Tag: ನಂಬರ್

  • ಲಂಚಕೊಟ್ಟು ‘ನಂಬರ್ 1’ ನಟಿಯಾದರಂತೆ ನಟಿ ಸಮಂತಾ

    ಲಂಚಕೊಟ್ಟು ‘ನಂಬರ್ 1’ ನಟಿಯಾದರಂತೆ ನಟಿ ಸಮಂತಾ

    ದಕ್ಷಿಣದ ಹೆಸರಾಂತ ನಟಿ ಸಮಂತಾ ಇತ್ತೀಚಿನ ದಿನಗಳಲ್ಲಿ ಅನೇಕ ಶಾಕಿಂಗ್ ಸುದ್ದಿಗಳನ್ನು ಅಭಿಮಾನಿಗಳಿಗೆ ಕೊಡುತ್ತಿದ್ದಾರೆ. ಅದರಲ್ಲೂ ಕಾಫಿ ವಿತ್ ಕರಣ್ ಶೋನಲ್ಲಿ ಅವರು ಸಾಕಷ್ಟು ಖಾಸಗಿ ಸಂಗತಿಗಳನ್ನು ಹಂಚಿಕೊಂಡಿದ್ದು, ಬಹುತೇಕ ವಿಷಯಗಳು ವಿವಾದಕ್ಕೆ ಕಾರಣವಾಗಿವೆ. ಅದರ‍ಲ್ಲೂ ತಮ್ಮ ಡಿವೋರ್ಸ್ ಕುರಿತು ಈ ನಟಿ ಮುಚ್ಚುಮರೆಯಿಲ್ಲದೇ ಎಲ್ಲವನ್ನೂ ಹಂಚಿಕೊಂಡು ಅಚ್ಚರಿಗೆ ಕಾರಣವಾಗಿದ್ದಾರೆ.

    ಮೊನ್ನೆ ಮೊನ್ನೆಯಷ್ಟೇ ಡಿವೋರ್ಸ್ ಕುರಿತಾಗಿ ಹಲವು ಅಚ್ಚರಿಯ ವಿಷಯಗಳನ್ನು ಶೋನಲ್ಲಿ ಹಂಚಿಕೊಂಡಿದ್ದ ಸಮಂತಾ, ಇದೀಗ ನಂಬರ್ 1 ತಾರೆಯಾಗಲು ಖಾಸಗಿ ಕಂಪೆನಿಯೊಂದಕ್ಕೆ ಲಂಚ ಕೊಟ್ಟಿರುವ ವಿಷಯವನ್ನು ಬಾಯ್ಬಿಟ್ಟಿದ್ದಾರೆ. ನಾನು ನಂಬರ್ 1 ಆಗಲು ಅವರಿಗೆ ದುಡ್ಡು ಕೊಡಬೇಕಾಯಿತು. ದುಡ್ಡು ಕೊಟ್ಟು ನಂಬರ್ 1 ತಾರೆಯಾದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.  ಇದನ್ನೂ ಓದಿ:ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್

    ಸಮಂತಾ ಈ ಕುರಿತು ಮಾತನಾಡುತ್ತಿದ್ದಂತೆಯೇ ನಂಬರ್ 1 ತಾರೆಯರ ನಿಜ ಬಣ್ಣ ಒಂದೊಂದೇ ಬಯಲಾಗುತ್ತಿವೆ. ನಂಬರ್ ಸ್ಥಾನಕ್ಕೆ ಲಂಚ ಬೇರೆ ಕೊಡಬೇಕು ಎನ್ನುವ ಚರ್ಚೆ ಕೂಡ ಸಿನಿಮಾ ರಂಗದಲ್ಲಿ ಶುರುವಾಗಿದೆ. ಅಲ್ಲದೇ, ಸಮಂತಾ ಪ್ರಾಮಾಣಿಕವಾಗಿ ಈ ಕುರಿತು ಒಪ್ಪಿಕೊಂಡಿದ್ದಕ್ಕೆ ಮೆಚ್ಚುಗೆಯನ್ನೂ ಸೂಚಿಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸಂಚಾರ ಉಲ್ಲಂಘನೆ, ರತನ್‌ ಟಾಟಾಗೆ ಬಂತು ಚಲನ್‌ – ತನಿಖೆಗೆ ಇಳಿದಾಗ ಸ್ಫೋಟಕ ಸತ್ಯ ಬಯಲು

