Tag: ನಂದ ಕಿಶೋರ್

  • ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿ ಕಿಡ್ನ್ಯಾಪ್ – ನಿರ್ದೇಶಕ ನಂದಕಿಶೋರ್‌ಗೆ ಹಣ ಕೊಡಿಸಿದ್ದ ರೌಡಿಶೀಟರ್‌

    ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿ ಕಿಡ್ನ್ಯಾಪ್ – ನಿರ್ದೇಶಕ ನಂದಕಿಶೋರ್‌ಗೆ ಹಣ ಕೊಡಿಸಿದ್ದ ರೌಡಿಶೀಟರ್‌

    ಬೆಂಗಳೂರು: ನಿದೇರ್ಶಕ ನಂದಕಿಶೋರ್‌ಗೆ (Nanda Kishore) ಕೊಟ್ಟಿದ್ದ ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿಯೊಬ್ಬನನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ನಡೆದಿದೆ.

    ಮನೋಜ್ (28) ಕಿಡ್ನ್ಯಾಪ್ ಆದ ಉದ್ಯಮಿ. ಈತನನ್ನು ಕಿಡ್ನ್ಯಾಪ್ ಮಾಡಿ ರೌಡಿಶೀಟರ್‌ಗಳು ಲಕ್ಷಗಟ್ಟಲೆ ಹಣ ಕಿತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಭೋವಿ ನಿಗಮದ ಅಕ್ರಮ; ಕಾಂಗ್ರೆಸ್ ಸರ್ಕಾರದ 60% ಕಮಿಷನ್‌ಗೆ ಸಾಕ್ಷಿ – ಜೆಡಿಎಸ್ ಕಿಡಿ

    ಉದ್ಯಮಿಗೆ ರೌಡಿಶೀಟರ್ ರಾಜೇಶ್ @ ಅಪ್ಪಿ ಪರಿಚಯವಿದ್ದ. ಒಂದು ವರ್ಷದ ಹಿಂದೆ ನಿರ್ದೇಶಕ ನಂದಕಿಶೋರ್‌ಗೆ ರೌಡಿ ರಾಜೇಶ್ ಸಾಲ ಕೊಡಿಸಿದ್ದ. ಮನೋಜ್‌ನಿಂದ ನಂದಕಿಶೋರ್‌ಗೆ 1.20 ಲಕ್ಷ ಸಾಲ ಕೊಡಿಸಿದ್ದ. ನಿರ್ದೇಶಕನಿಂದ ಅಸಲು ಮತ್ತು ಬಡ್ಡಿ ಬರದೇ ಮನೋಜ್ ನೊಂದಿದ್ದ.

    ಹಣ ಕೊಡಿಸಿದ್ದು ನೀನೆ, ಸಾಲ ವಾಪಸ್ ಕೊಡಿಸು ಅಂತಾ ರೌಡಿ ರಾಜೇಶನ ಬೆನ್ನು ಬಿದ್ದಿದ್ದ. ಗೌರಿ ಹಬ್ಬದ ದಿನ ನಂದಕಿಶೋರ್ ಮನೆ ಬಳಿ ಬಾ ಹಣ ಕೊಡಿಸ್ತೀನಿ ಅಂತಾ ಮನೋಜ್‌ನ ರೌಡಿಶೀಟರ್ ಕರೆಸಿದ್ದ. ಹಣ ಕೊಡಿಸೋದಾಗಿ ಕರೆಸಿ ಬಸವೇಶ್ವರನಗರದ ನಂದಕಿಶೋರ್ ಹಳೆಯ ಅಪಾರ್ಟ್ಮೆಂಟ್ ಬಳಿಯಿಂದ ಕಿಡ್ನ್ಯಾಪ್ ಮಾಡಿಸಿದ್ದಾನೆ. ಇದನ್ನೂ ಓದಿ: ಅಮೆರಿಕದಲ್ಲಿ ಭೀಕರ ಅಪಘಾತ – ಕೋಲಾರ ಮೂಲದ ಬಾಡಿ ಬಿಲ್ಡರ್ ದುರ್ಮರಣ

    ರೌಡಿಗಳಾದ ರಾಜೇಶ್, ಬೇಕರಿ ರಘು, ಅಣ್ಣ ಸೀನ @ ಶ್ರೀನಿವಾಸ್, ಲೋಕಿ, ಸೋಮ, ರಾಜೇಶ್ ಮತ್ತು ನವೀನ್ ಸೇರಿಕೊಂಡು ಕಿಡ್ನ್ಯಾಪ್ ಮಾಡಿದ್ದರು. ಅಪಹರಣ ಮಾಡಿ 3 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಅಲ್ಲದೇ, 10 ಲಕ್ಷ ನೀಡದಿದ್ರೆ ಮನೋಜ್ ಕುಟುಂಬಸ್ಥರ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ.

    ಹಣ ಹೊಂದಿಸುವುದಾಗಿ ಹೇಳಿ ಬಿಡಿಸಿಕೊಂಡು ಬಂದು ಮನೋಜ್ ದೂರು ನೀಡಿದ್ದಾರೆ. ಮನೋಜ್ ದೂರಿನ ಆಧಾರದ ಸಿಸಿಬಿಯಿಂದ 6 ರೌಡಿಗಳ ಬಂಧನವಾಗಿದೆ.

