Tag: ನಂದಿ ಹಿಲ್ಸ್

  • ನಂದಿಗಿರಿಧಾಮಕ್ಕೆ ಹರಿದು ಬಂದ ಪ್ರವಾಸಿಗರು- ಕಾರು ಪಾರ್ಕಿಂಗ್ ಹೌಸ್ ಫುಲ್

    ನಂದಿಗಿರಿಧಾಮಕ್ಕೆ ಹರಿದು ಬಂದ ಪ್ರವಾಸಿಗರು- ಕಾರು ಪಾರ್ಕಿಂಗ್ ಹೌಸ್ ಫುಲ್

    ಚಿಕ್ಕಬಳ್ಳಾಪುರ: ಕೋವಿಡ್ ಕಾರಣದಿಂದ ವೀಕೆಂಡ್ ಲಾಕ್‍ಡೌನ್ ಆಗುತ್ತಿದ್ದ ವಿಶ್ವವಿಖ್ಯಾತ ನಂದಿಗಿರಿಧಾಮದ ನಿಯಮವನ್ನು ನಿನ್ನೆಯಿಂದ ತೆರವು ಮಾಡಲಾಗಿದೆ. ಹೀಗಾಗಿ ಸಹಜವಾಗಿ ವೀಕೆಂಡ್ ನಲ್ಲಿ ನಂದಿಗಿರಿಧಾಮಕ್ಕೆ ಬೆಳ್ಳಂಬೆಳಗ್ಗೆ ಸಾವಿರಾರು ಮಂದಿ ಆಗಮಿಸಿದ್ದಾರೆ.

    ಪ್ರವಾಸಿಗರು ಕಾರು ಹಾಗೂ ಬೈಕ್‍ಗಳಲ್ಲಿ ನಂದಿಬೆಟ್ಟಕ್ಕೆ ಲಗ್ಗೆಯಿಟ್ಟಿದ್ದು, ನಂದಿಬೆಟ್ಟದಲ್ಲಿ ಕಾರು ಪಾರ್ಕಿಂಗ್ ಹೌಸ್ ಫುಲ್ ಆಗಿದೆ. ಅಂದಹಾಗೆ ನಿನ್ನೆಯಿಂದ ಬೆಟ್ಟದ ಮೇಲ್ಭಾಗದಲ್ಲಿ 300 ನಾಲ್ಕು ಚಕ್ರದ ವಾಹನಗಳು ಹಾಗೂ 1,000 ದ್ವಿಚಕ್ರ ವಾಹನಗಳ ಪಾರ್ಕಿಂಗ್ ಮಾಡಲು ಸ್ಥಳಾವಕಾಶವಿದ್ದು, ಅಷ್ಟು ವಾಹನಗಳಿಗೆ ಮಾತ್ರ ಬೆಟ್ಟದ ಮೇಲೆ ಪ್ರವೇಶ ನೀಡಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರು ರಸ್ತೆಗೆ ಹೆವಿ ವೆಹಿಕಲ್‍ಗಳೇ ಕಂಟಕ- ಭಾರೀ ಗಾತ್ರದ ವಾಹನಗಳಿಂದ ರೂಲ್ಸ್ ಬ್ರೇಕ್

    ಉಳಿದ ವಾಹನಗಳಿಗೆ ನಂದಿಬೆಟ್ಟದ ಚೆಕ್ ಪೋಸ್ಟ್ ಬಳಿಯೇ ತಡೆಯೊಡ್ಡಲಾಗಿದೆ. ಹೀಗಾಗಿ ಚೆಕ್ ಪೋಸ್ಟ್ ಬಳಿ ನೂರಕ್ಕೂ ಹೆಚ್ಚು ಕಾರುಗಳಲ್ಲಿ ಪ್ರವಾಸಿಗರು ಕಾಯುವಂತಾಗಿದೆ. ಮೇಲಿಂದ ವಾಹನ ವಾಪಸ್ ಬಂದ ನಂತರ ಮತ್ತೊಂದು ವಾಹನದ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

  • ನಂದಿ ತಪ್ಪಲಿನಲ್ಲಿ ವಿಜೃಂಭಣೆಯಿಂದ ನೆರವೇರಿದ ಭೋಗನಂದೀಶ್ವರ ರಥೋತ್ಸವ

    ನಂದಿ ತಪ್ಪಲಿನಲ್ಲಿ ವಿಜೃಂಭಣೆಯಿಂದ ನೆರವೇರಿದ ಭೋಗನಂದೀಶ್ವರ ರಥೋತ್ಸವ

    ಚಿಕ್ಕಬಳ್ಳಾಪುರ: ತಾಲೂಕಿನ ವಿಶ್ವವಿಖ್ಯಾತ ನಂದಿ ಗಿರಿಧಾಮದ ತಪ್ಪಲಿನಲ್ಲಿರುವ ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ನಂದಿ ಗ್ರಾಮದ ಭೋಗ ನಂದೀಶ್ವರನ ಜೋಡಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

