Tag: ನಂಬರ್ ಪ್ಲೇಟ್

  • ವಾಹನಗಳ ಮೇಲೆ RTO ಅಧಿಕಾರಿಗಳು ದಾಳಿ

    ವಾಹನಗಳ ಮೇಲೆ RTO ಅಧಿಕಾರಿಗಳು ದಾಳಿ

    – ನಿಯಮ ಬಾಹಿರವಾಗಿ ನಂಬರ್ ಪ್ಲೇಟ್ ಅಳವಡಿಕೆ

    ಯಾದಗಿರಿ: ವಾಹನ ಸವಾರರು ನಿಯಮ ಬಾಹಿರವಾಗಿ ತಮ್ಮ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ RTO ಅಧಿಕಾರಿಗಳು ವಾಹನಗಳ ಮೇಲೆ ದಾಳಿ ಮಾಡಿ, ನಂಬರ್ ಪ್ಲೇಟ್ ಕಿತ್ತು ಹಾಕಿ ದಂಡವನ್ನು ಹಾಕುತ್ತಿದ್ದಾರೆ.

    ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯ ವಿವಿಧ ಭಾಗದಲ್ಲಿ RTO ವಸಂತ್ ಚೌಹ್ವಾನ್ ನೇತೃತ್ವದಲ್ಲಿ ಈ ದಾಳಿ ನಡೆಯುತ್ತಿದೆ. ಈಗಾಗಲೇ ನೂರಾರು ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ವಾಹನಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಸುಮಾರು 30 ವಾಹನಗಳ ಮಾಲೀಕರ ವಿರುದ್ಧ ಕೇಸ್ ದಾಖಲಿಸಿ, ಸುಮಾರು 15,000 ದಂಡವನ್ನು ಸಂಗ್ರಹಿಸಿದ್ದಾರೆ.

    ವಾಹನಗಳ ನಂಬರ್ ಪ್ಲೇಟ್‍ನಲ್ಲಿ ಸಂಘಟನೆಗಳ, ಕಂಪನಿಯ ಹೆಸರು ಮತ್ತು ನಿರ್ವಹಿಸುತ್ತಿರುವ ಹುದ್ದೆಗಳ ಹೆಸರನ್ನು ವಾಹನ ಸವಾರರು ಹಾಕಿಸುವುದು ಸಾಮಾನ್ಯ. ಆದರೆ ಈ ರೀತಿಯಾಗಿ ನಂಬರ್ ಪ್ಲೇಟ್‍ನಲ್ಲಿ ಹಾಕಿಸುವುದು ನಿಯಮ ಬಾಹಿರವಾಗಿದೆ. ಅಲ್ಲದೆ ರಸ್ತೆ ಸಾರಿಗೆ ನಿಗಮ ಸೂಚಿಸಿದ ರೀತಿಯಲ್ಲಿ ವಾಹನಗಳ ಸಂಖ್ಯಾ ಫಲಕ ಇಲ್ಲದೆ ಹೋದರೆ ದಂಡ ಹಾಕುವುದು ಅನಿವಾರ್ಯವಾಗಿದೆ. ಹೀಗಾಗಿ ವಾಹನ ಸವಾರರು ಎಚ್ಚೆತ್ತುಕೊಳ್ಳಬೇಕು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

  • ವಾಹನಗಳಿಗೆ ಸ್ಟೈಲಿಶ್ ಆಗಿ ನಂಬರ್, ಹೆಸರು ಹಾಕಿದ್ರೆ ದಂಡ

    ವಾಹನಗಳಿಗೆ ಸ್ಟೈಲಿಶ್ ಆಗಿ ನಂಬರ್, ಹೆಸರು ಹಾಕಿದ್ರೆ ದಂಡ

    ನೆಲಮಂಗಲ: ಕೇಂದ್ರ ಸಾರಿಗೆ ಇಲಾಖೆ ಈಗಾಗಲೇ ವಾಹನಗಳ ನಂಬರ್ ಪ್ಲೇಟ್ ಮೇಲೆ ಸಂಖ್ಯೆ ಬಿಟ್ಟು, ಚಿಹ್ನೆ, ಹೆಸರುಗಳನ್ನ ಹಾಕುವಂತಿಲ್ಲ ಎಂದು ಆದೇಶ ಮಾಡಿದೆ. ಆದರೆ ವಾಹನಗಳ ಮಾಲೀಕರು ಮಾತ್ರ ಎಚ್ಚೆತ್ತಿಲ್ಲ. ಹೀಗಾಗಿ ಆರ್‌ಟಿಓ ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಆರ್‌ಟಿಓ ಅಧಿಕಾರಿಗಳು, ವಾಹನಗಳ ಮೇಲೆ ಚಿತ್ರ, ವಿಚಿತ್ರ ರೀತಿಯಲ್ಲಿ ಹೆಸರು, ಪ್ಲೇಟ್ ಡಿಸೈನ್, ಸಂಘ-ಸಂಸ್ಥೆಯ ಹೆಸರುಗಳು ಹೀಗೆ ನಿಯಮ ಮೀರಿ ಇದ್ದ ಎಲ್ಲಾ ವಾಹನಗಳ ನಂಬರ್ ಪ್ಲೇಟ್‍ಗಳನ್ನು ತೆರವು ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ನೆಲಮಂಗಲ ಸಾರಿಗೆ ಅಧಿಕಾರಿ ಡಾ.ಒಡೆಯರ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ.

    ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನೆಲಮಂಗಲ ಭಾಗದಲ್ಲಿನ ವಾಹನ ಸವಾರಿಗೆ ಅರಿವು ಮೂಡಿಸುವುದರ ಜೊತೆಗೆ ಇನ್ಮುಂದೆ ಕಡ್ಡಾಯವಾಗಿ ತೆರವು ಮಾಡಲೇಬೇಕು ಎಂದು ಖಡಕ್ ಆಗಿ ಎಚ್ಚರಿಕೆ ನೀಡುತ್ತಿದ್ದಾರೆ. ಈ ವೇಳೆ 100ಕ್ಕೂ ಹೆಚ್ಚು ವಾಹನಗಳ ಚಿತ್ರ-ವಿಚಿತ್ರ ನಂಬರ್ ಪ್ಲೇಟ್‍ಗಳನ್ನ ಸ್ಥಳದಲ್ಲಿಯೇ ತೆರವುಗೊಳಿಸಿ ಹೊಸ ನಂಬರ್ ಪ್ಲೇಟ್‍ಗಳನ್ನ ಹಾಕಿಸಿಕೊಳ್ಳುವಂತೆ ವಾಹನ ಸವಾರರಿಗೆ ಸೂಚನೆ ನೀಡಲಾಯಿತು. ಸಾರಿಗೆ ಇಲಾಖೆಯ ಖಡಕ್ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

  • ವಾಹನಗಳ ನಂಬರ್ ಪ್ಲೇಟ್ ಮೇಲೆ ಸಂಘ, ಸಂಸ್ಥೆಗಳ ಹೆಸರು – ಅಧ್ಯಕ್ಷರಿಗೆ ಆರ್‌ಟಿಓ ನೋಟಿಸ್

    ವಾಹನಗಳ ನಂಬರ್ ಪ್ಲೇಟ್ ಮೇಲೆ ಸಂಘ, ಸಂಸ್ಥೆಗಳ ಹೆಸರು – ಅಧ್ಯಕ್ಷರಿಗೆ ಆರ್‌ಟಿಓ ನೋಟಿಸ್

    ಚಿತ್ರದುರ್ಗ: ಕೆಲ ಸಂಘ, ಸಂಸ್ಥೆಗಳ ಅಧ್ಯಕ್ಷರು ಹಾಗೂ ಮುಖಂಡರು ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತ ಚಿಹ್ನೆ, ಲಾಂಛನ ಹಾಗೂ ಅವರ ಸಂಘ ಸಂಸ್ಥೆಗಳ ಹೆಸರುಗಳನ್ನು ನಿಯಮಬಾಹಿರವಾಗಿ ಅಳವಡಿಸಿಕೊಂಡಿದ್ದು, ಇಂತಹ ವಾಹನಗಳ ವಿರುದ್ಧ ಆರ್‌ಟಿಓ ಅಧಿಕಾರಿಗಳು ಸಮರ ಸಾರಿದ್ದಾರೆ.

    ಚಿತ್ರದುರ್ಗ ಜಿಲ್ಲೆಯಾದ್ಯಂತ ವಿಶೇಷ ವಾಹನ ತಪಾಸಣಾ ಅಭಿಯಾನ ಪ್ರಾರಂಭಿಸಲಾಗಿದ್ದು, ಅಂತಹ ಹಲವು ವಾಹನಗಳನ್ನು ಗುರುತಿಸಿ, ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಆರ್‌ಟಿಓ ಅಧಿಕಾರಿಗಳು ಮುಂದಾಗಿದ್ದಾರೆ. ಹಲವು ವರ್ಷಗಳಿಂದಲೂ ಖಾಸಗಿ ವೈಯುಕ್ತಿಕ ವಾಹನಗಳ ಮೇಲೆ ಸಂಘ, ಸಂಸ್ಥೆಗಳ ಹೆಸರು ಹಾಕಿಕೊಂಡು ಓಡಾಡುವವರಿಗೆ ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಹೆಗಡೆ ಬಿಸಿ ಮುಟ್ಟಿಸಿದ್ದಾರೆ.

    ವಾಹನಗಳ ನೊಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ವಿವಿಧ ಆಯೋಗಗಳ ಹೆಸರನ್ನು ಹೋಲುವಂತಹ ರಾಷ್ಟ್ರೀಯ, ರಾಜ್ಯ ಮಾನವ ಹಕ್ಕುಗಳ ಸಂಸ್ಥೆ, ಒಕ್ಕೂಟ ಇತ್ಯಾದಿ ಹೆಸರು, ಚಿಹ್ನೆ, ಲಾಂಛನಗಳನ್ನು ಹಾಗೂ ಇತರೆ ಸಂಘ ಸಂಸ್ಥೆಗಳ ಹೆಸರು ಬರೆಸಿಕೊಂಡಿದ್ದಾರೆ. ಈ ಮೂಲಕ ಕೇಂದ್ರ ಮೋಟಾರು ವಾಹನಗಳ 1989ರ ನಿಯಮ 50 ಮತ್ತು 51ರ ಲಾಂಛನ ಹಾಗೂ ಹೆಸರು ಕಾಯ್ದೆ 1950 ಕಲಂ 3, 4 ಮತ್ತು 5 ರನ್ವಯ ನಿಯಮಬಾಹಿರವಾಗಿದ್ದು, ಅಂತಹ ವಾಹನಗಳನ್ನು ಗುರುತಿಸಿ, ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಸಾರಿಗೆ ಆಯುಕ್ತರು ಸೂಚಿಸಿದ್ದಾರೆ.