  • ದರ್ಶನ್‌ಗೆ ಜಾಮೀನು ಸಿಕ್ಕಿದ್ದು ಖುಷಿ ಆಯ್ತು: ನಂದ ಕಿಶೋರ್

    ದರ್ಶನ್‌ಗೆ ಜಾಮೀನು ಸಿಕ್ಕಿದ್ದು ಖುಷಿ ಆಯ್ತು: ನಂದ ಕಿಶೋರ್

    ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ದರ್ಶನ್‌ಗೆ (Darshan) 5 ತಿಂಗಳ ನಂತರ ಜಾಮೀನು (Bail) ಸಿಕ್ಕಿರೋದು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಈ ಕುರಿತು ನಟನ ಆಪ್ತ ‌’ಪೊಗರು’ ಚಿತ್ರದ ಡೈರೆಕ್ಟರ್ ನಂದ ಕಿಶೋರ್ (Nanda Kishore) ಪ್ರತಿಕ್ರಿಯಿಸಿ, ದರ್ಶನ್‌ಗೆ ಜಾಮೀನು ಸಿಕ್ಕಿದ್ದು, ಖುಷಿ ಆಯ್ತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:5 ತಿಂಗಳ ಬಳಿಕ ದರ್ಶನ್ ರಿಲೀಸ್ – ಹೈಕೋರ್ಟ್‌ನಿಂದ 6 ವಾರಗಳ ಜಾಮೀನು ಮಂಜೂರು

    ಎಲ್ಲರಿಗೂ ನಮಸ್ಕಾರ ಒಂದು ಸಂತೋಷದ ಸುದ್ದಿ ಅಂತಲೇ ಹೇಳಬಹುದು. ನಾನು ದೇವಸ್ಥಾನದಲ್ಲಿದ್ದೆ ಈಗ ಗೊತ್ತಾಯ್ತು. ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದೆ ತುಂಬಾ ತುಂಬಾ ಸಂತೋಷ ಆಯಿತು. ಅವರಿಗೆ, ಅವರ ಕುಟುಂಬಸ್ಥರಿಗೆ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ. ಕನ್ನಡ ಚಿತ್ರರಂಗದಲ್ಲಿ ಮತ್ತೆ ಸಂಭ್ರಮ ಮನೆ ಮಾಡುತ್ತದೆ. ಎಲ್ಲರಿಗೂ ಹ್ಯಾಪಿ ದೀಪಾವಳಿ ಎಂದು ನಂದ ಕಿಶೋರ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಅಂದಹಾಗೆ, ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಆರೋಪಿ ದರ್ಶನ್‌ರನ್ನು ಜೂನ್ 11ರಂದು ಬಂಧಿಸಿದ್ದು, ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

  • ಎಐ ಟೆಕ್ನಾಲಜಿ ಬಂದಿರೋದ್ರಿಂದ ಫೋಟೋ ಮಾರ್ಫಿಂಗ್ ಮಾಡಿರಬಹುದು: ಡೈರೆಕ್ಟರ್ ನಂದ ಕಿಶೋರ್

    ಎಐ ಟೆಕ್ನಾಲಜಿ ಬಂದಿರೋದ್ರಿಂದ ಫೋಟೋ ಮಾರ್ಫಿಂಗ್ ಮಾಡಿರಬಹುದು: ಡೈರೆಕ್ಟರ್ ನಂದ ಕಿಶೋರ್

    ರಪ್ಪನ ಅಗ್ರಹಾರದಲ್ಲಿರುವ ದರ್ಶನ್‌ಗೆ (Darshan) ರಾಜಾತಿಥ್ಯ ಸಿಗುತ್ತಿದೆ ಅಂತ ಫೋಟೋವೊಂದು ಭಾರೀ ಚರ್ಚೆ ಹುಟ್ಟು ಹಾಕಿದ ಬೆನ್ನಲ್ಲೇ ನಿರ್ದೇಶಕ ನಂದ ಕಿಶೋರ್ ಮಾತನಾಡಿದ್ದಾರೆ. ಎಐ ಟೆಕ್ನಾಲಜಿ ಬಂದಿರೋದ್ರಿಂದ ಫೋಟೋ ಮಾರ್ಫಿಂಗ್ ಮಾಡಿರಬಹುದು ಎಂದು ‘ಪೊಗರು’ ಡೈರೆಕ್ಟರ್ ನಂದ ಕಿಶೋರ್ (Nanda Kishore) ಮಾತನಾಡಿದ್ದಾರೆ.

    ಎಐ ಟೆಕ್ನಾಲಜಿ ಬಂದಿರೋದ್ರಿಂದ ಯಾವ ಫೋಟೋನಾ ಹೇಗೆ ಬೇಕಾದರೂ ಮಾರ್ಪಿಂಗ್ ಮಾಡಬಹುದು. ಇನ್ನೂ ಪೊಲೀಸ್ ಇಲಾಖೆ ತುಂಬಾ ನಿಷ್ಠೆಯಿಂದ ಕೆಲಸ ಮಾಡುತ್ತಿದೆ. ಹಾಗಾಗಿ ಜೈಲಿನಲ್ಲಿ ಹೀಗೆ ಆಗ್ತಿದೆ ಅಂತ ನನಗೆ ಅನಿಸುತ್ತಿಲ್ಲ. ಬೇರೆ ಯಾವುದು ಫೋಟೋನೂ ವೈರಲ್ ಆಗಿಲ್ಲ. ಆದರೆ ಇದೇ ಫೋಟೋ ಎಲ್ಲಾ ಕಡೆ ವೈರಲ್ ಆಗ್ತಿದೆ ಅಂದರೆ ಏನಿದರ ಉದ್ದೇಶ ಎಂದು ಮಾತನಾಡಿದ್ದಾರೆ. ಈ ವಿಚಾರವಾಗಿ ಗೃಹಮಂತ್ರಿ ಪರಮೇಶ್ವರ್ ಅವರ ನಿರ್ಧಾರವನ್ನು ಪ್ರಶ್ನೆ ಮಾಡೋಕೆ ಆಗಲ್ಲ. ಆದರೆ ಇನ್ನೂ ಈ ಬಗ್ಗೆ ತನಿಖೆ ಆಗುತ್ತಿದೆ. ಸತ್ಯ ಆಚೆ ಬರುತ್ತದೆ ಕಾದು ನೋಡೋಣ ಎಂದಿದ್ದಾರೆ ನಂದ ಕಿಶೋರ್.‌

    ಎಂತಹ ಮನುಷ್ಯನಾದರೂ ಪಶ್ಚಾತ್ತಾಪ ಇದ್ದೇ ಇರುತ್ತದೆ. ಟಿವಿ ಮುಂದೆ ಮಾಡಿದರೆ ಅದನ್ನು ಬೂಟಾಟಿಕೆ ಅಂತಾರೆ. ದರ್ಶನ್ ಅವರು ಪಶ್ಚಾತ್ತಾಪ ಪಡ್ತಿರೋದನ್ನ ಪೋಟೋ ತೆಗೆದಿಲ್ಲ. ಅವರ ಮುಂದೆ ಬಂದು ಮಗ ಅಪ್ಪಾಜಿ ಅನ್ನೋವಾಗ ಪಶ್ಚಾತ್ತಾಪ ಕಾಡಿರುತ್ತದೆ. ನಾವು ನಿಂತಿಕೊಂಡು ಜಡ್ಜ್ ಮಾಡೋಕೆ ಹೋಗಬಾರದು. ಇನ್ನೂ ವಿಲ್ಸನ್‌ ಗಾರ್ಡನ್‌ ನಾಗನ ಕುರಿತು ಎದುರಾದ ಪ್ರಶ್ನೆಗೆ, ಮನಪರಿವರ್ತನೆ ಆಗುವಂತ ಜಾಗದಲ್ಲಿ ಕ್ರೈಂ ಮಾಡಿದವರೇ ಇರುತ್ತಾರೆ ಅಲ್ವ. ಅಲ್ಲಿ ಸಾದು ಸಂತರು ಇರುತ್ತಾರಾ? ಎಂದು ಕೇಳಿದ್ದಾರೆ. ದೊಡ್ಡ ನಟ ದರ್ಶನ್ ಅವರ ಅಭಿಮಾನಿ ಇವರು ಆಗಿರಬಹುದು ಆ ಸಂದರ್ಭದಲ್ಲಿ ತೆಗೆದಿರಬಹುದು ಈ ಫೋಟೋ ಎಂದು ನಂದ ಕಿಶೋರ್ ಮಾತನಾಡಿದ್ದಾರೆ.

    ಇದೆಲ್ಲವನ್ನು ನಾವು ಕಣ್ಣಾರೆ ನೋಡಿಲ್ಲ. ಇದು ಇನ್ನೂ ತನಿಖೆ ನಡೆಯುತ್ತಿದೆ. ಇದು ಮಾರ್ಫ್ಡ್ ಫೋಟೋ ನೋ ನಿಜವಾದ ಫೋಟೋನೋ ಗೊತ್ತಿಲ್ಲ ಸದ್ಯ ತನಿಖೆ ನಡೆಯುತ್ತಿದೆ. ಎಷ್ಟು ಜನ ಕಲಾವಿದರು ಇಲ್ಲ ಅಂದರು ಅವರ ವಾಯ್ಸ್ ಬಳಸ್ತಿದ್ದೀವಿ ಎಂದು ನಂದಕಿಶೋರ್ ವೈರಲ್ ಫೋಟೋ ಕುರಿತು ಮಾತನಾಡಿದ್ದಾರೆ. ಇನ್ನೂ ಈ ವೇಳೆ, ರೇಣುಕಾಸ್ವಾಮಿ ಕುಟುಂಬದ ಬಗ್ಗೆ ನಮಗೆ ತುಂಬಾ ದುಃಖ ಇದೆ. ಇಡೀ ಚಿತ್ರರಂಗ ಅವತ ಕುಟುಂಬದ ಪರ ನಿಂತಿದೆ. ಪಶ್ಚಾತ್ತಾಪ ಎಲ್ಲರಿಗೂ ಕಾಡುತ್ತಿದೆ ಎಂದು ಮಾತನಾಡಿದ್ದಾರೆ.

  • ಮೋಹನ್ ಲಾಲ್ ಜೊತೆ ‘ವೃಷಭ’ ಸಿನಿಮಾ ಶೂಟಿಂಗ್ ಪ್ರಾರಂಭಿಸಿದ ರಾಗಿಣಿ

    ಮೋಹನ್ ಲಾಲ್ ಜೊತೆ ‘ವೃಷಭ’ ಸಿನಿಮಾ ಶೂಟಿಂಗ್ ಪ್ರಾರಂಭಿಸಿದ ರಾಗಿಣಿ

    ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ (Mohan Lal) ಅವರು ಪ್ಯಾನ್ ಇಂಡಿಯಾ ಸಿನಿಮಾ ವೃಷಭ (Vrushabha)  ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮೋಹಲ್ ಲಾಲ್ ಜೊತೆ ಕನ್ನಡದ ಬ್ಯೂಟಿ ರಾಗಿಣಿ (Ragini) ಕೂಡ ನಟಿಸುತ್ತಿದ್ದಾರೆ. ಚಿತ್ರತಂಡದ ಜೊತೆಗಿನ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.

    ಬಹುಭಾಷಾ ನಟ ಮೋಹನ್ ಲಾಲ್ (Mohan Lal) ಅವರು ಕನ್ನಡದ ನಿರ್ದೇಶಕ ನಂದಕಿಶೋರ್ (Nanda Kishor) ಡೈರೆಕ್ಷನ್ ಮಾಡ್ತಿದ್ದಾರೆ. ಕಳೆದ ಭಾನುವಾರದಿಂದ ಮೈಸೂರಿನಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಡಿಫರೆಂಟ್ ಆಗಿರೋ ಕಥೆಯನ್ನ ಹೇಳೋಕೆ ಹೊರಟಿದ್ದಾರೆ. ‘ಕಾಂದಹಾರ್’ ಬಳಿಕ ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆ ಮತ್ತೆ ನಟಿಸುವ ಚಾನ್ಸ್ ರಾಗಿಣಿ ಗಿಟ್ಟಿಸಿಕೊಂಡಿದ್ದಾರೆ. ಸಿನಿಮಾದ ಭಾಗವಾಗಿರೋದಕ್ಕೆ ಚಿತ್ರತಂಡಕ್ಕೆ ನಟಿ ಧನ್ಯವಾದಗಳನ್ನ ತಿಳಿಸಿದ್ದಾರೆ.

