Tag: ನಂದಿಬೆನ್ ಪಟೇಲ್

  • ನಿರಾಣಿ ಸಕ್ಕರೆ ಕಾರ್ಖಾನೆ ವೀಕ್ಷಿಸಿದ ಉತ್ತರ ಪ್ರದೇಶದ ರಾಜ್ಯಪಾಲೆ

    ನಿರಾಣಿ ಸಕ್ಕರೆ ಕಾರ್ಖಾನೆ ವೀಕ್ಷಿಸಿದ ಉತ್ತರ ಪ್ರದೇಶದ ರಾಜ್ಯಪಾಲೆ

    ಬಾಗಲಕೋಟೆ: ಗುಜರಾತ್‍ನ ಮಾಜಿ ಮುಖ್ಯಮಂತ್ರಿ ಹಾಗೂ ಉತ್ತರ ಪ್ರದೇಶ ರಾಜ್ಯದ ರಾಜ್ಯಪಾಲೆಯಾಗಿರುವ ಆನಂದಿಬೆನ್ ಪಟೇಲ್ (Anandiben Patel)  ನಿನ್ನೆ ರಾತ್ರಿ ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ (Murugesh Nirani) ಅವರ ಸಕ್ಕರೆ ಕಾರ್ಖಾನೆ ವೀಕ್ಷಿಸಿದ್ಧಾರೆ.

    ಬಾಗಲಕೋಟೆ (Bagalkote) ಜಿಲ್ಲೆಯ ಮುಧೋಳ ನಗರಕ್ಕೆ ಆಗಮಿಸಿರುವ ಆನಂದಿಬೆನ್ ಪಟೇಲ್ ಅವರನ್ನು ಮುರುಗೇಶ್ ಆರ್.ನಿರಾಣಿ ಸ್ವಾಗತಿಸಿದರು. ಕೆಲಹೊತ್ತು ಸಚಿವ ನಿರಾಣಿ ಅವ್ರ ನಿವಾಸದಲ್ಲಿ ವಿಶ್ರಾಂತಿ ಪಡೆದ ಆನಂದಿಬೆನ್ ಅವರು ನಂತರ ಸಚಿವ ಮುರಗೇಶ್ ನಿರಾಣಿ ಒಡೆತನದ ಎಂ.ಆರ್.ಎನ್ ಸಮೂಹ ಸಂಸ್ಥೆ ಕಾರ್ಖಾನೆಯನ್ನು ವೀಕ್ಷಿಸಿದ್ದಾರೆ.  ಇದನ್ನೂ ಓದಿ: ಉಕ್ರೇನ್‍ನಿಂದ ಜೀವ ಉಳಿಸಿಕೊಂಡು ಬಂದಿರೋ ವಿದ್ಯಾರ್ಥಿಗಳಿಗೆ ಹೊಸ ಟೆನ್ಶನ್!

    ಕಾರ್ಖಾನೆಯ ಸಿಬ್ಬಂದಿ ಜೊತೆ ಚರ್ಚೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಸಚಿವ ಮುರುಗೇಶ್‌ ನಿರಾಣಿ, ಸಂಗಮೇಶ್ ನಿರಾಣಿ, ವಿಜಯ್‌ ನಿರಾಣಿ, ನಿರಾಣಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಅಧಿಕಾರಿ ವರ್ಗದವರು ಇದ್ದರು. ಇಂದು ಮುರಗೇಶ್ ನಿರಾಣಿ ಒಡೆತನದ ತೇಜಸ್ ಅಂತರಾಷ್ಟ್ರೀಯ ಶಾಲೆಯ ಅಂಗಸಂಸ್ಥೆಗಳ ಉದ್ಘಾಟನೆ ಮಾಡಲಿರುವ ರಾಜ್ಯಪಾಲರಾದ ಆನಂದಿಬೆನ್ ಅವರು, ನಂತರ ಬಾದಾಮಿ ತಾಲೂಕಿನಲ್ಲಿರುವ ನಿರಾಣಿ ಸಮೂಹಸಂಸ್ಥೆಯ ಕೇದಾರನಾಥ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ, ಬಾದಾಮಿಯ ಐತಿಹಾಸಿಕ ಬನಶಂಕರಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ಆಶಿರ್ವಾದ ಪಡೆಯಲಿದ್ದಾರೆ.