    ಸಂಚಾರ ಉಲ್ಲಂಘನೆ, ರತನ್‌ ಟಾಟಾಗೆ ಬಂತು ಚಲನ್‌ – ತನಿಖೆಗೆ ಇಳಿದಾಗ ಸ್ಫೋಟಕ ಸತ್ಯ ಬಯಲು

    – ಮಹಿಳೆಯಿಂದ ಟ್ರಾಫಿಕ್ ರೂಲ್ಸ್ ಬ್ರೇಕ್, ದಂಡದ ಚಲನ್ ಟಾಟಾಗೆ ರವಾನೆ

    ಮುಂಬೈ: ರತನ್ ಟಾಟಾ ಕಾರ್ ನಂಬರ್ ನಕಲಿ ಮಾಡಿಸಿ ಮಹಿಳೆಯೊಬ್ಬಳು ತನ್ನ ವಾಹನಕ್ಕೆ ಹಾಕಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

    ಮಹಾರಾಷ್ಟ್ರದ ಮುಂಬೈನಲ್ಲಿ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ಕಾರ್ ರಿಜಿಸ್ಟ್ರೇಶನ್ ನಂಬರ್ ನ್ನೇ ನಕಲಿ ಮಾಡಿದ್ದಾಳೆ. ಅದೂ ಸಹ ಟಾಟಾ ಕಂಪನಿ ಮಾಲೀಕ ರತನ್ ಟಾಟಾ ಅವರ ಕಾರ್ ನಂಬರ್ ನ್ನು ನಕಲಿ ಮಾಡಿದ್ದಾಳೆ. ಸಂಖ್ಯಾಶಾಸ್ತ್ರದ ಕಾರಣದಿಂದ ನಂಬರ್ ಬದಲಿಸಿರುವುದಾಗಿ ಹೇಳಿದ್ದಾಳೆ. ನಕಲಿ ನಂಬರ್ ಪ್ಲೇಟ್ ಹಾಕಿದ್ದ ಬಿಎಂಡಬ್ಲ್ಯೂ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.

    ಇನ್ನೂ ಆಘಾತಕಾರಿ ವಿಷಯವೆಂದರೆ ಮಹಿಳೆ ತನ್ನ ಐಶಾರಾಮಿ ಬಿಎಂಡಬ್ಲ್ಯೂ ಕಾರ್ ಮೂಲಕ ಹಲವು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಇದರ ಚಲನ್ ರತನ್ ಟಾಟಾ ಅವರಿಗೆ ಹೋಗಿವೆ. ಈ ಕುರಿತು ಪೊಲೀಸರು ತನಿಖೆ ನಡೆಸಿದ್ದು, ಈ ವೇಳೆ ನಕಲಿ ನಂಬರ್ ಕುರಿತು ಬೆಳಕಿಗೆ ಬಂದಿದೆ.

    ಮಾತುಂಗಾ ಪೊಲೀಸರು ಕಾರ್ ಒಡತಿ ಮಹಿಳೆಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 420 ಹಾಗೂ 465 ಮೋಸ ಹಾಗೂ ವಂಚನೆ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಬಳಿಕ ಪೊಲೀಸರು ಈ ಕಾರು ಎಂ.ಎಸ್ ನರೇಂದ್ರ ಫಾರ್‍ವಾಡ್ರ್ಸ್ ಪ್ರೈ.ಲಿ.ಗೆ ಸೇರಿದೆ ಎಂದು ಪತ್ತೆ ಹಚ್ಚಿದ್ದಾರೆ. ಬಳಿಕ ಮಹಿಳೆಯನ್ನು ವಿಚಾರಣೆ ನಡೆಸಲಾಗಿದ್ದು, ಸಂಖ್ಯಾಶಾಸ್ತ್ರದ ಕಾರಣದಿಂದಾಗಿ ಈ ನಂಬರ್ ಪಡೆದಿರುವುದಾಗಿ ಹೇಳಿದ್ದಾಳೆ. ಅಲ್ಲದೆ ಇದು ರತನ್ ಟಾಟಾ ಅವರ ಕಾರ್ ನಂಬರ್ ಎಂದು ನನಗೆ ತಿಳಿದಿರಲಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ.

  • ಅಭಿಮಾನಿಗಳಿಗೆ ಕಾಜೋಲ್ ವಾಟ್ಸಪ್ ನಂಬರ್ ಕೊಟ್ಟ ಅಜಯ್ ದೇವಗನ್!

    ಅಭಿಮಾನಿಗಳಿಗೆ ಕಾಜೋಲ್ ವಾಟ್ಸಪ್ ನಂಬರ್ ಕೊಟ್ಟ ಅಜಯ್ ದೇವಗನ್!

