Tag: ನಂಬರ್ ಪ್ಲೇಟ್

  • ವಾಹನಗಳ ಮೇಲೆ ಬೇಕಾಬಿಟ್ಟಿ ಸ್ಟಿಕ್ಕರ್ ಅಂಟಿಸಿದ್ರೆ ಕಾನೂನು ಕ್ರಮ – ದರ್ಶನ್‌ ಫ್ಯಾನ್ಸ್‌ಗೆ ಆರ್‌ಟಿಒ ಎಚ್ಚರಿಕೆ!

    ವಾಹನಗಳ ಮೇಲೆ ಬೇಕಾಬಿಟ್ಟಿ ಸ್ಟಿಕ್ಕರ್ ಅಂಟಿಸಿದ್ರೆ ಕಾನೂನು ಕ್ರಮ – ದರ್ಶನ್‌ ಫ್ಯಾನ್ಸ್‌ಗೆ ಆರ್‌ಟಿಒ ಎಚ್ಚರಿಕೆ!

    – ದರ್ಶನ್‌ ಕೈದಿ ನಂಬರ್‌ ಟ್ರೆಂಡಾದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ದರ್ಶನ್ ಅರೆಸ್ಟ್ ನಂತರ ಅವರ ಫ್ಯಾನ್ಸ್ (Darshan Fans) ಅಂಧಾಭಿಮಾನ ಮಿತಿ ಮೀರಿದೆ. ವಾಹನಗಳ ಮೇಲೆ ದರ್ಶನ್ ಕೈದಿ ನಂಬರ್ (Darshan Prisoner Number) ಸೇರಿದಂತೆ ತರಹೇವಾರಿ ಸ್ಟಿಕ್ಕರ್‌ಗಳನ್ನು ಅಂಟಿಸಿ ಅಭಿಮಾನ ಮೆರೆಯುತ್ತಿದ್ದಾರೆ. ಅಂತಹ ಅಭಿಮಾನಿಗಳಿಗೆ ಆರ್‌ಟಿಓ ಎಚ್ಚರಿಕೆ ಕೊಟ್ಟಿದೆ.

    ಕೊಲೆ ಆರೋಪಿ ದರ್ಶನ್ ಬಳ್ಳಾರಿ ಜೈಲಿಗೆ (Bellary Jail) ಶಿಫ್ಟ್ ಆದ್ಮೇಲೆ ಅವರ ಅಭಿಮಾನಿಗಳು ವಾಹನಗಳ ಮೇಲೆ ತರಹೇವಾರಿ ಬರಹ ಬರೆದು ಅಂಧಾಭಿಮಾನ ಮೆರೆಯುತ್ತಿದ್ದಾರೆ. ದರ್ಶನ್‌ಗೆ ನೀಡಿರುವ ಕೈದಿ ಸಂಖ್ಯೆ, ಸೇರಿದಂತೆ ವಾಹನಗಳ (vehicles) ಮೇಲೆ ಪ್ರಚೋದನಕಾರಿ, ಬೇರೆ ನಟರ ಫ್ಯಾನ್ಸ್‌ಗೆ ಟಾಂಗ್ ಕೊಡುವಂತ ಬರಹಗಳ ಸ್ಟಿಕರ್‌ ಅಳವಡಿಸಿಕೊಂಡಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಈ ಬಗ್ಗೆ ನಿಗಾ ವಹಿಸಿರುವ ಪೊಲೀಸರು ಹಾಗೂ ಆರ್‌ಟಿಒ ಇಲಾಖೆ ಅಧಿಕಾರಿಗಳು (RTO officers) ಹದ್ದಿನ ಕಣ್ಣಿಟ್ಟಿದ್ದು, ʻಡಿಬಾಸ್‌ʼ ಅಭಿಮಾನಿಗಳಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉಪಯೋಗಕ್ಕೆ ಬಾರದ ಗೃಹಜ್ಯೋತಿ ಯೋಜನೆ – ವಿದ್ಯುತ್ ಇಲ್ಲದೇ ನಿತ್ಯ ಕತ್ತಲಲ್ಲೇ ಕಾಲ ಕಳೆಯುತ್ತಿದೆ ಈ ಗ್ರಾಮ

    ಇತ್ತೀಚಿನ ದಿನಗಳಲ್ಲಿ ವಾಹನಗಳ ಮೇಲೆ ಬೇರೆ ಬೇರೆ ರೀತಿಯ ಬರಹಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿಂದೆ ಈ ಮಟ್ಟಿಗೆ ಬರಹಗಳನ್ನ ವಾಹನಗಳ ಮೇಲೆ ಹಾಕಿರಲಿಲ್ಲ. ಈ ಬಗ್ಗೆ ಆರ್‌ಟಿಒ ಇಲಾಖೆ ಹಾಗೂ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದ್ದು, ಅನವಶ್ಯಕ ಬರಹಗಳು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳೂತ್ತೇವೆ. ನೆಚ್ಚಿನ ನಟರ ಫೋಟೋಗಳನ್ನ ವಾಹನಗಳ ಮೇಲೆ ಹಾಕೋದು ಕಾನೂನು ಬಾಹಿರ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ್ ಎಚ್ಚರಿಸಿದ್ದಾರೆ. ಇದನ್ನೂ ಓದಿ: 1,788 ಕೊಠಡಿ, 257 ಸ್ನಾನಗೃಹ, ಅಮೃತಶಿಲೆಯಿಂದ ಮಾಡಿದ ಮೆಟ್ಟಿಲು – ವಿಶ್ವದ ಅತಿದೊಡ್ಡ ಐಷಾರಾಮಿ ಅರಮನೆಯಲ್ಲಿ ಮೋದಿಗೆ ಆತಿಥ್ಯ

    ಇಲ್ಲಿವರೆಗೆ ನಂಬರ್ ಪ್ಲೇಟ್ ಮೇಲೆ ಫೋಕಸ್ ಮಾಡ್ತಿದ್ವಿ. ಆದ್ರೆ ಕಾನೂನು ಪ್ರಕಾರ ಪ್ರಚೋದನೆ ಮಾಡುವ ಬರಹ ಮಾತ್ರವಲ್ಲ, ಯಾವುದೇ ಸ್ಟಿಕ್ಕರ್‌ಗಳಿಗೂ ಅವಕಾಶವಿಲ್ಲ. ಹಾಗಾಗಿ ಇನ್ಮುಂದೆ ಅನಧಿಕೃತ ಬರಹ ಹಾಕಿದರೆ, ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಒಂದು, ಎರಡು ಬಾರಿ ಎಚ್ಚರಿಕೆ ಕೊಡ್ತೀವಿ. 3ನೇ ಬಾರಿ ಅದೇ ತಪ್ಪು ಮಾಡಿದ್ರೆ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಮಲ್ಲಿಕಾರ್ಜುನ್‌ ಅವರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಯಚೂರು ಜಿಲ್ಲೆಯ ಹಲವೆಡೆ ಭಾರೀ ಮಳೆ: ಹಳ್ಳ ದಾಟುವಾಗ ಕೊಚ್ಚಿಹೋದ ಬ್ಯಾಂಕ್ ಉದ್ಯೋಗಿ