    ಒನಕೆ ಓಬವ್ವ ವೃತ್ತದ ಬಳಿ, ವಾಹನಗಳ ವಿಶೇಷ ತಪಾಸಣೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಅಭಿಯಾನವನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗುವುದು. ವಾಹನ ನೋಂದಣಿ ಫಲಕಗಳ ಮೇಲೆ ಹೆಸರು, ಚಿಹ್ನೆಗಳನ್ನು ಹಾಕಿಸುವುದು ಅಪರಾಧವಾಗಿದ್ದು, ಇನ್ನು 7 ದಿನಗಳ ಒಳಗಾಗಿ ತೆರವುಗೊಳಿಸದಿದ್ದರೆ ಅಂತಹ ವಾಹನಗಳ ಮಾಲೀಕರನ್ನು ದಂಡನೆಗೆ ಗುರಿಪಡಿಸಲಾಗುವುದು ಎಂದು ಆರ್‌ಟಿಓ ಅಧಿಕಾರಿಗಳು ಎಚ್ಚರಿಸಿದ್ದಾರೆ.

    ಸರ್ಕಾರಿ ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಪಡೆಯುವ ಖಾಸಗಿ ವಾಹನಗಳೂ ನೊಂದಣಿ ಫಲಕದ ಮೇಲೆ ಕರ್ನಾಟಕ ಸರ್ಕಾರದ ಲಾಂಛನವುಳ್ಳ ಫಲಕ ಬಳಸುವಂತಿಲ್ಲ. ಅಲ್ಲದೆ ವಿವಿಧ ವಿಮಾ ಕಂಪನಿಗಳು ತಮ್ಮ ವಾಹನಗಳ ಮೇಲೆ ಭಾರತ ಸರ್ಕಾರದ ಲಾಂಛನವನ್ನು ಬಳಸುತ್ತಿರುವುದು ಕಂಡುಬಂದಿದ್ದು, ಅದನ್ನೂ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ನಗರದ ಒನಕೆ ಓಬವ್ವ ವೃತ್ತ ಬಳಿ ಗುರುವಾರ ನಡೆಸಿದ ವಾಹನಗಳ ತಪಾಸಣೆ ಸಂದರ್ಭದಲ್ಲಿ ಇಂತಹ ಹಲವಾರು ವಾಹನಗಳನ್ನು ಪತ್ತೆಮಾಡಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎರಡು ದಿನಗಳ ಒಳಗಾಗಿ ಇಂತಹ ನಾಮಫಲಕಗಳನ್ನು ತೆರವುಗೊಳಿಸಿ, ವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಯ ಆವರಣದಲ್ಲಿ ಹಾಜರುಪಡಿಸುವಂತೆ ಎಚ್ಚರಿಸಲಾಗಿದೆ.

  • ವಾಹನಗಳಿಗೆ ಐಎನ್‍ಡಿ ನಾಮಫಲಕ ಕಡ್ಡಾಯ, ಸ್ಟಿಕ್ಕರ್ ನಂಬರ್ ಪ್ಲೇಟಿಗೆ ಗುಡ್ ಬೈ

    ವಾಹನಗಳಿಗೆ ಐಎನ್‍ಡಿ ನಾಮಫಲಕ ಕಡ್ಡಾಯ, ಸ್ಟಿಕ್ಕರ್ ನಂಬರ್ ಪ್ಲೇಟಿಗೆ ಗುಡ್ ಬೈ

    ದಾವಣಗೆರೆ: ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ಎಲ್ಲ ವಾಹನ ಸವಾರರು ಕಡ್ಡಾಯವಾಗಿ ಭಾರತೀಯ ಮೋಟರು ವಾಹನ ಕಾಯ್ದೆಯ ನಿಯಮಾನುಸಾರ ನೋಂದಣಿ ಫಲಕಗಳನ್ನು (ನಂಬರ್ ಪ್ಲೇಟ್) ಅಳವಡಿಸಿಕೊಳ್ಳಬೇಕು. ನಿರ್ಧಿಷ್ಟ ಅಳತೆ ಹಾಗೂ ನಂಬರ್ ಪ್ಲೇಟ್‍ನ ಮೂರನೇ ಒಂದು ಭಾಗದಲ್ಲಿ ಸರ್ಕಾರದ ಹಾಲೋಗ್ರಾಮ್ ಮತ್ತು ಐ.ಎನ್.ಡಿ ಎಂದು ನಮೂದಾಗಿರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಾಹನ ನೋಂದಣಿ ಫಲಕಗಳ ಕಾನೂನು ತಯಾರಿಸುವ ಕುರಿತು ಏರ್ಪಡಿಸಿಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಾಹನ ಸವಾರರು ನೋಂದಣಿ ಫಲಕಗಳನ್ನು ಸ್ವ ಇಚ್ಛೆಯಂತೆ ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಪಘಾತದ ಸಂದರ್ಭದಲ್ಲಿ ವಾಹನಗಳ ನೋಂದಣಿ ಪತ್ತೆ ಹಚ್ಚುವುದು ಮತ್ತು ಅಪರಾಧ ಮಾಡಿದ ಸಂದರ್ಭದಲ್ಲಿ ವಾಹನಗಳ ನೋಂದಣಿ ಸಂಖ್ಯೆಯನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಅಲ್ಲದೆ ಇದು ಭಾರತೀಯ ಮೋಟರು ವಾಹನ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಹೀಗಾಗಿ ಇನ್ನು ಮುಂದೆ ಪ್ರತಿಯೊಬ್ಬ ವಾಹನ ಸವಾರರು ಭಾರತೀಯ ಮೋಟಾರು ವಾಹನ ಕಾಯ್ದೆ ಅನ್ವಯ ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

    ವಾಹನ ನೊಂದಣಿ ಸಂಖ್ಯೆಯ ಫಲಕದ ಅಕ್ಷರಗಳು ಆಂಗ್ಲ ಭಾಷೆ ಮತ್ತು ಅಂಕಿಗಳು ಹಿಂದೂ ಅರೇಬಿಕ್ ಸಂಖ್ಯೆಯಲ್ಲಿರಬೇಕು. ವಾಹನಕ್ಕೆ ಹಿಂಬದಿ ಮತ್ತು ಮುಂಬದಿ ನೋಂದಣಿ ಫಲಕ ಹೊಂದಿರಬೇಕು. ಇದರ ಅಳತೆ 1.0 ಎಂ.ಎಂ ಇರಬೇಕು. ಅಲ್ಯೂಮಿನಿಯಂ ಲೋಹದಿಂದ ಮಾಡಿದ್ದಾಗಿರಬೇಕು. ಐ.ಎಸ್.ಓ 759 ಮಾದರಿಯಲ್ಲಿ ರಚಿತವಾಗಿರಬೇಕು. ಅದರ ಅಂಚುಗಳು ಹಾಳಾಗದಂತೆ 10 ಎಂ.ಎಂ ದುಂಡದಾಗಿ ಮಾಡಿಸಬೇಕು. 2 ಮತ್ತು 3 ಚಕ್ರದ ವಾಹನಗಳಿಗೆ 200*100 ಎಂ.ಎಂ ಗಾತ್ರದ ನೊಂದಣಿ ಫಲಕ ಹೊಂದಿರಬೇಕು ಎಂದು ವಿವರಿಸಿದರು.

    ಕಾರುಗಳ ನಂಬರ್ ಪ್ಲೇಟ್ ಅಳತೆ 500*200 ಎಂ.ಎಂ,. ಲಘು ಮತ್ತು ಭಾರೀ ಗಾತ್ರದ ವಾಹನಗಳಿಗೆ 340*200 ಎಂ.ಎಂ ಗಾತ್ರದ ನೋಂದಣಿ ಫಲಕ ಹೊಂದಿರಬೇಕು. 2 ಮತ್ತು 3 ಚಕ್ರದ, ಮತ್ತು 4 ಚಕ್ರದ ವಾಹನಗಳ ಮುಂಭಾಗದ ನೊಂದಣಿ ಫಲಕದಲ್ಲಿ ಅಕ್ಷರಗಳ ಎತ್ತರ 35 ಎಂ.ಎಂ, 7 ಎಂ.ಎಂ ದಪ್ಪ ಹಾಗೂ ಹಿಂಭಾಗದ ನೋಂದಣಿ ಫಲಕದಲ್ಲಿ ಅಕ್ಷರಗಳ ಎತ್ತರ 40 ಎಂ.ಎಂ, 7 ಎಂ.ಎಂ ದಪ್ಪ ಇರಬೇಕು. ಮಧ್ಯದ ಅಂತರ 5 ಎಂ.ಎಂ ಇರಬೇಕು ಎಂದು ಸೂಚಿಸಿದ್ದಾರೆ.

    ನೋಂದಣಿ ಫಲಕಗಳಲ್ಲಿ ಅಲಂಕಾರಿಕ ಅಕ್ಷರಗಳು, ಯಾವುದೇ ಚಿತ್ರ, ಹೆಸರು, ದೇವರ ಚಿತ್ರಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ. ವಾಹನ ಸವಾರರು ಯಾವುದೇ ವಾಹನಗಳ ನೊಂದಣಿ ಫಲಕವನ್ನು ಹಾಕಿಸುವ ಸಮಯದಲ್ಲಿ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಈ ನಿಯಮವನ್ನು ಇಂದಿನಿಂದಲೇ ಜಾರಿಗೊಳಿಸಲಾಗಿದ್ದು, ನಿಯಮ ಪಾಲಿಸದಿದ್ದಲ್ಲಿ 1,000ರೂ. ದಂಡ ವಿಧಿಸಲಾಗುವುದು ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

  • ವಾಹನಗಳ ನಂಬರ್ ಪ್ಲೇಟ್ ಮೇಲೆ ಹೆಸರು, ಚಿಹ್ನೆಗಳಿಗೆ ಬ್ರೇಕ್

    ವಾಹನಗಳ ನಂಬರ್ ಪ್ಲೇಟ್ ಮೇಲೆ ಹೆಸರು, ಚಿಹ್ನೆಗಳಿಗೆ ಬ್ರೇಕ್

    ಬೆಂಗಳೂರು: ಟ್ರಾಫಿಕ್ ನಿಯಮಗಳನ್ನು ಬ್ರೇಕ್ ಮಾಡುವವರಿಗೆ ಬಿಸಿ ಮುಟ್ಟಿಸಲು ದಂಡ ಹೆಚ್ಚಳ, ಫಾಸ್ಟ್ ಟ್ಯಾಗ್ ಹೀಗೆ ನಾನಾ ಸುಧಾರಣೆ ಬಳಿಕ ಇದೀಗ ಕೇಂದ್ರ ಸಾರಿಗೆ ಇಲಾಖೆ ಮತ್ತೊಂದು ಐತಿಹಾಸಿಕ ನಿರ್ಧಾರಕ್ಕೆ ಮುಂದಾಗಿದೆ.