    ನವದೆಹಲಿ: ಬಾಲಿವುಡ್ ನಟ ಅಜಯ್ ದೇವಗನ್ ಅಭಿಮಾನಿಗಳ ಕಾಳೆಯಲು ಹೋಗಿ ಪತ್ನಿ ಕಾಜೋಲ್ ಅವರ ವಾಟ್ಸಪ್ ನಂಬರ್ ಅನ್ನು ಟ್ವಿಟ್ಟರ್‌ನಲ್ಲಿ ಹರಿಬಿಟ್ಟಿದ್ದಾರೆ.

    ಅಭಿಮಾನಿಗಳ ಜೊತೆಗಿನ ಚರ್ಚೆಯ ವೇಳೆ ಅಜಯ್, ಕಾಜೋಲ್ ಈಗ ದೇಶದಲ್ಲಿ ಇಲ್ಲ. ಅವರನ್ನು ಸಂಪರ್ಕಿಸಲು ಈ ನಂಬರ್ ಬಳಸಿ ಎಂದು ವಾಟ್ಸಪ್ ನಂಬರ್ ಟೈಪ್ ಮಾಡಿ ಎಂದು  ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದರು.

    ಅಭಿಮಾನಿಗಳು ಕಾಜೋಲ್ ನಂಬರ್ ಸಿಕ್ಕಿದ್ದೇ ತಡ ಟ್ವೀಟ್ ಮಾಡಿದ್ದನ್ನು ಸ್ಕ್ರೀನ್‍ಶಾರ್ಟ್ ಮಾಡಿಕೊಂಡು ಕಾಜೋಲ್ ಅವರಿಗೆ ನಿಮ್ಮ ಪತಿ ನಂಬರ್ ನೀಡಿದ್ದಾರೆ ಎಂದು ಫೋಟೋವನ್ನು ಸೆಂಡ್ ಮಾಡಿದ್ದಾರೆ.

    ಸಿನಿಮಾ ಸೆಟ್‍ನಲ್ಲಿ ತಮಾಷೆಗಳು ಮಾಡಿ ಸಾಕಾಗಿತ್ತು. ಹೀಗಾಗಿ ಅಭಿಮಾನಿಗಳ ಮೂಲಕ ಕಾಲೆಳೆಯಲು ಪತ್ನಿಯ ನಂಬರ್ ಹಾಕಿದ್ದೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕಾಜೋಲ್ ಪ್ರತಿಕ್ರಿಯಿಸಿ, ನಿಮ್ಮ ಚೇಷ್ಟೆಗಳು ಸಿನಿಮಾ ಸೆಟ್‍ನಿಂದ ಹೊರಗೆ ಬಂದಂತೆ ಕಾಣುತ್ತಿದೆ. ಈ ರೀತಿಯ ಚೇಷ್ಟೆಗಳಿಗೆ ಮನೆಯಲ್ಲಿ ಪ್ರವೇಶವಿಲ್ಲ ಎಂದು ಬರೆದು ಕೊನೆಯಲ್ಲಿ ಕೋಪದ ಎಮೋಜಿಯನ್ನು ಹಾಕಿದ್ದಾರೆ.

    ಸದ್ಯ ಅಜಯ್ ದೇವಗಾನ್ ಅವರು ‘ತಾನಾಜೀ’ ಎಂಬ ಹೊಸ ಸಿನಿಮಾ ಚಿತ್ರಿಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಕಾಜೋಲ್ ಅವರು ಕೂಡಾ ಬಹಳ ದಿನಗಳ ನಂತರ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಷ್ಟವಾದ ವಾಹನ ನೋಂದಣಿ ಸಂಖ್ಯೆಗೆ ಇನ್ಮುಂದೆ ತಿಂಗಳುಗಟ್ಟಲೆ ಕಾಯಬೇಕಿಲ್ಲ- ಬರ್ತಿದೆ `ವಾಹನ್ 4′ ವೆಬ್‍ಸೈಟ್

    ಇಷ್ಟವಾದ ವಾಹನ ನೋಂದಣಿ ಸಂಖ್ಯೆಗೆ ಇನ್ಮುಂದೆ ತಿಂಗಳುಗಟ್ಟಲೆ ಕಾಯಬೇಕಿಲ್ಲ- ಬರ್ತಿದೆ `ವಾಹನ್ 4′ ವೆಬ್‍ಸೈಟ್

