Tag: ನಂದಿ ಬೆಟ್ಟ

  • ವೀಕೆಂಡ್ ಹಿನ್ನೆಲೆ ನಂದಿಗಿರಿಧಾಮಕ್ಕೆ ಹರಿದು ಬಂದ ಪ್ರವಾಸಿಗರ ದಂಡು – ಸಕಾಲಕ್ಕೆ ಪ್ರವೇಶ ಟಿಕೆಟ್ ಸಿಗದೇ ಪರದಾಟ

    ವೀಕೆಂಡ್ ಹಿನ್ನೆಲೆ ನಂದಿಗಿರಿಧಾಮಕ್ಕೆ ಹರಿದು ಬಂದ ಪ್ರವಾಸಿಗರ ದಂಡು – ಸಕಾಲಕ್ಕೆ ಪ್ರವೇಶ ಟಿಕೆಟ್ ಸಿಗದೇ ಪರದಾಟ

    ಚಿಕ್ಕಬಳ್ಳಾಪುರ: ವೀಕೆಂಡ್ ಹಿನ್ನೆಲೆ ನಂದಿಗಿರಿಧಾಮಕ್ಕೆ (Nandi Hills) ಪ್ರವಾಸಿಗರು ದಂಡು ಹರಿದು ಬಂದಿದ್ದು, ಸಕಾಲಕ್ಕೆ ಪ್ರವೇಶ ಟಿಕೆಟ್ ಸಿಗದೇ ಪ್ರವಾಸಿಗರು ಪರದಾಡಿದ್ದಾರೆ.

    ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ನಂದಿಗಿರಿಧಾಮಕ್ಕೆ ವೀಕೆಂಡ್ ಹಿನ್ನೆಲೆ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು (Tourists) ಆಗಮಿಸಿದ್ದರು. ಈ ಹಿನ್ನೆಲೆ ವಾಹನ ದಟ್ಟನೆಯಿಂದಾಗಿ ಗಿರಿಧಾಮ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ಪ್ರವಾಸಿಗರು ಪರದಾಡುವಂತಾಗಿತ್ತು. ಇದನ್ನೂ ಓದಿ: PUBLiC TV Impact – ಮಡಿಕೇರಿ ರಾಜಾಸೀಟ್ ಗ್ಲಾಸ್ ಬ್ರಿಡ್ಜ್ ಯೋಜನೆ ಹಿಂಪಡೆದ ಸರ್ಕಾರ

    ಅಲ್ಲದೇ ಪ್ರವೇಶ ಟಿಕೆಟ್ ವಿತರಿಸುವಲ್ಲಿ ಅವ್ಯವಸ್ಥೆ ಉಂಟಾಗಿ, ಟಿಕೆಟ್ ಪಡೆಯಲು ಪ್ರವಾಸಿಗರು ಮುಗಿಬಿದ್ದರು. ಸಾವಿರಾರು ಜನ ಪ್ರವಾಸಿಗರಿಗೆ 2 ಕೌಂಟರ್‌ನಲ್ಲಿ ಮಾತ್ರ ಟಿಕೆಟ್ ವಿತರಿಸಲಾಗಿತ್ತು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಈ ಅವ್ಯವಸ್ಥೆಯ ವಿರುದ್ಧ ಪ್ರವಾಸಿಗರು ಆಕ್ರೋಶ ಹಾಕಿದ್ದಾರೆ.

    ಸುರಿಯುವ ಮಳೆಯನ್ನೂ ಲೆಕ್ಕಿಸದೇ ಟಿಕೆಟ್‌ಗಾಗಿ ಮಹಿಳೆಯರು, ಮಕ್ಕಳು, ಯುವಕ-ಯುವತಿಯರೆನ್ನದೇ ಪ್ರವಾಸಿಗರು ಸಾಲುಗಟ್ಟಿ ನಿಂತಿದ್ದರು.

  • ಬೆಂಗಳೂರು ಗ್ರಾಮಾಂತರ ಇನ್ನು ಮುಂದೆ ಬೆಂಗಳೂರು ಉತ್ತರ ಜಿಲ್ಲೆ

    ಬೆಂಗಳೂರು ಗ್ರಾಮಾಂತರ ಇನ್ನು ಮುಂದೆ ಬೆಂಗಳೂರು ಉತ್ತರ ಜಿಲ್ಲೆ

    – ಬಾಗೇಪಲ್ಲಿ ಭಾಗ್ಯನಗರವಾಗಿ ಮರುನಾಮಕರಣ

    ಚಿಕ್ಕಬಳ್ಳಾಪುರ/ಬೆಂಗಳೂರು: ರಾಮನಗರ (Ramangara) ಜಿಲ್ಲೆಯನ್ನು ಬೆಂಗಳೂರು ದಕ್ಷಿಣ (Bengaluru South) ಜಿಲ್ಲೆ ಎಂದು ಮರು ನಾಮಕರಣ ಮಾಡಿದ್ದ ಸರ್ಕಾರ ಈಗ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ (Bengaluru North District) ಎಂಬುದಾಗಿ ಮರು ನಾಮಕರಣ ಮಾಡಿದೆ.