    ಹೌದು.. ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಆರ್‌ಟಿಒ ಇಲಾಖೆಗಳಿಗೆ ನಿರ್ದೇಶನ ಕೊಟ್ಟಿದೆ. ಅದರ ಅನ್ವಯವೇ ಅಧಿಕಾರಿಗಳು ಕೇಸು ದಾಖಲು ಮಾಡುತ್ತಾ ಬಂದಿದ್ದಾರೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಪ್ರಚಾರ ಮಾಡುವ ಕೆಲಸ ಆರ್‌ಟಿಒ ಇಲಾಖೆ ಮಾಡಿದೆ. ಕಳೆದ 3 ವರ್ಷಗಳಲ್ಲಿ ಈ ಸಂಬಂಧ ಹಲವು ಪ್ರಕರಣ ದಾಖಲು ಮಾಡಿದ್ದೇವೆ. ವಾಹನಗಳ ಮೇಲೆ ಬೇರೆ ಬೇರೆ ಬರಹಗಳನ್ನ ಬರೆಯುತ್ತಿದ್ದಾರೆ. ಯಾರೂ ಸಹ ಅನಾವಶ್ಯಕ ಬರಹಗಳನ್ನ ವಾಹನಗಳ ಮೇಲೆ ಹಾಕಬಾರದು. ಇನ್ಮೇಲೆ ಈ ರೀತಿ ಸ್ಟಾರ್ ವಾರ್ ರೀತಿ ಅನಾವಶ್ಯಕ ಬರಹ, ಟಾಂಗ್‌ ಕೊಡೋ ಬರಹಗಳನ್ನ ತೆಗೆದು ಹಾಕಿ, ಇಲ್ಲ ನಮ್ಮ ಕಠಿಣ ಕ್ರಮ ಗ್ಯಾರಂಟಿ ಅಂತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಚೀನಾ, ಫಿಲಿಪೈನ್ಸ್‌ ಗಡಿ ವಿವಾದ – ಶಮನವಾಗದ ದಶಕಗಳ ಉದ್ವಿಗ್ನತೆಗೆ ಕಾರಣವೇನು ಗೊತ್ತಾ? 

  • CAA ಉಲ್ಲೇಖವಿರೋ ಅಮಿತ್ ಶಾ, ರಾಜನಾಥ್ ಸಿಂಗ್ ಕಾರಿನ ನಂಬರ್ ಪ್ಲೇಟ್ ವೈರಲ್

    CAA ಉಲ್ಲೇಖವಿರೋ ಅಮಿತ್ ಶಾ, ರಾಜನಾಥ್ ಸಿಂಗ್ ಕಾರಿನ ನಂಬರ್ ಪ್ಲೇಟ್ ವೈರಲ್

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (CAA) ಉಲ್ಲೆಖವಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amishah) ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರ ಕಾರಿನ ನಂಬರ್‌ ಪ್ಲೇಟ್‌ಗಳು ಇದೀಗ ಭಾರೀ ಸದ್ದು ಮಾಡುತ್ತಿವೆ.

    ಸಿಎಎ ಸಂಬಂಧ ಮೋದಿ ಸರ್ಕಾರದ ಮುಂದಿನ ದೊಡ್ಡ ನಡೆ ಸಿಎಎ ಜಾರಿಯಾಗಲಿದೆ ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ನಡುವೆ ಅಮಿತ್ ಶಾ ಅವರ ಕಾರು ‘DL1CAA4421’ ನಂಬರ್ ಪ್ಲೇಟ್‌ನೊಂದಿಗೆ ಕಾಣಿಸಿಕೊಂಡ ನಂತರ ಊಹಾಪೋಹಗಳು ಇನ್ನೂ ಹೆಚ್ಚಿವೆ.

    ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಬಿಜೆಪಿಯ ಚುನಾವಣಾ ಸಮಿತಿ ಸಭೆಗೆ ಗೃಹ ಸಚಿವ ಹಾಗೂ ರಕ್ಷಣಾ ಸಚಿವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರು ಕಾರಿನ ನಂಬರ್‌ ಪ್ಲೇಟ್‌ಗಳು ಎಲ್ಲರ ಗಮನಸೆಳೆದವು. ಈ ಇಬ್ಬರು ನಾಯಕರ ಕಾರಿನ ನಂಬರ್‌ ಪ್ಲೇಟ್‌ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದ್ದು, ಚರ್ಚಗೆ ಗ್ರಾಸವಾಗಿವೆ. ನಂಬರ್ ಪ್ಲೇಟ್‌ನಲ್ಲಿ ‘ಸಿಎಎ’ ಇರುವುದರಿಂದ ಶೀಘ್ರದಲ್ಲೇ ಕಾನೂನನ್ನು ಜಾರಿಗೆ ತರುವುದಾಗಿ ಸರ್ಕಾರ ಸುಳಿವು ನೀಡಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಾರೆ.  ಇದನ್ನೂ ಓದಿ: ಸಾರ್ವಜನಿಕರ ದರ್ಶನಕ್ಕೆ ತೆರೆದ ಅಬುಧಾಬಿ ಹಿಂದೂ ದೇವಾಲಯ- ಡ್ರೆಸ್‌ ಕೋಡ್‌, ಟೈಮಿಂಗ್ಸ್‌ ವಿವರ ಇಲ್ಲಿದೆ

    ಕೆಲವು ದಿನಗಳ ಹಿಂದೆ ಅಮಿತ್ ಶಾ ಅವರು ಲೋಕಸಭಾ ಚುನಾವಣೆಗೆ (Loksabha Election) ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಲಿದೆ. 2019ರಲ್ಲಿ ಜಾರಿಗೆ ಬಂದಿರುವ ಈ ಕಾನೂನನ್ನು ಚುನಾವಣೆಗೂ ಮುನ್ನ ಕೆಲ ನಿಯಮಗಳನ್ನು ಹೊರಡಿಸಿದ ನಂತರ ಜಾರಿಗೆ ತರಲಾಗುವುದು ಎಂದು ಹೇಳಿದ್ದರು.

    ಸಿಎಎ ವಿರುದ್ಧ ಹೇಳಿಕೆಗಳನ್ನು ನೀಡಿ ನಮ್ಮ ಮುಸ್ಲಿಂ ಸಹೋದರರನ್ನು ದಾರಿತಪ್ಪಿಸಲಾಗುತ್ತಿದೆ ಮತ್ತು ಪ್ರಚೋದಿಸಲಾಗುತ್ತಿದೆ. ಕೇವಲ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳವನ್ನು ಎದುರಿಸಿ ಭಾರತಕ್ಕೆ ಬಂದವರಿಗೆ ಪೌರತ್ವವನ್ನು ನೀಡಲು ಸಿಎಎಯನ್ನು ಉದ್ದೇಶಿಸಲಾಗಿದೆ. ಇದು ಯಾರೊಬ್ಬರ ಭಾರತೀಯ ಪೌರತ್ವವನ್ನು ಕಸಿದುಕೊಳ್ಳಲು ಅಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದರು.

  • ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆಗೆ 3 ತಿಂಗಳ ಅವಧಿ ವಿಸ್ತರಣೆ

    ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆಗೆ 3 ತಿಂಗಳ ಅವಧಿ ವಿಸ್ತರಣೆ

    ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (High Security Number Plates) ಅಳವಡಿಕೆಗೆ 3 ತಿಂಗಳ ಅವಧಿ ವಿಸ್ತರಣೆ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ನ ಸದಸ್ಯ ಮಧು ಜಿ ಮಾದೇಗೌಡ ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಉತ್ತರ ನೀಡಿದರು. ಹೈ ಸೆಕ್ಯುರಿಟಿ‌ ನಂಬರ್ ಪ್ಲೇಟ್ ಅಳವಡಿಕೆಗೆ ಫೆಬ್ರವರಿ 17, 2024ಕಕ್ಕೆ ಗಡುವು ಮುಕ್ತಾಯವಾಗಲಿದೆ. ಹೀಗಾಗಿ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆಗೆ 3 ತಿಂಗಳ ಅವಧಿ ವಿಸ್ತರಣೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ದೇವಾಲಯಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ: ರಾಮಲಿಂಗಾ ರೆಡ್ಡಿ

     

    ರಾಜ್ಯದಲ್ಲಿ ಈಗಾಗಲೇ 18,32,787 ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ರಾಜ್ಯದಲ್ಲಿ 9.16%. ಮಾತ್ರ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಇದು ವೇಗವಾಗಿ ಆಗಿದೆ. ನಮ್ಮ ರಾಜ್ಯದಲ್ಲಿ ನಂಬರ್ ಪ್ಲೇಟ್ ಅಳವಡಿಕೆ ತಡವಾಗಿದೆ. ಹೀಗಾಗಿ 3 ತಿಂಗಳು ಅವಧಿ ವಿಸ್ತರಣೆ ಮಾಡಿ ಆದಷ್ಟು ಬೇಗ ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಿವರಿಸಿದರು. ಇದನ್ನೂ ಓದಿ: ಬೆಂಗಳೂರಿಗೆ ಬಂತು ಡ್ರೈವರ್‌ಲೆಸ್ ಮೆಟ್ರೋ

  • ಬೆಂಗ್ಳೂರಲ್ಲಿ ನಕಲಿ ಪ್ಲೇಟ್ ದಂಧೆ – ದುಡ್ಡು ಕೊಟ್ರೆ ಸಿಗುತ್ತೆ ಸಿಎಂ, ಸಚಿವರ ಕಾರ್ ನಂಬರ್

    ಬೆಂಗ್ಳೂರಲ್ಲಿ ನಕಲಿ ಪ್ಲೇಟ್ ದಂಧೆ – ದುಡ್ಡು ಕೊಟ್ರೆ ಸಿಗುತ್ತೆ ಸಿಎಂ, ಸಚಿವರ ಕಾರ್ ನಂಬರ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಕಲಿ ನಂಬರ್ ಪ್ಲೇಟ್ ಗಳ ಹಾವಳಿ ಹೆಚ್ಚಾಗಿದೆ. ಕೈಗೆ ಕಾಸು ಕೊಟ್ರೆ ಸಾಕು, ಸಿಎಂ, ಮಿನಿಸ್ಟರ್ಸ್, ಹೀಗೆ ಯಾರ ವಾಹನಗಳ ನಂಬರ್‌ಗಳನ್ನಾದ್ರೂ ನಕಲಿ ಮಾಡ್ತಾರೆ. ಇಂತಹ ವ್ಯವಸ್ಥಿತ ಜಾಲವನ್ನ ಪಬ್ಲಿಕ್ ಟಿವಿ ತಂಡ ಪತ್ತೆ ಹಚ್ಚಿದೆ.

    ಇತ್ತಿಚೆಗೆ ರಾಜಧಾನಿ ಬೆಂಗಳೂರಿನಲ್ಲಿ ನಕಲಿ ನಂಬರ್ ಪ್ಲೇಟ್ ಬಳಸಿ ವಾಹನಗಳನ್ನ ಓಡಿಸುವವರ ಸಂಖ್ಯೆ ಹೆಚ್ಚಾಗಿದೆ. ನಿಯಮ ಉಲ್ಲಂಘಿಸಿ, ಕೆಲವು ಸ್ಟೋರ್ ಗಳಲ್ಲಿ ಅವ್ಯಾಹತವಾಗಿ ಡೂಪ್ಲಿಕೇಟ್ ನಂಬರ್ ಪ್ಲೇಟ್‍ಗಳನ್ನ ಯಾವುದೇ ದಾಖಲೆ ಪಡೆಯದೇ ಮಾಡಿಕೊಡಲಾಗ್ತಿದೆ. ಇಂತಹ ವ್ಯವಸ್ಥಿತ ಜಾಲವನ್ನ ನಿಮ್ಮ ಪಬ್ಲಿಕ್ ಟಿವಿ ತಂಡ ರಹಸ್ಯ ಕಾರ್ಯಾಚರಣೆಯ ಮೂಲಕ ಬೇಧಿಸಿದೆ.

    ವಾಹನಗಳಿಗೆ ನಕಲಿ ನಂಬರ್ ಪ್ಲೇಟ್ ಜಾಲವನ್ನು ಸ್ಟಿಂಗ್ ಆಪರೇಷನ್ ಮೂಲಕ ನಿಮ್ಮ ಪಬ್ಲಿಕ್ ಟಿವಿ ಬಯಲು ಮಾಡಿದೆ. ಜೆಸಿನಗರ, ಯಶವಂತಪುರ, ಶಿವಾಜಿನಗರ ಸೇರಿದಂತೆ ನಗರದ ಹಲವು ಏರಿಯಾಗಳಲ್ಲಿ ಮೆಕಾನಿಕ್ ಶಾಪ್‍ಗಳಲ್ಲಿಯೇ ನಕಲಿ ನಂಬರ್ ಪ್ಲೇಟ್ ದಂಧೆ ರಾಜಾರೋಷವಾಗಿ ನಡೀತಿದೆ. ನೀವು ಯಾವುದೇ ವಾಹನ ಕೊಡೊಯ್ದು, ನಂಬರ್ ಪ್ಲೇಟ್ ಚೇಂಜ್ ಮಾಡಿಕೊಡಿ ಅಂದ್ರೆ, ಯಾವುದೇ ದಾಖಲೆ ಕೇಳದೇ ರೆಡಿ ಮಾಡಿಕೊಡ್ತಾರೆ. ಅವರು ಕೇಳಿದಷ್ಟು ದುಡ್ಡು ಕೊಡಬೇಕು. ಕೇವಲ 20 ನಿಮಿಷದಲ್ಲಿ ನಕಲಿ ನಂಬರ್ ಪ್ಲೇಟ್‌ ರೆಡಿ ಆಗುತ್ತೆ.

    ನಮ್ಮ ತಂಡ ಮೊದಲಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರಿ ಕಾರಿನ ಪರವಾನಗಿ ಸಂಖ್ಯೆ ಸಂಗ್ರಹಿಸಿ, ನಂಬರ್ ಪ್ಲೇಟ್ ಮಾಡಿಕೊಡಿ ಅಂದ್ವಿ ಅಷ್ಟೆ. ಹಿಂದೆ ಮುಂದೆ ನೋಡದೇ ಇಂತಿಷ್ಟೆ ದುಡ್ಡಾಗುತ್ತೆ, 20 ನಿಮಿಷ ಬಿಟ್ಟು ಬನ್ನಿ ಅಂತ ನಕಲಿ ಡೀಲರ್ ಹೇಳಿದ್ದಾನೆ.