    ಬೆಂಗಳೂರು: ರಾಜ್ಯದ ಜನತೆಗೆ ಸಾರಿಗೆ ಇಲಾಖೆ ಸಂತಸದ ಸಂಗತಿಯೊಂದನ್ನು ಹೊತ್ತು ತಂದಿದೆ. ಇಷ್ಟು ದಿನ ವಾಹನಗಳಿಗೆ ಇಷ್ಟವಾದ ನೋಂದಣಿ ಸಂಖ್ಯೆ ಅಥವಾ ತಮ್ಮ ಜನ್ಮದಿನಾಂಕದ ನಂಬರ್ ಪಡೆಯಲು ಜನರು ತಿಂಗಳಿನಿಂದ ಹಿಡಿದು ವರ್ಷಾನುಗಟ್ಟಲೆ ಕಾಯುತ್ತಿದ್ದರು. ಈಗ ತಕ್ಷಣ ಪಡೆಯವಂತಹ ಹೊಸ ಸಾಫ್ಟ್ ವೇರ್ ವೊಂದನ್ನ ಸಾರಿಗೆ ಇಲಾಖೆ ಲಾಂಚ್ ಮಾಡುತ್ತಿದೆ.

    ಇಷ್ಟು ದಿನ ತಮಗೆ ಇಷ್ಟವಾದ ನಂಬರ್ ಪಡೆಯಲು ಜನರು ವರ್ಷಾನುಗಟ್ಟಲೆ ಕಾದು, ಆ ನಂಬರಿನ ಸೀರೀಸ್ ಬರುವ ತನಕ ವಾಹನಗಳನ್ನೇ ಖರೀದಿ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಇಂತಹ ನಂಬರ್ ಪಡೆಯಲು ಹಣವನ್ನು ಸಹ ನೀಡಬೇಕಿತ್ತು. ಆದರೆ ಇದಕ್ಕೆಲ್ಲ ಕಡಿವಾಣ ಹಾಕೋದಕ್ಕೆ ಅಂತಾನೆ ಸಾರಿಗೆ ಇಲಾಖೆ ಇನ್ನು ಕೆಲವೇ ದಿನಗಳಲ್ಲಿ ‘ವಾಹನ್ 4’ ಎಂಬ ವಿನೂತನ ವೆಬ್‍ಸೈಟ್ ಹೊರತರುತ್ತಿದೆ. ಇದರಲ್ಲಿ ಸಾರಿಗೆ ಇಲಾಖೆಯ ಜೊತೆ ವ್ಯವಹಾರ ಮಾಡುವವರು ಸಂಪೂರ್ಣವಾಗಿ ಆನ್‍ಲೈನ್ ಮುಖಾಂತರವೇ ವ್ಯವಹಾರ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ ತಮಗೆ ಇಷ್ಟವಾದ ನಂಬರನ್ನು ಸಹ ವೆಬ್‍ಸೈಟ್ ಮೂಲಕ ಲಾಕ್ ಮಾಡಿಸಿ 24 ಗಂಟೆಗಳ ಒಳಗೆ ಖರೀದಿ ಮಾಡಬಹುದು.

    ವೆಬ್‍ಸೈಟ್‍ನ ಪ್ರಯೋಜನ

    * ಎಲ್ಲಾ ವಾಹನಗಳ ನೋಂದಣಿ ಸೇವೆಗಳಿಗೆ ಆನ್‍ಲೈನ್ ಅರ್ಜಿ ಸಲ್ಲಿಕೆ.
    * ಆನ್‍ಲೈನ್‍ನಲ್ಲೇ ಶುಲ್ಕ ಪಾವತಿ.
    * ಅರ್ಜಿದಾರರಿಗೆ ಎಸ್‍ಎಂಎಸ್ ಮೂಲಕ ಮಾಹಿತಿ.
    * ರ‍್ಯಾಂಡಮ್‌ ಪದ್ಧತಿಯಲ್ಲಿ ವಾಹನ ನೊಂದಣಿ ಸಂಖ್ಯೆ ಹಂಚಿಕೆ.
    * ವಾಹನದ ಎನ್‍ಓಸಿ ಶೀಘ್ರವಾಗಿ ನೀಡುವಿಕೆ.
    * ವಾಹನಗಳ ನೊಂದಣಿಗಳ ಬಗ್ಗೆ ಎಸ್‍ಎಂಎಸ್ ಮೂಲಕ ಮಾಹಿತಿ ಪಡಯಬುದು ಎಂದು ಸಾರಿಗೆ ಇಲಾಖೆಯ ಕಮಿಷನರ್ ದಯಾನಂದ್ ತಿಳಿಸಿದ್ದಾರೆ.