    ವಾಹನಗಳ ನಂಬರ್ ಪ್ಲೇಟ್ ಮೇಲೆ ನಂಬರ್ ಮಾತ್ರ ಇರಬೇಕು. ಅದನ್ನ ಹೊರತುಪಡಿಸಿ ಹೆಸರು, ಚಿಹ್ನೆಗಳಿಗೆ ಇರಬಾರದು ಎಂಬುದು ಕೇಂದ್ರ ಸಾರಿಗೆ ಇಲಾಖೆ ನಿಯಮ ಮಾಡಿದೆ. ಹೀಗಾಗಿ ನೆಲಮಂಗಲ ಆರ್‌ಟಿಓ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

    ಕೇಂದ್ರ ಮೋಟಾರು ವಾಹನಗಳ ನಿಯಮ 1989ರ ನಿಯಮ, 50 ಮತ್ತು 51ರ ಪ್ರಕಾರ ಎಲ್ಲಾ ವಾಹನಗಳು ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಬೇಕು. ವಾಹನಗಳ ನೋಂದಣಿ ಫಲಕದ ಮೇಲೆ ಚಿತ್ರಗಳಗನ್ನು, ವಿವಿಧ ದೇವರಗಳ ಹೆಸರುಗಳನ್ನು, ಸಂಘ ಸಂಸ್ಥೆಗಳ ಹೆಸರಗಳನ್ನು ಬರೆಸುವುದು ಕಾನೂನಿಗೆ ವಿರುದ್ಧವಾಗಿದೆ. ಹೀಗಾಗಿ ಇದನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಮೋಟಾರು ವಾಹನಗಳ ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ನೆಲಮಂಗಲ ಆರ್‌ಟಿಓ ಅಧಿಕಾರಿ ಒಡೆಯರ್ ವಾಹನ ಸವಾರರಿಗೆ ತಿಳಿಸಿದ್ದಾರೆ.

    ಆರ್‌ಟಿಓ ಕಚೇರಿಯ ಮೋಟಾರು ವಾಹನಗಳ ಹಿರಿಯ ನಿರೀಕ್ಷಕರು, ಚಾಲನಾ ಅನುಜ್ಞಾ ಪತ್ರ ಪಡೆಯಲು ಬಂದ ಸುಮಾರು 200 ಅಭ್ಯರ್ಥಿಗಳಲ್ಲಿ ಕಾನೂನು ಜಾಗೃತಿ ಮೂಡಿಸಿದ್ದಾರೆ. ನಿಮ್ಮ ವಾಹನಗಳ ನೋಂದಣಿ ಫಲಕದಲ್ಲಿ ಯಾವುದೇ ಚಿಹ್ನೆ, ಹೆಸರುಗಳನ್ನು ಹಾಕುವುದು ತಪ್ಪು. ಹೀಗೆ ಮಾಡಬೇಡಿ ಎಂದು ಕೇಂದ್ರ ಮೋಟಾರು ವಾಹನಗಳ ನಿಯಮವನ್ನು ಅಭ್ಯರ್ಥಿಗಳಿಗೆ ತಿಳಿಸಿಕೊಟ್ಟಿದ್ದಾರೆ.

  • ಬೇಕಾಬಿಟ್ಟಿ ಸಂಖ್ಯಾ ಫಲಕ ಹಾಕಿದ್ರೆ ದಂಡ ಕಟ್ಟೋಕೆ ರೆಡಿಯಾಗಿ

    ಬೇಕಾಬಿಟ್ಟಿ ಸಂಖ್ಯಾ ಫಲಕ ಹಾಕಿದ್ರೆ ದಂಡ ಕಟ್ಟೋಕೆ ರೆಡಿಯಾಗಿ

    -ಪೊಲೀಸ್ ಇಲಾಖೆಯ ಖಡಕ್ ಎಚ್ಚರಿಕೆ

    ಬಾಗಲಕೋಟೆ: ಬೈಕ್ ಮತ್ತು ಕಾರು ಸೇರಿದಂತೆ ಇತರೆ ವಾಹನಗಳ ಸಂಖ್ಯಾ ಫಲಕದ ಮೇಲೆ ಫ್ಯಾಷನ್ ಚಿತ್ರ ಮತ್ತು ಯಾವುದೇ ರೀತಿಯ ಸಿನಿಮಾ ಹೆಸರು ಇರುವ ನಂಬರ್ ಪ್ಲೇಟ್‍ಗಳನ್ನ ಬಾಗಲಕೋಟೆ ನಗರ ಪೊಲೀಸರು ಕಿತ್ತು ಹಾಕುತ್ತಿದ್ದಾರೆ.

    ಒಂದು ವಾರಗಳಿಂದ ಆರಂಭವಾಗಿರುವ ಪೊಲೀಸ್ ಇಲಾಖೆಯ ಈ ಕಾರ್ಯಾಚರಣೆ, ಸದ್ಯ ಜಿಲ್ಲೆಯ ಎಲ್ಲಾ ಭಾಗದಲ್ಲಿ ಶುರುವಾಗಿದೆ. ಪೊಲೀಸರು ಸಂಚಾರದಲ್ಲಿರುವ ವಾಹನಗಳ ನಂಬರ್ ಪ್ಲೇಟ್ ತಪಾಸಣೆ ಮಾಡುತ್ತಿದ್ದು, ಬೇಕಾಬಿಟ್ಟಿ ಫ್ಯಾನ್ಸಿ ರೀತಿಯಲ್ಲಿ ವಾಹನಗಳಿಗೆ ಹಾಕಲಾಗಿರುವ ಸಂಖ್ಯಾ ಫಲಕ ಕಿತ್ತು ಹಾಕಿ ತಿಳುವಳಿಕೆ ಮೂಡಿಸುತ್ತಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲೆಯ ವಿವಿಧ ಪ್ರದೇಶದಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಬಾಗಲಕೋಟೆ, ಬಾದಾಮಿ ಹಾಗೂ ಇಳಕಲ್ಲ ಪಟ್ಟಣದಲ್ಲಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ವಾಹನ ಸವಾರರು ನಿರ್ಲಕ್ಷ್ಯ ಮಾಡಿದ್ದಲ್ಲಿ ಮುಂದೆ ದಂಡ ಕಟ್ಟಲು ಸಜ್ಜಾಗಬೇಕು ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

    ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಿಂದ ಹೆದರಿದ್ದ ವಾಹನ ಸವಾರರು ಸದ್ಯ ಪೊಲೀಸರ ನೂತನ ನಿಯಮದಿಂದ ಕಂಗಾಲಾಗಿದ್ದಾರೆ. ಒಟ್ಟಾರೆ ಪೊಲೀಸರು ನಿಮ್ಮನ್ನ ತಡೆದು ದಂಡ ಹಾಕುವ ಮುಂಚೆ ಸವಾರರು ಎಚ್ಚೆತ್ತುಕೊಂಡು ತಮ್ಮ ವಾಹನದ ಫ್ಯಾನ್ಸಿ ನಂಬರ್ ಪ್ಲೇಟ್ ಕಿತ್ತು ಹಾಕಿ, ಮೋಟಾರು ಕಾಯಿದೆ ಪ್ರಕಾರ ಸೂಚಿಸಲಾಗಿರುವ ರೀತಿಯಲ್ಲಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು.

  • ನಕಲಿ ನೋಂದಣಿ ಸಂಖ್ಯೆಯ ಕಾರು ಸೀಜ್- ಚಾಲಕನ ಬಂಧನ

    ನಕಲಿ ನೋಂದಣಿ ಸಂಖ್ಯೆಯ ಕಾರು ಸೀಜ್- ಚಾಲಕನ ಬಂಧನ

    – 2 ವರ್ಷಗಳಿಂದ ನಕಲಿ ಸಂಖ್ಯೆಯಲ್ಲೇ ಚಾಲನೆ

    ಶಿವಮೊಗ್ಗ: ಟ್ರ್ಯಾಕ್ಟರ್ ಗಳಿಗೆ ನೀಡಲಾಗುವ ನೋಂದಣಿ ಸಂಖ್ಯೆಯನ್ನು ಕಾರಿಗೆ ಹಾಕಿಕೊಂಡು ರಾಜಾರೋಷವಾಗಿ ವಾಹನ ಚಲಾಯಿಸುತ್ತಿದ್ದ ಚಾಲಕನನ್ನು ಬಂಧಿಸಲಾಗಿದ್ದು, ಕಾರನ್ನು ಆರ್‌ಟಿಒ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಹೊಸನಗರ ತಾಲೂಕಿನ ಸೊಪ್ಪಿನಮಲ್ಲೆ ಗ್ರಾಮದ ಉಮೇಶ್ ಹೊಸ ಕಾರು ಖರೀದಿಸಿ, ಟ್ರ್ಯಾಕ್ಟರ್ ನಂಬರ್ ಪ್ಲೇಟಿನ ನಂಬರ್ ಹಾಕಿದ್ದಾನೆ. ಕಾರುಗಳಿಗೆ ಒ. ಓ. P ಮತ್ತು Z ಸಿರೀಸ್ ಗಳಲ್ಲಿ ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಆದರೆ ಈ ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಖಿ ಸಿರೀಸ್ ಇತ್ತು. ಇದು ಟ್ರ್ಯಾಕ್ಟರ್ ಗಳಿಗೆ ನೀಡುವ ಸಿರೀಸ್ ಆಗಿದ್ದು, ಮಾಲೀಕ ಟ್ರ್ಯಾಕ್ಟರ್ ಗಳಿಗೆ ನೀಡುವ ಖಿ ಸಿರೀಸ್ ನಂಬರ್ ಹಾಕಿಕೊಂಡು ಕಳೆದ ಎರಡು ವರ್ಷಗಳಿಂದ ರಾಜಾರೋಷವಾಗಿ ಸಂಚರಿಸುತ್ತಿದ್ದಾನೆ.

    2017 ರಲ್ಲಿ ಹೊಸನಗರ ತಾಲೂಕಿನ ಸೊಪ್ಪಿನಮಲ್ಲೆ ಗ್ರಾಮದ ಉಮೇಶ್ ಎಂಬಾತ ಹೊಸ ಕಾರು ಖರೀದಿಸಿದ್ದಾನೆ. ಆದರೆ ಈತ ಖರೀದಿಸಿದ್ದ ಕಾರಿಗೆ ಖಾಯಂ ಸಂಖ್ಯೆ ಪಡೆಯದೇ ನಕಲಿ ನಂಬರ್ ಹಾಕಿಕೊಂಡು ಚಲಾಯಿಸುತ್ತಿದ್ದ. ಎರಡು ವರ್ಷಗಳಿಂದಲೂ ಇದೇ ನಂಬರ್ ಪ್ಲೇಟ್ ಹಾಕಿಕೊಂಡು ವಾಹನ ಚಲಾಯಿಸಿದ್ದಾನೆ. ಇದೀಗ ತನ್ನ ಕಾರನ್ನು ನಗರದ ಆರ್‌ಟಿಒ ಕಚೇರಿ ಮುಂಭಾಗದಲ್ಲಿಯೇ ಪಾರ್ಕ್ ಮಾಡಿ ಬೇರೆಡೆಗೆ ತೆರಳಿದ್ದ. ಕಾರಿನ ನಂಬರ್ ಪ್ಲೇಟ್ ಗಮನಿಸಿದ ಆರ್‌ಟಿಒ ಅಧಿಕಾರಿಗಳಿಗೆ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

    ಕಾರನ್ನು ನೋಂದಣಿ ಮಾಡಿಸದೇ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದ ಹಿನ್ನೆಲೆಯಲ್ಲಿ ಕಾರನ್ನು ಆರ್‌ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಮಾಲೀಕ ಉಮೇಶನನ್ನು ಜಯನಗರ ಪೊಲೀಸರಗೆ ಒಪ್ಪಿಸಿದ್ದಾರೆ.

    ಅಪಘಾತವಾದರೆ ಪರಿಹಾರವಿಲ್ಲ:
    ಹೊಸ ಕಾರು ಖರೀದಿಸಿದ ನಂತರ ಒಂದು ತಿಂಗಳಲ್ಲಿ ಕಾಯಂ ನಂಬರ್ ಪಡೆಯಬೇಕು. ಒಂದು ವೇಳೆ ಪಡೆಯದೇ ತಾತ್ಕಾಲಿಕ ಸಂಖ್ಯೆಯಲ್ಲೇ ಅಥವಾ ನಕಲಿ ಸಂಖ್ಯೆ ಹಾಕಿಕೊಂಡು ವಾಹನ ಓಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಲ್ಲದೇ ಒಂದು ವೇಳೆ ಕಾರು ಅಪಘಾತವಾದಲ್ಲಿ ಯಾವುದೇ ಪರಿಹಾರ, ವಿಮೆ ಹಣ. ಅದಕ್ಕಾಗಿ ವಾಹನ ಮಾಲೀಕರು ಮತ್ತು ಸಾರ್ವಜನಿಕರು ಎಚ್ಚರ ವಹಿಸಬೇಕು ಹಾಗೂ ಇಂತಹ ವಾಹನಗಳು ಕಂಡು ಬಂದರೆ ಆರ್‍ಟಿಒ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ದೀಪಕ್ ಮನವಿ ಮಾಡಿಕೊಂಡಿದ್ದಾರೆ.

  • ನಂಬರ್ ಪ್ಲೇಟ್ ಇಲ್ಲದ್ದಕ್ಕೆ ಬಿತ್ತು 9.8 ಲಕ್ಷ ರೂ. ದಂಡ

    ನಂಬರ್ ಪ್ಲೇಟ್ ಇಲ್ಲದ್ದಕ್ಕೆ ಬಿತ್ತು 9.8 ಲಕ್ಷ ರೂ. ದಂಡ

    – ಪೋರ್ಷೆ ಕಾರ್ ಮಾಲೀಕ ಕಂಗಾಲು

    ಅಹ್ಮದಾಬಾದ್: ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ ಮಾಡಿದ್ದಕ್ಕಾಗಿ ಪೊಲೀಸರು ಹಾಕಿದ ದಂಡವನ್ನು ಕಂಡು ಕಾರು ಮಾಲೀಕ ಬೆಚ್ಚಿ ಬಿದ್ದಿದ್ದಾನೆ.

    ಗುಜರಾತಿನಲ್ಲಿ ಈ ಘಟನೆ ನಡೆದಿದ್ದು, ಅಹಮದಾಬಾದ್ ಪೊಲೀಸರು ಪೋರ್ಷೆ 911 ಕಾರಿನ ನಂಬರ್ ಪ್ಲೇಟ್ ಹಾಗೂ ಅಧಿಕೃತ ದಾಖಲೆಗಳು ಇಲ್ಲದ್ದಕ್ಕೆ ಮಾಲೀಕನಿಗೆ 9.8 ಲಕ್ಷ ರೂ. ದಂಡ ವಿಧಿಸಿದ್ದಾರೆ.

    ಅಹಮದಾಬಾದ್‍ನ ಸಿಂಧು ಭವನ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಈ ಐಷಾರಾಮಿ ಕಾರು ಸಂಚರಿಸುತ್ತಿದ್ದನ್ನು ಕಂಡ ಪೊಲೀಸರು ಈ ಪರಿಪ್ರಮಾಣದ ದಂಡ ವಿಧಿಸಿದ್ದಾರೆ. ರಸ್ತೆ ಸುರಕ್ಷತೆಗಾಗಿ ಪೊಲೀಸರು ಹಮ್ಮಿಕೊಂಡಿರುವ ಅಭಿಯಾನದ ಭಾಗವಾಗಿ 10 ಐಷಾರಾಮಿ ಕಾರುಗಳನ್ನು ಸೀಜ್ ಮಾಡಿದ್ದಾರೆ. ಇದೀಗ ಪೋರ್ಷೆ ಕಾರನ್ನು ಸೀಜ್ ಮಾಡಿದ್ದು, ಇದರ ಬೆಲೆ ಭಾರತದಲ್ಲಿ 2 ರಿಂದ 2.35 ಕೋಟಿ ರೂ.ಗಳಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಈ ಕುರಿತು ಅಹಮದಾಬಾದ್ ಪೊಲೀಸರು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ಪಶ್ಚಿಮ ಅಹಮದಾಬಾದ್‍ನಲ್ಲಿ ಪರಿಶೀಲನೆ ವೇಳೆ ಪೋರ್ಷೆ 911 ಕಾರನ್ನು ಸಬ್ ಇನ್ಸ್‍ಪೆಕ್ಟರ್ ಎಂ.ಬಿ.ವಿರ್ಜಾ ಅವರು ಹಿಡಿದಿದ್ದಾರೆ. ಈ ಕಾರಿಗೆ ನಂಬರ್ ಪ್ಲೇಟ್ ಹಾಗೂ ಅಧಿಕೃತ ದಾಖಲೆಗಳು ಇರಲಿಲ್ಲ. ಹೀಗಾಗಿ ವಾಹನವನ್ನು ವಶಕ್ಕೆ ಪಡೆದು 9.80 ಲಕ್ಷ ರೂ.ದಂಡ ವಿಧಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ನಂತರ ಸಂಚಾರಿ ನಿಯಮ ಪಾಲಿಸದವರಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಘಟನೆಯೊಂದರಲ್ಲಿ ಓವರ್‍ಲೋಡ್ ಹಾಗೂ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡಿದ್ದಕ್ಕೆ ಲಾರಿ ಚಾಲಕನಿಗೆ 2 ಲಕ್ಷ ರೂ.ದಂಡ ವಿಧಿಸಲಾಗಿತ್ತು.

