Tag: ನಕಲಿ ಅಭ್ಯರ್ಥಿ

  • ಪರೀಕ್ಷಾರ್ಥಿ ಬದಲಿಗೆ ಮತ್ತೊಬ್ಬ ಪರೀಕ್ಷೆಗೆ ಹಾಜರು – ಇಬ್ಬರು ಪೊಲೀಸರ ವಶಕ್ಕೆ

    ಪರೀಕ್ಷಾರ್ಥಿ ಬದಲಿಗೆ ಮತ್ತೊಬ್ಬ ಪರೀಕ್ಷೆಗೆ ಹಾಜರು – ಇಬ್ಬರು ಪೊಲೀಸರ ವಶಕ್ಕೆ

    – ಕೆಎಸ್‌ಆರ್‌ಪಿ ನೇಮಕಾತಿ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳು

    ಚಿತ್ರದುರ್ಗ: ಕೆಎಸ್‌ಆರ್‌ಪಿ ನೇಮಕಾತಿ ಪರೀಕ್ಷೆಯಲ್ಲಿ ಇಬ್ಬರು ನಕಲಿ ಅಭ್ಯರ್ಥಿಗಳು ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಚಿತ್ರದುರ್ಗದಲ್ಲಿ ನಕಲಿ ಅಭ್ಯರ್ಥಿ ಗೋಕಾಕ ಮೂಲದ ಸಿದ್ಧಾರೂಢನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರೀಕ್ಷಾರ್ಥಿ ಬದಲಿಗೆ ಮತ್ತೊಬ್ಬ ವ್ಯಕ್ತಿ ಪರೀಕ್ಷೆಗೆ ಹಾಜರು ಹಿನ್ನೆಲೆ ಎಸ್‍ಪಿ ಜಿ.ರಾಧಿಕಾ ನೇತೃತ್ವದಲ್ಲಿ ನಕಲಿ ಅಭ್ಯರ್ಥಿಯ ವಿಚಾರಣೆ ನಡೆಸಲಾಗಿದೆ. ಚಿತ್ರದುರ್ಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ನಿನ್ನೆಯಷ್ಟೇ ಪೊಲೀಸ್ ಅರ್ಹತಾ ಪರೀಕ್ಷೆ ಹಿನ್ನೆಲೆ ಹುಬ್ಬಳ್ಳಿಯಲ್ಲಿ ನಕಲಿ ಅಭ್ಯರ್ಥಿ ಪತ್ತೆಯಾಗಿದ್ದನು. ಬೇರೆ ಅಭ್ಯರ್ಥಿಯ ಪರವಾಗಿ ಪರೀಕ್ಷೆ ಬರೆಯಲು ಹೋಗಿ ಪೊಲೀಸ್ ಪೇದೆಯೊಬ್ಬ ಸಿಕ್ಕಿಬಿದ್ದಿದ್ದಾನೆ. ಬೆಳಗಾವಿ ಜಿಲ್ಲೆಯ ಪೇದೆ ಮಣಿಕಂಠ ಬಂಧಿತ ಪೇದೆಯಾಗಿದ್ದು, ಈತ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಕೆಎಲ್‍ಇ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪತ್ತೆಯಾಗಿದ್ದಾನೆ.

    ರಾಯಭಾಗ ಮೂಲದ ಅಭ್ಯರ್ಥಿಯ ಹೆಸರಿನಲ್ಲಿ ಪರೀಕ್ಷೆ ಬರೆಯುವ ವೇಳೆ ಪೇದೆಯ ಅಸಲಿ ಬಣ್ಣ ಬಯಲಾಗಿದೆ. ನಕಲಿ ಅಭ್ಯರ್ಥಿಯನ್ನ ವಶಕ್ಕೆ ಪಡೆದು ಗೋಕುಲ್ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.