Tag: ನಕಲಿ ಕೀ

  • ನಕಲಿ ಕೀ ಬಳಸಿ ಕಳ್ಳತನ-ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅರೆಸ್ಟ್

    ನಕಲಿ ಕೀ ಬಳಸಿ ಕಳ್ಳತನ-ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅರೆಸ್ಟ್

    ಹಾಸನ: ನಕಲಿ ಕೀ ಬಳಸಿ ಸಿಮೆಂಟ್ ಗೋದಾಮಿನಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರು ಹಾಸನ ನಗರದ ದಾಸರಕೊಪ್ಪಲಿನಲ್ಲಿರುವ ಲೊಕೇಶ್ ಎಂಬವರ ಸಿಮೆಂಟ್ ಗೋದಾಮಿನಲ್ಲಿ ಕಳ್ಳತನ ಎಸಗಿದ್ದರು.

    ಯಶವಂತ್, ವಿನಾಯಕ, ಯೋಗೇಶ್ ಮತ್ತು ಹೇಮಂತ್ ಬಂಧಿತರು. ಈ ನಾಲ್ವರು ಕಳೆದ 15 ದಿನಗಳಿಂದ ಪ್ರತಿದಿನ ಸಿಮೆಂಟ್ ಮೂಟೆಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು. ಗೋದಾಮಿನಲ್ಲಿಯ ಸಿಸಿ ಕ್ಯಾಮೆರಾ ಮೇಲೆ ಬಟ್ಟೆ ಮುಚ್ಚಿ ತಮ್ಮ ಕೃತ್ಯ ಎಸಗುತ್ತಿದ್ದರು ಎಂದು ತಿಳಿದು ಬಂದಿದೆ. ರಾತ್ರಿ ಕಳ್ಳತನ ಮಾಡಲು ಮುಂದಾದಾಗ ಗೋದಾಮ ಮಾಲೀಕರು ನಾಲ್ವರನ್ನು ಸೆರೆ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

    ಬಂಧಿತ ನಾಲ್ವರಲ್ಲಿ ಇಬ್ಬರು ನಗರದ ಪ್ರತಿಷ್ಠಿತ ಇಂಜಿನೀಯರಿಂದ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಮೋಜು ಮಸ್ತಿಗಾಗಿ ಸಿಮೆಂಟ್ ಗೋಡೌನ್ ನಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನೊಂದಿಗೆ ಕಳ್ಳತನಕ್ಕೆ ಇಳಿದಿದ್ದರು. ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಕೆಜಿಗಟ್ಟಲೆ ಚಿನ್ನಾಭರಣ ದೋಚಿದ್ದ ಕುಖ್ಯಾತ ಮನೆಗಳ್ಳ ಅಂದರ್

    ಕೆಜಿಗಟ್ಟಲೆ ಚಿನ್ನಾಭರಣ ದೋಚಿದ್ದ ಕುಖ್ಯಾತ ಮನೆಗಳ್ಳ ಅಂದರ್

    ಬೆಂಗಳೂರು: ನಕಲಿ ಕೀಗಳನ್ನ ಮಾಡಿಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಾಲಾಜಿ ಪ್ರಕಾಶ್ ಬಂಧಿತ ಮನೆಗಳ್ಳ. ಈತ ಮನೆಗಳ್ಳತನ ಮಾಡುವುದರಲ್ಲಿ ನಿಸ್ಸೀಮನಾಗಿದ್ದಾನೆ. ಡೌಟ್ ಬರದ ರೀತಿಯಲ್ಲಿ ತನ್ನ ಕೈಚಳ ತೋರಿ ಪರಾರಿಯಾಗುತ್ತಿದ್ದನು. ಈತನು ದೊಡ್ಡ ದೊಡ್ಡ ಅಪಾರ್ಟ್ ಮೆಂಟ್‍ಗಳನ್ನೇ ಟಾರ್ಗೆಟ್ ಮಾಡುತ್ತಿದ್ದನು. ಕಳ್ಳತನ ಕೇಸ್‍ನಲ್ಲಿ ಒಂದು ಬಾರಿ ಜೈಲಿಗೂ ಹೋಗಿದ್ದನು. ಅಲ್ಲಿಂದ ಬಂದ ಮೇಲೆ ಮತ್ತೆ ಕೆಜಿ, ಕೆಜಿ ಚಿನ್ನಾಭರಣ ದೋಚಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಕಳ್ಳತನ ಹೇಗೆ ಮಾಡುತ್ತಿದ್ದ:
    ಬಾಡಿಗೆ ಪಡೆಯುವ ರೀತಿಯಲ್ಲಿ ಅಪಾರ್ಟ್ ಮೆಂಟ್‍ಗೆ ಹೋಗುತ್ತಿದ್ದನು. ಆಗ ಅಲ್ಲಿನ ಮನೆಯ ಕೀ ಫೋಟೋ ಕ್ಲಿಕ್ಕಿಸಿಕೊಂಡು ಬಂದು ನಕಲಿ ಕೀ ತಯಾರು ಮಾಡಿಕೊಳ್ಳುತ್ತಿದ್ದನು. ನಂತರ ಅಪಾರ್ಟ್ ಮೆಂಟ್‍ನ ಅದೇ ಮನೆಗೆ ಹೋಗಿ ಯಾರೂ ಇಲ್ಲದ ವೇಳೆ ನೋಡಿಕೊಂಡು ನಕಲಿ ಕೀ ಬಳಸಿ ಕಳ್ಳತನ ಮಾಡಿಕೊಂಡು ಬರುತ್ತಿದ್ದನು.

    ನಕಲಿ ಕೀ ಬಳಸಿ ಈತ ಆಗ್ನೇಯ ವಿಭಾಗದ ಕೋರಮಂಗಲ, ಮೈಕೋಲೇಔಟ್, ಸುದ್ಗಂಟೆ ಪಾಳ್ಯ, ಸೇರಿ ಹಲವೆಡೆ ತಮ್ಮ ಕೈಚಳಕ ತೋರಿದ್ದಾನೆ. ಆಗ್ನೇಯ ವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 40 ಲಕ್ಷ ಬೆಲೆಬಾಳುವ ಬರೋಬ್ಬರಿ 1 ಕೆ.ಜಿ 260 ಗ್ರಾಂ ಚಿನ್ನಾಭರಣ ಕದ್ದಿದ್ದನು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರು ಸೀಮಂತ್ ಕುಮಾರ್ ಹೇಳಿದ್ದಾರೆ.

    ಸದ್ಯ ಆರೋಪಿಯಿಂದ ಪೊಲೀಸರು ಬರೋಬ್ಬರಿ ಒಂದು ಕಾಲು ಕೆ.ಜಿ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಸಾವಿರಕ್ಕೂ ಹೆಚ್ಚು ನಕಲಿ ಕೀಗಳು ಮತ್ತು ಕೀ ಮೆಕರ್ ವಶಪಡಿಕೊಂಡಿದ್ದಾರೆ. ಆರೋಪಿ ಪ್ರಕಾಶ್ ಬಂಧನದ ಬಳಿಕ ಎಂಟು ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.