  • ಟೋಲ್ ಕಿರಿಕಿರಿ- ಕಾರ್ ನಂಬರ್ ಪ್ಲೇಟನ್ನೇ ‘ಎಪಿ ಸಿಎಂ ಜಗನ್’ ಎಂದು ಬದಲಿಸಿದ ಭೂಪ

    ಟೋಲ್ ಕಿರಿಕಿರಿ- ಕಾರ್ ನಂಬರ್ ಪ್ಲೇಟನ್ನೇ ‘ಎಪಿ ಸಿಎಂ ಜಗನ್’ ಎಂದು ಬದಲಿಸಿದ ಭೂಪ

    ಹೈದರಾಬಾದ್: ಟೋಲ್ ಅಥವಾ ಪಾರ್ಕಿಂಗ್ ಶುಲ್ಕ ಪಾವತಿಸುವುದನ್ನು ತಪ್ಪಿಸಲು ಅನೇಕ ವಾಹನ ಸವಾರರು ಪೊಲೀಸ್, ಪ್ರೆಸ್, ನ್ಯಾಯಾಧೀಶರು ಅಥವಾ ಶಾಸಕರ ಸ್ಟಿಕ್ಕರ್ ಗಳನ್ನು ಬಳಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯ ಐಡಿಯಾ ನೋಡಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ.

    ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನಿವಾಸಿ ಎಂ.ಹರಿ ರಾಕೇಶ್, ಟೋಲ್ ಶುಲ್ಕ ಕಟ್ಟುವುದನ್ನು ತಪ್ಪಿಸಿಕೊಳ್ಳಲು ತನ್ನ ಕಾರ್ ನಂಬರ್ ಪ್ಲೇಟನ್ನೇ ‘ಎಪಿ ಸಿಎಂ ಜಗನ್’ ಎಂದು ಬದಲಾಯಿಸಿಕೊಂಡಿದ್ದಾನೆ. ಕೇವಲ ಕಾರ್ ಮೇಲೆ ಸ್ಟಿಕ್ಕರ್ ಮಾತ್ರ ಅಂಟಿಸಿಕೊಂಡಿಲ್ಲ. ಬದಲಿಗೆ ಮುಂಭಾಗ ಹಾಗೂ ಹಿಂಭಾಗದ ನಂಬರ್ ಪ್ಲೇಟನ್ನು ‘ಎಪಿ ಸಿಎಂ ಜಗನ್’ ಎಂದು ಬದಲಾಯಿಸಿಕೊಂಡಿದ್ದಾನೆ.

    ಜಡಿಮೆಟ್ಲಾದಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಈತ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಪೊಲೀಸರು ಈತನನ್ನು ವಿಚಾರಣೆ ನಡೆಸಿದ್ದು, ಟೋಲ್ ತೆರಿಗೆ ಪಾವತಿಸುವುದರಿಂದ ವಿನಾಯಿತಿ ಪಡೆಯಲು ಹಾಗೂ ಸಂಚಾರಿ ಪೊಲೀಸರ ತಪಾಸಣೆಯಿಂದ ತಪ್ಪಿಸಲು ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ.

    ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದು, ರಾಕೇಶ್ ವಿರುದ್ಧ ಮೋಸ ಹಾಗೂ ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

  • ವಾಹನ ಖರೀದಿದಾರರಿಗೆ ಶಾಕಿಂಗ್ ನ್ಯೂಸ್

    ವಾಹನ ಖರೀದಿದಾರರಿಗೆ ಶಾಕಿಂಗ್ ನ್ಯೂಸ್

    ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೊಸದಾಗಿ ಖರೀದಿಸಲಾದ ವಾಹನಗಳ ನೋಂದಣಿಯನ್ನು ಬುಧವಾರದಿಂದಲೇ ನಿಲ್ಲಿಸಲಾಗಿದೆ.

    ಹೈ ಸೆಕ್ಯೂರಿಟಿ ನಂಬರ್ ಪ್ಲೇಟನ್ನು ವಾಹನಗಳ ಮಾಹಿತಿ ಸಂಗ್ರಹಿಸುವ ಕೇಂದ್ರ ಸಾರಿಗೆ ಇಲಾಖೆಯ ವಾಹನ ಡಾಟಾಬೇಸ್‍ನಲ್ಲಿ ಜೋಡಣೆ ಮಾಡದ ಹಿನ್ನೆಲೆಯಲ್ಲಿ ನೋಂದಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಈ ನಿರ್ಧಾರದಿಂದ ಯಾವುದೇ ಹೊಸ ವಾಹನಗಳಿಗೆ ರಿಜಿಸ್ಟ್ರೇಷನ್ ಆಫ್ ಸರ್ಟಿಫಿಕೇಟ್ ನೀಡಲ್ಲ ಎಂದು ಹೇಳಲಾಗುತ್ತಿದೆ.

    ಏಪ್ರಿಲ್ 1 ರೊಳಗೆ ಎಲ್ಲ ರೂಪದ ವಾಹನಗಳು ಇನ್‍ಬಿಲ್ಟ್ ಸೆಕ್ಯೂರಿಟಿ ಫೀಚರ್ಸ್ ನೊಂದಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟನ್ನು ಅಳವಡಿಸಿಕೊಂಡು ರೋಡಿಗಿಳಿಯಬೇಕಿತ್ತು. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ನೋಂದಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂಬುದಾಗಿ ತಿಳಿದುಬಂದಿದೆ.