    ಸ್ಟಿಂಗ್ ಸ್ಥಳ: ಜೆಸಿ ನಗರ
    ಪ್ರತಿನಿಧಿ: ಅದೇನಾದ್ರೂ ಡಾಕ್ಯೂಮೆಂಟ್ ಬೇಕಾ..?
    ನಕಲಿ ಡೀಲರ್: ಏನು ಬೇಡ? ಬರಿ ಗಾಡಿ ನೇಮ್ ಹೇಳಿ ಅಷ್ಟೆ
    ಪ್ರತಿನಿಧಿ: ಡಿಸೈನ್ ತೋರಿಸಿ ಸರ್? ಎಷ್ಟೊತ್ತಾಗುತ್ತೆ?
    ನಕಲಿ ಡೀಲರ್: 20 ನಿಮಿಷ ಆಗುತ್ತೆ
    ಪ್ರತಿನಿಧಿ: ಮಾಡಿ..
    ನಕಲಿ ಡೀಲರ್: ಇದೇ ಕರೆಕ್ಟ್ ನಂಬರ್.. ಕೆಎ 05 ಜಿಎ9000.. ಕೊಡಿ.. 500 ರೂಪಾಯಿ. 20 ನಿಮಿಷ ಆದ್ಮೇಲೆ ಬನ್ನಿ

    ಹೀಗೆ ಯಾವುದೇ ದಾಖಲೆಗಳನ್ನ ಸಂಗ್ರಹಿಸಿಕೊಳ್ಳದೇ, ಓಪನ್ ಆಗಿ ನಕಲಿ ನಂಬರ್ ಪ್ಲೇಟ್ ಗಳನ್ನ ಮಾಡಿಕೊಡ್ತಾನೆ. ವಾಹನಕ್ಕೆ ನಂಬರ್ ಪ್ಲೇಟ್ ಮಾಡಿಕೊಡಲು, ಆ ವಾಹನದ ಚಾಸಿ ನಂಬರ್, ಆರ್ ಸಿ ಕಾರ್ಡ್, ಡಿಎಲ್, ಫೋನ್ ನಂಬರ್ ಕೊಡಬೇಕು. ಅದು ಕೂಡ ಅಧಿಕೃತವಾಗಿ ಸರ್ಕಾರದಿಂದ ಗುತ್ತಿಗೆ ಪಡೆದಿರುವ ಡೀಲರ್ ಗಳೇ ನಂಬರ್ ಪ್ಲೇಟ್‍ಗಳನ್ನ ಹಾಕಿಕೊಡಬೇಕು. ಆದರೆ ಇದ್ಯಾವ ನಿಯಮಗಳು ಇಲ್ಲಿ ಪಾಲನೆಯಾಗ್ತಿಲ್ಲ. ಇದನ್ನೂ ಓದಿ: ದ.ಕನ್ನಡದಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆ ಇದ್ದು, ಹೆಚ್ಚಿಸಬೇಕು: ಡಿಜಿಪಿ ಪ್ರವೀಣ್ ಸೂದ್

    ಕೇವಲ ಸಿಎಂ ಅವರ ಸರ್ಕಾರಿ ಕಾರಿನ ನಂಬರ್ ಮಾತ್ರವಲ್ಲ, ಆರೋಗ್ಯ ಸಚಿವರ ಕಾರಿನ ನಂಬರ್ ಪ್ಲೇಟ್‍ನ್ನು ಥೇಟ್ ಹಾಗೇ ಮಾಡಿಕೊಟ್ಟಿದ್ದಾರೆ. ಇದು ಕೂಡ ಸರ್ಕಾರಿ ವಾಹನ. ವಾಹನಕ್ಕೆ ಸಂಬಂಧಪಟ್ಟ ಯಾವ ದಾಖಲೆಗಳನ್ನೂ ಪರಿಶೀಲಿಸಲಿಲ್ಲ. ನಂಬರ್ ಪ್ಲೇಟ್ ಮಾಡಿಕೊಡಿ ಅಂತಿದ್ದಂತೆ ಸೈ ಎಂದು ಹೇಳಿದ.

    ಸ್ಟಿಂಗ್ ಸ್ಥಳ: ಜೆಸಿ ನಗರ
    ಪ್ರತಿನಿಧಿ: ಎಷ್ಟಾಗುತ್ತೆ ಸರ್?
    ನಕಲಿ ಡೀಲರ್: 500 ರೂ. ಆಗುತ್ತೆ ಸರ್
    ಪ್ರತಿನಿಧಿ: ಎಷ್ಟೊತ್ತು ಆಗುತ್ತೆ ಸರ್?
    ನಕಲಿ ಡೀಲರ್: 10 ನಿಮಿಷ ಆಗುತ್ತೆ
    ಪ್ರತಿನಿಧಿ: ಕಡಿಮೆ ಇಲ್ವಾ ಸರ್?
    ನಕಲಿ ಡೀಲರ್: ಕಡಿಮೆನೆ ಅದು. ಬೇರೆ ಸಾವಿರ ರೂಪಾಯಿ ಇದೆ. ನಮ್ದು ಹೋಲ್‍ಸೆಲ್.
    ಪ್ರತಿನಿಧಿ: ಕೆಎ 50 ಜಿ3555
    ನಕಲಿ ಡೀಲರ್: ಒಂದು ಸಿಂಗಲ್ ಆ..?
    ನಕಲಿ ಡೀಲರ್: ಯೆಲ್ಲೋ ಬೋರ್ಡಾ…ವೈಟ್ ಬೋರ್ಡಾ..?
    ಪ್ರತಿನಿಧಿ: ವೈಟ್ ಬೋರ್ಡ್..ಡಾಕ್ಯುಮೆಂಟ್ ಏನಾದ್ರು ಬೇಕಾ..?
    ನಕಲಿ ಡೀಲರ್: ಏನೂ ಬೇಡ..
    ಪ್ರತಿನಿಧಿ: ಕೊಡಿ ಸರ್ ಕಾಸು..?
    ನಕಲಿ ಡೀಲರ್: ಫೋನ್ ಪೇ ಇದೆಯಾ

    ಅಧಿಕೃತ ಡೀಲರ್ ಶಿಪ್ ಇಲ್ಲದಿದ್ರೂ, ಪಂಚಿಂಗ್ ನಂಬರ್ ಪ್ಲೇಟ್ ಕೊಟ್ಟು ನಕಲಿ ಡೀಲರ್ ಗಳು ಕಾಸು ಮಾಡಿಕೊಳ್ತಿದ್ದಾರೆ. ಸಹಜವಾಗಿ ವಾಹನಗಳ ನಂಬರ್ ಪ್ಲೇಟ್‍ಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಅಳವಡಿಕೆಯಾಗಿರಬೇಕು. ಅಂತಹ ನಂಬರ್ ಪ್ಲೇಟ್‍ಗಳು ವ್ಯಾಲಿಡ್ ಆಗಿರುತ್ತೆ.

    ಸಿಎಂ, ಹೆಲ್ತ್ ಮಿನಿಸ್ಟರ್ ಆಯ್ತು. ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಾರಿನ ನಂಬರ್ ಪ್ಲೇಟನ್ನು ಡೂಪ್ಲಿಕೇಟ್ ಮಾಡಿಕೊಟ್ಟಿದ್ದಾರೆ. ಕನಿಷ್ಟ ಪಕ್ಷ ಕಾರು ಮಾಲೀಕರು ಯಾರು. ನಂಬರ್ ಪ್ಲೇಟ್ ಗೆ ಆರ್ಡರ್ ಕೊಡ್ತಿರೋರು ಯಾರು.? ಅವ್ರ ಫೋನ್ ನಂಬರ್ ಗಳನ್ನ ಕಲೆಕ್ಟ್ ಮಾಡ್ಕೊಬೇಕಿತ್ತು. ಆದ್ರೆ ಅದ್ಯಾವುದೂ ಆಗ್ತಿಲ್ಲ. ಹೋಗಿದ್ ಕಡೆಯಲ್ಲ, ಗಾಡಿ ಡಾಕ್ಯೂಮೆಂಟ್ಸ್ ಬೇಕಾ ಅಂತ ಬಾಯ್ಬಿಟ್ಟು ಕೇಳಿದ್ರೂ ನೋ ವರಿ ಅನ್ನೋ ಉತ್ತರನೇ ಸಿಗ್ತಿದೆ.

    ಸಿಟಿ ರವಿ ಕಾರ್ ನಂಬರ್ ಪ್ಲೇಟ್ ನಕಲು..!
    ಸ್ಟಿಂಗ್ ಸ್ಥಳ: ಜೆಸಿ ನಗರ
    ಪ್ರತಿನಿಧಿ: ಗಾಡಿ ಡಾಕ್ಯುಮೆಂಟ್ ಬೇಕಾ.?
    ನಕಲಿ ಡೀಲರ್: ಏನು ಬೇಕಾಗಿಲ್ಲ. ನೀವು ನಂಬರ್ ಕೊಟ್ರೆ, ನಂಬರ್ ಪ್ಲೇಟ್ ಕೊಡ್ತಿವಿ ಅಷ್ಟೆ.. ನಂಬರ್ ಪ್ಲೇಟ್‍ಗೆ ಬೀಡಿಂಗ್ ಬೇಕಾ?
    ಪ್ರತಿನಿಧಿ: ಬೇಡ ಬಿಡಿ ಸದ್ಯಕ್ಕೆ
    ನಕಲಿ ಡೀಲರ್: ಲುಕ್ ಚೆನ್ನಾಗಿ ಬರುತ್ತೆ. ನಂಬರ್ ಪ್ಲೇಟ್ ಬೆಂಡಾಗಲ್ಲ. ಎಲ್ಲರೂ ತಗೋತಾರೆ.
    ಪ್ರತಿನಿಧಿ: ಬಿಲ್ ಒಂದು ಹಾಕಿಕೊಡಿ..!
    ನಕಲಿ ಡೀಲರ್: ಬಿಲ್ ಬರಲ್ಲ ಬಯ್ಯ
    ಪ್ರತಿನಿಧಿ: ಪೇಪರ್‍ನಲ್ಲಾದ್ರೂ ಬರ್ದು ಕೊಡಿ
    ನಕಲಿ ಡೀಲರ್: ಪೇಪರ್ ನಲ್ಲೂ ಬರ್ದು ಕೊಡಲ್ಲ

    ಸಾರಿಗೆ ಇಲಾಖೆಯಿಂದ ನಂಬರ್ ಪ್ಲೇಟ್‍ಗಳನ್ನ ಮಾಡಿಕೊಡಲು ಟೆಂಡರ್ ನೀಡಲಾಗುತ್ತೆ. ಡೀಲರ್ ಶಿಪ್ ತೊಗೊಂಡವರು ಮಾತ್ರ ನಂಬರ್ ಪ್ಲೇಟ್ ಗಳನ್ನ ಮಾಡಿಕೊಡಬೇಕು. ಕಾನೂನುಬಾಹಿರವಾಗಿ ನಂಬರ್ ಪ್ಲೇಟ್ ಗಳನ್ನ ಹಾಕಿಕೊಟ್ರು, ಸಾರಿಗೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇಂತಹ ಸ್ಟೋರ್ ಗಳಿಗೂ ವಾರ್ನ್ ಮಾಡಿಲ್ಲ. ದುಷ್ಟರು ಯಾವ್ಯಾವುದೋ ವಾಹನಗಳಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಳ್ತಾರೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡ್ತಾರೆ. ಕ್ರಿಮಿನಲ್ ಆಕ್ಟಿವಿಟಿವ್ಸ್‍ಗೂ ಬಳಸಿಕೊಳ್ತಿದ್ದಾರೆ. ಸಾರಿಗೆ ಇಲಾಖೆ ಬೇಜವಾಬ್ದಾರಿಯನ್ನ ಬದಿಗಿಟ್ಟು, ಇಂತಹ ವ್ಯವಸ್ಥಿತ ಜಾಲವನ್ನ ಮಟ್ಟಹಾಕಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಪೊಲೀಸರಿಗೇ ಚಳ್ಳೆಹಣ್ಣು – ನಂಬರ್ ಪ್ಲೇಟ್ ತೆಗೆದಿಟ್ಟು, ಬೈಕ್ ವೀಲಿಂಗ್

    ಪೊಲೀಸರಿಗೇ ಚಳ್ಳೆಹಣ್ಣು – ನಂಬರ್ ಪ್ಲೇಟ್ ತೆಗೆದಿಟ್ಟು, ಬೈಕ್ ವೀಲಿಂಗ್

    ಬೆಂಗಳೂರು: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಖತರ್ನಾಕ್ ಟೀಮ್ ಒಂದು ಬೆಂಗಳೂರು ಹೊರವಲಯದಲ್ಲಿ ಪುಲ್ ಆಕ್ಟೀವ್ ಆಗಿದೆ. ಒಂದೇ ಕೈಯಲ್ಲಿ ಭಯಾನಕ ವೀಲಿಂಗ್ ಮಾಡುವುದಲ್ಲದೇ ನಂಬರ್ ಪ್ಲೇಟ್ ಇಲ್ಲದೆ ಬೈಕ್ ರೈಡ್ ಮಾಡುವ ಈ ಪುಂಡರ ಗ್ಯಾಂಗ್ ಜನರಲ್ಲಿ ಆತಂಕ ಮೂಡಿಸಿದೆ.

    ನಂಬರ್ ಪ್ಲೇಟ್ ಇದ್ರೆ ಪೊಲೀಸರಿಗೆ ಮಾಹಿತಿ ಸಿಗುತ್ತದೆ ಎಂದು ನಂಬರ್ ಪ್ಲೇಟ್ ತೆಗೆದಿಟ್ಟು, ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಭಯಾನಕವಾಗಿ ರಾತ್ರಿ ವೇಳೆಯಲ್ಲಿ ಬೈಕ್ ವೀಲಿಂಗ್ ಮಾಡುತ್ತಾರೆ. ಇದನ್ನೂ ಓದಿ: ಖಾಸಗಿ ಬಸ್, ಕಂಟೈನರ್ ಮುಖಾಮುಖಿ- 6ಕ್ಕೂ ಹೆಚ್ಚು ಮಂದಿ ಸಜೀವ ದಹನ

    ನೆಲಮಂಗಲ ತಾಲೂಕಿನ ರಾಷ್ಟ್ರೀಯ ರಸ್ತೆಯಲ್ಲಿ ವೀಲಿಂಗ್ ಮಾಡುವ ಪುಂಡರ ಹಾವಳಿಗೆ ಅಕ್ಕಪಕ್ಕದ ವಾಹನ ಸವಾರರು ಜೀವ ಭಯದಲ್ಲಿ ಓಡಾಡುವಂತಾಗಿದೆ. ಪುಂಡರು ಪೊಲೀಸರ ಭಯವಿಲ್ಲದೆ ಹೆದ್ದಾರಿಯಲ್ಲಿ ಭಯಾನಕ ಬೈಕ್ ವೀಲಿಂಗ್ ಮಾಡುವುದಲ್ಲದೇ ಅದರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಇದನ್ನೂ ಓದಿ: 2 ವರ್ಷದಿಂದ ಬಗೆಹರಿಯದ ಮಂಡ್ಯ ವ್ಯಕ್ತಿಯ ಸಮಸ್ಯೆಗೆ ಎರಡೇ ದಿನದಲ್ಲಿ ಪರಿಹಾರ ಕೊಟ್ಟ ಮೋದಿ

    ಇದೀಗ ಪುಂಡರ ಖತರ್ನಾಕ್ ಕೆಲಸಕ್ಕೆ ಬ್ರೇಕ್ ಹಾಕಬೇಕಾಗಿ ಜನರು ಆಗ್ರಹಿಸಿದ್ದಾರೆ.