    ಇಂದು ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಂದಿಗಿರಿಧಾಮದಲ್ಲಿ (Nandi Hills) ನಡೆದ ಕ್ಯಾಬಿನೆಟ್‌ ಸಭೆ (Cabinet Meeting) ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ‘ಬೆಂಗಳೂರು ಉತ್ತರ’ ಜಿಲ್ಲೆಯನ್ನಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (Bagepalli) ಹೆಸರನ್ನು ಭಾಗ್ಯನಗರ (Bhagya Nagara) ಎಂದು ನಾಮಕರಣ ಮಾಡುವುದಕ್ಕೆ ಅನುಮೋದನೆ ನೀಡಿದೆ. ಇದನ್ನೂ ಓದಿ: ನೆಹರೂ ಕೈಯಿಂದ್ಲೇ RSS ಬ್ಯಾನ್‌ ಮಾಡೋಕೆ ಆಗ್ಲಿಲ್ಲ, ಪ್ರಿಯಾಂಕ್‌ ಖರ್ಗೆಯಿಂದ ಸಾಧ್ಯನಾ?: ಯತ್ನಾಳ್‌

    ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಭಾಗವನ್ನು ರಿಯಲ್ ಎಸ್ಟೇಟ್ ಭಾಷೆಯಲ್ಲಿ ʼಬೆಂಗಳೂರು ಉತ್ತರʼ ಎಂದೇ ಕರೆಯಲಾಗುತ್ತದೆ.

    1986ರಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ರಚಿಸಲಾಗಿತ್ತು. ಈ ವೇಳೆ ರಾಮನಗರ ಜಿಲ್ಲೆಯ ತಾತಾಲೂಕುಗಳು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದ್ದವು. 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ರಾಮನಗರ ಜಿಲ್ಲೆ ರಚಿಸಲಾಗಿತ್ತು. ಇದನ್ನೂ ಓದಿ: ಬೇಕಾಬಿಟ್ಟಿ ಜನಗಣತಿ ಪೌರ ಕಾರ್ಮಿಕರಿಂದ ಮನೆಗೆ ಸ್ಟಿಕ್ಕರ್‌!

    ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಹೆಸರನ್ನು ‘ಭಾಗ್ಯನಗರ’ ಎಂದು ಬದಲಿಸುವಂತೆ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದರು.

    ಚಿಕ್ಕಬಳ್ಳಾಪುರ (Chikkaballpura) ಜಿಲ್ಲೆಯಲ್ಲಿರುವ ಬಾಗೇಪಲ್ಲಿಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದೆ. ಪಲ್ಲಿ ಎಂದರೆ ತೆಲುಗು ಭಾಷೆಯಲ್ಲಿ ಹಳ್ಳಿ ಎಂದರ್ಥ. ಹೀಗಾಗಿ ಈ ಹೆಸರನ್ನು ಬದಲಿಸಬೇಕು ಎಂದು 2020ರಲ್ಲಿ ತಾಲೂಕಿನಲ್ಲಿ ಅಭಿಯಾನವೇ ಆರಂಭವಾಗಿತ್ತು.

  • 1 ತಿಂಗಳು ನಂದಿ ಬೆಟ್ಟದ ರಸ್ತೆ ಬಂದ್‌ – ಪ್ರವಾಸಿಗರೇ ಈ ಸುದ್ದಿ ನೋಡಿ…

    1 ತಿಂಗಳು ನಂದಿ ಬೆಟ್ಟದ ರಸ್ತೆ ಬಂದ್‌ – ಪ್ರವಾಸಿಗರೇ ಈ ಸುದ್ದಿ ನೋಡಿ…

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದ ರಸ್ತೆ (Nandi Hills Road) ನವೀಕರಣ ಕಾಮಗಾರಿ ಹಿನ್ನಲೆಯಲ್ಲಿ 1 ತಿಂಗಳು ನಂದಿಬೆಟ್ಟದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಆದೇಶ ಮಾಡಿದ್ದಾರೆ.

    ಅಂದ ಹಾಗೆ ವಾರಾಂತ್ಯದ ದಿನಗಳಲ್ಲಿ ಶುಕ್ರವಾರ ಸಂಜೆ 6:30ರಿಂದ ಸೋಮವಾರ ಬೆಳಿಗ್ಗೆ 08 ಗಂಟೆ ವರೆಗೆ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ‌IPL 2025 | ಆರ್‌ಸಿಬಿ vs ಕೆಕೆಆರ್‌ ನಡುವಿನ ಉದ್ಘಾಟನಾ ಪಂದ್ಯಕ್ಕೆ ಮಳೆ ಭೀತಿ

    ಉಳಿದಂತೆ ವಾರದ ಐದೂ ದಿನಗಳು ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಮಾರ್ಚ್ 24 ರಿಂದ ಏಪ್ರಿಲ್ 25ರ ವರೆಗೂ 1 ತಿಂಗಳು 4 ವಾರಗಳ ಕಾಲ ನಿರ್ಬಂಧ ಇರಲಿದೆ. ನಂದಿಬೆಟ್ಟದ ತಪ್ಪಲಿನಿಂದ ಬೆಟ್ಟದವರೆಗೂ 7.70 ಕಿಲೋಮೀಟರ್ ದೂರದ ರಸ್ತೆ ಕಾಮಗಾರಿ ನಡೆಯಲಿದೆ.