    ನಟಿ ರಾಗಿಣಿ ಇದೀಗ ಕನ್ನಡದ ಬ್ಯುಸಿ ನಟಿಯಾಗಿದ್ದಾರೆ. ತುಪ್ಪದ ಬೆಡಗಿಗೆ ಡಿಮ್ಯಾಂಡ್‌ ಜಾಸ್ತಿಯಾಗಿದೆ, ಸಾಲು ಸಾಲು ಸಿನಿಮಾಗಳನ್ನ ಮಾಡ್ತಿದ್ದಾರೆ. 8ಕ್ಕೂ ಹೆಚ್ಚು ಸಿನಿಮಾಗಳಿಗೆ ರಾಗಿಣಿ ನಾಯಕಿಯಾಗಿದ್ದಾರೆ. ಕನ್ನಡದ ಜೊತೆ ಸೌತ್-ಬಾಲಿವುಡ್‌ನಲ್ಲಿ ತುಪ್ಪದ ಬೆಡಗಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಕಾಲಿನ ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಾಗೆ ಹಾರಿದ ಮೆಗಾಸ್ಟಾರ್

    ‘ವೃಷಭ’ (Vrushaba) ಚಿತ್ರದಲ್ಲಿ ಮೈ ಜುಂ ಎನಿಸುವಂತಹ ಸಾಹಸ ಮತ್ತು ರೋಚಕ ದೃಶ್ಯಗಳು ಇರಲಿದ್ದು, ನಟ ಮೋಹನ್ ಲಾಲ್ ಜೊತೆಗೆ ರೋಶನ್ ಮೇಕಾ, ಶನಾಯ ಕಪೂರ್, ಝಾರಾ ಖಾನ್, ಶ್ರೀಕಾಂತ್ ಮೇಕಾ ಮುಂತಾದವರು ನಟಿಸುತ್ತಿದ್ದಾರೆ. ನಟಿ ರಾಗಿಣಿ ಪಾತ್ರಕ್ಕೂ ಪ್ರಾಮುಖ್ಯತೆಯಿದೆ.

    ಈ ಚಿತ್ರವನ್ನು ಬಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಬಾಲಾಜಿ ಟೆಲಿಫಿಲಂಸ್ ಮತ್ತು ಕನೆಕ್ಟ್ ಮೀಡಿಯಾ, ಎವಿಸ್ ಸ್ಟುಡಿಯೋದ ಸಹಯೋಗದೊಂದಿಗೆ ನಿರ್ಮಿಸುತ್ತಿದೆ. ಏಕ್ತಾ ಕಪೂರ್, ಶೋಭಾ ಕಪೂರ್, ಅಭಿಷೇಕ್ ವ್ಯಾಸ್, ವಿಶಾಲ್ ಗುರ್ನಾನಿ, ಜೂಹಿ ಪಾರೇಖ್ ಮೆಹ್ತಾ, ಶ್ಯಾಮಸುಂದರ್, ವರುಣ್ ಮಾಥುರ್ ಮತ್ತು ಸೌರಭ್ ಮಿಶ್ರಾ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಬಹುನಿರೀಕ್ಷಿತ ಈ ಚಿತ್ರವು ಮುಂದಿನ ವರ್ಷ ಜಗತ್ತಿನಾದ್ಯಂತ 4500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಿವುಡ್ ಸೂಪರ್ ಸ್ಟಾರ್ಸ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ನಂದ ಕಿಶೋರ್

    ಬಾಲಿವುಡ್ ಸೂಪರ್ ಸ್ಟಾರ್ಸ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ನಂದ ಕಿಶೋರ್

    ನ್ನಡ ಚಿತ್ರರಂಗದಲ್ಲಿ ಇದೀಗ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ನಂದ ಕಿಶೋರ್ ವೃತ್ತಿರಂಗದಲ್ಲಿ ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ. ಗಾಂಧಿನಗರದಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ವಿಕ್ಟರಿ ಬಾರಿಸುವ `ಪೊಗರು’ ನಿರ್ದೇಶಕ ಈಗ ಬಿಟೌನ್‌ನ ಸ್ಟಾರ್ಸ್‌ಗೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.‌

    ಚಂದನವನದ ನಟ ನಟಿಯರು ಮಾತ್ರ ಈಗ ಪರಭಾಷೆಗಳಲ್ಲಿ ಸೌಂಡ್ ಮಾಡ್ತಿರೋದು ಮಾತ್ರವಲ್ಲ ನಿರ್ದೇಶಕರು ಕೂಡ ಪರಭಾಷೆಗಳಲ್ಲಿ ಗುರುತಿಸಿಕೊಳ್ತಿದ್ದಾರೆ. ಈ ಸಾಲಿಗೆ `ರನ್ನ’, `ಪೊಗರು’, `ಮುಕುಂದ ಮುರಾರಿ’ ಚಿತ್ರಗಳ ನಿರ್ದೇಶಕ ನಂದ ಕಿಶೋರ್ ಕೂಡ ಒಬ್ಬರು. ಬಾಲಿವುಡ್ ಮತ್ತು ಟಾಲಿವುಡ್ ಸ್ಟಾರ್‌ಗಳಾದ ಸಂಜಯ್ ದತ್ ಮತ್ತು ವರುಣ್ ತೇಜ್ ಒಂದೇ ಸಿನಿಮಾದಲ್ಲಿ ತೋರಿಸಲು ಪ್ಲ್ಯಾನ್ ಮಾಡಿದ್ದಾರೆ.

    `ಕೆಜಿಎಫ್ 2′ ನಂತರ ಸಿಕ್ಕಾಪಟ್ಟೆ ಡಿಮ್ಯಾಂಡ್‌ನಲ್ಲಿರುವ ಸಂಜಯ್ ದತ್‌ಗಾಗಿಯೇ ಸೂಪರ್ ಕಥೆಯೊಂದನ್ನ ನಂದ ಕಿಶೋರ್ ರೆಡಿ ಮಾಡಿದ್ದಾರೆ. ಸಂಜಯ್ ದತ್ ಕಥೆ ಕೇಳಿ ಥ್ರಿಲ್ ಆಗಿ, ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ತೆಲುಗಿನ ಸ್ಟಾರ್ ವರುಣ್ ತೇಜ್ ಕೂಡ ಸಾಥ್ ನೀಡಿಲಿದ್ದಾರೆ. ಇದನ್ನೂ ಓದಿ:ಸೋದರ ಸೊಸೆ ತಾನ್ಯ ಸಾವಿನ ಕುರಿತು ದಿಯಾ ಮಿರ್ಜಾ ಭಾವುಕ

    ಇತ್ತೀಚೆಗಷ್ಟೇ ನಿರ್ದೇಶಕ ನಂದ ಕಿಶೋರ್ ಕೂಡ ಮುಂಬೈಗೆ ಹೋಗಿ ಬಂದಿದ್ದಾರೆ. ಈ ಇಬ್ಬರು ಸ್ಟಾರ್‌ಗಳಿಂದ ಕಥೆಗೆ ಓಕೆ ಅಂದಿದ್ದು ಆಗಿದೆ. ಇನ್ನೂ ಅಧಿಕೃತ ಅನೌನ್ಸ್ ಆಗೋದೊಂದೆ ಬಾಕಿ. ಅಲ್ಲಿಯವರೆಗೂ ಚಿತ್ರದ ಮತ್ತಷ್ಟು ಅಪ್‌ಡೇಟ್‌ಗಾಗಿ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸುದೀಪ್‌ಗೆ ಅವಹೇಳನ ಮಾಡಿದವನಿಗೆ ನಂದಕಿಶೋರ್ ತರಾಟೆ – ನೀನು ಗಂಡಸಾಗಿದ್ರೆ ಸಾಕ್ಷಿ ಸಮೇತ ಪ್ರೂವ್ ಮಾಡು ಎಂದ ನಿರ್ದೇಶಕ

    ಸುದೀಪ್‌ಗೆ ಅವಹೇಳನ ಮಾಡಿದವನಿಗೆ ನಂದಕಿಶೋರ್ ತರಾಟೆ – ನೀನು ಗಂಡಸಾಗಿದ್ರೆ ಸಾಕ್ಷಿ ಸಮೇತ ಪ್ರೂವ್ ಮಾಡು ಎಂದ ನಿರ್ದೇಶಕ

    ಸ್ಯಾಂಡಲ್‌ವುಡ್ ಮಾತ್ರವಲ್ಲ ಸದ್ಯ ದೇಶದ ಮೂಲೆ ಮೂಲೆಗಳಲ್ಲೂ ಕಿಚ್ಚ ಸುದೀಪ್ ಅವರದ್ದೇ ಹವಾ ಶುರುವಾಗಿದೆ. ಬಹುನಿರೀಕ್ಷಿತ ಚಿತ್ರವಾದ `ವಿಕ್ರಾಂತ್ ರೋಣ’ ಸಿನಿ ಪ್ರಚಾರದಲ್ಲಿ ಕಿಚ್ಚ ಸುದೀಪ್ ಫುಲ್ ಬ್ಯೂಸಿಯಾಗಿದ್ದಾರೆ. ಪ್ರಚಾರದ ನಡುವೆಯೂ ಅವರು ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ.

    ಆದ್ರೆ ಯುವಕನೊಬ್ಬ ಕಿಚ್ಚ ಸುದೀಪ್ ಬಗ್ಗೆ ವೀಡಿಯೋ ಮೂಲಕ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ. ಸುದೀಪ್ ಅವರು ನೀಡಿದ ಖಾಸಗಿ ಜಾಹೀರಾತಿನಿಂದಾಗಿ ಯುವಕನೊಬ್ಬ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಕುರಿತ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸುದೀಪ್ ಅಭಿಮಾನಿಗಳು ಮಾತ್ರವಲ್ಲದೇ ಕನ್ನಡ ಚಿತ್ರರಂಗದಿಂದಲೂ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಈ ಬೆನ್ನಲ್ಲೇ ನಿರ್ದೇಶಕ ನಂದಕಿಶೋರ್, ಅವಹೇಳನಕಾರಿ ವೀಡಿಯೋ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದ ಕಲಾವಿದರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು ಎಂದಿದ್ದಾರೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಅರೆ ನಗ್ನ ಫೋಟೋ ನೋಡಿ ರಶ್ಮಿಕಾ ಹೇಳಿದ್ದು ಹೀಗೆ

    ಕನ್ನಡ ಕಲಾಭಿಮಾನಿಗಳೇ ನಮ್ಮ ತಂದೆ-ತಾಯಿ. ಇಲ್ಲಿ ಸುದೀಪ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಇತರ ಧೀಮಂತ ನಟರು ತಮ್ಮದೇ ಚೌಕಟ್ಟಿನಲ್ಲಿ ಸಹಾಯ ಮಾಡಿದ್ದಾರೆ. ಕೆಲವರು ಅಭಿಮಾನಿಗಳನ್ನೇ ದೇವರೆಂದು ತಲೆಯ ಮೇಲೆ ಹೊತ್ಕೊಂಡು ಮೆರೆದವರೂ ಇದ್ದಾರೆ. ಇಡೀ ಭಾರತವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುತ್ತಿದೆ. ಅದಕ್ಕೆ ಮೇರು ನಟರೇ ಕಾರಣ. ಅಂಥವರ ಬಗ್ಗೆ ಯಾರೋ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಇದೆಲ್ಲವೂ ಒಳ್ಳೆಯ ಬೆಳವಣಿಗೆಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ `ಮಹಾದೇವಿ’ ಖ್ಯಾತಿಯ ಮಾನಸಾ ಜೋಷಿ

    ವೀಡಿಯೋ ಮಾಡಿರುವ ಯುವಕನ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ನಂದ ಕಿಶೋರ್, ಸುದೀಪ್ ಅವರಿಂದ ಯುವಕ ಆತ್ಮಹತ್ಯೆ ಮಾಡ್ಕೊಂಡ ಅಂತ ನಿನ್ನಿಂದ ಸಾಬೀತು ಮಾಡಲು ಸಾಧ್ಯನಾ? ಆತ್ಮಹತ್ಯೆಗೆ ಸುದೀಪ್ ಕಾರಣ ಅಂತಾ ಮನೆಯವರು ದೂರು ಕೊಟ್ಟಿದ್ದಾರಾ? ನಿನ್ನ ಬಳಿ ಸಾಕ್ಷ್ಯಾಧಾರವಿದ್ದರೆ ಕಾನೂನು ಬದ್ಧವಾಗಿ ಕೋರ್ಟ್ನಲ್ಲಿ ಹೋರಾಡು ಅಥವಾ ಕನ್ನಡ ಚಲನಚಿತ್ರ ಮಂಡಳಿಯಲ್ಲಿ ದೂರು ಕೊಡು. ಅದನ್ನು ಬಿಟ್ಟು ಹಾದಿಬೀದಿಯಲ್ಲಿ ನಿಂತು ಮಾತನಾಡಬಾರದು. ಕನ್ನಡ ಮೇರು ನಟರಿಗೆ, ಕಲಾಭಿಮಾನಿಗಳ ಬಗ್ಗೆ ಹೀನ ಪದ ಬಳಸುವುದರಿಂದಲೇ ಗೊತ್ತಾಗುತ್ತೆ ನಿನ್ನ ಸಂಸ್ಕೃತಿ. ನಿನ್ನ ಪ್ರಚಾರಕ್ಕಾಗಿ ಸುದೀಪ್ ಅವರ ಹೆಸರು ಬಳಸಿಕೊಳ್ಳುತ್ತಿದ್ದೀಯಾ? ನೀನು ನಪುಂಸಕ ಅಲ್ಲದೇ ಇದ್ದಿದ್ರೆ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿರಲಿಲ್ಲ. ನೀನು ಗಂಡಸಾಗಿದ್ದರೆ ಸಾಬೀತು ಮಾಡು ಎಂದು ಸವಾಲು ಹಾಕಿದ್ದಾರೆ.‌

    ಕನ್ನಡ ಚಿತ್ರರಂಗದ ಕಲಾವಿದರು ಅಭಿಮಾನಿಗಳ ಮನೆ ಮಕ್ಕಳು. ಅವರನ್ನು ಬೇರ್ಪಡಿಸಬೇಡಿ. ಡಾ.ರಾಜ್‌ಕುಮಾರ್ ಅವರು ಅಭಿಮಾನಿಗಳನ್ನೇ ದೇವರು ಅಂತ ಕರೆದಿದ್ದಾರೆ. ಬೇರೆ ಯಾರಾದ್ರು ಮಾತನಾಡಿದ್ರೆ ನೀವೇ ನಮ್ಮನ್ನ ರಕ್ಷಣೆ ಮಾಡಬೇಕು. ಏಕೆಂದರೆ ನಾವು ಬೆಳೆಯೋದು ಅಭಿಮಾನಿಗಳಿಂದಲೇ ಎಂದು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಿಚ್ಚ ಸುದೀಪ್ ಅವರ ಕೈರುಚಿ ತಿಂದು ಹೊಗಳಿದ ಡಾಲಿ ಧನಂಜಯ್

    ಕಿಚ್ಚ ಸುದೀಪ್ ಅವರ ಕೈರುಚಿ ತಿಂದು ಹೊಗಳಿದ ಡಾಲಿ ಧನಂಜಯ್

    ಕಿಚ್ಚ ಸುದೀಪ್ ಅವರು ಕಿಚನ್ ನಲ್ಲಿ ತಯಾರಾದ ಅಡುಗೆಯನ್ನು ಹೊಗಳದವರೇ ಇಲ್ಲ. ಅದರಲ್ಲೂ ಸ್ವತ ಸುದೀಪ್ ಅವರೇ ತಮ್ಮ ಕೈಯಾರ ಅಡುಗೆ ಮಾಡಿ ಬಡಿಸುತ್ತಾರೆ. ಆ ರುಚಿಯನ್ನು ಬಲ್ಲವರೇ ಬಲ್ಲರು. ಅವರ ಕಿಚನ್ ಕೂಡ ಹಾಗೆಯೇ ಇದೆ. ದೇಶ ವಿದೇಶಗಳ ಅಡುಗೆ ಪಾತ್ರೆಗಳನ್ನು ಅದು ಹೊಂದಿದೆ. ಹಾಗಾಗಿ ಕೇವಲ ದೇಶಿ ಆಹಾರ ಮಾತ್ರ ಅಲ್ಲಿ ಬೇಯುವುದಿಲ್ಲ. ವಿದೇಶ ಅಡುಗೆಗಳೂ ತಯಾರಾಗುತ್ತವೆ. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

    ಹಾಗಂತ ಕಿಚ್ಚ ಸುದೀಪ್ ಅಡುಗೆ ಮಾಡುವುದನ್ನು ಯಾವತ್ತೂ ನಿಲ್ಲಿಸಿಲ್ಲ. ಯಾವುದೇ ದೇಶಕ್ಕೆ ಹೋಗಲಿ ಉಳಿದುಕೊಂಡ ಹೋಟೆಲ್ ನ ಕಿಚನ್ ಗೆ ಭೇಟಿ ಮಾಡದೇ ಬರುವುದಿಲ್ಲವಂತೆ. ಅಡುಗೆ ಕೋಣೆ ಹೊಕ್ಕು, ಅಲ್ಲಿ ತಯಾರಾದ ವಿಶೇಷ ಭಕ್ಷ್ಯಗಳನ್ನು ನೋಡಿ, ಅದನ್ನು ತಯಾರು ಮಾಡುವ ರೀತಿ ತಿಳಿದುಕೊಳ್ಳುತ್ತಾರಂತೆ. ಅದನ್ನು ಟ್ರೈ ಕೂಡ ಮಾಡುತ್ತಾರೆ. ಹಾಗಾಗಿ ವಿವಿಧ ಬಗೆಯ ಅಡುಗೆಗಳು ಅವರಿಗೆ ಬರುತ್ತವೆ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

    ನಿನ್ನೆಯಷ್ಟೇ ಡಾಲಿ ಧನಂಜಯ್ ಅವರು ಸುದೀಪ್ ಮನೆಗೆ ಹೋಗಿದ್ದಾರೆ. ಇವರ ಜತೆ ನಿರ್ದೇಶಕ ನಂದ ಕಿಶೋರ್, ಸಂಗೀತ ನಿರ್ದೇಶಕ ಕಂ ಗಾಯಕ ವಾಸುಕಿ ವೈಭವ್, ಕಲಾ ನಿರ್ದೇಶಕ ಶಿವಕುಮಾರ್ ಮತ್ತು ನಿರ್ಮಾಪಕ ಜಾಕ್ ಮಂಜು ಕೂಡ ಇದ್ದಾರೆ. ಇವರೆಲ್ಲರೂ ಕಿಚ್ಚ ಸುದೀಪ್ ಅವರೇ ಅಡುಗೆ ತಯಾರಿಸಿ ಹೊಟ್ಟೆ ತುಂಬಾ ಬಡಿಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ

    ಕಿಚ್ಚನ ಕೈ ರುಚಿ ಅನುಭವಿಸಿದ ಡಾಲಿ ಧನಂಜಯ್ ತಮ್ಮ ಟ್ವಿಟರ್ ಖಾತೆಯಲ್ಲಿ ಅದನ್ನು ಬರೆದುಕೊಂಡಿದ್ದಾರೆ. ಅಡುಗೆಯ ಬಗ್ಗೆ ಹಾಡಿ ಹೊಗಳಿದ್ದಾರೆ. ಅದಕ್ಕೆ ಸಂಗೀತ ನಿರ್ದೇಶಕ ವಾಸಕಿ ವೈಭವ್ ಕೂಡ ಅನುಮೋದಿಸಿದ್ದಾರೆ. ಈ ಟ್ವಿಟ್ ಗೆ ಅನೇಕರು ಮೆಚ್ಚಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.

  • ನನ್ನ ಕ್ಷೇತ್ರದಲ್ಲಿ ಮಾಂಸ ತಿನ್ನಂಗಿಲ್ಲ ಎಂದು ಹೇಳಿ ಪೇಚಿಗೆ ಸಿಲಿಕಿದ ಬಿಜೆಪಿ MLA

    ನನ್ನ ಕ್ಷೇತ್ರದಲ್ಲಿ ಮಾಂಸ ತಿನ್ನಂಗಿಲ್ಲ ಎಂದು ಹೇಳಿ ಪೇಚಿಗೆ ಸಿಲಿಕಿದ ಬಿಜೆಪಿ MLA

    ಲಕ್ನೋ: ನನ್ನ ಕ್ಷೇತ್ರದಲ್ಲಿ ಮಾಂಸ ತಿನ್ನಂಗಿಲ್ಲ ಎಂದ ಲೋನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಂದ ಕಿಶೋರ್ ವಿವಾದಾತ್ಮಕ ಹೇಳಿಕೆ ನಂತರ ತಮ್ಮ ಹೇಳಿಕೆಯನ್ನು ಬದಲಿಸಿ  ಸ್ಪಷ್ಟನೆ ನೀಡಿದ್ದಾರೆ.

    ತಮ್ಮ ಕ್ಷೇತ್ರದಲ್ಲಿ ಮಾಂಸದ ಅಂಗಡಿಗಳು ವ್ಯಾಪಾರ ನಡೆಸಿದರೆ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಲೋನಿಯಲ್ಲಿ ಒಂದೇ ಒಂದು ಮಾಂಸದ ಅಂಗಡಿ ಕಂಡು ಬಂದರೂ ನಾನು ಅಧಿಕಾರಿಗಳಿಗೆ ಹೇಳಲು ಬಯಸುತ್ತೇನೆ. ಲೋನಿಯಲ್ಲಿ ರಾಮರಾಜ್ಯವಿದೆ. ರಾಮರಾಜ್ಯದಲ್ಲಿ ಮಾಂಸದ ಅಂಗಡಿಗಳಿಗೆ ಅನುಮತಿ ನೀಡಬೇಕೇ? ಎಂದು ಅವರು ಕಾರ್ಯಕ್ರಮವೊಂದರಲ್ಲಿ ನೆರೆದಿದ್ದವರಿಗೆ ಕೇಳಿದರು. ಜನರು ಹಾಲು ಮತ್ತು ತುಪ್ಪವನ್ನು ಸೇವಿಸಬೇಕು ಎಂದೂ ಹೇಳಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ಗೆ ಹೀನಾಯ ಸೋಲು – ಬಿಜೆಪಿಗಿಂತಲೂ, ಕಾಂಗ್ರೆಸ್‍ಗೆ ಡೇಂಜರ್ ಆ ಪಕ್ಷ!

    ಮಾಂಸದ ಅಂಗಡಿಗಳಿಗೆ ಅನುಮತಿ ಇಲ್ಲ ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಗುರಿಗಾಗುತ್ತಿದಂತೆ, ಶಾಸಕ ನಂದ ಕಿಶೋರ್ ತಮ್ಮ ಹೇಳಿಕೆಯಿಂದ ಯೂ ಟರ್ನ್ ಹೊಡೆದಿದ್ದಾರೆ. ಸಂಪೂರ್ಣ ನಿಷೇಧದ ಅರ್ಥದಲ್ಲಿ ನಾನು ಹೇಳಿಲ್ಲ, ಬದಲಿಗೆ ಯಾವುದೇ ಅಕ್ರಮ ಅಥವಾ ಪರವಾನಗಿ ರಹಿತ ಅಂಗಡಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರೈತರ ಬೇಡಿಕೆ ಈಡೇರಿಸದಿದ್ದರೆ ಆಗುತ್ತೆ ಹಿಂಸಾಚಾರ: ಮೇಘಾಲಯ ರಾಜ್ಯಪಾಲ ಎಚ್ಚರಿಕೆ

    ಮಾಂಸ ತಿನ್ನುವುದನ್ನು ನಿಷೇಧಿಸುವುದಿಲ್ಲ. ಪರವಾನಗಿ ಇಲ್ಲದೆ ಯಾವುದೇ ಅಂಗಡಿಯನ್ನು ಅನುಮತಿಸಲಾಗುವುದಿಲ್ಲ. ಮಾಂಸವನ್ನು ತಿನ್ನಲು ಬಯಸುವವರು ದೆಹಲಿಗೆ ಹೋಗಬಹುದು ಖಾಸಗಿವಾಹಿನಿಯೊಂದಕ್ಕೆ ಹೇಳಿದ್ದಾರೆ.

  • ಪೊಗರು ನಂತ್ರ ರಿಮೇಕ್ ಸಿನಿಮಾ ಮಾಡ್ತಾರಾ ಧ್ರುವ ಸರ್ಜಾ?

    ಪೊಗರು ನಂತ್ರ ರಿಮೇಕ್ ಸಿನಿಮಾ ಮಾಡ್ತಾರಾ ಧ್ರುವ ಸರ್ಜಾ?

    ಬೆಂಗಳೂರು: ಪೊಗರು ಸಿನಿಮಾದಲ್ಲಿ ನಿರತರಾಗಿರುವ ಧ್ರುವ ಸರ್ಜಾ ಅವರು, ಈ ಸಿನಿಮಾದ ನಂತರ ರಿಮೇಕ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಜೋರಾಗಿ ಕೇಳಿಬರುತ್ತಿದೆ.

    ಹೌದು ಧ್ರುವ ಸರ್ಜಾ ಅವರು ಸದ್ಯ ನಂದ ಕಿಶೋರ್ ನಿರ್ದೇಶನದ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಚಿತ್ರೀಕರಣ ಮುಗಿಸಿ ಮುಂದಿನ ತಿಂಗಳು ಅಂದರೆ ಏಪ್ರಿಲ್ ಅಂತ್ಯಕ್ಕೆ ಅಥವಾ ಮೇ ಮೊದಲ ವಾರದಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಈ ಮಧ್ಯದಲ್ಲಿ ಧ್ರುವ ಅವರ ಮುಂದಿನ ಸಿನಿಮಾದ ತಯಾರಿ ಜೋರಾಗಿ ನಡೆಯುತ್ತಿದೆ.

    ಧ್ರುವ ಸರ್ಜಾ ಅವರು ಇಲ್ಲಿಯವರೆಗೂ ಅಭಿನಯಿಸಿದ ನಾಲ್ಕು ಸಿನಿಮಾಗಳು ಕೂಡ ಸ್ವಮೇಕ್ ಸಿನಿಮಾಗಳಾಗಿದ್ದವು. ಆದರೆ ಧ್ರುವ ಅವರು ತಮ್ಮ ಮುಂದಿನ ಸಿನಿಮಾವನ್ನು ತೆಲುಗಿನ ಕನ್ನಡ ರಿಮೇಕ್ ನಲ್ಲಿ ಅಭಿನಯಿಸಿಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಕೂಡ ನಂದ ಕಿಶೋರ್ ಅವರೇ ನಿರ್ದೇಶನ ಮಾಡಲಿದ್ದಾರೆ. ಇದರ ಬಗ್ಗೆ ಅಧಿಕೃತವಾಗಿ ಘೋಷಣೆ ಆಗದಿದ್ದರೂ ಚಿತ್ರದ ಮಾತುಕತೆ ಈಗಾಗಲೇ ಮುಗಿದಿದೆ ಎನ್ನಲಾಗಿದೆ.

    ಈ ಚಿತ್ರವನ್ನು ಕನ್ನಡದಲ್ಲಿ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾ ನಿರ್ಮಾಣ ಮಾಡಿದ್ದ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ, ಧ್ರುವ ಅವರ ಮುಂದಿನ ರೀಮೇಕ್ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ತೆಲುಗಿನಲ್ಲಿ ‘ನಿನ್ನು ಕೋರಿ’ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಈ ಚಿತ್ರ ಅಲ್ಲಿ ಹಿಟ್ ಆಗಿತ್ತು. ಈ ಸಿನಿಮಾವನ್ನೇ ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದರಾ? ಎಂಬ ಪ್ರಶ್ನೆ ಕೂಡ ಮೂಡಿದೆ.

    ಅಭಿನಯಿಸಿದ ನಾಲ್ಕೇ ಚಿತ್ರದಲ್ಲಿ ದೊಡ್ಡ ಸೂಪರ್ ಸ್ಟಾರ್ ಆದ ಧ್ರುವ ತನ್ನದೇ ಆದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇತ್ತೀಚೆಗೆ ಮದುವೆಯಾಗಿದ್ದ ಧ್ರುವ ಅವರು ಸತತ ಮೂರು ವರ್ಷಗಳಿಂದ ಪೊಗರು ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಮಾಸ್ ಆಗಿ ಕಾಣಿಸಿಕೊಂಡಿರುವ ಧ್ರುವ ಸರ್ಜಾಗೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದಾರೆ. ಈ ಚಿತ್ರಕ್ಕೆ ಬಿಗ್‍ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.