  • ವಿಶ್ವದ 3ನೇ ಅತ್ಯಂತ ದುಬಾರಿ ನಂಬರ್ ಪ್ಲೇಟ್ 70 ಕೋಟಿ ರೂ.ಗೆ ಹರಾಜು

    ವಿಶ್ವದ 3ನೇ ಅತ್ಯಂತ ದುಬಾರಿ ನಂಬರ್ ಪ್ಲೇಟ್ 70 ಕೋಟಿ ರೂ.ಗೆ ಹರಾಜು

    ಅಬುಧಾಬಿ: ಪ್ರತಿಯೊಂದು ವಾಹನಗಳಲ್ಲೂ ನಂಬರ್ ಪ್ಲೇಟ್ ಇರುತ್ತೆ ಅಲ್ವಾ? ಕೆಲವರು ತಮ್ಮ ವಾಹನದ ನಂಬರ್ ಫ್ಯಾನ್ಸಿಯಾಗಿರಬೇಕು ಎಂದು ಇಷ್ಟಪಡುತ್ತಾರೆ. ಶ್ರೀಮಂತರು ಫ್ಯಾನ್ಸಿ ಸಂಖ್ಯೆಗಳಿರುವ ನಂಬರ್ ಪ್ಲೇಟ್‌ಗಳನ್ನು ಖರೀದಿಸಿ ಇನ್ನೊಬ್ಬರ ಗಮನ ಸೆಳೆಯುವಂತೆ ಮಾಡುತ್ತಾರೆ. ಇತ್ತೀಚೆಗೆ ದುಬಾರಿ ನಂಬರ್ ಪ್ಲೇಟ್ ಒಂದು ಮಾರಾಟವಾಗಿ ಸುದ್ದಿಯಾಗಿದೆ.

    ಇತ್ತೀಚೆಗೆ ದುಬೈನ ಮೋಸ್ಟ್ ನೋಬೆಲ್ ನಂರ‍್ಸ್ ಚ್ಯಾರಿಟಿ ವತಿಯಿಂದ ವಿಶೇಷ ಫೋನ್ ಸಂಖ್ಯೆ ಹಾಗೂ ವಿಶೇಷ ಕಾರ್ ನಂಬರ್ ಪ್ಲೇಟ್‌ಗಳ ಹರಾಜು ನಡೆಯಿತು. ಈ ಹರಾಜಿನಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 70 ಕೋಟಿ ರೂ.ಗೆ ವಿಶೇಷ ಸಂಖ್ಯೆಯ ನಂಬರ್ ಪ್ಲೇಟ್ ಖರೀದಿ ಮಾಡಿದ್ದಾರೆ. ಇದು ವಿಶ್ವದ ಮೂರನೇ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಎನಿಸಿಕೊಂಡಿತು. ಇದನ್ನೂ ಓದಿ: ಕಿಚ್ಚ ಸುದೀಪ್ ಅವರ ಕೈರುಚಿ ತಿಂದು ಹೊಗಳಿದ ಡಾಲಿ ಧನಂಜಯ್

    ಎಎ8 ಸಂಖ್ಯೆಯ ನಂಬರ್ ಪ್ಲೇಟ್ ಸುಮಾರು 70 ಕೋಟಿ ರೂ.ಗೆ ಹರಾಜಾಗಿದೆ. ಇದು ವಿಶ್ವದಲ್ಲೇ ಮೂರನೇ ಅತೀ ದುಬಾರಿ ನಂಬರ್ ಪ್ಲೇಟ್ ಎನಿಸಿಕೊಂಡಿದೆ. ಈ ಹಿಂದೆ ಎಎ9 ಸಂಖ್ಯೆಯ ನಂಬರ್ ಪ್ಲೇಟ್ ಕಳೆದ ವರ್ಷ ಸುಮಾರು 79 ಕೋಟಿ ರೂ.ಗೆ ಹರಾಜಾಗಿತ್ತು. ಇದನ್ನೂ ಓದಿ: ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

    ಇತ್ತೀಚೆಗೆ ನಡೆದ ಮೋಸ್ಟ್ ನೋಬೆಲ್ ನಂರ‍್ಸ್ ಚ್ಯಾರಿಟಿಯ ಹರಜಿನಲ್ಲಿ ಎಫ್55 ಹಾಗೂ ವಿ66 ನಂಬರ್ ಪ್ಲೇಟ್ 8 ಕೋಟಿ ರೂ.ಗೂ ಅಧಿಕ ಬೆಲೆಗೆ ಮಾರಾಟವಾಗಿದೆ. ವೈ66 ನಂಬರ್ ಪ್ಲೇಟ್ 7.91 ಕೋಟಿ ರೂ.ಗೆ ಮಾರಾಟವಾಗಿದೆ.

  • ಅಪ್ಪ ಕೊಡಿಸಿದ ಸ್ಕೂಟಿಯ ನಂಬರ್‌ ಪ್ಲೇಟಲ್ಲಿತ್ತು SEX – ನಂಬರ್ ಪ್ಲೇಟ್‍ನಿಂದ ಮುಜುಗರಕ್ಕೀಡಾದ ಯುವತಿ!

    ಅಪ್ಪ ಕೊಡಿಸಿದ ಸ್ಕೂಟಿಯ ನಂಬರ್‌ ಪ್ಲೇಟಲ್ಲಿತ್ತು SEX – ನಂಬರ್ ಪ್ಲೇಟ್‍ನಿಂದ ಮುಜುಗರಕ್ಕೀಡಾದ ಯುವತಿ!

    ನವದೆಹಲಿ: ಅಪ್ಪ ತಂದಿರುವ ಸ್ಕೂಟಿ ನೋಡಿ ಖುಷಿಪಟ್ಟಿರುವ ಮಗಳು ನಂಬರ್ ಪ್ಲೇಟ್ ನೋಡಿ ಬೆಚ್ಚಿ ಬಿದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಮಗಳಿಗೆ ಸಹಾಯವಾಗುತ್ತದೆ ಎಂದು ತಂದೆ ಸ್ಕೂಟಿಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಆದರೆ ಈ ಸ್ಕೂಟಿಯ ನಂಬರ್ ಪ್ಲೇಟ್‍ನಿಂದ ಪ್ರತಿದಿನ ಕಿರಿಕಿರಿ ಉಂಟಾಗುತ್ತದೆ ಎಂದು ಯುವತಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕೋವಿಡ್‌ ವಾರಿಯರ್ಸ್‌ಗೆ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ: ಸಿಎಂ

    ದೆಹಲಿಯಲ್ಲಿ ದ್ವಿಚಕ್ರ ವಾಹನಗಳಿಗೆ ‘ಎಸ್’ ಆಂಗ್ಲ ಅಕ್ಷರವನ್ನು ಸೂಚಕವಾಗಿ ನೀಡಲಾಗುತ್ತದೆ. ರಾಜ್ಯದ ಸೂಚಕವಾಗಿ ಡಿಎಲ್ ಅಕ್ಷರದ ಜೊತೆಗೆ ಜಿಲ್ಲೆಯನ್ನು ಪ್ರತಿನಿಧಿಸುವ ಸಂಖ್ಯೆ ನೀಡಲಾಗುತ್ತದೆ. ನಂತರ ವಾಹನ ಸೂಚಕವಾಗಿ ಕಾರಿಗೆ ಸಿ(C) ಬೈಕಿಗೆ ಎಸ್(S) ಎಂದು ನೀಡಲಾಗುತ್ತದೆ. ದೆಹಲಿಯಲ್ಲಿ ಈಗ ಇಎಕ್ಸ್(EX) ಸೀರಿಸ್ ನಡೆಯುತ್ತಿದೆ. ಹೀಗಾಗಿ ಕೆಲವು ದ್ವಿಚಕ್ರ ವಾಹನಗಳಿಗೆ ಎಸ್‍ಇಎಕ್ಸ್(SEX) ಎಂದು ನಂಬರ್ ನೀಡಲಾಗುತ್ತದೆ. ಇದನ್ನೂ ಓದಿ:   ಚೀನಾ ಮೇಲೆ ಕಣ್ಣಿಡಲು ಬಂತು ಇಸ್ರೇಲ್ ಡ್ರೋನ್

    ಹೀಗಾಗಿ ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್‍ಗಳಲ್ಲಿ’ಎಸ್’ ಅಕ್ಷರದ ನಂತರ ‘ಇಎಕ್ಸ್’ ಅಕ್ಷರವಿದೆ. (EX) ಅಂತಹ ಒಂದು ನಂಬರ್ ಪ್ಲೇಟ್ ಪಡೆದಿರುವ ವಾಹಾನ ಸವಾರರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಹಾಗೂ ಡೆಲ್ಟಾ ವೈರಸ್ ನಡುವಿನ ವ್ಯತ್ಯಾಸವೇನು?

    ಸ್ಕೂಟಿ ನಂಬರ್ ಪ್ಲೇಟ್‍ನಿಂದಾಗಿ ಜನರು ಪದೇ ಪದೇ ಗೇಲಿ ಮಾಡಲು ಆರಂಭಿಸಿದ್ದರು. ಇದರಿಂದ ಸ್ಕೂಟಿ ತೆಗೆದುಕೊಂಡು ಮನೆಯಿಂದ ಹೊರಬರುವುದು ಕಷ್ಟವಾಗಿತ್ತು. ನನ್ನ ಪೋಷಕರು ಸ್ಕೂಟಿ ಸಂಖ್ಯೆಯನ್ನು ಬದಲಾಯಿಸಲು ಪ್ರಯತ್ನಿಸಿದರು. ಆದರೆ ವಾಹನಕ್ಕೆ ಒಮ್ಮೆ ನಿಗದಿಪಡಿಸಿದ ಸಂಖ್ಯೆಯಲ್ಲಿ ಬದಲಾವಣೆಯನ್ನು ಮಾಡಲು ಅನುಮತಿ ಇಲ್ಲ ಎಂದು ತಿಳಿಯಿತ್ತು. ಹೀಗಾಗಿ ನಂಬರ್ ಬದಲಾಯಿಸಲು ಸಾಧ್ಯವಾಗಲಿಲ್ಲ ಎಂದು ಯುವತಿಯೊಬ್ಬಳು ಸ್ಕೂಟಿ ನಂಬರ್ ಪ್ಲೇಟ್‍ನಿಂದ ತಾನು ಅನುಭವಿಸಿರುವ ಮುಜುಗರದ ಸಂಗತಿಯನ್ನು ಹೇಳಿಕೊಂಡಿದ್ದಾರೆ.

  • ನೆಲಮಂಗಲ ಪೊಲೀಸರ ಕಾರ್ಯಾಚರಣೆ – ಅನಧಿಕೃತ ವಾಹನ ನೋಂದಣಿ ಫಲಕ ತೆರವು

    ನೆಲಮಂಗಲ ಪೊಲೀಸರ ಕಾರ್ಯಾಚರಣೆ – ಅನಧಿಕೃತ ವಾಹನ ನೋಂದಣಿ ಫಲಕ ತೆರವು

    ಬೆಂಗಳೂರು: ವಾಹನಗಳ ಚಿತ್ರ, ವಿಚಿತ್ರ ನಂಬರ್ ಪ್ಲೇಟ್ ಹಾಗೂ ನಂಬರ್ ಪ್ಲೇಟ್‍ಗಳ ಮೇಲಿನ ಹೆಸರು, ಹುದ್ದೆಗಳಿದ್ದ ಪ್ಲೇಟ್‍ಗಳನ್ನು ನೆಲಮಂಗಲ ಪೊಲೀಸರು ಕಾರ್ಯಾಚರಣೆ ಮಾಡಿ ತೆರವುಗೊಳಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶಿವಣ್ಣ ಹಾಗೂ ಟೌನ್ ಠಾಣೆ ಪಿಎಸ್‍ಐ ಮಂಜುನಾಥ ನೇತೃತ್ವದಲ್ಲಿ ವಾಹನಗಳ ಪರಿಶೀಲನೆ ಮಾಡಲಾಯಿತು. ಈ ವೇಳೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಪಂಚಾಯತ್ ಅಧ್ಯಕ್ಷರ ಕಾರು ಸೇರಿದಂತೆ ಹಲವು ಸಂಘ- ಸಂಸ್ಥೆ, ಅಧ್ಯಕ್ಷ, ರಾಜ್ಯಾಧ್ಯಕ್ಷ, ದೇವರ ಹೆಸರುಗಳಿದ್ದ ನಾಮಾಕಿಂತ ನಂಬರ್ ಪ್ಲೇಟ್‍ಗಳನ್ನು ತೆರವು ಮಾಡಿ ಸ್ಥಳದಲ್ಲಿಯೇ ಫೈನ್ ಹಾಕಿ ಮತ್ತೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದರು.

    ಹೈಕೋರ್ಟ್ ಕಳೆದ ತಿಂಗಳು ವಿಚಿತ್ರ ನಂಬರ್ ಪ್ಲೇಟ್‍ಗಳ ತೆರವಿಗೆ ಆದೇಶ ಮಾಡಿತ್ತು. ಇಂದು ಕಾರ್ಯಚರಣೆ ನಡೆಸಿದ ಪೊಲೀಸರು ಮುಲಾಜಿಲ್ಲದೆ ಎಲ್ಲಾ ವಾಹನಗಳನ್ನು ಪರಿಶೀಲಿಸಿ ಸಾರ್ವಜನಿಕರು ಹಾಗೂ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಮೂಲಕ ಅರಿವು ಮೂಡಿಸಿದರು. ಎಲ್ಲರಿಗೂ ಕಾನೂನು ಒಂದೇ ಎಲ್ಲರೂ ಕಾನೂನಿನ ನಿಯಮಗಳನ್ನು ಪಾಲಿಸಬೇಕು. ತಮ್ಮ ವಾಹನದ ನಂಬರ್ ಪ್ಲೇಟ್ ತೆರವು ಮಾಡದಿದ್ದಲ್ಲಿ ಕೂಡಲೇ ತಾವೇ ತೆರವು ಮಾಡುವ ಮೂಲಕ ಕಾನೂನು ಪಾಲಿಸಿ ಎಂದು ಪೊಲೀಸರು ಜಾಗೃತಿ ಮೂಡಿಸುವ ಮೂಲಕ ದಂಡ ವಿಧಿಸಿ ಎಚ್ಚರಿಕೆಯನ್ನ ನೀಡಿದ್ದಾರೆ.

  • ನಂಬರ್ ಪ್ಲೇಟ್ ಇಲ್ಲದ ಬೈಕಿನಲ್ಲಿ ಬರ್ತಾರೆ- ಚಾಕು ತೋರಿಸಿ ಚಿನ್ನಾಭರಣ ದರೋಡೆ ಮಾಡ್ತಾರೆ

    ನಂಬರ್ ಪ್ಲೇಟ್ ಇಲ್ಲದ ಬೈಕಿನಲ್ಲಿ ಬರ್ತಾರೆ- ಚಾಕು ತೋರಿಸಿ ಚಿನ್ನಾಭರಣ ದರೋಡೆ ಮಾಡ್ತಾರೆ

    ಬೆಂಗಳೂರು: ಸಿಲಿಕಾನ್ ಸಿಟಿ ಹೊರವಲಯದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ನಗರದ ಹೊರವಲಯದ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯನ್ನು ಬೆದರಿಸಿ ಚಿನ್ನಾಭರಣ, ಮೊಬೈಲ್, ಹಣ ಸೇರಿ ಒಂದು ಲಕ್ಷ ಬೆಲೆಬಾಳುವ ವಸ್ತುಗಳ ಕಸಿದು ಎಸ್ಕೇಪ್ ಆಗಿದ್ದಾರೆ.

    ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಬರೋ ಖದೀಮರು, ಸಂಜೆ ವೇಳೆ ಒಂಟಿಯಾಗಿ ಓಡಾಡೋರನ್ನು ಟಾರ್ಗೆಟ್ ಮಾಡಿ ಅಡ್ಡಗಟ್ಟಿ ಚಿನ್ನಾಭರಣ ದೋಚುತ್ತಾರೆ. ಕೃತ್ಯದ ವೇಳೆ ಏನಾದರೂ ವಿರೋಧ ವ್ಯಕ್ತಪಡಿಸಿದರೆ ಚಾಕುವಿಂದ ಹಲ್ಲೆ ಮಾಡಿ ಚಿನ್ನಾಭರಣ ಕಸಿದು ಎಸ್ಕೇಪ್ ಆಗುತ್ತಾರೆ. ಸರಗಳ್ಳರನ್ನು ತಡೆಯಲು ಹೋದವರಿಗೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗುತ್ತಾರೆ ಎಂಬ ಭಯದಿಂದ ಯಾರು ಕೂಡ ಸರಗಳ್ಳರನ್ನು ಹಿಡಿಯುವ ಪ್ರಯತ್ನವನ್ನು ಮಾಡುತ್ತಿಲ್ಲ.

    ಇಲ್ಲಿನ ಕಾಡ ಅಗ್ರಹಾರದ ರಸ್ತೆಯಲ್ಲಿ ಕಳೆದ ಒಂದು ವಾರದಲ್ಲಿ ನಾಲ್ಕು ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಒಂಟಿಯಾಗಿ ಓಡಾಡೋಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಸ್ಥಳೀಯ ಸಿಸಿಟಿವಿ ಅಧಾರದ ಮೇಲೆ ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

  • ಪಂಜಾಬ್ ನೋಂದಣಿ ಕಾರಿಗೆ ರಾಜ್ಯದ ನಂಬರ್ ಪ್ಲೇಟ್ ಹಾಕಿ ಆರ್‌ಟಿಓ  ಬಲೆಗೆ ಬಿದ್ದ

    ಪಂಜಾಬ್ ನೋಂದಣಿ ಕಾರಿಗೆ ರಾಜ್ಯದ ನಂಬರ್ ಪ್ಲೇಟ್ ಹಾಕಿ ಆರ್‌ಟಿಓ ಬಲೆಗೆ ಬಿದ್ದ

    ಬೆಂಗಳೂರು: ರೆನಾಲ್ಟ್ ಡಸ್ಟರ್ ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ತೆರಿಗೆ ವಂಚನೆ ಮಾಡುತ್ತಿದ್ದ ಆಸಾಮಿ ಯಶವಂತಪುರ ಆರ್.ಟಿ.ಓ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

    ಅನ್ನಪೂರ್ಣೇಶ್ವರಿ ನಗರದ ಡಿ. ಸತೀಶ್ ಕುಮಾರ್ ಎಂಬುವವರಿಗೆ ಸೇರಿದ ಕೆಎ-01 ಎಫ್‍ಎನ್-6223 ಸಂಖ್ಯೆಯ ವಾಹನವನ್ನು ಜಪ್ತಿ ಮಾಡಲಾಗಿದೆ. ಈ ವಾಹನವನ್ನು ಪಂಜಾಬ್‍ನಿಂದ ಬೆಂಗಳೂರಿಗೆ ತರಲಾಗಿದೆ. ತೆರಿಗೆ ಹಣ ಜಾಸ್ತಿ ಇರುವುದರಿಂದ ಸ್ನೇಹಿತ ನೀಡಿದ ಐಡಿಯಾ ಬಳಸಿ, ಪಿಎ ಇದ್ದ ನಂಬರ್ ಪ್ಲೇಟ್ ಅನ್ನು ಕೆಎ ಎಂದು ಚೆಂಚ್ ಮಾಡಿರುವುದಾಗಿ ಆರ್.ಟಿ.ಓ ಅಧಿಕಾರಿಗಳ ಮುಂದೆ ಕಾರಿನ ಮಾಲೀಕ ಸತ್ಯವನ್ನ ಬಿಚ್ಚಿಟ್ಟಿದ್ದಾನೆ.

    ನಂಬರ್ ಪ್ಲೇಟ್ ನಲ್ಲಿ ಪಿಬಿ-01, ಎಫ್‍ಎನ್-6223 ಇದ್ದ ಜಾಗದಲ್ಲಿ ಪಿಬಿ ತೆಗೆದು ಕೆಎ ಎಂದು ಮಾಡಿ ಕೆಎ-01, ಎಫ್‍ಎನ್-6223 ಎಂದು ಬದಲಿಸಿ ನಕಲಿ ನಂಬರ್ ಪ್ಲೇಟ್ ಮಾಡಿಸಿದ್ದಾನೆ ಕಾರಿನ ಮಾಲೀಕ ಸತೀಶ್. ಅನ್ನಪೂರ್ಣೇಶ್ವರಿ ನಗರದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಯಶವಂತಪುರ ಆರ್.ಟಿ.ಓ ಹಿರಿಯ ಇನ್ಸ್ ಪೆಕ್ಟರ್ ರಾಜಣ್ಣ ಅವರ ಕಣ್ಣಿಗೆ ಈ ನಕಲಿ ನಂಬರ್ ಪ್ಲೇಟ್ ಕಾರು ಬಿದ್ದಿದೆ.

    ಬೆಂಗಳೂರು ಆರ್.ಟಿ.ಓ ವ್ಯಾಪ್ತಿಯಲ್ಲಿ ಎಫ್‍ಎನ್ ಸಿರೀಸ್ ನಂಬರ್ ಇಲ್ಲ ಎಂದು ಯೋಚಿಸಿದ ರಾಜಣ್ಣ, ಕೂಡಲೇ ಕಾರನ್ನ ತಡೆದು ಪರಿಶೀಲನೆ ನಡೆಸಿದಾಗ ನಕಲಿ ನಂಬರ್ ಪ್ಲೇಟ್ ಬಳಸಿರುವುದು ಬೆಳಕಿಗೆ ಬಂದಿದೆ. ಕಾರ್ ಮಾಲೀಕ ಅಯ್ಯಪ್ಪ ಮಾಲೆ ಧರಿಸಿದ್ದರಿಂದ ಶಬರಿ ಮಲೆಗೆ ಹೋಗಿ ಬಂದ ಬಳಿಕ ಕಾರಿನ ದಾಖಲೆಗಳನ್ನು ಆರ್.ಟಿ.ಓ ಅಧಿಕಾರಿಗಳಿಗೆ ನೀಡುವುದಾಗಿ ತಿಳಿಸಿದ್ದಾನೆ.