  • ಜನವರಿ 1 ರಿಂದ OTP ಮೂಲಕವೇ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡಿ

    ಜನವರಿ 1 ರಿಂದ OTP ಮೂಲಕವೇ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡಿ

    ನವದೆಹಲಿ: ಮೊಬೈಲ್ ನಂಬರ್ ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದೆ ಇರುವವರು ಜನವರಿ 1 ನಂತರ ತಮ್ಮ ಮೊಬೈಲ್ ನಲ್ಲಿ ಒನ್ ಟೈಮ್ ಪಾಸವಾರ್ಡ್ (OTP) ವಿಧಾನ ಮೂಲಕ ಆಧಾರ್ ಲಿಂಕ್ ಮಾಡುವ ಹೊಸ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

    ವಾಯ್ಸ್-ಗೈಡೆನ್ಸ್ ಮೂಲಕ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದ್ದು, ಈ ವ್ಯವಸ್ಥೆಯನ್ನು ಒಂದು ತಿಂಗಳ ಹಿಂದೆಯೇ ಗ್ರಾಹಕರ ಬಳಕೆಗೆ ನೀಡಬೇಕಾಗಿತ್ತು. ಆದರೆ ಟೆಲಿಕಾಂ ಕಂಪನಿಗಳು ಹಾಗೂ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (UIDAI) ನಡುವಿನ ಗೊಂದಲಗಳ ಹಿನ್ನೆಲೆಯಲ್ಲಿ ತಡವಾಗಿ ಜಾರಿಗೆ ಬರುತ್ತಿದೆ. ಇನ್ನು ದೇಶದಲ್ಲಿ ಸುಮಾರು 50 ಕೋಟಿ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ನಂಬರ್ ಲಿಂಕ್ ಮಾಡಬೇಕಿದೆ.

    ಸರ್ಕಾರವು ಸಾರ್ವಜನಿಕರ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿತ್ತು, ಆದರೆ ಎಲ್ಲರಿಗೂ ಟೆಲಿಕಾಂ ಸಂಸ್ಥೆಗಳ ಕಚೇರಿಗೆ ಆಧಾರ್ ಲಿಂಕ್ ಮಾಡುವುದು ಕಷ್ಟ ಸಾಧ್ಯ ಎಂದು ಹಲವರು ಸುಪ್ರೀಂ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಇದು ಬೃಹತ್ ಪ್ರಕ್ರಿಯೆಯಾಗಿದ್ದು, ಟೆಲಿಕಾಂ ಸಂಸ್ಥೆಗಳ ಕಚೇರಿಗೆ ತೆರಳಿ ಆಧಾರ್ ಲಿಂಕ್ ಮಾಡುವುದು ಕಷ್ಟ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.

    ಮೊಬೈಲ್ ಗ್ರಾಹಕರಿಗೆ ಫೆಬ್ರವರಿ ಮೊದಲ ವಾರದ ವರೆಗೂ ಆಧಾರ್ ಲಿಂಕ್ ಮಾಡುವ ಅವಕಾಶ ನೀಡಲಾಗಿದೆ. ನಂತರದಲ್ಲಿ ಆಧಾರ್ ಲಿಂಕ್ ಹೊಂದಿರದ ಮೊಬೈಲ್ ಸಂಖ್ಯೆಗಳನ್ನು ರದ್ದು ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

    OTP ವಿಧಾನ ಬಳಕೆ ಹೇಗೆ?
    ಮೊಬೈಲ್ ಬಳಕೆದಾರರು ತಮ್ಮ ಮೊಬೈಲ್ ನಿಂದ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ವ್ಯವಸ್ಥೆಗೆ ಕರೆ ಮಾಡಿ, ಅಲ್ಲಿನ ಸೂಚನೆಗಳನ್ನು ಪೂರ್ಣಗೊಳಿಸಿ ಆಧಾರ್ ಲಿಂಕ್ ಮಾಡಬಹುದು. ವಾಯ್ಸ್ ಕರೆಯ ನಂತರ ಮೊಬೈಲ್ ಸಂಖ್ಯೆಗೆ OTP ಸಂಖ್ಯೆ ಕಳುಹಿಸಿ ಕೊಡಲಾಗುತ್ತದೆ. ಈ ಸಂಖ್ಯೆಯನ್ನು ದಾಖಲಿಸಿದರೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಸೇವೆಯು ಇಂಗ್ಲಿಷ್, ಹಿಂದಿ ಹಾಗೂ ಕೆಲವು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರಲಿದೆ.