Tag: ನಂದ್ ಕುಮಾರ್ ಸಿಂಗ್

  • ಬಿಜೆಪಿ ಸಂಸದ ನಂದಕುಮಾರ್ ಸಿಂಗ್ ಕೊರೊನಾಗೆ ಬಲಿ

    ಬಿಜೆಪಿ ಸಂಸದ ನಂದಕುಮಾರ್ ಸಿಂಗ್ ಕೊರೊನಾಗೆ ಬಲಿ

    ಭೋಪಾಲ್: ಖಾಂಡ್ವದ ಬಿಜೆಪಿ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ಕೊರೊನಾದಿಂದಾಗಿ ದೆಹಲಿ ಎನ್ ಸಿಆರ್‍ ನ ಮೆದಂತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಬಿಜೆಪಿಯ ಹಿರಿಯ ನಾಯಕರಾಗಿ ಉತ್ತಮ ಕೆಲಸಗಳಿಂದ ಜನರ ಪ್ರೀತಿಗೆ ಪಾತ್ರರಾಗಿದ್ದರು. ಪ್ರೀತಿಯಿಂದ ಜನರು ಇವರನ್ನು ‘ನಂದು ಬಾಯ್’ (ನಂದು ಅಣ್ಣ) ಎಂದು ಕರೆಯುತ್ತಿದ್ದರು. ನಂದು ಬಾಯ್ ಮೆದಂತ್ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷಿಸಿದಾಗ ಪಾಸಿಟಿವ್ ಬಂದಿತ್ತು, ನಂತರ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಮವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.

     

    ನಂದು ಬಾಯ್ ಅವರ ಸಾವಿನಿಂದ ಬಿಜೆಪಿ ಆದರ್ಶ ನಾಯಕ, ಸಮರ್ಥ ಸಂಘಟನೆಯನ್ನು ಮಾಡುತ್ತಿದ್ದ ಮುಂದಾಳುವನ್ನು ಕಳೆದುಕೊಂಡಿದೆ. ಅವರ ಮರಣದಿಂದ ವೈಯಕ್ತಿಕವಾಗಿ ನನಗೆ ನಷ್ಟ ಉಂಟಾಗಿದೆ ಎಂದು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ಸೂಚಿಸಿದ್ದಾರೆ.