    ಶತಮಾನಗಳ ಇತಿಹಾಸವಿರುವ ನಂದಿಯ ಭೋಗ ನಂದೀಶ್ವರನ ದೇವಾಲಯದ ಜೋಡಿ ಬ್ರಹ್ಮ ರಥೋತ್ಸವ ಮಹಾಶಿವರಾತ್ರಿ ಹಬ್ಬದ ಮಾರನೇ ದಿನ ನಡೆಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

    ದೇಶದ ಬೆರಳೆಣಿಕೆಯಷ್ಟು ಕಲ್ಲಿನ ರಥಗಳಲ್ಲಿ ನಂದಿಯ ಭೋಗನಂದೀಶ್ವರನ ರಥವೂ ಒಂದಾಗಿದ್ದು, ಹರಕೆ ಹೊತ್ತ ಭಕ್ತರು ತೇರು ಏಳೆದು, ಹರಿಕೆಗಳನ್ನ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿ ತೇರು ಎಳೆದರು.

  • ವೀಕೆಂಡ್ ಅಂತ ನಂದಿ ಹಿಲ್ಸ್ ಗೆ ಹೋಗ್ತಿದ್ದೀರಾ? ಈ ಸುದ್ದಿ ಓದಿ

    ವೀಕೆಂಡ್ ಅಂತ ನಂದಿ ಹಿಲ್ಸ್ ಗೆ ಹೋಗ್ತಿದ್ದೀರಾ? ಈ ಸುದ್ದಿ ಓದಿ

    ಚಿಕ್ಕಬಳ್ಳಾಪುರ: ಬೆಳ್ಳಂಬೆಳಗ್ಗೆ ದ್ವಿಚಕ್ರವಾಹನಗಳಲ್ಲಿ ನಂದಿ ಹಿಲ್ಸ್ ಗೆ ಹೋದ್ರೆ ಸಖತ್ತಾಗಿರುತ್ತೆ ಅಂತ ಈ ವೀಕೆಂಡ್‍ನಲ್ಲಿ ನೀವೇನಾದ್ರೂ ಅಲ್ಲಿಗೆ ಹೋಗೋಕೆ ಪ್ಲಾನ್ ಮಾಡ್ತಿದ್ರೆ ನಿಮಗಿದು ಕಹಿ ಸುದ್ದಿ.

    ವಿಶ್ವವಿಖ್ಯಾತ ಪ್ರವಾಸಿತಾಣ ನಂದಿಗಿರಿಧಾಮಕ್ಕೆ ಜುಲೈ 1 ಹಾಗೂ 2 ರಂದು ಅಂದ್ರೆ ನಾಳೆ ಮುಂಜಾನೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ, ಎರಡು ದಿನ ಸತತ ನಾಲ್ಕು ಗಂಟೆಗಳ ಕಾಲ ವಾಹನಗಳ ಸಂಚಾರವನ್ನ ಸಂಪೂರ್ಣ ನಿಷೇಧಿಸಲಾಗಿದೆ ಅಂತ ಚಿಕ್ಕಬಳ್ಳಾಪುರ ಜಿಲ್ಲಾ ಪ್ರಭಾರಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.

    ಸ್ಪೆಕ್ಟ್ರಂ ರೇಸಿಂಗ್ ಅನ್ನೋ ಸಂಸ್ಥೆ ನಂದಿಗಿರಿಧಾಮದಲ್ಲಿ ಸೈಕ್ಲಿಂಗ್ ರೇಸಿಂಗ್ ಸ್ಪರ್ಧೆ ಆಯೋಜನೆ ಮಾಡಿರುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ನಾಳೆ ಶನಿವಾರ ಹಾಗೂ ನಾಡಿದ್ದು ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೂ ನಂದಿಗಿರಿಧಾಮಕ್ಕೆ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ.

    ಪರಿಸರ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

    ಇಚ್ಛೆಯುಳ್ಳ ಸಾರ್ವಜನಿಕರು ಸೈಕ್ಲಿಂಗ್ ಸ್ಪರ್ಧೆ ಸೇರಿದಂತೆ ವಾಕಿಂಗ್ ಹಾಗೂ ಟ್ರೆಕ್ಕಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಅಂತ ಮಾಹಿತಿ ನೀಡಿದ್ದಾರೆ.