    ಅಂಕುಡೊಂಕಿನ‌ ಕಿರಿದಾದ ರಸ್ತೆ ಕಾರಣ ರಸ್ತೆ ಕಾಮಗಾರಿಗೆ ಆಡಚಣೆ ಆಗಲಿದ್ದು, ಮುಂಜಾಗ್ರತಾ ಕ್ರಮವಾಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.‌ ಇದನ್ನೂ ಓದಿ: ಚಿಕ್ಕಮಗಳೂರು | ಕುಡಿದ ಮತ್ತಲ್ಲಿ ಹುಚ್ಚಾಟ – ತಮಾಷೆಗೆ 40 ಕಿಮೀ ದೂರದಿಂದ ಅಂಬುಲೆನ್ಸ್‌ ಕರೆಸಿದ ಕುಡುಕ!

  • ಹೊಸ ವರ್ಷ ಸಂಭ್ರಮ; ನಂದಿ ಬೆಟ್ಟಕ್ಕೆ ಪ್ರವಾಸಿಗರ ಲಗ್ಗೆ – ಟ್ರಾಫಿಕ್‌ ಜಾಮ್

    ಹೊಸ ವರ್ಷ ಸಂಭ್ರಮ; ನಂದಿ ಬೆಟ್ಟಕ್ಕೆ ಪ್ರವಾಸಿಗರ ಲಗ್ಗೆ – ಟ್ರಾಫಿಕ್‌ ಜಾಮ್

    ಚಿಕ್ಕಬಳ್ಳಾಪುರ: ಹೊಸ ವರ್ಷ 2025ಕ್ಕೆ ಭರ್ಜರಿ ಸ್ವಾಗತ ಸಿಕ್ಕಿದೆ. ನ್ಯೂ ಇಯರ್ ಸಂಭ್ರಮಾಚರಣೆಗಾಗಿ ನಂದಿಗಿರಿಧಾಮಕ್ಕೆ (Nandi Hills) ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

    ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿ ಬೆಟ್ಟಕ್ಕೆ ದಂಡು ದಂಡಾಗಿ ಪ್ರವಾಸಿಗರು ಆಗಮಿಸಿದರು. ಪರಿಣಾಮ ನಂದಿ ಬೆಟ್ಟದ ಕ್ರಾಸ್‌ನಲ್ಲೇ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ಇದನ್ನೂ ಓದಿ: ಬದಲಾವಣೆಗೇಕೆ ಹೊಸ ವರ್ಷ?

    ಕಾರು ಹಾಗೂ ಬೈಕ್‌ಗಳಲ್ಲಿ ನಂದಿ ಬೆಟ್ಟಕ್ಕೆ ಪ್ರವಾಸಿಗರು ಲಗ್ಗೆ ಇಟ್ಟರು. ಬೆಳಗ್ಗೆ 7 ಗಂಟೆಗೆ ಚೆಕ್‌ಪೋಸ್ಟ್ ತೆರೆದಿದ್ದೇ ತಡ ನಾ ಮುಂದು ತಾ ಮುಂದು ಅಂತ ಆಗಮಿಸಿದರು.

    ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರಿನಲ್ಲಿ ಮಧ್ಯರಾತ್ರಿ 12 ಗಂಟೆಗೆ ಗ್ರ್ಯಾಂಡ್‌ ವೆಲ್‌ಕಮ್ ಕೋರಲಾಯಿತು. ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್‌, ವೈಟ್‌ಫೀಲ್ಡ್ ಮೊದಲಾದ ಪ್ರಮುಖ ಭಾಗಗಳಲ್ಲಿ ಕಿಕ್ಕಿರಿದು ಯುವಜನತೆ ಸೇರಿದ್ದರು. ಇದನ್ನೂ ಓದಿ: ಕನಸಿಗೆ ಕತ್ತರಿ ಬಿದ್ದರೂ ಹುಲ್ಲಿನಂತೆ ಬೆಳೆಯಬೇಕು!

