ ವಂಚಿಸಿ ಸ್ವಂತಕ್ಕೆ ಬಳಸಲಾಗಿದೆ ಎಂದು ದೂರು ದಾಖಲಾಗಿದೆ.

    ಬೆಳಕಿಗೆ ಬಂದಿದ್ದು ಹೇಗೆ?
    ಕಳೆದ ಆಡಿಟ್ ವೇಳೆ ವಂಚನೆ ಆಗಿರುವುದು ಪತ್ತೆಯಾಗಿದೆ. ಹಿಂದುಳಿದ ವರ್ಗ ಇಲಾಖೆಯಿಂದ ಕಾಲೇಜಿನ ಖಾತೆಗೆ ಆಗಬೇಕಿದ್ದ ಹಣ ಎಲ್ಲಿ ಜಮಾ ಆಗಿದೆ ಎಂದು ಪತ್ತೆಗೆ ಮುಂದಾದಾಗ ವಿಷಯ ಬೆಳಕಿಗೆ ಬಂದಿದೆ. ಸುಮಾರು 100 ವಿದ್ಯಾರ್ಥಿಗಳಿಗೆ ಬರಬೇಕಾದ ವಿದ್ಯಾರ್ಥಿವೇತನ ಇದು. ಯಾವ ಸಿಬ್ಬಂದಿ ವಂಚನೆ ಎಸಗಿದ್ದಾನೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ ಎಂದು ಪ್ರಾಚಾರ್ಯ ಪ್ರಶಾಂತ್ ಎ.ಎಸ್. ತಿಳಿಸಿದ್ದಾರೆ.