    ಅನೇಕರು ಮದ್ಯದ ಅಮಲಿನಲ್ಲಿ ಒಂದಷ್ಟು ಕಿರಿಕ್ ಮಾಡಿಕೊಂಡರು. ನಶೆಯಲ್ಲಿ ರಸ್ತೆಗೆ ಬಿದ್ದ ಯುವತಿಯನ್ನು ಸ್ನೇಹಿತ ಎತ್ತಿಕೊಂಡು ಹೋದ ಘಟನೆ ಕೂಡ ಸಿಲಿಕಾನ್ ಸಿಟಿಯಲ್ಲಿ ನಡೆಯಿತು. ಇನ್ನೂ ಅಮಲಿನಲ್ಲಿ ಕೂಗಾಡುತ್ತಿದ್ದ ಯುವಕನಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

  • ಹಕ್ಕಿಯಂತೆ ಹಾರಬಹುದು, ಆಕಾಶದಿಂದ ನಂದಿಬೆಟ್ಟ ನೋಡಬಹುದು – ನಂದಿಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್‌ ಆಕರ್ಷಣೆ

    ಹಕ್ಕಿಯಂತೆ ಹಾರಬಹುದು, ಆಕಾಶದಿಂದ ನಂದಿಬೆಟ್ಟ ನೋಡಬಹುದು – ನಂದಿಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್‌ ಆಕರ್ಷಣೆ

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದ (Nandi Hills) ಪ್ರಕೃತಿ ಸೊಬಗು, ಸೌಂದರ್ಯ ನೊಡುವುದೇ ಚೆಂದ. ಅಂತಹದ್ದರಲ್ಲಿ ಆಗಸದಲ್ಲಿ ಹಕ್ಕಿಯಂತೆ ಹಾರಾಡುತ್ತಾ, ಇಡೀ ನಂದಿಬೆಟ್ಟದ ವಿಹಂಗಮ ನೋಟ ನೋಡುವ ಅವಕಾಶ ಸಿಕ್ಕರೆ ಹೇಗಿರಬೇಡ ಹೇಳಿ… ಇಂತಹದೊಂದು ಅವಕಾಶ ಈಗ ಪ್ರವಾಸಿಗರ ಪಾಲಿಗೆ ಸಿಗುತ್ತಿದೆ. ಇದಕ್ಕಾಗಿ ನಂದಿಬೆಟ್ಟದಲ್ಲಿ ಪ್ಯಾರಾಗ್ಲೈಡಿಂಗ್ (Paragliding) ಆರಂಭವಾಗಿದೆ.

    ಹೌದು. ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ನಂದಿಗಿರಿಧಾಮದ ಮೇಲೆ ಖಾಸಗಿ ಸಂಸ್ಥೆಯೊಂದು ಪ್ರವಾಸಿಗರಿಗೆ (Tourists) ಪ್ಯಾರಾಗ್ಲೈಂಡಿಂಗ್ ಮಾಡಲು ಅವಕಾಶ ಕಲ್ಪಿಸಿದೆ. ಇದ್ರಿಂದ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಹಕ್ಕಿಯಂತೆ ಆಗಸದಲ್ಲಿ ಹಾರಾಡುವ ಮೂಲಕ ಗಿರಿಧಾಮದ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಸ್ ಪಡೆಯುವ ತೀರ್ಮಾನ ಆಗಿದೆ: ಸಚಿವ ಪರಮೇಶ್ವರ್‌

    ಪ್ಯಾರಾಗ್ಲೈಂಡಿಗ್ ಮಾಡುವ ಆಸಕ್ತ ಪ್ರವಾಸಿಗರಿಗೆ ಒಮ್ಮೆಗೆ 15 ನಿಮಿಷಕ್ಕೆ 4,600 ರೂ. ಶುಲ್ಕ ವಿಧಿಸಲಾಗುತ್ತಿದೆ. ಸದ್ಯ ಬೆಂಗಳೂರಿನಿಂದ ಬರುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾರಾಗ್ಲೈಡಿಂಗ್‌ ಮೂಲಕ ಪ್ರಕೃತಿ ಸೊಬಗು ಸವಿಯಲು ಮುಂದಾಗುತ್ತಿದ್ದಾರೆ. ಇದನ್ನೂ ಓದಿ:  Secunderabad| ಮುತ್ಯಾಲಮ್ಮ ದೇವಸ್ಥಾನದ ವಿಗ್ರಹ ಧ್ವಂಸ – ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ

  • ವೀಕೆಂಡ್‌ ಮೋಜು-ಮಸ್ತಿ; ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು

    ವೀಕೆಂಡ್‌ ಮೋಜು-ಮಸ್ತಿ; ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು

    ಚಿಕ್ಕಬಳ್ಳಾಪುರ: ವೀಕೆಂಡ್‌ ಹಿನ್ನೆಲೆ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ (Nandhi Hills) ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ ಕಾರಣ ನಂದಿಬೆಟ್ಟದ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆಯಿಂದ ಪರದಾಡುವಂತಾಯಿತು.

    ನಂದಿಬೆಟ್ಟ ನೋಡಲು ಸಾವಿರಾರು ಮಂದಿ ಪ್ರವಾಸಿಗರು ಕಾರು ಹಾಗೂ ಬೈಕ್‌ಗಳಲ್ಲಿ ಆಗಮಿಸಿದ್ದು, ನಂದಿಬೆಟ್ಟದ ರಸ್ತೆಯಲ್ಲಿ ವಾಹನಗಳು ಕಿಕ್ಕಿರಿದು ತುಂಬಿವೆ. ನಂದಿಬೆಟ್ಟದ ಚೆಕ್‌ಪೋಸ್ಟ್‌ನಿಂದಲೇ ವಾಹನಗಳು ತುಂಬಿ‌ತುಳುಕಿದ ದೃಶ್ಯ ಕಂಡುಬಂತು. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬೈಕ್‌ಗೆ ಕಾರು ಡಿಕ್ಕಿ – ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು

    ಮುಂಜಾನೆ 5 ಗಂಟೆಯಿಂದ ನಂದಿಬೆಟ್ಟದ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದ್ದು, ನಂದಿಗಿರಿಧಾಮ ಪೊಲೀಸರು ವಾಹನ ಸಂಚಾರ ದಟ್ಟಣೆ ನಿಭಾಯಿಸಲು ಹೈರಾಣಾದರು. ರಸ್ತೆಯ ಎರಡು ಬದಿ ವಿರುದ್ಧ ದಿಕ್ಕಿನಲ್ಲೂ ವಾಹನಗಳು ನಿಂತಿದ್ದು ನಂದಿಬೆಟ್ಟದಿಂದ‌ ವಾಪಾಸ್ ಬರುವವರು ಕೆಳಗೆ ಬರದಂತಾಯಿತು. ನಂದಿಬೆಟ್ಟಕ್ಕೆ ಬಂದ ಪ್ರವಾಸಿಗರು ಅತ್ತ ಮೇಲೂ ಹೋಗಲಾಗದೆ ಇತ್ತ ಕೆಳಗೆ ವಾಪಸ್ ಸಹ ಬರಲಾಗದೆ ಪರದಾಡಿದರು.

    ಬಾನಂಗಳ ತಬ್ಬಿದ ಮಂಜಿನ ಮೋಡಗಳಿಂದ ತುಂಬಿದ್ದ ವಾತಾವರಣದಲ್ಲಿ ಪ್ರವಾಸಿಗರು ಕುಣಿದು ಕುಪ್ಪಳಿಸಿದರು. ಕರಾವಳಿ ಕಡೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ನಂದಿಬೆಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ಇದನ್ನೂ ಓದಿ: ಕೃಷಿ ಹೊಂಡಕ್ಕೆ ಬಿದ್ದು ಮಾಜಿ ಪ್ರಿಯಕರನೊಂದಿಗೆ ವಿವಾಹಿತ ಯುವತಿ ಆತ್ಮಹತ್ಯೆ

  • ಮೀಸಲಾತಿಯಲ್ಲಿ ಮುಸ್ಲಿಮರಿಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ- ಬೊಮ್ಮಾಯಿ

    ಮೀಸಲಾತಿಯಲ್ಲಿ ಮುಸ್ಲಿಮರಿಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ- ಬೊಮ್ಮಾಯಿ

    ಚಿಕ್ಕಬಳ್ಳಾಪರ: ಮೀಸಲಾತಿಯಲ್ಲಿ (Reservation) ಮುಸ್ಲಿಮರಿಗೆ (Muslims) ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಅವರನ್ನು ಎಡಬ್ಲ್ಯುಎಸ್ (AWS) ವರ್ಗದಲ್ಲಿ ಸೇರಿಸಿದ್ದೇವೆ. ಅಲ್ಲಿ ಶೇ.10ರಷ್ಟು ಮೀಸಲಾತಿಯಿದೆ. ನಮ್ಮ ಸಂವಿಧಾನದಲ್ಲಿ ಧಾರ್ಮಿಕ ಆಧಾರದಲ್ಲಿ ಮೀಸಲಾತಿಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

    ಚಿಕ್ಕಬಳ್ಳಾಪುರದ (Chikkaballapura) ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ಮಾಡಿರುವುದು ಕಾಂಗ್ರೆಸ್‌ನವರಿಗೆ (Congress) ಸಹಿಸಲಾಗುತ್ತಿಲ್ಲ. ಹೀಗಾಗಿ ಅವರು ವಿರೋಧ ಮಾಡುತ್ತಿದ್ದಾರೆ. ನಾವು ಯಾವ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆಯೋ ಅದನ್ನು ವಿರೋಧಿಸುತ್ತೇವೆ ಎಂದು ಹೇಳಲಿ. ನಾವು ಮುಸ್ಲಿಮರಿಗೆ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬಿಜೆಪಿ ಪಕ್ಷವು ಜನರಿಗೆ ಟೊಳ್ಳು ಭರವಸೆ ನೀಡಿಲ್ಲ- ಡಾ.ಕೆ.ಸುಧಾಕರ್ 

    ನಮ್ಮ ಯೋಜನೆಗಳ ಬಗ್ಗೆ ಜನರಿಗೆ ವಿಶ್ವಾಸ ಮೂಡಿದೆ. ಇದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ಅಮಿತ್ ಶಾ (Amit Shah) ಅವರ ಸಭೆಯಲ್ಲಿ ಪ್ರಣಾಳಿಕೆಯ ಬಗ್ಗೆ ಚರ್ಚೆ ಮಾಡಿದ್ದೇವೆ. ಆರೋಗ್ಯ ಸಚಿವ ಸುಧಾಕರ್ (K.Sudhakar) ಅವರು ಪ್ರಾಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದಾರೆ. ಈ ಬಾರಿ ನಮ್ಮದು ಜನತಾ ಪ್ರಣಾಳಿಕೆಯಾಗಲಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿಯವರೇ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡೋಕೆ ಒದ್ದಾಡ್ತಿದ್ದಾರೆ, ಇನ್ನೂ ನಮ್ದೆನ್ರೀ; ಹೆಚ್.ಡಿ.ರೇವಣ್ಣ

    ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು (Medical College) ಆಗಬೇಕು ಎನ್ನುವ ಅಭಿಲಾಷೆಯಿಂದ ನಮ್ಮ ಪ್ರಧಾನಿಗಳು ನಿಯಮ ಸರಳೀಕರಣಗೊಳಿಸಿದ್ದರಿಂದ, ಹಿಂದುಳಿದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುತ್ತಿದೆ. ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ, ಚಿಕ್ಕಮಗಳೂರು ಮೆಡಿಕಲ್ ಕಾಲೇಜುಗಳನ್ನು ಅಭಿವೃದ್ಧಿ ಮಾಡಲಾಗಿದೆ. ರಾಮನಗರದಲ್ಲಿಯೂ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಗಾಯಕನಿಂದಲೇ ನಟಿ ಆಕಾಂಕ್ಷ ಕೊಲೆ : ತಾಯಿಯ ಗಂಭೀರ ಆರೋಪ 

    ನಂದಿಬೆಟ್ಟಕ್ಕೆ (Nandi Hills) ರೋಪ್ ವೇ ಆಗಬೇಕೆಂಬ ದಿವಂಗತ ನಟ ಶಂಕರನಾಗ್ (Shankar Nag) ಅವರು ಕಂಡ ಕನಸು ಈಗ ನನಸಾಗುತ್ತಿದೆ. ರೋಪ್ ವೇ ಮಾಡಿದರೆ ಪ್ರವಾಸೋದ್ಯಮಕ್ಕೆ ಸಾಕಷ್ಟು ಅನುಕೂಲವಾಗುತ್ತದೆ. ಈ ಭಾಗದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ನಂದಿ ಬೆಟ್ಟದ ಪಕ್ಕದ ದೇವಸ್ಥಾನ ಅಭಿವೃದ್ಧಿ ಆಗುತ್ತದೆ. ಆದ್ದರಿಂದ ಇದೊಂದು ಪ್ರವಾಸಿ ಸರ್ಕಿಟ್ ಆಗಲು ಅನುಕೂಲವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಗ್ಯಾಂಗ್‍ಸ್ಟರ್ ಅತೀಕ್‍ನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಬೆಂಗಾವಲು ವಾಹನಕ್ಕೆ ಹಸು ಡಿಕ್ಕಿ

  • ಹೊಸ ವರ್ಷ ಸಂಭ್ರಮ – ನಂದಿಗಿರಿಧಾಮಕ್ಕೆ ಲಗ್ಗೆ ಇಟ್ಟ ಸಾವಿರಾರು ಪ್ರವಾಸಿಗರು

    ಹೊಸ ವರ್ಷ ಸಂಭ್ರಮ – ನಂದಿಗಿರಿಧಾಮಕ್ಕೆ ಲಗ್ಗೆ ಇಟ್ಟ ಸಾವಿರಾರು ಪ್ರವಾಸಿಗರು

    ಚಿಕ್ಕಬಳ್ಳಾಪುರ: ಹೊಸ ವರ್ಷದ ಸಂಭ್ರಮಾಚರಣೆಗೆ(New Year Celebration) ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ(Nandi Hills) ಪ್ರವಾಸಿಗರ ದಂಡೇ ಆಗಮಿಸಿದೆ.

    ಬೆಳ್ಳಂಬೆಳಗ್ಗೆ ಕಾರು ಹಾಗೂ ಬೈಕ್ ಗಳಲ್ಲಿ ನಾ ಮುಂದು ತಾ ಮುಂದು ಅಂತ ಪ್ರವಾಸಿಗರು ನಂದಿಬೆಟ್ಟದತ್ತ ಲಗ್ಗೆಯಿಟ್ಟಿದ್ದಾರೆ. ಹೊಸ ವರ್ಷದ ಮೊದಲ ದಿನ ನಂದಿಬೆಟ್ಟದಿಂದಲೇ ಸೂರ್ಯೋದಯದ ಸವಿಯನ್ನು ಸವಿಯಲು ಸಾವಿರಾರು ಮಂದಿ ನಂದಿಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಹಾಯ್‌ 2023.. ಹೊಸ ವರ್ಷ ನಿನಗೆ ಸುಸ್ವಾಗತ

    ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ನಂದಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಮಧ್ಯರಾತ್ರಿಯೇ ನಂದಿಬೆಟ್ಟದ ಚೆಕ್ ಪೋಸ್ಟ್ ಬಳಿ ಸಾವಿರಾರು ಮಂದಿ ಜಮಾಯಿಸಿದ್ದರು.

    ಬೆಳಗ್ಗೆ 6 ಗಂಟೆಗೆ ಪೊಲೀಸರು ಚೆಕ್ ಪೋಸ್ಟ್ ತೆರೆಯುತ್ತಿದ್ದಂತೆ ಜನ ನಾ ಮುಂದು ತಾ ಮುಂದು ಅಂತ ನಂದಿಬೆಟ್ಟದತ್ತ ಮುನ್ನುಗ್ಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಂದಿಬೆಟ್ಟದಲ್ಲಿ ಮತ್ತೆ ಗುಡ್ಡಕುಸಿತ- ಬೃಹತ್ ಬಂಡೆ ಉರುಳುವ ಆತಂಕ!

    ನಂದಿಬೆಟ್ಟದಲ್ಲಿ ಮತ್ತೆ ಗುಡ್ಡಕುಸಿತ- ಬೃಹತ್ ಬಂಡೆ ಉರುಳುವ ಆತಂಕ!

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದ ರಸ್ತೆಯಲ್ಲಿ ಮತ್ತೊಮ್ಮೆ ಗುಡ್ಡ ಕುಸಿತವಾಗಿದ್ದು, ಮಾರ್ಗ ಮಧ್ಯೆ ಬೃಹತ್ ಬಂಡೆಯೊಂದು ಉರುಳುವ ಆತಂಕ ಎದುರಾಗಿದೆ.

    ಮಿರ್ಜಾ ಸರ್ಕಲ್ ಮುಂಭಾಗದ ತಿರುವಿನಲ್ಲಿ ಈ ಘಟನೆ ನಡೆದಿದೆ. ಭಾರೀ ಮಳೆ (Rain) ಗೆ ನಂದಿಬೆಟ್ಟದಲ್ಲಿ ಗುಡ್ಡ ಕುಸಿತವಾಗಿದೆ. ಮಣ್ಣು ಹಾಗೂ ಬಂಡೆಗಳು ರಸ್ತೆಯ ಮುಕ್ಕಾಲು ಭಾಗ ಆವರಿಸಿವೆ. ಇದೀಗ ಮತ್ತೊಂದು ಬೃಹದಾಕಾರದ ಬಂಡೆ ಸಹ ಉರುಳುವ ಆತಂಕ ಎದುರಾಗಿದೆ. ಸದ್ಯ ಆತಂಕದಲ್ಲೇ ನಂದಿಬೆಟ್ಟ(NandiHills) ಕ್ಕೆ ವಾಹನಗಳು ಸಂಚರಿಸುತ್ತಿವೆ.

    ಕಳೆದ ಜೂನ್ ತಿಂಗಳಿನಲ್ಲಿಯೂ ಭಾರೀ ಮಳೆಗೆ ಎರಡು ಕಡೆಗಳಲ್ಲಿ ಗುಡ್ಡಕುಸಿತ (Landslide) ವಾಗಿತ್ತು. ಸುಲ್ತಾನಪೇಟೆ ಗ್ರಾಮದ ಕಡೆ ಎರಡು ಕಡೆ ಗುಡ್ಡಗಳು ಕುಸಿದಿದೆ. ಸುಲ್ತಾನಪೇಟೆಯಿಂದ ನಂದಿಬೆಟ್ಟಕ್ಕೆ ತೆರಳುವ ಮೆಟ್ಟಿಲು ಮಾರ್ಗದ ಕಡೆ ವೀರಭದ್ರ ಸ್ವಾಮಿ ದೇಗುಲದ ಭಾಗದಲ್ಲಿ ಭೂ ಕುಸಿತವಾಗಿತ್ತು. ಇದನ್ನೂ ಓದಿ: ನಂದಿಬೆಟ್ಟದಲ್ಲಿ ಎರಡು ಕಡೆ ಗುಡ್ಡ ಕುಸಿತ

    ಇದೇ ಸುಲ್ತಾನಪೇಟೆ ಗ್ರಾಮದ ಮತ್ತೊಂದು ಭಾಗದಲ್ಲಿ ಕೂಡ ಭೂ ಕುಸಿತವಾಗಿತ್ತು. ಬೃಹತ್ ಗಾತ್ರದ ಕಲ್ಲು ಬಂಡೆಗಳು ಮರಗಳು ಮಣ್ಣು ಸಮೇತ ಕೊಚ್ಚಿಕೊಂಡು ಬಂದಿದ್ದವು. ಈ ಗುಡ್ಡ ಕುಸಿತ ಉಂಟಾದ ಭಾಗದಿಂದ ಝರಿಯಂತೆ ನೀರು ಹರಿದುಬಂದಿತ್ತು.

    Live Tv
    [brid partner=56869869 player=32851 video=960834 autoplay=true]

  • ನಂದಿಬೆಟ್ಟದಲ್ಲಿ ಎರಡು ಕಡೆ ಗುಡ್ಡ ಕುಸಿತ

    ನಂದಿಬೆಟ್ಟದಲ್ಲಿ ಎರಡು ಕಡೆ ಗುಡ್ಡ ಕುಸಿತ

    ಚಿಕ್ಕಬಳ್ಳಾಪುರ: ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ಎರಡು ಕಡೆಗಳಲ್ಲಿ ಗುಡ್ಡ ಕುಸಿತವಾಗಿದೆ.

    ರಾಜ್ಯಾದ್ಯಂತ ಕಳೆದ 2 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲೆಡೆ ಅನಾಹುತಗಳಾಗುತ್ತಿವೆ. ಅದೇ ರೀತಿ ಪ್ರವಾಸಿಗರ ನೆಚ್ಚಿನ ತಾಣವಾದ ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿಯೂ ಗುಡ್ಡ ಕುಸಿತವಾಗಿದೆ. ಸುಲ್ತಾನಪೇಟೆ ಗ್ರಾಮದ ಕಡೆ ಎರಡು ಕಡೆ ಗುಡ್ಡಗಳು ಕುಸಿದಿದೆ.

    ಸುಲ್ತಾನಪೇಟೆಯಿಂದ ನಂದಿಬೆಟ್ಟಕ್ಕೆ ತೆರಳುವ ಮೆಟ್ಟಿಲು ಮಾರ್ಗದ ಕಡೆ ವೀರಭದ್ರ ಸ್ವಾಮಿ ದೇಗುಲದ ಭಾಗದಲ್ಲಿ ಭೂ ಕುಸಿತ ಆಗಿದೆ. ನ್ನೂ ಇದೇ ಸುಲ್ತಾನಪೇಟೆ ಗ್ರಾಮದ ಕಡೆ ಮತ್ತದು ಭಾಗದಲ್ಲಿ ಭೂ ಕುಸಿತ ಆಗಿದೆ. ಬೃಹತ್ ಗಾತ್ರದ ಕಲ್ಲು ಬಂಡೆಗಳು ಮರಗಳು ಮಣ್ಣು ಸಮೇತ ಕೊಚ್ಚಿಕೊಂಡು ಬಂದಿವೆ. ಈ ಗುಡ್ಡ ಕುಸಿತ ಉಂಟಾದ ಭಾಗದಿಂದ ಝರಿಯಂತೆ ನೀರು ಹರಿದುಬರುತ್ತಿದೆ. 2 ಕಡೆಗಳಲ್ಲಿ ಗುಡ್ಡ ಕುಸಿತವಾಗಿರುವುದರಿಂದ ಸುಲ್ತಾನಪೇಟೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಕಲ್ಲು ಬಂಡೆಗಳು ಉರುಳಿ ಗ್ರಾಮಕ್ಕೆ ಬರುವ ಭೀತಿಯಲ್ಲಿದ್ದಾರೆ. ಇದನ್ನೂ ಓದಿ: 4 ದಿನ ರಾಜ್ಯಾದ್ಯಂತ ಮಳೆ – ಎಲ್ಲೆಲ್ಲಿ ಮಳೆಯಾಗಲಿದೆ?

    ಕಳೆದ ವರ್ಷ ಆಗಸ್ಟ್ 25ರಂದು ಸಹ ಇದೇ ರೀತಿ ಗುಡ್ಡ ಕುಸಿತ ಆಗಿತ್ತು. ಆ ಸಮಯದಲ್ಲಿ ರಸ್ತೆ ಮಾರ್ಗದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಆಗಿತ್ತು. ಇದರಿಂದ ಕೆಲವು ತಿಂಗಳವರೆಗೂ ನಂದಿ ಬೆಟ್ಟಕ್ಕೆ ಹೋಗಲು ಪ್ರವಾಸಿಗರಿಗೆ ಅವಕಾಶವನ್ನು ನಿಷೇಧಿಸಲಾಗಿತ್ತು. ಇದೀಗ ಮತ್ತೆ ಭಾರೀ ಮಳೆಗೆ ಈ ವರ್ಷವೂ ಎರಡು ಕಡೆ ಗುಡ್ಡ ಕುಸಿತವಾಗಿದೆ. ಆದರೆ ಸ್ತೆ ಮಾರ್ಗದಲ್ಲಿ ಯಾವುದೇ ಭೂ ಕುಸಿತ ಆಗಿಲ್ಲ. ಹೀಗಾಗಿ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಸುಲ್ತಾನಪೇಟೆ ಗ್ರಾಮದ ಕಡೆ ಭೂ ಕುಸಿತ ಆಗಿರೋದ್ರಿಂದ ಬೆಟ್ಟದಿಂದ ಹರಿದುಬರುತ್ತಿರುವ ನೀರು ಬೆಟ್ಟದ ಕೆಳಭಾಗದ ಜಮೀನುಗಳಿಗೆ ನುಗ್ಗಿದೆ. ಗ್ರಾಮಸ್ಥರಿಗೂ ಸಹ ಬಂಡೆಗಳು ಉರುಳಿಬರುವ ಆತಂಕ ಕಾಡುತ್ತಿದೆ. ಇದನ್ನೂ ಓದಿ: ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಯುವಕ ಮರ್ಡರ್

    Live Tv
    [brid partner=56869869 player=32851 video=960834 autoplay=true]